ನಾಡು- ನುಡಿ: ಮರುಚಿಂತನೆ- ಪ್ರಜಾಪ್ರಭುತ್ವಲ್ಲಿ ಪ್ರಾತಿನಿಧ್ಯದ ಸಮಸ್ಯೆಗಳು: ಭಾಗ 3
ಬಿ. ಎಲ್ ಶಂಕರ್, ಮಾಜಿ ವಿಧಾನಪರಿಷತ್ತಿನ ಅಧ್ಯಕ್ಷರು. ಅಕ್ಷರಕ್ಕೆ: ಶಿವಕುಮಾರ್ ಪಿ.ವಿ
80 ಮತ್ತು 84ರ ಸಂದರ್ಭದಲ್ಲಿ ಕೆಲವು ಅನಾಹುತಗಳು ಸಂಭವಿಸಿದವು. 84ರ ಚುನಾವಣೆಯಲ್ಲಿ ನಿರ್ಣಾಯಕವಾದದ್ದು ಭಾವನಾತ್ಮಕ ಓಟುಗಳು. ಆರ್ಥಿಕ ಪರಿಕಲ್ಪನೆಗಳು ಅಥವಾ ದೇಶದ ಇತರ ಯಾವುದೇ ವಿಚಾರಗಳಿಗೆ ಬದಲಾಗಿ, ನಮ್ಮ ಪರವಾಗಿ ನಿಂತಿದ್ದಂತಹ ಒಬ್ಬ ನಾಯಕಿಗೆ ತೊಂದರೆಯಾಯಿತು. ಆಕೆಯ ಕೊಲೆಯಾಯ್ತು ಎನ್ನುವ ಕಾರಣಕ್ಕೋಸ್ಕರ ಈ ಸಂದರ್ಭದಲ್ಲಿ ಅವರ ಜೊತೆಗಿರಬೇಕು ಎನ್ನುವ ಭಾವನಾತ್ಮಕ ಅಂಶವೇ ಮುಖ್ಯವಾಯಿತು. ಹಾಗಾಗಿ, ಆಗ ಒಂದೇ ಪಕ್ಷದ ಪರವಾಗಿ ಮತಗಳು ಚಲಾವಣೆಯಾಗಿ ಕಾಂಗ್ರೇಸ್ ಅಧಿಕಾರಕ್ಕೆ ಬಂತು.
ಈ ಸಂದರ್ಭದಲ್ಲಿ ಎಷ್ಟೋ ಜನ ಯೋಗ್ಯರು, ತಮ್ಮ ತಮ್ಮ ಕ್ಷೇತ್ರದಲ್ಲಿ ಅತ್ಯುತ್ತಮವಾದ ಕೆಲಸ ನಿರ್ವಹಿಸಿರುವಂತಹ ಅನೇಕರು ಸೋತು ಬಿಟ್ಟರು. ಚಂದ್ರಶೇಖರ್, ಅಟಲ್ಜಿ ಅವರಂತಹ ನಾಯಕರೇ ಸೋತುಬಿಟ್ಟರು.ಅಟಲ್ ಬಿಹಾರಿ ವಾಜಪೇಯಿಯವರಿಗಿಂತ ಒಬ್ಬ ದೊಡ್ಡ ಸಂಸದೀಯ ಪಟುವಿನ ಹೆಸರು ಹೇಳುವುದೇ ಕಷ್ಟ. ಇಡೀ ಸ್ವತಂತ್ರ ಭಾರತದಲ್ಲಿ ತುಂಬಾ ಪ್ರಮುಖರು ಎಂದು ಹೇಳುವ ಕೆಲವೇ ಕೆಲವರ ಹೆಸರಿನಲ್ಲಿ ಅಟಲ್ಜಿ ಕೂಡಾ ಒಬ್ಬರು.ಹೀಗೆ ಅವರದಲ್ಲದೇ ಇರುವಂತಹ ಹಲವು ಕಾರಣಗಳಿಂದಾಗಿ ಕೆಲವು ಬಾರಿ ಚುನಾವಣಾ ಫಲಿತಾಂಶಗಳು ವ್ಯತ್ಯಾಸವಾಗುತ್ತವೆ. ಯಾರೋ ಒಬ್ಬತಜ್ಞರು ಹೇಳುವಂತೆ; ‘Truth is not determined by mejarity votes’ ಈ ರೀತಿಯಲ್ಲಿ ಸತ್ಯವೇ ಆಗಬೇಕು, ಸತ್ಯದ ಪರವಾಗೇ ಚುನಾವಣೆ ಫಲಿತಾಂಶ ಇರಬೇಕು ಎಂದೇನಿಲ್ಲ. ಸಂದರ್ಭಕ್ಕೆ ತಕ್ಕಂತೆ ತೀರ್ಮಾನ ರೂಪುಗೊಳ್ಳುತ್ತದೆ ಅಷ್ಟೆ. ಇದಕ್ಕೆ ಮತ್ತೆ ಬೇರೆ ಯಾವುದೇ issue ಮುಖ್ಯವಾಗಿರಲಿಲ್ಲ. ಮತ್ತಷ್ಟು ಓದು
ಒಂದು ರಾಜಕೀಯ ವಿಡಂಬನೆ:ಬಪ್ಪರೆ ಬಪ್ಪ.. ತಿಪ್ಪರ್ ಲಾಗ ಹಾಕಪ್ಪಾ…
– ತುರುವೇಕೆರೆ ಪ್ರಸಾದ್
ಎಲೆಕ್ಷನ್ ಆದ್ಮೇಲೆ ಯಾವ ಯಾವ ಮುಖಂಡರು ಏನೇನು ಮಾಡ್ತಿದಾರೆ ಅಂತ ಸಮೀಕ್ಷೆ ಮಾಡೋಕೆ ರಾಂಪ ಪಕ್ಷಭೇದ ಮರೆತು ಎಲ್ಲರ ಮನೆ, ಪಕ್ಷಗಳ ಅಡ್ಡೆಗೆ ಬಿಜುಗೈದ. ವಿವಿಧ ರಾಜಕೀಯ ಮುಖಂಡರು ರಿಸಲ್ಟ್ ಬರೋತನಕ ಏನು ಸ್ಟಾಪ್‍ಗ್ಯಾಪ್ ಅರೇಂಜ್‍ಮೆಂಟ್ ಮಾಡ್ಕೊಂಡಿದಾರೆ ಅನ್ನೋ ರಾಂಪನ ಪ್ರಶ್ನೆಗೆ ಬಂದ ಪ್ರತಿಕ್ರಿಯೆಗಳು ಕೆಳಕಂಡಂತಿವೆ.
ಜೋಕುಮಾರ್:ನಿಜ! ರಿಸಲ್ಟ್ ಗೆ ಒಂದು ತಿಂಗಳು ಕಾಯೋದು ಅಂದ್ರೆ ತುಂಬಾ ಕಷ್ಟ. ಈ ಕಾಲ್ದಲ್ಲಿ ಸಿಇಟಿ ರಿಸಲ್ಟೇ 15ದಿನಕ್ಕೆ ಬರುತ್ತೆ. ಅಂತಾದ್ರಲ್ಲಿ ಎಲೆಕ್ಷನ್ ರಿಸಲ್ಟ್ ಇಷ್ಟು ಲೇಟಾದ್ರೆ ಹೇಗೆ? ಈ ಒಂದು ತಿಂಗಳಲ್ಲಿ ಎಲ್ಲಾ ದೇಸೀ ಅಂಗಮರ್ದನ, ಫಾರಿನ್ ಮಸಾಜ್ ಸೆಂಟರ್‍ಗಳನ್ನ ವಿಸಿಟ್ ಮಾಡ್ಬೇಕು ಅಂದ್ಕೊಂಡಿದೀನಿ. ಹಾಗೇ ಹೊಸ ಚಿತ್ರ ‘ಕಣ್ಣೀರ್ ಕಣ್ಣೀರ್’ ಡಾಕ್ಯುಮೆಂಟರಿನ ಸಹಾರಾ ಡೆಸರ್ಟ್‍ನಲ್ಲಿ ಶೂಟ್ ಮಾಡ್ಬೇಕು ಅಂತ ಪ್ಲಾನಿದೆ. ರೈತರಿಗಾಗಿ ನೀರು ಮರುಪೂರಣ ತರ ಕಣ್ಣೀರು ಮರುಪೂರಣ ಮಾಡೋ ಬಗ್ಗೆ ಹೊಸ ಹೊಸ ಯೋಜನೆಗಳ ಸ್ಕೆಚ್ ಹಾಕಿದೀನಿ. ಇದು ಯಾವಾಗ್ಲೂ ಕಣ್ಣಿರು ಸುರಿಸೋ ರೈತರಿಗೆ ಹಾಗೂ ರಾಜಕೀಯ ಮುಖಂಡರಿಗೆ ಉಪಯೋಗ ಆಗುತ್ತೆ.
ಮುದ್ದೇಗೌಡರು:ಮುದ್ದೆ ತಿಂದ ತಕ್ಷಣ ಕಣ್ ಎಳ್ಕೊಂಡು ಹೋಗ್ತಿತ್ತು. ಈಗ ಯಾಕೋ ಕಾಂಪೋಸ್ ನುಂಗುದ್ರೂ ನಿದ್ದೆ ಹತ್ತುತ್ತಿಲ್ಲ. ಕೇಳ್ಕೊಂಡು ತೂಕಡಿಸೋಣ ಅಂದ್ರೆ ಲೋಕಲ್ ಭಾಷಣಗಳೂ ಇಲ್ಲ. ಕೇರಳದಲ್ಲಿ ಯಾರೋ ನಿದ್ದೆಗೆ ಆಯುರ್ವೇದ ಔಷಧಿ ಕೊಡ್ತಾರಂತೆ, ಅಲ್ಲಿಗೆ ಹೋಗೋಣ ಅಂದ್ಕೊಂಡಿದೀನಿ..ಹಾಗೇ ಬರ್ತಾ ನಮ್ ಪಕ್ಷದ ಬಗ್ಗೆ ಹೀನಾಯವಾಗಿ ಮಾತಾಡ್ದೋರಿಗೆ ನಿದ್ದೆ ಕೆಡಿಸೋಕೆ ಏನಾದ್ರೂ ಮದ್ದು, ನಿಂಬೇಹಣ್ಣು ತಂದೇ ತರ್ಬೇಕು ಅಂದ್ಕೊಂಡಿದೀನಿ..
ಹುಡ್ಕೋ ಕುಮಾರ್:ಸಂಜಯ್ ಬಾರು ಅವರ ಪುಸ್ತಕ ಸ್ವಲ್ಪ ಲೇಟಾಗಿ ಸಿಕ್ತು. ಇಲ್ಲ ಅಂದಿದ್ರೆ ಕೈ ಪಕ್ಷದೋರು ಬಾರಲ್ಲೇ ಕೂದಲು ಕಿತ್ಕೊಳೋ ಹಾಗೆ ಮಾಡ್ತಿದ್ದೆ. ಈಗ ಅದನ್ನ ಸ್ಟಡಿ ಮಾಡ್ತಿದೀನಿ. ಅದೇ ಮಾದರಿಲಿ ‘ಮೇಕಿಂಗ್ ಆಫ್ ಮುದ್ದರಾಮಯ್ಯ- ಭಾಗ್ಯ ಬಂಡಲ್ಸ್ ‘ ಅಂತ ಒಂದು ನಾವೆಲ್ ಬರೆಯೋ ಸಿದ್ಧತೇಲಿದೀನಿ.ಹಾಗೇ ಒಂದು ಪದ್ಯ ಬರ್ದಿದೀನಿ ಕೇಳಿ..
ಸಂಜಯ ಬರು
ಎಬ್ಸಿದ್ದಾರೆ ಕೈ ಸಿಬಿರು
ಸಿಂಗ್ ಬರೀ ಡಾಲು
ಸೋನಿಯಾದೇ ಡೌಲು?
ಚಂದನ್ ಕಣಿ:‘ದೇಹಕೆ ಉಸಿರೇ ಸದಾ ಭಾರ, ಇಲ್ಲ ಆಧಾರ’ ಈ ಹಳೇ ಹಾಡಿಗೆ ‘ಕೈ ಪಕ್ಷಕೆ ಸಂಜಯ ಸದಾ ಭಾರ, ಆರೋಪಕಿಲ್ಲ ಆಧಾರ’ ಅಂತ ಹೊಸ ಟ್ಯೂನ್ ಹಾಕ್ತಿದೀನಿ. ಎಲ್ಲರ ಅಧಿಕೃತ, ಅನಧಿಕೃತ ಹೆಂಡ್ತೀರನ್ನ ಹುಡುಕೋ ಒಂದು ಹೊಸ ಸಾಫ್ಟ್ವೇರ್ ಡವಲಪ್ ಮಾಡ್ಬೇಕು ಅಂತ ಪ್ಲಾನ್ ಮಾಡ್ತಿದೀನಿ ಮತ್ತಷ್ಟು ಓದು