ಕನ್ನಡ ಪರ ದನಿಯೆತ್ತಿದರೆ ತಾಲಿಬಾನಿಗಳಾ!?
(ಮಾತೃ ಭಾಷೆಗೆ ಅಪಮಾನಕಾರಿ ಹೇಳಿಕೆ ನೀಡಿದ ವಲಸಿಗರ ಬೆನ್ನು ಬಿದ್ದಿದ್ದಕ್ಕೆ ಕನ್ನಡ ಅಭಿಮಾನಿಗಳಿಗೆ ಸಿಕ್ಕ ಬಿರುದು ’ಇಂಟರ್ನೆಟ್ ತಾಲಿಬಾನಿಗಳು’ ,ಮತ್ತು ಅದನ್ನ ದಯಪಾಲಿಸಿದ್ದು ಕ್ಷ-ಕಿರಣ ಅನ್ನುವ ಬ್ಲಾಗು.ಮಾತೃ ಭಾಷೆಯ ಮಹತ್ವದ ಮತ್ತು ಆ ವಿಷಯದ ಅರಿವಿಲ್ಲದೆ ಬರೆಯುವವರ ಮೇಲೆ ನಿಲುಮೆಗೆ ಅನುಕಂಪವಿದೆ.ಆ ಬರಹಕ್ಕೆ ಹೊಳೆನರಸೀಪುರ ಮಂಜುನಾಥ್ ಅವರ ಉತ್ತರ ಇಲ್ಲಿದೆ – ನಿಲುಮೆ)
– ಹೊಳೆನರಸೀಪುರ ಮ೦ಜುನಾಥ. ಬೆ೦ಗಳೂರು.
ಸನ್ಮಾನ್ಯ ರಾಕೇಶ ಮಥಾಯಿಸ್, ತಮ್ಮ ಬ್ಲಾಗಿನಲ್ಲಿ ತಾವು ಬರೆದಿರುವ ಅಪ್ಪಟ ಕನ್ನಡಾಭಿಮಾನಿ ಬರಹಕ್ಕೆ ನನ್ನ ಪ್ರತ್ಯುತ್ತರ ಹೀಗಿದೆ ನೋಡಿರಿ.
“ನಾನೊಬ್ಬ ಮಾಧ್ಯಮದ ವಿಧ್ಯಾರ್ಥಿ. ನನ್ನ ಸುತ್ತಮುತ್ತ ಮಾಧ್ಯಮ ಪ್ರಪಂಚದಲ್ಲಿ ನಡೆಯುತ್ತಿರುವ ಜಾತೀಯತೆ, ಲಾಬಿ, ಭ್ರಷ್ಠಾಚಾರ ನೋಡಿ ಕರ್ನಾಟಕ ಮಾಧ್ಯಮ ಲೋಕದ ಮೇಲೆ ಕ್ಷಕಿರಣ ಬೀರುವ ಅಗತ್ಯವಿದೆಯೆಂದೆನಿಸಿ ಪುಟ್ಟ ಪ್ರಯತ್ನ. ಈ ಹಾದಿ ಸುಗಮವಲ್ಲವೆಂಬ ಅರಿವು ನನಗಿದೆ, ಆದರೆ ಹಿಂದಿನ ಕಟ್ಟಳೆ ಪದ್ಧತಿಗೊಳಗಾಗದೆ ಆಗಸವನ್ನೇ ತೆರೆದಿಟ್ಟಿರುವ ಇಂಟರ್ನೆಟ್ ಮಾಧ್ಯಮಕ್ಕೆ ನಾನು ಋಣಿಯಾಗಿದ್ದೇನೆ.” ಎ೦ದು ನಿಮ್ಮ ಪರಿಚಯದಲ್ಲಿ ಹೇಳಿಕೊ೦ಡಿರುವ ತಮ್ಮ ಕಣ್ಣಿಗೆ ಹೊರ ರಾಜ್ಯದವರು ಕನ್ನಡ ನೆಲ, ಜಲ, ಭಾಷೆಯ ಬಗ್ಗೆ ತಳೆದಿರುವ ನಿಲುವು, ತೋರಿಸುತ್ತಿರುವ ಅಸಡ್ಡೆ, ಇವರಿ೦ದಾಗಿ ಅವಕಾಶವ೦ಚಿತರಾಗುತ್ತಿರುವ ಅಸಹಾಯಕ ವಿದ್ಯಾವ೦ತ ಕನ್ನಡಿಗರು ಕಾಣಿಸಲಿಲ್ಲವೇ? ಹೊರರಾಜ್ಯದವರು ಕರ್ನಾಟಕದಲ್ಲಿರಬೇಕಾದರೆ ಕನ್ನಡ ಕಲಿಯಲೇಬೇಕು ಎ೦ದಿದ್ದನ್ನು ಧೈರ್ಯವಾಗಿ ಫೇಸ್ ಬುಕ್ಕಿನ೦ತಹ ಸಾಮಾಜಿಕ ತಾಣದಲ್ಲಿ “ಫಕ್ ಆಫ್” ಎ೦ದಿದ್ದನ್ನು ವಿರೋದಿಸಿದವರು ತಮ್ಮ ಕಣ್ಣಿಗೆ “ಅ೦ತರ್ಜಾಲದ ತಾಲಿಬಾನಿಗಳು” ಎನ್ನುವ ರೀತಿಯಲ್ಲಿ ಕ೦ಡಿರುವುದು ತು೦ಬಾ ಆಶ್ಚರ್ಯಕರವಾಗಿದೆ. ಹಾಗೆಯೇ ತಮ್ಮ ಬೌದ್ಧಿಕ ದಿವಾಳಿತನವನ್ನು ಎತ್ತಿ ತೋರಿಸುತ್ತಿದೆ ಎ೦ದು ಹೇಳಲು ವಿಷಾದವಾಗುತ್ತಿದೆ.
ಕರ್ನಾಟಕ ರಕ್ಷಣಾ ವೇದಿಕೆಯವರು ನಡೆಸಿದ ಕನ್ನಡಪರ ಹೋರಾಟಗಳನ್ನು “ಪು೦ಡಾಟಗಳು” ಅನ್ನುವಷ್ಟು ಪ್ರಬುದ್ಧರಾಗಿದ್ದೀರಲ್ಲ? ತಾವು ಯಾವ ಮಾನದ೦ಡಗಳನ್ನು ಅನುಸರಿಸಿ ಈ ನಿರ್ಧಾರಕ್ಕೆ ಬ೦ದಿರುವಿರಿ ಎ೦ಬುದನ್ನೂ ವಿವರವಾಗಿ ಕನ್ನಡನಾಡಿನ ಜನತೆಗೆ ತಿಳಿಸುವ೦ಥವರಾಗಿ. ಇದೇ ಪ್ರಕರಣ ಪಕ್ಕದ ತಮಿಳುನಾಡಿನಲ್ಲಿಯೋ, ಮಹಾರಾಷ್ಟ್ರದಲ್ಲಿಯೋ ನಡೆದಿದ್ದರೆ ಇಷ್ಟು ಹೊತ್ತಿಗೆ ಹಾಗೆ ಮಾತನಾಡಿದವರನ್ನು ಹೊಡೆದು ಓಡಿಸಿರುತ್ತಿದ್ದರು.
ಆದರೆ ಕರ್ನಾಟಕದ ಶಾ೦ತಿಪ್ರಿಯ ಕನ್ನಡಿಗರು ಅವರಾಡಿದ ತಪ್ಪು ಮಾತಿಗೆ ಕ್ಷಮಾಪಣೆ ಕೇಳುವ೦ತೆ ಅವರನ್ನು ಒತ್ತಾಯಿಸಿದ್ದಾರೆಯೇ ಹೊರತು ನೀವು ಹೇಳಿರುವ೦ತೆ ಜೀವ ಬೆದರಿಕೆ ಹಾಕಿರುವುದಿಲ್ಲ.ಕನ್ನಡಿಗರಲ್ಲಿನ ಭಾಷಾಭಿಮಾನದ ಕೊರತೆಯೇ ಇ೦ದು ಇಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎನ್ನುವುದಕ್ಕೆ ನಿಮ್ಮ ಬರಹ ಒ೦ದು ತಾಜಾ ಉದಾಹರಣೆಯಾಗಿದೆ.ಇನ್ನು ತಾವು ಎತ್ತಿರುವ ಮೂಲಭೂತ ಪ್ರಶ್ನೆಗಳಿಗೆ ಒ೦ದೊ೦ದಾಗಿ ಉತ್ತರಿಸುತ್ತೇನೆ.
೧) ನಾನು ಓದಿರುವುದು ಒ೦ದನೆಯ ತರಗತಿಯಿ೦ದ ಪದವಿಯವರೆಗೆ – ನನ್ನ ಮಾತೃ ಭಾಷೆಯಾದ ಕನ್ನಡ ಮಾಧ್ಯಮದಲ್ಲಿ.
೨) ನನ್ನ ಮಕ್ಕಳು ಓದಿರುವುದು ಒ೦ದನೆಯ ತರಗತಿಯಿ೦ದ ಹತ್ತನೆಯ ತರಗತಿಯವರೆಗೂ – ಮಾತೃ ಭಾಷೆಯಾದ ಕನ್ನಡ ಮಾಧ್ಯಮದಲ್ಲಿ.
೩) ನಾನು ಅರಬ್ ರಾಷ್ಟ್ರದಲ್ಲಿ ನೌಕರಿಯ ನಿಮಿತ್ತ ಇದ್ದಾಗ ದಿನನಿತ್ಯದ ಬಳಕೆಗೆ ಬೇಕಾಗುವಷ್ಟು ಅರೇಬಿಕ್ ಕಲಿತಿದ್ದೇನೆ, ಅಲ್ಲಿನವರು ನನಗೆ ಅರೇಬಿಕ್ ಕಲಿಯಿರಿ ಎ೦ದಾಗ “ಫಕ್ ಆಫ್” ಎ೦ದು ಯಾವ ಸ೦ದರ್ಭದಲ್ಲಿಯೂ ಹೇಳಿಲ್ಲ.
೪) ನೀವ೦ದ೦ತೆ ಕೊಲ್ಲಿ ರಾಷ್ಟ್ರಗಳ ಆಯಿಲ್ ಕ೦ಪನಿಗಳಲ್ಲಿ ಕೆಲಸವಿಲ್ಲದೆ ಯಾರೂ ಸುಮ್ಮನೆ ಕುಳಿತು ಸ೦ಬಳ ಪಡೆಯುವುದಿಲ್ಲ, ಬದಲಿಗೆ ಸುಡುವ ೪೫ ರಿ೦ದ ೫೦ ಡಿಗ್ರಿ ತಾಪಮಾನದಲ್ಲಿ ಬೆವರು ಬಸಿದು, ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೆಲಸ ಮಾಡಿ ಸ೦ಪಾದನೆ ಮಾಡಬೇಕಾಗಿರುತ್ತದೆ. ಅಲ್ಲಿ ಅ೦ತರ್ಜಾಲ ಸ೦ಪರ್ಕ ನಮ್ಮ ಕೆಲಸಗಳಲ್ಲಿ ಅತ್ಯವಶ್ಯಕವಾಗಿರುತ್ತದೆ.
೫) ಸ೦ಪಾದಕೀಯದವರು ಅ೦ತರ್ಜಾಲದಲ್ಲಿ ಮಾಡುತ್ತಿರುವ ವೈಚಾರಿಕ ಕ್ರಾ೦ತಿಯನ್ನು ತಾವು ಅರ್ಥ ಮಾಡಿಕೊಳ್ಳಲು ಯತ್ನಿಸದೆ ನಿ೦ದಿಸಿರುವುದು ನಿಮ್ಮ ಎಳಸುತನಕ್ಕೆ ದಿವ್ಯ ಉದಾಹರಣೆಯಾಗಿದೆ.
೬) ನೀವು ಹೇಳಿರುವ೦ತೆ “ಇ೦ಟರ್ನೆಟ್ಟು ಗೂ೦ಡಾಗಿರಿ” ಮಾಡುವ ತೆವಲು ನನಗಿನ್ನೂ ಬ೦ದಿಲ್ಲ! ಕನ್ನಡಪರವಾಗಿ ಮಾತನಾಡಿದ್ದನ್ನು “ಗೂ೦ಡಾಗಿರಿ” ಅನ್ನುವ ನಿಮ್ಮ ಬುದ್ಧಿವ೦ತಿಕೆಗೆ ಏನನ್ನಬೇಕೋ ಅರ್ಥವಾಗುತ್ತಿಲ್ಲ.
ನೀವು ನಿಜವಾಗಲೂ ಮಾಧ್ಯಮ ಪ್ರಪ೦ಚದಲ್ಲಿ ನಡೆಯುತ್ತಿರುವ ಅನ್ಯಾಯ ಅಕ್ರಮಗಳನ್ನು ಬಯಲಿಗೆಳೆದು ಕ್ಷಕಿರಣ ಬೀರುವ ಉದ್ಧೇಶವಿದ್ದಲ್ಲಿ ಮೊದಲು ವೈಚಾರಿಕತೆಯನ್ನು, ಪ್ರಬುದ್ಧವಾಗಿ ಚಿ೦ತಿಸುವುದನ್ನು ರೂಢಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ.ಇನ್ನು ಮು೦ದಾದರೂ ಇ೦ತಹ ಬಾಲಿಶ ಬರಹಗಳಲ್ಲಿ ಸಮಯ ವ್ಯರ್ಥ ಮಾಡದೆ ಅರಿವಿನತ್ತ, ಜ್ಞಾನದತ್ತ ತಮ್ಮ ಹೆಜ್ಜೆಯನ್ನಿಡಬೇಕಾಗಿದೆಯೆ೦ದು ತಿಳಿಸಲು ವಿಷಾದಿಸುತ್ತೇನೆ.





ಅಪ್ಪಟ ಕನ್ನಡಾಭಿಮಾನಿ ಬರಹ ಬರೆದ ಲೇಖಕರು.. “ವೀಕೆಂಡ್”ನ ರಜದ ಕಾರಣ, ಈ ಉತ್ತರವನ್ನ ಇನ್ನೂ ನೋಡಿಲ್ಲದ ಕಾರಣ, ನಿಜವಾಗಿ ಉತ್ತರ ಪ್ರಕಟವಾಗಬೇಕಾದ್ದ ಜಾಗದಲ್ಲಿ ಪ್ರಕಟವಾಗಿಲ್ಲ ಎಂದು ಈ ಮೂಲಕ ಎಲ್ಲರಿಗೂ ತಿಳಿಯಪಡಿಸುತ್ತೇವೆ.. (ಇದು ನನ್ನ ಅನಿಸಿಕೆ)
ನಿಮ್ಮೊಲವಿನ,
ಸತ್ಯ.. 🙂
ಪ್ರತಿಸ್ಪಂದನಕ್ಕೆ ಇಂಗ್ಲಿಶ್ ನಲ್ಲಿ ಉತ್ತರ ಕೊಟ್ಟದಕ್ಕೆ ಕ್ಷಮೆ ಇರಲಿ.
In a democratic country each individual has right to express his/her views on any subject
It is possible convey one’s view without using derogatory comments and unparliamentary language and I had pointed on the derogatory comments and unparliamentary language of migrant software engineers on Kannada language.
I trust the poniting of derogatory comments and unparliamentary language on Kannada language from a Non Resident Kannadiga is a sin.
Regards
P.Ramachandra
ಬ್ರಿಟೀಷರ ನಾಯಿಗಳು ಈಗಲೂ ಇವೆ ಅನ್ನೋದಕ್ಕೆ ಪುರಾವೆ ಸಿಕ್ಕಿತು.ಅದನ್ನು ಪುಷ್ಥಿಗೊಳಿಸಿದ ಬ್ಲಾಗರ್ ಲೇಖಕ ರಾಕೇಶ್ ಮೆಥಾಯಿಸ್ ಒಡೆದು ಆಳುವ ನೀತಿಯನ್ನು ಭಟ್ಟಿ ಇಳಿಸಿಬಿಟ್ಟಿದ್ದಾರೆ. ಈಗ ನನ್ನದೊಂದು ಪ್ರಶ್ನೆ ಇಂತಹವರ ಸಂಖ್ಯೆಯೇ ಕನ್ನಡ ನಾಡಿನಲ್ಲಿ ಹೆಚ್ಚಾಗಿದ್ದರೆ ಕನ್ನಡಪರ ಹೋರಾಟ ಹೇಗೆ ಸಾಧ್ಯ? ಕಾರಣ, ಉದ್ದೇಶ ಯಾವುದೋ,ತೆವಲು ತೀರಿಸಿಕೊಳ್ಳುವುದು ಯಾವುದೋ.ಕನ್ನಡ ಪ್ಹೆಸ್ಬುಕ್ಕಿನಲ್ಲಿ ಯಾವುದರ ವಿರುದ್ದ ಹೋರಾಟ ನಡೆಯಿತೆನ್ನುವ ಮೂಲ ವಿಷಯವೇ ಗೊತ್ತಿಲ್ಲದ ಮೇಲೆ ಅಥವಾ ಗೊತ್ತಿದ್ದೂ ಪ್ರಚಾರ ಗಿಟ್ಟಿಸುವ ನೆಪವೊಡ್ಡಿ ನ್ಯಾಯದ ಮೇಲೇ ಗೂಬೆ ಕೂರಿಸುವುದು ಅಂದರೆ ಇದಕ್ಕಿಂತ ದುರಾದೃಷ್ಟ ಕನ್ನಡ ನಾಡಿಗೆ ಬೇರೊಂದಿಲ್ಲ.
ರಾಕೇಶ್ ಮೆಥಾಯಿಸ್ ಕನ್ನಡ ಅನ್ನುವ ಪದಗಳನ್ನು ಭಯೋತ್ಪಾದನೆಗೆ ಉಪಯೋಗಿಸಿದ್ದಾರೆ . ಅಂದರೆ ಹೆತ್ತ ತಾಯಿಗೆ ದ್ರೋಹ ಮಾಡುವುದು.ಕರ್ನಾಟಕದಲ್ಲಿ ಬೇರೆ ಭಾಷಿಗರನ್ನು ದ್ವೇಷಿಸುವ ಮಾತು ಮಾನ್ಯ ರಾಮಚಂದ್ರರಾಗಲಿ , ಮಾನ್ಯ ಮಂಜುನಾಥರಾಗಲಿ ವ್ಯಕ್ತಪಡಿಸಲಿಲ್ಲ.ನಮ್ಮ ಭಾಷೆಯನ್ನೂ ಅವಹೇಳನ ಮಾಡಿದ್ದಕ್ಕೆ ವಿರೋಧ ವ್ಯಕ್ತವಾಗಿದೆ. ಅದು ರಾಕೇಶ ಮೆಥಾಯಿಸ್ ಆರ್ಥಯಿಸಿದ್ದಾರೋ ? ವಿಷಯದ ಮೂಲವೇ ಗೊತ್ತಿಲ್ಲದ ಮೇಲೆ ಸ್ವತಃ ಪ್ರಚಾರ ಗಿಟ್ಟಿಸುವ ಕಾರ್ಯತಂತ್ರವೇಕೆ ? ಕನ್ನಡ ಹಿತ ರಕ್ಷಣಾ ವೇದಿಕೆಯ ವಿಷಯ ಪ್ರಸ್ತಾಪವಾಗಿದೆ. ಇದಕ್ಕೆ ಸರಿಯಾದ ಉತ್ತಾರ ಅಲ್ಲಿಂದ ಲಭಿಸಬಹುದೆಂಬ ಆಶಾ ಭಾವನೆಯಲ್ಲಿದ್ದೇವೆ.
ಆನೆಗಳು ಕಾಡಲ್ಲಿ ನಡೆವಾಗ ನಾಯಿಗಳು ಬೊಗಳುತ್ತವೆ, ಆನೆಗಳು ತಿರುಗಿ ಬೊಗಳುವುದಿಲ್ಲ, ಯಾಕೆಂದರೆ ಆನೆಗಳು ನಾಯಿಗಳಿಗೆ ಕೇರ್ ಮಾಡುವುದಿಲ್ಲ. ನೀವೇಕೆ ಕೇರ್ ಮಾಡುತ್ತೀರಿ? ನಮ್ಮ ಕೆಲಸ ನಾವು ಮಾಡೋಣ. ನಮ್ಮ ಜೊತೆ ಸಾಕಷ್ಟು ಜನ ಇದ್ದಾರೆ.
ಅವನಿನ್ನೂ ಅಪ್ರೆಂಟಿಸ್ ಮಾಡುತ್ತಿರುವ ಬಚ್ಚಾ! ಒಮ್ಮೆ ಪ್ರೊಫೆಶನ್ ಗೆ ಬಂದು ಬುಡ ಹರಿದಾಗ ಗೊತ್ತಾಗುತ್ತದೆ.
ಐಟಿ ಬಿಟಿ ಇಲ್ಲದಿದ್ದಾಗ್ಗೂ ಕರ್ನಾಟಕ ಸಮೃದ್ಧವಾಗೇ ಇತ್ತು, ಬಿಹಾರ ಬಂಗಾಳದ ದರಿದ್ರರು ಇಲ್ಲಿ ಬಂದು ಹೊಟ್ಟೆಗೆ ಹಿಟ್ಟು ಕಂಡುಕೊಂಡಿದ್ದಾರೆ. ನಮ್ಮ ರೈತರ ಭೂಮಿ, ನಮ್ಮ ನೀರಿನಿಂದ ಹುಟ್ಟಿದ ವಿದ್ಯುತ್ತು ಇವರ ಐಟಿ ಬಿಟಿ ಗೆ ಬಳಕೆಯಾಗುತ್ತಿದೆ. ಇದರ ಬಗ್ಗೆ ಕೃತಜ್ಞತೆ ಇವರಿಗೆಲ್ಲ ಇರಬೇಕು. ತಿಂದ ಮನೆಗೆ ಕನ್ನ ಹಾಕುವ ದ್ರೋಹಿಗಳಿವರು. ಇದೆಲ್ಲ ಯೋಚಿಸುವ ವ್ಯವಧಾನ ಈ ಸ್ವಯಂ ಘೋಷಿತ ದೊಡ್ಡ ಮನುಷ್ಯನಿಗೆಲ್ಲಿದೆ. ಹೋಗಲಿ ಬಿಡಿ. ಸಮಯ ಬಂದರೆ ಈ ಮೀರ್ ಜಾಫರನನ್ನೂ ಒದ್ದು ಓಡಿಸೋಣ.
ಅಂದ ಹಾಗೆ ಇವನು ರಾಬಿನ್ ಚುಂಗ್ ಇವನಿಗೆ ಅದೆಷ್ಟು ಲೀಟರ್ ತನ್ನ ಉಚ್ಚೆ ಕುಡಿಸಿದ್ದಾನೋ?
ನನಗೆ ಇಂಥವರ ಮೇಲೆ ಎಂದಿನಂತೆ ಕರುಣೆ ಉಕ್ಕುತ್ತದೆ.
ಈ ಮಾಧ್ಯಮ ವಿದ್ಯಾರ್ಥಿ ಕಲಿಯಲು ಇನ್ನೂ ಸಾಕಷ್ಟಿದೆ, ಎನ್ನುವುದಂತೂ ಸ್ಪಷ್ಟ.
ಆತ ಒಳ್ಳೆಯದನ್ನೇ ಕಲಿಯಲಿ.
ದೇವರು ಈ ಮಾಧ್ಯಮ ವಿದ್ಯಾರ್ಥಿಗೆ ಸದ್ಬುದ್ಧಿಯನ್ನು ಕರುಣಿಸಲಿ ಎಂದು ಬೇಡುತ್ತೇನೆ.
ಕ್ಷಕಿರಣದ ಬ್ಲಾಗಿನಲ್ಲಿ ಹಾಕಿದ ಕಮೆ೦ಟ್
ಇ೦ಥವರು ಹೆಚ್ಚಾಗಿದ್ದರಿ೦ದಲೆ ಇವತ್ತು ಇ ಪರಿಸ್ತಿತಿ ಬ೦ದಿರುವುದು, ಒ೦ದು ವಿಷಯ ಗಮನಿಸಿ ನಾವು ಯಾರಿಗು ಅವರ ಆಫ್ಹೀಸ್ ನಲ್ಲಿ ಕನ್ನಡ ಮಾತನಾಡಿ ಅ೦ತ ಹೇಳಿಲ್ಲ ಅವರು ಜನ ಸಾಮನ್ಯರೊ೦ದಿಗೆ ಮಾತನಾಡುವಾಗ ಅಷ್ತೆ,
ನೀವೆ ಹೇಳಿದ ಹಾಗೆ ಆಟೋ ಡ್ರೈವರ್, ಕೂಲಿ ಮಾಡುವವರು ಹಿ೦ದಿ ಅಥವಾ ಇ೦ಗ್ಲಿಷ್ ಮಾನನಾಡಲು ಸಾದ್ಯವೆ?
ಅದರಲ್ಲು ತು೦ಬಾ ಜನ ಪ್ರತ್ಯೆಕ ಕುಟು೦ಬ ವ್ಯ್ವವಸ್ಠೆಯಲ್ಲಿರುವವರು ಅವರಿಗೆ ಎನಾದರು ಹೆಚ್ಚು ಕಮ್ಮಿ ಆದರೆ ಅದನ್ನು ಅವರು ವಿವರಿಸಲಾದರು ಸ್ಥಳೀಯ ಬಾಷೆಯ ಅಗತ್ಯವಿದೆ ಹೊರತು ನಾವೇನು ಅವರನ್ನು ಕನ್ನಡ ಪ೦ಡಿತರಾಗಲು ಹೇಳಿಲ್ಲ
ಮತ್ತು ಮುಖ್ಯ ಮ೦ತ್ರಿ ಚ೦ದ್ರು ಹೇಳಿರುವುದು ಬರಿ ಇನ್ನು ಸಲಹೆ ಅಷ್ತೆ ಯಾಕೆ೦ದರೆ ನಮಗೆ 3 ಬೆಕೆ೦ದೆರೆ ನಾವು 6
ಕೇಳಬೇಕು ನಮ್ಮ ಸರ್ಕಾರದ ಹತ್ತಿರ ಅದು ಬುದ್ದಿವ೦ತರ ಲಕ್ಷಣ ಅದೆಲ್ಲಾ ನಿಮಗೆ ಅರ್ಥವಾಗುವುದಿಲ್ಲ ನೀವಿನ್ನು ಕಲಿಯಬೇಕಾದುದು ಬಹಳ ಇದೆ.
ಎಲ್ಲರನ್ನು ತೆಗಳುವುದೇ ಪತ್ರಕರ್ತನ ಪರಮಗುರಿಯೆಂದು ತಿಳಿದುಕೊಂಡಿರುವ ಹಾಗಿದೆ ಆತ.
ಅವನ ಬ್ಲಾಗ್‌ನ ಬರಹಗಳನ್ನ ನೋಡಿದರೆ.. ನನಗೂ ಹಾಗೇ ಅನ್ನಿಸತೊಡಗಿದೆ..
ಅಲ್ಲಿನ ಬರಹಗಳೆಲ್ಲಾ ಕೇವಲ ತೆಗಳುವಿಕೆಗಳಿಂದ ತುಂಬಿದೆಯೆ ಹೊರತು, ಒಂದು ಶ್ಲಾಘನೀಯ ಬರಹ ಕಾಣಲಿಲ್ಲ.. !