ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 13, 2015

19

ಪರ್ವ ಮತ್ತು ಮಹಾಭಾರತ

‍ನಿಲುಮೆ ಮೂಲಕ

– ಮು.ಅ ಶ್ರೀರಂಗ 

ಪರ್ವಹರವು ಸ್ಫೂರ್ತಿ ಗೌಡ ಅವರು ‘ಅವಧಿ’ಯಲ್ಲಿ ೬-೩-೧೫ರಂದು ಬರೆದಿರುವ ‘ಭೈರಪ್ಪನವರಿಗೆ ಕೆಲವು ಪ್ರಶ್ನೆಗಳು’ ಲೇಖನದಲ್ಲಿ ಭೈರಪ್ಪನವರು ಮಹಾಭಾರತವನ್ನು ಆಧರಿಸಿ ಬರೆದಿರುವ ಪರ್ವ ಕಾದಂಬರಿಯ ಬಗ್ಗೆ  ಪ್ರಸ್ತಾಪಿಸಿರುಪ  ಪ್ರಶ್ನೆಗಳನ್ನು ಕುರಿತಂತೆ ಕೆಲವು ವಿಷಯಗಳನ್ನು ನಿಲುಮೆಯ ಓದುಗರ ಜತೆ ಹಂಚಿಕೊಳ್ಳುವುದು ಈ ನನ್ನ ಬರಹದ ಉದ್ದೇಶ. ಸ್ಪೂರ್ತಿ ಗೌಡ ಅವರ ಲೇಖನಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಅವುಗಳು ಸದ್ಯದ ನಮ್ಮ ಓದುಗರ ಮನೋಭಾವ, ಅವರ ಓದಿನ ರೀತಿ ನೀತಿ, ಕನ್ನಡ ಸಾಹಿತ್ಯದ ಸದ್ಯದ  ವಿಮರ್ಶೆಯ ವಾತಾವರಣ  ಇತ್ಯಾದಿಗಳ  ಪ್ರತಿಫಲನದಂತೆ ಇದೆ. ಇದು ಸಹಜ.ಆ ಪ್ರತಿಕ್ರಿಯೆಗಳ ಬಗ್ಗೆ ಇದಕ್ಕಿಂತ ಹೆಚ್ಚೇನು ಹೇಳುವುದು ಇಲ್ಲ.

ಸ್ಫೂರ್ತಿ ಗೌಡ ಅವರು ‘ಪರ್ವ’ದ ಬಗ್ಗೆ random ಆಗಿ ಎತ್ತಿರುವ  ಮೂರ್ನಾಲಕ್ಕು ಆಕ್ಷೇಪಣೆಗಳು ಮತ್ತು ಉಪ ಆಕ್ಷೇಪಣೆಗಳ relevanceಗೆ ಮಾತ್ರ ನನ್ನ ಈ ಬರಹ ಸೀಮಿತವಾಗಿದೆ. ಇತಿಹಾಸ, ಕಾವ್ಯ ಮತ್ತು ಪುರಾಣಗಳು ಬೆರೆತಿರುವ ಮಹಾಭಾರತದ ಕತೆಯನ್ನು ಈಗ ಚಾಲ್ತಿಯಲ್ಲಿರುವ ವಿಮರ್ಶೆಯ ಅಳತೆಗೋಲಿನಿಂದ ಅಳೆದು ಬೆಲೆ ಕಟ್ಟುವ ಕ್ರಿಯೆಯೇ ಸರಿಯಾದುದಲ್ಲ. ಇಂದು ನಮ್ಮ ಸಾಹಿತ್ಯದ ವಿಮರ್ಶಕ ಮತ್ತು ವಿಮರ್ಶಕಿಯರಿಗೆ  ಹಿಂದಿನ ಮತ್ತು ಇಂದಿನ ಕೃತಿಗಳಿಗೆ (ಅದು ಸಾಮಾಜಿಕ/ಐತಿಹಾಸಿಕ/ಪೌರಾಣಿಕ ಯಾವುದೇ ಆಗಿರಲಿ) ಪ್ರಗತಿಗಾಮಿ.ಪ್ರತಿಗಾಮಿ,ಮಹಿಳಾ ವಿರೋಧಿ,ವೈದಿಕ ಶಾಹಿ ಇತ್ಯಾದಿ ಹಣೆ ಪಟ್ಟಿಗಳನ್ನು ಕಟ್ಟಿ ಆ ಕೃತಿಗಳ  ಲೇಖಕರನ್ನು ಏರಿಸುವುದೋ ಇಳಿಸುವುದೋ ಮಾಡುವುದು ತುಂಬಾ ಖುಷಿ ಕೊಡುವ  ಕೆಲಸವಾಗಿದೆ. ಹಾಗೆ ನೋಡಿದರೆ ಇಂತಹ ವಿದ್ಯಮಾನ ಮೂವತ್ತು ನಲವತ್ತು ವರ್ಷಗಳಷ್ಟು ಹಳೆಯದೇ. ಈಗ  ಈ ಕೆಲಸ ಇನ್ನೂ ಜೋರಾಗಿದೆ ಅಷ್ಟೇ. ವಿಮರ್ಶೆಯ ಪರಿಭಾಷೆಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತವೆ; ಬದಲಾಗಬೇಕು ಎಂಬುದರ ಬಗ್ಗೆ  ಯಾರೂ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಆದರೆ ಬದಲಾಗುತ್ತಿರುವ ವಿಮರ್ಶೆಯ ಪರಿಭಾಷೆಗಳನ್ನು ಸಾಹಿತ್ಯ ಕೃತಿಯೊಂದಕ್ಕೆ ನಾವು ಯಾವ ರೀತಿ apply ಮಾಡಬೇಕು? ಆ ಪರಿಭಾಷೆಗಳ limits ಏನು? ಎಂಬುದರ ಬಗ್ಗೆ ನಾವು ಯೋಚಿಸದಿದ್ದರೆ ಆಭಾಸವಾಗುತ್ತದೆ. ಸ್ಪೂರ್ತಿಗೌಡ ಅವರು ಪರ್ವದ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ಮೂಲ ಕಾರಣ ಹೊಸ ವಿಮರ್ಶೆಯ ಪರಿಭಾಷೆಗಳ wrong application.

ಪರ್ವ ವ್ಯಾಸರ ಸಂಸ್ಕೃತ ಮಹಾಭಾರತದ ಕಥಾ ಚೌಕಟ್ಟಿನಲ್ಲಿ ರಚಿತವಾಗಿರುವ ಕಾದಂಬರಿ. ಆ ಕಥಾ ಚೌಕಟ್ಟಿನ ಒಳಗೆ ವ್ಯಾಸರ ಮೂಲ ಕೃತಿಗೆ ಚ್ಯುತಿ ಬಾರದಂತೆ  ಅಲ್ಪ ಸ್ವಲ್ಪ ಬದಲಾವಣೆಗಳು . ಪಾಂಡವ-ಕೌರವರ ಕಥನಕ್ಕೆ ಅಷ್ಟೇನೂ ಅನಿವಾರ್ಯವಲ್ಲದ ನೂರಾರು ಉಪಕಥೆಗಳು, ಪ್ರಸಂಗಗಳನ್ನು ಬಿಟ್ಟುಬಿಡುವುದು ಮತ್ತು ‘ಪರ್ವ’ ಕಾದಂಬರಿಯ ತಂತ್ರದ ಅನುಕೂಲಕ್ಕಾಗಿ ಒಂದೆರೆಡು ಹೊಸ ಪಾತ್ರಗಳ ಸೃಷ್ಟಿ  (ದಾಸಿ, ಸೇವಕ, ಸಾರಥಿ ಇತ್ಯಾದಿ) ಇವುಗಳನ್ನು ಮಾಡಬಹುದೇ ಹೊರತು ಪೂರ್ತಿ ಕಥೆಯನ್ನೇ ಬದಲಾಯಿಸಿದರೆ ಅದು ವ್ಯಾಸರ ಕಥಾ ಚೌಕಟ್ಟನ್ನು ಮೀರಿದಂತೆ ಆಗುತ್ತದೆ.ಹಾಗಾದರೆ ದಾಸಿ, ಸೇವಕ ಸಾರಥಿ ಇವರುಗಳು  ಕೀಳು ಪಾತ್ರಗಳೋ ಎಂದು ಕೇಳುವುದರಲ್ಲಿ ಅರ್ಥವಿಲ್ಲ. ನಾವು  ಇಂದು  ದಿನ ನಿತ್ಯ ಪ್ರಯಾಣಿಸುವ  ಬಸ್ಸಿನ ಡ್ರೈವರ್ , ರಿಕ್ಷಾ ಚಾಲಕರು ಇರುವಂತೆ ಹಿಂದೆ ರಥಕ್ಕೆ ಸಾರಥಿಗಳಿದ್ದರು ಅಷ್ಟೇ.ಒಮ್ಮೆ ಭೀಮ ಪ್ರಯಾಣಿಸುವಾಗ   ತನ್ನ ಯೋಚನೆಗಳನ್ನು, ಹಿಂದಿನ ಕಥೆಯನ್ನು ತನ್ನ ರಥದ  ಸಾರಥಿಗೆ ಹೇಳುತ್ತಾ ಹೋಗುತ್ತಾನೆ. ಕೆಲವೊಮ್ಮೆ ತಾನೇ ಯೋಚಿಸುತ್ತಾ ಹೋಗುತ್ತಾನೆ. ವ್ಯಾಸ ಭಾರತದಲ್ಲೂ ಭೀಮ ರಾಕ್ಷಸರನ್ನು ಕೊಂದಿದ್ದು,ರಾಕ್ಷಸ ಕುಲದ ಸಾಲಕಟಂಕಟಿಯನ್ನು ಮದುವೆಯಾಗಿದ್ದು ಅವರಿಬ್ಬರಿಗೆ ಘಟೋದ್ಗಜ ಹುಟ್ಟಿದ ಪ್ರಸಂಗ ಬರುತ್ತದೆ. ಆ ನಂತರ ಅಲ್ಲಿಂದ ಭೀಮ ಹೊರಟುಹೋಗಿದ್ದೂ   ಇದೆ. ಇದನ್ನು ಪುರುಷ ಪ್ರಧಾನ ಸಮಾಜ, ಮನು ಶಾಸ್ತ್ರ ವೇದ ಪುರಾಣ ಇತ್ಯಾದಿಗಳನ್ನೆಲ್ಲಾ ಹೇಳಿ ಸಾಲಕಟಂಕಟಿಗೆ ಮೋಸ ಆಯ್ತು ಎಂದು  ಸ್ಫೂರ್ತಿ ಗೌಡ ಅವರು ಟೀಕಿಸುವುದರಲ್ಲಿ ಅರ್ಥವಿಲ್ಲ. ಇಂದು ಜಾತಿ ಜಾತಿಗಳಿಗೆ, ಬುಡಕಟ್ಟು ಜನತೆಗೆ ತಮ್ಮ ತಮ್ಮ ಆಚಾರ ವಿಚಾರಗಳಲ್ಲಿ ಭಿನ್ನತೆ ಇರುವಂತೆ ಹಿಂದೆಯೂ ಇದ್ದವು.ಈ ಜಾತಿ ಬೇಧ ತಪ್ಪು, ಇದು ಶೋಷಣೆ ಎಂಬ ಮಾತುಗಳು ಪರ್ವ ಕಾದಂಬರಿಯ ವಿಮರ್ಶೆಯ ಚೌಕಟ್ಟನ್ನು ಮೀರಿದ್ದು. ಅದಕ್ಕೆ ಬೇರೆ ವೇದಿಕೆ ಇದೆ. ಅದೇ ರೀತಿ ದ್ರಾವಿಡ ವರ್ಣ, ಮೀನು ಹಿಡಿಯುವ ಜಾತಿ ಕೀಳೆ ಎಂಬ ಮಾತುಗಳೂ ಅರ್ಥವಿಲ್ಲದ್ದು.

ಮಹಾಭಾರತ ಮತ್ತು ಪರ್ವದಲ್ಲಿ ಆರ್ಯ ಮತ್ತು ಆರ್ಯೇತರ ಎಂದು ಹೇಳಿರುವುದನ್ನು ಸ್ಫೂರ್ತಿ ಅವರು ಆರ್ಯ ಮತ್ತು ದ್ರಾವಿಡ ಎಂದು ತಮ್ಮ ವಾದಕ್ಕೆ ತಕ್ಕಂತೆ ಬದಲಾಯಿಸಿಕೊಂಡರೆ ಅದು ಭೈರಪ್ಪನವರ ತಪ್ಪೇ? ಬಡತನ, ಗುಡಿಸಲು,ಕಪ್ಪು ವರ್ಣದ ಹೆಂಗಸಿನ ಮೇಲೆ ತಿರಸ್ಕಾರವೇಕೆ ಎಂಬ ಮಾತುಗಳೂ ಇದೇ ರೀತಿ context ಅನ್ನು ಮರೆತು ಇಂದಿನ ವಿಮರ್ಶೆಯ ಪರಿಭಾಷೆಯಲ್ಲಿ ಆಡಿದ ಮಾತುಗಳು. ಪರ್ವದಲ್ಲಿ ಭೈರಪ್ಪನವರು ಮಹಾಭಾರತ ಮತ್ತು ನಮ್ಮ ಭಾರತ ದೇಶದ ಜಾತಿ ಪದ್ಧತಿ ಸರಿಯೋ ತಪ್ಪೋ ಎಂಬುದರ ಮೇಲೆ  ವ್ಯಾಖ್ಯಾನ ಮಾಡಿಲ್ಲ. ಸುಮಾರು ಮೂರ್ನಾಲಕ್ಕು  ಸಾವಿರದಷ್ಟು ಹಿಂದಿನ ಕಥೆಯನ್ನು ನಮ್ಮ ಇಂದಿನ ಜೀವನದ ದೃಷ್ಟಿಕೋನದಿಂದ ಅಳೆಯುವುದೇ ತಪ್ಪಾಗುತ್ತದೆ.  ಹೀಗಾಗಿ ಸ್ಫೂರ್ತಿ ಗೌಡ ಅವರು ಭೈರಪ್ಪನವರ ಮೇಲೆ ಹಾಕಿರುವ FIR ಮತ್ತು charge sheet ನೇರವಾಗಿ ಮೂಲ ಮಹಾಭಾರತಕ್ಕೆ ಸಂಬಂಧಿಸಿದ್ದು. ಇದನ್ನು ನಾವು ಮರೆಯಬಾರದು. ಅಂತಹ ಕಥೆಯನ್ನು ಒದಲೇಬಾರದು , ವಿರೋಧಿಸಬೇಕು ಎಂಬುದು ಸ್ಫೂರ್ತಿ ಗೌಡ ಮತ್ತು ಅವರ ಲೇಖನಕ್ಕೆ ಸಹಮತ ವ್ಯಕ್ತಪಡಿಸಿರುವ ಓದುಗರ ಅಭಿಪ್ರಾಯವಾದರೆ ಅವರು ಆ ರೀತಿ ಮಾಡಲು ಸ್ವತಂತ್ರರು.

ಕೊನೆಯದಾಗಿ ಒಂದೆರೆಡು ಮಾತು. ಪರ್ವವನ್ನು ಪೂರ್ತಿ ಓದಿರುವವರು ಆ ಕಾದಂಬರಿಯ ಶಕ್ತಿ ಮತ್ತು ದೌರ್ಬಲ್ಯಗಳನ್ನು ಅರಿಯುವ ಆಸಕ್ತಿ ಇದ್ದರೆ ಈ ಕೆಳಗಿನ ಪುಸ್ತಕಗಳನ್ನು ಓದಬಹುದು.
೧. ಯುಗಾಂತ –ಇರಾವತಿ ಕರ್ವೆ ( ಪ್ರಕಾಶಕರು- ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ) — ಇದರ ಕನ್ನಡ ಅನುವಾದ ಇದೆ.
೨. ಎಸ್ ಎಲ್ ಭೈರಪ್ಪನವರ ಪರ್ವ ಒಂದು ಸಮೀಕ್ಷೆ–ಸಂಪಾದಕಿ ವಿಜಯಾ  (ಪ್ರಕಾಶಕರು–ಇಳಾ ಪ್ರಕಾಶನ. ಬೆಂಗಳೂರು-೧೮)
೩. ಎಸ್ ಎಲ್ ಭೈರಪ್ಪನವರ ‘ನಾನೇಕೆ ಬರೆಯುತ್ತೇನೆ? ಕೃತಿಯಲ್ಲಿರುವ ಪರ್ವ ಬರೆದಿದ್ದು ಎಂಬ ಲೇಖನ. (ಪ್ರಕಾಶಕರು -ಸಾಹಿತ್ಯ ಭಂಡಾರ  ಬೆಂಗಳೂರು–೫೩)
————————————————————————————————————————————————————————–

ಅವಧಿಯಲ್ಲಿ ಪ್ರಕಟಿತ ಲೇಖನ

19 ಟಿಪ್ಪಣಿಗಳು Post a comment
 1. Harish Sajjan
  ಮಾರ್ಚ್ 13 2015

  I liked it, why should anybody read critics ?

  ಉತ್ತರ
 2. ಎಂ ಎ ಶ್ರೀರಂಗ
  ಮಾರ್ಚ್ 13 2015

  ಹರೀಶ್ ಸಜ್ಜನ್ ಅವರಿಗೆ— ವಿಮರ್ಶೆಯನ್ನು ಓದಬೇಕು. ಅದರಿಂದ ಓದುಗರಾದ ನಮಗೆ ಹೊಳೆಯದ, ಓದಿನ ಭರದಲ್ಲಿ ಅರಿಯಲಾರದ ಕೆಲವು ವಿಷಯಗಳು ತಿಳಿಯಬಹುದು. ಜತೆಗೆ ವಿಮರ್ಶಕರ ಒಲವು ,ನಿಲುವು ಯಾವ ಕಡೆಗೆ ಇದೆ? ಅವರು ಪೂರ್ವಗ್ರಹ ಪೀಡಿತರೆ ? ಯಾವುದಾದರೊಂದು ಐಡಿಯಾಲಜಿಗೆ ಜೋತು ಬಿದ್ದು ಅದನ್ನೇ ನಿರಂತರ ಸತ್ಯವೆಂದು ಅನುಗಾಲವೂ ಸಾಧಿಸುತ್ತಿದ್ದಾರೆಯೇ? ಇವೆಲ್ಲಾ ತಿಳಿಯಬೇಕು. ಆಗ ಮಾತ್ರ ನಮ್ಮ ಓದು ಪೂರ್ಣವಾಗುತ್ತದೆ ಎಂದು ನನ್ನ ಅಭಿಪ್ರಾಯ.

  ಉತ್ತರ
  • simha sn
   ಮಾರ್ಚ್ 16 2015

   ವಿಮರ್ಶೆಗಳಿಂದ ಗೊತ್ತಾಗುವುದು ವಿಮರ್ಶಕನ ಯೋಗ್ಯತೆ ಮಾತ್ರ ! ಇದು ನನ್ನ ತುಂಬಾ ಹಿಂದಿನ ಮಾತು.

   ಉತ್ತರ
 3. ರಾಗ (R. Ganesh )
  ಮಾರ್ಚ್ 14 2015

  ಪ್ರಿಯ ಶ್ರೀರಂಗ ಅವರೇ! ನಿಮ್ಮ ಈ ಬರೆಹದ ಆರೋಗ್ಯಕರದೃಷ್ಟಿಯನ್ನು ನೋಡಿ ತುಂಬ ಸಂತಸವಾಗಿದೆ. ಈ ಬಗೆಯ ನಿಲವು ಯಾವುದೇ ಸಾಹಿತ್ಯ,ಕಲೆ, ಶಾಸ್ತ್ರ, ಸಮಾಜ, ವ್ಯಕ್ತಿ, ವರ್ತನೆಗಳನ್ನು ಚೆನ್ನಾಗಿ ಅರಿಯಲು ಮಿಗಿಲಾಗಿ ಸಹಕಾರಿ.ಧನ್ಯವಾದಗಳು.

  ಉತ್ತರ
 4. WITIAN
  ಮಾರ್ಚ್ 14 2015

  ಪರ್ವ ಕಾದಂಬರಿಯನ್ನು ಕನಿಷ್ಠ ಮೂರು ನಾಲ್ಕು ಬಾರಿಯಾದರೂ ಓದಿದ್ದೇನೆ. ಆದರೆ ಸ್ಫೂರ್ತಿ ಗೌಡ ಅವರಿಗೆ ಕಂಡ ಹೊಳಹುಗಳನ್ನು ಕಾಣಲಿಲ್ಲ. ಮಹಾಭಾರತದಂತಹ ಸಂಕೀರ್ಣ ಕಥೆಯನ್ನು ಪುನರ್ ಸೃಷ್ಟಿಸಿದ ಭೈರಪ್ಪನವರ ಪ್ರತಿಭೆಗೆ ವಂದಿಸುತ್ತೇನೆ. ಕೇವಲ ಹೋಲಿಕೆಗಾಗಿ ಕೆಲವು ಸಂದರ್ಭಗಳನ್ನು ಹೇಳುತ್ತೇನೆ:

  ‘ಹಾಗಾದರೆ ಆರ್ಯತ್ವ ಎಂದರೆ ಏನು?’ ದ್ರೌಪದಿಯ ಐದು ಮಕ್ಕಳಲ್ಲಿ (ಉಪಪಾಂಡವ) ಒಬ್ಬ ಪ್ರಶ್ನಿಸುತ್ತಾನೆ..

  ‘ಕುಡಿಯುವುದು, ಜೂಜಾಡುವುದು, ಯುದ್ಧ ಮಾಡುವುದು,’ ದ್ರೌಪದಿ ಉತ್ತರಿಸುತ್ತಾಳೆ..

  ಇದರ ಅರ್ಥ ದ್ರೌಪದಿ ಅಂದಿನ ಆರ್ಯರು ಆರ್ಯತನವನ್ನು ಕಾಣುತ್ತಿದ್ದ ರೀತಿಯನ್ನು ಪ್ರಶ್ನಿಸುತ್ತಿದ್ದಾಳೆ, ಹಂಗಿಸುತ್ತಿದ್ದಾಳೆ ಎಂದೇ? ಹಾಗಿದ್ದರೆ ಪರ್ವ ಸ್ತ್ರೀಸ್ವಾತಂತ್ರ್ಯವನ್ನು ಎತ್ತಿ ಹಿಡಿದ ಕಾದಂಬರಿ ಎನ್ನುತ್ತೀರೋ? ‘ಪರ್ವ’ ಪ್ರತಿಯೊಂದು ಪಾತ್ರವೂ ನಡೆದ ಘಟನೆಗಳನ್ನು ತನ್ನ ದೃಷ್ಟಿಕೋಣದಿಂದ ಹೇಳುತ್ತಾ, ವಿಮರ್ಶಿಸುವುದು ಆ ಕಾದಂಬರಿಯ ಕಥನ ತಂತ್ರ, ಇದರಲ್ಲಿ ಸ್ತ್ರೀವಿರೋಧಿ ಅಜೆಂಡಾ ಏನಿದೆ ಎನ್ನುವುದು ನನಗಂತೂ ತಿಳಿದಿಲ್ಲ (ನೀವು ಒಂದು ಸೂಕ್ಷ್ಮ ವಿಷಯ ಗಮನಿಸಿದ್ದೀರಾ? ನನಗೂ ಕಂಡಿರಲಿಲ್ಲ, ನನ್ನ ಹಿರಿಯ ಮಿತ್ರರೊಬ್ಬರು ಕಂಡುಕೊಂಡ ವಿಷಯ ಅದು.. ಮಹಾಭಾರತದ ಯಾವ ಪಾತ್ರ ತನ್ನ ದೃಷ್ಟಿಕೋನವನ್ನು ‘ಪರ್ವ’ದಲ್ಲಿ ಹೇಳಿಲ್ಲ? ಉತ್ತರ ಗೊತ್ತೇ?).

  ಯುದ್ಧ ತರುವ ಶೂನ್ಯತೆಯನ್ನು ಅತ್ಯಂತ ಮನೋಜ್ಞವಾಗಿ ಬಿಂಬಿಸುವ ದೃಶ್ಯ: ಅವಳ ಐದು ಪುತ್ರರೂ ಅಣ್ಣ ಧೃಷ್ಟದ್ಯುಮ್ನನೂ ಅಶ್ವತ್ಥಾಮನಿಂದ ಕೊಲ್ಲಲ್ಪಟ್ಟಾಗ ಅವರ ಶವಗಳ ಮುಂದೆ ದುಃಖಿಸುತ್ತಾ ಕುಳಿತ ಅವಳನ್ನು ಸಂತೈಸಲು ಅವಳ ಐದು ಪತಿಗಳಲ್ಲಿ ಒಬ್ಬರೂ ಮುಂದೆ ಬರದಿದ್ದಾಗ ಹೇಳುವ ಅವಳ ಮಾತನ್ನು ನೆನಪಿಸಿಕೊಳ್ಳಿ, ಅಂತಹ ಸನ್ನಿವೇಶವನ್ನು ಯಾರೊಬ್ಬ ಸೋ ಕಾಲ್ಡ್ ಪ್ರಗತಿಪರ ಸಾಹಿತಿಗಳಾಗಲೀ, ಸ್ತ್ರೀವಾದಿ ‘ಆಧುನಿಕ’ ಸಾಹಿತಿಗಳಾಗಲೀ ತಮ್ಮ ಕೃತಿಗಳಲ್ಲಿ ಸೃಷ್ಟಿಸಲಿಲ್ಲ.

  ಉತ್ತರ
 5. ಎಂ ಎ ಶ್ರೀರಂಗ
  ಮಾರ್ಚ್ 14 2015

  WITAN —-‘ಮಹಾಭಾರತದ ಯಾವ ಪಾತ್ರ ತನ್ನ ದೃಷ್ಟಿಕೋನವನ್ನು ಪರ್ವದಲ್ಲಿ ಹೇಳಿಲ್ಲ ಎಂಬ ಪ್ರಶ್ನೆಗೆ ಉತ್ತರ—–ಕೃಷ್ಣ

  ಉತ್ತರ
 6. Nagshetty Shetkar
  ಮಾರ್ಚ್ 14 2015

  ಮಾನ್ಯರೇ, ಖ್ಯಾತ ಸಂವಿಧಾನ ತಜ್ಞ ಮತ್ತು ಹಿರಿಯ ರಾಜಕೀಯ ವಿಶ್ಲೇಷಕರಾದ ಎ ಜಿ ನೂರಾನಿಯವರ ‘ಆರೆಸ್ಸೆಸ್ ಮತ್ತು ಬಿಜೆಪಿ : ಒಂದೇ ಹಾದಿ ಭಿನ್ನ ಶ್ರಮ’ ಪುಸ್ತಕದ ಬಿಡುಗಡೆ (ಅನುವಾದ : ಸುರೇಶ ಭಟ್ ಬಾಕ್ರಾಬೈಲ್) ಮಾರ್ಚ್ 16 ರ ಸೋಮವಾರ ಸಂಜೆ 4.30 ಕ್ಕೆ ಮಂಗಳೂರಿನ CODP ಸಭಾಂಗಣದಲ್ಲಿ (ಪದವು ಶಾಲೆಯ ಬಳಿ, ನಂತೂರ ಪದವು) ದಿನೇಶ್ ಅಮೀನ್ ಮಟ್ಟು ಅವರು ಬಿಡುಗಡೆ ಮಾಡಲಿದ್ದಾರೆ. ರಂಜಾನ ದರ್ಗಾ ಅವರು ಪುಸ್ತಕದ ಕುರಿತು ಮಾತನಾಡಲಿದ್ದಾರೆ. ಕೆ. ಎಲ್ ಅಶೋಕ ಅವರ ಅಧ್ಯಕ್ಷತೆ. ದಯವಿಟ್ಟು ಈ ಸಮಾರಂಭದಲ್ಲಿ ಭಾಗವಹಿಸಿ.

  ಉತ್ತರ
  • WITIAN
   ಮಾರ್ಚ್ 14 2015

   ಆಹಾ! ಅಸಂಗತ ಚಿಂತಕ ಧುರೀಣರಾದ ಶ್ರೀ ಶ್ರೀ ನಾಶೆಶೇ ಅವರನ್ನು ಮರೆತೇ ಬಿಟ್ಟಿದ್ದೆ..

   ಉತ್ತರ
   • WITIAN
    ಮಾರ್ಚ್ 14 2015

    ಎಷ್ಟು ಜನ ಬರಲಿದ್ದಾರೋ ತಿಳಿಯದು, ಆದರೆ ಮುಂದಿನ ಸಾಲಿನ ಕುರ್ಚಿಯೊಂದರ ಮೇಲೆ ನಾಶೆಶೇ ಅವರು ತಮ್ಮ ಹಸಿರು ಟವಲ್ ಅನ್ನು (ದರ್ಗಾಸರ್ ಕೊಟ್ಟಿದ್ದು) ಈಗಾಗಲೇ ಹಾಕಿದ್ದಾರೆ!

    ಉತ್ತರ
    • Nagshetty Shetkar
     ಮಾರ್ಚ್ 15 2015

     ದರ್ಗಾ ಸರ್ ಹಾಗೂ ಅಮೀನ್ ಮಟ್ಟು ಅವರ ಭಾಷಣವನ್ನು ಕೇಳಲೆಂದು ನಾಡಿನ ಎಲ್ಲಾ ದಿಕ್ಕಿನಿಂದಲೂ ಪ್ರಜ್ಞಾವಂತರು ಧಾವಿಸಿ ಬರುತ್ತಿದ್ದಾರೆ ಎಂದು ಕೇಳಿ ಬಂದಿದೆ. ಕಾರ್ಯಕ್ರಮಕ್ಕೆ ಖುದ್ದು ಬರಲಾಗದ ಪ್ರಜ್ಞಾವಂತರಿಗೊಸ್ಕರ ಭಾಷಣದ ವೀಡಿಯೋ ಅನ್ನು ಯೂಟ್ಯೂಬ್ ನಲ್ಲಿ ಪ್ರಸಾರ ಮಾಡಲಾಗುವುದು ಎಂಬ ಭರವಸೆ ಇದೆ.

     ಉತ್ತರ
     • Nagshetty Shetkar
      ಮಾರ್ಚ್ 19 2015

      THE HINDU

      Writer Ramjan Darga on Monday urged people to be wary of fundamentalists in both Islam and Hinduism.

      Speaking at a programme to release the book ‘RSS-BJP: Onde Daari Bhinna Krama’, a translation by Suresh Bhat Bakrabail of the original book in English by journalist and writer AG. Noorani, Mr. Darga said people were falling prey to their (fundamentalists’) machinations. He said religious fascism was more dangerous than racist fascism and people should understand this. People should understand how the RSS was opposed to the inclusiveness for which India is known.

      An average man by nature was inclusive and interacted with the persons who don’t belong to his/her culture .But people are being taught the language of hatred. This was more pronounced in Mangaluru but he hoped this present churning of society would lead to some positive outcome in the end.

      ಉತ್ತರ
      • Nagshetty Shetkar
       ಮಾರ್ಚ್ 19 2015
       • Nagshetty Shetkar
        ಮಾರ್ಚ್ 19 2015

        Mangalorean.com

        Ramjan Darga, a scholar in Sufi and Sharana philosophies, spoke on the book. He began his speech with a reference to the Mudipu bus incident that took place on the outskirts of the city just two days earlier and also to the recent fiery speech of 19-year-old Sadhvi Balika Saraswati. He recalled that the state and the country had a tradition of inclusive attitudes with unity and identification of oneself in each other community’s customs and celebrations. But, he said, conflicts were being created with a tussle between inclusive philosophy and divisive thoughts. When those persons demand that all follow a single culture, he wanted to know if it was the culture of Manuvadis or the culture of 120 crore Indians. He said that certain thoughts that were expressed by Savarkar in 1920’s were not being brought in the open.

        The lower-class youth were being fed with the thought that different classes were born of different parts of the body. Instead, they should be taught to adore the local great personalities like Rani Abbakka and Koti-Chennaya. He cautioned that the country was slowly being transformed into a battleground for Hindu fundamentalism and Muslim fundamentalism. In fact, the Muslim fundamentalism has helped the Hindu fundamentalism in its growth, he further said.

        Darga recalled the killing of Baba Lal Das, former pujari of the Ramjanmabhoomi temple, on November 16, 1993, just within a year of the demolition of the mosque, and two days before the UP elections. (After he had been removed from the post of chief priest by the BJP government of Kalyan Singh, he took the Sangh Parivar and other affiliated mahants and paid a heavy price for not toeing the VHP line and instead taking a secular stand.)

        He squarely blamed the Congress party for failing the people and also failing to fill the political space which was later grabbed by the divisive forces. Instead, it only indulged in gains, he lamented.
        He expressed grave concern about the hate campaigns flying around and wondered what kind of a society the present generation would be leaving behind for the next. But he expressed confidence that anyone reading the book would not become communal and even if a communal-minded person read the book, he would have a change of heart and turn secular.

        ಉತ್ತರ
        • ಮಾರ್ಚ್ 19 2015

         ರೀ ಶೆಟ್ಕರ್ ಸಾಹೇಬ್ರೆ,
         ನಿಮಗೆ ಕಾಮನ್ ಸೆನ್ಸ್ ಇಲ್ವಾ? ಅದ್ಯಾಕ್ರಿ ಸಂಬಂಧವಿರದ ವಿಷ್ಯಗಳನ್ನು ಇಲ್ಲಿ ಪೋಸ್ಟ್ ಮಾಡ್ತೀರಿ? ಹೀಗೆ ಮಾಡಿದರೆ ನಿಮ್ಮ ಕಮೆಂಟುಗಳನ್ನು ಮಾಡರೇಟ್ ಮಾಡಬೇಕಾಗುತ್ತದೆ.ನಿಮ್ಮ ಗುರುಗಳ ಗುಣಗಾನ ಬೇರೆ ಕಡೆ ಮಾಡಿಕೊಳ್ಳಿ ಹೋಗಿ

         ಉತ್ತರ
         • Nagshetty Shetkar
          ಮಾರ್ಚ್ 20 2015

          Bhairappa’s RSS links and BJP love are well known. Parva promotes regressive Vaidik attitude towards non-Vaidik majority. Darga Sir has totally exposed RSS-BJP in his speech. Those of you who celebrate Parva should read what Darga Sir spoke several times.

          ಉತ್ತರ
 7. ಎಂ ಎ ಶ್ರೀರಂಗ
  ಮಾರ್ಚ್ 15 2015

  ನಾಗಶೆಟ್ಟಿ ಶೆಟ್ಕರ್ ಅವರಿಗೆ–ಈ ಪುಸ್ತಕ ಬಿಡುಗಡೆ ಸಮಾರಂಭಕ್ಕೂ ಪರ್ವ ಮತ್ತು ಮಹಾಭಾರತಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯ ಹರ ಹರ ಶ್ರೀ ಅಭಿನವ ಚನ್ನಬಸವಣ್ಣ?

  ಉತ್ತರ
  • Nagshetty Shetkar
   ಮಾರ್ಚ್ 15 2015

   ‘ಮಹಾಭಾರತ ಮತ್ತು ಪರ್ವ: ಒಂದೇ ಹಾದಿ ಭಿನ್ನ ಕ್ರಮ’

   ಉತ್ತರ
   • ಮಾರ್ಚ್ 15 2015

    ಹಾದಿಯಲ್ಲಿ ಕಣ್ಣುಬಿಟ್ಟು ನಡೆಯದೆ,ದರ್ಗಾಸರ್ ಅವರ ಬೆನ್ನಮೇಲೆ ಕೂಸುಮರಿ ಮಾಡಿಕೊಂಡು ದಾರಿಕ್ರಮಿಸಿದ ಮನಗುರುಡನ ಬಡಬಡಿಕೆ!!!

    ಉತ್ತರ
    • WITIAN
     ಮಾರ್ಚ್ 15 2015

     ಸರ್, ನೀವು ಅಷ್ಟೆಲ್ಲ ಕಷ್ಟದ ಕನ್ನಡದಲ್ಲಿ ಬರೆದರೆ, ನಾಶೆಶೇ ತಮ್ಮ ‘ರಾಣಿಯ ಆಂಗ್ಲಭಾಷೆ’ಯಲ್ಲಿ ಬರೆಯತೊಡಗುತ್ತಾರೆ. ದಯವಿಟ್ಟು ನಮ್ಮ ಮೇಲೂ ಸ್ವಲ್ಪ ಕರುಣೆಯಿಡಿ.

     ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments