— ಮು. ಅ. ಶ್ರೀರಂಗ ಬೆಂಗಳೂರು
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೩
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೪
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೫
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೬
ಆವರಣ’ ಎಂಬ ವಿ-ಕೃತಿ ಸಂಗ್ರಹ: ಗೌರಿ ಲಂಕೇಶ್
(‘ನಿಲುಮೆ’ಯಲ್ಲಿ ೧-೪-೧೪ರಂದು ಪ್ರಕಟವಾದ ಲೇಖನದ ಮುಂದುವರೆದ ಭಾಗ)
ಕೋ. ಚೆನ್ನಬಸಪ್ಪನವರು (ಕೋ.ಚೆ) ತಮ್ಮ “ ಆವರಣ “ದಲ್ಲಿ ಆವರಣ, ವಿಕ್ಷಿಪ್ತ ಎಂಬ ಲೇಖನದಲ್ಲಿ (…… ವಿಕೃತಿ ಪುಟ ೪೮) ಔರಂಗಜೇಬ ಮತ್ತು ಟಿಪ್ಪು ಸುಲ್ತಾನನ ಆಳ್ವಿಕೆಯಲ್ಲಿನ ಕೆಲವು ಅಂಶಗಳನ್ನು ಪಟ್ಟಿಮಾಡಿ (ಅವುಗಳ ಅಂತರ್ಯವನ್ನು ಪೂರ್ತಿ ತಿಳಿಯುವ ಕೆಲಸಕ್ಕೆ ಕೈ ಹಾಕದೆ) ‘ನೋಡಿ ಅವರಿಬ್ಬರೂ ಇಷ್ಟು ಒಳ್ಳೆಯ ಕೆಲಸಮಾಡಿದ್ದಾರೆ’ ಎಂದು ತೃಪ್ತಿಪಟ್ಟುಕೊಂಡಿದ್ದಾರೆ. ‘ಆವರಣ’ ಕಾದಂಬರಿ ಪ್ರಕಟವಾಗಿದ್ದು ಫೆಬ್ರವರಿ ೨೦೦೭ರಲ್ಲಿ. ಟಿಪ್ಪು ಬಗ್ಗೆ ೨೦೦೬ರ ಸೆಪ್ಟೆಂಬರ್ ತಿಂಗಳಿನಲ್ಲಿ ಒಂದು ದೊಡ್ಡ ವಿವಾದವೆದ್ದು ಕರ್ನಾಟಕದ ಸಾಹಿತಿಗಳ,ಬುದ್ಧಿಜೀವಿಗಳ,ಚಿಂತಕರ ಜತೆಗೆ ಸಾಮಾನ್ಯ ಓದುಗರ ಲೇಖನ-ಪತ್ರಗಳಿಂದ ಪತ್ರಿಕೆಗಳ ಪುಟಗಳು ತುಂಬಿಹೋಗಿತ್ತು. ಆ ಸಮಯದಲ್ಲಿ ಭೈರಪ್ಪನವರು ‘ವಿಜಯಕರ್ನಾಟಕ’ ಪತ್ರಿಕೆಯಲ್ಲಿ ಸೆಪ್ಟೆಂಬರ್ ೨೪, ೨೦೦೬ರಂದು ಬರೆದ ಲೇಖನದಲ್ಲಿನ ಕೆಲವು ಅಂಶಗಳು ಕೋ.ಚೆ ಅವರಿಗೆ ಟಿಪ್ಪುವಿನ ಮೇಲೆ ಇರುವ ಪ್ರೇಮ,ಅಭಿಮಾನಕ್ಕೆ ಉತ್ತರ ನೀಡಬಲ್ಲವು ಎಂದು ಭಾವಿಸಿದ್ದೇನೆ.
(೧) ಟಿಪ್ಪುವು ಮಕ್ಕಳನ್ನು ಯುದ್ಧಬಂಧಿಗಳಾಗಿ ಇಟ್ಟ ಕರಾರು ಯಾವುದು? ಯುದ್ಧದಲ್ಲಿ ಸೋತ ನಂತರ ಇಂತಿಷ್ಟು ಹಣವನ್ನು ಬ್ರಿಟಿಷರಿಗೆ ಕೊಡುವುದಾಗಿ ಅವನು ಒಪ್ಪಿಕೊಂಡ. ಸದ್ಯದಲ್ಲಿ ಕೈಲಿ ಹಣವಿರಲಿಲ್ಲ ……… ಒತ್ತೆ ಇಡಲು ಬೇರೇನೂ ಇರಲಿಲ್ಲ. ಟಿಪ್ಪುವಿನ ಬರೀ ಮಾತನ್ನು,ಆಣೆ ಪ್ರಮಾಣಗಳನ್ನು ಬ್ರಿಟಿಷರು ನಂಬಿಹೋಗಬಹುದಿತ್ತೆ? ….. ಒತ್ತೆ ಇರಿಸಿಕೊಂಡ ಮಕ್ಕಳ ಯೋಗಕ್ಷೇಮವನ್ನು ಬ್ರಿಟಿಷರು ಚೆನ್ನಾಗಿಯೇ ನೋಡಿಕೊಂಡರು.
ಮತ್ತಷ್ಟು ಓದು 
Like this:
Like ಲೋಡ್ ಆಗುತ್ತಿದೆ...