ವಿಷಯದ ವಿವರಗಳಿಗೆ ದಾಟಿರಿ

ಜೂನ್ 5, 2011

8

ಹನುಮಪ್ಪನೆ ಆಗಿರಲಿ ಇಮಾಂ ಸಾಬಿಯೇ ಆಗಿರಲಿ…!

‍ನಿಲುಮೆ ಮೂಲಕ

– ಪವನ್‍ ಪಾರುಪತ್ತೇದಾರ‍್, ಬೆಂಗಳೂರು

ಜನ ಲೋಕಪಾಲ್ ಜಾರಿಗಾಗಿ ಅಣ್ಣಾ ಹಜಾರೆ ಹೋರಾಟ ಮಾಡಿದ್ರು , ಮೇಧಾ ಪಾಟ್ಕರ್ ಹೋರಾಟಗಳನ್ನ ಮಾಡುತ್ತಲೇ ಇರ್ತಾರೆ. ಎರಡು ಗ್ರೇಟ್‍  ಹಗರಣ ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಸುಬ್ರಮಣ್ಯನ್ ಸ್ವಾಮಿ ಅವರ ಹೋರಾಟವೇ ಕಾರಣ. ಈಗ ತಾನೆ ಮಿಲಿಂದ್ ಸೋಮನ್ ಹಸಿರು ಕ್ರಾಂತಿ ಮಾಡಲು 531 ಕಿ.ಮೀ. ಓಟ ಮುಗಿಸಿದ್ದಾರೆ.ಇನ್ನು ಎಷ್ಟೋ ಹೋರಾಟಗಳು ನಡಿತನೆ ಇರುತ್ತವೆ. ಆದರೆ ,ಈಗ ಬಾಬಾ ರಾಮದೇವ್ ಹೋರಾಟ ಮಾಡಲು ಪ್ರಾರಂಭ ಮಾಡಿದ ತಕ್ಷಣ ಈ  ಮಾಧ್ಯಮಗಳು ಏಕೆ ಅದಕ್ಕೆ ಕೋಮುವಾದದ ಬಣ್ಣ ಹಚ್ಹುತ್ತಿವೆಯೋ ಅ ದೇವರೇ ಬಲ್ಲ ” ಟೈಮ್ಸ್ ನೌ” ಅರ್ನಬ್ ಗೋಸ್ವಾಮಿ ಇರಬಹುದು ಅಥವಾ “ಸಿಎನ್‍ಎನ್‍”  ನ ರಾಜ್ದೀಪ್ ಸರ್ದೇಸಾಯಿ ಇರಬಹುದು, ಶಾರುಕ್ ಖಾನ್, ಸಲ್ಮಾನ್ ಖಾನ್ ,ಶೋಭಾ ಡೆ ಮುಂತಾದ ಸೆಲೆಬ್ರಿಟಿಗಳು ಆಗಿರಬಹುದು, ಬಾಬಾ ರಾಮದೇವ್ ಮಾಡುತ್ತಿರುವುದು ನಾಟಕ ಅವರಿಗೆ ಯೋಗ ಹೇಳಿಕೊಡುವುದು ಬಿಟ್ಟು ಈ ಕೆಲಸ ಯಾಕೆ ಅಂತ ಕೇಳುತಿದ್ದಾರೆ .ಕಾಂಗ್ರೆಸ್ಸ್ ನ ದಿಗ್ವಿಜಯ್ ಸಿಂಗ್ ಅಂತು ಗಂಟೆಗೊಂದು ಹೇಳಿಕೆ ರಾಮದೇವ್ ವಿರುದ್ದ ನೀಡುತಿದ್ದಾರೆ  ಆದರೆ ಅತ್ತ ಅವರ ಪಕ್ಷದ ಹಿರಿಯ ಸಚಿವರೆಲ್ಲ ಬಾಬ ಅವರನ್ನ ಮೀಟ್ ಮಡಿ ಕಾಂಪ್ರಮೈಸ್‍ ಅಗೋ ತಂತ್ರ ಹೆಣೆಯುತಿದ್ದಾರೆ .

ಇಷ್ಟಕ್ಕೂ ಮಾಧ್ಯಮದವರು ಕೋಮುವಾದದ ಬಣ್ಣ ಕಟ್ಟುತ್ತಿರುವುದು ಯಾಕೆ ರಾಮದೇವ್ ಅವರು ಕಾವಿ ವಸ್ತ್ರ ಧರಿಸಿ ಮರದ ಪಾದರಕ್ಷೆ ಧರಿಸಿದ್ದಾರೆ ಅಂತಲೇನು?? ಭ್ರಷ್ಟಾಚಾರದ ವಿರುದ್ದ ಹೋರಾಡಲು ಕಾವಿಯದರೇನು ಕಪ್ಪು ವಸ್ತ್ರವಾದರೇನು ? ಮರದ ಚಪ್ಪಲಿ ಅದರೇನು ADIDAS ಶೂ ಅದರೇನು? ಭಾರತದ ಪ್ರತಿಯೊಬ್ಬ ಪ್ರಜೆಗೂ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಹಕ್ಕಿದೆ, ಎಲ್ಲ ಡಾಕುಮೆಂಟ್ ಸರಿ ಇದ್ದರು ಪೋಲಿಸ್ ಗಾಡಿ ಅಡ್ಡ ಹಾಕಿದ ಮೇಲೆ 50 ರೂಪಾಯಿ ಲಂಚ ಕೊಟ್ಟ ಪ್ರತಿಯೊಬ್ಬ ನಾಗರಿಕನಿಗೂ ಅವಾಜ್ ಹಾಕುವ ತಾಕತ್ತಿದೆ. ಈ ಎಲ್ಲ ಭಾರತದ ಪ್ರಜೆಗಳಲ್ಲಿ ಬಾಬಾ ರಾಮದೇವ್ ಸಹ ಒಬ್ಬರು ಎಂದು ಏಕೆ ಮಾಧ್ಯಮದವರು ಬಿಂಬಿಸಬಾರದು? ಮಾಧ್ಯಮಗಳಲ್ಲಿ ಅಪ ಪ್ರಚಾರ ಮಾಡಿ ಹೋರಾಟಕ್ಕೆ ತೊಡಕು ಮಾಡಲು ಕಾಂಗ್ರೆಸ್ ಗೆ ಸಹಾಯ ಮಾಡುವ ತಂತ್ರವಾ? ರಾಜಕೀಯ ವ್ಯಕ್ತಿಗಳಿಗೆ ಹೋರಾಟದಲ್ಲಿ ನಿಷೇಧ ಇದೆ ಆದ್ದರಿಂದ ಈ ಹೋರಾಟದಲ್ಲಿ ಯಾವುದೇ ಪಕ್ಷಗಳಿಗೆ ಲಾಭವಂತು ಇಲ್ಲ.ಈ ಹೋರಾಟದ ಯೆಶಸ್ಸಿನಿಂದ ಲಾಭವಗೋದು ನಾಗರಿಕರಿಗೆ. ಆದರೆ ವಿರೋಧ ಪಕ್ಷದಲ್ಲಿರುವ ಬಿಜೆಪಿ ತನ್ನ ಚುನಾವಣೆಯ ಪ್ರಣಾಳಿಕೆಯಲ್ಲೇ ಕಪ್ಪು ಹಣವನ್ನು ತರುವ ಪ್ರಸ್ತಾವನೆ ಮಾಡಿತ್ತು. ಈಗ ಬೆಂಬಲ ಸೂಚಿಸಿದೆ. ಅದಕ್ಕೆ ಮಾಧ್ಯಮಗಳ ಕಣ್ಣಿಗೆ ಬಾಬಾ ರಾಮದೇವ್ ಬಿಜೆಪಿ ಏಜೆಂಟ್ ಆಗಿದ್ದಾರೆ.

  ಬಾಬ್ರಿ ಮಸಿದಿ ಧ್ವಂಸ ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ವಿ ಒಬ್ಬರು ಬಂದು ಹೋರಾಟದಲ್ಲಿ ಭಾಗಿಯಾಗಿದ್ದಾರೆ.  ಅದಕ್ಕೆ ಬಾಬಾ ರಾಮದೇವೆ ಹೋಗಿ ಬಾಬ್ರಿ ಮಸಿದಿ ಧ್ವಂಸ ಮಾಡಿರುವ ರೀತಿಯಲ್ಲಿ ಬಿಂಬಿಸುತ್ತಿವೆ ಈ ಮಾಧ್ಯಮಗಳು. ಯಾಕೆ, ಅ ಪ್ರಕರಣದಲ್ಲಿ ಭಾಗಿಯಾದವರಿಗೆ ಭ್ರಷ್ಟಾಚಾರದ ವಿರುದ್ದ ಹೊರಡುವ ಹಕ್ಕಿಲ್ಲವೇ? ಆರೆಸ್ಸೆಸ್  ಮತ್ತು  ವಿಹೆಚ್‍ಪಿ  ಬೆಂಬಲ ಸೂಚಿಸಿದೆ ಅಂತ ಪದೇ ಪದೇ ಹೇಳುತ್ತಿರುವ ಮಾಧ್ಯಮಗಳ ಕಣ್ಣಿಗೆ, ಪಕ್ಕದಲ್ಲಿರುವ ಮುಸ್ಲಿಂ ಸಿಖ್ ಮತ್ತು ಕ್ರಿಸ್ತ ಧರ್ಮ  ಗುರುಗಳು ಕಾಣುತ್ತಿಲ್ಲವೇ? ಅವರೆಲ್ಲರನ್ನು ತೋರಿಸಿ ಇದು ಸರ್ವ ಧರ್ಮಗಳ ಹೋರಾಟ ಎಂದು ಹೇಳಬಹುದಾಗಿತ್ತಲ್ಲ … !!

ಬಾಬಾ ಮನಸ್ಸಿನಲ್ಲಿ ನೂರೆಂಟು ಅಸೆಗಳಿರಬಹುದು, ರಾಜಕೀಯದ ಹತ್ತಾರು ಕನಸುಗಳಿರಬಹುದು. ಆದರೆ ಸಧ್ಯಕ್ಕೆ ಅವರು ಮಾಡುತ್ತಿರುವ ಕೆಲಸ ಒಳ್ಳೆಯದೇ ಅಲ್ಲವೇ ?ಅಷ್ಟೆಲ್ಲ ಒರಟಾಗಿ ಮಾತನಾಡುವವರು ತಾವೇ ಯಾಕೆ ಉಪವಾಸ ಸತ್ಯಾಗ್ರಹ ಕೂರಬಾರದು ? ಮಾಧ್ಯಮಗಳಲ್ಲಿ ಬಂದು ದೊಡ್ಡದಾಗಿ ಭಾಷಣ ಬಿಗಿಯುವವರು ತಾವೇ ಹೋರಾಟ ಮಾಡಲಿ . ನಮ್ಮಂತ ಸಾಮಾನ್ಯರಿಗಂತೂ ಕೋಮುವಾದದ ಅರಿವಿಲ್ಲ ಸತ್ಯಾಗ್ರಹ ಒಳ್ಳೆಯ ವಿಷಯಗಳ ಬಗ್ಗೆ ಹೋರಾಟ ಮಾಡಲು ಹನುಮಪ್ಪನೆ ಆಗಿರಲಿ ಹಿಮಾಂ ಸಾಭಿಯೇ ಆಗಿರಲಿ  ಬೆಂಬಲ ಇದ್ದಿದ್ದೆ.

8 ಟಿಪ್ಪಣಿಗಳು Post a comment
  1. ವಸಂತ್ ಕೋಡಿಹಳ್ಳಿ's avatar
    ಜೂನ್ 5 2011

    ಯಾರೂ ನ್ಯಾಯದ ಬಗ್ಗೆ ಮಾತನಾಡುವರೋ ಅಂಥಹವರೆ ಕೋಮುವಾದಿಗಳು ಭ್ರಷ್ಟರು ಮೋಸಗಾರರು ಆಗುತ್ತಿದ್ದಾರೆ. ಇಟ್ಟಿನಲ್ಲಿ ಈ ದೇಶದಲ್ಲಿ ನ್ಯಾಯ ಕೇಳಿದವನಿದೆ ಲಾಠಿ ಏಟು ಸುಮ್ಮನಿದ್ದವನಿಗೆ ಸೈಡು ಸೀಟು. ಎಲ್ಲಾ ಆಳಾಗಿ ಹೋಗಿದೆ ಉಳ್ಳವರದೆ ಈ ಪ್ರಭುತ್ವ ಇದನ್ನು ದೇವರೂ ಬಂದು ಕಾಪಾಡಲಾರ. ನಾಲ್ಕು ಜನರ ಮುಂದೆ ಕಾಗೆ ಬೆಳ್ಳಗಿದೆ ಅಂದರೆ ನಾವೂ ಊಂಗುಟ್ಟವಂತ ಕಾಲ ದೂರವಿಲ್ಲ. ಕೆಲವೇ ಜನ ಶ್ರೀಮಂತರ ನಡುವೆ ನೂರಾರು ಕೋಟಿ ಜನ. ಇರಲು ಸರಿಯಾದ ಮನೆಯಿಲ್ಲ ಕುಡಿಯಲು ಉತ್ತಮವಾದ ನೀರಿಲ್ಲ ಮೂಲಭೂತ ಸೌಕರ್ಯಗಳಂತೂ ಕೇಳುವುದೆ ಬೇಡ ಎಲ್ಲಾ ಸೌಕರ್ಯಗಳು ಎಲ್ಲರಿಗೂ ದೊರೆಯುತ್ತಿಲ್ಲ. ನಾವು ಎಷ್ಟೆ ಬಡಬಡಾಯಿಸಿದರೂ ನಮ್ಮನಾಳುವವರ ಎದಿರೂ ನಾವು ಅಲ್ಪರೇ ಅವರ ಮುಂದೆ ನಾವುಗಳು ಹಲ್ಲು ಕಿತ್ತ ಹಾವುಗಳಂತೆ ವಿನಃ ಹುಲಿಯಾಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಮುಂದೆ ಬರುವಂತ ಕಾಲ ಇದಕ್ಕಿಂತಲೂ ಭಿಕರತೆಯನ್ನು ಪಡೆಯುವಲ್ಲಿ ಮತ್ತೊಂದು ಮಾತಿಲ್ಲ. ವೈಜ್ಞಾನಿಕ ಸಾಮಾಜಿಕ ಕ್ಷೇತ್ರಗಳಲ್ಲಿ ಮಾತ್ರ ಮುಂದುವರೆದರೆ ಸಾಲದು ಭ್ರಷ್ಟರನ್ನು ಜನರೆದಿರು ಶಿಕ್ಷಸುವಂತ ಕಾಲ ಬರುವವರೆಗೂ ಸುಮ್ಮನೆ ಕೈಕಟ್ಟಿ ಕೂರುವುದೊಂದನ್ನು ಬಿಟ್ಟು ಬೇರೆನು ಮಾಡಲಾಗದು..

    ವಸಂತ್

    ಉತ್ತರ
    • parupattedara's avatar
      ಜೂನ್ 6 2011

      kai katti kuruva avashyakate illa vasanth nammantha yuvakarinda bhrashtachara nirmulane madalu sadhya ellaru ottu seri horata maduvudu bekagilla navu bhrashtaragade irona ade bhrashtacharada virudda horadalu namma kodugeyagiruttade

      ಉತ್ತರ
  2. ರವಿ ಮುರ್ನಾಡು's avatar
    ರವಿ ಮುರ್ನಾಡು
    ಜೂನ್ 5 2011

    ಪ್ರಸ್ತುತ ವಿಚಾರ ಸಕಾಲಿಕ ಲೇಖನವಿದು.ಎಲ್ಲಾರೂ ಆತ್ಮ ವಿಮರ್ಶೆ ಮಾಡಿಕೊಳ್ಳುವಂತದ್ದು ಅನ್ಯಾಯ ಕಂಡಲ್ಲಿ ಧ್ವನಿ ಎತ್ತುವ ಮನಸ್ಸಿಸ್ಗೆ ಜಾತಿ- ಮತ- ಬೇಧದ ಗೆರೆಯಿಲ್ಲ .ಮನಪೂರ್ವಕ ಅಭಿನಂದನೆಗಳು ಪವನ್.

    ಉತ್ತರ
  3. Bindu's avatar
    Bindu
    ಜೂನ್ 5 2011

    baba eno politics ge barakke idellaa maadthaa idaare antha.. barli bidi.. horaat maado taakattu irovre politics ge barbeku. naanenoo baba follower alla, aadare ee vishayadalli maatra baba para, ekendre, baba horaata namma nimmellara paravaagide,,
    ofcourse each one of us who pay money for getting attestation done, who pay money for admission in schools, for all those things to which we do not get receipt.. we should fight for this.

    ಉತ್ತರ
  4. adarsh bharateeya's avatar
    adarsh bharateeya
    ಜೂನ್ 6 2011

    ಬಾಬಾ ತನ್ನ ಸ್ವಾರ್ಥದ ಹೋರಾಟ ಮಾಡುತ್ತಾರೆ ಅಲ್ಲದೆ ದೇಶಕ್ಕಾಗಿಯಲ್ಲ, ದೇಶದ ಬಗ್ಗೆ ಚಿಂತೆ ಇರುವ ಸ್ವಾಮಿ ಬಾಬಾ ಆಗಿದ್ದರೆ ಕೋಟಿಗಟ್ಟಲೆ ಹಣ ಖರ್ಚು ಮಾಡಿ ದೊಡ್ಡ ಮಂಟಪ ಕಟ್ಟಿ ಆಡಂಬರದ ಸತ್ಯಾಗ್ರಹ ಮಾಡುವುದಿಲ್ಲ, ಇದೆ ಹಣವನ್ನ ಹಸಿವೆಯಲ್ಲಿ ಇರುವ ಬಡ ಜನರಿಗೆ ಹಂಚಿದ್ದರೆ ಇವರೊಬ್ಬ ಮಹಾ ದೇಶ ಪ್ರೇಮಿ ಅನ್ನಬಹುದಿತ್ತು, ದೇಶ ಮತ್ತು ದೇಶದ ಪ್ರಜೆಗಳ ಬಗ್ಗೆ ಕಾಳಜಿ ಇದೆ ಅಂತ ತಿಳಕೊಲ್ಬಹುದಿತ್ತು, ಎಲ್ಲಿದೆ ಇವರಿಗೆ ಆ ಕಾಳಜಿ ತಿಳಿಸಿರಿ, ಲಕ್ಷಗಟ್ಟಲೆ ಜನರನ್ನ ಕೂಡಿಸಿಕೊಂಡು ಮಾಡುವ ಸತ್ಯಾಗ್ರಹಕ್ಕೆ ಆತಂಕ್ವಾದಿಗಳಿಂದ ಏನಾದ್ರು ಆದರೆ ಅಷ್ಟು ಜನರ ಮರಣಕ್ಕೆ ಯಾರು ಕಾರಣ, ಇದೆ ಬಾಬಾ ಅಲ್ಲವೇ…….ಸ್ವಲ್ಪ ಆಲೋಚಿಸಿ…

    ಉತ್ತರ
  5. adarsh bharateeya's avatar
    adarsh bharateeya
    ಜೂನ್ 6 2011

    ಸ್ವಾಮಿ ನೋಟು ಖರ್ಚು ಮಾಡಿದ್ರೆ ಯಾವು ಇಮಾಂ ಸಾಬು ಸಿಗುತ್ತಾನೆ, ಸ್ವಾಮಿಗಳು ಇಮಾಂ ಸಾಬು ಎಲ್ಲಾ ಒಂದೇ ಸಾರ್, ಯಾವ್ ಕಾಲದಲ್ಲಿದ್ದಿರ ನೀವು…

    ಉತ್ತರ
  6. ವಿಷಯಕ್ಕಿಂತ ವ್ಯಕ್ತಿ ಮುಖ್ಯವಾದಾಗ ಹೀಗೆಯೇ ಆಗುವುದು.
    ಸುದ್ದಿವಾಹಿನಿಗಳಿಗೆ “ಬ್ರೇಕಿಂಗ್ ನ್ಯೂಸ್” ಕೊಡುವುದಷ್ಟೇ ಕೆಲಸ. ಅವರಿಗೆ ಮತ್ತಾವ ಜವಾಬ್ದಾರಿಯೂ ಇದ್ದಂತೆ ಕಂಡಿಲ್ಲ.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments