ವಿಷಯದ ವಿವರಗಳಿಗೆ ದಾಟಿರಿ

Archive for

19
ಮೇ

ಚುನಾವಣೆ 2014: ಯುಪಿಎ ಸೋಲಿಗೆ ಕಾರಣಗಳೇನು?

– ತುರುವೇಕೆರೆ ಪ್ರಸಾದ್

SRಲೋಕಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ನಿಜವಾಗಿದ್ದು ಅದರಂತೆ ಬಿಜೆಪಿ ಮತ್ತು ಅದರ ಮಿತ್ರಪಕ್ಕಗಳನ್ನೊಳಗೊಂಡ ಎನ್‍ಡಿಎ ಕಳೆದ 25 ವರ್ಷಗಳಲ್ಲೇ ಐತಿಹಾಸಿಕ ಎನ್ನಬಹುದಾದ ಭಾರೀ  ಗೆಲುವು ದಾಖಲಿಸಿದೆ. ಯುಪಿಎ ನೂರರ ಗಡಿ ಮುಟ್ಟಲಾಗದೆ ದಯನೀಯ ಸೋಲು ಕಂಡಿದೆ. ಯುಪಿಎ ವೈಫಲ್ಯಕ್ಕೆ ಕಾರಣವಾದ ಹಲವು ಅಂಶಗಳಿವೆ. ಅವುಗಳಲ್ಲಿ  ಮಿತಿ ಮೀರಿದ ಭ್ರಷ್ಟಾಚಾರ, ಸಾಲು ಸಾಲು ಹಗರಣಗಳು, ಹಣದುಬ್ಬರ, ಬೆಲೆಯೇರಿಕೆ  ಇವು ಪ್ರಮುಖ ಕಾರಣಗಳು. ಯುಪಿಎ ಸರ್ಕಾರದ ವೈಫಲ್ಯಕ್ಕೆ ಕಾರಣವಾದ  ಅಂಕಿ-ಅಂಶಗಳನ್ನು ಖ್ಯಾತ ಪತ್ರಕರ್ತ ಸೆನ್‍ಗುಪ್ತ ಪಟ್ಟಿ ಮಾಡಿದ್ದಾರೆ.  ಅವುಗಳ ಸಾರಾಂಶ ಈ ಕೆಳಕಂಡಂತಿದೆ

•    ಯುಪಿಎ ಆಢಿತಾವಧಿಯಲ್ಲಿ ನಡೆದ 1.76 ಲಕ್ಷ ಕೋಟಿಯ 2ಜಿ ಹಗರಣ, 1.85 ಲಕ್ಷ ಕೋಟಿಯ ಕಲ್ಲಿದ್ದಲು ಹಂಚಿಕೆ ಹಗರಣ, ರೂ.3600 ಕೋಟಿಯ ಅಗಸ್ಟಾ ವೆಸ್ಟ್‍ಲ್ಯಾಂಡ್ ಹೆಲಿಕಾಪ್ಟರ್ ಹಗರಣ, 90 ಕೋಟಿ ಹಣ ದುರುಪಯೋಗದ ಕಾಮನ್‍ವೆಲ್ತ್ ಕ್ರೀಡಾಕೂಟದ ಹಗರಣ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಶನ್‍ನಿಂದ 5000 ಕೋಟಿ ದುರುಪಯೋಗದ ಆರೋಪ ಹೊತ್ತಿರುವ ಮಾಯಾವತಿ ಸರ್ಕಾರದ ಹಗರಣ- ಇವನ್ನು ಜನ ಎಂದಿಗೂ ಕ್ಷಮಿಸುವುದಿಲ್ಲ ಎಂಬುದನ್ನು ಈ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ.

•    2011ರಲ್ಲಿ ಸುಮಾರು 4 ಲಕ್ಷ ಕೋಟಿ ಕಪ್ಪು ಹಣ ಭಾರತದಿಂದ ಆಚೆ ಸಾಗಿಸಲಾಗಿದೆ. ಇದು 2010ರ ಶೇ.24ರಷ್ಟು ಹೆಚ್ಚು. ಪ್ರತಿ ವರ್ಷ ಇದು ಅವ್ಯಾಹತವಾಗಿ ನಡೆದು ಬಂದಿದೆ. ಆದರೆ ಸ್ವಿಸ್ ಬ್ಯಾಂಕ್‍ನಲ್ಲಿದೆ ಎಂದು ಹೇಳಾಗಿರುವ 1456 ಬಿಲಿಯನ್ ಡಾಲರ್ ಹಣ ಹಿಂದೆ ಪಡೆಯಲು ಯುಪಿಎ ಸರ್ಕಾರ ಯಾವ ಗಂಭೀರ ಪ್ರಯತ್ನವನ್ನೂ ಮಾಡಲಿಲ್ಲ.

•    ಯುಪಿಎ ಸರ್ಕಾರದ ಮಹದಾಕಾಂಕ್ಷಿ ಯೋಜನೆ ಎನಿಸಿದ ಉದ್ಯೋಗ ಖಾತ್ರಿ ಯೋಜನೆಯಡಿ ಯುಪಿಎ ಸರ್ಕಾರ 1.9ಲಕ್ಷ ಕೋಟಿ ಹಣ ವೆಚ್ಚ ಮಾಡಿದೆ. ಆದರೆ ಶೇ.31 ಗ್ರಾ.ಪಂಚಾಯ್ತಿಗಳಿಗೆ ಈ ಹಣ ಹೇಗೆ ವಿನಿಯೋಗಿಸಬೇಕು ಎಂಬುದೇ ಗೊತ್ತಿಲ್ಲ, ರಾಜ್ಯದಲ್ಲಿನ ಹಳೆ ಉಳಿಕೆ, ಬಳಕೆಯ ಲೆಕ್ಕವೇ ಇಡದೆ  ಕಳೆದ 3 ವರ್ಷಗಳಿಂದ ಒಟ್ಟಾರೆ 11549 ಕೋಟಿ  ಹಣ ಬಿಡುಗಡೆ ಮಾಡಲಾಗಿದೆ.   4.33 ಲಕ್ಷ ಜಾಬ್ ಕಾರ್ಡ್‍ಗಳಿಗೆ ಭಾವಚಿತ್ರವೇ ಇಲ್ಲ, ಗ್ರಾಮೀಣ  ಪ್ರದೇಶದಲ್ಲಿ ಕೇವಲ ಶೇ.20 ಹಣವನ್ನು ಮಾತ್ರ ಉದ್ದೇಶಿತ ಯೋಜನೆಗಳಿಗೆ ಬಳಸಲಾಗಿದ್ದು ವ್ಯಾಪಕ ಅವ್ಯವಹಾರ ನಡೆದಿದೆ ಎಂದು ಸಿಎಜಿ ಆಕ್ಷೇಪಿಸಿದೆ.

ಮತ್ತಷ್ಟು ಓದು »