ವಿಷಯದ ವಿವರಗಳಿಗೆ ದಾಟಿರಿ

ಜೂನ್ 10, 2011

8

ಕನ್ನಡ ಪ್ರೇಕ್ಷಕರಿಗೆ ತಿಳುವಳಿಕೆ ಇಲ್ವ?

‍ನಿಲುಮೆ ಮೂಲಕ

– ಅರುಣ್ ಜಾವಗಲ್

ಡಬ್ಬಿಂಗ್ ಬೇಡ ಎಂದು ಹೇಳುತ್ತಿರುವ ಬಿ ಸುರೇಶ ರವರು ಫೇಸ್ ಬುಕ್ ನಲ್ಲಿ ಕೆಲವು ಡಬ್ಬಿಂಗ್ ಪರವಾದ ಮಾತುಗಳನ್ನು ಪಟ್ಟಿ ಮಾಡಿ ಅದಕ್ಕೆ ಉತ್ತರಿಸಲು ಪ್ರಯತ್ಸಿಸಿದ್ದಾರೆ. ಡಬ್ಬಿಂಗ್ ಪರವಾದ ಹೆಚ್ಚು ಕಡಿಮೆ ಎಲ್ಲಾ ಮಾತುಗಳನ್ನ ಪಟ್ಟಿಮಾಡಿದ್ದಕ್ಕಾಗಿ ಮತ್ತು ಅದಕ್ಕೆ ಅರೋಗ್ಯಕರ ರೀತಿಯಲ್ಲಿ ಉತ್ತರಿಸಲು ಪ್ರಯತ್ಸಿಸಿದ್ದಕ್ಕೆ ನಾನು ಅಬಿನಂದಿಸುತ್ತೇನೆ.

ಡಬ್ಬಿಂಗ್ ಪರವಾದ ಮಾತುಗಳಲ್ಲಿ ಡಬ್ಬಿಂಗ್ ಬೇಕೆ ಬೇಡವೇ ಅನ್ನೊದನ್ನ ಪ್ರೇಕ್ಷಕ(ಮಾರುಕಟ್ಟೆ) ನಿರ್ದರಿಸರಿ ಅನ್ನೋದು ಒಂದು. ಇದೇ ವಾದ ನನ್ನದೂ ಕೂಡ. ಆದರೆ ಡಬ್ಬಿಂಗ್ ಬೇಕೆ ಬೇಡವೇ ಎಂದು ಮಾರುಕಟ್ಟೆ ನಿರ್ದರಿಸೋದು ಸರಿ ಅಲ್ಲ ಅನ್ನೋ ಹಾಗೆ ಬಿ ಸುರೇಶ ರವರು ಹೇಳಿದ್ದಾರೆ. ಇದರ ಬಗ್ಗೆ ಅವರ ಉತ್ತರ ನೋಡಿ-

‘ಡಬ್ಬಿಂಗ್ ಬೇಕೆ ಬೇಡವೇ ಎಂದು ಮಾರುಕಟ್ಟೆ ನಿರ್ಧರಿಸಲಿ’ ಎಂದು ಹಲವರು ಹೇಳಿದ್ದಾರೆ. ಇದು ಸರಿಯಾದ ಮಾರ್ಗವಲ್ಲ. ಆ ಉದ್ಯಮದಲ್ಲಿ ಇರುವವರು ಮತ್ತು ಅದನ್ನು ಬಳಸುತ್ತಾ ಇರುವವರ ನಡುವೆ ಅನೇಕ ಚರ್ಚೆಯಾಗಬೇಕು. ಆ ಮೂಲಕ ಪ್ರಯೋಗಗಳು ಆಗಬೇಕು. ಇಲ್ಲವಾದರೆ ಸರಿಯಾಗಿ ಕುಡಿಯುವ ನೀರೇ ಇಲ್ಲದ, ಫ್ಲೋರೈಡ್‌ ಯುಕ್ತ ನೀರು ಕುಡಿದು ನರಳುತ್ತಿರುವವರಿರುವ ಹಳ್ಳಿಗಳಲ್ಲಿ ಧಾರಾಳವಾಗಿ ಪೆಪ್ಸಿ, ಕೋಕಾಕೋಲ ಸಿಗುತ್ತಿರುವಂತೆ ಆಗುತ್ತದೆ. ಯಾವುದೇ ಸರಕಿನ ಲಾಬಾಲಾಭಗಳ ತಿಳುವಳಿಕೆ ಇಲ್ಲದ ಸಮಾಜಕ್ಕೆ ಅಂತಹ ಸರಕನ್ನು ಬಳಸಿ ಎಂದು ಹೇರುವುದು ಆ ಸಮಾಜಕ್ಕೆ ಮಾಡುವ ಅಪರಾಧ ಎಂದು ನೋಮ್‌ ಚಾಮ್‌ಸ್ಕಿ ಯಂತಹ ಹಿರಿಯ ಅರ್ಥಶಾಸ್ತ್ರಜ್ಞರು. ಸಮಾಜ ಚಿಂತಕರು ಮಾಡಿರುವ ಚರ್ಚೆಗಳನ್ನು ಇದಕ್ಕಾಗಿ ಗಮನಿಸಬಹುದು. ಆ ಪುಸ್ತಕಗಳನ್ನು ಓದಲಾಗದವರು ಆಫ್ರಿಕಾದ ಗಿರಿಜನರ ಕಾಡಿನೊಳಗೆ ಬಂದು ಬೀಳುವ ಕೋಕ್ ಬಾಟಲಿಯಿಂದ ಒಂದು ಸಮಾಜವೇ ತಲ್ಲಣಗೊಳ್ಳುವ ಕತೆಯನ್ನುಳ್ಳ ಮಾತಿಲ್ಲದ ಸಿನಿಮಾ ನೋಡಬಹುದು. ಅಂತಹ ಸ್ಥಿತಿ ನಮ್ಮ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಬರಬಾರದು. ಹೀಗಾಗಿ ಡಬ್ಬಿಂಗ್ ಬೇಕೆ ಬೇಡವೇ ಎಂಬ ವಿಷಯವನ್ನು ಪ್ರೇಕ್ಷಕರು ಅಥವಾ ಮಾರುಕಟ್ಟೆ ನಿರ್ಧರಿಸಲಿ ಎಂಬ ಮಾತು ಸರಿಯಾಗುವುದಿಲ್ಲ.

ಅವರ ಮಾತಿನ ಮೊದಲಿನಲ್ಲಿ ” ಉದ್ಯಮದಲ್ಲಿ ಇರುವವರು ಮತ್ತು ಅದನ್ನು ಬಳಸುತ್ತಾ ಇರುವವರ ನಡುವೆ ಅನೇಕ ಚರ್ಚೆಯಾಗಬೇಕು ಆ ಮೂಲಕ ಪ್ರಯೋಗಗಳು ಆಗಬೇಕು.” ಎಂದು ಹೇಳಿದ್ದಾರೆ ಇದು ಒಪ್ಪುವಂತಹ ಮಾತೆ, ಚರ್ಚೆ ಆಗಬೇಕೆ ಹೊರೆತು ಉದ್ಯಮದಲ್ಲಿ ಇರುವವರೇ ಬಳಸುವವರಿಗೆ ಏನು ಬೇಕು ಅಂತ ನಿರ್ದಾರ ಮಾಡೋದು ಎಶ್ಟು ಸರಿ? ಬಿ ಸುರೇಶರವರು ಹೇಳಿದ ಹಾಗೆ ಡಬ್ಬಿಂಗ್ ವಿಶಯವಾಗಿ ಯಾವುದಾದರೂ ಚರ್ಚೆ ನಡೆದಿದೆಯೇ ಅತವಾ ಡಬ್ಬಿಂಗ್ ಪ್ರಯೋಗಗಳು ನಡೆದಿದೆಯೇ? ಚರ್ಚೆ ನಡೆಯದೇ…… ಪ್ರಯೇಗ ನಡೆಸದೇ…… ಡಬ್ಬಿಂಗ್ ಬೇಡ ಅನ್ನೊದು ಎಶ್ಟು ಸರಿ?ಡಬ್ಬಿಂಗ್ ಪ್ರಯೋಗ ಆಗಲೇ ಬಾರದು ಅಂತ ಟೊಂಕ ಕಟ್ಟಿ ನಿಂತಿರೋ ಉದ್ಯಮದೊಳಗಿನ ಜನರನ್ನ ಏನನ್ನಬೇಕು?
ಇದೇ ಉತ್ತರದ ಇನ್ನೊಂದೆಡೆ ಒಬ್ಬ ಹಿರಿಯ ಅರ್ತಶಾಸ್ತ್ರಜ್ನ ರ ಮಾತನ್ನ ಉಲ್ಲೆಕಿಸುತ್ತಾ ಲಾಬಾಲಾಬಗಳ ತಿಳುವಳಿಕೆ ಇಲ್ಲದ ಸಮಾಜಕ್ಕೆ ಅಂತಹ ಸರಕನ್ನ ಬಳಸಿ ಎಂದು ಹೇರುವುದ ಅಪರಾದ ಅಂತ ಹೇಳಿದ್ದಾರೆ. ಕನ್ನಡ ಪ್ರೇಕ್ಷಕ ಸಮಾಜ ಯಾವುದು ಸರಿ, ಯಾವುದು ತಪ್ಪು ಅನ್ನೊ ತಿಳುವಳಿಕೆ ಇಲ್ಲದ್ದೇ? ಅತವಾ ಕನ್ನಡದ ಪ್ರೇಕ್ಷಕರು ಲಾಬಲಾಬಗಳ ತಿಳುವಳಿಕೆ ಇಲ್ಲದವರೇ? ಪ್ರೇಕ್ಷಕರನ್ನ ತಿಳುವಳಿಕೆ ಇಲ್ಲದವರು ಅನ್ನೊದು ಮತ್ತು ಆ ರೀತಿಯ ವಾಕ್ಯಗಳ ಜೊತೆ ಉಲ್ಲೇಕಿಸಿ ಹೇಳೋದು ಸರಿಯೇ?

ಕನ್ನಡದ ಪ್ರೇಕ್ಷಕರಿಗೆ ಯಾವುದು ಸರಿ ಯಾವುದು ತಪ್ಪು ಅಂತ ನಿರ್ದಾರ ಮಾಡೋ ಸ್ವಾತಂತ್ರ ಮತ್ತು ತಿಳುವಳಿಕೆ ಇದೆ. ಡಬ್ಬಿಂಗ್ ಸಿನೆಮಾ ಬಿಡುವುದರಿಂದ ನಿಜವಾಗಿಯೂ ಪ್ರೇಕ್ಷಕರ ಸ್ವಾತಂತ್ರಕ್ಕೆ ಮತ್ತು ತಿಳುವಳಿಕೆಗೆ ಗೌರವ ನೀಡಿದಂತಾಗುತ್ತದೆ.
ಪ್ರೇಕ್ಷಕನಿಗೆ ಗೌರವ ಮತ್ತು ಸ್ವಾತಂತ್ರ ನೀಡೋ ಮನಸ್ಸು ಡಬ್ಬಿಂಗ್ ವಿರೋದಿಸೋ ಉದ್ಯಮದ ಜನರಿಗೆ ಇದೆಯೇ…?
8 ಟಿಪ್ಪಣಿಗಳು Post a comment
  1. ಆಸು ಹೆಗ್ಡೆ's avatar
    ಜೂನ್ 10 2011

    ಪರಭಾಷಾ ನಟ ನಟಿಯರಿಗೆ ಡಬ್ ಮಾಡುತ್ತಿರುವ, ಅಷ್ಟೇ ಏಕೆ, ಕನ್ನಡದ ನಟ ನಟಿಯರಿಗೂ ಡಬ್ ಮಾಡುವ ಗುಪ್ತ ರೂಢಿ ಇನ್ನೂ ಚಾಲ್ತಿಯಲ್ಲಿರುವಾಗ, ಪರಭಾಷಾ ಚಿತ್ರಗಳ ಡಬ್ಬಿಂಗ್ ಬೇಡ ಅನ್ನುವುದು ತಮಾಷೆಯ ಸಂಗತಿಯಾಗಿ ತೋರುತ್ತಿದೆ.

    ಅನ್ಯ ಭಾಷೆಯ ಗಾಯಕ ಗಾಯಕಿಯರನ್ನು ಬಳಸುವಾಗ ಇಲ್ಲದ ಕನ್ನಡ ಪ್ರೇಮ ಕನ್ನಡಿಗರ ಮೇಲಿನ ಪ್ರೇಮ, ಡಬ್ಬಿಂಗ್ ವಿಷಯದಲ್ಲಿ ಮಾತ್ರ ವ್ಯಕ್ತವಾಗುತ್ತಿರುವುದು ವಿಚಿತ್ರ ಎನಿಸುತ್ತಿದೆ.

    ಡಬ್ಬಿಂಗ್ ಬಂದರೆ ಕನ್ನಡ ಭಾಷೆ ಕೆಡುತ್ತದೆ ಅನ್ನುವ ವಾದವೂ ಇದೆ, ಅವರದ್ದು. ಸುದ್ದಿ ವಾಹಿನಿಯಲ್ಲಿ ಚರ್ಚೆಗೆ ಬಂದಿದ್ದಾಗ ಹೇಳಿದ್ದರು.
    ತಮಿಳು ಮತ್ತು ತೆಲುಗಿನ ಅಷ್ಟೂ ಚಿತ್ರಗಳು ಹಿಂದೀ ಭಾಷೆಗೆ ಡಬ್ ಆಗಿವೆ. ಸೆಟ್ ಮ್ಯಾಕ್ಸ್ ನಲ್ಲಿ ಪ್ರಸಾರವಾಗುವ ಹೆಚ್ಚಿನ ಚಿತ್ರಗಳು ಡಬ್ ಚಿತ್ರಗಳೇ ಆಗಿವೆ. ಆದರೆ ಹಿಂದೀ ಭಾಷೆ ಕೆಟ್ಟು ಹೋಗಿಲ್ಲ. ಹಿಂದೀ ಭಾಷೆಯ ಘಟಾನು ಘಟಿ ಸಾಹಿತಿಗಳೂ ಆ ಬಗ್ಗೆ ಸಮರ ಸಾರಿಲ್ಲ.

    ಸಂಭಾಷಣೆಗಳಿಗೂ ತುಟಿಗಳ ಚಲನೆಗಳಿಗೂ ಹೊಂದಾಣಿಕೆ ಆಗದಿದ್ದರೆ ಚಿತ್ರ ನೋಡಲು ಖಷಿ ಆಗೋದಿಲ್ಲ ಅನ್ನುವ ವಾದವನ್ನು ಬಿ. ಸುರೇಶರವರು ನಿನ್ನೆ ಮುಂಜಾನೆ ಎಫ್ ಎಂ ಕಾಮನಬಿಲ್ಲು ನಲ್ಲಿ ಮಂಡಿಸಿದ್ದರು.

    ಕನ್ನಡದ ಅದೆಷ್ಟೋ ಚಿತ್ರಗಳಲ್ಲಿ ನಟರ ಸಂಭಾಣೆಗೂ ತುಟಿ ಚಲನೆಗೂ ಹೊಂದಾಣಿಕೆ ಆಗದೇ ಇರುವುದನ್ನು ನಾವು ಯಾವಾಗಲೂ ಗಮನಿಸುತ್ತಿರುತ್ತೇವೆ.
    ಎಷ್ಟೊ ಕಡೆ ಡಬ್ಬಿಂಗ್ ಕೋಣೆಯಲ್ಲಿ ಮೂಲ ಸಂಭಾಷಣೆಯಲ್ಲಿನ ಪದಗಳನ್ನೇ ಬದಲಾಯಿಸಿರುವುದೂ ಇದೆ.

    ಒಬ್ಬಾಕೆ ಜಯಮಾಲಾ, ಓರ್ವ ಬಸಂತ ಕುಮಾರ ಪಾಟೀಲ, ಓರ್ವ ಬೀ. ಸುರೇಶ, ಗಾಂಧಿನಗರದಲ್ಲಿ ಕೂತುಕೊಂಡು, ನಾನು (ಈ ಸುರೇಶ) ನನ್ನ ಮನೆಯಲ್ಲಿ ಅಥವಾ ಸಿನೆಮಾ ಗೃಹಗಳಲ್ಲಿ ನೋಡುವ ಚಿತ್ರದಲ್ಲಿನ ಸಂಭಾಷಣೆ ಯಾವ ಭಾಷೆಯಲ್ಲಿ ಇರಬೇಕು ಅನ್ನುವುದನ್ನು ನಿರ್ಧರಿಸುವುದನ್ನು ನಾನಂತೂ ಒಪ್ಪಲಾರೆ. ನನಗೆ ನನ್ನ ಸ್ವಾತಂತ್ರ್ಯ ಇರಬೇಕು.

    ಅವರು ಚಿತ್ರ ಮಾಡಲಿ. ಒಳ್ಳೆದಿದೆಯೋ ಕೆಟ್ಟದಿದೆಯೋ ಹೇಳ್ತೀವಿ. ಆದರೆ ನಮ್ಮ ಮೇಲೆ ಅವರ ದಬ್ಬಾಳಿಕೆ ಅನಗತ್ಯ. ಭಾಷೆಯ ಉಳಿವು ಮತ್ತು ಬೆಳವಣಿಗೆ ಬರೀ ಚಿತ್ರಂಗದವರನ್ನು ಅವಲಂಬಿಸಿಲ್ಲ.
    ಹಾಗಿದ್ದ ಪಕ್ಷದಲ್ಲಿ, ಕನ್ನಡ ಚಿತ್ರಗಳಲ್ಲಿ ಬಳಸುವ ಅವಾಚ್ಯ ಪದಗಳ ಬಗ್ಗೆಯೂ ವಿರೋಧ ವ್ಯಕ್ತವಾಗಬೇಕಿತ್ತು. ಅದು ಆಗ್ತಿಲ್ಲ. ಕಿಚ್ಚ, ಮಚ್ಚ, ಲಾಂಗು, ಡವ್, ಅಪ್ಪ ಲೂಸಾ, ಅಮ್ಮ ಲೂಸಾ (ಇನ್ನೂ …. ಪಟ್ಟಿ ದೊಡ್ಡದಿದೆ). ಅನ್ನುವುದನ್ನು ಒಪ್ಪಿಕೊಳ್ಳುವ ನಾವು ಡಬ್ಬಿಂಗ್ ವಿಷಯಯಲ್ಲಿ ಮಾತ್ರಾ ವಿಶೇಷವಾಗಿ ಜಾಗ್ರತರಾಗುವುದೇಕೆ?

    ಇದು ವ್ಯರ್ಥ ಕಾಲಹರಣ ಅಂತ ಅನಿಸುತ್ತದೆ ಒಮ್ಮೊಮ್ಮೆ!

    ಉತ್ತರ
  2. sriharsha's avatar
    sriharsha
    ಜೂನ್ 10 2011

    ಕರುನಾಡಿನ ಎಲ್ಲ ಮಾರುಕಟ್ಟೆಯನ್ನು ಜಾಲಾಡಿರುವ ದೊಡ್ಡ ದೊಡ್ಡ ಇನ್ವೆಸ್ಟರ್ ಗಳು ಇದೊಂದು ರಂಗವನ್ನು ಏಕೆ ಬಿಟ್ಟಿದ್ದಾರೆ ಎಂಬುದೇ ಅಚ್ಚರಿ.
    ಡಬ್ಬಿಂಗ್ ನಿಶೇಧ ಕಾನೂನು ಸಮ್ಮತವಾಗಿಲ್ಲ. ಚಿತ್ರ ನಿಮಾಪಕರ ಕಂಟ್ರಿ ಕ್ಲಬ್ ತನ್ನ ಸದಸ್ಯರಿಗೆ ಹೊರಡಿಸಿರುವ ಆದೇಶ ಅದು! ಈಗಲೂ ಖಾಸಗಿಯಾಗಿ ಯಾರಾದರೂ ಡಬ್ಬಿಂಗ್ ಮಾಡಿದರೆ ಅದಕ್ಕೆ ಕಾನೂನು ತಡೆ ಹಾಕುವುದಿಲ್ಲ.
    ರಂಜನೆಯ ರಂಗದಲ್ಲಿ ಹೂಡಿಕೆದಾರರು ಡಬ್ಬಿಂಗ್ ಹಕ್ಕುಗಳನ್ನು ಖರೀದಿಸಿ ಸ್ವಂತ ಚಿತ್ರಮಂದಿರಗಳನ್ನು ಸ್ಥಾಪಿಸಿ ಅಲ್ಲಿ ಚಿತ್ರಗಳನ್ನು ಪ್ರದರ್ಶಿಸಿದರೆ ನಿರ್ಮಾಪಕರ ಸಂಘ ಏನೂ ಮಾಡಲಾಗುವದಿಲ್ಲ. ಮೊದಮೊದಲಿಗೆ ಟಿವಿ ಚಾನೆಲ್ಲುಗಳು ಇದಕ್ಕೆ ಒಪ್ಪಲಾರವಾದರೂ ಒಳ್ಳೆಯ ಟಿ ಆರ್ ಪಿ ಸಿಗುತ್ತದೆಯಾದರೆ ಡಬ್ ಆದ ಚಿತ್ರಗಳನ್ನು ಪ್ರಸಾರ ಮಾಡಾಬಲ್ಲವು.
    ಪ್ರಯೋಗಕ್ಕಾಗಿ ಮಂಡ್ಯ ಮೈಸೂರು ಹಾಸನ ಕಡೆಯ ಯಾವುದಾದರೂ ಜಿಲ್ಲಾ ಕೇಂದ್ರದಲ್ಲಿ ಆರಂಭಿಸಿ ಶುಭಸೂಚನೆ ಕಂಡುಬಂದರೆ ನೋಡುಗರ ಒಳ್ಳೆಯ ಪ್ರತಿಕ್ರಿಯೆ ಕಂಡುಬಂದರೆ ಎಲ್ಲೆಡೆ ಇದನ್ನು ಹಬ್ಬಿಸಬಹುದು.
    ಡಬ್ಬಿಂಗನ್ನು ಕನ್ನಡ ಸ್ಟುಡಿಯೋಗಳಲ್ಲೇ ಮಾಡೋಣ, ಕನ್ನಡ ಕಲಾವಿದರೇ ಡಬ್ಬಿಂಗ್ ಮಾಡುತ್ತಾರೆಯಾದ್ದರಿಂದ ಕನ್ನಡಿಗರಿಗೆ ಕೆಲಸ ಸಿಗುತ್ತದೆ.
    ಇಲ್ಲಿ ಚಿತ್ರನಟರ ನಿರ್ಮಾಪಕರ ಡಬ್ಬಾ ನಿರ್ದೇಶಕರ ಹಂಗೂ ಇರುವುದಿಲ್ಲ.

    ಉತ್ತರ
  3. Pramod's avatar
    ಜೂನ್ 10 2011

    ಬರೀ ಸಿನೆಮಾ ಡಬ್ಬಿ೦ಗ್ ನಿ೦ದ ಕನ್ನಡ ಭಾಷೆ, ಸ೦ಸ್ಕೃತಿ ಹೇಗೆ ಎಷ್ಟು ಕೆಡುತ್ತದೆಯೋ ಗೊತ್ತಿಲ್ಲ.
    ದಿನಪತ್ರಿಕೆಗಳು, ಟೀವಿ ಚಾನೆಲ್ ಗಳು ಈಗಾಗಲೇ ಬೇಕಾದಷ್ಟು ಸ೦ಸ್ಕೃತಿಯನ್ನು ಕೆಡಿಸಿಲ್ಲವೇ? ಇದಕ್ಕೆ ಕಡಿವಾಣ ಹಾಕುವವರಾರು?
    ಆ ಕಡೆಯಿ೦ದ ಬರುವುದನ್ನು ಸ್ವೀಕರಿಸುವದನ್ನು ಮಾತ್ರ ಯೋಚನೆ ಮಾಡುತ್ತಿದ್ದೇವೆ.
    ನಮ್ಮಲ್ಲಿ ಬೇಕಾದಷ್ಟು ಒಳ್ಳೆಯ ಚಿತ್ರಗಳಿವೆ. ಇವುಗಳನ್ನು ಬೇರೆ ಭಾಷೆಗೆ ಡಬ್ಬಿ೦ಗ್ ಮಾಡಿ, ಪ್ರಚಾರ, ಹೆಸರು ದುಡ್ಡು ಗಳಿಸಬಹುದಲ್ಲವೇ?

    ಉತ್ತರ
  4. umesh desai's avatar
    ಜೂನ್ 10 2011

    sir, i agree with suresh hegade.
    dubbing will atlest releive us watching “remale”, “mixed” films

    ಉತ್ತರ
  5. abhi082941@gmail.com's avatar
    ಜೂನ್ 10 2011

    ಆಗಲಾದರು ಬೇರೆ ಬಾಷೆಯ ಚಿತ್ರದ ಬಿಡುಗಡೆಯ ಸಮಯದಲ್ಲಾಗುವ ಕಿರಿ ಕಿರಿ ತಪ್ಪುತ್ತದೆ. ಬೇರೆ ಬಾಷೆಯ ಚಿತ್ರಗಳನ್ನು ನಮ್ಮ ಬಾಷೆಗೆ ಡಬ್ ಮಾಡುವುದರಿ೦ದ ನಮಗೆ ಲಾಭ್ಹ. ಜನ ಆಗಲಾದರು ನಮ್ಮ ಬಾಷೆಯನ್ನು ಕಲಿಯಲು ಪ್ರಯತ್ನಿಸುತ್ತಾರೆ. ಇನ್ನೊ೦ದು ಲಾಭ್ಹ ಎ೦ದರೆ, ಬೇರೆ ಬಾಷೆಯವರು ಅವರ ಬಾಷೆಯಿಲ್ಲದ ಚಿತ್ರಗಳನ್ನು ನೋಡಲು ಇಷ್ತಪಡುವುದಿಲ್ಲ ಆ ಕಾರಣದಿ೦ದಾರು ಕನ್ನಡ ಚಿತ್ರರ೦ಗದ ಮಾರುಕಟ್ಟೆ ಬೆಳೆಯಬಹುದು ಯಾಕೆ೦ದರೆ ನಾನು ಬಹಳ ಜನರನ್ನು ಗಮನಿಸಿದ್ದೇನೆ ಅವರು ಕನ್ನಡದವರೆ ಆದರು ಕನ್ನಡ ಚಿತ್ರಗಳೆ೦ದರೆ ಅಲರ್ಜಿ ಬೇರೆ ಬಾಷೆಗಳ ಚಿತ್ರಗಳೆ೦ದರೆ ಬಹಳ ಅಚ್ಚುಮೆಚ್ಚು

    ಉತ್ತರ
  6. ksraghavendranavada's avatar
    ಜೂನ್ 10 2011

    ಒಳ್ಳೆಯದನ್ನು ಹೇಗೇ ಇರಲಿ ಹಾಗೂ ಎಲ್ಲಿ೯೦ದಲೇ ಬರಲಿ ಅದನ್ನು ಸ್ವೀಕರಿಸಬೇಕು ಎನ್ನುವ ಮನೋಬಾವನೆ ನನ್ನದು! ಡಬ್ಬಿ೦ಗ್ ಮಾಡುವುದರಿ೦ದ ಭಾಷೆ ಕೆಡುವ ಬಗೆ ಹೇಗೆ? ಅದಕ್ಕೆ ಉತ್ತರವಿದೆಯೇ?
    ಕನ್ನಡ ಚಿತ್ರರ೦-ಗದವರು ಅವಸರದ ಜಾಯಮಾನವನ್ನು ಬಿಟ್ಟು ಕಲಾತ್ಮಕವಾದ, ಸೂಕ್ತ ಸ೦ದೇಶಗಳುಳ್ಳ, ಒಳ್ಳೆಯ ಕೌಟು೦ಬಿಕ ಚಿತ್ರಗಳನ್ನು ಮಾಡಿದರೆ ಜನ ನೋಡಿಯೇ ನೋಡುತ್ತಾರೆ! ಆ ಚಿತ್ರವನ್ನು ಗೆಲ್ಲಿಸುತ್ತಾರೆ!
    ನಮ್ಮಲ್ಲಿ ಪ್ರತಿಭೆಗಳು ಮಸುಕಾಗುತ್ತಿವೆ. ಅದೇ ಪುರಾತನ ಕಥೆಗಳನ್ನೇ, ಚರ್ವಿತ ಚರ್ವಣ ಮಾದಿ ಉಣಬಡಿಸಿದರೆ ಸಾಕೇ? ಎರಡು ಫೈಟು- ಪರಭಾಷಾ ನಟಿ- ನಾಲ್ಕು ಹಾಡುಗಳಿಗಷ್ತೇ ಸೀಮಿತವಾಗುತ್ತಿರುವ ಕನ್ನಡ ದ ಚಿತ್ರಗಳೇ ಸಾಕಷ್ಟು ಕನ್ನಡ ಭಾಷೆಯನ್ನು ಹಾಳು ಮಾಡಿಯಾಗಿದೆ! ಇನೇಕೆ ಬೇರೆಯವರ ಮೇಲೆ ಯಾ ಡಬ್ಬಿ೦ಗ್ ಮೇಲೆ ಗೂಬೆ ಕೂರಿಸಬೇಕು?
    ತಲೆ-ಬುಡವಿಲ್ಲದ ವಾದಗಳಿ೦ದ ಏನೂ ಪ್ರಯೋಜನವಿಲ್ಲ- ಒಳ್ಳೆಯ ಸದಭಿರುಚಿಯ ಚಿತ್ರಗಳನ್ನು ಕನ್ನಡದ ನಿರ್ದೇಶಕರು ಕೊಟ್ಟು ನೋದಲಿ.. ಆಮೇಲೆ ಹೇಳಿ!!
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ಉತ್ತರ
  7. suresh's avatar
    suresh
    ಜೂನ್ 11 2011

    ಡಬ್ಬಿಂಗ್ ಚಿತ್ರಗಳಿಂದ ಖಂಡಿತ ಕನ್ನಡಕ್ಕೆ ಅನ್ಯಾಯವಾಗಲ್ಲ.ಈಗ ನೋಡಿ ತೆಲುಗಿನ ‘ಬದ್ರಿನಾಥ’ ತೆಲುಗಲ್ಲೇ ಕನ್ನಡಿಗರು ನೋಡುತ್ತಿದ್ದಾರೆ.ಅನಿವಾರ್ಯವಾಗಿ ಕನ್ನಡಿಗರು ತೆಲುಗು ಕಲಿಯಬೇಕಾಗಿದೆ.ಇದು ಯಾವ ಕರ್ಮ!

    ಉತ್ತರ
  8. ಪ್ರದೀಪ್'s avatar
    ಜೂನ್ 12 2011

    ಡಬ್ಬಿಂಗ್ ಸಿನಿಮಾ ಬಂದರೆ, ಕನ್ನಡವಾದರೂ ಉಳಿದೀತು. ಸುರೇಶ್ ಅಂದಂತೆ, ಸೂಪರ್ ಹಿಟ್ ಅನ್ಯ ಭಾಷಾ ಚಿತ್ರವನ್ನು ಕನ್ನಡಿಗರು ಆ ಭಾಷೆಯಲ್ಲಿಯೇ ನೋಡುತ್ತಾರೆ. ಡಬ್ಬಿಂಗ್ ಬಂದರೆ, ಚಿತ್ರರಂಗವನ್ನು ಕಾಡುತ್ತಿರುವ ಹಾಳು ರೀಮೇಕ್ ಹಾವಳಿಯೂ ಕಡಿಮೆಯಾಗುವುದು.

    ಉತ್ತರ

Leave a reply to umesh desai ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments