ವಿಷಯದ ವಿವರಗಳಿಗೆ ದಾಟಿರಿ

Archive for

7
ಜೂನ್

ಬಾಲ್ಯಕಾಲವೇ ನೀ ಇನ್ನೊಮ್ಮೆ ಬಾರೆಯಾ?

– ಡಾ.ಶೈಲಾ ಯು.

ಮಾರಣಕಟ್ಟೆಯ ಜಾತ್ರೆಗೆ ಮಕ್ಕಳೊ೦ದಿಗೆ ಹೊರಟಿದ್ದೇನೆ; ನೆನಪುಗಳು ಮರುಕಳಿಸುತ್ತಿವೆ.   ಅವರನ್ನು ನೆಪವಾಗಿಟ್ಟುಕೊ೦ಡು ಎಷ್ಟು ವರ್ಷಗಳಿ೦ದ ನನ್ನ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದೇನೋ? ನನಗೇ ನೆನಪಿಲ್ಲ. ಯಾವುದಕ್ಕೂ ಬಿಡುವಿಲ್ಲ ಬಿಡುವಿಲ್ಲ ಎ೦ಬ ಗೊಣಗಾಟವನ್ನು ತತ್ಕಾಲಕ್ಕೆ ನಿಲ್ಲಿಸಿ, ಮಕ್ಕಳಿಗೂ ಕಿ೦ಚಿತ್ ಅನುಭವ ಸಿಗುವುದೇ ಎ೦ಬ ಕಾತುರದಲ್ಲಿ ನನ್ನ ಅಕ್ಕರೆಯ ಅಜ್ಜಿ ನಮಗೆಲ್ಲ ಪ್ರೀತಿ ಉಣಿಸಿದ ಆವರಣ ಈಗ ಹೇಗಿದೆ ನೋಡಲು ಹೋಗುತ್ತಿದ್ದೇನೆ. ಅ೦ದು ಆ ಊರು ಎಷ್ಟೊ೦ದು ಆತ್ಮೀಯವಾಗಿತ್ತು; ಆ ದಿನಗಳು ಎಷ್ಟೊ೦ದು ಚೆನ್ನಾಗಿದ್ದವು!…
ಕು೦ದಾಪುರ ತಾಲೂಕಿನ ಅ೦ದಿನ ಒ೦ದು ಕುಗ್ರಾಮ ನನ್ನಜ್ಜಿಯ ಮನೆರುವ ಊರು. ಸುತ್ತಲಿನ ಇಳಿಜಾರಾದ ಪ್ರದೇಶದಲ್ಲಿ ಸಮತಟ್ಟಾದ ಗದ್ದೆಗಳು. ಅವುಗಳ ತಪ್ಪಲಲ್ಲಿ ನನ್ನಜ್ಜಿಯ ಮನೆ. ‘ಅಜ್ಜಿ ಮನೆ’ ಎನ್ನುವಾಗಲೇ ನನ್ನೊಳಗೆ ಅವಿತಿರುವ ಆರ್ದ್ರತೆಯ೦ತಹ ಹೇಳಿಕೊಳ್ಳಲಾರದ ಭಾವ ನನ್ನನ್ನು ಆವರಿಸಿಕೊಳ್ಳುತ್ತದೆ. ಮನಸ್ಸು ತು೦ಬಿಬರುವ ಸವಿ ಸವಿ ನೆನಪುಗಳು. ಬಾಲ್ಯದ ರಜಾಕಾಲದಲ್ಲಿ ಅಲ್ಲಿ ಕಳೆಯುತ್ತಿದ್ದ ದಿನಗಳು ನನ್ನನ್ನು ಏಕಾ೦ಗಿಯಾಗಿದ್ದಾಗಲೆಲ್ಲ ಕಾಡುತ್ತವೆ; ನನ್ನ ಸಹಜ ಭಾವುಕ ಗುಣವನ್ನು ಉದ್ದೀಪಿಸಿ ಕಣ್ಣ೦ಚಿನಲ್ಲಿ ನೀರು ಜಿನುಗುವ೦ತೆ ಮಾಡುತ್ತವೆ. ಮತ್ತಷ್ಟು ಓದು »

5
ಜೂನ್

ಗಾಂಧಿ ಪಕ್ಷದೊಳಗಿನ ಬ್ರಿಟಿಷರು…!

– ರಾಕೇಶ್ ಶೆಟ್ಟಿ

ತಲೆಬರಹವನ್ನ ನಕಲಿ ಗಾಂಧಿಗಳ ಪಕ್ಷದೊಳಗಿನ ಬ್ರಿಟಿಷರು ಅಂತ ಓದಿಕೊಳ್ಳಿ.ಮಹಾತ್ಮರ ಹೆಸರನ್ನ ಬೇಡ ಬೇಡವೆಂದರೂ ಅನಿವಾರ್ಯವಾಗಿ ಅವರ ಹೆಸರನ್ನ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪಕ್ಷದ/ಸರ್ಕಾರದ ದೌರ್ಜನ್ಯದ ವಿರುದ್ಧ ಮಾತನಾಡುವಾಗ ಬಳಸಿಕೊಳ್ಳಲೇಬೇಕಿದೆ.

ಪ್ರಾಮಾಣಿಕ ಪ್ರಧಾನಿಯ ಸರ್ಕಾರ ಅನೈತಿಕ ಕೆಲಸಕ್ಕೆ ಕಡೆಗೂ ಕೈ ಇಟ್ಟಿದೆ.ಮಧ್ಯರಾತ್ರಿ ಕಳ್ಳರಂತೆ-ದರೋಡೆಕೋರರಂತೆ ರಾಮ್ ಲೀಲಾ ಮೈದಾನಕ್ಕೆ ನುಗ್ಗಿ ಹೆಂಗಸರು-ಮಕ್ಕಳು ಅಂತ ನೋಡದೆಯೆ ರಾಕ್ಷಸರಂತೆ ವರ್ತಿಸಿದ ರೀತಿ ನೋಡಿದರೆ, ಮನಮೋಹನ್ ಸಿಂಗ್ ಅನ್ನುವ ಸೋ-ಕಾಲ್ಡ್ ಪ್ರಧಾನಿಯ ಪ್ರಾಮಾಣಿಕತೆ ಉಪ್ಪಿನಕಾಯಿ ಹಾಕಲಿಕ್ಕಾ ಅಂತ ಕೇಳಲೆಬೇಕಾಗುತ್ತದೆ.

ಹುಚ್ಚು ನಾಯಿ ಕಡಿತಕ್ಕೆ ಚುಚ್ಚು ಮದ್ದು ತೆಗೆದುಕೊಳ್ಳದಿದ್ದರೆ ಏನಾಗುತ್ತೆ ಅನ್ನೋದಕ್ಕೆ ದಿಗ್ವಿಜಯ್ ಸಿಂಗ್ ಆಗಾಗ ನೀಡೋ ಹೇಳಿಕೆಗಳೇ ಉದಾಹರಣೆ.ಇಂತ ದಿಗ್ಗಿ ನಿನ್ನೆ ಹೇಳಿದ ಮಾತು ನೆನಪಿದೆಯಾ? ‘ಸರ್ಕಾರ ರಾಮ್ದೇವ್ ಅವರಿಗೆ ಹೆದರಿಲ್ಲ, ಒಂದು ವೇಳೆ ಹೆದರಿದ್ದರೆ ರಾಮ್ ದೇವ್ ಅವರನ್ನ ಬಂಧಿಸುತಿತ್ತು!’.ಹಾಗೇ ಹೇಳಿದ ಮಧ್ಯರಾತ್ರಿಯೇ ಬ್ರಿಟಿಷರು ಜಲಿಯನ್ ವಾಲಾಬಾಗ್ಗೆ ನುಗ್ಗಿದ ರೀತಿಯಲ್ಲೆ ನುಗ್ಗಿ ಅದೇ ರಾಮ್ ದೇವ್ರನ್ನ ಬಂಧಿಸಿದ್ದಾರೆ.ಅಂದರೆ ಕಾಂಗ್ರೆಸ್ಸ್ ಸರ್ಕಾರದ ಬೆದರಿದೆ ಅಂತಲೇ ಅರ್ಥವಲ್ಲವಾ?

ಮತ್ತಷ್ಟು ಓದು »

5
ಜೂನ್

ಹನುಮಪ್ಪನೆ ಆಗಿರಲಿ ಇಮಾಂ ಸಾಬಿಯೇ ಆಗಿರಲಿ…!

– ಪವನ್‍ ಪಾರುಪತ್ತೇದಾರ‍್, ಬೆಂಗಳೂರು

ಜನ ಲೋಕಪಾಲ್ ಜಾರಿಗಾಗಿ ಅಣ್ಣಾ ಹಜಾರೆ ಹೋರಾಟ ಮಾಡಿದ್ರು , ಮೇಧಾ ಪಾಟ್ಕರ್ ಹೋರಾಟಗಳನ್ನ ಮಾಡುತ್ತಲೇ ಇರ್ತಾರೆ. ಎರಡು ಗ್ರೇಟ್‍  ಹಗರಣ ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ಸುಬ್ರಮಣ್ಯನ್ ಸ್ವಾಮಿ ಅವರ ಹೋರಾಟವೇ ಕಾರಣ. ಈಗ ತಾನೆ ಮಿಲಿಂದ್ ಸೋಮನ್ ಹಸಿರು ಕ್ರಾಂತಿ ಮಾಡಲು 531 ಕಿ.ಮೀ. ಓಟ ಮುಗಿಸಿದ್ದಾರೆ.ಇನ್ನು ಎಷ್ಟೋ ಹೋರಾಟಗಳು ನಡಿತನೆ ಇರುತ್ತವೆ. ಆದರೆ ,ಈಗ ಬಾಬಾ ರಾಮದೇವ್ ಹೋರಾಟ ಮಾಡಲು ಪ್ರಾರಂಭ ಮಾಡಿದ ತಕ್ಷಣ ಈ  ಮಾಧ್ಯಮಗಳು ಏಕೆ ಅದಕ್ಕೆ ಕೋಮುವಾದದ ಬಣ್ಣ ಹಚ್ಹುತ್ತಿವೆಯೋ ಅ ದೇವರೇ ಬಲ್ಲ ” ಟೈಮ್ಸ್ ನೌ” ಅರ್ನಬ್ ಗೋಸ್ವಾಮಿ ಇರಬಹುದು ಅಥವಾ “ಸಿಎನ್‍ಎನ್‍”  ನ ರಾಜ್ದೀಪ್ ಸರ್ದೇಸಾಯಿ ಇರಬಹುದು, ಶಾರುಕ್ ಖಾನ್, ಸಲ್ಮಾನ್ ಖಾನ್ ,ಶೋಭಾ ಡೆ ಮುಂತಾದ ಸೆಲೆಬ್ರಿಟಿಗಳು ಆಗಿರಬಹುದು, ಬಾಬಾ ರಾಮದೇವ್ ಮಾಡುತ್ತಿರುವುದು ನಾಟಕ ಅವರಿಗೆ ಯೋಗ ಹೇಳಿಕೊಡುವುದು ಬಿಟ್ಟು ಈ ಕೆಲಸ ಯಾಕೆ ಅಂತ ಕೇಳುತಿದ್ದಾರೆ .ಕಾಂಗ್ರೆಸ್ಸ್ ನ ದಿಗ್ವಿಜಯ್ ಸಿಂಗ್ ಅಂತು ಗಂಟೆಗೊಂದು ಹೇಳಿಕೆ ರಾಮದೇವ್ ವಿರುದ್ದ ನೀಡುತಿದ್ದಾರೆ  ಆದರೆ ಅತ್ತ ಅವರ ಪಕ್ಷದ ಹಿರಿಯ ಸಚಿವರೆಲ್ಲ ಬಾಬ ಅವರನ್ನ ಮೀಟ್ ಮಡಿ ಕಾಂಪ್ರಮೈಸ್‍ ಅಗೋ ತಂತ್ರ ಹೆಣೆಯುತಿದ್ದಾರೆ .

ಇಷ್ಟಕ್ಕೂ ಮಾಧ್ಯಮದವರು ಕೋಮುವಾದದ ಬಣ್ಣ ಕಟ್ಟುತ್ತಿರುವುದು ಯಾಕೆ ರಾಮದೇವ್ ಅವರು ಕಾವಿ ವಸ್ತ್ರ ಧರಿಸಿ ಮರದ ಪಾದರಕ್ಷೆ ಧರಿಸಿದ್ದಾರೆ ಅಂತಲೇನು?? ಭ್ರಷ್ಟಾಚಾರದ ವಿರುದ್ದ ಹೋರಾಡಲು ಕಾವಿಯದರೇನು ಕಪ್ಪು ವಸ್ತ್ರವಾದರೇನು ? ಮರದ ಚಪ್ಪಲಿ ಅದರೇನು ADIDAS ಶೂ ಅದರೇನು? ಭಾರತದ ಪ್ರತಿಯೊಬ್ಬ ಪ್ರಜೆಗೂ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಹಕ್ಕಿದೆ, ಎಲ್ಲ ಡಾಕುಮೆಂಟ್ ಸರಿ ಇದ್ದರು ಪೋಲಿಸ್ ಗಾಡಿ ಅಡ್ಡ ಹಾಕಿದ ಮೇಲೆ 50 ರೂಪಾಯಿ ಲಂಚ ಕೊಟ್ಟ ಪ್ರತಿಯೊಬ್ಬ ನಾಗರಿಕನಿಗೂ ಅವಾಜ್ ಹಾಕುವ ತಾಕತ್ತಿದೆ. ಈ ಎಲ್ಲ ಭಾರತದ ಪ್ರಜೆಗಳಲ್ಲಿ ಬಾಬಾ ರಾಮದೇವ್ ಸಹ ಒಬ್ಬರು ಎಂದು ಏಕೆ ಮಾಧ್ಯಮದವರು ಬಿಂಬಿಸಬಾರದು? ಮಾಧ್ಯಮಗಳಲ್ಲಿ ಅಪ ಪ್ರಚಾರ ಮಾಡಿ ಹೋರಾಟಕ್ಕೆ ತೊಡಕು ಮಾಡಲು ಕಾಂಗ್ರೆಸ್ ಗೆ ಸಹಾಯ ಮಾಡುವ ತಂತ್ರವಾ? ರಾಜಕೀಯ ವ್ಯಕ್ತಿಗಳಿಗೆ ಹೋರಾಟದಲ್ಲಿ ನಿಷೇಧ ಇದೆ ಆದ್ದರಿಂದ ಈ ಹೋರಾಟದಲ್ಲಿ ಯಾವುದೇ ಪಕ್ಷಗಳಿಗೆ ಲಾಭವಂತು ಇಲ್ಲ.ಈ ಹೋರಾಟದ ಯೆಶಸ್ಸಿನಿಂದ ಲಾಭವಗೋದು ನಾಗರಿಕರಿಗೆ. ಆದರೆ ವಿರೋಧ ಪಕ್ಷದಲ್ಲಿರುವ ಬಿಜೆಪಿ ತನ್ನ ಚುನಾವಣೆಯ ಪ್ರಣಾಳಿಕೆಯಲ್ಲೇ ಕಪ್ಪು ಹಣವನ್ನು ತರುವ ಪ್ರಸ್ತಾವನೆ ಮಾಡಿತ್ತು. ಈಗ ಬೆಂಬಲ ಸೂಚಿಸಿದೆ. ಅದಕ್ಕೆ ಮಾಧ್ಯಮಗಳ ಕಣ್ಣಿಗೆ ಬಾಬಾ ರಾಮದೇವ್ ಬಿಜೆಪಿ ಏಜೆಂಟ್ ಆಗಿದ್ದಾರೆ.

ಮತ್ತಷ್ಟು ಓದು »

5
ಜೂನ್

ರಾಮದೇವ್,ಮೀಡಿಯಾ ಮತ್ತು ಸಂಪಾದಕೀಯ

– ಮಹೇಶ ಪ್ರಸಾದ ನೀರ್ಕಜೆ

ಸಂಪಾದಕೀಯ ತಂಡ ಬರೆದ “ಸಂವಿಧಾನವನ್ನೇ ಒಪ್ಪದ ರಾಮದೇವ ಸತ್ಯಾಗ್ರಹಕ್ಕೆ ಇಳಿದಿದ್ದಾರೆ… ಜೈ ಹೋ! ” ಈ ಲೇಖನದ ಬಗ್ಗೆ ನನ್ನ ಕೆಲವು ಅನಿಸಿಕೆಗಳು. ಇವು ಒಟ್ಟಾರೆಯಾಗಿ ಮಾಧ್ಯಮಗಳ ಬೇಜವಾಬ್ದಾರಿತನದ ಬಗ್ಗೆ ನನ್ನ ಕೆಲವು ಟಿಪ್ಪಣಿಗಳು ಕೂಡ ಹೌದು. ಸದಾ ಮಾಧ್ಯಮದ ತಪ್ಪು ಒಪ್ಪುಗಳನ್ನು ಪ್ರಕಟಿಸುವ ತಂಡ ಅದರ ಜೊತೆಜೊತೆಗೆ ಬೇರೆ ಕೆಲವು ವಿಚಾರಗಳನ್ನು ಕೂಡ ಬರೆಯುತ್ತದೆ. ಅದರಲ್ಲೂ ವಿಶೇಷವಾಗಿ ಧಾರ್ಮಿಕ ಸಂಪ್ರದಾಯವಾದಿಗಳ ಬಗ್ಗೆ, ಮೂಢ ನಂಬಿಕೆಗಳ ಬಗ್ಗೆ ಸಾಕಷ್ಟು ಬರಹಗಳನ್ನು ಬರೆದಿದ್ದಾರೆ. ಅವರ ಕೆಲವು ಪ್ರಯತ್ನಗಳ ಬಗೆಗೆ ನನಗೆ ಹೆಮ್ಮೆಯಿದೆ. ಅದರಲ್ಲೂ ಜಿ ಕನ್ನಡ ವಾಹಿನಿಯಲ್ಲಿ ನಡೆಯುತ್ತಿದ್ದ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮದ ಬಗೆಗಿನ ವಿರೋಧ ಎಲ್ಲರ ಗಮನ ಸೆಳೆದಿತ್ತು. ಆದರೆ ಮೊದಲಿನಿಂದಲೂ ಕೂಡ ನನಗೆ ಸಂಪಾದಕೀಯ ತಂಡದ ಬಗೆಗೆ ಕೆಲವು ಅನುಮಾನಗಳಿವೆ. ಮೊದಲನೆಯದಾಗಿ ತನ್ನ TRP ಹೆಚ್ಚಿಸಿ ಕೊಳ್ಳಲೋ ಎಂಬಂತೆ ಬ್ಲಾಗಿನಲ್ಲಿ ಎಲ್ಲೆಂದರಲ್ಲಿ ಅನಾಮಿಕ ಪ್ರತಿಕ್ರಿಯಗಳ ಮಹಾಪೂರ. ಈ ಪ್ರತಿಕ್ರಿಯೆಗಳನ್ನು ಯಾರು ಬರೆಯುತ್ತಾರೆ, ಅವರ ಪ್ರತಿಕ್ರಿಯೆಗಳಲ್ಲಿ ಏನಾದರು ಕುತ್ಸಿತ ಉದ್ದೇಶಗಳಿವೆಯೇ ಇತ್ಯಾದಿ ಪ್ರಶ್ನೆಗಳು ನನಗೆ ಮೊದಲಿನಿಂದಲೂ ಇವೆ. ಅಲ್ಲದೆ ಮೂಢ ನಂಬಿಕೆಯನ್ನು ವಿರೋಧಿಸುವ ನೆಪದಲ್ಲಿ ಎಲ್ಲಾ ಅಧ್ಯಾತ್ಮಿಕ ವ್ಯಕ್ತಿಗಳನ್ನು ಟೀಕಿಸುವ ಹುನ್ನಾರವೋ ಎಂದು ಕೂಡ ಸಂಶಯವಿದೆ. ಆದರೆ ಕೆಲವು ಬರಹಗಳಲ್ಲಿ ಉತ್ತಮ ಅಧ್ಯಾತ್ಮಿಕ ಮೌಲ್ಯಗಳನ್ನು ಅದರಲ್ಲೂ ವಿವೇಕಾನಂದ, ಬುಧ್ಧ ಗಾಂಧೀಜಿ ಬಗ್ಗೆ ಬರೆದಿದ್ದೂ ಹೌದು. ಒಟ್ಟಿನಲ್ಲಿ ನನ್ನ ಮಟ್ಟಿಗೆ ಸಂಪಾದಕೀಯ ವಿರೋಧಾಭಾಸಗಳ ಗೂಡು. ಇರಲಿ, ಈಗ ಪ್ರಸ್ತುತ ಲೇಖನದ ಬಗ್ಗೆ ಹೇಳುವುದಾದರೆ ನನ್ನ ಪ್ರಕಾರ ಇದರಲ್ಲಿ ಹಲವಾರು ತಪ್ಪುಗ್ರಹಿಕೆಗಳು, ಮತ್ತು ತಪ್ಪು ಮಾಹಿತಿಗಳು ಕಾಣಸಿಗುತ್ತವೆ. ಅವುಗಳನ್ನು ಪಟ್ಟಿ ಮಾಡಿ, ನಿಜ ಸಂಗತಿಯನ್ನು ಹೊರಗೆಡಹುವ ಒಂದು ಪ್ರಯತ್ನ ಇದು.

ಮತ್ತಷ್ಟು ಓದು »

4
ಜೂನ್

ಬಾನಿನಂಗಳದಲ್ಲೊಂದು ಸೌಂದರ್ಯ ಸ್ಪರ್ಧೆ

ನವನೀತ್ ಪೈ

ನಿಸರ್ಗ ದೇವತೆಯ ಎಲ್ಲಾ ಋತುಗಳಿಗೂ ತನ್ನದೇ ಆದ ಸೌಂದರ್ಯವಿದೆ. ಕೆಲವರಿಗೆ  ಮುಂಜಾವಿನ ಮಂಜು ಸುಂದರ, ಕೆಲವರಿಗೆ ಮಳೆಗಾಲದ ಧಾರಾಕಾರ ಮಳೆ ಸುಂದರ, ಕೆಲವರಿಗೆ ಮುಸ್ಸೊಜೆಯ ಸೂರ್ಯಾಸ್ತ ಸುಂದರವಾದರೆ ಕೆಲವರಿಗೆ ಪೂರ್ಣಿಮೆಯ ರಾತ್ರಿ ಸೊಬಗು.
ಅಂದು ನಿದ್ದೆ ಬಾರದ ಕಾರಣ ಯಾವುದೋ ಒಂದು ಕಾದಂಬರಿಯ ಪುಟ ತಿರಿಗಿಸುತ್ತಾ ಕುಳಿತಿದ್ದೆ. ನಡುವೆ ತುಸು ವಿರಾಮ ಬೇಕೆನಿಸಿ ಅಂಗಳಕ್ಕೆ ಕಾಲಿಟ್ಟಾಗಷ್ಟೇ ತಿಳಿಯಿತು ಅಂದು ಹುಣ್ಣಿಮೆಯೆಂದು. ಬಾನಿನಂಗಳದಲ್ಲಿ ಚಂದಿರ ತನ್ನ ಸಮಸ್ತ ಕಾಂತಿಯಿಂದ ಕಂಗೊಳಿಸುತ್ತಾ ಚಿನ್ನದ ಬಟ್ಟಲಿನಂತೆ ಕಾಣಿಸುತ್ತಿದ್ದ. ನೆರೆಯ ಹೊಲಗಳಲ್ಲಿ ಹಾಲು ಚೆಲ್ಲಿದಂತೆ ಬೆಳದಿಂಗಳು ಹಬ್ಬಿತ್ತು. ತಂಗಾಳಿ ಗಿಡ ಮರಗಳನ್ನು ಅಪ್ಪಿ ಮಾಡುವ ನಿನಾದ ಇಂಪಾಗಿತ್ತು. ಚಂದಿರನನ್ನು ನೋಡುತ್ತಾ ಕುಳಿತುಕೊಳ್ಳಬೇಕೆನಿಸಿತು. ಚಂದಿರನೇತಕೆ ಓಡುವನಮ್ಮ ಮೋಡಕೆ ಬೆದರಿಹನೆ ಹಾಡು ಬಾಲ್ಯವನ್ನು ನೆನಪಿಸಿತು. ಚಂದಿರನಿಗೆ ಆಕರ್ಷಿತವಾಗಿ ಹಾರುತ್ತಿದ್ದ ಬೆಳ್ಳಕ್ಕಿ ಚಂದಿರನಲ್ಲೇ ಮನೆ ಮಾಡಿತು. ಈ ನಯನ ಮನೋಹರ ದೃಶ್ಯಕ್ಕೆ ಕಣ್ಣುಗಳೇ ಕ್ಯಾಮರಗಳಾದವು.
ಗಗನದಲ್ಲಿ ಚಂದಿರ ಮತ್ತು ತಾರೆಗಳ ನಡುವೆ ಸೌಂದರ್ಯ ಸ್ಪರ್ಧೆ ಏರ್ಪಟ್ಟಿತು. ಆಗಸವೇ ವೇದಿಕೆಯಾಯಿತು, ಮೋಡಗಳೇ ಪರದೆಗಳಾದವು, ಪರ್ವತ ಶ್ರೇಣಿಗಳೇ ನಿರ್ಣಾಯಕರಾದವು, ಸಮುದ್ರ ಸಾಗರಗಳೇ ಪ್ರೇಕ್ಷಕರಾದವು. ಮೋಡದ ಪರದೆ ಸರಿದಾಗ ಸ್ಪರ್ಧೆ ಆರಂಭವಾಯಿತು. ಚಂದಿರನ ಸೊಬಗನ್ನು ನೋಡಿ ಸಾಗರಗಳು ಚಂದಿರನನ್ನು ಅಪ್ಪಲು ಉಕ್ಕಿದವು.  ಚಂದಿರ ಮಾರ್ಜಾಲದಂತೆ ಪೂರ್ವದಿಂದ ಪಶ್ಚಿಮಕ್ಕೆ ಅಡಿಯಿರಿಸುತ್ತಿದ್ದ. ನಿರ್ಣಾಯಕರು ಚಂದಿರನ ಮಾರ್ಜಾಲ ನಡಿಗೆಯಿಂದ ಆಕರ್ಷಿತರಾಗಿ ಪ್ರಾಥಮಿಕ ಸುತ್ತುಗಳಲ್ಲಿ ಚಂದಿರನಿಗೆ ಹೆಚ್ಚಿನ ಅಂಕಗಳನ್ನು ನೀಡಿದರು. ಅಹಂಕಾರದಿಂದ ಬೀಗಿದ ಚಂದ್ರ ತಾರೆಗಳನ್ನು ಹೀಯಾಳಿಸಿದ. ಬಾನಿಗೆಲ್ಲಾ ತಾನೇ ರಾಜ ಎಂದು ಮೆರೆದ.
ಸಂಘೇ ಶಕ್ತಿ ಕಲೌ ಯುಗೇ ಎಂದು ಅರಿತು ತಾರೆಗಳೆಲ್ಲಾ ಒಂದಾದರು. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಮನಗೊಂಡರು. ಸೋಲೇ ಗೆಲುವಿನ ಸೋಪಾನ ಎಂಬುದನ್ನು ಅರಿತು ಕಷ್ಟಪಟ್ಟು ಮುಂದಿನ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಚಂದಿರನು ಎಲ್ಲರನ್ನು ಹೀಯಾಳಿಸಿದ್ದರಿಂದ ಏಕಾಂಗಿಯಾದ. ಕೃಷ್ಣ ಪಕ್ಷ ಆರಂಭವಾಯಿತು. ದಿನೇ ದಿನೇ ಚಂದಿರ ಕುಗ್ಗುತ್ತಾ ಹೋದ ಮಾತ್ರವಲ್ಲದೆ ಸ್ಪರ್ಧೆಗಳಲ್ಲಿ ಆಸಕ್ತಿ ಕಳೆದುಕೊಂಡು ತಡವಾಗಿ ಆಗಮಿಸುತ್ತಿದ್ದ. ತಾರೆಗಳು ಏಕತಾನತೆಯಿಂದ ಒಂದೇ ರೀತಿಯಾಗಿ ಮಿಂಚುತ್ತಿದ್ದವು. ಚಂದಿರನ ಬೆಳದಿಂಗಳು ಕ್ಷೀಣಿಸುತ್ತಿರುವಾಗ ತಾರೆಗಳ ಬೆಳಕೆ ಬಾನನ್ನು ತುಂಬಿತು. ಚಂದಿರನಿಲ್ಲದ ಬಾನನ್ನು ಊಹಿಸಬಹುದಾದರೂ ತಾರೆಗಳಿಲ್ಲದ ಬಾನನ್ನು ಊಹಿಸಲೂ ಸಾಧ್ಯವಿಲ್ಲ. ಅಂತು ಸ್ಪರ್ಧೆಯ ನಿರ್ಣಾಯಕ ಘಟ್ಟ ಬಂದೇ ಬಿಟ್ಟಿತು. ಆ ದಿನ ಸೋಲು ತನಗೆ ಕಟ್ಟಿಟ್ಟ ಬುತ್ತಿ ಎಂದು ತಿಳಿದ ಚಂದಿರ ಸ್ಪರ್ಧೆಗೆ ಆಗಮಿಸಲೇ ಇಲ್ಲ. ಅಂದು ಅಮಾವಾಸ್ಯೆ ಆಗಿತ್ತು ತಾರೆಗಳ ಬೆಳಕೇ ಬಾನನ್ನು ತುಂಬಿತ್ತು. ಸೌಂದರ್ಯ ಸ್ಪರ್ಧೆಯನ್ನು ತಾರೆಗಳೇ ಗೆದ್ದರು. ಚಂದಿರನನ್ನು ತಮ್ಮೊಂದಿಗೆ ಸೇರಿಸಿಕೊಂಡರು. ಚಂದಿರನು ಶುಕ್ಲ ಪಕ್ಷದಲ್ಲಿ ಹಿಗ್ಗುತ್ತಾ ಸಾಗಿದ. ಮತ್ತಷ್ಟು ಓದು »

3
ಜೂನ್

ಗೋವಿ೦ದ ಪೈ ಎಂಬ ಅದ್ಭುತ…!

-ಸಾತ್ವಿಕ್

ಕನ್ನಡದ ಮೊದಲ ರಾಷ್ಟ್ರಕವಿ ಗೋವಿ೦ದ ಪೈ ಅವರದು ಬಹುಮುಖೀ ವ್ಯಕ್ತಿತ್ವ. ಸಾಹಿತ್ಯಿಕ ಸಾಧನೆಯ೦ತೆ ಸ೦ಶೋಧನಾ ಕಾರ್ಯದಲ್ಲೂ ಅವರದು ಎತ್ತಿದ ಕೈ. ಬಹುಭಾಷಾ ವಿಶಾರದ ಕೂಡ. ಗೋವಿ೦ದ ಪೈ ಅವರದು ಶ್ರೀಮ೦ತ ಸಾಹುಕಾರ ಬಾಬಾ ಪೈ ಮನೆತನ. ಅವರ ಜನನ ೧೮೮೩ ರ ಮಾರ್ಚ್ ೨೩ ನೆಯ ತಾರೀಕಿನ೦ದು ತಾಯಿ ದೇವಕಿಯಮ್ಮ ಅವರ ತವರುಮನೆಯಾದ ಮ೦ಜೇಶ್ವರದಲ್ಲಿ ಆಯಿತು. ದೇವಕಿಯಮ್ಮ ಶ್ರೀಮ೦ತರಾದ ಲಕ್ಷ್ಮಣ ಶ್ಯಾನುಭೋಗರ ಮಗಳು. ಗೋವಿ೦ದ ಪೈ ಮತ್ತು ಅವರ ಸೋದರ, ಸೋದರಿಯರು ಕೂಡ ಮ೦ಜೇಶ್ವರದಲ್ಲೇ ಹುಟ್ಟಿಬೆಳೆದವರು. ಗೋವಿ೦ದ ಪೈ ಅವರ ಹೆಸರಿನ ಜೊತೆಗಿರುವ ಎ೦. ಅಕ್ಷರವನ್ನು ಇದರಿ೦ದಾಗಿಯೇ ಮ೦ಜೇಶ್ವರ ಗೋವಿ೦ದ ಪೈ ಎ೦ದು ಗುರುತಿಸುವುದು೦ಟು. ಆದರೆ ಅವರ ತ೦ದೆಯ ಮನೆ ಮ೦ಗಳೂರು. ಅವರ ತ೦ದೆ ಶ್ರೀ ಸಾಹುಕಾರ ತಿಮ್ಮಪ್ಪ ಪೈ ಅವರಿಗಿದ್ದ ನಾಲ್ಕು ಗ೦ಡುಮಕ್ಕಳಲ್ಲಿ ಇವರೇ ಹಿರಿಯವರು. ಅಲ್ಲದೇ ಮೂವರು ಹೆಣ್ಣುಮಕ್ಕಳು ಕೂಡಾ ಇದ್ದರು. ಗೋವಿ೦ದ ಪೈ ಅವರಿಗೆ ಮಾಳಪ್ಪ ಪೈ ಎ೦ಬ ಮನೆಯ ಪ್ರೀತಿಯ ಅಡ್ಡ ಹೆಸರು ಇತ್ತೆ೦ದು ತಿಳಿದುಬರುತ್ತದೆ.
ಗೋವಿ೦ದ ಪೈಗಳ ಆರ೦ಭಿಕ ವಿದ್ಯಾಭ್ಯಾಸ ಮ೦ಗಳೂರಿನ ಮಿಶನ್ ಶಾಲೆಯಲ್ಲಿ ನಡೆಯಿತು. ನ೦ತರ ಕೆನರಾ ಹೈಸ್ಕೂಲ್‌ನಲ್ಲಿ ಸ್ಕೂಲ್ ಫೈನಲ್ ಪರೀಕ್ಷೆ ಪಾಸು ಮಾಡಿದರು. ಮ೦ಗಳೂರಿನ ಸರಕಾರಿ ಕಾಲೇಜಿನಲ್ಲಿ ಇ೦ಟರ್ ಮೀಡಿಯೇಟ್ ವಿದ್ಯಾಭ್ಯಾಸವನ್ನು ಮುಗಿಸಿ, ಮು೦ದಿನ ಓದಿಗಾಗಿ ಮದ್ರಾಸಿನ ಕ್ರಿಶ್ಚಿಯನ್ ಕಾಲೇಜು ಸೇರಿದರು. ಅಲ್ಲಿ ಪೈ ಅವರಿಗೆ ಸಹಪಾಠಿಯಾಗಿ ದೊರೆತದ್ದು ದೇಶದ ಪ್ರಸಿದ್ಧ ತತ್ವಶಾಸ್ತ್ರಜ್ಞರಾದ, ಮು೦ದೆ ರಾಷ್ಟ್ರಪತಿಯೂ ಆದ ಡಾ.ಎಸ್.ರಾಧಾಕೃಷ್ಣನ್ ಅವರು. ಇ೦ತಹ ಪರಿಸರದಿ೦ದ ಪೈ ಅವರ ಅನುಭವ ಕ್ಷೇತ್ರ ವಿಸ್ತೃತವಾಯಿತು. ಅಲ್ಲದೆ ಇವರು ಬಿ.ಎ. ಕಲಿಯುವಾಗಲೇ ಲ್ಯಾಟಿನ್, ಫ್ರೆ೦ಚ್ ಮೊದಲಾದ ಪಾಶ್ಚಾತ್ಯ ಭಾಷೆಗಳನ್ನೂ ಸ೦ಸ್ಕೃತ, ಬ೦ಗಾಳಿ, ಪಾಳಿ ಮು೦ತಾದ ಭಾರತೀಯ ಭಾಷೆಗಳನ್ನೂ ಕಲಿತರು. ಇವರಿಗೆ ಇಪ್ಪತ್ತೆರಡು ಭಾಷೆಗಳ ಮೇಲೆ ಪ್ರಭುತ್ವವಿತ್ತು. ಈ ಮಧ್ಯೆ ಅವಘಡವೊ೦ದು ಸ೦ಭವಿಸಿತು. ಇವರು ಬಿ.ಎ ಪರೀಕ್ಷೆಯ ಇ೦ಗ್ಲಿಷ್ ಭಾಷೆಯ ಪತ್ರಿಕೆಗಳನ್ನು ಮಾತ್ರ ಬರೆದಿದ್ದರು. ಆಗ ತ೦ದೆಯವರು ಅನಾರೋಗ್ಯಕ್ಕೆ ತುತ್ತಾದ ವಿಷಯ ತಿಳಿಯಿತು. ಮದರಾಸಿನಿ೦ದ ಹಿ೦ದಿರುಗಿದ ಪೈ ಅವರು ಮತ್ತೆ ಮದ್ರಾಸಿಗೆ ಮರಳಿಲ್ಲ. ಮು೦ದೆ ಮನೆಯೇ ಅವರ ಸರ್ವಸಾಧನೆಯ ಕೇ೦ದ್ರವಾಯಿತು. ಬಿ.ಎ. ಪರೀಕ್ಷೆಯಲ್ಲಿ ಬರೆದ ಇ೦ಗ್ಲಿಷ್ ಭಾಷೆಯ ಪತ್ರಿಕೆಯ ಫಲಿತಾ೦ಶವೂ ಪ್ರಕಟಗೊ೦ದು ಸುವರ್ಣ ಪದಕವೂ ಸಿಕ್ಕಿತು. ಆದರೆ ಗೋವಿ೦ದ ಪೈ ತಮ್ಮ ವಿದ್ಯಾಭ್ಯಾಸವನ್ನು ಮದ್ರಾಸಿನಲ್ಲಿ ಮತ್ತೆ ಮು೦ದುವರೆಸಲು ಆಸಕ್ತರಾಗಲಿಲ್ಲ.ತಮ್ಮ ಬಿ.ಎ ವಿದ್ಯಾಭ್ಯಾಸವನ್ನು ನಿಲ್ಲಿಸಿ, ಮ೦ಜೇಶ್ವರದಲ್ಲಿ ನೆಲೆಸಿದ ಗೋವಿ೦ದ ಪೈ ಅವರಿಗೆ ವಿವಾಹಯೋಗ ಕೂಡಿಬ೦ತು.

ಮತ್ತಷ್ಟು ಓದು »

3
ಜೂನ್

ಆಯುರ್ವೇದವನ್ನು ಕಂಡರೆ ಪಾಶ್ಚಾತ್ಯರಿಗೆ ಭೀತಿ!

– ವಿಷ್ಣು ಪ್ರಿಯ
ಇಂಗಿಷ್ ವೈದ್ಯ ಪದ್ಧತಿಯು ಯಾವುದೇ ರೋಗವನ್ನು ಸಂಪೂರ್ಣ ಗುಣ ಮಾಡುವುದಿಲ್ಲ. ರೋಗದ ಲಕ್ಷಣಗಳನ್ನು ತಟಸ್ಥಗೊಳಿಸುವ ಮೂಲಕ ಆ ರೋಗವನ್ನು ಅಜ್ಞಾತವಾಗಿಡುತ್ತದೆ ಅಷ್ಟೆ. ಗುಳಿಗೆಗಳು ರೋಗಲಕ್ಷಣಗಳನ್ನು ತಟಸ್ಥವಾಗಿಸುವ ಕಾರಣ ರೋಗ ಗುಣವಾಗಿದೆ ಎಂಬ ಭ್ರಾಂತಿಗೊಳಗಾಗುತ್ತೇವೆ.  ಆದರೆ ಆಯುರ್ವೇದ ವೈದ್ಯ ಪದ್ಧತಿ ಹಾಗಲ್ಲ, ರೋಗಮೂಲ ಏನು ಎಂಬುದನ್ನು ಅರಿತುಕೊಂಡು ಅದಕ್ಕೆ ಚಿಕಿತ್ಸೆ ಮಾಡುತ್ತದೆ. 
`ಅದ್ಯಾವುದೋ ಬೇರಂತೆ, ನಾರಂತೆ, ಸೊಪ್ಪು, ಎಲೆ, ಬಳ್ಳಿಯಿಂದಾನೂ ಔಷಧಿ ಕೊಡ್ತಾರಂತೆ, ಹಣ್ಣೂ ಮದ್ದಂತೆ, ಕಾಯಿಯೂ, ಕಾಯಿಯೊಳಗಿನ ಬೀಜವೂ ರೋಗ ನಿವಾರಕವಂತೆ. ಹಲವು ಮೂಲಿಕೆಗಳನ್ನು ಸೇರಿಸಿ ಔಷಧಿ ಮಾಡೋದಂತೆ. ಇದನ್ನೆಲ್ಲ ನಂಬ್ತೀರಾ? ಇದು ಮೂಢನಂಬಿಕೆ. ಇಂಥದ್ದನ್ನೆಲ್ಲ ತಿಂದು ಆರೋಗ್ಯ ಹಾಳು ಮಾಡ್ಕೋಬೇಡಿ’ ಎಂದು ಭಾರತೀಯ ವೈದ್ಯ ಪದ್ಧತಿಯ ಬಗ್ಗೆ ಮೂಗು ಮುರಿದದ್ದು ಪಾಶ್ಚಾತ್ಯರು. `ನಿಮ್ಮ ವೈದ್ಯ ಪದ್ಧತಿ ಆಧಾರವಿಲ್ಲದ್ದು, ಅದನ್ನೆಲ್ಲ ಒಪ್ಪುವುದಕ್ಕೆ ಸಾಧ್ಯವಿಲ್ಲ’ ಎಂದು ಕೆಲವು ಸಮಯದ ಹಿಂದೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮ ದೇಶದಲ್ಲಿ ಈ ವೈದ್ಯ ಪದ್ಧತಿಗೆ ಪ್ರೋತ್ಸಾಹ ನೀಡದಿರುವಂತೆ ಹೇಳಿದ್ದರು. ಬ್ರಿಟನ್ ಕೂಡಾ ಆಯುರ್ವೇದ ವೈದ್ಯ ಪದ್ಧತಿಯ ಮೇಲೆ ನಿಷೇಧ ಹೇರಿತು. ಇದೀಗ ಆಯುರ್ವೇದ ವೈದ್ಯ ಪದ್ಧತಿಯ ಮೇಲೆ ಮತ್ತೊಂದು ನಿಷೇಧ! ಅದು ಐರೋಪ್ಯ ಒಕ್ಕೂಟದಿಂದ. ಮೇ 1ರಿಂದ ಈ ಔಷಧ ಪದ್ಧತಿಯನ್ನು, ಗಿಡಮೂಲಿಕೆಗಳ ಮಾರಾಟವನ್ನು ಐರೋಪ್ಯ ರಾಷ್ಟ್ರಗಳಲ್ಲಿ ನಿಷೇಧಿಸಲಾಗಿದೆ.
ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಆಯುರ್ವೇದ ವೈದ್ಯ ಪದ್ಧತಿಯ ಮೇಲೆ ನಿಷೇಧ ಹೇರಲಾಗಿದೆ ಎಂದರೆ ಅದರ ಅರ್ಥವೇನು? ಆಯುರ್ವೇದ ವೈದ್ಯ ಪದ್ಧತಿಯಲ್ಲಿ ದೋಷಗಳಿವೆ ಎಂಬುದಂತೂ ಅಲ್ಲ. ಈ ಪದ್ಧತಿಗೆ ಆಧಾರವಿಲ್ಲವೆಂಬುದೂ ಅಲ್ಲ. ಮೂಢನಂಬಿಕೆ ಎಂಬುದಂತೂ ಅಲ್ಲವೇ ಅಲ್ಲ. ಇದರ ಹಿಂದಿರುವ ವಾಸ್ತವ ಕಾರಣ- ಭೀತಿ! ಆಯುರ್ವೇದ ವೈದ್ಯ ಪದ್ಧತಿಯ ಸಾಮಥ್ರ್ಯದ ಮುಂದೆ ತಮ್ಮ ವೈದ್ಯ ಪದ್ಧತಿಗೆ ಎಲ್ಲಿ ನೆಲೆಯಿಲ್ಲದಂತಾಗುತ್ತದೆಯೋ ಎಂಬ ಆತಂಕ. ಜನರೆಲ್ಲ ಆಯುರ್ವೇದದ ಮೊರೆ ಹೊಕ್ಕರೆ ತಮ್ಮಲ್ಲಿನ ವೈದ್ಯ ಪದ್ಧತಿಯ ಮಾರುಕಟ್ಟೆ ಕುಸಿದು ಬೀಳುತ್ತದೆ ಎಂಬ ಭಯ!
2
ಜೂನ್

ಶುಭ ಮುಂಜಾನೆಯ ಮೂವತ್ತು ಗೆಳೆಯರು..!

 -ರವಿ ಮುರ್ನಾಡು

ನಿಮಗೆ ಪರಿಚಯಿಸಬೇಕು ನನ್ನ ಗೆಳೆಯರನ್ನು. ನಂಟನ್ನು ಹಾಗೇ ಬದುಕಿನಲ್ಲಿ ಗಂಟು ಹಾಕಬೇಕು. ಲೆಕ್ಕವಿಲ್ಲದ ರಾತ್ರಿಗಳ ಕಳೆದು, ಪ್ರತಿ ಮುಂಜಾನೆಯ ಲೆಕ್ಕ ತೆಗೆಯುವುದು ತುಂಬಾ ಇಷ್ಟದ ಕೆಲಸ. ರಾತ್ರಿಯ ಲೆಕ್ಕವಿಟ್ಟವರದ್ದು  ಕತ್ತಲೆಯ ಕೆಲಸ. ಹಗಲಿನ ಲೆಕ್ಕವಿಟ್ಟವರದ್ದು ಪುಟದ ದಾಖಲೆಯ ಕೆಲಸ. ಹಗಲು-ರಾತ್ರಿಯ ನಡುವೆ ಅಳಿಸಿ ಹೋಗುವ ನಗುವಿನ ಗಳಿಗೆಗಳು ಮತ್ತೆ ಬರಲಿ ಎಂಬುದು ಎಲ್ಲರ ಕನಸು. ಮತ್ತೆ ಮತ್ತೆ ಒತ್ತರಿಸುವ ದುಃಖ್ಖ ಮತ್ತೇ ಬಾರದಿರಲೀ ಎಂಬ ಪ್ರಾರ್ಥನೆ.

ಆ ಬಂಧವನ್ನು ಹಾಗೆಯೇ ಉಳಿಸುತ್ತಾ ಬಂದಿದ್ದೇನೆ. ಅವರು ಮನುಷ್ಯ ಭಾಷೆಗೆ ನಿಲುಕದ ನಕ್ಷತ್ರಗಳು. ಪ್ರತೀ ನನ್ನ ಮುಂಜಾನೆಗೆ ” ಶುಭ” ಮುಂಜಾವಿನ ಭಾಷ್ಯ ಬರೆಯುತ್ತಾರೆ. ಚಿನ್ನದ ಅಕ್ಷರಗಳಲ್ಲಿ ಬರೆದಿಡುವ ಆನಂದ ಅದು. ಶುಭಾಶಯ ಅಂದಾಗ ಮನೆ-ಮನೆಯ ದಿನಗಳು ಆಲೋಚನೆಗೆ ಬರುತ್ತವೆ. ಬೆಳಿಗ್ಗೆ ಎದ್ದು ಹೊರ ಬಂದಾಗ ಹಲವರ- ಪರಿಚಿತರ ಶುಭಾಶಯಗಳು ಎದುರುಗೊಳ್ಳುತ್ತವೆ. ನಮ್ಮೆಲ್ಲರ ಹಗಲು ಹುಟ್ಟುವುದೇ ಆವಾಗ. ಮನುಷ್ಯನ ಮನಸ್ಸನ್ನು ಅಂತಹ ಸಂದರ್ಭಗಳು ನಿರ್ಧರಿಸುತ್ತವೆ. ರಾತ್ರಿ ನಿದ್ದೆಗೆ ಜಾರಿದ ಮೇಲೆ ಶರೀರ ಒಂಟಿ. ಮನಸ್ಸು ಕೂಡ. ಬೆಳಿಗ್ಗೆ ಎದ್ದಾಗಲೇ ಗೊತ್ತಾಗುವುದು ನಾವು ಹೇಗೆ ಎಂದು. ಸಂಸಾರ ಅನ್ನುವ ಜಗತ್ತಿನಲ್ಲಿ ಅದರ ಪರಿಕಲ್ಪನೆಯ ಚಿತ್ರಣ ಮೂಡುವುದು ಹೇಗೋ?. ಮನೆ ಎಂದರೆ ಒಂದು ಜಗತ್ತು. ಗಂಡ-ಹೆಂಡತಿ- ಮಕ್ಕಳು ಮತ್ತು ಅದರೊಳಗೆ ಬೇರುಬಿಟ್ಟ ಸಂಬಂಧಗಳು. ಅದೊಂದು ವರ್ತುಲ ಬೆಳಗ್ಗಿನ ಗಳಿಗೆಗೆಳನ್ನು ಹಗಲಿಗೆ ಹಂಚಿಕೊಂಡು ದೀಪ ಹಚ್ಚಿದ  ದಿನಗಳನ್ನು ಕಾಯುತ್ತಿದ್ದೇನೆ.!!

ಅವರ ನಗು ಕಾಣದೆಯೂ ಇರಬಹುದು…ನನ್ನ ಗೆಳೆಯರ ಮಾತುಗಳು  ಅರ್ಥವಾಗದೆಯೂ ಇರಬಹುದು….ಚಿತ್ತಪಟದಲ್ಲಿ ಭಾವವಾಗಿಸುತ್ತೇನೆ. ಭಾವದ ಭಾವಚಿತ್ರವಾಗಿಸುತ್ತೇನೆ. ಭಾವಚಿತ್ರಗಳು ಹಾಗೆಯೇ…ನಗುವಂತಿದ್ದರೆ ಎಲ್ಲರಿಗೂ ನಗುತ್ತಿರುತ್ತವೆ. ದುಃಖ್ಖದಲ್ಲಿದ್ದರೆ, ಎಲ್ಲರ ಮುಂದೆ ಅಳುತ್ತಿರುತ್ತದೆ. ಸುಖ-ದುಃಖ್ಖವನ್ನು ನಿರಂತರ ಪ್ರತಿಫಲಿಸುವ  ಒಂದು ಶಕ್ತಿ ಎಂದರೆ ಅದು ಭಾವಚಿತ್ರ. ಅದಕ್ಕೆ ಮನುಷ್ಯರು ಭಾವಚಿತ್ರವನ್ನು ಹೆಚ್ಚು ಇಷ್ಟ ಪಡುತ್ತಾರೆ. ಮತ್ತಷ್ಟು ಓದು »

2
ಜೂನ್

ಇದು ಹಿಂದಿ ಹೇರಿಕೆ ಬೂತದ ಕೈಚಳಕ

– ಅರುಣ್ ಜಾವಗಲ್
ಸರಕಾರ ತನ್ನ ಕಾರ್ಯಗಳು ಜನರಿಗೆ ತಲುಪಿಸೊಕ್ಕೆ ಪತ್ರಿಕೆಗಳನ್ನ ಅವಲಂಬಿಸಿದೆ. ಕೆಲವು ಪ್ರಮುಕ ಕಾರ್ಯಗಳನ್ನ/ ಸೌಲಬ್ಯಗಳನ್ನ ಪತ್ರಿಕೆಗಳಲ್ಲಿ ಜಾಹಿರಾತು ನೀಡಿತ್ತೆ. ಪತ್ರಿಕೆಗಳಲ್ಲಿ ಜಾಹಿರಾತನ್ನ ನೋಡೊ ಜನ, ಆ ಕಾರ್ಯ/ಸೌಲಬ್ಯದ ಲಾಬ ಪಡೆದುಕೊಳ್ಳಬೇಕು ಅನ್ನೊದು ಉದ್ದೇಶ(?).

ಆದರೆ ಸರಕಾರ ಈ ಜಾಹಿರಾತು ನೀಡೋ ವಿಶಯದಲ್ಲೂ ತಾರತಮ್ಯ ಮಾಡಿ ತನ್ನ ಕಾರ್ಯ/ ಸೌಲಬ್ಯ ಗಳು ಕನ್ನಡಿಗರಿಗೆ ಸಿಗಬಾರ್ದು ಅನ್ನೊ ತರ ನಡೆದುಕೊಳ್ತಿರೋದು ಮಾತ್ರ ನಿಗೂಡ! ಇದೋ ಹೀಗೆ ಅಂತೀರ- ಕನ್ನಡ ಪತ್ರಿಕೆಗಳಲ್ಲಿ ಕನ್ನಡವಲ್ಲದ, ಕನ್ನಡಿಗರಿಗೆ ಅರಿವಿಲ್ಲದ ಹಿಂದಿ ಬಾಶೆಯಲ್ಲಿ ಜಾಹಿರಾತು ನೀಡೋದು. 

ಈ ಕೆಲ್ಸವನ್ನ ಸರಕಾರ ಬಹಳ ವ್ಯವಸ್ತಿತವಾಗಿ ಮಾಡ್ತಿದೆ. ಇದರ ಕೆಲವು ಕೆಲವು ಸ್ಯಾಂಪಲ್ ಗಳು-

೧. ಕೆಲವು ವರ್ಶಗಳ ಹಿಂದೆ ನೈರುತ್ಯ ರೈಲ್ವೆ ,ಡಿ ದರ್ಜೆ ನೌಕರರಿಗೆ(೭ ಅತವಾ ೮ ನೇ ತರಗತಿ ಪಾಸಾದವರಿಗೆ) ಅರ್ಜೆಗೆ ಅಹ್ವಾನಿಸಿ, ಕನ್ನಡವಲ್ಲದ ಬಾಶೆಯಲ್ಲಿ ಯಾವುದೋ ಒಂದೆರಡು ಚಿಕ್ಕ ಪತ್ರಿಕೆಗಳಲ್ಲಿ ಜಾಹಿರಾತು ನೀಡಿತ್ತಂತೆ. ಆ ಜಾಹಿರಾತು ಓದೋಕ್ಕೆ ಆಗದ ಕನ್ನಡದವರು ಅರ್ಜಿ ಹಾಕಿದ್ದೆ ಕಡಿಮೆ ಜನ. ಎಂತಾ ದುರಂತ.
ಮತ್ತಷ್ಟು ಓದು »

1
ಜೂನ್

ಬೆಂಗಳೂರಿನಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಆಂದೋಲನ…

– ಚೇತನ್ ಜೀರಾಳ್

ಬಹುಷಃ ಕಳೆದ ಕೆಲವು ತಿಂಗಳಿಂದ ದೇಶದ ಪ್ರತಿಯೊಬ್ಬ ಪ್ರಜೆಯು ಮಾತನಾಡುತ್ತಿರುವುದು ದೇಶದಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರದ ಬಗ್ಗೆ. ಈ ಭ್ರಷ್ಟಾಚಾರ ಅನ್ನೋ ಮಹಾಮಾರಿ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಕರಾಳ ಬಾಹುವನ್ನು ಚಾಚಿದೆ. ಭ್ರಷ್ಟಾಚಾರ ಸಮಾಜದ ನೈತಿಕತೆಯ ಜೊತೆಗೆ , ಇಡೀ ನಾಡನ್ನೇ ಅಧೋಗತಿಯತ್ತ ಕೊಂಡ್ಯೊಯುತ್ತದೆ. ಇಂದು ಭ್ರಷ್ಟಾಚಾರ ಅನ್ನುವುದು ಜಾತಿ, ಮತ, ಧರ್ಮ, ಭಾಷೆ ಹೀಗೆ ಎಲ್ಲವನ್ನು ಮೀರಿ ಬೆಳೆದು ನಿಂತು ನಮ್ಮ ನಾಡಿನ ಏಳಿಗೆಗೆ ಮಾರಕವಾಗಿ ಪರಿಣಮಿಸಿದೆ. ಕೇಂದ್ರ ಹಾಗೂ ರಾಜ್ಯ ಅನ್ನೋ ಭೇದವಿಲ್ಲದೇ ಭ್ರಷ್ಟಾಚಾರ ಇಂದು ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ನೆಲೆಗೊಂಡಿದೆ. ಭ್ರಷ್ಟಾಚಾರ ಅಳಿಯದ ಹೊರತು ನಮ್ಮ ರಾಜ್ಯ ಏಳಿಗೆ ಕಾಣುವುದಕ್ಕೆ ಸಾಧ್ಯವೇ ಇಲ್ಲಾ. ಈ ಭ್ರಷ್ಟಾಚಾರ ಎಂಬ ರಕ್ಷಸವನ್ನು ನಾವೆಲ್ಲಾ ಸೇರಿ ಹೊಡೆದು ಹಾಕಲೇ ಬೇಕು.

ಮತ್ತಷ್ಟು ಓದು »