ವಿಷಯದ ವಿವರಗಳಿಗೆ ದಾಟಿರಿ

Archive for

7
ಮಾರ್ಚ್

ಹಿರಿಯ ಜೀವದ ಮನ ಆ ಕ್ಷಣ ತಳಮಳಗೊಂಡಿದ್ಯಾಕೆ?

– ನಿಲುಮೆ 
 

Reading between the lines ಎಂಬ ಮಾತನ್ನು ಕೇಳಿರಬಹುದು. ಅಂತ ಮಾತಿಗೆ ಒಳ್ಳೆಯ ಉದಾಹರಣೆ ಚಿದಾನಂದ ಮೂರ್ತಿಯವರ ಪತ್ರ. ಪಾಪ ವಯಸ್ಸಾಯಿತು. ಅದರಿಂದ ಹೀಗೆಲ್ಲ ಬಡಬಡಿಸುತ್ತಿದ್ದಾರೆ ಅಂಥ ಕೆಲವು ಪತ್ರಿಕೆಗಳು ಬರೆದು ಕಾಸಿಗೆ ರಾಜ ಮಾರ್ಗ ಮಾಡಿಕೊಂಡವು. ನಿಜ.ಚಿಮೂ ಅವರಿಗೆ ವಯಸ್ಸಾಯಿತು.ಆದರೆ ಅವರಳೊಗಿನ ಸಂಶೋಧಕನಿಗೆ ಇತಿಹಾಸದ ಕ್ರೂರ ಅಧ್ಯಾಯಗಳ ಅರಿವಿದೆ. ಮೈ ಮರೆತರೆ ಮತ್ತೊಮ್ಮೆ ಇತಿಹಾಸ ಮರುಕಳಿಸಬಹುದೆಂದ ಸಹಜ ಆತಂಕವೂ ಇದೆ. ಹಂಪಿಯ ಬಗ್ಗೆ ಹೋರಾಡಿದವರ ಅರಿವಿಗೆ ದಂಡೆತ್ತಿ ಬಂದು ಧೂಳಿಪಟ ಮಾಡಿದವರ,ರಕ್ಕಸ ತಂಗಡಿಯ ನೆನಪು ಬಾರದಿರಬಹುದೇ? ಭಾವುಕ ಜೀವಿ ಚಿಮೂ ಅವರಿಗೆ ಇಳಿ ವಯಸ್ಸಿನಲ್ಲಿ ಇವೆಲ್ಲ ಇನ್ನೂ ಹೆಚ್ಚಾಗಿ ಕಾಡುತ್ತಿರಬಹುದು,ಅದರಲ್ಲೂ ಮೈ-ಕೈಗೆ ಎಣ್ಣೆ ಸವರಿಕೊಂಡು ಸತ್ಯ ಹೇಳಲು ಬಂದವರ ಕಣ್ಣಿಗೆ ಮಣ್ಣೇರಚಿ ಹಾದಿ ತಪ್ಪಿಸುವ ಜನರ ಮಧ್ಯೆ ಮಾತಾಡುವ ಚಾಣಕ್ಷ ಮಂದಿಯ ನಡುವೆ ದಿಗಿಲಿಗೆ ಬಿದ್ದ ಆ ಹಿರಿಯ ಜೀವದ ತಲ್ಲಣ ನಮಗರಿವಾಗುತ್ತಿಲ್ಲವಾ?
 
ಕೆಲ ದಿನಗಳ ಹಿಂದೆ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ರಾಜ್ಯಪಾಲರು ಹಿರಿಯ ವಿದ್ವಾಂಸ,ಸಂಶೋಧಕ ಚಿಮೂ ಅವರಿಗೆ ಡಾಕ್ಟರೇಟ್ ನಿರಾಕರಿಸಿದಾಗ ಕನ್ನಡ ಸಾರಸ್ವತ ಲೋಕವೇ ರಾಜ್ಯಪಾಲರೆಡೆಗೆ ತಿರುಗಿ ನಿಂತಿತ್ತು. ತಪ್ಪಿನ ಅರಿವಾದ ರಾಜ್ಯಪಾಲರು ಚಿಮೂ ಅವರಿಗೆ ಗೌರವ ಡಾಕ್ಟರೇಟ್ ನೀಡಿದ್ದು ಆಯಿತು. ಹಾಗೆ ಡಾಕ್ಟರೇಟ್ ಪಡೆದ ನಂತರ ಚಿಮೂ ಅವರು ಪ್ರಜಾವಾಣಿಯಲ್ಲಿ ’ರಾಜ್ಯಪಾಲರು ಇದನ್ನು  ಗಮನಿಸಬೇಕು’ ಅನ್ನುವ ಶೀರ್ಷಿಕೆಯ ಪತ್ರವನ್ನು  ವಾಚಕರ ವಾಣಿಗೆ ಬರೆದ್ರು. ಅದರಲ್ಲಿ ಗೋರಿ ಪಾಳ್ಯದಲ್ಲಿ ಹಸಿರು ಬಾವುಟ ನೋಡಿದ್ದರ ಬಗ್ಗೆ, ಅಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ, ಮಾಂಸದಂಗಡಿಯ ಮುಂದೆ ನಿಂತ ಹಸುವಿಗೆ ಮರುಗುತ್ತ ಇದ್ದಿದ್ದನ್ನ ಹೇಳಿಕೊಂಡಿದ್ದಾರೆ. ಹಾಗೆಯೆ ಅದರಲ್ಲಿ ಮತಾಂತರದ ಬಗ್ಗೆಯು ಮಾತುಗಳಿವೆ.
7
ಮಾರ್ಚ್

ಮತ್ತೊಮ್ಮೆ ಹಳ್ಳಿಗೆ ಪ್ಯಾಟೆ ಹುಡುಗೀರು ಹೊಂಟಿದ್ದಾರೆ…

ಜಿ.ವಿ ಜಯಶ್ರೀ

(ದೃಶ್ಯ ಮಾಧ್ಯಮಗಳ ಎಡವಟ್ಟುಗಳ ಬಗ್ಗೆ ಕುಟುಕವ ಜಯಶ್ರೀ ಅವರು ಸುವರ್ಣ ವಾಹಿನಿ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫಿನ ಎಡವಟ್ಟಿನ ಬಗ್ಗೆ ಬರೆದಿದ್ರು.ಸುವರ್ಣ ವಾಹಿನಿಗೆ ದೇವರು ಒಳ್ಳೆ ಬುದ್ದಿ ಕೊಡಲಿ 😉 ಅಂತ ಕೇಳುತ್ತ,ಅವರ ಪುಟ್ಟ ಬರಹ ನಿಮಗಾಗಿ –ನಿಲುಮೆ)

ಸುವರ್ಣ ವಾಹಿನಿಯಲ್ಲಿ ಮತ್ತೊಮ್ಮೆ ಹಳ್ಳಿಗೆ ಪ್ಯಾಟೆ ಹುಡುಗೀರು ಹೊಂಟಿದ್ದಾರೆ. ಕಾಡಿಗೆ ಹೋಗುವಾಗ ಅವರ ಉಡುಪು ಹೇಗೆ ಇರಲಿ ತೊಂದ್ರೆ ಇಲ್ಲ ಆದ್ರೆ ನಾಡಿನ ರಿಯಾಲಿಟಿ ಷೋ ನಲ್ಲಿ ಉಡುಪುಗಳ ಬಗ್ಗೆ ಸ್ವಲ್ಪ ಗಮನ ಹರಿಸ ಬೇಕಿತ್ತು ಎಂದು ಗೆಳೆಯ ರಾಕೇಶ್ ಶೆಟ್ಟಿ ನನ್ನ ಬಳಿ ಬೇಸರದಿಂದ ಹೇಳಿದ್ರು. ಪಾಪ ಗಂಡು ಹಾರ್ಟ್ ವಿಲ ವಿಲ ಒಳ್ಳೆಯ ಗೆಳೆಯ ಆತ, ಅವರ ನೋವಿನ ಮಾತಿಗೆ ನಾನು ಪ್ರತಿಕ್ರಿಯೆ ತೋರದೆ ಇರಲು ಸಾಧ್ಯವೇ 😉