ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 11, 2011

10

ಮರಳಿ ಎದ್ದು ಬಾ ಜಪಾನ್…

‍ನಿಲುಮೆ ಮೂಲಕ

ಸಾತ್ವಿಕ್ ಎನ್ ವಿ

ಮತ್ತೆ ಅದೇ ಹಾಡು ಕೇಳುವ ಪ್ರಸಂಗ ಬರುತ್ತದೆ ಎಂದುಕೊಂಡಿರಲಿಲ್ಲ.

ರೈಲಿನಲ್ಲಿ ಹೋಗುತ್ತಿರುವಾಗ ನಾಲ್ವರು ವಿದೇಶಿಯರು ಇದಕ್ಕಿದ ಹಾಗೆ ಎದ್ದು ನಿಂತು ಹಾಡತೊಡಗಿದರು. ಬೋಗಿಯಲ್ಲಿನ ಜನರಿಗೆಲ್ಲ ಆಶ್ಚರ್ಯ. ಯಾರೋ ಹಿರಿಯರು ಆ ವಿದೇಶಿಯರನ್ನು ಕೇಳಿದಾಗ ಅಲ್ಲಿದ್ದ ಜನರಿಗೆ ಕಣ್ಣಾಲಿಗಳು ತುಂಬಿ ಬಂದವು. ವಿಷಯವಿಷ್ಟೇ. ಅವರು ಜಪಾನಿಯರು. ಅದರಲ್ಲಿ ಒಬ್ಬ ರೇಡಿಯೋ ಕೇಳುತ್ತಿದ್ದ. ಇದಕ್ಕಿದ ಹಾಗೆ ರೇಡಿಯೋದಲ್ಲಿ ಜಪಾನ್ ನಲ್ಲಿ ಭೂಕಂಪವಾಗಿ ಸಾಕಷ್ಟೂ ಸಾವು ನೋವುಗಳಾಗಿರುವುದು ತಿಳಿದುಬಂತು. ಆಗ ಆ ಜಪಾನಿಯರು ಎದ್ದು ನಿಂತು ತಮ್ಮ ರಾಷ್ಟ್ರ ಗೀತೆಯನ್ನು ಹಾಡುವ ಮೂಲಕ  ಸಾವು ನೋವುಗಳಿಗೆ ಈಡಾದ ತಮ್ಮ ದೇಶವಾಸಿಗಳಿಗೆ ಸಂತಾಪ ಸೂಚಿಸಿದ್ದರು. ಇದು ಎಲ್ಲೋ ಓದಿದ್ದ ಸಂಗತಿ.

ಮತ್ತೆ ಈಗ ನೆನಪಾದದ್ದು ಘೋರವಾಗಿ ಅಪ್ಪಳಿಸಿದ ಸಮುದ್ರದ ಸುನಾಮಿಯ ಹೊಡೆತಕ್ಕೆ ಸಿಕ್ಕಿ ಜಪಾನಿನ ಒಂದು ಭಾಗವೇ ಉಳಿದ ಪ್ರದೇಶದೊಂದಿಗೆ ಸಂಪರ್ಕ ಕಳೆದುಕೊಂಡಿದೆ. ೮.೯ ಮ್ಯಾಗ್ನಟ್ಯುಡ್ ಇದ್ದ ಭೂಕಂಪ ಇಂಥ ಸುನಾಮಿಯನ್ನು ಎಬ್ಬಿಸಿದೆ. ಲಕ್ಷಸಂಖ್ಯೆಯ ಜನರು ಸಂತ್ರಸ್ತರಾಗಿದ್ದಾರೆ. ಇದರ ಭೀಕರತೆಯ ವಿವರ ತಿಳಿದು ಬರಬೇಕಷ್ಟೇ.

ಜಪಾನಿಯರಿಗೆ ಇಂಥ ವಿಪತ್ತುಗಳು ಹೊಸತೇನಲ್ಲ. ಇಡೀ ದೇಶವನ್ನೇ ಹೊಸಕಿ ಹಾಕಿದಾಗಲೂ ಎದ್ದು ನಿಂತು  ದೈತ್ಯ ಶಕ್ತಿಯಾಗಿ ಬೆಳೆದು ಬಂದ ಕೀರ್ತಿ ಇವರ ಇತಿಹಾಸದಲ್ಲಿದೆ. ಆದರೆ ಇಂಥ ಸುನಾಮಿಯೊಂದು ಸಾರಿಸಿ ಹಾಕಿದ ಸಾವಿದು ನ್ಯಾಯವೇ? ಪ್ರಕೃತಿ ಈ ಪಾಟಿ ಮುನಿದಿದ್ದು ಯಾಕೆ? ಒಂದಿಷ್ಟು ಕನಿಕರವೂ ಇಲ್ಲದೇ ತನ್ನ ಕಂದಮ್ಮಗಳನ್ನೇ ಆಪೋಷನ ತೆಗೆದುಕೊಳ್ಳುವಾಗ ಒಂದು ಘಳಿಗೆ ಅಡಿಗರ ಭೂಮಿಗೀತ ನೆನಪಿಗೆ ಬಂದರೆ ವಿಶೇಷವೆನಿಲ್ಲ. ಈ ಪ್ರಕೃತಿ ಎಂಬ ತಾಯಿ ‘ಹಕ್ಕಿ ಕೊರಳ ಹಿಚಿಕಿ ಲಾಲಿ ಹಾಡು’ತ್ತಾಳೆ. ಮನುಷ್ಯನೂ ಆಕೆಯ ಮೇಲೆ ಅವ್ಯಾಹತವಾದ ಧಾಳಿ ಮಾಡುತ್ತಾನೆ. ಆಕೆ ಸೋತಂತೆ ಮಾಡಿ ಸೋಲಿಸಿರುತ್ತಾಳೆ. ಅಲ್ಲಿಗೆ ಅನೇಕ ಜನರ ಜೀವಗಳು ಆಕೆಯ ಹಸಿದ ಹೊಟ್ಟೆಗೆ ಸೇರಿ ಮರುಹುಟ್ಟು ಪಡೆಯಲು ಹವಣಿಸುತ್ತಿರುತ್ತವೆ.

ಅದೇನೆ ಇರಲಿ, ಇಂದು ಸೋತ ಕೈಯಲ್ಲಿರುವ ಜಪಾನಿಗಳಿಗಾಗಿ ಒಂದು ಘಳಿಗೆ ಮರುಗೋಣ. ವಿಶ್ವವೇ ಜಪಾನಿನ ನೆರವಿಗೆ ನಿಲ್ಲಲಿ. ಎಂಥ ಘನ ರಾಷ್ಟ್ರವಾದರೂ ಇಂಥ ಸೂತಕದ ಸಮಯದಲ್ಲಿ ಮನಸ್ಥೈರ್ಯ ತುಂಬುವ ಕೈಗಳ ಕಡೆಗೆ ನೋಡುತ್ತಿರುತ್ತದೆ. ಭಾರತೀಯರಾದ ನಾವು ನಮ್ಮ ಸಹೋದರರಿಗೆ ಧೈರ್ಯ ತುಂಬುತ್ತಾ ವಿಶ್ವಮಾನವರಾಗೋಣ.

ಜಪಾನ್ ನೀನೆಂದರೆ ಹೋರಾಟ, ಹಟ, ಸಾಧನೆ. ನೀನು ನಿನ್ನ ಎಂದಿನ ಕೆಚ್ಚನ್ನು ತೋರಿಸಿ ಬೇಗನೇ ಮರಳಿ ಮುಂಚಿನ ಸ್ಥಿತಿಗೆ ಬಾ….. ಸಹೋದರರನ್ನು ಕಳೆದುಕೊಂಡಿರುವ ಜಪಾನಿಗರೇ ಇದೋ ನಿನ್ನ ಭಾರತೀಯ ಸಹೋದರನ ಸಂತಾಪಗಳು.

ಚಿತ್ರಕೃಪೆ: thedailyinquirer.net

Read more from ಲೇಖನಗಳು
10 ಟಿಪ್ಪಣಿಗಳು Post a comment
  1. chand's avatar
    ಮಾರ್ಚ್ 11 2011

    ಸಕಾಲಿಕವಾಗಿ ಚೆನ್ನಾಗಿದೆ…

    ಉತ್ತರ
  2. ಆಸು ಹೆಗ್ಡೆ's avatar
    ಮಾರ್ಚ್ 11 2011

    ಸಾತ್ವಿಕ್,

    ತಮ್ಮೊಂದಿಗೆ ನಾನೂ ದನಿಗೂಡಿಸುತ್ತೇನೆ!

    ಇಂದು ಎರಡು “ಬ್ರೇಕಿಂಗ್” ಸುದ್ದಿಗಳನ್ನು ಓದಿದಾಗ ಆಸುಮನ ಸ್ಪಂದಿಸಿದ ಪರಿ ಇದು:

    “ಬುಡ ಹಿಡಿದು ಅಲುಗಾಡಿಸಿ, ತೊಳೆದು ಜೊತೆಗೆ ಕೊಂಡೊಯ್ದಿತು, ವಿಧಿ ಜಪಾನಿನಲ್ಲಿ…
    ಅಣ್ವಸ್ತ್ರ ಸಾಗಿಸಬಲ್ಲ ಕ್ಷಿಪಣಿಗಳ ಹಾರಿಸಿ ಸಂತಸ ಪಟ್ಟರು ಮಂದಿ ನಮ್ಮೀ ದೇಶದಲ್ಲಿ!”

    ಇದು ವಿಪರ್ಯಾಸ!

    ಉತ್ತರ
  3. chukkichandira's avatar
    ಮಾರ್ಚ್ 11 2011

    ಜಪಾನ್ ನೀನೆಂದರೆ ಹೋರಾಟ, ಹಟ, ಸಾಧನೆ. ನೀನು ನಿನ್ನ ಎಂದಿನ ಕೆಚ್ಚನ್ನು ತೋರಿಸಿ ಬೇಗನೇ ಮರಳಿ ಮುಂಚಿನ ಸ್ಥಿತಿಗೆ ಬಾ….. ಸಹೋದರರನ್ನು ಕಳೆದುಕೊಂಡಿರುವ ಜಪಾನಿಗರೇ ಇದೋ ನಿನ್ನ ಭಾರತೀಯ ಸಹೋದರನ ಸಂತಾಪಗಳು

    ಉತ್ತರ
  4. sharvariyashayari's avatar
    ಮಾರ್ಚ್ 11 2011

    ಅಂಥಾ ಅಣುಬಾಂಬ್‌ ಬಿದ್ದರೂ ಎದ್ದು ಬಂದು ಸಡ್ಡು ಹೊಡೆದ ಜಪಾನ್‌ ಈ ಸುನಾಮಿಗೆ ಹೆದರಲ್ಲ. ಖಂಡಿತಾ ಕೆಲವೇ ದಿನಗಳಲ್ಲಿ ಎದ್ದು ನಿಲ್ಲುತ್ತೆ.

    ಉತ್ತರ
  5. ರವಿ's avatar
    Ravi
    ಮಾರ್ಚ್ 11 2011

    “ಜಪಾನ್ ನೀನೆಂದರೆ ಹೋರಾಟ ಸಾಧನೆ” ಬಂಡೆಯ ಮೇಲೆ ಕೆತ್ತಬೇಕಾದಂತಹ ಮಾತು. ಜಪಾನ್, ಪ್ರಕೃತಿ ಮುನಿದ ಸ್ಥಳಗಳಲ್ಲಿ ಒಂದು. ಆಗೊಮ್ಮೆ ಈಗೊಮ್ಮೆ ಪ್ರಕೃತಿಯ ಈ ಪ್ರಳಯ ರುದ್ರ ರೂಪ ಸಾಮಾನ್ಯ. ಪ್ರತೀ ಬಾರಿಯೂ ಫೀನಿಕ್ಸ್ ಗೂ ನಾಚಿಕೆಯಾಗುವಂತೆ ಜಪಾನೀಯರು ಮೇಲೆದ್ದು ಬರುತ್ತಾರೆ. ಜಪಾನೀ ಸೋದರರಿಗೆ ಮನದಾಳದ ಸಂತಾಪಗಳು.

    ಉತ್ತರ
  6. MOKHASHI's avatar
    ಮಾರ್ಚ್ 11 2011

    ENE ADARU DEVARU JAPANIYARANNU CHENNAGI ITTIRALI.

    ಉತ್ತರ
  7. anil kumar's avatar
    anil kumar
    ಮಾರ್ಚ್ 17 2011

    oh..devare japanies matte e tara duranta tarabeda

    ಉತ್ತರ
  8. ರವಿ ಕುಮಾರ್ ಜಿ ಬಿ's avatar
    ರವಿ ಕುಮಾರ್ ಜಿ ಬಿ
    ಮಾರ್ಚ್ 17 2011

    ಅದರಲ್ಲೂ ಗಮನಿಸಬೇಕಾದ ಅತಿ ಮುಖ್ಯ ಅಂಶ ಅಂದರೆ ಸುನಾಮಿಯ ನಂತರ ಅಲ್ಲಿ ಒಂದೇ ಒಂದು ಕಳ್ಳತನ ಅಥವಾ ಲೂಟಿಯಾದ ಅಥವಾ ದರೋಡೆ ಯಾದ ವರದಿಯಾಗಿಲ್ಲ !!!! ಅದಕ್ಕೆ ಅವರು ಖಂಡಿತ “ಮೇಲೆದ್ದು ಬರುತ್ತಾರೆ ” ಈ ಹಿಂದಿನಂತೆ ….. ಆದರೆ ಇದೆ ಸ್ತಿತಿಯನ್ನ ಒಮ್ಮೆ ನಮ್ಮ ದೇಶದಲ್ಲಿ ಊಹಿಸಿ ನೋಡಿ? ಅದಕ್ಕೆ ಹೇಳೋದು ಕೇವಲ ಬೋಧಿಸಿದರೆ ಸಾಲದು ಆಚರಿಸುವವರಿರಬೇಕು ಎಂದು ……. ನಮ್ಮಲ್ಲಿ ಕೇವಲ ಬೋಧನೆ ಮಾತ್ರ ಥನ್ಡಿಯಾಗಿ ಮಾಡುತ್ತಾರೆ ವಿನಃ ಆಚರಣೆಯನ್ನಲ್ಲ ಅದಕ್ಕಾಗಿ ನಮಗೆ ಈ ಸ್ತಿತಿ !!! ನಮ್ಮಲ್ಲಿ ಪ್ರವಾಹ ಬಂದು ಎರಡು ವರುಷ ಆದರೂ ಇನ್ನೂ ಚೇತರಿಸಿಕೊಂಡಿಲ್ಲ !!!!!!!

    ಯಥಾ ಪ್ರಜಾ ತಥಾ ರಾಜ !!!!!! ಈಗಿನ ಕಾಲಕ್ಕೆ ತಕ್ಕಂತೆ !!!!!!!

    ಉತ್ತರ
  9. ROOPA's avatar
    ಮಾರ್ಚ್ 17 2011

    ಟಿವಿಯಲ್ಲಿ ಜಪಾನಿನಿಂದ ಇತ್ತೀಚಿಗಷ್ಟೆ ಬಂದಿಳಿದ ದಂಪತಿಗಳಿಬ್ಬರು(ಹೆಸರು ನೆನಪಿಲ್ಲ ) ಟಿವಿಯಲ್ಲಿ ತಮ್ಮ ಅನುಭವವನ್ನು ಹೇಳಿಕೊಳ್ಳುತ್ತಿದ್ದರು. ಅವರಾ ಜಪಾನೀ ಮಿತ್ರರು ಅವರಿಗೆ ಹೊರಡುವಾಗ “ನಮ್ಮ ಜಪಾನ್ ಅನ್ನು ದೂಷಿಸಬೇಡಿ , ನಮ್ಮ ಜಪಾನ್ ಒಳ್ಳೆಯದುಸು”
    ಎಂದರಂತೆ
    ಪ್ರಕೃತಿಗೆ ಅವರ ಮೇಲೇಕೆ ಮುನಿಸೋ ಗೊತ್ತಿಲ್ಲ.
    ದೇವರಲ್ಲಿ ಅವರಿಗೆ ಒಳ್ಳೇಯದಾಗಲೆಂದು ಪ್ರಾರ್ಥಿಸಿಕೊಳ್ಳ್ವುವದಷ್ಟೇ ನಮಗೆ (ನಮ್ಮಂಥ ಸಾಮಾನ್ಯ ಜನರಿಗೆ) ಉಳಿದಿರುವುದು

    ಉತ್ತರ
  10. kanasugalahandara's avatar
    kanasugalahandara
    ಮಾರ್ಚ್ 25 2011

    its very nice. good

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments