ವಿಷಯದ ವಿವರಗಳಿಗೆ ದಾಟಿರಿ

Archive for

3
ಮೇ

ನಾಡು- ನುಡಿ: ಮರುಚಿಂತನೆ- ಪ್ರಜಾಪ್ರಭುತ್ವಲ್ಲಿ ಪ್ರಾತಿನಿಧ್ಯದ ಸಮಸ್ಯೆಗಳು: ಭಾಗ 2

ಬಿ. ಎಲ್ ಶಂಕರ್, ಮಾಜಿ ವಿಧಾನಪರಿಷತ್ತಿನ ಅಧ್ಯಕ್ಷರು. ಅಕ್ಷರಕ್ಕೆ: ಶಿವಕುಮಾರ್ ಪಿ.ವಿ

Social Science Column Logo

ಬದಲಾಗುತ್ತಿರುವ ಪ್ರಾತಿನಿಧ್ಯದ ಸ್ವರೂಪಗಳು
ಸಂವಿಧಾನ ರಚನಾ ಸಭೆಯಲ್ಲಿ ಹಲವು ಬಾರಿ ಈ ಚರ್ಚೆ ನಡೆದಿದೆ. ನಂತರ ಸಂಸದೀಯ ಪ್ರಜಾಪ್ರಭುತ್ವವನ್ನು ಅಂತಿಮವಾಗಿ ಆಯ್ಕೆ ಮಾಡಿಕೊಂಡರು.ಈ ಸಂದರ್ಭದಲ್ಲಿ ಪ್ರತಿನಿಧಿತ್ವ ಅಂದರೆ ಎಲ್ಲರನ್ನೂ ಹಾಗೂ ಅವರ ಎಲ್ಲ ವಿಚಾರಗಳನ್ನು ಪ್ರತಿನಿಧಿಸುವಂತವರು ಎನ್ನುವ ಪರಿಕಲ್ಪನೆಯಿತ್ತು. ಇಲ್ಲಿ ಯಾರು ಓಟು ಕೊಟ್ಟರು, ಯಾರು ಕೊಡಲಿಲ್ಲ ಎನ್ನುವುದು ಗೊತ್ತಾಗುವುದಿಲ್ಲ. ಹಾಗಾಗಿ ಕೆಲವು ಬಾರಿ ಬಹಳ ನಿರೀಕ್ಷೆ ಮಾಡಿರುವಂತಹ ಸಂದರ್ಭದಲ್ಲಿ ಓಟು ಕೊಟ್ಟಿರುವುದಿಲ್ಲ. ಕೆಲವೊಮ್ಮೆ ನಿರೀಕ್ಷೆ ಮಾಡಿರದ ಸಂದರ್ಭದಲ್ಲಿ ಕೊಟ್ಟಿರುತ್ತಾರೆ.ಇದಕ್ಕೆ ಪೂರಕವಾಗಿ ಎಂ.ಪಿ.ಪ್ರಕಾಶ್ ಅವರ ಉದಾಹರಣೆಯನ್ನ ನೋಡುವುದಾದರೆ, ಬಹಳ ಒಳ್ಳೆ ಅಭಿವೃದ್ಧಿ ಮಾಡಿರುವಂತಹ ಎಲ್ಲ ಪಕ್ಷದ ಅನೇಕ ಜನ ಸೋತಿರುವುದನ್ನ ಕೂಡಾ ನೋಡಿದ್ದೇವೆ. ಅದೇ ರೀತಿಯಾಗಿ, ಯಾವುದೇ ಅಭಿವೃದ್ಧಿ ಮಾಡದೇ, ಜನರ ಕೈಗೇ ಸಿಗದಿರುವಂತಹ ಅನೇಕರು ಚುನಾವಣೆಯಲ್ಲಿ ಸತತವಾಗಿ ಗೆದ್ದಿರುವಂತವರನ್ನು ಸಹ ನೋಡಿದ್ದೇವೆ. ಈ ಯಾವುದಕ್ಕೂ ಕೂಡಾ ನಿರ್ದಿಷ್ಟವಾದಂತಹ ವ್ಯಾಖ್ಯಾನವನ್ನು ಮಾಡಲಿಕ್ಕೆ, ಅರ್ಥೈಸಲಿಕ್ಕೆ ಸಾಧ್ಯ ಆಗುವುದಿಲ್ಲ. ಅದೇ ರೀತಿ, ಬಹಳಷ್ಟು ಮಟ್ಟಿಗೆ ಒಂದು ಹಂತದಲ್ಲಿ ನನ್ನ ಸಂಶೋಧನೆ ಪ್ರಬಂಧದ ಒಂದು ಅಧ್ಯಾಯದಲ್ಲಿ ಈ ಪ್ರಾತಿನಿಧ್ಯದ ಸಮಸ್ಯೆಯನ್ನು ಚರ್ಚೆಗೆ ಒಳಪಡಿಸಿದ್ದೇನೆ.

ಸ್ವಾತಂತ್ರ ಬಂದು ಕೆಲವು ದಿನಗಳ ಕಾಲ ಜನ ಮತ್ತು ಪ್ರತಿನಿಧಿಗಳು ಸ್ವಾತಂತ್ರ ಹೋರಾಟದ ಗುಂಗಿನಲ್ಲೇ ಇದ್ದರು. ಆಗ ಪ್ರತಿನಿಧಿತ್ವ ಅಂದರೆ ಇಡೀ ದೇಶದಲ್ಲಿ ಯಾವ ಕಾರಣಕ್ಕಾಗಿ ಸ್ವಾತಂತ್ರ್ಯವನ್ನು ಪಡೆದದೆವೋ ಅದೇ ಐಡಿಯಾಲಜಿಯನ್ನು ಪ್ರತಿನಿಧಿಸುವುದು ರೂಢಿಯಲ್ಲಿತ್ತು. ನಮ್ಮ ದೇಶದ ಎಲ್ಲ ಜನರಿಗೂ ಕೂಡಾ ಒಂದು ನೆಮ್ಮದಿಯ ಸಮಾಧಾನಕರ ಬದುಕನ್ನು ಸಾಧ್ಯವಾಗಿಸುವುದು ಅಂದಿನ ಪ್ರತಿನಿಧಿತ್ವದ ಆಶಯವಾಗಿತ್ತು, ಅದು ಸುಮಾರು 10-20 ವರ್ಷಗಳ ಕಾಲ ನಡೆದುಕೊಂಡು ಬಂದಿತು. ಆಗ ಎಲ್ಲ ಕೂಡಾ ನ್ಯಾಶನಾಲಿಸ್ಟ್ ಐಡಿಯಾಲಜಿನಲ್ಲೇ ಇದ್ದರು. ದೇಶದ ಬಗ್ಗೆಯೇ ಚಿಂತನೆ ನಡೆಸುತ್ತಿದ್ದರು.ಗಾಂಧೀಜಿ, ಜಯಪ್ರಕಾಶ ನಾರಾಯಣ್,ಮತ್ತು, ವಿನೋಬಾ ಭಾವೆಯಂತವರ ಜಾತಿ ಯಾವುದು ಅಂತ ಯಾರು ನೋಡುತ್ತಿರಲಿಲ್ಲ. ಹಾಗೆ ಕೇಳಿದ್ದನ್ನು ಕೂಡಾ ಯಾರು ಕೇಳಿಲ್ಲ ಮತ್ತು ಕೇಳುವುದು ಇಲ್ಲ. ಹಾಗೆಯೆ ಇತ್ತೀಚೆಗೆ ಅಣ್ಣಾ ಹಜಾರೆಯವರ ಜಾತಿ ಯಾವುದು ಅಂತ ಯಾರಾದರು ಕೇಳುತ್ತಾರಾ?ಕೇಳುವುದಿಲ್ಲ. ಆದರೆ, ಇವರೆಲ್ಲರಿಗೂ ಒಂದು ಕಾರಣ ಇತ್ತು. ಆ ಕಾರಣ ಮುಖ್ಯ ಅದಕ್ಕಾಗಿ ಅವರು ಮಾಡುತ್ತಿದ್ದಾರೆ. ಹಾಗಾಗಿ ಅವರು ಯಾರು ಎನ್ನುವುದು ಮುಖ್ಯವಾಗುವುದಿಲ್ಲ. ಈ ಸಣ್ಣ ಪುಟ್ಟ ಪ್ರಶ್ನೆಗಳೆಲ್ಲಾ ಬರುವುದು ಈ ನಮ್ಮಂತವರೆಲ್ಲಾ ಚುನಾವಣೆಗೆ ನಿಂತಾಗ ಮಾತ್ರ. ಹಾಗಾಗಿ ಸ್ವಾತಂತ್ರ ಬಂದ ಮೊದಲ ಇಪ್ಪತ್ತು ವರ್ಷಗಳ ಕಾಲ 1952ರ ಚುನಾವಣೆಯಿಂದ ಸುಮಾರು 70ರ ದಶಕದವರೆಗೆ ಜಾತಿ ಅಥವಾ ಇತ್ಯಾದಿ ಸಣ್ಣ ಪುಟ್ಟ ಪ್ರಶ್ನೆಗಳು ಇರಲಿಲ್ಲ. ಬದಲಾಗಿ, ಪ್ರತಿನಿಧಿತ್ವ ಅಂದರೆ, ದೇಶವನ್ನು ಪ್ರತಿನಿಧಿಸುವುದು ಎನ್ನುವಂತೆಯೇ ನೋಡಲಾಗುತ್ತಿತ್ತು. ಒಂದು Cause, National Spirit ಅನ್ನು Represent ಮಾಡುತ್ತಿದ್ದಾನೆ ಎನ್ನುವ ಅರ್ಥ ಇತ್ತು ಮತ್ತು ಹಾಗೆಯೇ ನಡೆದುಕೊಂಡು ಬರುತ್ತಿತ್ತು. ಮತ್ತಷ್ಟು ಓದು »