ವಿಷಯದ ವಿವರಗಳಿಗೆ ದಾಟಿರಿ

Archive for

31
ಮಾರ್ಚ್

ಹಳ್ಳಿಗರೇ ಕರೆಂಟ್ ಉಳಿಸಿ, ಎಂಜಿ ರೋಡಿಗೆ ಲೈಟ್ ಹಾಕಬೇಕು

ಸಾತ್ವಿಕ್ ಎನ್ ವಿ

ಪ್ರಪಂಚ ಹೀಗೆನೇ!
ಯಾರು ಪಾಲಿಸ್ತಾರೋ ಅವರ ಮೇಲೆಯೇ ಎಲ್ಲವನ್ನು ಹೇರಿ ಅರಾಮದಲ್ಲಿ ಇದ್ದು ಬಿಡುತ್ತೆ. ‘ಉಳಿಸಿ’ ಅಂತ ಸರ್ಕಾರ ಯಾವುದಾದ್ರು ಅಭಿಯಾನ ಮಾಡಿದ್ರೆ ಅದರ ಟಾರ್ಗೆಟ್ ಮಧ್ಯಮ ಇಲ್ಲವೇ ಕೆಳವರ್ಗವೇ ಆಗಿರುತ್ತೆ. ಅದು ನೀರುಳಿಸಿ ಎಂಬುದೋ, ಪೆಟ್ರೋಲ್ ಉಳಿಸಿ ಅಂತಲೋ, ಕಡೆಗೆ ವಿದ್ಯುತ್ ಉಳಿಸಿ ಅಂತಾನೋ ಇರಬಹುದು. ಇಲ್ಲಿ ‘ಉಳಿಸಬೇಕಾದವರು’ ಯಾವುದನ್ನು ಕಡಿಮೆ ಪಡೆಯುತ್ತಿರುತ್ತಾರೋ ಅವರೇ! ವಿಚಿತ್ರ, ಆದ್ರೂ ಸತ್ಯ.
ಉದಾಹರಣೆಗೆ ನೀರು ಉಳಿಸಿ-ಮಿತವಾಗಿ ಬಳಸಿ ಅಂತ ಹೇಳಲಾಗುತ್ತೆ. ಆದ್ರೆ ಅದನ್ನು ಪಾಲಿಸಬೇಕಾದ ಜನತೆಗೆ ವಾರಕ್ಕೆ ಒಮ್ಮೆಯೋ ಎರಡು ಬಾರಿಯೋ ನೀರು ಬಂದ್ರೆ ಅದೇ ಹೆಚ್ಚು. ಒಮ್ಮೆ ಎಲ್ಲಿಯಾದ್ರೂ ಈ ಜನರು ಈ ನಿಯಮಗಳನ್ನು ಪಾಲಿಸುವಲ್ಲಿ ಸೋತರೆ ನಾವೆಲ್ಲ ಬೊಬ್ಬೆ ಹಾಕಿ ಬಿಡ್ತೇವೆ. ಅದ್ರೆ ಆ ಬೊಬ್ಬೆಯಲ್ಲಿ ಸತ್ಯವೊಂದು ಮುಚ್ಚಿ ಹೋಗಿರುತ್ತೆ. ಒಬ್ಬ ಶ್ರೀಮಂತನ ಮನೆಯ ಟಾಯ್ಲೆಟ್ ನಲ್ಲಿ ಬಳಕೆಯಾಗುವ ನೀರಿನಷ್ಟು ಸಾಮಾನ್ಯ ಜನರ ಕುಡಿಯುವ ನೀರು ಶುದ್ಧವಾಗಿರಲ್ಲ.

ಮತ್ತಷ್ಟು ಓದು »

31
ಮಾರ್ಚ್

ಅಜಕ್ಕಳರಿಗೇಕೆ ಈ ಅಸಹನೆ?

(ಡಾ.ಅಜಕ್ಕಳ ಗಿರೀಶ್ ಭಟ್ ಅವರ ಲೇಖನಕ್ಕೆ ಶುಭಶ್ರೀಯವರ ಉತ್ತರ ಇಲ್ಲಿದೆ – ನಿಲುಮೆ)

– ಶುಭಶ್ರೀ

ಈ ಪುಸ್ತಕವನ್ನು ಬರೆದಿರುವ ಡಾ. ಅಜಕ್ಕಳ ಗಿರೀಶ್ ಭಟ್ಟರು ತಾವು ಬರೆದ ಪುಸ್ತಕಕ್ಕೆ ಇಟ್ಟಿರುವ ಹೆಸರೇ ಶ್ರೀಯುತರ ಉದ್ದೇಶವು ತಾತ್ವಿಕ ನಿಲುವನ್ನು ಪ್ರತಿಪಾದಿಸುವುದಾಗಲೀ, ವಾದವೊಂದನ್ನು ಆರೋಗ್ಯಕರವಾಗಿನಡೆಸುವುದಾಗಲೀ ಅಲ್ಲವೆಂದೂ ವ್ಯಕ್ತಿಯ ತೇಜೋವಧೆಯನ್ನು ಮಾಡುವುದಕ್ಕಾಗಿ ಮಾತ್ರವೇ ಎಂದೂ ವೇದ್ಯವಾಗುವುದಿಲ್ಲವೇ? ಇಲ್ಲದಿದ್ದರೆ “ಕನ್ನಡಕ್ಕೇಕೆ ಕತ್ತರಿ?” ಎನ್ನುವ ಹೆಸರು ಸಾಕಾಗುತ್ತಿತ್ತು.

“ಶಂಕರಬಟ್ಟರಕತ್ತರಿ” ಎಂದು ಬರೆದಿರುವ ಉದ್ದೇಶವೇ ಡಾ. ಡಿ ಎನ್ ಎಸ್ ಅವರನ್ನು ಏಕಾಂಗಿ ಎಂದು ಬಿಂಬಿಸುವ ದುರುದ್ದೇಶದಿಂದ ಅಲ್ಲವೇ? ಪುಸ್ತಕದ ಹೆಸರಿನ ಬಗ್ಗೆ ಆಕ್ಷೇಪಾ ಯಾಕೆಂದರೆ ಅದರಲ್ಲಿ ಶಂಕರಭಟ್ಟರನ್ನು ಹಳಿಯುವ ಉಮ್ಮೇದಿಯೊಂದೇ ಕಾಣುತ್ತಿರುವುದು. ಡಾ. ಡಿ ಎನ್ ಶಂಕರಭಟ್ಟರ ವಿಚಾರಗಳ ಬಗ್ಗೆ ನಡುನಡುವೆ ತಮ್ಮ ವಾದಕ್ಕೆ ಅನುಕೂಲವಾಗುವಂತಹ ಸಾಲುಗಳನ್ನು ಮಾತ್ರಾ ಎತ್ತಿಕೊಂಡು ತಮಗೆ ತೋಚಿದಂತೆ ವಿಶ್ಲೇಷಿಸಿರುವಂತೆ ಕಾಣುತ್ತಿದೆ. ಯಾಕೆಂದರೆ ಅಚ್ಚಕನ್ನಡ ವರ್ಣಮಾಲೆಯೆಂದು ಅನೇಕ ಕಡೆ, ಬಹಳಷ್ಟು ಹಿಂದೆಯೇ ಈ ಮಹಾಪ್ರಾಣ ಬಿಟ್ಟ ವರ್ಣಮಾಲೆ ಪ್ರಕಟವಾಗಿದೆಯಲ್ಲವೇ?

ಮೂಲತಃ ಶಂಕರಭಟ್ಟರ ನಿಲುವುಗಳನ್ನು ಖಂಡಿಸುತ್ತಾ ಇವುಗಳನ್ನು ಒಪ್ಪಿರುವ ಯಾವ ಭಾಷಾ ವಿಜ್ಞಾನಿಯೂ ಇಲ್ಲವೆನ್ನುವಂತೆ ಕೆಲವರು ಬರೆದಿರುವುದು ಸರಿಯಲ್ಲ. ಕರ್ನಾಟಕದ ಬಹುತೇಕ ಭಾಷಾ ವಿಜ್ಞಾನಿಗಳು ಇಂದು ಡಾ.ಡಿ ಎನ್ ಎಸ್ ಅವರ ನಿಲುವುಗಳ ಬಗ್ಗೆ –ಅವುಗಳಲ್ಲಿ ಒಪ್ಪಿತವಾಗುವುವೆಷ್ಟು? ಆಗದವೆಷ್ಟು?ಎಂದೆಲ್ಲಾ ಚರ್ಚೆ ನಡೆಸಿದ್ದಾರೆ. ಹಾಂ… ಅದೂ ಭಾಷಾ ವಿಜ್ಞಾನದ ನೆಲೆಯಲ್ಲಿ.  ಇವತ್ತಿನ ದಿವಸ ಕರ್ನಾಟಕದಲ್ಲಿ ಭಾಷಾವಿಜ್ಞಾನಿಗಳಲ್ಲಿ ದೊಡ್ಡ ಹೆಸರು ಡಾ. ಕೆ ವಿ ನಾರಾಯಣ, ಡಾ. ಸಿ ಎಸ್ ರಾಮಚಂದ್ರ,  ಡಾ. ಮಲ್ಲಿಕಾರ್ಜುನ್‍ಮೇಟಿ… ಮತ್ತಷ್ಟು ಓದು »