ವಿಷಯದ ವಿವರಗಳಿಗೆ ದಾಟಿರಿ

Archive for

10
ಮಾರ್ಚ್

ಅವಳೊಂದಿಗೆ ಆ ಭಾಷೆಯೂ ಮಣ್ಣಾಯಿತು!

– ಚಿತ್ರಾ ಸಂತೋಷ್

ಕಾಡುಹಂದಿ ಬೇಟೆ ಅಂದ್ರೆ ಅವಳಿಗಿಷ್ಟ. ದಟ್ಟಾರಣ್ಯದಲ್ಲಿ ಹೆಜ್ಜೆಗೊಂದು ಸಿಗುತ್ತಿದ್ದ ಆಮೆಗಳನ್ನೂ ಅವಳು ಬಿಟ್ಟವಳಲ್ಲ. ತಾನು ಹೋದಲೆಲ್ಲಾ ಬಿಲ್ಲು ಬಾಣಗಳನ್ನು ಹೆಗಲ ಮೇಲೆ ಹೊತ್ತು ಸಾಗುತ್ತಿದ್ದ ಆ ಹೆಣ್ಣುಮಗಳು ತನ್ನ ಜೀವನಶಾಲೆಯನ್ನು ತಾನೇ ನಿರ್ಮಿಸಿಕೊಂಡವಳು. ಅವಳು ಹುಟ್ಟಿದ್ದು ಉತ್ತರ ಅಂಡಮಾನ್‌ನ ದಟ್ಟ ಕಾನನದಲ್ಲಿ. ೮೫ ವರ್ಷಗಳ ಹಿಂದೆ ಅವಳು ಹುಟ್ಟಿದಾಗ ಅವಳ ಜೊತೆ ಒಡನಾಡುವ ಸಂಗತಿಗಳಿದ್ದರು. ಸಮಾಜದ ಮುಖ್ಯವಾಹಿನಿ ಅಂದ್ರೆ ಅವಳಿಗೇನೂ ಗೊತ್ತಿಲ್ಲ. ವಿದ್ಯೆಯೆಂಬುವುದರ ನಂಟು ಆ ಕಾಡಿಗಿಲ್ಲ. ಭಾರತದಲ್ಲಿ ಬ್ರಿಟಿಷ್ ಅಧಿಪತ್ಯವಿದ್ದಾಗ ಅಂಡಮಾನನ್ನು ‘ಶಿಕ್ಷಾರ್ಹ ತಾಣ’ವೆಂದು ಪರಿಗಣಿಸಿ, ಸ್ವಾತಂತ್ರಕ್ಕಾಗಿ ಹೋರಾಡಿದ ಅದೆಷ್ಟೋ ಭಾರತೀಯರನ್ನು ಅಲ್ಲಿ ಶಿಕ್ಷೆಗೆ ಗುರಿಪಡಿಸುತ್ತಿದ್ದನ್ನು ಕಣ್ಣಾರೆ ಕಂಡಿದ್ದಾಳೆ. ತನ್ನ ಪರಿವಾರದವರು ಕಳ್ಳಭಟ್ಟಿ ಕುಡಿದು ಎಂಜಾಯ್ ಮಾಡುತ್ತಿದ್ದಾಗ ತಾನೂ ಅವರೊಂದಿಗೆ ಸಂಭ್ರಮಿಸಿದ್ದಾಳೆ. ೨೦೦೪ರಲ್ಲಿ ಅಂಡಮಾನ್ ಪ್ರದೇಶಕ್ಕೆ ಭೀಕರ ಸುನಾಮಿ ಕಾಲಿಟ್ಟಾಗ ೩೫೧೩ ಮಂದಿ ಸಾವನ್ನಪ್ಪಿದ್ದರೂ, ಈಕೆ ಮಾತ್ರ ಬದುಕುಳಿದಿದ್ದಳು. ಇದು ಅವಳ ಅದೃಷ್ಟವೋ ಏನೋ?

ಅಂಥ ಉತ್ಸಾಹದ ಬದುಕು ಕಂಡ ಆ ಕಾಡಿನ ಮಹಿಳೆಯ ಹೆಸರು ಬೋ ಎಸ್‌ಆರ್…
ಅದೇನು ವಿಶೇಷ ಅಂತೀರಾ? ಇತ್ತೀಚೆಗಷ್ಟೇ ಬೋ ಎಸ್‌ಆರ್ ನಿಧನವಾಗಿದ್ದಾಳೆ. ಇದು ಇವಳ ಸಾವು ಮಾತ್ರವಲ್ಲ, ದೇಶದ ಪುರಾತನ ಭಾಷೆಯ ಸಾವು, ಸಾಂಸ್ಕೃತಿಕ ಪರಂಪರೆಯ ಸಾವು ಕೂಡಾ ಹೌದು.

ಬೋ ಎಂದರೆ….

ಬೋ ಎಂಬುವುದು ವಿಶಿಷ್ಟವಾದ ಬುಡಕಟ್ಟು ಭಾಷೆ. ಈ ಭಾಷೆಯ ತವರು ಆಫ್ರಿಕಾ. ೭೦,೦೦೦ ವರ್ಷಗಳ ಹಿಂದೆಯೇ ಬೋ ಎನ್ನುವ ಬುಡಕಟ್ಟು ಜನಾಂಗ ಆಗ್ನೇಯ ಏಷ್ಯಾ ಭಾಗಕ್ಕೆ ವಲಸೆ ಬಂದಿದ್ದರು. ಅಂತೆಯೇ ಅಂಡಮಾನಿನಲ್ಲೂ ಬೋ ಜನಾಂಗ ಅಸ್ತಿತ್ವ ಕಂಡುಕೊಂಡಿತ್ತು. ೧೮೫೮ರಲ್ಲಿ ಅಂಡಮಾನಿನಲ್ಲಿ ಬೋ ಜನಾಂಗಕ್ಕೆ ಸೇರಿದ ಸುಮಾರು ೫ ಸಾವಿರ ಜನರಿದ್ದರು. ಕ್ರಮೇಣ ಅಲ್ಲಿ ಬ್ರಿಟೀಷರು ತಮ್ಮ ಅಧಿಪತ್ಯ ಸ್ಥಾಪಿಸಿದಾಗ ಅಮಾಯಕ ಬೋ ಜನಾಂಗ ಬ್ರಿಟೀಷರ ದಬ್ಬಾಳಿಕೆಗೆ ಬಲಿಯಾದರು. ಸಮಾಜದ ಮುಖ್ಯವಾಹಿನಿಯ ಕುರಿತು ಒಂದಿಷ್ಟೂ ತಿಳಿವಿರದ ಬೋ ಜನರಿಗೆ ರೋಗಗಳು ಬಂದರೂ ಅದಕ್ಕೂ ಸಾವೇ ಪರಿಹಾರ. ಬ್ರಿಟೀಷರ ದಬ್ಬಾಳಿಕೆ ಮತ್ತು ಹೇಳಿಕೇಳದೆ ಬರುವ ಹಲವಾರು ಸಾಂಕ್ರಾಮಿಕ ರೋಗಗಳ ಪರಿಣಾಮ ಬೋ ಜನಾಂಗ ವಿನಾಶದ ಹಾದಿ ಹಿಡಿಯಿತು.
ಕಳೆದ ನಲವತ್ತು ವರ್ಷದಿಂದ ಬೋ ಎಸ್‌ಆರ್ ಅವಳದು ಏಕಾಂಗಿ ಬದುಕು. ಅವಳಿಗೆ ಬರುವುದು ಅದೊಂದೇ ಭಾಷೆ ಬೋ. ಹಾಗಾಗಿ ಸುತ್ತಮುತ್ತಲಿನ ಯಾರ ಜೊತೆಯೂ ಸಂವಹನ ಸಾಧ್ಯವಿರಲಿಲ್ಲ. ೧೯೭೦ರಲ್ಲಿ ಭಾರತ ಸರ್ಕಾರ ಅಂಡಮಾನಿನಲ್ಲಿದ್ದ ಬೋ ಎಸ್‌ಆರ್ ಸೇರಿದಂತೆ ವಿವಿಧ ಬುಡಕಟ್ಟು ಜನಾಂಗಗಳಿಗೆ ಕಾಂಕ್ರೀಟ್ ಮನೆ ಮತ್ತು ೫೦೦ ರೂ. ಪಿಂಚಣಿ ಒದಗಿಸಿತ್ತು. ಆ ಪುಟ್ಟ ಮನೆಯೊಂದೇ ಬೋ ಸಂಸಾರ. ಬಹಳಷ್ಟು ವರ್ಷಗಳ ಹಿಂದೆಯೇ ಗಂಡನನ್ನು ಕಳೆದುಕೊಂಡ ಬೋ ಎಸ್‌ಆರ್‌ಗೆ ಮಕ್ಕಳೂ ಇರಲಿಲ್ಲ. ಜೀವನದ ಕೊನೆ ಗಳಿಗೆಯಲ್ಲಿ ಆಕೆ, ”ನಮ್ಮ ಜನಾಂಗದಲ್ಲಿ ನಾನು ಒಬ್ಬಳೇ ಉಳಿದಿದ್ದೇನೆ. ನಾನು ಕೊನೆಯವಳು ಎಂಬುವುದು ಹೆಮ್ಮೆಯಾಗುತ್ತಿದೆ. ಆದರೆ, ನಾನು ಮತ್ತೆ ಹುಟ್ಟಿದ ಆ ದಟ್ಟಾರಣ್ಯಕ್ಕೆ ಮರಳಬೇಕು. ಈ ನಾಡಿಗಿಂತ ಆ ಕಾಡು ಚೆನ್ನ. ಅದೇ ಮುಳ್ಳುಹಂದಿ, ಆಮೆ ಬೇಟೆಯಾಡಬೇಕು. ಕಾಡಿನೊಂದಿಗೆ ಮತ್ತೆ ನಾನು ಬದುಕಬಲ್ಲೆ. ಕಾಡಿನಲ್ಲಿ ನನ್ನ ಭವಿಷ್ಯ ಇದೆ, ಕಾಡಾದರೂ ನನಗೆ ಸಂಗಾತಿಯಾಗುತ್ತಿತ್ತು…. ”ಎಂದು ಹಂಬಲಿಸುತ್ತಿದ್ದಳಂತೆ. ಮತ್ತಷ್ಟು ಓದು »

10
ಮಾರ್ಚ್

ಅತ್ಮಹತ್ಯೆಯಲ್ಲಿ ಹತ್ಯೆಯಾಗುವುದು ದೇಹ ಮಾತ್ರ…!

ಪವನ್ ಎಂ ಟಿ

ಇಂಡಿಯಾ ಟುಡೇ  ಇತ್ತೀಚೆಗಷ್ಟೇ ರಾಷ್ಟ್ರವ್ಯಾಪ್ತಿಯಾಗಿ ಸಮೀಕ್ಷೆಯನ್ನು ನಡೆಸಿತು. ಆ ಸಮೀಕ್ಷೆಯ ಪ್ರಕಾರ ಈ ದೇಶದಲ್ಲಿ ನಡೆಯುವ ಆತ್ಮಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಮುಖ್ಯ ಫಲಿತಗಳನ್ನು ತಿಳಿಸುತ್ತಾರೆ.

೧.      ಕಳೆದ ಐದು ವರ್ಷಗಳಿಂದ ಈಚೆಗೆ ಆತ್ಮಹತ್ಯೆ ಮಾಡಿ ಕೊಳ್ಳುವವರ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಎಂಟು ಶೇಕಡ ವೃದ್ಧಿಯಾಗುತ್ತಿದೆ.

೨.      ಆತ್ಮಹತ್ಯೆ ಮಾಡಿ ಕೊಳ್ಳುವವರ ಪ್ರಮಾಣವನ್ನು ಗಮನಿಸಿದರೆ ಹಳ್ಳಿಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ನಗರ ಪ್ರದೇಶದಲ್ಲಿ ಆತ್ಮಹತ್ಯೆ ಪ್ರಮಾಣದಲ್ಲಿ ಹೆಚ್ಚಿದೆ.

೩.      ಆತ್ಮಹತ್ಯೆ ಮಾಡಿಕೊಂಡವರ ಪ್ರಮಾಣವನ್ನು ಒಟ್ಟು ಗಮನಿಸಿದರೆ ೮೮% ದಷ್ಟು ಆತ್ಮಹತ್ಯೆಗಳಾಗುತ್ತಿರುವುದು ೧೬ ರಿಂದ ೨೪ ವರ್ಷ ಪ್ರಾಯದ ವಯಸ್ಸಿನವರ ಮಧ್ಯೆ.

೪.      ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಒಟ್ಟು ಸಂಖ್ಯೆಯಲ್ಲಿ ೬೫% ಹುಡುಗರಿದ್ದಾರೆ. ೩೫%ದಷ್ಟು ಹುಡುಗಿಯರಿದ್ದಾರೆ ಎಂದು. ಈ ಫಲಿತಗಳನ್ನು ಇಟ್ಟುಕೊಂಡು ಅಥವ ಈ ಮಾದರಿಯ ಆಂಕಿ ಅಂಶಗಳನ್ನು ಇಟ್ಟುಕೊಂಡು ಹದಿಹರೆಯದವರು ಯಾಕೆ ಇಷ್ಟು ಪ್ರಮಾಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಸಂಶೋಧಿಸಲಾಯಿತು.

ಸಾಮಾನ್ಯವಾಗಿ ಆತ್ಮಹತ್ಯೆಗೂ ಯೌವ್ವನಕ್ಕೂ ಆತ್ಯಂತ ನಿಕಟ ಸಂಬಂಧವಿದೆ. ನೆನಪಿಟ್ಟು ಕೊಳ್ಳಬೇಕಾದ ಅಂಶವೆಂದರೆ ಆತ್ಮಹತ್ಯೆ ಎನ್ನುವುದು ಹೊಸ ಬೆಳವಣಿಗೆಯೇನಲ್ಲ. ಅದೆಷ್ಟೋ ವರ್ಷದಿಂದ ಇದು ನಡೆದುಕೊಂಡು ಬಂದಿದೆ. ಎಷ್ಟೋ ಬಾರಿ ಆತ್ಮಹತ್ಯೆಗೆ ಕಾರಣ ಮಾಧ್ಯಮಗಳ ಪ್ರಭಾವ. ವಿಶೇಷವೆಂದರೆ ನಮ್ಮಲ್ಲಿ ಜನ ಸಂಖ್ಯೆ ಯಾವ ರೀತಿಯಲ್ಲಿ ವೃದ್ಧಿಯಾಗುತ್ತಿದೆಯೋ ಅಷ್ಟೇ ಪ್ರಮಾಣದಲ್ಲಿ ಆತ್ಮಹತ್ಯೆಯೂ ವೃದ್ಧಿಯಾಗುತ್ತಿದೆ. ಮತ್ತಷ್ಟು ಓದು »