ವಿಷಯದ ವಿವರಗಳಿಗೆ ದಾಟಿರಿ

ಜೂನ್ 20, 2011

4

ಇದರ ಕತೆ ಇಷ್ಟೇ ಕಣಪ್ಪೋ….

‍ನಿಲುಮೆ ಮೂಲಕ

ಉಮೇಶ್ ದೇಸಾಯಿ

ಹೌದು ಆ ಕತೆಬರೆದವ ಸಹ ಈ ತಿರುವು ಊಹಿಸಿರಲಿಕ್ಕಿಲ್ಲ. ನಾವು ಆರಿಸಿ ಕಳಿಸಿದ ಪಕ್ಷ ಅದರ ಮುಖಂಡ ಇಂದು ಆಣೆ ಪ್ರಮಾಣ ಮಾಡುತ್ತಾರಂತೆ ಅವರ ಹಿಂದಿನ ಸಿಎಮ್ಮು..

 ಅವರ ಪಂಥಾಹ್ವಾನ ಸ್ವೀಕರಿಸಿ ಧರ್ಮಸ್ಥಳದಲ್ಲಿ ಒಂದುದಿನ ಮೊದಲೇ ಹೋಗಿ  ತಯಾರಿಯಲ್ಲಿರುತ್ತಾರಂತೆ. ಈ ಬಿಜೆಪಿ ಸರಕಾರ ಏಳುತ್ತ ಬೀಳುತ್ತ ಮೂರು ವರ್ಷ ಕಳೆದಿದೆ. ಈಗ ಮಾಜಿ ಸಿಎಮ್ಮು ಈಗಿನ ಸಿಎಮ್ಮ ಬಗ್ಗೆ ಮೂರುವರ್ಷದಲ್ಲಿ ಮುನ್ನೂರು ಬಾರಿ ಅಪವಾದ ಹೊರಿಸಿ ದಾಖಲೆ ಬಿಡುಗಡೆ ಮಾಡಿದ್ದಾರೆ.
ಹಾಲಿ ನಮ್ಮ ಸಿಎಮ್ಮು ಅದಕ್ಕೆ ಪ್ರತ್ಯುತ್ತರವಾಗಿ ತಮ್ಮ ರಾಜಕೀಯ ಕಾರ್ಯದರ್ಶಿ ಮೂಲಕ ಮಾಜಿ ವಿರುಧ್ದ ಅನೇಕ ದಾಖಲೆ ಬಿಡುಗಡೆ ಮಾಡಿದಾರೆ. ಒಟ್ಟಿನಲ್ಲಿ ಈ ಮೂರುವರ್ಷದಲ್ಲಿ ನಾಡಿನಜನತೆಗೆ ಭರಪೂರ್ ಮನರಂಜನೆ ಕೊಟ್ಟಿದ್ದಾರೆ. ಈಗ ಕ್ಲೈಮಾಕ್ಸ್ ಹೊತ್ತು .
ಇಲ್ಲಿ ನಾಯಕರೂ ಇಲ್ಲ ಖಳರೂ ಇಲ್ಲ. ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಆಯುಧಗಳಿಗೆ ಅವಕಾಶ ಇಲ್ಲ. ಹೀಗಾಗಿ ಅಲ್ಲಿ ರಕ್ತಪಾತಕೆ ಆಸ್ಪದವಿಲ್ಲ. ಆದರೆ ದೇವರ ಸನ್ನಿಧಿಯಲ್ಲಿ ಸುಳ್ಳು ಹೇಳಿದರೆ/ಸುಳ್ಳು ಆಣೆ ಹಾಕಿದವ ರಕ್ತ ಕಾರಿಕೊಂಡು ಸಾಯುತ್ತಾನೆ ಅಂತ ಪ್ರತೀತಿ. ಈಗ ಈ ಹಾಲಿ ಅಥವಾ ಮಾಜಿ ಇಬ್ಬರಲ್ಲಿ ಒಬ್ಬರು ರಕ್ತಕಾರುವುದಂತೂ ನಿಕ್ಕಿ.
ನನಗೆ ಕುತೂಹಲ ಇರೋದು ಆ ರಕ್ತದ ಬಣ್ಣದ ಬಗ್ಗೆ…! ನಂಜು ನುಂಗಿ ಅದ ಉಗುಳಿದವರ ರಕ್ತಕೆಂಪಗಿರಲು ಹೇಗೆ ಸಾಧ್ಯ??

ಯಾಕೆ ಹೀಗಾಗುತ್ತಿದೆ ಅಂತ ಯಾವುದೇ ಶ್ರೀ ಸಾಮಾನ್ಯ ತಲೆ ಕೆಡಿಸಿಕೊಳ್ಳುತ್ತಿಲ್ಲ. ತನ್ನ ಸುತ್ತಲಿನ ತನ್ನ ಕವಿದಿರುವ ಸಮಸ್ಯೆಗಳ ಬೆಂಕಿಗೆ ಅವ ಮೈಯೊಡ್ಡಿ ಹಿತ ಅನುಭವಿಸುತ್ತಿದ್ದಾನೆ

 ಆದರೆ ಮೀಡಿಯಾದವರ ಹೊಟ್ಟೆ ಹಸಿವು ಅಗಾಧ ಹಿತ ಅನುಭವಿಸಲು ಬಿಟ್ಟರೆ ಅವರು ಉಸಿರಾಡುವುದು ಹೇಗೆ ಅದಕ್ಕೇ ಅವರು ಅವನನ್ನು ತಿವಿದು ಎಚ್ಚರಿಸಿ ೨೭/೦೬/೨೦೧೧ ರಂದು ನಡೆಯಲಿರುವ ಆಣೆಪ್ರಕರಣ ದ ಬಗ್ಗೆ ಅಭಿಪ್ರಾಯ ಹೇಳುವಂತೆ ಒತ್ತಾಯ ಮಾಡುತ್ತಿದ್ದಾರೆ. ಹಾಲಿ ಮಾಜಿ ಕದನ ಇತಿಹಾಸದಲ್ಲಿ ಮೊದಲ ಬಾರಿ ಆಗುತ್ತಿರುವುದು  ಹೀಗಾಗಿ ಇದನ್ನು ಕವರ್ ಮಾಡಲು ಪುಡಿಹುಡಿ ಚಾನಲ್ ಗಳಲ್ಲದೇ ಫಾಕ್ಸ್, ಸಿಎನ್ ಎನ್ ಹಾಗೂ ಬಿಬಿಸಿ ಯವರು ಬರಲಿದ್ದಾರೆ. ಈಗಾಗಲೇ ಧರ್ಮಸ್ಥಳದ ಲಾಜ್ ಎಲ್ಲ ಬುಕ್ ಆಗಿವೆ. ಇದೇ ಸಂಧರ್ಭ ಲಾಭಮಾಡಿಕೊಳ್ಳಲು ಶ್ರೀ ಕ್ಷೇತ್ರದ ಸುತ್ತಲಿನ ಯಾತ್ರಾಸ್ಥಳದವರೂ ತಮ್ಮ ತಮ್ಮ ದೇವರ ದರ್ಶನ ದ ರೇಟು ಕಮ್ಮಿ ಮಾಡಿಕೊಂಡು ಕಾಯುತ್ತಿದ್ದಾರೆ.
ಒಟ್ಟಿನಲ್ಲಿ ೨೭/೦೬/೧೧ ರಂದು ನಡೆಯಲಿರುವ ಐತಿಹಾಸಿಕ ದಿನದ ಪೂರ್ವ ಮಾಹಿತಿ ಎಲ್ಲರಿಗಿಂತ ಮೊದಲೇ ಎಕ್ಸಕ್ಲೂಸಿವ್ ಆಗಿ ನೀಡಿದ ಈ ಬ್ಲಾಗಿನ ಟಿಆರ್ ಪಿ ಹೆಚ್ಚಿಗೆಯಾಗಲಿದೆ.ಇದು ಸತ್ಯ ಈ ಬಗ್ಗೆ ನಾನೂ ಬೇಕಾದರೆ ಆಣೆ ಮಾಡಿ ನಿರೂಪಿಸಿಯೇನು…..!!!
**************
sahilonline.org
4 ಟಿಪ್ಪಣಿಗಳು Post a comment
  1. ರವಿಕುಮಾರ ಜಿ ಬಿ's avatar
    ರವಿಕುಮಾರ ಜಿ ಬಿ
    ಜೂನ್ 20 2011

    ಈ ಭೂಮಿ ಮೇಲೆ ಮ್ಯಾಕ್ಷಿಮಮ್ ಹುಚ್ಚರೆ ಕಣೋ …ಹುಚ್ಚರ ಸಂತೆ ಹುಚ್ಚರ ಸಂತೆ …………………………….ಈ ಭೂಮಿ ಮೇಲೆ ಮ್ಯಾಕ್ಷಿಮಮ್ ಹುಚ್ಚರೆ ಕಣೋ………………

    ಉತ್ತರ
  2. ಆಸು ಹೆಗ್ಡೆ's avatar
    ಜೂನ್ 20 2011

    ಈ ಹಾಲೀ ಮತ್ತು ಮಾಜೀಗಳ ಸಾಚಾತನದ ಪರೀಕ್ಷೆ ಆಗುವಂತೆಯೇ, ಧರ್ಮಸ್ಥಳದಲ್ಲಿ ಆಣೆಹಾಕಿದರೆ ಏನಾಗುತ್ತದೆ ಎನ್ನುವ ಪರೀಕ್ಷೆಯೂ ನಡೆದು ಹೋಗುತ್ತದೆ ಈ ಬಾರಿ!

    ಹೆಚ್ಚಿನೆಲ್ಲಾ ವಾಹಿನಿಗಳಲ್ಲಿ ಈ ಐತಿಹಾಸಿಕ ಘಟನೆಯ ನೇರ ಪ್ರಸಾರವೂ ಇರಬಹುದು!

    ನನ್ನ ನಿರೀಕ್ಷೆಯ ಪ್ರಕಾರ,

    ಧರ್ಮಸ್ಥಳಕ್ಕೆ ಹೋಗುವ ಮೊದಲೇ ಮಧ್ಯವರ್ತಿಗಳಿಂದ ರಾಜೀ ಪಂಚಾಯ್ತಿ ನಡೆಯಬಹುದು ಅಥವಾ ಧರ್ಮಸ್ಥಳದಲ್ಲಿ ವೀರೇಂದ್ರ ಹೆಗ್ಗಡೆಯವರು ರಾಜಿ ಮಾಡಿಸಬಹುದು.

    ಉತ್ತರ
  3. sriharsha's avatar
    sriharsha
    ಜೂನ್ 20 2011

    ಇಬ್ಬರಲ್ಲೊಬ್ಬರಿಗೆ ದೇವರು ತಮ್ಮನ್ನೇನೂ ಮಾಡಲಾರ ಎಂಬುದು confirm ಆಗಿದೆ.

    ಉತ್ತರ
  4. ಶ್ರೀ ರಾಮ ಚಂದ್ರ, ಅಯೋಧ್ಯೆ!'s avatar
    ಶ್ರೀ ರಾಮ ಚಂದ್ರ, ಅಯೋಧ್ಯೆ!
    ಜೂನ್ 21 2011

    ಯಡಿಯೂರಪ್ಪನವರೇ,

    ರಾಮ್ ಜನ್ಮ ಭೂಮಿಯಲ್ಲಿ ನನ್ನ ದೇವಸ್ತಾನ ಯಾವಾಗ ಕಟ್ತೀರಾ?

    ಉತ್ತರ

Leave a reply to ಆಸು ಹೆಗ್ಡೆ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments