ವಿಷಯದ ವಿವರಗಳಿಗೆ ದಾಟಿರಿ

ಜೂನ್ 27, 2011

5

ಹೆಸರಲ್ಲಿ ಏನಿದೆ?!

‍ನಿಲುಮೆ ಮೂಲಕ

– ಹೇಮಾ ಪವಾರ್, ಬೆಂಗಳೂರು

ಕಷ್ಟಗಳು ಹೇಗ್ಹೇಗೆ ಬರುತ್ತವೆ ಎಂದು ಅಂದಾಜಿಸುವುದು  ತುಂಬಾ ಕಷ್ಟ! ಇಂತಹ ಕಂಪೆನಿಯ CEO ಎಂದು ತನ್ನ ಹೆಸರು ಹೇಳಿ ಪರಿಚಯಿಸಿಕೊಂಡ ಆ ಮನುಷ್ಯ ನನ್ನ ಕಿವಿಗಳು available mode ನಲ್ಲಿವೆ ಎಂದು ಪರಿಗಣಿಸಿದ ಹಾಗಿತ್ತು, ನಿಲ್ಲಿಸದೆ ಇಪ್ಪತ್ತುನಿಮಿಷಗಳವರೆಗೆ ಮಾತಾಡುತ್ತಿದ್ದ, ಕೇಳುತ್ತ ಕಣ್ಣು ತೆರೆದುಕೊಂಡೇ ನಿದ್ದೆ ಮಾಡುವುದುನನಗೆ ಹೊಸತಲ್ಲ ಅನ್ನಿ ಆದರೆ ಇದ್ದಕ್ಕಿದ್ದ ಹಾಗೆ ನನಗೆ ನೆನಪಾಗಿದ್ದು ನಾನವನ ಹೆಸರುಮರೆತಿದ್ದೇನೆಂದು. ಆತನ ಮಾತುಕೇಳಿಸಿಕೊಳ್ಳುತ್ತಲೆ ತಲೆಗೆ ಕೆಲಸ ಕೊಟ್ಟೆ, ಎಲ್ಲವನ್ನೂrecall ಮಾಡಿಕೊಳ್ಳ ತೊಡಗಿದೆ, ಕೆಲಸಕ್ಕೆ ಬಾರದ ಅವನ ಎಲ್ಲ ಮಾತುಗಳುನೆನಪಾಗುತ್ತಿದ್ದವು ಹೆಸರೊಂದು ನೆನಪಾಗಲೊಲ್ಲದು.

ತುಂಬಾ ಕಾಮನ್ ಎನಿಸುವ ಹೆಸರದು,ಸುರೇಶ ಮಹೇಶ ರಮೇಶ ಸತೀಶಗಳ ಹಾಗೆ ಆದರೆ ಈ ಚಾಟರ್ ಬಾಕ್ಸ್ ಯಾವ ಶ ಎಂದು ಹೊಳೆಯಲೇ ಇಲ್ಲ. ಹೆಸರು ಮನುಷ್ಯನಿಗೆ ತುಂಬಾ ಮುಖ್ಯವೆನ್ನುತ್ತಾರೆ (ಸಾಕು ನಾಯಿಬೆಕ್ಕುಗಳಿಗೂ?!), ಎಲ್ಲರಿಗು ನೆನಪಿನಲ್ಲಿರುವಂತಹ ಹೆಸರಿಡಬಾರದಿತ್ತೆ? ಇವನಿಗೆ‘ಮಾತೇಶ’ ಎಂದಿಟ್ಟಿದ್ದರೆ ಹೆಚ್ಚು ಸರಿಯಿತ್ತು ಅಂದುಕೊಳ್ಳುತ್ತಿದ್ದಂತೆ ಮುಖದಲ್ಲಿಮುಗುಳುನಗೆ ಮೂಡಿತು. ತನ್ನ ಮಾತನ್ನು ಇವಳು ಎಂಜಾಯ್ ಮಾಡುತ್ತಿದ್ದಾಳೆ ಅನ್ನಿಸಿತೇನೋ ಅವನಿಗೆ ಪಾಪ ಇನ್ನೂ ಹುರುಪಿನಿಂದ ಮಾತನಾಡ ತೊಡಗಿದ. ನನಗೆ ಅವನ ಹೆಸರು ನೆನಪಾಗದೇ, ಅವನಿಗೆ ಉತ್ತರಿಸಲೂ, ಅವನನ್ನು ಮಾತಡದಂತೆ ತಡೆಯಲೂ ಆಗದೆ ಆ ಜಾಗ ಬಿಟ್ಟು ಎದ್ದುಬಿದ್ದು ಓಡಿಬರುವ ಹಾಗಾಗುತ್ತಿತ್ತು.

ನನ್ನ ಗೆಳತಿ ಒಬ್ಬರಿದ್ದಾರೆ ಆಕೆಯ ಹೆಸರು ’ಹೂ’ ಎಂದು, ಮೊದಲನೇ ಬಾರಿ ಕೇಳಿದಾಗನಿಮ್ಮ ಹಾಗೇ ನನಗೂ ’ವಿಚಿತ್ರ’ ಎನಿಸಿತ್ತು, ಆಕೆಯ ಹಲವು ನಾರ್ಥ್ಇಂಡಿಯನ್ ಗೆಳೆಯರು ಆಕೆಯ ಹೆಸರನ್ನು ಹಿಂದಿಗೆ ಭಾಷಾಂತರಿಸಿ ‘ಫೂಲ್’ (fool) ಎಂದುಕರೆಯುತ್ತಾರೆ. ಇಂಗ್ಲಿಷ್ ನಲ್ಲಿ ಆಕೆಯನ್ನು ರೇಗಿಸುವುದು ಇನ್ನು ಸುಲಭ ’who ishoo?’ ಎಂತಲೋ ’who let the dogs out, who(o) whoo whoo’ ಎಂದು ಕಿಚಾಯಿಸತೊಡಗುತ್ತೇವೆ. ವಿದೇಶಿಯರು ಯಾರಾದರು ಕೇಳಿದರೆ, ಇವರು ಹೂ ವೇರ್ ವಾಟ್ ಅಂತೆಲ್ಲ ಹೆಸರಿಟ್ಟುಕೊಳ್ಳುತ್ತಾರ ಎಂದು ತಲೆ ಕೆರೆದುಕೊಳ್ಳಬೇಕು.

ನನ್ನ ಕ್ಲೈಂಟ್ಕಂಪೆನಿಯ HR ಒಬ್ಬರ ಹೆಸರು ವಿಚಿತ್ರಾಸಿಂಗ್ ಎಂದು, ಆಕೆಗೆ ಫೋನ್ ಮಾಡಿದಾಗಲೆಲ್ಲ,ವಿಚಿತ್ರ ದಿಸ್ ಸೈಡ್ ಎಂದು ಶುರುವಿಡುತ್ತಾರೆ, ಆಕೆಯ ಹೆಸರು ಗೊತ್ತಿಲ್ಲದಕನ್ನಡಿಗರೇನಾದರೂ ಫೋನ್ ಮಾಡಿದರೆ ಹೌದೆ! ಏನಾಯ್ತು? ಎಂದೆನ್ನಬೇಕು! ಇನ್ನು ಬರಹದ ಎಲ್ಲ ಪ್ರಾಕಾರಗಳನ್ನು ಹೆಸರಿಟ್ಟುಕೊಂಡಿರುತ್ತಾರೆ ಕೇಳಬೇಕು, ಕಾದಂಬರಿ,ಸಾಹಿತ್ಯ, ಕವನ, ಪ್ರಬಂಧ, ಸಾಹಿತಿ ಇತ್ಯಾದಿ.

ಸ್ವಲ್ಪ ಯೋಚಿಸಿ ಯಾರಿಗಾದರೂ ಪರಿಚಯಿಸುವಾಗ ಇವರು ಕಾದಂಬರಿ ಎಂದು ಹೇಳಿದರೆ, ಎಷ್ಟು ಪುಟದ್ದು, ಯಾರು ಬರೆದಿದ್ದು, ಮುನ್ನುಡಿ ಬೆನ್ನುಡಿ ಯಾರದ್ದು, ಓದಬಹುದೇ? ಎಂದಂದುಬಿಟ್ಟರೆ ಆಗುವ ಪೇಚಾಟವೆಷ್ಟು?! ಈ ಹೆಸರುಗಳನ್ನು ಕೇಳಿ, ಕುಡುಮಿ ( ಪಾಪ ಹಿಂಗಾ ಹೆಸರಿಡೋದು!), ರಾಮದಾಸ್ ಗುಹಾ(ಅಜಂತಾನೋ ಎಲ್ಲೋರಾನೋ ಕೇಳ್ಬೇಕು), ನನ್ನ ಸ್ನೇಹಿತರೊಬ್ಬರು ತಮ್ಮ ಅವಳಿ ಮಕ್ಕಳಿಗೆ’ನಗು’ ಮತ್ತು ’ನಲಿ’ ಎಂದು ಹೆಸರಿಟ್ಟಿದ್ದರು (ಇನ್ನೊಂದು ಮಗು ಆಗಿದ್ದರೆ ’ಕುಣಿ’ಎಂದು ಹೆಸರಿಡೋರಿದ್ದರ ಕೇಳ್ಬೇಕಿತ್ತು). ಒಂದಷ್ಟು ತಮಿಳು ಹೆಸರುಗಳನ್ನುಉಚ್ಚರಿಸುವುದಂತು ಕಬ್ಬಿಣದ ಕಡಲೆ ಬಾಯಿಗೆ ಹಾಕಿಕೊಂಡು ಕಟುಮ್ ಎಂದು ಕಡಿದಂತೆ. ತಮಿಳಿನಲ್ಲಿ ಎರಡು ಳ ಗಳಿವೆ. ಒಂದು ಸಾಮಾನ್ಯ ಳ ಇನ್ನೊಂದು ರ್ಳ, ಹೆಚ್ಚಿನ ತಮಿಳು ಹೆಸರುಗಳಲ್ಲಿ ಈ ರ್ಳ ಬಳಸುತ್ತಾರೆ. ಉದಾಹರಣೆಗೆ ಅರಿವರ್ಳಗನ್, ಎರ್ಳಿಲ್ ಅಳಗಿ, ಮಲರ್ ವಿರ್ಳಿ (ಉತ್ತರ ಭಾರತೀಯರ ಬಾಯಲ್ಲಿ ಇದು ಮಲರ್ ವಿಲಿ ಎಂದಾಗುತ್ತದೆ ಜೋರಾಗಿ ಕರೆದರೆ ಎಲ್ಲಿ ’ಇಲಿ’ ’ಇಲಿ’ ಎಂದು ಹೆದರಿಕೊಳ್ಳಬೇಕು), ಪುಗರ್ಳೇಂದ್ರನ್ (ಇದನ್ನು ಸರಿಯಾಗಿ ಉಚ್ಚರಿಸಿದರೆ ನೀವು ಸಂಸ್ಕೃತ ಪಂಡಿತರು), ಯಾರ್ಳಿನಿ ಇತ್ಯಾದಿ.

ಉತ್ತರ ಭಾರತದ ಕೆಲವು ಸರ್ ನೇಮ್ surname ಗಳು ಅಷ್ಟೇ ತಮಾಶೆಯೆನಿಸುತ್ತವೆ, ಥಾಂಬೆ, ಗಾವ್ಡೆ, ’ಚಟ್ಟ’ರ್ಜಿ, ಮುಖ್ಯೋಪಧ್ಯಾಯ್ (ಯಾವ ಸ್ಕೂಲಿಗೆ ಎಂದು ಕೇಳೀರಿ ಮತ್ತೆ!), ಚಟ್ಟೋಪಧ್ಯಾಯ್ (ಚಟ್ಟ ಕಟ್ಟೋದರಲ್ಲಿ ಫೇಮಸ್ ಇರ್ಬೇಕು).

5 ಟಿಪ್ಪಣಿಗಳು Post a comment
  1. ಸಕ್ಕತ್ ಬರಹ. ಓದಿ ಖುಶಿಯಾಯಿತು.

    ಕುಡುಮಿ, ’ಚಟ್ಟೋ’ಪಾದ್ಯಾಯ, ವಿವೇಕ್ ತಲ್ಲೂರಿ (vivek tulluri) ಪಾಪ 😉 😉

    ಅದಿರಲಿ, ನೀವು ಹೇಳಿದ “ರ್ಳಿ” ನಿಜಕ್ಕೂ ಉಚ್ಚರಿಸುವುದು ರ್ಳಿ ಅಲ್ಲ, ಳ ಜೊತೆಗೆ ತುಸುವೇ ತುಸು ಷ mix ಮಾಡಬೇಕು (ಳ್ಷ ಅಂತಲ್ಲ, ಳ ಮತ್ತು ಷ ಎರಡನ್ನೂ ಒಟ್ಟಿಗೆ ನುಡಿಯುವಂತೆ). ಹಾಗೇ ತಮಿಳಿನಲ್ಲಿ ಎರಡು ರ ಗಳೂ ಇವೆ. ಒಂದು ಮಾಮೂಲು ರ ಮತ್ತೊಂದು ರ ಷ ಮಿಶ್ರಣ. ಈ ವಿಶೇಷ ಳ ಮತ್ತು ರ ಗಳು ಬರೀ ತಮಿಳಿನಲ್ಲಷ್ತೇ ಅಲ್ಲ ಮಲಯಾಳದಲ್ಲೂ ಇದೆ, ಕನ್ನಡದಲ್ಲೂ ಇತ್ತು (ಉಚ್ಚರಿಸುವುದು ಕಷ್ಟವೆಂದು ಜನ ಬಿಟ್ಟುಬಿಟ್ಟಿದ್ದಾರೆ, ಬೇಕಿದ್ದರೆ ಈಗಲೂ ಬಳಸಬಹುದು – ೞ, ಱ). ಅದೇನೇ ಇರಲಿ ಇವು ಖಂಡಿತಾ ಸಂಸ್ಕೃತದ್ದಲ್ಲ, ನಮ್ಮದೇ ದ್ರಾವಿಡ ಅಕ್ಷರಗಳು.

    ಉತ್ತರ
  2. abhi082941@gmail.com's avatar
    ಜೂನ್ 27 2011

    ಸ್ವಲ್ಪ ಅತಿಯಾಯಿತು ಅನ್ನಿಸ್ತಾ ಇದೆ ನಿಮ್ಮ ಕೊನೆಯ ಹಾಸ್ಯ ವಿಡ೦ಬನೆ

    ಉತ್ತರ
    • ಹೌದೇ, ಅವರೇನು ಅಶ್ಲೀಲವಾಗಿ ಮಾತಾಡಿಲ್ಲ ಬಿಡಿ, ಕೆಲವು ಪದಗಳ ಬಳಕೆ ಅವಷ್ಟಕ್ಕೆ ಅವೇ ಅಶ್ಲೀಲವಾಗದು; ಸಂದರ್ಭಕ್ಕೆ ತಕ್ಕಂತೆ ತಾನೆ ಹೇಳಿದ್ದಾರೆ? ಯಾವ ಉತ್ತರಭಾರತದವನ ಬಾಯಲ್ಲೂ ಅಂಥ ಅಭಾಸ ಆಗುವುದೇ ಹೌದು; ಅದನ್ನು ಹೇಳಿದ ಮಾತ್ರಕ್ಕೆ ಅಶ್ಲೀಲವಾಗುವುದೇ?

      ನಿಲುಮೆ ಈ ಸಾಲುಗಳನ್ನು ತೆಗೆದುಹಾಕಿದ್ದು ನೋಡಿ ಆಶ್ಚರ್ಯವಾಯಿತು 😦

      ಉತ್ತರ
  3. sriharsha's avatar
    sriharsha
    ಜೂನ್ 27 2011

    ಕಡೆಯ ಸಾಲುಗಳನ್ನು ತೆಗೆದು ಹಾಕಿದ್ದು ತಪ್ಪೆನಿಸುತ್ತದೆ.

    ಇಲ್ಲೊಬ್ಬ ಮಗಳಿಗೆ ಸಿಂಚನ ಅಂತ ಹೆಸರಿಟ್ಟಿದ್ದಾನೆ. ಮಗನಿಗೆ “ಲೇಪನ” ಅಂತ ಹೆಸರಿಡು ಅಂತ ಚಿಲ್ಲರೆ ಸಲಹೆ ಕೊಟ್ಟೆ 😉

    ಉತ್ತರ
  4. maaysa's avatar
    maaysa
    ಜೂನ್ 27 2011

    I had a batch-mate called “Tulleshwari Barman”. She is a northeast Indian. If you wish search in the internet.
    ನಾನು “Tulleshwari Barman” ಎಂಬ ಬ್ಯಾಚ್-ಸಹ ಹೊಂದಿದೆ. ಆಕೆ ಈಶಾನ್ಯ ಭಾರತೀಯ. ನೀವು ಇಂಟರ್ನೆಟ್ ನಲ್ಲಿ ಹುಡುಕು ಬಯಸಿದಲ್ಲಿ.
    Read phonetically
    Nānu”Tulleshwari Barman” emba byāc-saha hondide. Āke īśān’ya bhāratīya. Nīvu iṇṭarneṭ nalli huḍuku bayasidalli.

    ಉತ್ತರ

Leave a reply to abhi082941@gmail.com ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments