ವಿಷಯದ ವಿವರಗಳಿಗೆ ದಾಟಿರಿ

ಜೂನ್ 24, 2011

4

ಸರದಾರ್ ಅಂಕಲ್ …!

‍ನಿಲುಮೆ ಮೂಲಕ
– ಹರೀಶ್ ಶೆಟ್ಟಿ , ಶಿರ್ವ

ಸರದಾರ್ ಅಂಕಲ್ ರವರ ಮನೆ ನಮ್ಮ ಬಿಲ್ಡಿಂಗ್‌ನ ಬದಿಯಲ್ಲಿ ಇತ್ತು, ಅವರ ಮನೆ ಹಾಗು ನಮ್ಮ ಬಿಲ್ಡಿಂಗ್ ಒಟ್ಟು ಸೇರಿ ಇತ್ತು. ಅವರು ಹಾಗು ಅವರ ಕುಟುಂಬಸ್ತಿಯರು ನಮ್ಮ ಬಿಲ್ಡಿಂಗ್ ನ ಗ್ರೌಂಡ್ ಫ್ಲೋರ್‌ನಲ್ಲಿ ಇದ್ದ ಕಾಮಾನ್ ಬಾತ್ ರೂಮ್/ಟೊಯಿಲ್ಟ್  ಉಪಯೋಗಿಸುತ್ತಿದ್ದರು. ಸರದಾರ್ ಅಂಕಲ್ ಐವತ್ತು ವರುಷ ದಾಟಿದ ಹರೆಯದ ಗಟ್ಟಿ ಮುಟ್ಟಾದ ಹಾಗು ತುಂಬಾ ಶಾರ್ಟ್ ಟೆಂಪೆರ್(ಕೋಪಿಷ್ಠ ) ಮನುಷ್ಯ. ಕೋಪ ಅವರ ಮೂಗಿನಲ್ಲಿ ೨೪ ಗಂಟೆ ಇರುತಿತ್ತು. ಅವರ ಕೋಪದ ಸ್ವಭಾವದಿಂದಾಗಿ ನಮ್ಮ ಬಿಲ್ಡಿಂಗ್‌ನವರು ಅವರತ್ರ ಮಾತಾಡಲಿಕ್ಕೆ ಸಹ ಹೆದರುತ್ತಿದ್ದರು. ಸರದಾರ್ ಅಂಕಲ್ ಹಾಗು ನಮ್ಮ ಬಿಲ್ಡಿಂಗ್‌ನಲ್ಲಿರುವ ಜನರ ಮಧ್ಯೆ ಯಾವಾಗಲು ನೀರಿಗಾಗಿ ಹಾಗು ಬಾತ್ ರೂಮ್ / ಟೊಯಿಲ್ಟ್‌ಗಾಗಿ ಜಗಳ ಆಗುತಿತ್ತು. ಆ ದಿನಗಳಲ್ಲಿ ನಮ್ಮ ಬಿಲ್ಡಿಂಗ್‌ನಲ್ಲಿ ನೀರಿನ ತುಂಬಾ ಕೊರತೆ ಇತ್ತ. ಮುನಿಸಿಪಾಲಿಟಿಯವರು ನೀರು ಬಿಟ್ಟು ಬಿಟ್ಟು  ಬಿಡುತ್ತಿದ್ದರು. ಆ ನೀರು ಒಂದನೇ ,ಎರಡನೆ ಹಾಗು ಮೂರನೇ ಮಹಡಿಯವರಿಗೆ ಬರುತ್ತಿರಲಿಲ್ಲ. ನೀರು ಖಾಲಿ ಗ್ರೌಂಡ್ ಫ್ಲೋರಿನ ಬಾತ್ ರೂಮ್‌ನಲ್ಲಿ ಬರುತ್ತಿತ್ತು. ಒಂದನೇ, ಎರಡನೆ ಹಾಗು ಮೂರನೇ ಮಹಡಿಯವರು ತನ್ನ ತನ್ನ ಬಕೆಟ್ಗಳು ಹಿಡಿದು ಕೆಳಗೆ ಗ್ರೌಂಡ್ ಫ್ಲೋರಿನ ಬಾತ್ ರೂಮ್‌ಗೆ ನೀರಿಗಾಗಿ ಬರುತ್ತಿದ್ದರು. ಇಲ್ಲಿ  ಸಮಸ್ಯೆ ಏನೆಂದರೆ ಆ ದಿನದಲ್ಲಿ ನೀರು ಎಂಟು ಗಂಟೆಯಿಂದ ಹತ್ತು ಗಂಟೆಯವರಗೆ ಬರುತ್ತಿತ್ತು. ಆದರೆ ಸರದಾರ್ ಅಂಕಲ್ ಎಂಟು ಮುಕ್ಕಾಲು (8 .45 ) ತನಕ ಯಾರನ್ನು ಬಾತ್‌ರೂಮ್‌ನ ಒಳಗೆ ಬರಲು ಬಿಡುತಿರಲಿಲ್ಲ. ಸರದಾರ್ ಅಂಕಲ್‌ನವರು ತನ್ನ ಮೆಚ್ಚಿನ ಸೋಪ್ “ಲೈಫ್ ಬೌಯ್”ನಿಂದ ಸ್ನಾನ ಮಾಡಿ, ತನ್ನ ಬಟ್ಟೆ ತೊಳೆದು ಹಾಗು ತನ್ನ ಮನೆಗೆ ಪೈಪ್‌ನಿಂದ ನೀರು ತುಂಬಿಸಿದ ನಂತರವೇ ಬೇರೆಯವರಿಗೆ ನೀರಿನ ಗತಿ. ಇದರಿಂದ ಒಂದನೇ , ಎರಡನೆ ಹಾಗು ಮೂರನೇ ಮಹಡಿಯವರಿಗೆ ತುಂಬಾ ಕಷ್ಟವಾಗುತಿತ್ತು. ಸರದಾರ್ ಅಂಕಲ್ ಯಾರನ್ನೂ, ಅವರ ಬಾತ್‌ರೂಮ್‌ನಲ್ಲಿದಾಗ ಒಳಗೆ ಬಿಡುತಿರಲಿಲ್ಲ. ಇದರಿಂದ ದಿನಾಲೂ ಏನಾದರೂ ಜಗಳ ಆಗುತಿತ್ತು.

ಬಿಲ್ಡಿಂಗ್‌ನ ಮಕ್ಕಳು ಸರದಾರ್ ಅಂಕಲ್‌ನಲ್ಲಿಗೆ ಹೋಗಲು ಹೆದರುತ್ತಿದ್ದರು. ಆದರೆ ಸರದಾರ್ ಅಂಕಲ್‌ಗೆ ನಾನಂದರೆ ತುಂಬಾ ಇಷ್ಟ. ನಾನು ಯಾವಾಗಲು ಅವರಲ್ಲಿ ಹೋದರೆ ಅವರು ಪ್ರೀತಿಯಿಂದ ನನಗೆ ಏನಾದರೂ ತಿನ್ನಲಿಕ್ಕೆ ಕೊಟ್ಟು ಮುದ್ದಿಸುತಿದ್ದರು. ಇದರಿಂದ ನಮ್ಮ ಬಿಲ್ಡಿಂಗ್‌ನಲ್ಲಿರುವವರಿಗೆ ಆಶ್ಚರ್ಯವಾಗುತಿತ್ತು. ನಾವು ಮೂರನೇ ಮಾಡಿಗೆಯಲ್ಲಿ ಇರುತ್ತಿದ್ದೆವು. ನನ್ನ ಅಮ್ಮ ನನ್ನನ್ನು ಬಕೆಟ್ ಕೊಟ್ಟು ನೀರಿಗಾಗಿ ಕಳಿಸುತ್ತಿದ್ದರು. ಯಾಕೆಂದರೆ ಸರದಾರ್ ಅಂಕಲ್ ನನ್ನನ್ನು ಮಾತ್ರ ಬಾತ್‌ರೂಮ್‌ನ ಒಳಗೆ ಬರಲು ಬಿಡುತಿದ್ದರು. ನಾನು ಯಾವಾಗಲು bucket ತೆಗೊಂಡು ನೀರಿಗಾಗಿ ಹೋದರೆ, ಸರದಾರ್ ಅಂಕಲ್ ನನ್ನನ್ನು ಗುರುಗುಟ್ಟಿ ನೋಡಿ ಕೇಳುತ್ತಿದ್ದರು “ತು ಕ್ಯೂ ಆಯಾ ಹೈ ಯಹಾ” ( ನೀನು ಯಾಕೆ ಬಂದೆ ಇಲ್ಲಿ) “, ನಾನು ಮೆಲ್ಲನೆ ಹೇಳುತಿದ್ದೆ ” ಅಂಕಲ್ , ಘರ್ ಮೇ ಪಾನಿ ನಹಿ ಹೈ” (ಅಂಕಲ್, ಮನೆಯಲ್ಲಿ ನೀರು ಇಲ್ಲ), ಇದಕ್ಕೆ ಅವರು ಜೋರಿನಿಂದ ಬೈಯ್ಯುತ್ತಿದ್ದರು ” ತೋ ಆ ನಾ ಅಂಧರ್, ಬಹಾರ್ ಸೆ ಪಾನಿ ಬರೆಗ ಬೇವಕೂಫ್” (ಹಾಗಾದರೆ ಒಳಗೆ ಬಾ ಅಲ್ಲ , ಹೊರಗಿನಿಂದ ನೀರು ತುಂಬಿಸುತ್ತೀಯ, ಮೂರ್ಖ). ನಾನು ನನ್ನ ಬಕೆಟ್ ಹಿಡಿದು ಒಳಗೆ ಓಡುತ್ತಿದ್ದೆ. ಬಿಲ್ಡಿಂಗ್‌ನ ಎಲ್ಲ ಜನರು ಇದರಿಂದ ಆಶ್ಚರ್ಯಪಡುತಿದ್ದರು.ನನಗೆ ನೆನಪಿದೆ ನಾವು ಕಾಂಪೌಂಡ್‌ನಲ್ಲಿ ಕ್ರಿಕೆಟ್ ಆಡುವಾಗ ನಮ್ಮ ಬಾಲ್ ಸರದಾರ್ ಅಂಕಲ್ ನ ಕಾಂಪೌಂಡ್‌ಗೆ ಹೋಗುತಿತ್ತು. ಅವರು ಬೊಬ್ಬೆ ಹಾಕುತ್ತಿದ್ದರು “ಬಾಗೋ ಸಾಲೋ …ಕಾಮ್ ದಂದ ನಹಿ ಹೈ , ಭಾಗೋ ಯಹಾ ಸೆ “(ಓಡಿ ಇಲ್ಲಿಂದ …ಕಾರ್ಯ ಕೆಲಸ ಏನಿಲ್ಲ …ಓಡಿ ಇಲ್ಲಿಂದ ). ಆಗ ನನ್ನ ಮಿತ್ರರು ನನಗೆ ಬಾಲ್ ತರಲಿಕ್ಕೆ ಕಳಿಸುತಿದ್ದರು, ನಾನು ಮೊದಲು ನಿರಕಾರಿಸಿದರೂ, ಅವರ ಒತ್ತಾಯಕ್ಕೆ ಬಾಲ್ ತರಲು ಸರದಾರ್ ಅಂಕಲ್‌ನಲ್ಲಿಗೆ ಹೋಗುತಿದ್ದೆ. ನಾನು ಮೆಲ್ಲನೆ ಸರದಾರ್ ಅಂಕಲ್ ಗೆ ಕೇಳುತ್ತಿದ್ದೆ “ಅಂಕಲ್ ಸಾರೀ ಆಪ್ಕೆ ಪಾಸ್ ಬಾಲ್ ಆ ಗಯಾ , ನೆಕ್ಷ್ಟ್ ಟೈಮ್ ನಹಿ ಆಯೇಗ ” (ಅಂಕಲ್ ಸಾರೀ ನಿಮ್ಮಲಿ ಬಾಲ್ ಬಂದಿದೆ, ನೆಕ್ಷ್ಟ್ ಟೈಮ್ ಬರುದಿಲ್ಲ ), ಅವರು ಕೋಪದಿಂದ ನನ್ನನ್ನು ನೋಡಿ , ನನ್ನಲ್ಲಿ ಬಾಲ್ ಬಿಸಾಡುತಿದ್ದರು. ಈ ಸೀನ್ ಆ ದಿವಸದಲ್ಲಿ ಯಾವಾಗಲೂ ಆಗುತ್ತಿತ್ತು. ಸರದಾರ್ ಅಂಕಲ್‌ಗೆ ನನ್ನನ್ನು ನೋಡಿ ಅವರ ಹೃದಯ ಹೇಗೆ ಕರಗುತಿತ್ತೋ ನನಗೆ ಅರ್ಥವಾಗುತ್ತಿರಲಿಲ್ಲ.ಸರದಾರ್ ಅಂಕಲ್‌ನ ಪರಿವಾರ ಅಂದರೆ ಅವರ ಮಗ ಕುಲದೀಪ್ ಮತ್ತೆ ಕುಲದೀಪ್‌ನ ಹೆಂಡತಿ ಅಷ್ಟೇ. ಕುಲದೀಪ್ ಯಾವಾಗಲೂ ತಂದೆಯ ಎದುರಿನಲ್ಲಿ ಬೆಪ್ಪು ಕಟ್ಟುತಿದ್ದ. ಕುಲದೀಪ್‌ನ ಹೆಂಡತಿಯು ಅವರಿಗೆ ತುಂಬಾ ಹೆದರುತ್ತಿದ್ದಳು.ದಿನ ಉರುಳಿದಂತೆ…… ಒಂದು ದಿನ ನನ್ನ ತಂದೆಯವರು ಹೋಟೆಲಿಂದ ಬೇಗ ಮನೆಗೆ ಬಂದರು, ನನ್ನ ಅಮ್ಮ ಆಶ್ಚರ್ಯದಿಂದ ” ಇನಿ ಧಾನಿ ಬೇಗ” (ಇವತ್ತೇನು ಬೇಗ). ತಂದೆಯವರು ಸ್ವಲ್ಪ ಹೊತ್ತು ಮೌನ ಇದ್ದು ನಂತರ ಹೇಳಿದ್ರು “ನಮ್ಮ ಸರದಾರ್ ತೀರ್ ಪೋಯೇ” (ನಮ್ಮ ಸರದಾರ್ ಇನ್ನು ಇಲ್ಲ, Our Sardar Expired). ನನ್ನ ಅಮ್ಮ ಆಶ್ಚರ್ಯದಿಂದ ಬೊಬ್ಬೆ ಹಾಕಿದರು “ಅಯ್ಯೋ ದೇವರೇ” ಮತ್ತೆ ನನ್ನ ಕಡೆ ನೋಡಿದರು. ನನ್ನ ಚಿಕ್ಕ ವಯಸ್ಸು ಅವರ ಮಾತನ್ನು ಅರ್ಥ ಮಾಡಿಕೊಳ್ಳಲಾಗದೆ ನಾನು ಅಮ್ಮನನ್ನು ಕೇಳಿದೆ ” ಏನ್ ಅಂಡ್ ಅಮ್ಮ” (ಏನಾಯಿತು ಅಮ್ಮ ) . ಅಮ್ಮ ಮೆಲ್ಲನೆ “ನಿನ್ನ ಸರದಾರ್ ಅಂಕಲ್ ನನ ಇಜ್ಜೆರ್, ಆರ್ ತೀರ್ ಪೋಯೆರ್ ” (ನಿನ್ನ ಸರದಾರ್ ಅಂಕಲ್ ಇನ್ನು ಇಲ್ಲ, ಅವರು expire ಆದರು). ನಾನು ಇಲ್ಲಿದಲ್ಲೇ ಕಲ್ಲಾದೆ , ನನ್ನ ಕಣ್ಣಿನಿಂದ ಅಶ್ರು ಧಾರೆ ಸುರಿಯಲಾರಂಭಿಸಿತು ಹಾಗು ನಾನು ಜೋರಿನಿಂದ ಅಳಲು ಶುರು ಮಾಡಿದೆ.ಹೇಗೆ ಮರೆಯಲಿ ಆ ಸರದಾರ್ ಅಂಕಲ್‌ರನ್ನು, ಅವರು ತನ್ನ ಸ್ವಭಾವ ಮೀರಿ,  ಹೆಚ್ಚಾಗಿ  ನನ್ನ ಮೇಲೆ ಪ್ರೀತಿಯ ಮಳೆ ಸುರಿಸುತ್ತಿದ್ದರು . ಸರದಾರ್‌ಅಂಕಲ್ ನಿಮ್ಮನ್ನು ಮರೆಯಲು ಸಾಧ್ಯವಿಲ್ಲ.

*********************
teluguone.com

Read more from ಲೇಖನಗಳು
4 ಟಿಪ್ಪಣಿಗಳು Post a comment
  1. praj's avatar
    praj
    ಜೂನ್ 24 2011

    touching…

    ಉತ್ತರ
  2. Pavan Parupattedar's avatar
    ಜೂನ್ 24 2011

    really heart touching lekhana 😦

    ಉತ್ತರ
  3. Harish Shetty , Shirva's avatar
    Harish Shetty , Shirva
    ಜೂನ್ 26 2011

    Dhanyavadagalu….

    ಉತ್ತರ
  4. arvin's avatar
    ಜೂನ್ 26 2011

    heartttt touching……………

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments