ಶ್ರೀ ಶಂಕರಾಚಾರ್ಯ ಜೀವನ ಸಂದೇಶ
– ರಾಘವೇಂದ್ರ ಅಡಿಗ ಎಚ್ಚೆನ್
ಭಾರತದಲ್ಲಿ ಹಿಂದೂ ಧರ್ಮವು ಸಂಕಷ್ಟದಲ್ಲಿದ್ದ ಎಂಟನೇ ಶತಮಾನದ ಕಾಲಘಟ್ಟದಲ್ಲಿ, ಹಿಂದೂಗಳಲ್ಲಿದ್ದ ಜಾತಿ ಪದ್ದತಿ, ಮೂಢ ಆಚರಣೆಗಳ ಬಗ್ಗೆ ಆಗ ಪ್ರಬಲರಾಗಿದ್ದ ಬೌದ್ದ ಸನ್ಯಾಸಿಗಳು ಸಾಕಷ್ಟು ನಿಂದನೆಗಳನ್ನು ಮಾಡುತ್ತಿದ್ದ ಕಾಲದಲ್ಲಿ ಹಿಂದೂ ಧರ್ಮೀಯರಲ್ಲಿ ಮತ್ತೆ ಆತ್ಮವಿಶ್ವಾಸ ಹುಟ್ಟಿಸಿ ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿ ತಮ್ಮ ಅದ್ವೈತ ತತ್ವದ ಮೂಲಕ ಧರ್ಮ ಜಾಗೃತಿಯನ್ನುಂಟುಮಾಡಿ ಹಿಂದೂ ಧರ್ಮವನ್ನು ಪುನರುತ್ತಾನಗೊಳಿಸಿದವರು ಶ್ರೀ ಶಂಕರಾಚಾರ್ಯರು. ಕಳೆದ ಮೇ 4 ರಂದು ಜಗದ್ಗುರು ಆದಿ ಶಂಕರಾಚಾರ್ಯರ ಜಯಂತಿಯನ್ನು ವಿಶ್ವಾದ್ಯಂತ ಆಚರಿಸಲಾಯಿತು.
ಭಾರತದಲ್ಲಿ ಹಿಂದೂ ಧರ್ಮವು ಸಂಕಷ್ಟದಲ್ಲಿದ್ದ ಎಂಟನೇ ಶತಮಾನದ ಕಾಲಘಟ್ಟದಲ್ಲಿ, ಹಿಂದೂಗಳಲ್ಲಿದ್ದ ಜಾತಿ ಪದ್ದತಿ, ಮೂಢ ಆಚರಣೆಗಳ ಬಗ್ಗೆ ಆಗ ಪ್ರಬಲರಾಗಿದ್ದ ಬೌದ್ದ ಸನ್ಯಾಸಿಗಳು ಸಾಕಷ್ಟು ನಿಂದನೆಗಳನ್ನು ಮಾಡುತ್ತಿದ್ದ ಕಾಲದಲ್ಲಿ ಹಿಂದೂ ಧರ್ಮೀಯರಲ್ಲಿ ಮತ್ತೆ ಆತ್ಮವಿಶ್ವಾಸ ಹುಟ್ಟಿಸಿ ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿ ತಮ್ಮ ಅದ್ವೈತ ತತ್ವದ ಮೂಲಕ ಧರ್ಮ ಜಾಗೃತಿಯನ್ನುಂಟುಮಾಡಿ ಹಿಂದೂ ಧರ್ಮವನ್ನು ಪುನರುತ್ತಾನಗೊಳಿಸಿದವರು ಶ್ರೀ ಶಂಕರಾಚಾರ್ಯರು. ತಾವು ಬದುಕಿದ್ದು ಕೇವಲ 32 ವರ್ಷಗಳಷ್ಟೇ ಆದರೂ ಆದಿ ಶಂಕರರು ತಾವು ಮಾಡಿದ ಕಾರ್ಯ, ಗಳಿಸಿದ ಕೀರ್ತಿ , ಅಪಾರವಾದುದು. ಶ್ರೀಮದ್ಭಗವದ್ಗೀತೆ, ಉಪನಿಷತ್ತುಗಳು, ಬ್ರಹ್ಮಸೂತ್ರಗಳಿಗೆ ಭಾಷ್ಪಗಳನ್ನು ಬರೆದ ಮೊದಲಿಗರು ಶ್ರೀ ಶಂಕರಾಚಾರ್ಯರು. ಶಂಕರಾಚಾರ್ಯರು ಭಾರತೀಯ ವೈಚಾರಿಕ ರಂಗದಲ್ಲಿ ಕ್ರಾಂತಿಯನ್ನೇ ಮಾಡಿದ್ದವರು. ಇವರು ಯಾವೊಂದು ಹೊಸತಾದ ಮತ, ಪಂಥಗಳನ್ನು ಸ್ಥಾಪಿಸಿಲ್ಲವಾದರೂ ಹಿಂದೂ ಧರ್ಮದಲ್ಲಿನ ವೇದಸಂಪ್ರದಾಯವನ್ನೇ ಎತ್ತಿಹಿಡಿದರು. ವೇದಗಳಲ್ಲಿನ ಸತ್ವವನ್ನೂ, ಸಾರವನ್ನು ತಮ್ಮದೇ ಆದ ನೆಲೆಯಲ್ಲಿ ನಿಷ್ಕರ್ಷಿಸುವ ಮೂಲಕ ಜಗತ್ತಿಗೆ ಪ್ರಕಾಶಪಡಿಸಿದವರು ಆಚಾರ್ಯ ಶಂಕರರು ಎಂದರೆ ತಪ್ಪಾಗಲಾರದು.
ಜೀವನ
ಅದು ಎಂಟು-ಒಂಭತ್ತನೇ ಶತಮಾನಗಳ ಮಧ್ಯದ ಅವಧಿ. ಭಾರತ ದಕ್ಷಿಣ ಸಮುದ್ರ ತೀರದ ಕೇರಳ ರಾಜ್ಯದ ಕಾಲಟಿ ಎಂಬೊಂದು ಸಣ್ಣ ಹಳ್ಳಿ. ಆ ಹಳ್ಳಿಯಲ್ಲಿ ಶಿವಗುರು ಹಾಗೂ ಆರ್ಯಾಂಬರೆನ್ನುವ ಬಡ ಬ್ರಾಹ್ಮಣಾ ದಂಪತಿಗಳು ವಾಸವಾಗಿದ್ದರು. ಊಟ, ವಸತಿಗಳಎಲ್ಲಾ ಅದು ಹೇಗೋ ದಿನನಿತ್ಯವೂ ನಡೆಯುತ್ತಿದ್ದರೂ ಆ ದಂಪತಿಗಳೈಗೆ ‘ತಮ್ಮದಾದ ಒಂದು ಮಗುವಿಲ್ಲ, ತಮಗೆ ಸಂತಾನಭಾಗ್ಯವಿಲ್ಲ’ ಎನ್ನುವ ಚಿಂತೆಯು ಬಲವಾಗಿ ಕಾಡುತ್ತಿತ್ತು. ಹೀಗಿರಲು ಇದೇ ಚಿಂತೆಯಲ್ಲಿ ಆ ಈರ್ವರೂ ತಾವು ಈ ಕುರಿತು ಪರಮೇಶ್ವರನ ಮೊರೆಹೋಗಲು ತೀರ್ಮಾನಿಸಿ ಅದರಂತೆ ಪರಮೇಶ್ವರನನ್ನು ಶ್ರದ್ದಾ ಭಕ್ತಿಗಳಿಂದ ಆರಾಧಿಸಿಲು ಮುಂದಾದಾರು. ಅದೊಂದು ದಿನ ಪರಮೇಶ್ವರನು ತಾನು ಶಿವಗುರುವಿನ ಕನಸಿನಲ್ಲಿ ಕಾಣಿಸಿಕೊಂಡು- “ಭಕ್ತಾ, ನಿನ್ನ ಪೂಜೆಗೆ ಮೆಚ್ಚಿದ್ದೇನೆ. ನಿನ್ನ ಕೋರಿಕೆಯನ್ನು ನಾನು ಈಡೇರಿಸಲಿದ್ದೇನೆ, ನಿನಗೆಂತಹಾ ಮಗನು ಬೇಕು? ಮಹಾನ್ ಜ್ಞಾನಿಯಾದ, ಆದರೆ ಅಲ್ಪಾಯುವದ ಮಗನು ಬೇಕೋ, ಇಲ್ಲವೇ ಅಲ್ಪ ಜ್ಞಾನಿಯಾದ ದೀರ್ಘಾಯುವಾದ ಮಗನು ಬೇಕೋ?” ಎಂದೆನ್ನಲು ಶಿವಗುರುವು ತಾನು ಕ್ಷಣಕಾಲವೂ ಯೋಚಿಸದೆ- “ನನಗೆ ಮಹಾಜ್ಞಾನಿಯಾದ ಮಗನು ಬೇಕು” ಎಂದೆನ್ನಲು “ತಥಾಸ್ತು” ಎಂದ ಪರಮೇಶ್ವರನು ತಾನು ಅಂತರ್ಧಾನನಾದನು. ಅದಾದ ಕೆಲ ತಿಂಗಳಿನಲ್ಲಿಯೇ ಮಾತೆ ಆರ್ಯಾಂಬಾ ಜನ್ಮತಃ ಮಹಾಜ್ಞಾನಿಯಾದ ಶಂಕರನಿಗೆ ಜನ್ಮವಿತ್ತಳು.