ವಿಷಯದ ವಿವರಗಳಿಗೆ ದಾಟಿರಿ

Archive for

18
ಮಾರ್ಚ್

ಎಂ ಎನ್ ಸಿಗಳ ತೆಕ್ಕೆಗೆ ಔಷಧ – ಹೆಲ್ತ್ ಫಾರ್ Only rich!

– ಹರ್ಷ ಕುಗ್ವೆ

ಒಂದು ದೇಶದಲ್ಲಿ ತಯಾರಿಸಲಾಗುವ  ಔಷಧ ಮಾತ್ರೆಗಳು ಆ ದೇಶದ ಜನರ  ಆರೋಗ್ಯಕ್ಕಾಗಿ ಅಲ್ಲದೇ ಕೇವಲ ಬಿಸಿನೆಸ್ ಕಂಪನಿಗಳ,  ಅಥವಾ ಬಹುರಾಷ್ಟ್ರೀಯ ಕಂಪನಿಗಳ ಲಾಭಕ್ಕಾಗಿ ತಯಾರಿಸಲ್ಪಟ್ಟರೆ ಏನಾಗುತ್ತದೆ??

ಇದು ಸಧ್ಯದ  ನಮ್ಮ ಭಾರತದ ಸ್ಥಿತಿ. ಇದಕ್ಕೆ ನಮ್ಮ ರಾಜಕಾರಣಿಗಳ, ಉದ್ಯಮಿಗಳ  ದುರಾಸೆ ಒಂದೆಡೆ ಕಾರಣವಾದರೆ ವಿದೇಶೀ ದೈತ್ಯ ಕಂಪನಿಗಳ ಹಸಿವು ಮತ್ತೊಂದು ಕಾರಣ..
ಇದೆಲ್ಲಾ ಹೇಗಾಯ್ತು ಕೊಂಚ ನೋಡೋಣ.

ನಮ್ಮ ದೇಶವು ಪರಕೀಯರ ನೇರ ಮುಷ್ಠಿಯಿಂದ ಪಾರಾದ ಬಳಿಕ ಹಲವಾರು ಕ್ಷೇತ್ರಗಳಲ್ಲಿ ದಾಪುಗಾಲನ್ನಿಟ್ಟಿತ್ತು. ಔಷಧ ತಯಾರಿಕೆಯ ಉದ್ದಿಮೆಯಲ್ಲಿ ಸಹ ಅದು ಮುಂದುವರೆದ ದೇಶಗಳೂ ಹುಬ್ಬೇರಿಸಿ ನಿಲ್ಲುವಂತೆ  ಅಭಿವೃದ್ಧಿ ಸಾಧಿಸಿತು. ನಮ್ಮ ಸಕರ್ಾರವು ಪಾಲಿಸಿದ ಕೆಲವಾರು ಉತ್ತಮ ಆರ್ಥಿಕ ನೀತಿಗಳಿಂದಾಗಿ ನಮ್ಮ ದೇಶದ ಔಷದೋದ್ಯಮವನ್ನು MNC ಸ್ಪರ್ಧೆಯಿಂದ  ರಕ್ಷಿಸಿ ಅದು ಅಭೂತಪೂರ್ವ ಬೆಳವಣಿಗೆ ಸಾಧಿಸುವಂತೆ ಮಾಡಲಾಗಿತ್ತು.  ಔಷದ್ಯುತ್ಪನ್ನಗಳ ಉತ್ಪಾದನೆಯ ಪ್ರಮಾಣದಲ್ಲಿ ಇಡೀ ಪ್ರಪಂಚದಲ್ಲಿ ನಾವೇ ಮೂರನೇ ಸ್ಥಾನಪಡೆಯುವ ಹಂತಕ್ಕೆ ಈ ಬೆಳವಣಿಗೆ ತಲುಪಿತು. ಮಾತ್ರವಲ್ಲ ಜನರ ಅಗತ್ಯಕ್ಕನುಗುಣವಾಗಿ  ಉತ್ತಮ ಗುಣಮಟ್ಟದ ಔಷಧಿಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಿದ್ದೂ ನಮ್ಮ ಉದ್ದಿಮೆಯ ಹೆಗ್ಗಳಿಕೆ.
2105ರ ಸುಮಾರಿಗೆ ಭಾರತದ ಔಷಧಿ ಮಾರುಕಟ್ಟೆಯಲ್ಲಿ ಒಂದು ವರ್ಷಕ್ಕೆ ನಡೆಯುವ ವಹಿವಾಟು   ಎಷ್ಟು ಗೊತ್ತೇ? ಬರೋಬ್ಬರಿ 90ಸಾವಿರ ಕೋಟಿ!

ಮತ್ತಷ್ಟು ಓದು »

18
ಮಾರ್ಚ್

‘ಕುಂದನಗರಿ’ಯ ಸಮ್ಮೇಳನದ ನೆನಪುಗಳು…!

– ಅರೆಹೊಳೆ ಸದಾಶಿವ ರಾವ್

ಹಾಗೆ ನೋಡಿದರೆ ಬೆಳಗಾವಿಗೆ ನಾನು ಎರಡು ತಿಂಗಳಿಗೊಮ್ಮೆ ಹೋಗುತ್ತಿರುತ್ತೇನೆ. ಹಾಗಾಗಿ ಸಂಪೂರ್ಣ ಅಲ್ಲದಿದ್ದರೂ ಬೆಳಗಾವಿಯ ರಸ್ತೆ ಮತ್ತದರ ದುರವಸ್ತೆಗಳನ್ನು ಆಗಾಗ ಗಮನಿಸಿದ್ದೇನೆ. ಇವತ್ತು ಬೆಳಗಾವಿ ಏನಾದರೂ ನಮ್ಮ ಪ್ರಭುಗಳ ಗಮನ ಸೆಳೆದಿದ್ದರೆ, ಅದಕ್ಕೆ ಮರಾಠಿಗರು ಖಂಡಿತಕ್ಕೂ ಕಾರಣರು! ಏಕೆಂದರೆ ಬೆಳಗಾವಿ ತಮ್ಮದು ಎಂಬ ವಿವಾದವನ್ನು ಸದಾ ಜೀವಂತವಾಗಿಟ್ಟುಕೊಂಡಿರುವವರು ಮರಾಠಿಗರು. ಈ ಹಿನ್ನೆಲೆಯಲ್ಲಿ ನಮ್ಮ ಪ್ರಭುತ್ವ, ಬೆಳಗಾವಿಯನ್ನು ಒಂದು ಕಣ್ಣಿಟ್ಟು ನೋಡುತ್ತಲೇ ಇರುತ್ತದೆ! ಅದಿಲ್ಲವಾಗಿದ್ದರೆ ಬಹುಶ: ಈ ಕುಂದನಗರಿಯೂ  ಉತ್ತರ ಕರ್ನಾಟಕದ ಇತರ ಜಿಲ್ಲೆ-ಪಟ್ಟಣಗಳಂತೆ ನಿರ್ಲಕ್ಷ್ಯದ ಬೇಗುದಿಯಲ್ಲಿ ಕಾಲ ತಳ್ಳುತ್ತಲೇ ಇರುತ್ತಿತ್ತೇನೋ!.

ಅದಿರಲಿ, ಈಗ ವಿಷಯ ಅದಲ್ಲ. ಇಪ್ಪತ್ತೈದು ವರ್ಷಗಳ ನಂತರ ಈ ಕುಂದ ನಗರಿಯಲ್ಲಿ ಎರಡನೆಯ ವಿಶ್ವ ಕನ್ನಡ ಸಮ್ಮೇಳನ ನಡೆಯಿತಲ್ಲ; ಒಂದು ಅಪೂರ್ವ ಅವಕಾಶವೆಂಬಂತೆ, ನಾನೂ ಅದರಲ್ಲಿ ಭಾಗವಹಿಸುವ ಉದ್ದೇಶದಿಂದ ಹೋಗಿದ್ದೆ. ಸಮ್ಮೇಳನದ ಬಗ್ಗೆ, ಅಲ್ಲಿ ಮುಳುಗಿ ಹೋದ ೩೭ಕೋಟಿ ರೂಪಾಯಿಗಳ ಬಗ್ಗೆ ಮಾಧ್ಯಮಗಳು ಮಾತಾಡುತ್ತಲೇ ಇರುವುದನ್ನು ಕೇಳಿದ್ದೀರಿ. ನಾನು ಗಮನಿಸಿದ ಒಂದು ಅಂಶವೆಂದರೆ, ಬೆಳಗಾವಿಗೆ ಕಾಲಿಟ್ಟರೆ ಪ್ರತೀ ರಸ್ತೆಗಳೂ ರಿಪೇರಿಯಾಗಿರುವುದು ಬಿಟ್ಟರೆ, ಪಟ್ಟಣ ಸಿಂಗಾರಗೊಂಡಿರುವುದು ಮಾತ್ರ ಕಣ್ಣಿಗೆ ಕಾಣುತ್ತದೆ.  ಮತ್ತೆ ಈ ಮೂವತ್ತೇಳು ಕೋಟಿ ಎಲ್ಲಿಗೆ ಹೋಗಿದೆ ಎಂಬುದಕ್ಕೆ ಹುಟುಕಾಡಿದರೂ ಏನೂ ಸಿಗುವುದಿಲ್ಲ.

ಇನ್ನು ಕನ್ನಡ ವೆಂದರೆ ಏನು? ಅದರ ಉಳಿವು-ಅಳಿವು  ಎಂದರೆ ಏನು ಎಂಬುದೂ ಪ್ರಶ್ನೆಯಾಗಿ ಕಾಡಿದ್ದು ಸುಳ್ಳಲ್ಲ! ಈ ರೀತಿಯ ದ್ವಂದ್ವಕ್ಕೂ ಕಾರಣವಿದೆ. ಇದು ವಿಶ್ವ ಕನ್ನಡ ಸಮ್ಮೇಳನ. ಬೆಳಗಾವಿಯ ನಗರದ ಪ್ರತೀ ಗೋಡೆಯ ಮೇಲೂ ಕನ್ನಡ ಉಳಿಸಿ-ಬೆಳೆಸಿ ಎಂಬ ಉದ್ಘೋಷವೇ ಕಾಣುತ್ತಿತ್ತು. ಆದರೆ ಇಡೀ ಮೂರುದಿನ ನಡೆದ ಸಮ್ಮೇಳನದಲ್ಲಿ ಈ ಹಿನ್ನೆಲೆಯಲ್ಲಿ ಏನಾದರೂ ಕ್ರಮಗಳನ್ನು ಸರಕಾರ ಆಗಲೀ, ಸಮ್ಮೇಳನ ಸಮಿತಿಯಾಗಿಯಾಗಲೀ ಕೈಗೊಂಡ ಬಗ್ಗೆ ವರದಿಯಾಗಿಲ್ಲ. ಅದೂ ಅಲ್ಲದೇ ಇದೇ ರೀತಿಯ ಸಮ್ಮೇಳನವನ್ನು ಐದು ವರ್ಷಗಳಿಗೊಮ್ಮೆ ನಡೆಸುವ ತೀರ್ಮಾನವನ್ನು ‘ಬಹುಜನರ’ ಬೇಡಿಕೆಯ ಮೇರೆಗೆ ಮುಖ್ಯಮಂತ್ರಿಗಳು ಕೈಗೊಂಡರು. ಅದು ಒಂದು ರೀತಿಯಲ್ಲಿ ಸಂತಸದ ವಿಚಾರವೇ ಸರಿ…..ಆದರೆ…? ಮತ್ತಷ್ಟು ಓದು »