ನಾಡು- ನುಡಿ: ಮರುಚಿಂತನೆ- ಪ್ರಜಾಪ್ರಭುತ್ವಲ್ಲಿ ಪ್ರಾತಿನಿಧ್ಯದ ಸಮಸ್ಯೆಗಳು: ಭಾಗ 4
ಬಿ. ಎಲ್ ಶಂಕರ್, ಮಾಜಿ ವಿಧಾನಪರಿಷತ್ತಿನ ಅಧ್ಯಕ್ಷರು. ಅಕ್ಷರಕ್ಕೆ: ಶಿವಕುಮಾರ್ ಪಿ.ವಿ
73 ರ ಜೆ.ಪಿ.ಚಳವಳಿಯಿಂದ 98ರವರೆಗೆ ನಮ್ಮದು ಒಂದು ರೀತಿಯ ನಿಲುವು ಇತ್ತು. 99ರ ನಂತರ ಒಂದು ರೀತಿಯ ನಿಲುವು ಪ್ರಾರಂಭವಾಯಿತು. ಕಾರಣ ನಮ್ಮ ನಿಲುವನ್ನು ಪ್ರತಿಪಾದಿಸುತ್ತಿರುವಂತಹ ಸಂಘಟನೆ ಛಿದ್ರ ವಿಛಿದ್ರವಾದಂತಹ ಸಂದರ್ಭದಲ್ಲಿ ನಮ್ಮ ನಿಲುವಿಗೆ ಹತ್ತಿರವಾದಂತಹ ಒಂದು ನಿಲುವನ್ನು ಆಯ್ಕೆ ಮಾಡಿಕೊಂಡು ಮುಂದುವರೆದು ಬಂದಿದ್ದೇವೆ. ಅದು ಒಂದು ರೀತಿಯಲ್ಲಿ ರಾಜೀ ಮಾಡಿಕೊಂಡಂತೆಯೇ. ಆಗ ಪ್ರತಿನಿಧಿತ್ವದ ಪ್ರಶ್ನೆ ಬರುತ್ತದೆ. ಜನರು ಕೇಳುತ್ತಾರೆ ‘ನೀವು ತುರ್ತು ಪರಿಸ್ಥಿತಿಯ ವಿರುದ್ಧವಾಗಿದ್ದವರು, ನೀವು ಹೀಗಾಗಿ ಬಿಟ್ಟಿರಲ್ಲ ಅಂತ’ ಹೇಳುವವರೂ, ಹಾಗೆಯೇ, ‘ಏನೆ ಆಗಲೀ ನೀವು ನಿಮ್ಮ ಸೆಕ್ಯುಲರ್ ಐಡಿಯಾಲಜಿ ಬಿಟ್ಟುಕೊಡಲಿಲ್ಲ, ಪಟೇಲರ ಸರ್ಕಾರವನ್ನು ಬಿಟ್ಟು ಹೊರಗೆ ಬಂದ್ರಿ’ ಎನ್ನುವವರೂ ಇದ್ದಾರೆ. ಹಾಗೆಯೇ ಪ್ರತಿನಿಧಿತ್ವ ಎನ್ನುವುದು ನಾವು ಒಪ್ಪಿರುವ ಸಿದ್ಧಾಂತ, ತತ್ವಗಳ ಆಧಾರದ ಮೇಲೂ ಇರುತ್ತದೆ. ಅಥವಾ ಅದಕ್ಕೆ ಹತ್ತಿರವಾದ ಅಂಶಗಳಿಂದಲೂ ಕೂಡಿರುತ್ತದೆ.ಅದಕ್ಕೆ ನಾನು ಆಗಲೇ ಹೇಳಿದ್ದು; ಗೇಣಿದಾರರ ಪರವಾಗಿ ಮಾತನಾಡಿದರೆ ಆತನ ಮಗನ ಒಟು ನಮಗೆ ಅನುಮಾನ, ರಾಜ್ಯದ ರಾಜಕಾರಣದ ಬಗ್ಗೆ ಮಾತನಾಡಿದರೆ ನಾವು ಲೋಕಲ್ ಅಲ್ಲ ಎನ್ನುವ ತೀರ್ಮಾನ ಬರುತ್ತದೆ.ನಾವೇನಾದರೂ ಲೋಕಲ್ ವಿಚಾರವನ್ನೇ ಬಳಸಿ ಲೋಕಲ್ ರಾಜಕೀಯಕ್ಕೆ ಇಳಿದರೆ ‘ಹಿತ್ತಲ ಗಿಡ ಮದ್ದಲ್ಲ’ ಎನ್ನುವಂತೆ ಅಲ್ಲಿಯೇ ಲೋಕಲ್ ರಾಜಕೀಯ ಪೈಪೋಟಿ ಶುರುವಾಗುತ್ತದೆ.
ಇಲ್ಲಿ ನಾನು ಪ್ರತಿನಿಧಿಸುತ್ತಿರುವುದು ನನ್ನನ್ನು ಮತ್ತು ನನ್ನ ಆತ್ಮ ಸಾಕ್ಷಿಯನ್ನ.ನನ್ನ ಪಕ್ಷವನ್ನಲ್ಲ ಎನ್ನುವುದು ಗಮನದಲ್ಲಿರಲಿ. ಏಕೆಂದರೆ, ಪಕ್ಷದ ನಿಲುವಿಗೂ ನನ್ನ ನಿಲುವಿಗೂ ಅನೇಕ ವಿಚಾರಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿರಬಹುದು.ಇರಲಿಕ್ಕೆ ಸಾಧ್ಯ ಇದೆ. ಅದಕ್ಕಾಗೆ ಅಮೆರಿಕದಲ್ಲಿ ವಿಪ್ ಸಿಸ್ಟಮ್ ಇಲ್ಲ. ಈ ಪಕ್ಷದ ವಿಚಾರಗಳು ಯಾವುದು ಕೂಡಾ ನಮ್ಮನ್ನು ಬಂಧಿಸಬಾರದು.ಉದಾ; ಒಬಾಮ ಹೆಲ್ತ್ಕೇರ್ ಬಿಲ್ ತಂದಾಗ 23 ಜನ ಡೆಮಾಕ್ರಟಿಕ್ ಪಾರ್ಟಿಯವರು ವಿರುದ್ಧವಾಗಿ ಓಟು ಹಾಕಿದರು.36 ಜನ ರಿಪಬ್ಲಿಕನ್ ಪಾರ್ಟಿಯವರು ಒಬಾಮ ಪರವಾಗಿ ಓಟು ಹಾಕಿದರು.ನಂತರ ಬಿಲ್ ಪಾಸಾಯಿತು.ಆದರೆ, ಇಲ್ಲಿ ಹಾಗಾಗುವುದಕ್ಕೆ ಸಾಧ್ಯವೇ? ಇಲ್ಲಿ ವಿಪ್ ನೀಡಲಾಗುತ್ತದೆ.ಅದನ್ನು ಅನುಸರಿಸದೇ ನಮ್ಮದೇ ನಿಲುವು ತಾಳಿದರೆ ಅದನ್ನು ಪಕ್ಷ ವಿರೋಧಿ ಚಟವಟಿಕೆ ಎಂದು ಪರಿಗಣಿಸುತ್ತಾರೆ. ಅಂದರೆ, ವಿಪ್ ಇಲ್ಲದೇ ಇರುವಂತದ್ದು ನಿಜವಾದ ಪ್ರತಿನಿಧಿತ್ವ. ವಿಪ್ ಇರುವಂತದ್ದು ನಿಜವಾದ ಪ್ರತಿನಿಧಿತ್ವ ಅಲ್ಲವೇ ಅಲ್ಲ. ವಿಪ್ಗೆ ಅನುಗುಣವಾಗಿ ನಿಲುವು ತಾಳುವುದು ಅದು ಪಕ್ಷವನ್ನು ಪ್ರತಿನಿಧಿಸುತ್ತದೆ, ಅದು ಪಕ್ಷದ ದೃಷ್ಟಿಕೋನವಾಗುತ್ತದೆಯೇ ವಿನಃ ಅದು ನನ್ನ ನಿಲುವಾಗುವುದಿಲ್ಲ. ಮತ್ತಷ್ಟು ಓದು
ಮೂರ್ತಿಗಳೇ.ಯಾರ ಸರ್ಕಾರ ಮತ್ತು ಯಾರು ಫ್ಯಾಸಿಸ್ಟ್ ಗಳು?
– ರಾಕೇಶ್ ಶೆಟ್ಟಿ
ಇವತ್ತಿನ ಕನ್ನಡ ಪ್ರಭದಲ್ಲಿ ಪ್ರಕಟವಾದ ನನ್ನ ಲೇಖನದ ಪೂರ್ಣ ಭಾಗವಿದು.ಈ ಲೇಖನವನ್ನು ಮೂರ್ತಿಗಳಿಗೂ ಮೇಲ್ ಮಾಡಿದ್ದೇನೆ.
“ಮೋದಿಯನ್ನು ಫ್ಯಾಸಿಸ್ಟ್” ಅಂತ ಮಾತು ಮಾತಿಗೆ ಕರೆಯುತ್ತಿರುವ,ನಾಡಿನ ಸಾಕ್ಷಿ ಪ್ರಜ್ಞೆ ಎಂದು ತಮ್ಮ ಶಿಷ್ಯ ವೃಂದದಿಂದ ಕರೆಸಿಕೊಳ್ಳುವ ನಮ್ಮ ಅನಂತಮೂರ್ತಿಗಳು,ಇತರ ಪ್ರಗತಿಪ್ರರು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಗೆಳೆಯರು ಉತ್ತರಿಸಬೇಕಾದ ಪ್ರಶ್ನೆಗಳು. ಉತ್ತರದ ನಿರೀಕ್ಷೆಯಿದೆ…
ಎಲ್ಲಾ ಸಮೀಕ್ಷೆಗಳನ್ನು ಹುಸಿ ಮಾಡಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಏಕಾಂಗಿಯಾಗಿ ಅಭೂತಪೂರ್ವ ಜಯ ದಾಖಲಿಸಿದೆ. ಮೋದಿಯವರ ಗೆಲುವಿನ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅಭಿಮಾನಿಗಳ ಖುಷಿಯೂ ಮುಗಿಲು ಮುಟ್ಟಿದೆ.ಈ ಖುಷಿಯ ನಡುವೆ ಮುಖ್ಯವಾಗಿ ಪ್ರಸ್ತಾಪವಾಗುತ್ತಿರುವುದು “ನರೇಂದ್ರ ಮೋದಿ ಪ್ರಧಾನಿಯಾದರೆ ತಾವು ಭಾರತದಲ್ಲಿ ಇರಲು ಇಚ್ಛೆ ಪಡುವುದಿಲ್ಲ” ಎಂದು ನೀವು ಕಳೆದ ವರ್ಷದ ಸೆಪ್ಟಂಬರ್ ತಿಂಗಳಿನಲ್ಲಿ ನೀಡಿದ್ದ ಹೇಳಿಕೆ.
ಸಾಹಿತಿಗಳಿಕೇ ರಾಜಕೀಯ ಉಸಾಬರಿ ಅನ್ನುವುದು ಕೆಲವರು ವಾದವಾದರೆ,ಅದಕ್ಕೆ ಪ್ರತಿಯಾಗಿ ಸಾಹಿತಿಗಳಾದವರಿಗೂ ವೈಯುಕ್ತಿಕ ನಿಲುವುಗಳಿದ್ದರೇನು ತಪ್ಪು ಅನ್ನುವ ಪ್ರತಿವಾದವೂ ಕೇಳಿಬರುತ್ತಿದೆ.ಒಂದು ಕ್ಷಣಕ್ಕೆ ಮೂರ್ತಿಗಳ ರಾಜಕೀಯ ನಿಲುವುಗಳನ್ನು ಬದಿಗಿಡೋಣ.ಬುದ್ದಿಜೀವಿಗಳಾದ ಮೂರ್ತಿಗಳಿಗೆ ಮತ್ತವರ ಸೆಕ್ಯುಲರ್ ಸಾಹಿತಿಗಳ ತಂಡಕ್ಕೆ,ನಾಡಿನ ಬೌದ್ಧಿಕ ವಲಯದ ವಿಷಯವೊಂದರ ಮೂಲಕ ಒಂದಿಷ್ಟು ಬಹಿರಂಗ ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರ ಬಯಸೋಣ.
ನಾಡಿನ ಸಾಕ್ಷಿ ಪ್ರಜ್ಞೆ ಎಂದು ತಮ್ಮ ಶಿಷ್ಯ ವೃಂದದಿಂದ ಕರೆಸಿಕೊಳ್ಳುವ ನಮ್ಮ ಅನಂತ ಮೂರ್ತಿಗಳು,ಇತ್ತೀಚಿನ ದಿನಗಳಲ್ಲಿ ಈ ನಾಡಿನ ತಲ್ಲಣಗಳೆಲ್ಲವಕ್ಕೂ ನಿಜವಾಗಿಯೂ ಸ್ಪಂದಿಸಿದ್ದಾರೆಯೇ? ಉತ್ತರ : ಬಹುಷಃ ಇಲ್ಲವೆನ್ನಬಹುದು.