ವಿಷಯದ ವಿವರಗಳಿಗೆ ದಾಟಿರಿ

Archive for

29
ಮಾರ್ಚ್

ಭಾರತ-ಪಾಕ್ ಮಧ್ಯೆ ನಡೆಯುವುದು ಕೇವಲ ಪಂದ್ಯವಲ್ಲ!

– ರಾಕೇಶ್ ಶೆಟ್ಟಿ

ಅದನ್ನ ಕೇವಲ ಕ್ರಿಕೆಟ್ ಪಂದ್ಯ ಅಂತ ಹೇಳಲು ಸಾಧ್ಯವಾ? ನಾಳೆ ಬುಧವಾರ ಮಧ್ಯಾನ್ಹ ೨.೩೦ರ ನಂತರ ಬಹುತೇಕ ರಸ್ತೆಗಳು ಬಿಕೋ ಎನ್ನಲು ಶುರುವಾಗುತ್ತವೆ! ಎಂ.ಎನ್.ಸಿಗಳು ಸಹ ಉದ್ಯೊಗಿಗಳಿಗೆ ನಾಳೆ ವಿನಾಯಿತಿ ಕೊಡಲಿವೆ.(ಕೊಡದಿದ್ರೆ ಮಾಡೋ ಕೆಲ್ಸದಲ್ಲಿ ಯಡವಟ್ಟು ಮಾಡಿಬಿಡ್ತಾರೇನೋ ಅನ್ನೋ ಭಯಕ್ಕಾಗಿ 😉 ).ಜನ ಟೀವಿ ಮುಂದೆ ಕೂತ್ರೆ ಮುಗಿತು ಭಾರತ-ಪಾಕ್ ಕ್ರಿಕೆಟ್ ಸಮರದ ಫ಼ಲಿತಾಂಶ ಬರುವವರೆಗೂ ಅಲ್ಲಾಡಲಿಕ್ಕಿಲ್ಲ.

ಭಾರತ-ಪಾಕ್ ನಡುವೆ ನಡೆಯುವ ವಿಶ್ವಕಪ್ ಪಂದ್ಯ ಅಂದರೆ ಅದು ಸಮರವೇ ಸರಿ! ವಿಶ್ವಕಪ್ನಲ್ಲಿ ಭಾರತ-ಪಾಕ್ ಇದುವರೆಗು ೯೨,೯೬,೯೯ ಮತ್ತು ೨೦೦೩ ರಲ್ಲಿ ೪ ಬಾರಿ ಮುಖಾಮುಖಿಯಾಗಿವೆ.ಮತ್ತು ೪ ಬಾರಿಯು ಭಾರತ ಪಾಕಿಗಳಿಗೆ ಬಡಿದಿದೆ.ಅದರಲ್ಲೂ ವಿಶೇಷವಾಗಿ ಸಚಿನ್ನದ್ದು ಪಾಕ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಆರ್ಭಟ ತುಸು ಹೆಚ್ಚು! ಅದರಲ್ಲೂ ೨೦೦೩ರಲ್ಲಿ ಸೌತ್ ಆಫ಼್ರೀಕಾದ ಲ್ಲಿ ನಡೆದ ಪಂದ್ಯದಲ್ಲಂತೂ, ’ಸಚಿನ್ನನ್ನ ಮೊದಲನೆ ಚೆಂಡಿನಲ್ಲೆ ಔಟ್ ಮಾಡಿ ಕಳಿಸುತ್ತೇನೆ’ ಅಂತ ಪಂದ್ಯದ ಮೊದಲೆ ಕಿರುಚಿದ್ದ ಶೋಯೆಬ್ ಅಖ್ತರ್ನನ್ನ ಅಟ್ಟಾಡಿಸಿ ಬಡಿದಿದ್ದ! ಬಹುಷಃ ಆ ಅನುಭವದಿಂದಾಗಿಯೋ ಏನೋ,ಈ ಭಾರಿ ಅಖ್ತರ್ ಬಾಯಿ ಬಿಟ್ಟಿಲ್ಲ. ಆದರೆ ಅಫ಼್ರಿದಿ ಮಾತ್ರ ಸಚಿನ್ ನೂರನೇ ಶತಕ ಬಾರಿಸಲು ಇನ್ನಷ್ಟು ಸಮಯ ಕಾಯಬೇಕು ಅಂದಿದ್ದಾನೆ.ಯಥಾ ಪ್ರಕಾರ ಬ್ಯಾಟಿನಲ್ಲೆ ಉತ್ತರ ಕೊಡೊ ಅಭ್ಯಾಸವಿರೋ ನಮ್ಮ ಲಿಟಲ್ ಮಾಸ್ಟರ್ ಪ್ರತಿಕ್ರಿಯಿಸಿಲ್ಲ!

ಮತ್ತಷ್ಟು ಓದು »

29
ಮಾರ್ಚ್

ಕನ್ನಡನಾಡಿನ ಏಳಿಗೆ ಹೊಸದೊಂದು ಶಾಲೆಯಿಂದಲೇ ಆಗಬಲ್ಲುದು…!

– ಬನವಾಸಿ ಬಳಗ

ಕನ್ನಡದ ಸೊಲ್ಲರಿಮೆಯನ್ನು (ವ್ಯಾಕರಣವನ್ನು) ಮತ್ತು ಸ್ವರೂಪವನ್ನು ಅರ್ಥಮಾಡಿಕೊಳ್ಳುವುದರಲ್ಲಿ ವೈಜ್ಞಾನಿಕ ಮನೋಭಾವದ ಕನ್ನಡಿಗರೆಲ್ಲರ ಮನಸ್ಸನ್ನು ಗೆದ್ದಿರುವ ಶ್ರೀ. ಡಿ.ಎನ್. ಶಂಕರಭಟ್ಟರ ಕೊಡುಗೆ ಬಹಳ ಮುಖ್ಯವಾದದ್ದು. ಭಟ್ಟರ “ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ”, “ಮಾತಿನ ಒಳಗುಟ್ಟು”, “ಕನ್ನಡ ನುಡಿ ನಡೆದುಬಂದ ದಾರಿ” ಮುಂತಾದ ಹೊತ್ತಿಗೆಗಳು ಜನರಲ್ಲಿ ಕನ್ನಡದ ಬಗೆಗಿರುವ ತಪ್ಪು ತಿಳುವಳಿಕೆಯನ್ನು ಸುಟ್ಟು ಹಾಕುತ್ತವೆ. ಈ ಕ್ಷೇತ್ರದಲ್ಲಿ ಬಹುಕಾಲದಿಂದ ಕನ್ನಡದ ಭಾಷಾವಿಜ್ಞಾನಿಗಳು ಮತ್ತು ವ್ಯಾಕರಣಕಾರರು ಮಾಡಿಕೊಂಡು ಬಂದಿರುವ ತಪ್ಪುಗಳನ್ನು ಭಟ್ಟರು ಖಡಾಖಂಡಿತವಾಗಿ ತೋರಿಸಿಕೊಟ್ಟಿರುವುದರಿಂದ (ಮತ್ತು ಇನ್ನೂ ಮುಂದೆ ಬರುವ ಹೊತ್ತಿಗೆಗಳಲ್ಲಿ ತೋರಿಸಿಕೊಡಲಿರುವುದರಿಂದ) ಹಳೆ-ಶಾಲೆಗೆ ಅಂಟಿಕೊಂಡಿರುವ ಕೆಲವರ ಕಾಲ್ಕೆಳಗಿನ ನೆಲವೇ ಕುಸಿದಂತಾಗಿ, ಭಟ್ಟರನ್ನೂ ಮತ್ತವರ ತತ್ವಗಳನ್ನೂ ಕಟುವಾಗಿ ವಿರೋಧಿಸುವುದನ್ನೇ ಒಂದು ಹವ್ಯಾಸವಾಗಿಸಿಕೊಂಡಿದ್ದಾರೆ! ತಮಾಷೆಯೇನೆಂದರೆ ಇವರಾರ ವಿರೋಧವೂ ಭಟ್ಟರ ವೈಜ್ಞಾನಿಕತೆಯ ಮಟ್ಟಕ್ಕೆ ಏರದೆ ಬರೀ ಅವರನ್ನು ವೈಯಕ್ತಿಕವಾಗಿ ಮೂದಲಿಸುವುದರಿಂದ ಹಿಡಿದು, ಸಂಸ್ಕೃತದ ಪಂಡಿತರಾದ ಅವರೇ ಸಂಸ್ಕೃತದ್ವೇಷಿಗಳೆಂದು ಮೂದಲಿಸುವವರೆಗೆ, ಎಪ್ಪತ್ತೈದು ವರ್ಷದ ಮುದುಕರಾದ ಭಟ್ಟರು ರಾಜಕೀಯ ಲಾಭಕ್ಕಾಗಿ ಇದನ್ನು ಮಾಡುತ್ತಿದ್ದಾರೆ ಎನ್ನುವ ಸೊಂಟದ ಕೆಳಗಿನ ಆರೋಪದವರೆಗೆ ಮಾತ್ರ ತಲುಪುತ್ತವೆ! ಈ ಅವೈಜ್ಞಾನಿಕತೆಯೇ ಕನ್ನಡದ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದರಲ್ಲಿ ಕನ್ನಡಿಗರನ್ನು ಸೋಲಿಸಿರುವುದರಿಂದ ಇದನ್ನು ಕಿತ್ತೊಗೆಯದೆ ಬೇರೆ ದಾರಿಯಿಲ್ಲ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ ೩ರ ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ “ಕೂಡಲಸಂಗಮ ದೇವನ ಕನ್ನಡ” ಎಂಬ ಬರಹದಲ್ಲಿ ಶ್ರೀ ಕೆ.ವಿ. ತಿರುಮಲೇಶ್ ಅವರು ಅದೇ ಅವೈಜ್ಞಾನಿಕತೆಯನ್ನು ಓದುಗರ ಮುಂದಿಟ್ಟು ನಮ್ಮ ಈ ಮರುವುತ್ತರವನ್ನು ತಾವೇ ಬರಮಾಡಿಕೊಂಡಿದ್ದಾರೆ. ತಿರುಮಲೇಶರ ಬರಹದಲ್ಲಿ ಆ ಹಳೆ-ಶಾಲೆಯ ಅವೈಜ್ಞಾನಿಕತೆಯು ಮೈದಳೆದು ಬಂದಿರುವುದರಿಂದ ನಮ್ಮ ಈ ಉತ್ತರವು ಅವರಿಗೊಬ್ಬರಿಗೇ ಅಲ್ಲದೆ ಆ ಹಳೆ-ಶಾಲೆಯವರೆಲ್ಲರಿಗೂ ಒಪ್ಪುತ್ತದೆ.

ಮತ್ತಷ್ಟು ಓದು »