ವಿಷಯದ ವಿವರಗಳಿಗೆ ದಾಟಿರಿ

Archive for

24
ಮಾರ್ಚ್

ಎಂಡೋಸಲ್ಫನ್ ತಯಾರಕರ ದೇಶ ಸೇವೆ ಮುಖವಾಡ

– ಗೋವಿಂದ್ ಭಟ್

ಎಂಡೋಸಲ್ಫನ್   ತಯಾರಕರ  ಹೊಸ ವರಸೆ   ಗಾಬರಿಯಾಗುತ್ತದೆ.  ಅವರೀಗ  ಯುರೋಪಿನ   ವಿಷ ತಯಾರಕರು  ಎಂಡೋಸಲ್ಫನ್  ಬಹಿಷ್ಕಾರ  ಚಳುವಳಿಯ ಹಿಂದಿದ್ದಾರೆ ಎಂದು  ಆಪಾದಿಸುತ್ತಿದ್ದಾರೆ. ಬಾರತದ  ತಯಾರಕರು   ಜೀವ  ಉಳಿಸುವ  ಔಷದಿಯಲ್ಲಿ  ಮೂಲವಸ್ತುಗಳ  ಹೆಸರಿನಲ್ಲಿ ತಯಾರಿಸಿ  ಕಡಿಮೆ  ಬೆಲೆಯಲ್ಲಿ ಮಾರಿದ್ದು  ಹಾಗೂ   ಸಮಾಜ    ಇವರಿಗೆ  ಬೆಂಬಲಿಸಿದ್ದು   ಈಗ   ಇತಿಹಾಸ.     ಈಗ  ಈ  ಕೀಟನಾಶಕ ವನ್ನೂ     generic ಅನ್ನೋ  ಮುಖವಾಡದ    ಹವಣಿಕೆಯಲ್ಲಿದ್ದಾರೆ.   ನಾವು ಕಡಿಮೆ  ಬೆಲೆಯಲ್ಲಿ ಎಂಡೋಸಲ್ಫನ್   ತಯಾರು ಮಾಡಿ ಮಾರುವುದು  ಬಾರತದ  ರೈತರ  ಉದ್ದಾರ  ಮಾಡುವುದನ್ನು    ಯುರೊಪಿಯನರು    ಸಹಿಸುತ್ತಿಲ್ಲ.  ನಾವು    ಬಾಗಿಲು  ಹಾಕಿದರೆ  ಯುರೋಪಿನ  ತಯಾರಕರು  ಇದಕ್ಕಿಂತ  ಹಲವು ಪಾಲು ದುಬಾರಿಯ  ಮಾಲುಗಳನ್ನು  ಬಾರತದ  ರೈತರು  ಅವಲಂಬಿಸಬೇಕಾಗುತ್ತದೆ.
ನಾವಂತೂ  ಐವತ್ತೈದು ವರ್ಷಗಳಿಂದ  ಬಳಸುತ್ತಿರುವ  ಈ  ಕೀಟನಾಶಕವನ್ನು ತಿಂದರೆ  ಈಗಲೂ  ಕೀಟಗಳು  ಸಾಯುತ್ತವೆ  ಎನ್ನುವ  ಭ್ರಮೆಯನ್ನು  ಉಳಿಸಿಕೊಂಡಿದ್ದೇವೆ. ನಾನು  ವಾಸಿಸುವ  ಜಾಗದಿಂದ  ಕೇರಳದ  ಪಡ್ರೆ ಮತ್ತು  ಕರ್ನಾಟಕದ  ಕೊಕ್ಕಡ  ಎರಡೂ  ಮೂವತ್ತು ಕಿಮಿ ಒಳಗಿದೆ.  ಹಾಗಾಗಿ  ಇವರ ಮಾತಿಗೆ ಮರುಳಾಗುವುದು  ಕಷ್ಟವಾದರೂ  ಇದರಲ್ಲಿ ನಿಜ ಇರಬಹುದೋ  ಗೊಂದಲ  ಉಂಟುಮಾಡುತ್ತದೆ. ಹಾಗೆ  ಈ  ಎಂಡೊ ವಿರೋದಿಗಳು ಕೊಕ್ಕಡ  ಮತ್ತು   ಪಡ್ರೆ ಹಾಗೂ  ಸುತ್ತಲಿನ  ಗ್ರಾಮಸ್ಥರೋ  ಯುರೋಪಿನ   ಗುಮ್ಮನೋ ??   ದೂರ  ಇರುವವರಿಗೆ  ಆಫ್ರಿಕದಲ್ಲಿ  ಎಂಬಂತೆ  ಇದೊಂದು  ಸುದ್ದಿಯಷ್ಟೇ