ವಿಷಯದ ವಿವರಗಳಿಗೆ ದಾಟಿರಿ

ಜೂನ್ 16, 2011

5

ನನ್ನ ಕನಸಿನ ಹುಡುಗಿ

‍ನಿಲುಮೆ ಮೂಲಕ

– ನವನೀತ್ ಪೈ

ನಾನು ನನ್ನ ಕನಸಿನ ಲೊಕದ ಚಕ್ರವರ್ತಿ. ಕನಸಿನಲ್ಲಿ ನನ್ನ ಮಹಾರಾಣಿಯು ಆಗಮಿಸುತ್ತಿರುವಾಗ ಭೀಕರ ಗುಡುಗಿನ ಆರ್ಭಟ ನನ್ನನ್ನು ಎಚ್ಚರಿಸಿತು. ಈ ನನ್ನ ನತದೃಷ್ಟ ಕಣ್ಣುಗಳು ಅವಳ ಆ ಸುಂದರ ಮುಖಕಮಲಗಳನ್ನು ನೋಡಲು ವಿಫಲವಾದವು. ಆಕೆ ಯಾರಿರಬಹುದು ಎಂದು ಯೋಚಿಸುವಾಗ ಪುನಃ ಗುಡುಗಿನ ಆರ್ಭಟ. ಈಗ ಕರೆಂಟ್ ಕೂಡ ಹೋಯಿತು. ನನ್ನ ಕಲ್ಪನಾ ಸಾಮ್ರಾಜ್ಯಕ್ಕೆ ಹೋಗಲು ಈ ಕತ್ತಲೆಯೇ ದಾರಿದೀಪವಾಯಿತು. ಒಂದು ಮೇಣದ ಬತ್ತಿಯನ್ನು ಹಚ್ಚಿ ಅದರ ಜ್ವಾಲೆಯಲ್ಲೇ ಅವಳ ಆ ಸುಂದರ ಮುಖವನ್ನು ಅರಸುತ್ತಿದ್ದೆ. ಅಲ್ಲೇ ಇದ್ದ ಮಂಚದ ಮೇಲೆ ಮಲಗಿ ಕಾರ್ಮೊಡದ ಹಿಂದೆ ಅವಿತಿರುವ ಚಂದಿರನನ್ನು ನೋಡಲು ಯತ್ನಿಸುತ್ತಾ ಅವಳ ಮುಖವನ್ನು ಊಹಿಸಿದೆ. ಬಹುಶಃ ಚಂದಿರನೇ ಎಸೆದ ಮಿಂಚಿನ ಚಾವಟಿ ನನ್ನ ಕನಸನ್ನು ಪುನಃ ಭಗ್ನಗೊಳಿಸಿತು. ಅವಳ ಬಗ್ಗೆ ಯೋಚಿಸುತ್ತಾ ರೆಪ್ಪೆಗಳು ಮುಚ್ಚಿಕೊಂಡವು ಆದರೆ ಮನಸಿನ್ನೂ ಜಾಗೃತವಾಗೇ ಇತ್ತು.

ನನ್ನ ಮೊದಲ ದಿನದ ಕಾಲೇಜು ಒಂದು ರೀತಿಯ ಹೊಸ ಉತ್ಸಾಹವನ್ನೂ, ಭಯವನ್ನೂ ಒಟ್ಟಿಗೆ ಮೂಡಿಸಿತು. ಕೋಟ್ಯಾಂತರ ನಕ್ಷತ್ರಗಳ ಮಧ್ಯೆ ಚಂದಿರನೊಬ್ಬನೇ ಹೇಗೆ ಪ್ರಕಾಶಿಸುತ್ತಾನೋ ಹಾಗೆ ನೂರಾರು ಹುಡುಗಿಯರ ನಡುವೆ ಅವಳೊಬ್ಬಳೇ ನನ್ನನ್ನು ಆಕರ್ಷಿಸಲು ಸಫಲಳಾದಳು.

 

 

ನಾನು ಮೊದಲ ನೋಟದಲ್ಲೇ ಅವಳಲ್ಲಿರುವ ನವೀನತೆಯನ್ನು ಗಮನಿಸಿದ್ದೆ. ಅವಳು ನನ್ನದೇ ತರಗತಿ ಎಂದು ತಿಳಿದಾಗ ಒಳಗೊಳಗೆ ಖುಷಿಪಟ್ಟೆ. ಅವಳಿಗಿಂತ ಸುಂದರವಾಗಿರುವ ನೂರಾರು ಹುಡುಗಿಯರನ್ನು ನಾನು ನೋಡಿದ್ದರೂ ನನ್ನಲ್ಲಿ ವಿಶೇಷವಾದ ಆಕರ್ಷಣೆ ಉಂಟಾಗುತಿತ್ತು. ಅವಳ ನಗುಮೊಗದಿಂದ ನನ್ನ ಮನಸ್ಸಿನಲ್ಲೊಂದು ಯಕ್ಷ ಪ್ರಶ್ನೆ ಮೂಡಿತು. ನಾನೇನಾದರೂ ಪ್ರೀತಿ ಎಂಬ ಸರೋವರದಲ್ಲಿ ಈಜು ಬಾರದೆ ಧುಮುಕಿದ್ದೇನೆಯೇ? ಒಪ್ಪಿಕೊಳ್ಳಲು ನನ್ನ ಮನಸ್ಸು ತಯಾರಿಲ್ಲ. ನನ್ನ ಪ್ರಕಾರ ಪ್ರೀತಿ ಎನ್ನುವುದು ೨ ಮನಸ್ಸುಗಳ ವಿಷಯ. ಎರಡು ಮನಸ್ಸುಗಳ ಪ್ರೀತಿಯೇ ಹೊರತು ಎರಡು ದೇಹಗಳ ಪ್ರೀತಿ ಅಲ್ಲ. ನಿಜವಾದ ಪ್ರೀತಿಯಲ್ಲಿ ನಾವು ಏನನ್ನೂ ಬಯಸುವುದಿಲ್ಲ. ಆದರೆ ಕೇವಲ ಪ್ರೀತಿಸುತ್ತೇವೆ. ಹಾಗಾಗಿ ನಾನು ಅವಳನ್ನು ನಿಜವಾಗಿಯೂ ಪ್ರೀತಿಸುತ್ತಿದ್ದೇನೆಯೇ? ಅಥವಾ ಅವಳ ಸೌಂದರ್ಯಕ್ಕೆ ಆಕರ್ಷಿತನಾಗಿದ್ದೇನೆಯೇ? ತಿಳಿಯದು.

ಗೊಂದಲದ ಗೂಡಾಗಿರುವ ನನ್ನ ಮನಸ್ಸು ಉತ್ತರಕ್ಕಾಗಿ ಇನ್ನೂ ತಡಕಾಡುತ್ತಿದೆ. ನನ್ನ ಪ್ರಕಾರ ಇದು ಕೇವಲ ಆಕರ್ಷಣೆ ಮಾತ್ರ. ಮೊದಲ ನೋಟದ ಪ್ರೇಮ ಎಲ್ಲ ಶುದ್ಧ ಸುಳ್ಳು. ಸೌಂದರ್ಯದಿಂದ ಆಕರ್ಷಿತನಾಗಿದ್ದರೂ ಪ್ರೀತಿಗೆ ಆಂತರಿಕ ಸೌಂದರ್ಯವೇ ಮುಖ್ಯ ಕಾರಣವಾಗಿರಬೇಕು. ನಾನು ಬಡವ ನೀನು ಬಡವಿ ಒಲವೇ ನಮ್ಮ ಬದುಕು ಎನ್ನುವಂತಿರಬೇಕು. ಆದರೆ ಇದನ್ನು ಆಕರ್ಷಣೆ ಎಂದು ತಿಳಿಯಲು ಸಾಧ್ಯವಿಲ್ಲ. ಬೇರೆ ಯಾವ ಹುಡುಗಿಯನ್ನು ನೋಡಿದಾಗಲೂ ಚಂಚಲವಾಗz ಮನಸ್ಸು ಇವಳನ್ನು ನೋಡಿದಾಗ ಎಕೋ? ಎನೋ? ಈ ಗೊಂದಲದ ಸುಳಿಯಲ್ಲಿ ಉತ್ತರವೇ ದೊರಕದ ಪ್ರಶ್ನೆಯಾಗಿದ್ದಾಳೆ ಈ ಹುಡುಗಿ.

ಬಾಲ ಭಾಸ್ಕರನಿನ್ನೂ ನಿದ್ದೆಯ ಮಂಪರಿನಿಂದ ಎದ್ದಿರಲಿಲ್ಲ. ಭೂಮಿ ತಾಯಿ ಮಂಜಿನ ಹೊದಿಕೆ ಹೊತ್ತು ಮಲಗಿದ್ದಳು. ಆ ಭೂಮಿ ತಾಯಿ ಮಂಜಿನ ಹೊದಿಕೆಯನ್ನು ಸರಿಸಿ ಎದ್ದೇಳುವ ಮುನ್ನ ನನ್ನ ತಾಯಿ ಬಿಸಿ ಬಿಸಿ ಕಾಫಿ ತಂದು ನನ್ನನ್ನು ಎಬ್ಬಿಸಿದಳು. ನೇಸರನ ಅರುಣ ಕಿರಣಗಳು ನನ್ನ ಕೋಮಲ ದೇಹದ ಮೇಲೆ ಬಿದ್ದು ಹೊಸ ಸ್ಫೂರ್ತಿ ತುಂಬಿತು. ಕಾಫಿಯ ಕಪ್ಪನ್ನು ಕೈಯಲ್ಲಿ ಹಿಡಿದುಕೊಂಡು ಅಂಗಳಕ್ಕೆ ಕಾಲಿಟ್ಟೆ. ನಿನ್ನೆ ರಾತ್ರಿಯ ಮಳೆಯಿಂದ ತೊಯ್ದ ನೆಲ ಹಾಗೂ ನಿನ್ನೆ ರಾತ್ರಿಯ ಕನಸಿನಿಂದ ತೊಯ್ದ ಮನಸ್ಸು ಎರಡೂ ಕಂಪನ್ನು ಸೂಸುತಿತ್ತು. ಅಮ್ಮನ ಕಾಫಿಯ ಶಾಖದಿಂದಲೋ, ಆ ಸೂರ್ಯನ ಶಾಖದಿಂದಲೋ ಅವಳ ನೆನಪು ಕೂಡ ಕರಗಿತು. ಕಾಲ ಎಲ್ಲವನ್ನೂ ಮರೆಸುತ್ತದೆ. ಆದರೂ ಅವಳನ್ನು ಸಂಪೂರ್ಣವಾಗಿ ಮರೆಯಲು ಸಾಧ್ಯವಿಲ್ಲ. ಆಗಾಗ ಕನಸಿನಲ್ಲಿ ಮಳೆಯಂತೆ ಬರುತ್ತಾಳೆ. ಮಣ್ಣಿನಲ್ಲಿ ಮಳೆ ಹನಿ ಬೆರೆದಂತೆ ನನ್ನ ಮನಸಿನಲ್ಲಿ ಬೆರೆಯುತ್ತಾಳೆ. ನಗುತ್ತಾಳೆ. ಸೂರ್ಯನ ಶಾಖಕ್ಕೆ ನೀರು ಆವಿಯಾಗುವಂತೆ ಅವಳೂ ಮರೆಯಾಗುತ್ತಾಳೆ. ಕಾಲಚಕ್ರ ಹೀಗೆ ಓಡುತ್ತಿರುತ್ತದೆ. ನಾನು ಅವಳನ್ನು ನಿಜವಾಗಿಯೂ ಪ್ರೀತಿಸುತ್ತಿದ್ದೇನೆಯೇ? ಎನ್ನುವುದು ನನ್ನನ್ನು ಇಂದಿಗೂ ಕಾಡುವ ಪ್ರಶ್ನೆ!

*****************

(ಚಿತ್ರ ಕೃಪೆ :flickr.com)

ಚಿತ್ರಕೃಪೆ:

5 ಟಿಪ್ಪಣಿಗಳು Post a comment
  1. shiva's avatar
    shiva
    ಜೂನ್ 16 2011

    ಲೇಖನ ಚನಾಗಿದೆ, ಅಂದವಾಗಿ ಓದಿಸಿಕೊಂಡು ಸಾಗುತ್ತದೆ …. ಆದರೆ “ನೇಸರನ ಅರುಣ ಕಿರಣಗಳು ನನ್ನ ಕೋಮಲ ದೇಹದ ಮೇಲೆ ಬಿದ್ದು ಹೊಸ ಸ್ಫೂರ್ತಿ ತುಂಬಿತು.” ಸಾಲೇನೋ ಅಧ್ಬುತವಾಗಿದೆ ಆದರೆ ಈ ಸಾಲಲ್ಲಿ ಕೋಮಲ ಸಮಂಜಸವಲ್ಲ ಅಲ್ಲ ಎಂಬುದು ನನ್ನ ಅಭಿಪ್ರಾಯ ಮಗು, ಮಕ್ಕಳು, ಅಥವಾ ಹೆಣ್ಣಿನ ದೇಹವನ್ನು ಕೊಮಲವೆನ್ನಬಹುದು ಆದರೆ ಗಂಡಸಿನ ದೇಹ…? ಇದು ನನ್ನ ಅನಿಸಿಕೆ ಹಾಗು ಪ್ರಶ್ನೆಯಷ್ಟೇ…… ತುಂಬಾ ಚನಾಗಿದೆ ಲೇಖನ….all d best ನವನೀತ್ ಪೈ….

    ಉತ್ತರ
  2. amita ravikiran's avatar
    ಜೂನ್ 16 2011

    channagide……..shiva awara prashne mattu anisikege nanna sahamatavide……nimma shaili kooda tumba channagide…shubhashaya..

    ಉತ್ತರ
  3. abhi082941@gmail.com's avatar
    ಜೂನ್ 16 2011

    ಇದಕ್ಕೆ ರವಿಚ೦ದ್ರನ್ ರವರೆ ಉತ್ತರ ಕೊಡಬೇಕು

    ಉತ್ತರ
  4. Navaneeth Pai's avatar
    Navaneeth Pai
    ಆಗಸ್ಟ್ 4 2011

    dhanyavadagalu…

    ಉತ್ತರ
  5. srinidhi's avatar
    srinidhi
    ಆಗಸ್ಟ್ 5 2011

    congragulations 🙂
    chennagide

    ಉತ್ತರ

Leave a reply to shiva ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments