ವಿಷಯದ ವಿವರಗಳಿಗೆ ದಾಟಿರಿ

Archive for

1
ಮಾರ್ಚ್

“ದೇವರು” ಇದ್ದಾನಾ….? ಮೂರ್ತಿರಾಯರು ಏನಂತಾರೆ ಕೇಳಿ


ಶತಶತಮಾನಗಳ ಹಿಂದೆ, ಮಾನವನಲ್ಲಿ ಆತ್ಮಪ್ರಜ್ಣೆ ಅರಳಿ ಅವನು ತನ್ನ ಸುತ್ತಲ ಪ್ರಪಂಚವನ್ನು ಕೂತೂಹಲದಿಂದ ನೋಡಲಾರಂಭಿಸಿದಾಗ ಅವನಿಗೆ ಕಂಡದ್ದೇನು ?

ಅಗ್ನಿಪರ್ವತಗಳಿಂದ ಭುಗಿಲೆದ್ದು ಗಗನಕ್ಕೆ ಏರುತ್ತಿರುವ ಜ್ವಾಲೆ; ಕಾದು ಕರಗಿ ಉಕ್ಕಿ ತನ್ನ ದಾರಿಯಲ್ಲಿ ಸಿಕ್ಕಿದ್ದನ್ನೆಲ್ಲ ಸುಟ್ಟು ಹರಿಯುತ್ತಿರುವ ಲಾವಾರಸ; ಮೋಡದ ದಟ್ಟಣೆಯನ್ನು ಇರಿದಿರಿದು ಕಣ್ಣು ಕೋರ್ಯೆಸುವ ಮಿಂಚು; ಕಾಳ್ಗಿಚ್ಚಿನಿಂದ ಭಸ್ಮವಾಗುತ್ತಿರುವ ಕಾಡು; ಕ್ಷುಬ್ದವಾದ ಸಮುದ್ರ, ಅದರ ತೀರದ ಮೇಲೆ ಅಪ್ಪಳಿಸುವ ಅಲೆಗಳು; ಇವುಗಳ ಜೊತೆಗಿನ ಗುಡುಗಿನ ಆರ್ಭಟ, ಸಿಡಿಲಿನ ಹೊಡೆತ, ಈ ಭಯಂಕರ ಪ್ರಪಂಚದಲ್ಲಿ ನಾನು ಹೇಗೆ ತಾನೆ ಬದುಕಿಯೇನು ?’ ಎಂದು ಅವನು ತಲ್ಲಣಿಸಿರಬೇಕು.

ಹೀಗೆ ಪ್ರಕೃತಿಯ ರೋಷವನ್ನೂ ಅದರ ಮಾರಕ ಪರಿಣಾಮವನ್ನೂ ನೋಡಿದ ಮಾನವನೇ ಅದರ ಮತ್ತೊಂದು ಮುಖವನ್ನೂ ನೋಡಿದ; ಸೂರ್ಯೋದಯ ಸೂರ್ಯಾಸ್ತಗಳ ಬಣ್ಣದ ಸಿರಿ; ಕಾಮನಬಿಲ್ಲಿನ ಸೊಬಗು; ಮಳೆಯಿಂದ (ಆ ಮಳೆ ಗುಡುಗು ಸಿಡಿಲುಗಳ ಜೊತೆಗೆ ಬಂದದ್ದು!) ತೊಯ್ದು ಕಾಡಿನಲ್ಲೂ ಬಯಲಿನಲ್ಲೂ ಹಸುರಿನ ಹಬ್ಬ; ಗಾಳಿಯಲ್ಲಿ ನಲಿದಾಡುತ ಹೂವುಗಳ ಕೋಮಲತೆ, ಸುಗಂಧ; ರಾತ್ರಿಯ ಆಕಾಶದಲ್ಲಿ ಮಿನುಗುವ ನಕ್ಷತ್ರಗಳು, ಅವುಗಳ ನಡುವಿನ ರಹಸ್ಯಪೂರ್ಣ
ನೀಲಿಯಾಳ; ಜಗತ್ತಿಗೆಲ್ಲ ಸೌಮ್ಯ ಸೌಂದರ್ಯವನ್ನು ಕೊಟ್ಟು, ತಂಪೆರೆಯುವ ಬೆಳದಿಂಗಳು; ಸಮುದ್ರದ ಪಾರವಿಲ್ಲದ ಹರವು, ಗಾಂಭೀರ್ಯ……….

ಮತ್ತಷ್ಟು ಓದು »

1
ಮಾರ್ಚ್

ರಾಗಿಮುದ್ದೆ

ಶಿವು.ಕೆ

” ಇದು ಕಷ್ಟ ಕಣ್ರೀ, ನನ್ನ ಕೈಯಲ್ಲಿ ಆಗೋಲ್ಲ”

“ಅರೆರೆ ಅದ್ಯಾಕೆ ಭಯ ಪಡುತ್ತೀರಿ, ಇದು ನೀರು ಕುಡಿದಷ್ಟೇ ಸುಲಭ”

“ನೀರು ಬೇಕಾದ್ರೆ ಹಾಗೆ ಕುಡಿಯಬಹುದು, ಬೇಕಾದ್ರೆ ನುಂಗಿಬಿಡಬಹುದು, ಆದ್ರೆ ಇದು ಮಾತ್ರ ನನ್ನ ಕೈಯಲ್ಲಿ ನುಂಗಲು ಸಾಧ್ಯವೇ ಇಲ್ಲ” ಖಡಾಖಂಡಿತವಾಗಿ ಹೇಳಿಬಿಟ್ಟರು.

ಆದ್ರೆ ಇಷ್ಟಕ್ಕೆ ನಾನು ಬಿಡುತ್ತೇನೆಯೇ? ನನ್ನ ಪ್ರಯತ್ನವನ್ನು ಮುಂದುವರಿಸಿದೆ.

“ನೋಡ್ರಿ ಉದಯ್ ನಾವು ಇದನ್ನು ಜಾಮೂನ್ ಗಾತ್ರ ಮಾಡಿಕೊಂಡು ಸುಲಭವಾಗಿ ನುಂಗುತ್ತೇವೆ. ನೀವು ಕೊನೇ ಪಕ್ಷ ಗೋಲಿ ಗಾತ್ರ ಮಾಡಿಕೊಂಡು ಆದ್ರೂ ನುಂಗಲೇಬೇಕು”

“ನೋಡಿ ಇದೊಂದು ಬಿಟ್ಟು ಬೇರೆ ಏನು ಬೇಕಾದ್ರು ಹೇಳಿ ಮಾಡುತ್ತೇನೆ. ಬೇಕಾದ್ರೆ ನಿಮಗೆ ಎಂಥ ಸಾಪ್ಟ್  ವೇರ್ ಬೇಕು ಹೇಳಿ ಸಿದ್ಧಮಾಡಿಕೊಟ್ಟುಬಿಡುತ್ತೇನೆ. ಇದನ್ನು ನುಂಗಲು ಮಾತ್ರ ಒತ್ತಾಯಮಾಡಬೇಡಿ” ಹೀಗೆ ಹೇಳುತ್ತಾ ಬಂದ ಉದಯ ಹೆಗ್ಡೆ  ಕೊನೆಗೂ ನನ್ನ ಮಾತನ್ನು ಒಪ್ಪಲೇ ಇಲ್ಲ.

ಮತ್ತಷ್ಟು ಓದು »