ವಿಷಯದ ವಿವರಗಳಿಗೆ ದಾಟಿರಿ

Archive for

22
ಮಾರ್ಚ್

ಸುನಾಮಿ ಕಾವು – ಮಾಧ್ಯಮಗಳಿಗೆ ಮೇವು

ಸಾತ್ವಿಕ್ ಎನ್ ವಿ

ತಲೆಕೆಟ್ಟ ಮಾಧ್ಯಮಗಳ ಮಾತಿಗೆ ಹೆದರಿ ಕಂಗಾಲಾದವರು, ಮತ್ತೆ ಮತ್ತೆ ಮುರ್ಖರಾಗುವವರು ಅದೇ ಸಾಮಾನ್ಯ ಜನ.
ಮಾರ್ಚ್ ೧೯ ರಂದು ಸುಪರ್ ಮೂನ್ ಪ್ರಭಾವದಿಂದ ಸಮುದ್ರ ಉಕ್ಕಿ ಹರಿದು ಇಡೀ  ಮಂಗಳೂರಿಗೆ ಮಂಗಳೂರೇ  ಮುಳುಗಿ ಹೋಗುತ್ತೆ ಅಂತ ಯಾವಾಗ ಟೀವಿಯಲ್ಲಿ ಸುದ್ದಿ ಬಂತೋ ಪರವೂರಗಳಿಂದ ಬಂದು ಇಲ್ಲಿ ಕೆಲಸ ಮಾಡ್ತಾ ಇರೋ ಜನ ಬೆವತು ಹೋದರು. ಮೊದಲೇ ಇಲ್ಲಿನ ಪ್ರಕೃತಿಯ ಸರಿಯಾದ ಅಂದಾಜಿಲ್ಲದ ಜನರಂತೂ ನಿಜಕ್ಕೂ ಒಂದು ಕ್ಷಣ ಅವಕ್ಕಾದರು. ಅವರವರ ಮನೆಗಳಿಂದ ಪೋನಿನ ಮೇಲೆ ಪೋನ್ ಬರತೊಡಗಿದವು. ಎಲ್ಲರದ್ದೂ ಒಂದೇ ಮಾತು ಈ ಕ್ಷಣವೇ ಅಲ್ಲಿಂದ ಹೊರಟು ಬಾ ಅಂತ.
ಹೆದರಿದವರ ಮೇಲೆ ಹಾವು ಎಸೆದಂತೆ ಜಪಾನಿನಲ್ಲಿ ಎದ್ದ ಸುನಾಮಿ ಇನ್ನಷ್ಟು ಹೆದರಿಕೆ ಹುಟ್ಟಿಸಿತು. ಇದರೆಲ್ಲರ ಪರಿಣಾಮ ದೂರದ ಊರಿಗೆ ಹೋಗೋ ಎಲ್ಲ ಬಸ್ಸುಗಳು ಬಸುರಿಯಂತೆ ತುಂಬಿ ಹೋದವು. ರಾತ್ರೋ ರಾತ್ರಿ ಖಾಸಗಿ ಬಸ್ಸಿನವರು ಪ್ರಯಾಣ ದರವನ್ನು ಹೆಚ್ಚಿಸಿ ಉರಿಯುವ ಮನೆಯಲ್ಲಿ ಗಳ ಹಿರಿಯುವ ಕೆಲಸ ಮಾಡಿದರು. ಒಂದಕ್ಕೆ ಎರಡು ನೀಡಿ ತಮ್ಮ ಊರಿಗೆ ಹೊರಟು ನಿಂತಿತು ಜನತೆ. ೫೦ ಜನರು ಇರಬೇಕಾದ ಬಸ್ಸಿಲ್ಲಿ ೬೦-೭೦ ಜನ ಪ್ರಯಾಣ ಮಾಡಿದರು.
ಮಕ್ಕಳು, ಮರಿ, ಹೆಂಗಸರು, ಗಂಡಸರು ಎಂಬ ಬೇಧಭಾವವಿಲ್ಲದೇ ಹೊರಟೆ ಹೊರಟರು. ಇವರೆಲ್ಲ ಮಾಸಿಕ ಪಗಾರ ಎಣಿಸೋ ಸರ್ಕಾರಿ ಬಾಬುಗಳಲ್ಲ. ದಿನಗೂಲಿಗೆ ದೂರದ ಉತ್ತರ ಕರ್ನಾಟಕದಿಂದ ಬಂದ ಜನ. ಒಪ್ಪತ್ತಿಗೆ ಪರದಾಡುತ್ತಿರುವ ಇವರು, ಪ್ರಕೃತಿಯ ಮುನಿಸಿಗೆ ಒಳಗಾದ ನೆರೆಪೀಡಿತ ಜನ.

ಮತ್ತಷ್ಟು ಓದು »

22
ಮಾರ್ಚ್

ಬೇಕೇ ಇಂಥ ಮಕ್ಕಳು?

– ಪವನ್ ಎಂ. ಟಿ
ಒಂದು ಮಾತಿದೆಯಲ್ವಾ, ಈ ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ತಾಯಿ ಇರಲಿಕ್ಕಿಲ್ಲ ಅಂತ.ನಾನೀಗ ಹೇಳ ಹೊರಟಿರುವುದು ಹಾಗೊಬ್ಬ ತಾಯಿಯ ಮತ್ತು ಅವಳ ಕಟುಕ ಮಗನ ಬಗ್ಗೆ.ತನ್ನ ವಯಸ್ಸಾದ ತಂದೆ ತಾಯಿಯನ್ನು ಯಾವ ಮಕ್ಕಳು ತಾನೆ ದಿನಗೂಲಿ ನೌಕರನಂತೆ ದುಡಿಸಿಕೊಳ್ಳುತ್ತಾರೆ ನೀವೆ ಹೇಳಿ?  ಆದರೆ ಇಲ್ಲಿ ಅಂತವನಿದ್ದಾನೆ. ಒಬ್ಬ ಅಜ್ಜಿ ತನ್ನ ಒಂದು ತುತ್ತು ಅನ್ನಕ್ಕಾಗಿ, ನಿತ್ಯದ ಜೀವನಕ್ಕಾಗಿ ದಿನವಿಡೀ ದುಡಿಯಲೇ ಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

ಈ ಬಡಜೀವ ತನ್ನ ೯೫ ನೇ ವಯಸ್ಸಿನಲ್ಲಿಯೂ ಕೂಡ ಬುಟ್ಟಿಯನ್ನು ತಯಾರಿಸಿ ಬದುಕಬೇಕಾಗಿದೆ. ಈ ಬುಟ್ಟಿಗಾಗಿ ದೂರದ ಕಾಡಿನಿಂದ ಸಾಮಾಗ್ರಿಗಳನ್ನು ತರಲು ಒಬ್ಬರೆ  ಹೋಗುತ್ತಾರೆ. ಸರಿಯಾಗಿ ನಡೆಯಲು ಸಾಧ್ಯವಿಲ್ಲದ ಗೂನು ಬೆನ್ನಿನ ಅಜ್ಜಿ ಕಾಡಿಗೆ ತೆರಳಿದಾಗ ಅಲ್ಲಿ ಏನಾದರೂ ತೊಂದರೆಯಾದರೆ ಏನು ತಾನೆ ಮಾಡಿಯಾರು?  ಒಂದು ವೇಳೆ ತೊಂದರೆಯಾದರೂ ಸಹ ಅಲ್ಲಿ ಅಜ್ಜಿಯ ಬಗ್ಗೆ ತಲೆಕೆಡಿಸಿ ಕೊಳ್ಳುವವರಾರು ಇಲ್ಲ.
ಮತ್ತಷ್ಟು ಓದು »