ದಾಸರ ದಾಸ ಸಂತ ಶ್ರೀ ಭದ್ರಗಿರಿ ಅಚ್ಯುತದಾಸರು
– ರಾಘವೇಂದ್ರ ಅಡಿಗ ಎಚ್ಚೆನ್
ಕನ್ನಡ ಹರಿದಾಸ ಪರಂಪರೆ, ಕೀರ್ತನಾ ಲೋಕದ ಕೊಂಡಿಯೊಂದು ಕಳಚಿದೆ. ಸಂತ, ಹಿರಿಯ ಕೀರ್ತನೆಗಾರರಾದ ‘ಕೀರ್ತನ ಕೇಸರಿ’ ಭದ್ರಗಿರಿ ಅಚ್ಯುತದಾಸರು ತಮ್ಮ 83 ನೇ ವಯಸ್ಸಿನಲ್ಲಿ ತಾವು ಕಟ್ಟಿ ಬೆಳೆಸಿದ ಹರಿಕಥಾ ಪ್ರಪಂಚವನ್ನು ತೊರೆದು ಶ್ರೀಹರಿಯತ್ತ ನಡೆದಿದ್ದಾರೆ. ಕೀರ್ತನಾ ಕಲಾಪರಿಷತ್ ಗೌರವಾಧ್ಯಕ್ಷರಾಗಿದ್ದ ಸಂತ ಭದ್ರಗಿರಿ ಅಚ್ಯುತದಾಸರು ತಮ್ಮ ವಾಕ್ ಸಾಮರ್ಥ್ಯ, ಸಂಗೀತ, ಹಾಸ್ಯ ಚಟಾಕಿಗಳ ಮೂಲಕ ಜನಮಾನಸದಲ್ಲಿ ನೆಲೆಯೂರಿದ್ದರು. ಕನ್ನಡ, ಮರಾಠಿ, ಕೊಂಕಣಿ, ತುಳು ಹೀಗೆ ನಾನಾ ಭಾಷೆಗಳಾಲ್ಲಿ ಪ್ರೌಢಿಮೆ ಸಾಧಿಸಿದ್ದ ಸಂತ ಅಚ್ಯುತದಾಸರು ತಾವು ಹರಿವಂಶ, ಭಾಗವತ, ರಾಮಾಯಣ, ಮಹಾಭಾರತದ ತಾತ್ವಿಕ ಅಂಶಗಳನ್ನು ಸಾಮಾನ್ಯರ ಮನಮುಟ್ಟುವಂತೆ ವಿವರಿಸಿ ಹೇಳುವ ಸಾಮರ್ಥ್ಯವನ್ನು ಹೊಂದಿದ್ದರು.
ಇಂದಿನ ಆಧುನಿಕ ಯುಗದಲ್ಲಿ ನಶಿಸುತ್ತಿರುವ ಸಂಕೀರ್ತನಾ ಕಲೆಯನ್ನು ಜನಪ್ರಿಯಗೊಳಿಸುವುದರಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದ ಅಚ್ಯುತದಾಸರು ತಮ್ಮ ಸಹೋದರ ದಿ. ಭದ್ರಗಿರಿ ಕೇಶವದಾಸರ ಜತೆಗೂಡಿ ಅನೇಕ ಹರಿಕಥಾ ಸಮ್ಮೇಳನಗಳನ್ನು ನಡೆಸಿದ್ದರು. ಅಣ್ಣ-ತಮ್ಮಂದಿರಿಬ್ಬರೂ ತಮ್ಮ ಸ್ವ ಪ್ರತಿಭೆಯಿಂದ ‘ಸಂತ’ ಪದವಿಗೆ ಭಾಜನರಾಗಿದ್ದರು. ಸಂತ ಭದ್ರಗಿರಿ ಕೇಶವ ದಾಸರು ವಿದೇಶಗಳಲ್ಲಿಯೂ ಆಂಗ್ಲ ಭಾಷೆಯಲ್ಲಿ ಸಂಕೀರ್ತನೆಗಳನ್ನು ನಡೆಸಿ ಪ್ರಸಿದ್ದರಾಗಿದ್ದರೆ,ಸಂತ ಭದ್ರಗಿರಿ ಅಚ್ಯುತ ದಾಸರು ಭರತ ಖಂಡವ್ಯಾಪಿ ತಮ್ಮ ಹರಿಕಥಾ ಶ್ರವಣ ಮಾಡುವ ಮೂಲಕ ನಾಡಿನ ಮೂಲೆ ಮೂಲೆಗಳಾಲ್ಲಿ ಮನೆಮಾತಾಗಿದ್ದರು.
ವ್ಯಕ್ತಿ ಪರಿಚಯ :
ಉಡುಪಿಯ ಸಮೀಪದ ಬ್ರಹ್ಮಾವರದ ಬಳಿಯಲ್ಲಿನ ಬೈಕಾಡಿ ಗ್ರಾಮದ ಪುಟ್ಟ ಹಳ್ಳಿಯಲ್ಲಿ ವೆಂಕಟರಮಣ ಪೈ ಹಾಗೂ ರುಕ್ಮಿಣಿಬಾಯಿ ದಂಪತಿಗಳಿಗೆ ನಾಲ್ಕನೆ ಮಗನಾಗಿ ಜನಿಸಿದ (1931 ಮಾರ್ಚ್ 31)ಸಂತ ಶ್ರೀ ಭದ್ರಗಿರಿ ಅಚ್ಯುತದಾಸರು ಬಾಲ್ಯದಿಂದಲೂ ಸಂಗೀತದ ಬಗ್ಗೆ ಒಲವಿದ್ದವರು. ಇದಕ್ಕೆ ಅವರು ಹುಟ್ತಿದ ಮನೆಯ ಪರಿಸರವೂ ಪೋಷಕವಾಗಿತ್ತು. ತ್ಂದೆ ವೆಂಕಟರಮಣಾ ಪೈಗಳು ಯಕ್ಷಗಾನದ ಬಗ್ಗೆ ಒಲವುಳ್ಳವರಾಗಿದ್ದರೆ ತಾಯಿ ರುಕ್ಮಿಣಿಬಾಯಿ ತಾವು ದೇವರ ಭಜನೆಗಳನ್ನು ಶುಶ್ರಾವ್ಯವಾಗಿ ಹಾಡಬಲ್ಲವರಾಗಿದ್ದರು.
ಅಚ್ಯುತದಾಸರು ಕಲಿತದ್ದು ಕೇವಲ ಮೂರನೆ ತರಗತಿಯಾದರೂ ತಾವೇ ಕಂಡುಕೊಂಡ ಲೋಕಾನುಭವದ ಶಿಕ್ಷಣದಿಂದ ಅತ್ಯಂತ ಮಹತ್ವವಾದುದನ್ನು ಸಾಧಿಸಲಿಕ್ಕೆ ಸಾಧ್ಯವಾಯಿತು. ತಮ್ಮ ಬಾಲ್ಯದಿಂದಲೂ ಯಕ್ಷಗಾನದಲ್ಲಿ ಆಸಕ್ತಿ ತಾಳಿದ ಅಚ್ಯುತದಾಸರು ತಾವು ತಾಳಮದ್ದಳೆಗಳಲ್ಲಿ ಅರ್ಥಧಾರಿಗಳಾಗಿದ್ದರು. ಮುಂದೆ ನಾಟಕಗಳಲ್ಲಿ ಪಾತ್ರವಹಿಸಿ ರಂಗಗೀತೆಗಳನ್ನು ಹಾಡುವುದರಲ್ಲಿ ತೊಡಗಿದರು. ಅಷ್ಟಲ್ಲದೆ ಭಾರತೀಯ ಸಂಸ್ಕೃತಿಯ ತಾಯಿ ಬೇರಾದ ರಾಮಾಯಣ. ಮಹಾಭಾರತಗಳನ್ನು ಅಮೂಲಾಗ್ರವಾಗಿ ತಿಳಿದುಕೊಂಡರು. ಕನ್ನಡದ ಪಂಪ, ರನ್ನ, ಕುಮಾರವ್ಯಾಸರನ್ನು ಓದಿಕೊಂಡ ಅಚ್ಯುತದಾಸರು ತಾವು ಭಾರತೀಯ ಸಂಸ್ಕೃತಿಯ ಹರಿಕಾರರೆನಿಸಿದರು.
1951 ರಫೆಬ್ರವರಿ 23 ರಂದು ಭದ್ರಗಿರಿಯ ಕಾಮೇಶ್ವರ ದೇವಾಲಯದಲ್ಲಿ ಮಲ್ಪೆ ಶಂಕರನಾರಾಯಣಾ ಸಾಮಗರ ಹರಿಕಥಾ ಶ್ರವಣಾವು ಏರ್ಪಾಡಾಗಿತ್ತು. ಆದರೆ ಕಾರಣಾಂತರಗಳಿಂದ ಕಾರ್ಯಕ್ರಾಮಕ್ಕೆ ಸಾಮಗರು ಬರದೆ ಹೋದಾಗ ಅಚ್ಯುತದಾಸರು ತಾವು ಹರಿಕಥಾ ಕಾಲಕ್ಷೇಪವನ್ನು ನಡೆಸಿಕೊಟ್ಟರು. ಅಂದಿನ ಹರಿಕಥೆಗೆ ಸೇರಿದ್ದ ನೂರಾರು ಜನ ಅಚ್ಯುತದಾಸರ ಹರಿಕಥೆಯ ಮೋಡಿಗೆ ಸಿಲುಕಿದರು. ಅಂದಿನಿಂದ ದಾಸರು ನಿರಂತರ ಹರಿಕಥಾ ಕಾಯಕದಲ್ಲಿ ತೊಡಗಿಕೊಂಡರು.
1956 ರಲ್ಲಿ ಕಾಶೀ ಮಠದ ಸ್ವಾಮೀಜಿಗಳಾಗಿದ್ದ ಸುಧೀಂಧ್ರ ತೀರ್ಥ ಶ್ರೀಪಾದಂಗಳು ಉಡುಪಿಯಲ್ಲಿ ಚಾತುರ್ಮಾಸ ವ್ರತದಲ್ಲಿ ತೊಡಗಿದ್ದಾಗ ಅಚ್ಯುತದಾಸರು ನಿತ್ಯವೂ ಮಹಾಭಾರತದ ಕುರಿತು ಹರಿಕಥೆ ನಡೆಸಿಕೊಟ್ಟಿದ್ದರು. ಆ ಸಂದರ್ಭದಲ್ಲಿ ಶ್ರೀ ಗುರುಗಳು ಅಚ್ಯುತದಾಸರಿಗೆ ದಂಡಿಗೆ ಬೆತ್ತದ ಹಾಸ ದೀಕ್ಷೆಯನ್ನು ನೀಡಿ ಚಕ್ರಾಂಕಪೂರ್ವಕ ಮೂಲನಾರಾಯಣ ಎಂಬ ಅಂಕಿತವನ್ನು ನೀಡಿದ್ದರು. ಅದು ಕಾರಣವಾಗಿ ಮುಂದೆ ಮೂಲನಾರಾಯಣ ಅಂಕಿತನಾಮದಲ್ಲಿ ಸಾವಿರಾರು ಕೀರ್ತನೆ, ಸುಳಾದಿ, ಉಗಾಭೋಗಗಳನ್ನು ರಚಿಸಿದ ಅಚ್ಯುತದಾಸರ ಕನ್ನಡ, ತುಳು, ಕೊಂಕಣಿ ಕೀರ್ತನೆ ಹಾಗೂ ಸುಳಾದಿಗಳು ನಾಡಿನಾದ್ಯಂತದ ಸಾವಿರಾರು ಜನರ ನಾಲಿಗೆಯಲ್ಲಿ ಇಂದಿಗೂ ಹರಿದಾಡುತ್ತಿದೆ.
ಕರ್ನಾಟಕದ ನಾನಾ ಕಡೆಯಲ್ಲಿ ನೆಲೆಸಿದ್ದ ಕೀರ್ತನಾಕಾರರನ್ನು ಒಟ್ಟು ಸೇರಿಸಿ ಅಖಿಲ ಕರ್ನಾಟಕ ಕೀರ್ತನ ಸಮ್ಮೇಳನವನ್ನು 1964 ರಲ್ಲಿ ಆಯೋಜಿಸಿದ್ದ ಕೀರ್ತಿ ಶ್ರೀ ಭದ್ರಗಿರಿ ಅಚ್ಯುತದಾಸರಿಗೆ ಸಲ್ಲಬೇಕು. ಅಲ್ಲದೆ 1965 ರಲ್ಲಿ ಭಾರತದಾದ್ಯಂತದ ಕೀರ್ತನಾಕಾರರನ್ನು ಒಟ್ಟುಗೂಡಿಸಿ ಅಖಿಲ ಭಾರತ ಜೀರ್ತನ ಸಮ್ಮೇಳಾನವನ್ನು ಬೆಂಗಳೂರಿನಲ್ಲಿ ಆಯೋಜಿಸಿದ್ದರು. ಆ ಸಮ್ಮೇಳನವನ್ನು ಭಾರತದ ಅಂದಿನ ರಾಷ್ಟ್ರಪತಿಗಳಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಉದ್ಘಾಟಿಸಿದ್ದರು. ಹೀಗೆ ದೇಶಾದ್ಯಂತದ ಕೀರ್ತನಾಕಾರರನ್ನು ಒಂದೆಡೆ ಸೇರಿಸಿ ಅವರ ಪರಸ್ಪರ ಪರಿಚಯ, ವಿಚಾರ ವಿನಿಮಯಕ್ಕೆ ವೇದಿಕೆಯೊಂದನ್ನು ಒದಗಿಸಿಕೊಟ್ಟ ಕೀರ್ತಿ ಶ್ರೀ ಅಚ್ಯುತದಾಸರದು.
ಶ್ರೀಯುತರ ಜೀವನ ಸಾಧನೆಯನ್ನು ಗುರುತಿಸಿ ಅನೇಕ ಪ್ರಶಸ್ತಿ ಪುರಸ್ಕಾರಗಳು ಅವರನ್ನು ಅರಸಿ ಬಂದಿವೆ. ಅವುಗಳಲ್ಲಿ ಮುಖ್ಯವಾಗಿ ಕರ್ನಾಟಕ ಸರ್ಕಾರದ ‘ಕನಕ ಪುರಂದರ ಪ್ರಶಸ್ತಿ’ , ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ‘ನಾಡೋಜ’ ಗೌರವ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಗೌರವ ಪ್ರಶಸ್ತಿಗಳು ಸಂದಿವೆ. ಕಾಶಿ ಮಠದವರು ನೀಡಿದ ‘ಕೀರ್ತನಾಗ್ರೇಸರ’ , ಗೋಕರ್ಣ ಪರ್ತಕಾಳಿ ಮಠದವರಿಂದ ‘ಕೀರ್ತನಾಚಾರ್ಯ’,ಉಡುಪಿ ಪೇಜಾವರ ಮಠದಿಂದ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿಗೆ ಭಾಜನರಾಗಿದ್ದ ಭದ್ರಗಿರಿ ಅಚ್ಯುತದಾಸರು,ಅದಮಾರು ಮಠದಿಂದ ಹರಿದಾಸ ಕುಲಭೂಷಣಾ ಪ್ರಶಸ್ತಿ,ರಾಮಚಂದ್ರಾಪುರ ಮಠದಿಂದ ಪುರುಷೋತ್ತಮ ಪ್ರಶಸ್ತಿಗಳಿಂದಲೂ ಪುರಸ್ಕೃತರಾಗಿದ್ದರು.
ಇಷ್ಟೇ ಅಲ್ಲದೆ ಮಾಡಿನಾದ್ಯಂತದ ವಿದ್ಯಾಸಂಸ್ಥೆಗಳು, ಸಂಘಟನೆಗಳೂ ಸಹ ಅಚ್ಯುತದಾಸರ ಪ್ರತಿಭೆಗೆ ಮನ್ನಣೆ ನೀಡಿ ಅನೇಕ ಬಗೆಯಲ್ಲಿ ಅವರನ್ನು ಸನ್ಮಾನಿಸಿವೆ, ಗೌರವಿಸಿವೆ.
ಇಂತಹಾ ಸಂತರೋರ್ವರು ನಮ್ಮನ್ನೆಲ್ಲಾ ಅಗಲಿದ್ದಾರೆ. ಹರಿದಾಸ ಪರಂಪರೆಯನ್ನು ಈ ವಿದ್ಯುನ್ಮಾನ ಮಾದ್ಯಮಗಳ ಭರಾಟೆಯ ಈ ದಿನಗಳಲ್ಲಿಯೂ ಮುಂದುವರಿಸಿಕೊಂಡು ಬಂದಿದ್ದ ಹಿರಿಯ ಚೇತನವೊಂದು ಬಾರದ ಲೋಕಕ್ಕೆ ತನ್ನ ಪಯಣವನ್ನು ಬೆಳೆಸಿದೆ.ಅವರು ಮಾಡಿದ ಕಾರ್ಯಗಳನ್ನು ನೆನೆಯುತ್ತಾ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿಯೂ ಅಳವಡಿಸಿಕೊಂಡು ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲರೂ ನಡೆದೆವಾದರೆ ಆ ದಿವ್ಯಾತ್ಮಕ್ಕೆ ಅದಕ್ಕಿಂತ ಸಂತೋಷವು ಬೇರೆಯಿರಲಾರದು.
ಚಿತ್ರ ಕೃಪೆ : ಸುಬ್ಬು ಸುಳ್ಯ





“ಶ್ರೀಯುತರ ಜೀವನ ಸಾಧನೆಯನ್ನು ಗುರುತಿಸಿ ಅನೇಕ ಪ್ರಶಸ್ತಿ ಪುರಸ್ಕಾರಗಳು ಅವರನ್ನು ಅರಸಿ ಬಂದಿವೆ. ಅವುಗಳಲ್ಲಿ ಮುಖ್ಯವಾಗಿ ಕರ್ನಾಟಕ ಸರ್ಕಾರದ ‘ಕನಕ ಪುರಂದರ ಪ್ರಶಸ್ತಿ’ , ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ‘ನಾಡೋಜ’ ಗೌರವ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಗೌರವ ಪ್ರಶಸ್ತಿಗಳು ಸಂದಿವೆ.”
ನಿಲುಮೆ ಎಂತಹ ಹಿಪಾಕ್ರೈಟುಗಳ ಅಡ್ಡೆ ಎಂಬುದಕ್ಕೆ ಇದೇ ಸಾಕ್ಷಿ. ಅಚ್ಯುತದಾಸರು ಬ್ರಾಹ್ಮಣರು, ವೈದಿಕ ಸಂಪ್ರದಾಯದವರು, ವೈದಿಕತೆಯ ಹಿರಿಮೆಯನ್ನು ತಮ್ಮ ಕಲೆಯ ಮೂಲಕ ಪ್ರತಿಪಾದಿಸಿದವರು. ಅಂಥವರು ರಾಜ್ಯೋಸ್ತವ ಪ್ರಶಸ್ತಿ ಪಡೆದದ್ದು ಓಕೇ. ಆದರೆ ದರ್ಗಾ ಸರ್ ಪಡೆದದ್ದು ನಾಟ್ ಓಕೇ! ನಿಲುಮೆಯ ವೇದಿಕೆಯಲ್ಲಿ ಈ ಹಿಂದೆ ರಾಜ್ಯೋತ್ಸವ ಪ್ರಶಸ್ತಿಯ ಪ್ರಸ್ತಾಪ ಬಂದಾಗ ಕೆಲವರು ಕುತರ್ಕಿಗಳು ದರ್ಗಾ ಸರ್ ಅವರು ಲಾಬಿ ಮಾಡಿ ಪ್ರಶಸ್ತಿ ಪಡೆದರು ಎಂಬ ಅರ್ಥದಲ್ಲಿ ಕಮೆಂಟು ಮಾಡಿದರು. ದರ್ಗಾ ಸರ್ ಅವರು ಎಂ ಪಿ ಪ್ರಕಾಶ್ ಅವರ ಬಗ್ಗೆ ಬರೆದ ಸ್ಮೃತಿಬರಹವೊಂದರಲ್ಲಿ ತಮಗೆ ರಾಜ್ಯೋತ್ಸವ ಪ್ರಶಸ್ತಿ ಬಂದ ಸಂದರ್ಭದ ಬಗ್ಗೆ ಹೇಳಿಕೊಂಡಿದ್ದಾರೆ.
http://kendasampige.com/article.php?id=4148
“ಅವರು ಉಪ ಮುಖ್ಯಮಂತ್ರಿಗಳಾಗಿದ್ದಾಗ ರಾಜ್ಯೋತ್ಸವ ಪ್ರಶಸ್ತಿ ಸಮಿತಿಯ ಅಧ್ಯಕ್ಷರಾಗಿದ್ದರು. ನರಸಿಂಹಲು ವಡವಾಟಿಯವರು ಸಮಿತಿಯ ಸದಸ್ಯರಲೊಬ್ಬರಾಗಿದ್ದರು. ಸಂಜೆ ಏಳು ಗಂಟೆ ಸುಮಾರಿಗೆ ವಡವಾಟಿಯವರು, ಆಗ ಗುಲ್ಬರ್ಗಾದಲ್ಲಿದ್ದ ನನಗೆ ಫೋನ್ ಮಾಡಿ ’ಪ್ರಶಸ್ತಿಗಾಗಿ ಆಯ್ಕೆಯಾದ ೫೧ ಮಂದಿಯಲ್ಲಿ ನೀವೂ ಇರುವಿರಿ. ನಿಮಗೆ ಅಭಿನಂದನೆ’ ಎಂದು ತಿಳಿಸಿದರು. ಈ ಪ್ರಶಸ್ತಿಯ ಕನಸನ್ನು ಎಂದೂ ಕಾಣದೆ ನನಗೆ ಆಶ್ಚರ್ಯವಾಯಿತು. ’ನಿಮ್ಮ ಹೆಸರನ್ನು ಎಂ.ಪಿ. ಪ್ರಕಾಶ ಅವರೇ ಸೂಚಿಸಿದರು’ಎಂದು ವಡವಾಟಿ ಮಾತು ಮುಂದುವರಿಸಿದರು. ಈ ಸುದ್ದಿ ಮರುದಿನ ಬೆಳಿಗ್ಗೆ ಕನ್ನಡಪ್ರಭದಲ್ಲಿ (ಪತ್ರಿಕೆಗೆ ಅಧಿಕೃತವಾಗಿ ಬಿಡುಗಡೆ ಮಾಡುವ ಮೊದಲೇ) ಪ್ರಕಟವಾಯಿತು. ಹತ್ತಿಪ್ಪತ್ತು ಬ್ರಾಹ್ಮಣ ಪತ್ರಕರ್ತರು ಹೋಗಿ ತಕರಾರು ಮಾಡಿ ಅಂದಿನ ಕನ್ನಡಪ್ರಭದ ಸಂಪಾದಕರಿಗೆ ಆ ಪ್ರಶಸ್ತಿಯನ್ನು ಕೊಡಿಸಿ ಸ್ವಧರ್ಮ ಪಾಲನೆ ಮಾಡಿದರು. ಈ ಘಟನೆ ಬೆಂಗಳೂರಿನ ಪತ್ರಿಕಾ ವಲಯದಲ್ಲಿ ಪ್ರಚಾರವಾಯಿತು. ನಂತರ ಆ ಸಂಪಾದಕರು ನನಗೆ ಫೋನ್ ಮಾಡಿ ’ನಿಮ್ಮ ಪ್ರಶಸ್ತಿಯನ್ನು ನಾನು ಕಸಿದುಕೊಂಡಂತಾಯಿತು’ ಎಂದು ದುಃಖ ವ್ಯಕ್ತಪಡಿಸಿದರು.
ಮರುವರ್ಷ ಧರ್ಮಸಿಂಗ್ ಜೊತೆ ಎಂ.ಪಿ. ಪ್ರಕಾಶ ಅವರೂ ನನಗೆ ಆ ಪ್ರಶಸ್ತಿ ನೀಡಿ ಖುಷಿಪಟ್ಟರು.”
“ನಿಲುಮೆ ಎಂತಹ ಹಿಪಾಕ್ರೈಟುಗಳ ಅಡ್ಡೆ ಎಂಬುದಕ್ಕೆ ಇದೇ ಸಾಕ್ಷಿ. ”
ಬಡಾಯಿ,ಅನರ್ಥಮಾನ,ಮಂಡಸಂಪಿಗೆ,ಸೌ ಹಾದರದ ಬ್ಲಾಗುಗಳನ್ನು ನೋಡಿ, ಅಲ್ಲಿಯೇ ಆಡಿ, ಬೆಳೆದು, ಕುಣಿದು ಹಿರಿ-ಹಿರಿ ಹಿಗ್ಗುವವರಿಗೆ ಹಾಗನಿಸುವುದು ಸಹಜ!!
Mr. Manohar, you are a troll.
You are a troll.
ಭಟ್ಟಂಗಿ ಬದುಕನ್ನು ಬದುಕುತ್ತಿರುವವರಿಗೆ ಉಳಿದವರು ಟ್ರಾಲ್ ಅನಿಸುವುದು ಸಹಜ!
“ಹತ್ತಿಪ್ಪತ್ತು ಬ್ರಾಹ್ಮಣ ಪತ್ರಕರ್ತರು ಹೋಗಿ ತಕರಾರು ಮಾಡಿ ಅಂದಿನ ಕನ್ನಡಪ್ರಭದ ಸಂಪಾದಕರಿಗೆ ಆ ಪ್ರಶಸ್ತಿಯನ್ನು ಕೊಡಿಸಿ ಸ್ವಧರ್ಮ ಪಾಲನೆ ಮಾಡಿದರು”.
ಅದು ಸ್ವಧರ್ಮ ಲಾಬಿಯಂದಿರಿ. ಸರಿ.
“ನನಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮಾಡಬೇಕೆಂದು ಕೆ.ಎಂ. ಮರುಳಸಿದ್ಧಪ್ಪ ಅವರು ಎಂ.ಪಿ. ಪ್ರಕಾಶ ಅವರಿಗೆ ಪತ್ರ ಬರೆದದ್ದು, ಅಂದಿನ ಕುಲಪತಿಗಳಾಗಿದ್ದ ಡಾ. ಎಂ.ಎಂ. ಕಲಬುರ್ಗಿ ಅವರು ನನ್ನ ಹೆಸರು ಕೂಡ ಇದ್ದ ಪಟ್ಟಿಯನ್ನು ಕಳಿಸಿದ್ದು, ಅವರು ’ಏ ಅವಾ ನಮ್ಮ ಹುಡುಗ’ ಎಂದು ಅವರು ಹೇಳಿದ್ದು ನನಗೆ ನಂತರ ಗೊತ್ತಾಯಿತು”
ಇದು ಯಾವ ಲಾಬಿ? ಎಡಪಂಥೀಯ/ಸಮಾಜವಾದಿ/ಜಾತ್ಯತೀತ ಲಾಬಿಯೇ?
Meritocracy. arhate yogyate baddhate hagoo saadhanege sanda mannane.
ಒಹೊ!. ಉಳಿದವರಿಗೆ ಅದಿಲ್ಲ ಅಂತ ಡಿಸೈಡ್ ಮಾಡಿ ಬಿಟ್ಟಿದ್ದೀರಿ. ಶರಣರು ಅಂತೀರಿ. ಹೀಗೆ ನಾಚಿಕೆ ಬಿಟ್ಟು ತಮಗೆ ತಾವೇ ಹೊಗಳಿಕೊಳ್ಳುತ್ತೀರಿ. ಸ್ವಲ್ಪ ನೆಲದ ಮೇಲೆ ಇರಿ. ಆಕಾಶದಿಂದ ದೊಪ್ಪೆಂದು ಬಿದ್ದು-ಗಿದ್ದೀರ ಮತ್ತೆ!. ಚೆನ್ನಾಗಿದೆ, ಗುರು-ಶಿಷ್ಯ ಜೋಡಿ!.
“ಉಳಿದವರಿಗೆ ಅದಿಲ್ಲ ಅಂತ ಡಿಸೈಡ್ ಮಾಡಿ ಬಿಟ್ಟಿದ್ದೀರಿ”
arhate yogyate baddhate hagoo saadhane ellara sottalla. aadaroo braahmanyada kaaranadinda idu yaavudoo illada vipravarenyarigoo prashasti siguttale bandide anaadikaaladinda.
“arhate yogyate baddhate hagoo saadhane ellara sottalla”
ಒಹೊ, ಎಲ್ಲರ ಸೊತ್ತಲ್ಲ!. ನೀವಿದನ್ನು ಗುತ್ತಿಗೆ ತೆಗೆದುಕೊಂಡಿದ್ದು ಗೊತ್ತಿರಲಿಲ್ಲ!
“aadaroo braahmanyada kaaranadinda idu yaavudoo illada vipravarenyarigoo prashasti siguttale bandide anaadikaaladinda.”
ಶರಣರಿಗೆ ಏಕೆ ಪ್ರಶಸ್ತಿಯ ಆಶೆಯೊ?? ಯಾಕೆ ಈ ಹಳಹಳಿಕಯೊ?. ಅರ್ಥವಾಗುತ್ತಿಲ್ಲ!
“ಶರಣರಿಗೆ ಏಕೆ ಪ್ರಶಸ್ತಿಯ ಆಶೆಯೊ??” ದರ್ಗಾ ಸರ್ ಅವರೇ ಬರೆದಿದ್ದಾರಲ್ಲ “ಈ ಪ್ರಶಸ್ತಿಯ ಕನಸನ್ನು ಎಂದೂ ಕಾಣದೆ ನನಗೆ..” ಅಂತ. ಅದನ್ನು ಓದಿಯೂ ನೀವು ಈ ತರಹ ಕೇಳಬಹುದೇ?
ವೇದಮಾರ್ಗವ ಮೀರಿದರು ಮಹಾವೇದಿಗಳು ಲಿಂಗವಂತರು, ಆ ಲಿಂಗವಂತರ ಮಹಾವೇದಮಾರ್ಗವ ಲಿಂಗವೇ ಬಲ್ಲನಯ್ಯಾ.
ಶಾಸ್ತ್ರಮಾರ್ಗವ ಮೀರಿದರು ಮಹಾಶಾಸ್ತ್ರಜ್ಞರು ಲಿಂಗವಂತರು, ಆ ಲಿಂಗವಂತರ ಮಹಾಶಾಸ್ತ್ರಮಾರ್ಗವ ಲಿಂಗವೇ ಬಲ್ಲನಯ್ಯಾ.
ಆಗಮಕ್ರೀಯ ಮೀರಿದರು ಮಹಾ ಆಗಮಿಕರು ಲಿಂಗವಂತರು, ಲಿಂಗವಂತರ ಮಹಾ ಆಗಮಕ್ರೀಯ ಲಿಂಗವೇ ಬಲ್ಲನಯ್ಯಾ.
ಪುರಾಣದ ಪರಿಯ ಮೀರಿದರು ಮಹಾಪುರಾಣಿಕರು ಲಿಂಗವಂತರು, ಆ ಲಿಂಗವಂತರ ಪುರಾಣದ ಪರಿಯ ಆ ಲಿಂಗವೇ ಬಲ್ಲನಯ್ಯಾ.
ದೇವ ದಾನಮಾನವರಿಗೆಯೂ ಅರಿಯಬಾರದು.
ವೇದಶಾಸ್ತ್ರಪುರಾಣಾನಿ ಸ್ಪಷ್ಟಂ ವೇಶ್ಯಾಂಗನಾ ಇವ
ಯಾ ಪುನಶ್ಯಾಂಕರೀ ವಿದ್ಯಾ ಗುಪ್ತಾ ಕುಲವಧೂರಿವ ಎಂದುದಾಗಿ,
ಆರಿಗೆಯೂ ಅರಿಯಬಾರದು.
ಲಿಂಗವಂತರು ಉಪಮಾತೀತರು, ವಾಙ್ಮನಾತೀತರು, ಆರ ಪರಿಯೂ ಇಲ್ಲ.
ಸ್ವೇಚ್ಛಾವಿಗ್ರಹೇಣೈವ ಸ್ವೇಚ್ಛಾಚಾರಗಣೇಶ್ವರಾ:
ಶಿವೇನ ಸಹ ತೇ ಭುಙ್ತ್ವಾ ಭಕ್ತಾ ಯಾಂತಿ ಶಿವಂ ಪದಂ
ಲೋಕಚಾರನಿಬಂಧೇನ ಲೋಕಾಲೋಕಾವಿವರ್ಜಿತಾ:
ಲೋಕಾಚಾರಂ ಪರಿತ್ಯಜ್ಯ ಪ್ರಾಣಲಿಂಗಪ್ರಸಾದಿನ:
ಎಂದುದಾಗಿ,
ಈ ಲೋಕದ ಮಾರ್ಗವ ನಡೆಯರು, ಲೋಕದ ಮಾರ್ಗವ ನುಡಿಯರು.
ಲಿಂಗವಂತರ ನಡೆ ನುಡಿ ಆಚಾರ ಅನುಭವ ಆಯತ ಬೇರೆ ಕಾಣಿರಣ್ಣಾ.
ಶ್ರೀಗುರುಲಿಂಗದಿಂದಲುದಯಿಸಿ ಪ್ರಾಣಲಿಂಗಸಂಭಂಧಿಗಳಾದ ಮಹಾಲಿಂಗವಂತರಿಗೆ, ಪ್ರಾಣಲಿಂಗ, ಕಾಯಲಿಂಗ
ಭಕ್ತಕಾಯ ಮಮಕಾಯವಾಗಿ ದೇಹಾದಿ ತತ್ತ್ವವೆಲ್ಲಾ ಶಿವತತ್ತ್ವ,
ಇದು ಕಾರಣ. ಸರ್ವಾಂಗಲಿಂಗಮಹಾಮಹಿಮ ಲಿಂಗವಂತರ ಕ್ರೀಯೆಲ್ಲವೂ ಲಿಂಗಕ್ರೀ.
ಮುಟ್ಟಿದುದೆಲ್ಲಾ ಅರ್ಪಿತ, ಕೊಂಡುದುದೆಲ್ಲಾ ಪ್ರಸಾದ. ಸದ್ಯೋನ್ಮುಕ್ತರು, ಸರ್ವಾಂಗಲಿಂಗವಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
“ಈ ಪ್ರಶಸ್ತಿಯ ಕನಸನ್ನು ಎಂದೂ ಕಾಣದೆ ನನಗೆ” ಮತ್ತು ” ಯಾವುದೇ ಪ್ರಶಸ್ತಿಯ ಆಶೆಯನ್ನು ಹೊಂದಿರದ ನನಗೆ”, ಇವುಗಳ ಮಧ್ಯೆ ಸಾಕಷ್ಟು ವ್ಯತ್ಯಾಸ ಇದೆ ಅನ್ನುವುದು ಗೊತ್ತಿದ್ದೂ ನೀವು ಈ ತರಹ ಮರು ಪ್ರಶ್ನಿಸಬಹುದೇ??
ಮಿ.ನಾಯಕ್, ಸಭ್ಯತೆಯ ಎಲ್ಲೆಯನ್ನು ಮೀರಬೇಡಿ. ದರ್ಗಾ ಸರ್ ಅವರಿಗೆ ಪ್ರಶಸ್ತಿಯ ಆಸೆ ಇದೆ ಅಂತ ಯಾವ ಆಧಾರಗಳ ಬಲದಿಂದ ಹೇಳುತ್ತಿದ್ದೀರಿ?
ಕನಸು ಮತ್ತು ಆಶೆಯ ನಡುವೆ ವ್ಯತ್ಯಾಸ ಇದೆಯೆಂದರೆ ಸಭ್ಯತೆಯ ಎಲ್ಲೆ ಮೀರಿದಂತೆಯೇ?? ಗೊತ್ತಿರಲಿಲ್ಲ!.
ಅವರಿಗೆ ಪ್ರಶಸ್ತಿಯ ಆಸೆ ಇರಲಿಲ್ಲವೆಂದರೆ , ನೀವ್ಯಾಕೆ ಇಲ್ಲಿ ಉರಿ ಹತ್ತಿದವರ ಹಾಗೆ ವರ್ತಿಸುತ್ತಿದ್ದೀರಿ? ಉಳಿದವರಿಗೆ ಪ್ರಶಸ್ತಿ ಸಿಕ್ಕ ಬಗ್ಗೆ ಏಕೆ ಚಿಂತಿಸುತ್ತಿದ್ದೀರಿ? ಸಾಧನೆ, ಆರ್ಹತೆ, ಬದ್ಧತೆ ಗುತ್ತಿಗೆ ತೆಗೆದುಕೊಂಡವರ ಹಾಗೆ ಆಡುತ್ತಿದ್ದೀರಿ? ಬಾಯಲ್ಲಿ ನಾನು ಶರಣ ಎಂದರೆ ಆಗಲಿಲ್ಲ!
ಮಿ. ನಾಯಕ್, ದರ್ಗಾ ಸರ್ ಅವರು ಲಾಬಿ ಮಾಡಿ ರಾಜ್ಯೋತ್ಸವ ಪ್ರಶಸ್ತಿ ಪಡೆದರು ಅಂತ ಚೀಪ್ ಕಾಮೆಂಟ್ ಮಾಡಿದ್ದು ನೀವುಗಳೇ ಎನ್ನುವುದನ್ನು ಮರೆಯಬೇಡಿ. ನಿಮ್ಮ ಆರೋಪವನ್ನು ಸಾಬೀತು ಪಡಿಸಿ. ಅದು ಸಾಧ್ಯವಾಗದಿದ್ದರೆ ಬೇಷರತ್ ಕ್ಷಮೆ ಕೇಳಿ. ನಿಮ್ಮ ಉಪದ್ವಾಪಗಳನ್ನು ತಾಳಿಕೊಳ್ಳಲಾಗುವುದಿಲ್ಲ.
ನಿಮ್ಮ ಹಾಗೆ ನನ್ನ ಜಗತ್ತು ಒಬ್ಬ ವ್ಯಕ್ತಿಯ ಸುತ್ತ ಗಿರಕಿ ಹೊಡೆಯುತ್ತಿಲ್ಲ. ಪ್ರಶಸ್ತಿ ಪಡೆಯಲು ನಿಮ್ಮ ದರ್ಗಾ ಅನ್ನುವವರಿಗೆ ಮಾತ್ರ ಅರ್ಹತೆ ಇರುವುದು, ಉಳಿದವರೆಲ್ಲ ಅರ್ಹತೆ ಇಲ್ಲದೇ ಜಾತಿ ಶಿಫಾರಸಿನಿಂದ ಪಡೆದರು ಎಂಬ ಚೀಫ್ ಕಮೆಂಟ್ ಮಾಡಿ ತಿರುಗಾಡುತ್ತಿರುವವರು ನೀವು. ನಾನು ಅದನ್ನು ಪ್ರಶ್ನಿಸಿದ್ದು. ಮೊದಲು ಉಳಿದವರು ಅರ್ಹರಲ್ಲ ಎಂದು ಸಾಬೀತು ಮಾಡಿ ಅಥವಾ ಬೇಶರತ್ ಕ್ಷಮೆ ಕೇಳಿ.