ಅರುಣಳ ಬಾಳಿಗೆ ಅರುಣೋದಯವೆಂದು
ರೂಪಾ
ಕೊನೆಗೂ ಅರುಣಾಗೆ ಅರುಣೋದಯ ಕಾಣಲೇ ಇಲ್ಲ . ಕೊನೆಗೆ ಈ ಜೀವನದಿಂದ ಬಿಡುಗಡೆ ಸಿಕ್ಕೀತೆ ಎಂಬ ನಿರೀಕ್ಷೆಯೂ ಇಲ್ಲವಾಗಿ ಹೋಗಿದೆ. ಜೀವ ಹೋಗುವ ತನಕ ದಿನದಿನವೂ ಸಾಯುತ್ತಲೇ ಜೀವಿಸಿರಲೇಬೇಕಾಗಿದೆ. ಅಷ್ಟಕ್ಕೂ ಈ ಅರುಣಾ ಶಾನಭಾಗ್ ಎಂಬ ನಮ್ಮ ಕರ್ನಾಟಕದ ಹುಡುಗಿ ಮಾಡಿದ ತಪ್ಪಾದರೂ ಏನು?
ಹೆಣ್ಣೆಂದರೆ ಹೀಗೇಕೆ…..?
-ಶ್ರೀದೇವಿ ಅಂಬೆಕಲ್ಲು॒॒
೩೭ ವರ್ಷಗಳ ಹಿಂದೆ ವಾರ್ಡ್ ಹುಡುಗನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಮಾನಸಿಕ ಯಾತನೆ ಅನುಭವಿಸುತ್ತಿರುವ ನರ್ಸ್ ಅರುಣಾ ಶಾನ್‌ಭಾಗ್ ಅವರ ನರಳುವಿಕೆ, ಮಾನಸಿಕ ನೋವು ಮತ್ತು ಆಕೆಯ ಗೆಳತಿ ಪಿಂಕಿ ವಿರಾನಿ ಅರುಣಾಗೆ ದಯಾಮರಣ ನೀಡಬೇಕೆಂದು ಅರ್ಜಿ ಸಲ್ಲಿಸಿರುವ ವರದಿ ಇತ್ತೀಚೆಗೆ ಮಾಧ್ಯಮಗಳಲ್ಲಿ ನೋಡಿದ್ದೇವೆ, ಕೇಳಿದ್ದೇವೆ. ಹೀಗೆ ಹೆಣ್ಣು ಮಗಳೊಬ್ಬಳು ದೌರ್ಜನ್ಯಕ್ಕೊಳಗಾಗಿ ಅನುಭವಿಸುತ್ತಿರುವ ಯಾತನಾಮಯ ಜೀವನ ಇನ್ಯಾವ ಹೆಣ್ಣು ಮಗಳಿಗೂ ಬಾರದಿರಲಿ ಅನ್ನೋದು ಎಲ್ಲ ತಾಯಿ ಹೃದಯದವರ ಆಶಯ.
ಹೆಣ್ಣು ಹೆಣ್ಣೆಂದು ಹೆಣ್ಣನ್ನೇಕೆ ಹೀಗಳೆಯುವಿರಿ…?ಹೆಣಲ್ಲವೇ ನಮ್ಮನ್ನ ಹೆತ್ತ ತಾಯಿ…?
ಮಾರ್ಚ್ ೮ ಅಂತರರಾಷ್ಟ್ರೀಯ ಮಹಿಳಾ ದಿನ. ದಿನಾಚರಣೆಯ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತದೆ. ಈ ವರ್ಷದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಘೋಷ ವಾಕ್ಯ ’ಶಿಕ್ಷಣ, ತರಬೇತಿ ಹಾಗೂ ವಿಜ್ಞಾನ, ತಂತ್ರಜ್ಞಾನಕ್ಕೆ ಸಮಾನ ಅವಕಾಶ-ಮಹಿಳೆಯರಿಗೆ ಒಳ್ಳೆಯ ಕೆಲಸಕ್ಕೆ ಹಾದಿ’.
ಒಬ್ಬ ಗಂಡಸಿನಷ್ಟೇ ಶ್ರಮ ವಹಿಸಿ ದುಡಿಯುವ ಹೆಣ್ಣು ಮಗಳಿಗೆ ನೀಡುವ ಸಂಬಳದಲ್ಲಿ ತಾರತಮ್ಯ ಮಾಡಲಾಗುತ್ತದೆ. ಗಂಡ ದಿನದ ೭ ಗಂಟೆ ದುಡಿದು ಬಂದು ತಾನೆ ಉತ್ಪಾದಕ ಎಂದು ಹೆಮ್ಮೆಯಿಂದ ಬೀಗಿಕೊಳ್ಳುತ್ತಾನೆ. ಇಡೀ ದಿನ ಮನೆಯಲ್ಲಿ ದುಡಿಯುವ ಹೆಂಡತಿಯ ಪರಿಶ್ರಮಕ್ಕೆ ಯಾವ ಬೆಲೆಯೂ ಇಲ್ಲ. ಒಂದು ಕಡೆ ವೇತನ ತಾರತಮ್ಯವಾದರೆ ಇನ್ನೊಂದೆಡೆ ಮಹಿಳಾ ದೌರ್ಜನ್ಯ ಪ್ರಕರಣಗಳು. ಮತ್ತೊಂದೆಡೆ ಕುಟುಂಬ ಜವಾಬ್ದಾರಿ ಹೊರಗಡೆಯೂ ದುಡಿಯಬೇಕು ಎಂಬ ಹೆಚ್ಚುವರಿ ಜವಾಬ್ದಾರಿ. ಬದುಕು ಎಂದರೆ ನೋವು ನಲಿವುಗಳ ಸಮ್ಮಿಲನ. ಆದರೆ ಹೆಣ್ಣಿನ ಬದುಕು ಅಂದರೆ ಅದು ಕೇವಲ ನೋವುಗಳ ಸಂಕಲನ. ಬುದ್ಧಿವಂತಿಕೆ, ಪರಿಶ್ರಮ, ಕ್ರೀಯಾಶಿಲತೆ, ನೋವು ನುಂಗುವ ಶಕ್ತಿ ಮತ್ತು ಸಂಘಟನೆಯಲ್ಲಿ ತಾನು ಮುಂದು ಎಂದು ಹೆಣ್ಣು ತೋರಿಸಿಕೊಟ್ಟಿದ್ದಾಳೆ.