ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 16, 2011

ಭಾರತೀಯರು ಹಲ್ಲಿ ಹಾಗು ಜಿರಳೆಗಳನ್ನ ಏಕೆ ತಿನ್ನುತ್ತಾರೆ

‍ನಿಲುಮೆ ಮೂಲಕ

-ಡಾ ರಾಕೇಶ್ ಬಿ.ಎಚ್.

ಭಾರತೀಯರು ಹಲ್ಲಿ ಹಾಗು ಜಿರಳೆಗಳನ್ನ ಏಕೆ ತಿನ್ನುತ್ತಾರೆ?

ಮೇಲಿನ ಈ ಪ್ರಶ್ನೆ ನೋಡಿ ಆಶ್ಚರ್ಯ ಆಯ್ತಾ? ಅರೆ, ಭಾರತೀಯರು ಯಾವಗಿಂದನಪ್ಪ ಇದನ್ನೆಲ್ಲಾ ತಿನ್ನೋಕೆ ಶುರು ಮಾಡಿದ್ರು ಅಂತ? ಇದನ್ನ ನನ್ನ ಹೆಂಡತಿ ನಂಗೆ ಕೇಳ್ದಾಗ ನಾನು ತಮಾಷೆಗೆ ಅಂತ ನಕ್ಕೆ. ಆದ್ರೆ ಇದು ನಾವುಗಳು ನಮ್ಮ ಮಕ್ಕಳನ್ನ ಓದಿಸೋ ಕಾಲ ಬಂದಾಗ ಅವರ ಟೆಕ್ಸ್ಟ್ ಬುಕ್ಕಿನಲ್ಲಿ ಈ ರೀತಿ ಪ್ರಶ್ನೆ ಕಾಣುವ ಸಾಧ್ಯತೆಗಳು 99%ಗಿಂತ ಜಾಸ್ತಿ ಇದೆ ಅಂತ ಹೇಳಿದಾಗ ಕುತೂಹಲ ಆಯ್ತು. ಹೇಗೆ ಅನ್ನೋ ಕುತೂಹಲ ನಿಮಗೂ ಇದೆಯಲ್ವಾ? ಅವಳು ಹೇಳಿದ ಸರಳ ಲಾಜಿಕ್ ಹೇಳ್ತೀನಿ ಕೇಳಿ.

ಗಾಂಧಿ ತಾತನ ಕಾಲದಿಂದಾನು ಭಾರತ ಹಳ್ಳಿಗಳಿರುವ ರಾಷ್ಟ್ರ ಅಂತಾನೆ ನಾವೆಲ್ಲಾ ಕಲಿತಿರೋದು ಹಾಗು ಅದು ಸತ್ಯ ಕೂಡ. ಯಾಕಂದ್ರೆ ತಲತಲಾಂತರದಿಂದಾನು ನಮ್ಮ ಪೂರ್ವಜರು ಹಳ್ಳಿಯಲ್ಲೇ ಇದ್ದುಕೊಂಡು ವ್ಯವಸಾಯವನ್ನೇ ಜೀವನ ಮಾಡಿಕೊಂಡವರು. ಹಾಗಾಗಿ ಉತ್ತಿ ಬಿತ್ತು ಬೆಳೆ ತೆಗೆಯೋರು ಮತ್ತು ಹೆಚ್ಚಾಗಿ ಅದೇ ಅವರ ದೈನಂದಿನ ಊಟ ಕೂಡ ಆಗಿರುತ್ತಿತ್ತು. ಸಹಜವಾಗಿ 90 ಕ್ಕೂ ಹೆಚ್ಚು ಜನ ಸಸ್ಯಹಾರಿಗಳಾಗಿದ್ದರು.
ಬೌಗೋಳಿಕವಾಗಿ ಜಗತ್ತಿನ ಏಳನೇ ದೊಡ್ಡ ರಾಷ್ಟ್ರವಾಗಿದ್ದು, ವ್ಯವಸಾಯವೇ ಅತಿ ಪ್ರಮುಖ ಆದಾಯವಾಗಿದ್ದು ಹಾಗು ಅಷ್ಟೊಂದು ಜನ ಸಸ್ಯಹಾರಿಗಳಿದ್ದು ತೀರ ಹಲ್ಲಿ ತಿನ್ನೋ ಮಟ್ಟಕ್ಕೆ ನಾವು ಇಳಿತೀವ? ವಿಪರ್ಯಸವಾದ್ರು ಇದು ಸತ್ಯ ಕಣ್ರೀ. ಜಾಸ್ತಿ ತಲೆ ಉಪಯೋಗಿಸೋದೆನು ಬೇಡ, ಯಾಕೆಂದ್ರೆ ಉತ್ತರ ನಮ್ಮ ಕಣ್ಣು ಮುಂದೆ ಬಿದ್ದು ಹೊರಳಾಡ್ತಾ ಇದೆ. ನೀವೇ ಯೋಚನೆ ಮಾಡಿ, ಸಸ್ಯಹಾರಿಗಳಾಗೆ ಉಳಿಬೇಕೂಂದ್ರೆ ಸಸ್ಯಗಳನ್ನ ಬೆಳಿಬೇಕು, ಹೌದ? ಸಸ್ಯಗಳನ್ನ ಬೆಳೆಬೇಕು ಅಂದ್ರೆ ಭೂಮಿ ಬೇಕು, ಹೌದ?

ಮತ್ತೆ, ಇಂಚು ಭೂಮಿನೂ ಬಿಡದಂಗೆ ಕಬಳಿಸ್ತ ಇರೋ ನಾಯಕರನ್ನ ನೋಡಿಕಂಡು ಸುಮ್ನಿದಿವಿ. ಅದು ಹಾಳಾಗಿ ಹೋಗ್ಲಿ, ನಾವಾದರು ನೆಟ್ಟಗಿದ್ದೀವ ಅಂದ್ರೆ ನಾವುಗಳೇ ಅಂಥವರು. ಯಾಕೆ ಹೇಳಿ, ಗಂಡ-ಹೆಂಡ್ತಿ ಇಬ್ಬರು ದುಡಿದು ಬೆಂಗಳೂರಲ್ಲಿ ಒಂದು ಸೈಟು ಮಾಡೋ ತನಕ ನೆಮ್ಮದಿ ನಿದ್ದೆ ಎರಡು ಇಲ್ಲ ನಮ್ಮಗಳಿಗೆ. ಹೆಚ್ಚಾಗ್ತಾ ಇರೋ ಮಳಿಗೆಗಳು, ರಸ್ತೆ ಹೆಸರು NICE ಆದ್ರೂನು ಟೋಲ್ ಫೀನಲ್ಲಿ ಇಲ್ಲದ ನೈಸು, ಫ್ಲೈ ಓವರ್ ಮೇಲೆ ಫ್ಲೈ ಓವರ್ ಇದ್ದ್ರುನು ಜಾಗ ಸಾಲದೇ ಇರೋ ವಾಹನಗಳು, ಭೂಮಿ ಇದ್ದರೂನು ಮಾಲಿನ್ಯದಿಂದ ಬೆಳೆಯೋಕೆ ಕಷ್ಟ ಪಡ್ತಿರೋ ರೈತರು. ಇಷ್ಟೆಲ್ಲದರ ಮಧ್ಯ ಮತ್ತೆ ಬೆಳೆಯನ್ನ ಎಲ್ಲಿ ತಾನೇ ಬೆಳಿಯೋದು? ಈಗ್ಲೇನೆ ನಮ್ಮ ಹೆಣ್ಣು ಮಕ್ಳು ಅಡಿಗೆ ಮನೆನ ಕೆಲಸದವರಿಗೆ ಬಾಡಿಗೆಗೆ ಕೊಟ್ಟಿದ್ದಾರೆ, ಹಿಂಗೆ ಆದ್ರೆ, ನಾವು ಮಾಡಿದ ಕರ್ಮಗಳ ಪ್ರತಿಪಲವಾಗಿ ತಿನ್ನೋಕು ಪರದಾಡಿ ಕೊನೆಗೆ ಚೈನಾದಲ್ಲಿ ಆಗಿರೋ ಹಾಗೆ ಸಿಕ್ಕಿದ್ದನೆಲ್ಲ ತಿನ್ನೋ ಪರಿಸ್ಥಿತಿ ಬಂದೆ ಬರುತ್ತೆ. ಆವಾಗ ನಮ್ಮ ಮಕ್ಕಳುಗಳು ಹಲ್ಲಿ ತಿನ್ನೋಹಂಗಾಗೊದ್ರಲ್ಲಿ ತಪ್ಪೇನಿಲ್ಲ ಅಲ್ವಾ. ಅಲ್ಲಿಗೆ ಭಾರತೀಯರು ಹಲ್ಲಿ ಹಾಗು ಜಿರಳೆ ತಿನ್ನೋದರ ಹಿಂದಿನ ರಹಸ್ಯ ಬಯಲಾಗುತ್ತೆ.

ಇಷ್ಟೆಲ್ಲಾ ನಡಿತಿದ್ದರುನು ನಮ್ಮ ಮಾಜಿ ಪ್ರಧಾನಿಗಳು ಬೊಂಬಢ ಬಡ್ಕೊತಾರೆ ನಮ್ಮನ್ನ ಅಧಿಕಾರಕ್ಕೆ ತಂದರೆ ಅಕ್ಕಿನ ಕೆಜಿಗೆ 2 ರೂಪಾಯಿಗೆ ಕೊಡ್ತೀವಿ. ರೀ ಸ್ವಾಮಿ, ನಮ್ಮ ರಾಜ್ಯದಲ್ಲಿ ಇರೋ ಸುಲಭ ಶೌಚಲಯನ ಉಪಯೋಗಿಸಿದರೆ 3 ರೂಪಾಯಿ ಕೊಡ್ಬೇಕು, ಅಂತಾದ್ರಲ್ಲಿ ನೀವು 2 ರೂಪಾಯಿಗೆ ಅಕ್ಕಿ ಕೊಡ್ತೀರ? ಮಾಡೋ ಕೆಲಸಗಳನ್ನ ನೆಟ್ಟಗೆ ಮಾಡಿದ್ರೆ ನೀವುಗಳು ಕೇಳಲಿಲ್ಲ ಅಂದ್ರೂನು ಅಧಿಕಾರಕ್ಕೆ ತಂದು ಕೂರಿಸೋ ದೊಡ್ಡ ಮನಸ್ಸು ನಮಗೆಲ್ಲ ಇದೆ. ಸೊ, ಮೊದಲು ಮಾಡಿ, ಆಮೇಲೆ ಮಾತಾಡಿ.
ಸರಿನೇನ್ರಿ ನನ್ನ ಮಾತು? ಹೋಗ್ಲಿ ಬಿಡಿ. ಸರಿನೋ ತಪ್ಪೋ, ಆದ್ರೆ ನಮ್ಮ ಮಕ್ಕಳು ಸ್ಕೂಲನಲ್ಲಿ ಫರ್ಸ್ಟ್ ಬರ್ಬೇಕೂಂದ್ರೆ ಈಗಿಂದಾನೆ ಮೇಲಿನ ಉತ್ತರನ ಪ್ರಬಂಧ ರೂಪದಲ್ಲಿ ರೆಡಿ ಮಾಡಿತ್ತುಕೊಳ್ಳೋಣ . ಒಂದಾದರು ಒಳ್ಳೆ ಕೆಲಸ ಮಾಡಿದ್ದೀವಿ ಅಂತ ಮಕ್ಳು ಖುಷಿ ಆಗ್ತವೆ.
ಅದ್ಸರಿ ಯಾರಾದ್ರೂ ಹಲ್ಲಿ ತಿಂದು ಅಭ್ಯಾಸ ಇದ್ರೆ ಟೇಸ್ಟು ಹೆಂಗಿರತ್ತೆ ಅಂತ ಹೇಳ್ರಿ. Mentally ಪ್ರಿಪೇರ್ ಆಗೋಣ ಅಂತ.
***********

factzoo.com

Read more from ಲೇಖನಗಳು

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments