ವಿಷಯದ ವಿವರಗಳಿಗೆ ದಾಟಿರಿ

Archive for

13
ಮಾರ್ಚ್

ಓದೋದೊಂದು, ಮಾಡೋದೊಂದು

ಸುಪ್ರೀತ್, ಬೆಂಗಳೂರು

ಆತ ಕಂಪ್ಯೂಟರ್ ಸೈನ್ಸಿನಲ್ಲಿ ಡಿಗ್ರಿ ಪಡೆದಿರುತ್ತಾನೆ ಆದರೆ ಶೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಆಕೆ ಟಿಸಿಎಚ್ ಮಾಡಿಕೊಂಡು ಕಾಲ್ ಸೆಂಟರಿನಲ್ಲಿ ದುಡಿಯುತ್ತಿರುತ್ತಾಳೆ. ಈಕೆಯದು ಬಿಕಾಂ ಪದವಿ ಆದರೆ ಕೆಲಸ ಮಾಡುವುದು ಇಂಜಿನಿಯರಿಂಗ್ ಕಂಪೆನಿಯಲ್ಲಿ. ಅವರಿಗೆ ಅರ್ಥಶಾಸ್ತ್ರ, ಸಮಾಜಶಾಸ್ತ್ರಗಳಲ್ಲಿ ಡಾಕ್ಟರೇಟ್ ಇರುತ್ತದೆ, ಜಾಹೀರಾತು ಕಂಪೆನಿಯ ವ್ಯವಸ್ಥಾಪಕರಾಗಿರುತ್ತಾರೆ. ಕೆಲವು ಮಂದಿ ಇಂಜಿನಿಯರಿಂಗ್ ಓದಿರುತ್ತಾರೆ ಪತ್ರಿಕೋದ್ಯಮದ ಗಿರಣಿಗೆ ಬಿದ್ದಿರುತ್ತಾರೆ. ಎಂಬಿಬಿಎಸ್ ಓದಿ ರಾಷ್ಟ್ರ ಜಾಗೃತಿಗಾಗಿ ಸಂಘಟನೆ ಕಟ್ಟಿಕೊಂಡಿರುತ್ತಾರೆ. ಗಮನಿಸುತ್ತಾ ಹೋದರೆ ಹತ್ತರಲ್ಲಿ ಐದು ಮಂದಿ ಓದುವುದೇ ಒಂದು ಮುಂದೆ ಜೀವನದಲ್ಲಿ ಮಾಡುವುದೇ ಮತ್ತೊಂದು!

ಓದಿ ಓದಿ ಮರುಳಾದ!

ಶಿಕ್ಷಣವೆನ್ನುವುದು ಮೂಲಭೂತವಾಗಿ ಶುರುವಾಗಿದ್ದು ಉದ್ಯೋಗ ಹಿಡಿದು ಕಮಾಯಿ ಮಾಡಲಿ ಎನ್ನುವ ಕಾರಣಕ್ಕಲ್ಲ. ಅಕ್ಷರಗಳನ್ನು ಓದಲು, ಬರೆಯಲು ಕಲಿಯುವುದೇ ಶಿಕ್ಷಣದ ಪ್ರಮುಖ ಉದ್ದೇಶವಾಗಿತ್ತು. ಓದು ಬರಹ ಕಲಿತವನಿಗೆ ನಾಗರೀಕತೆಯ ಪರಿಚಯವಾಗಿರುತ್ತದೆ, ಶಿಸ್ತು ರೂಢಿಯಾಗಿರುತ್ತದೆ. ಶಿಕ್ಷಿತ ವ್ಯಕ್ತಿಯು ಮುಂದೆ ಸಮಾಜ ಸತ್ಪ್ರಜೆಯಾಗುತ್ತಾನೆ ಎನ್ನುವುದು ರೂಢಿಗತ ನಂಬಿಕೆಯಾಗಿತ್ತು. ಹೀಗಾಗಿ ಓದಿಗೂ ಹೊಟ್ಟೆ ಪಾಡಿಗಾಗಿ ಹಿಡಿಯುವ ನೌಕರಿಗೂ ಅಂತಹ ಸಂಬಂಧವೇನೂ ಇರಲಿಲ್ಲ. ಅಲ್ಲದೆ, ಇಂದಿನ ಹಾಗೆ ವೃತ್ತಿ ಪರ ಶಿಕ್ಷಣ ಕೋರ್ಸುಗಳ ಹಾವಳಿಯೂ ಇಲ್ಲದ ದಿನಗಳಲ್ಲಿ ಶಿಕ್ಷಣವೆಂದರೆ ದಿನಪತ್ರಿಕೆ ಓದಬಲ್ಲಷ್ಟು, ಪತ್ರ, ಅರ್ಜಿಗಳನ್ನು ಬರೆಯಬಲ್ಲಷ್ಟು, ಕೂಡು, ಕಳೆ, ಗುಣಿಸು ಎನ್ನುವ ಗಣಿತವನ್ನೂ ಕಲಿಯುವುದು ಎಂದೇ ಭಾವಿಸಲಾಗುತ್ತಿತ್ತು. ಮತ್ತಷ್ಟು ಓದು »