ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 31, 2015

28

ಸಲ್ಲೇಖನ ವ್ರತದ ನಿಷೇಧದ ಹಿಂದಿನ ವಸಾಹತುಶಾಹಿ ಪ್ರಜ್ಞೆ

‍CSLC Ka ಮೂಲಕ

– ಡಂಕಿನ್ ಝಳಕಿ, India Platform

ಸಲ್ಲೇಖನ ವ್ರತಸಲ್ಲೇಖನ ವ್ರತದ ಆಚರಣೆ ಆತ್ಮಹತ್ಯೆಗೆ ಸಮಾನ ಎಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ರಾಜಸ್ಥಾನ ಉಚ್ಚ ನ್ಯಾಯಾಲಯವು ಈ ವ್ರತವನ್ನು ಕಾನೂನು ಬಾಹಿರವೆಂದು ಘೋಷಿಸಿ, ಇದನ್ನು ಭಾರತೀಯ ದಂಡ ಸಂಹಿತೆ 306 ಹಾಗು 309ರ ಅನುಸಾರ ಶಿಕ್ಷಾರ್ಹ ಅಪರಾಧ ಎಂದು ತೀರ್ಪನ್ನು ನೀಡಿದೆ. ದಂಡ ಸಂಹಿತೆ 306ರ ಪ್ರಕಾರ ಆತ್ಮಹತ್ಯೆಗೆ ಪ್ರೇರಣೆ ನೀಡುವುದು ಮತ್ತು 309ರ ಪ್ರಕಾರ ಆತ್ಮಹತ್ಯೆಗೆ ಪ್ರಯತ್ನಿಸುವುದು ಎರಡೂ ಶಿಕ್ಷಾರ್ಹ ಅಪರಾಧ. ಈ ಪ್ರಕಾರ ಸಲ್ಲೇಖನ ವ್ರತವನ್ನು ಕೈಗೊಳ್ಳುವ ವ್ಯಕ್ತಿಯ ಜೊತೆಗೆ ಈ ವ್ರತದಲ್ಲಿ ಭಾಗಿಯಾಗುವ ಪ್ರತಿಯೋರ್ವನೂ, ಅಂದರೆ ಇಡಿಯ ಜೈನ ಸಂಪ್ರದಾಯವನ್ನೂ ಬಹುಶಃ ಕಟಕಟೆಗೆ ಎಳೆಯಬಹುದು. ಹೀಗೆ ಭಾರತೀಯ ಸಂಪ್ರದಾಯವೊಂದನ್ನು, ಅದನ್ನು ಆಚರಿಸುವವರನ್ನು ಅಪರಾಧೀ ಸ್ಥಾನಕ್ಕೆ ಎಳೆಯುತ್ತಿರುವುದು (ಕ್ರಿಮಿನಲೈಸ್ ಮಾಡುತ್ತಿರುವುದು) ಇದೇ ಮೊದಲಲ್ಲ. ಕಳೆದ ಸುಮಾರು ಒಂದು ಸಾವಿರ ವರುಷಗಳ ಕಾಲ, ಎರಡು ವಸಾಹತುಶಾಹಿ ಆಳ್ವಿಕೆಗಳಡಿ ಭಾರತೀಯ ಸಂಪ್ರದಾಯಗಳು ಎದುರಿಸಿದ್ದು ಇದೇ ಪರಿಸ್ಥಿತಿ. ವಿಪರ್ಯಾಸವೆಂದರೆ ಸ್ವಾತಂತ್ರ್ಯ ಬಂದು ಆರು ದಶಕಗಳೇ ಕಳೆದರೂ, ಈ ಪರಿಸ್ಥಿತಿ ಇನ್ನೂ ಬದಲಾಗಿಲ್ಲ. ಬದುಕುವ ಹಕ್ಕಿನ ಉಲ್ಲಂಘನೆ ಎಂಬ ಅರ್ಥವಾಗದ ಪಾಶ್ಚಾತ್ಯ ಮತ್ತು ಕ್ರಿಶ್ಚಿಯನ್ ಚಿಂತನೆಯ ಹೆಸರಿನಲ್ಲಿ, ಸಾವಿರಾರು ವರುಷಗಳಿಂದ ನಡೆಯುತ್ತಾ ಬಂದಿರುವ ಭಾರತೀಯರ ಆಧ್ಯಾತ್ಮಿಕ ಆಚರಣೆಗಳನ್ನು ಹೀಗೆ  ತುಚ್ಛವಾಗಿ ಕಂಡು ಅವುಗಳ ಸಂಹಾರ ನಡೆಯುತ್ತಿರುವ ಇಂದಿನ ದಿನಗಳಲ್ಲಿ ನಾವು ಮಾಡಬೇಕಾದದ್ದು ಏನು?

ಆತ್ಮಹತ್ಯೆ ಮತ್ತು ಕ್ರಿಶ್ಚಿಯನ್ ರಿಲಿಜನ್ ಚಿಂತನೆ

   ಹಲವು ಶತಮಾನಗಳ ಥಿಯೋಲಾಜಿಕಾಲ್ ಚರ್ಚೆಯಲ್ಲಿ ಆತ್ಮಹತ್ಯೆಯ ವಿಚಾರ ಪದೇಪದೇ ಕಾಣಿಸಿಕೊಳ್ಳುತ್ತದೆ. ೧೩ನೆಯ ಶತಮಾನದ ಹೊತ್ತಿಗೆ, ಆತ್ಮಹತ್ಯೆಯ ವಿರುದ್ಧ ಯುರೋಪಿನಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಕಾನೂನುಗಳು ಜಾರಿಗೆ ಬಂದಿದ್ದವು. ೧೬, ೧೭ನೆಯ ಶತಮಾನದ ಹೊತ್ತಿಗೆ ಆತ್ಮಹತ್ಯೆಯನ್ನು ಒಂದು ಅಪರಾಧವೆಂಬಂತೆ ನೋಡುವುದು ಮತ್ತು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಕುಟುಂಬವನ್ನು ವಿವಿಧ ರೀತಿಯಲ್ಲಿ ಹಿಂಸಿಸುವುದು, ಆತ್ಮಹತ್ಯೆಯಲ್ಲಿ ಅಸಫಲರಾದವರನ್ನು ದಂಡಿಸುವುದು ಸಾಮಾನ್ಯವಾಗಿತ್ತು. ಇದೊಂದು ರಿಲಿಜಸ್ ಅಪರಾಧವಾಗಿದ್ದರಿಂದ, ಶಿಕ್ಷೆಯ ರೂಪದಲ್ಲಿ ಸಂಬಂಧಪಟ್ಟ ವ್ಯಕ್ತಿಗಳನ್ನು ಚರ್ಚಿನಿಂದ ಬಹಿಷ್ಕರಿಸುವುದೂ ವಾಡಿಕೆಯಲ್ಲಿತ್ತು. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗೆ ಚರ್ಚಿಗೆ ಸಂಬಂಧಪಟ್ಟ ಸ್ಮಶಾನದಲ್ಲಿ ಹೂಳಲು ಸ್ಥಳವನ್ನು ನಿರಾಕರಿಸುವ ಪದ್ಧತಿ ಇತ್ತೀಚಿನ ತನಕ ಭಾರತದಲ್ಲೂ ಜಾರಿಯಲ್ಲಿತ್ತು.

   ಕೆಲವು ಸಾರಿ ಆತ್ಮಹತ್ಯೆಯ ವಿರುದ್ಧದ ಈ ಧೋರಣೆ ಎಷ್ಟೊಂದು ಕಟುವಾಗಿರುತ್ತಿತ್ತು ಎಂಬುದಕ್ಕೆ ಒಂದು ಉದಾಹರಣೆ. ಫ್ರೆಂಚ್ ದೊರೆ ಹದಿನಾಲ್ಕನೆ ಲೂಯಿ ೧೬೭೦ರಲ್ಲಿ ಹೊರಡಿಸಿದ ಕ್ರಿಮಿನಲ್ ಶಾಸನದ ಪ್ರಕಾರ, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ದೇಹವನ್ನು ಮೊಕ್ಕಡೆಯಾಗಿ ಬೀದಿ ಬೀದಿಗಳಲ್ಲಿ ಎಳೆದುಕೊಂಡು ಹೋಗಿ, ಕಡೆಗೆ ಉಳಿದ ಕಳೇಬರವನ್ನು ಎಲ್ಲರಿಗೂ ಕಾಣುವಂತೆ ನೇತು ಹಾಕಬೇಕಿತ್ತು ಅಥವಾ ತಿಪ್ಪೇಗುಂಡಿಯ ಮೇಲೆ ಎಸೆಯಬೇಕಿತ್ತು. ತದನಂತರ ಆ ವ್ಯಕ್ತಿಯ ಇದ್ದ ಬದ್ದ ಆಸ್ತಿಯನ್ನೆಲ್ಲ ಜಪ್ತಿಮಾಡಿಕೊಳ್ಳ ಬೇಕಿತ್ತು.

   ಇವೆಲ್ಲಾ ಏಕೆಂದರೆ, ಚರ್ಚ್ ಪ್ರಕಾರ ಆತ್ಮಹತ್ಯೆಯು ಹತ್ತು ಕಮಾಂಡ್ಮೆಂಟುಗಳಲ್ಲಿ ಮುಂದಿನ ಈ ಎರಡು ಪ್ರಮುಖ ಕಮಾಂಡ್ಮೆಂಟುಗಳನ್ನು ಕಡೆಗಣಿಸುವಂಥ ಒಂದು ದೊಡ್ಡ ಅಪರಾಧವಾಗಿತ್ತು: “ಕೊಲೆ ಮಾಡಬೇಡ” ಎಂಬ ಐದನೇ ಮತ್ತು “ಪರರನ್ನು ತನ್ನಂತೆಯೇ ಪ್ರೀತಿಸು” ಎಂಬ (ಹತ್ತು ಕಮಾಂಡ್ಮೆಂಟುಗಳ ಸಾರ ರೂಪವಾದ) ಕಮಾಂಡ್ಮೆಂಟು. ಸ್ವಹತ್ಯೆಯು ಪರರ ಜೊತೆಗೆ, ಕುಟುಂಬ, ಸಮಾಜ ಮತ್ತು ರಾಷ್ಟ್ರದ ಜೊತೆಗೆ ನಾವು ಹೊಂದಿರಬೇಕಾದ ಸಂಬಂಧವನ್ನು ಮುರಿಯುತ್ತದೆ. ಅಷ್ಟೇ ಅಲ್ಲ, ಮಾನವನ ಮೇಲೆ ಗಾಡ್ ಇಟ್ಟಿರುವ ಪ್ರೀತಿ, ನಂಬಿಕೆ ಮತ್ತು ಕರ್ತವ್ಯಗಳಿಗೆ ಇದು ವಿರುದ್ಧವಾದುದು. ಕ್ರಿಶ್ಚಿಯನ್ ರಿಲಿಜನ್ ಹೇಳುವ ಪ್ರಕಾರ ಮಣ್ಣಿನಿಂದ ಮಾನವನನ್ನು ಸೃಷ್ಟಿಸಿ ಆ ಗೊಂಬೆಗಳಿಗೆ ಗಾಡ್ ಜೀವವನ್ನು ಕೊಡುತ್ತಾನೆ. ಆತ ಕೊಟ್ಟ ಈ ಜೀವದ (ಅದರ ಆರಂಭ ಮತ್ತು ಅಂತ್ಯಗೊಳ್ಳುವುದರ) ಮೇಲೆ ಸ್ವಾಮ್ಯತೆ ಇರುವುದು ಕೇವಲ ಆತನಿಗೆ ಮಾತ್ರ. ಗಾಡ್ ನ ವರ್ಶಿಪ್ ಮತ್ತು ಗೌರವಕ್ಕಾಗಿ ಹಾಗು ಆತ ನಮಗೆ ಕೊಟ್ಟಿರುವ ಸೋಲ್ ನ ಸಾಲ್ವೇಶನ್ ಗಾಗಿ ಈ ಜೀವವನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ.

   ಕನ್ನಡದಲ್ಲಿ ತರ್ಜುಮೆಗೊಂಡು ಪ್ರಕಟವಾಗಿರುವ ಕ್ಯಾಥೊಲಿಕ್ ಕ್ರೈಸ್ತ ಸಮುಧಾಯದ “ಧರ್ಮೊಪದೇಶದ ಸಂಕ್ಷೇಪ” (cathechism) ಪುಸ್ತಕದಲ್ಲಿ ಈ ವಿಚಾರವನ್ನು ಹೀಗೆ ಹೇಳಲಾಗಿದೆ. (‘ದೇವರು’ ಎಂದು ಇರುವಲ್ಲಿ ‘ಗಾಡ್’ ಎಂದು ಓದಿಕೊಳ್ಳಿ):

“ನಾವು ಏಕೆ ಜೀವವನು ಗೌರವದಿಂದ ಕಾಪಾಡಬೇಕು?

ಜೀವವನು ದೇವರೇ ಕೊಟ್ಟಿರಲು, ಅದರ ಮೇಲೆ ಅವರೊಬ್ಬರಿಗೆ ಹಕ್ಕು ಇರುವ ಕಾರಣ ನಾವು ಅದನ್ನು ಗೌರವದಿಂದ ಕಾಪಾಡಬೇಕು.

ಶರೀರದ ಜೀವವನು ಗೌರವದಿಂದ ಕಾಪಾಡಲು ನಾವು ಏನು ಮಾಡಬೇಕು?

ಶರೀರದ ಜೀವವನು ಗೌರವದಿಂದ ಕಾಪಾಡಲು ನಮ್ಮ ಸ್ವಂತ ಆರೋಗ್ಯವನ್ನು ಗಮನಿಸುವುದಲ್ಲದೆ ನಮ್ಮ ನೆರೆಯವನ ಆರೋಗ್ಯವನ್ನೂ ಗಮನಿಸಬೇಕು.” (೧೯೯೧, ಮೈಸೂರು, ಪುಟ ೮೩, ೧೧ನೆಯಮುದ್ರಣ)

ಪಶ್ಚಿಮದಲ್ಲಿ ‘ಆತ್ಮಹತ್ತ್ಯೆ’ಯ ವಿರುದ್ಧದ ಕಾನೂನು ಬೆಳೆದುಬಂದಿದ್ದು ಕ್ರಿಶ್ಚಿಯನ್ ರಿಲಿಜನ್ನಿನ ಇಂಥ ಚಿಂತನೆಯ ನಡುವಿನಿಂದ. ಮುಂದೆ ಇದು ಸೆಕ್ಯುಲರ್ ಕಾನೂನಿನ ಹೆಸರು ಮತ್ತು ರೂಪದಲ್ಲಿ ಜಗತ್ತಿನಲ್ಲೆಲ್ಲಾ ಹರಡಿತು. ಭಾರತಕ್ಕೆ ಇದು ಕಾಲಿಟ್ಟಿದ್ದು ಬ್ರಿಟೀಷರ ಆಳ್ವಿಕೆಯ ಸಂಧರ್ಬದಲ್ಲಿ.

ವಸಾಹತುಶಾಹಿ ಪ್ರಜ್ಞೆಯ ಅವಾಂತರ

   ಇಂಥ ಕ್ರಿಶ್ಚಿಯನ್ ಚಿಂತನೆಯ ಮೂಲಕ ನೋಡಿದಾಗ, ಸಲ್ಲೇಖನದಂಥ ವ್ರತಗಳು ಜೀವವಿರೋಧಿಯಾಗಿ ಕಾಣಿಸುವುದು ಆಶ್ಚರ್ಯಕರವಲ್ಲ. ಒಂದು ಸ್ವಹತ್ಯೆಯ ಘಟನೆ ಸರಿಯೋ ತಪ್ಪೋ ಎಂಬ ವಿಚಾರ ಅದು ನಡೆದ ಸಂಧರ್ಬಕ್ಕೆ ಅನುಗುಣವಾಗಿ ನಿರ್ಣಯವಾಗಬೇಕಾದ ವಿಚಾರ. ಆದರೆ ಯೂರೋಪಿನ ಕ್ರಿಶ್ಚಿಯನ್ ಚಿಂತನೆಯಡಿ ಬೆಳೆದು  ಬಂದಿರುವ ಇಂದಿನ ಕಾನೂನಿನ ಕಣ್ಣಿಗೆ ಎಲ್ಲಾ ರೀತಿಯ ಸ್ವಹತ್ಯೆಗಳೂ ಒಂದೇ ರೀತಿಯ ಅನೈತಿಕ ವಿಚಾರವಾಗಿ, ಅಪರಾಧವಾಗಿ ಕಾಣಿಸುತ್ತದೆ. ದುಶ್ಚಟಗಳಿಂದಾಗಿ ಅಥವಾ ಸಾಲದ ಹೊರೆಯಿಂದ ಮಾಡಿಕೊಳ್ಳುವ ಸ್ವಹತ್ಯೆಗೂ, ದಯಾಮರಣಕ್ಕೂ, ಸಲ್ಲೇಖನ ವ್ರತಕ್ಕೂ ಯಾವುದೇ ವ್ಯತ್ಯಾಸ ಕಾಣದೇ ಇರುವ ವಿಚಾರ ವಸಾಹತುಶಾಹಿ ಪ್ರಜ್ಞೆ ನಮ್ಮ ಮೇಲೆ ಮಾಡಿರುವ ಪರಿಣಾಮದ ಫಲ. ನ್ಯಾಯಾಲಯದ ಈ ನಿರ್ಣಯವನ್ನು ಒಪ್ಪಿಕೊಳ್ಳುವ ಜನರಿರಲಿ, ಅದನ್ನು ವಿರೋಧಿಸುವವರ ಚಿಂತನೆಯೂ ಸಹ ಈ ವಸಾಹತುಶಾಹಿ ಪ್ರಜ್ಞೆಯ ಪ್ರಭಾವಕ್ಕೆ ಒಳಪಟ್ಟಿದೆ ಎನ್ನುವುದು ಈ ಸಮಸ್ಯೆಯ ಆಳವನ್ನು ತೋರಿಸಿಕೊಡುತ್ತದೆ.

   ನ್ಯಾಯಾಲಯದ ಈ ನಿರ್ಣಯವನ್ನು ವಿರೋಧಿಸುತ್ತಿರುವ ಚಿಂತಕರಲ್ಲಿ, ಇದು ಜೈನ ಸಮೂದಾಯದ ವಿಚಾರದಲ್ಲಿ ಕಾನೂನಿನ ಹಸ್ತಕ್ಷೇಪದ ವಿಚಾರ ಎಂಬ ಧೋರಣೆ ಎದ್ದು ಕಾಣುತ್ತಿರುವುದು ಇದಕ್ಕೊಂದು ಉದಾಹರಣೆ. ಏಕೆಂದರೆ ಇದು ‘ಕಾನೂನಿನ ಕುರುಡುತನ’ ಅಥವಾ ‘ಕಾನೂನಿನ ಹಸ್ತಕ್ಷೇಪ’ಕ್ಕಿಂತಲೂ ಬಹು ಗಂಭೀರವಾದ ವಿಚಾರ. ಆಮದು ಮಾಡಿಕೊಂಡ ಯೂರೋಪಿನ ಕ್ರಿಶ್ಚಿಯನ್ ವಿಚಾರಗಳನ್ನು ಎತ್ತಿ ಹಿಡಿದು ಭಾರತೀಯ ಸಂಪ್ರದಾಯಗಳನ್ನು ಕೊಲ್ಲುವ ವಿಚಾರ. ಎಲ್ಲರೂ ಯೂರೋಪಿನ ಕ್ರಿಶ್ಚಿಯನ್ ಚಿಂತನೆಯನ್ನು ಒಪ್ಪಿಕೊಂಡು, ಅವರಂತೆಯೇ ಬದುಕಬೇಕು ಎಂದು ಹಠ ಹಿಡಿಯುವ ವಿಚಾರ. ಇದನ್ನು “ಜೈನ ಧಾರ್ಮಿಕ ಭಾವನೆಗೆ ಚ್ಯುತಿ ತರುವ ವಿಚಾರ” ಎಂದು ವಿರೋಧಿಸ ಹೊರಟರೆ, ತರಕಾರಿ ಹೆಚ್ಚುವ ಚೂರಿಯನ್ನು ಹಿಡಿದು ಶರಭದ ಬೇಟೆಗೆ ಹೊರಟಂತಾಗುತ್ತದೆ. ಇಲ್ಲಿ ಸೋಲು ಕಟ್ಟಿಟ್ಟ ಬುತ್ತಿ.

   ನ್ಯಾಯಾಲಯದ ತೀರ್ಪಿನ ವಿರುದ್ಧ ಧ್ವನಿಯೆತ್ತಿರುವ ಪ್ರತಾಪ್ ಭಾನು ಮೆಹ್ತಾರಂಥ ನುರಿತ ಚಿಂತಕರ ಬರಹಗಳಲ್ಲೂ ನಾವು ಇಂಥ ಸಮಸ್ಯೆಯನ್ನು ಕಾಣಬಹುದು. ಕೆಲ ದಿನಗಳ ಹಿಂದೆ ಇವರು ಇಂಡಿಯನ್ ಎಕ್ಸ್ಪ್ರೆಸ್ಸಿನ (೧೯ ಆಗಸ್ಟ್ ೨೦೧೫) ತಮ್ಮ ಲೇಖನದಲ್ಲಿ ಹೀಗೆ ವಾದಿಸುತ್ತಾರೆ: (೧) ಕೋರ್ಟಿನ ತೀರ್ಪು ಆತುರದ ತೀರ್ಪು. ಸಲ್ಲೇಖನದಲ್ಲಿ ಹಲವು ವಿಧಗಳಿವೆ ಎಂಬುದನ್ನು ಅದು ಗಮನಿಸಲಿಲ್ಲ. ಇತ್ತೀಚೆಗೆ ಸಲ್ಲೇಖನವೆಂಬುದು ಕ್ಯಾನ್ಸರ್ ಮುಂತಾದ ಕಾಯಿಲೆಗಳಿಂದ ಮರಣದ ಹಂತದಲ್ಲಿರುವ ಜನರಿಗೆ ಗೌರವಯುತವಾಗಿ ನೆಮ್ಮದಿಯಿಂದ ಸಾಯುವ ಅವಕಾಶ ಮಾಡಿಕೊಡುವಲ್ಲಿ ನಾಮಮಾತ್ರಕ್ಕೆ ಬಳಕೆಯಾಗುತ್ತಿದೆ. (೨) ಪ್ರತಿ ಜೈನ ಕೃತಿಯೂ ಸಲ್ಲೇಖನ ಮತ್ತು ಸ್ವಹತ್ಯೆಯನ್ನು ಬೇರ್ಪಡಿಸುತ್ತದೆ. ಹೀಗೆ ಬೇರ್ಪಡಿಸಲು ಅವು ಈ ಮರಣಗಳ ಹಿಂದಿರುವ ಉದ್ದೇಶದ ಗುಣವನ್ನು ಗಣನೆಗೆ ತೆಗೆದುಕೊಳ್ಳುತ್ತ. ಕಾನೂನಿಗೆ ಇದು ಕಾಣುವುದಿಲ್ಲ. (೩) ಸಲ್ಲೇಖನವು ಸತಿ ಪದ್ಧತಿಯಂಥ ಆಚರಣೆಯಲ್ಲ. ಸತಿಯಲ್ಲಿ ಹೆಣ್ಣಿನ ಶೋಷಣೆ ಇದೆ. ಸಲ್ಲೇಖನವನ್ನು ಪುರುಷ ಮತ್ತು ಮಹಿಳೆಯರಿಬ್ಬರೂ ಮಾಡುತ್ತಾರೆ.

   ಮೆಹ್ತಾರವರ ಈ ವಾದದಲ್ಲಿ ಹಲವಾರು ತೊಂದರೆಗಳಿವೆ. ಆದರೆ ಇದರ ಬಹು ದೊಡ್ಡ ತೊಂದರೆ ಎಂದರೆ ಭಾರತೀಯ ಸಂಪ್ರದಾಯವೊಂದನ್ನು ಸಮರ್ಥಿಸಿಕೊಳ್ಳುವಲ್ಲಿ ಈ ವಾದದ ಅಸಮರ್ಥತೆ. ಕಡೆಗೂ ಸಲ್ಲೇಖನದಂಥ ಆಚರಣೆಯನ್ನು ನ್ಯಾಯಾಲಯ ಏಕೆ ನಿಷೆಧಿಸಬಾರದು ಎಂಬುದಕ್ಕೆ ಇವರ ಬಳಿ ಗಟ್ಟಿಯಾದ ಒಂದೇ ಒಂದು ವಾದವೂ ಇಲ್ಲ. ಅದಕ್ಕೆಂದೇ ಇವರು ತಮ್ಮ ಲೇಖನದ ಅಂತ್ಯದಲ್ಲಿ ಸುಪ್ರೀಂಕೋರ್ಟಿಗೆ ಮತ್ತು ಜೈನ ಸಮುಧಾಯಕ್ಕೆ ಹೀಗೆ ಮೊರೆ ಇಡುವುದು:

   “The Supreme Court should reconsider the high court judgment. It goes against the identity of a religion whose central tenet is reverence for life, and it is a practice whose harm, in most cases, is not obvious. The community, for its part, will need a conversation on the conditions under which santhara should be permitted.”

  ಭಾರತೀಯ ಸಂಸ್ಕೃತಿ, ಕ್ರಿಶ್ಚಿಯನ್ ವಿಚಾರಗಳು, ವಸಾಹತುಶಾಹಿ ಪ್ರಜ್ಞೆಯ ಕುರಿತು ಸ್ಪಷ್ಟತೆಯೇ ಇಲ್ಲದ ಇಂಥ ಚಿಂತನೆಯಿಂದ ಸಲ್ಲೇಖನ ವ್ರತವನ್ನು ಸಮರ್ಥಿಸಿಕೊಳ್ಳ ಹೋದರೆ ನಷ್ಟವಾಗುವುದೇ ಹೆಚ್ಚು.

ನಮ್ಮ ಮುಂದಿರುವ ದಾರಿ…

   ಹಾಗಾದರೆ ನಾವು ಮಾಡ ಬೇಕಾದದ್ದು ಏನು? ಇದು ಇಂದು ನಮ್ಮ ಮುಂದಿರುವ ಸವಾಲು. ರಾಜಸ್ಥಾನ ಉಚ್ಚ ನ್ಯಾಯಾಲಯದ ೪೪ ಅಂಶಗಳ ತೀರ್ಪನ್ನು ನಾವು ಕೂಲಂಕಷವಾಗಿ ಓದಿದರೆ ಅಲ್ಲಿ ನಮಗೆ ತಿಳಿಯುವ ಕೆಲ ವಿಚಾರಗಳು ಹೀಗಿವೆ: (೧) ಸಲ್ಲೇಖನವನ್ನು ನಾವು ಒಂದು ಧಾರ್ಮಿಕ ಮತ್ತು ಬಹು ಹಿಂದಿನಿಂದಲೂ ನಡೆದುಕೊಂಡು ಬಂದ ಆಚರಣೆ ಎಂದು ಹೇಳುವುದು ಅದರ ಸಮರ್ಥನೆಯಲ್ಲ. ಬದಲಿಗೆ ಈ ಆಚರಣೆ ನಮಗೇಕೆ ಅವಶ್ಯಕ ಎಂದು ವಿವರಿಸಬೇಕು. (೨) ಕಾನೂನು ಧಾರ್ಮಿಕ ಆಚರಣೆಗಳಲ್ಲಿ ಹಸ್ತಕ್ಷೇಪ ಮಾಡಕೂಡದು, ಇದು ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುತ್ತದೆ ಎಂಬುದೂ ಒಪ್ಪಿಕೊಳ್ಳಲಾಗದ ವಾದ. ಪ್ರತಿಯೊಂದು ಅಹಿತ ಆಚರಣೆಗಳನ್ನೂ ನಾವು ಹೀಗೆಯೇ ಸಮರ್ಥಿಸಿಕೊಳ್ಳಬಹುದು. ಅಂದರೆ, ನಮ್ಮ ಯಾವ ಸಾಂಪ್ರದಾಯಿಕ ಆಚರಣೆಗಳು ನಮಗೆ ಮುಖ್ಯವಾಗುತ್ತವೆ ಮತ್ತು ಏಕೆ ಎಂಬ ಸ್ಪಷ್ಟತೆ ನಮಗಿರಬೇಕು. ಈ ಸ್ಪಷ್ಟತೆ ದೊರಕುವುದು ಹೊಸ ಸಂಶೋಧನೆಗಳಿಂದ ಮಾತ್ರ. (೩) ಸಲ್ಲೇಖನದಂಥ ಆಚರಣೆಯ ಸಮರ್ಥನೆಯಲ್ಲಿ ನಾವು ಕೊಡುವ ವಿವರಣೆಯು, ಕಾನೂನು ತಾನು ನಂಬಿಕೊಂಡಿರುವ ‘ಬದುಕುವ ಹಕ್ಕು’ ಮುಂತಾದ ವಿಚಾರಗಳ ವಿರುದ್ಧ ಈ ಆಚರಣೆ ಹೋಗುವುದಿಲ್ಲ, ಅಸಲಿಗೆ ಅದು ನೆಮ್ಮದಿಯ ಜೀವನವನ್ನು ಬದುಕಲು ಭಾರತೀಯ ಸಮಾಜದಲ್ಲಿ ಅವಶ್ಯಕವಾಗಿದೆ ಎಂದು ತೋರಿಸಿಕೊಡಬೇಕು. (೪) ಇಂಥ ವಿವರಣೆಯು ಇಂದಿನ, ಅಂದರೆ ೨೧ನೆಯ ಶತಮಾನದ ವೈಜ್ಞಾನಿಕ ಭಾಷೆಯಲ್ಲಿರಬೇಕು. ಕರ್ಮ, ಮೋಕ್ಷ, ವ್ರತ ಇತ್ಯಾದಿ ವಿಚಾರಗಳು ನಮಗೆ ಅನುಭವವೇಧ್ಯ ಎನಿಸಿದರೂ, ಕಾನೂನಿಗೆ, ಪಾಶ್ಚಾತ್ಯರಿಗೆ, ಪಾಶ್ಚಾತ್ಯ (ಅಂದರೆ ಇಂದಿನ)  ವಿದ್ಯಾಭಾಸ ಪಡೆದವರಿಗೆ ಇದು ದಕ್ಕುವುದಿಲ್ಲ. ಆದ್ದರಿಂದ ನಮ್ಮ ಸಮರ್ಥನೆ ತನ್ನ ಕಾರ್ಯನಿರ್ವಹಿಸುವುದಿಲ್ಲ. ಇಲ್ಲಿ ಇನ್ನೊಂದು ವಿಚಾರವನ್ನೂ ಸ್ಪಷ್ಟಪಡಿಸಬೇಕು. ‘ವೈಜ್ಞಾನಿಕ ಭಾಷೆ’ ಎಂದರೆ, ತುಳಸಿ ಪೂಜೆಯಿಂದ ಆಮ್ಲಜನಕ ಹೆಚ್ಚಿಗೆ ಪೂರೈಕೆಯಾಗಿ, ಯಜ್ಞ, ಹವನಗಳಿಂದ ಹೈಡ್ರೋಕಾರ್ಬನ್ನಿನ ಆಕ್ಸಿಡೀಕರಣವಾಗಿ ಬ್ಯಾಕ್ಟೀರಿಯಾಗಳು ಸತ್ತು ಆರೋಗ್ಯ ವೃದ್ಧಿಯಾಗುತ್ತದೆ ಎಂಬಂಥ ಸೂಡೋ-ಸೈಂಟಿಫಿಕ್ ಮಾತುಗಳಲ್ಲ. ಬದಲಿಗೆ ನಮ್ಮ ಆಚರಣೆಗಳು ಹೇಗೆ ನಮ್ಮ ಸಮಾಜದಲ್ಲಿ ನಾವು ಆನಂದದಿಂದ ಬದುಕಲು ದಾರಿ ಮಾಡಿಕೊಡುತ್ತವೆ ಎಂಬುದನ್ನು ಸಾಧಾರ ಪಡಿಸಬೇಕು.

ಕಡೇಯ ಮಾತು…

   ಸಲ್ಲೇಖನ ವ್ರತದ ಮೇಲಿನ ನಿರ್ಭಂದದ ವಿಚಾರ ಕೇವಲ ಜೈನ ಸಂಪ್ರದಾಯಕ್ಕೆ ಸೇರಿದ ಅಥವಾ ಜೈನ ಮತಾವಲಂಬಿಗಳ ವಿಚಾರವಲ್ಲ. ಇದು ಇಡೀಯ ಭಾರತೀಯ ಸಂಸ್ಕೃತಿಯ ಅಳಿವು ಉಳಿವಿನ ವಿಚಾರ. ಸಲ್ಲೇಖನದಂಥ ಆಚರಣೆಗಳು ಹಲವಾರು ಸಂಪ್ರದಾಯಗಳಲ್ಲಿ ಸಿಗುತ್ತವೆ. ನಮ್ಮ ಸಂಸ್ಕೃತಿಗಳ ಮೇಲಿನ ಈ ರೀತಿಯ ಹಲ್ಲೆಗಳು ಇಂದು ನೆನ್ನೆಯ ವಿಚಾರವಲ್ಲ. ಇದಕ್ಕೆ ಸುಮಾರು ಸಾವಿರ ವರುಷದ ಇತಿಹಾಸವಿದೆ. ಇದರ ವಿರುದ್ಧ ಹೋರಾಡುವುದು ಎಂದರೆ ನ್ಯಾಯಾಲಯದ ಒಂದು ಆದೇಶದ ವಿರುದ್ಧ ಹೋರಾಡುವುದಲ್ಲ. ರಾಜಕೀಯ ಒತ್ತಡದ ಅಥವಾ ಫೇಸ್ಬುಕ್ ಹೋರಾಟದ ಮೂಲಕ ಸಲ್ಲೇಖನದಂಥ ಆಚರಣೆಯನ್ನು ಉಳಿಸಿಕೊಂಡರೂ, ಇನ್ನೊಂದು ದಿನ ಮತ್ತೊಂದು ಭಾರತೀಯ ಆಚರಣೆಗೆ, ಸಂಪ್ರದಾಯಕ್ಕೆ ಇದೇ ಗತಿ ಬರುವುದಿಲ್ಲ ಎಂಬ ಯಾವ ಭರವಸೆಯೂ ನಮಗಿಲ್ಲ.

   ಭಾರತೀಯ ಸಂಸ್ಕೃತಿಯನ್ನು ಬಲಪಡಿಸುವುದು ನಾವು ಶೀಘ್ರವಾಗಿ ಕೈಗೊಳ್ಳಬೇಕಾದ ಕಾರ್ಯ. ಇದಕ್ಕಿರುವ ದಾರಿ ಒಂದೇ ಒಂದು. ಈ ಸಂಸ್ಕೃತಿಗಳು ಇಂದಿನ ದಿನದ ನಮ್ಮ ಅವಶ್ಯಕತೆಗಳಿಗೆ ಹೇಗೆ ಸಹಾಯಮಾಡಬಹುದು ಎಂಬುದನ್ನು ನಾವು ಚಿಂತನೆಯ, ಸಂಶೋಧನೆಯ ಮೂಲಕ ಗ್ರಹಿಸಬೇಕು. ಅವು ಮಾನವ ಜೀವನದ ಕುರಿತು ಕೊಡುವ ಒಳನೋಟಗಳನ್ನು ಇಂದಿನ ಅವಶ್ಯಕತೆಗಳಿಗೆ ಬೇಕಾಗುವಂತೆ ಉಪಯೋಗಿಸುವುದನ್ನು ಕಂಡುಕೊಳ್ಳಬೇಕು. ಈ ಕುರಿತು ಆಳವಾದ ಸಂಶೋಧನೆಗಳು ನಡೆಯಬೇಕು. ಹಿಂದೂ ಹುಡುಗಿಯ ಜೊತೆ ಕಾಣಿಸಿಕೊಳ್ಳುವ ಮುಸ್ಲಿಂ ಹುಡುಗರನ್ನು ಮತ್ತು ಪಾರ್ಕಿನಲ್ಲಿ ಕೂರುವ ಪ್ರೇಮಿಗಳನ್ನು ಹಿಡಿದು ಥಳಿಸಿದರೆ, ಬೀದಿಗಿಳಿದು ಗೋಮಾಂಸ ತಿಂದರೆ, ಇನ್ಯಾರೋ ತಿನ್ನುವುದನ್ನು ನಿಷೇಧಿಸಿದರೆ ಅಥವಾ ವಿವೇಕಾನಂದರ ಪೃಷ್ಠದ ಬಲಭಾಗದ ಮೇಲೆ ಇದ್ದಿರಬಹುದಾದ ಕುರುವಿನ ಕರುಣಾತ್ಮಕ ವಿವರಣೆ ನೀಡಿದರೆ ಭಾರತೀಯ ಸಂಸ್ಕೃತಿ, ಸಂಪ್ರದಾಯಗಳು ಉದ್ಧಾರವಾಗುವುದಿಲ್ಲ.

Read more from ಲೇಖನಗಳು
28 ಟಿಪ್ಪಣಿಗಳು Post a comment
  1. praveen Konandur
    ಸೆಪ್ಟೆಂ 2 2015

    ಡಂಕಿನ್, ಒಳ್ಳೆಯ ಲೇಖನ. ಸರಳವಾದ ಭಾಷೆ ಮತ್ತು ನಿರೂಪಣೆ. ಕೋರ್ಟ್ ಗುರುತಿಸಿರುವ ಅಂಶಗಳು ವಸಾಹತು ಕಾಲದಲ್ಲಿ ಭಾರತೀಯರ ಮೇಲೆ ಬ್ರಿಟೀಷರು ಹಾಕಿದ ಷರತ್ತುಗಳಿಗಿಂತ ಕಠೋರವಾಗಿವೆ. “ಆಚರಣೆಗಳಿಗೆ ವೈಜ್ಞಾನಿಕ ವಿವರಣೆ ನೀಡಿ, ಇಲ್ಲವೇ ಪವಿತ್ರ ಗ್ರಂಥಗಳ ಆಧಾರ ಒದಗಿಸಿ” ಎಂಬ ಆಯ್ಕೆಯನ್ನು ಐರೋಪ್ಯರು ಭಾರತೀಯರ ಮುಂದೆ ಇಟ್ಟಿದ್ದರು.. ಆದರೆ ಈ ನ್ಯಾಯಾಲಯದ ತೀರ್ಪು ಬ್ರಿಟೀಷರಿಗಿಂತ ಹೆಚ್ಚು ಕಲೋನಿಯಲ್ ಆಗಿದೆ.! ಏಕೆಂದರೆ ಎರಡನೇ ಆಯ್ಕೆಯನ್ನೇ ತೆಗೆದು ಹಾಕಿದೆ…

    ಉತ್ತರ
  2. praveen Konandur
    ಸೆಪ್ಟೆಂ 2 2015

    “ಎಂಬ ಆಯ್ಕೆಯನ್ನು”= ಎಂಬೆರಡು ಆಯ್ಕೆಗಳನ್ನು

    ಉತ್ತರ
    • Dunkin Jalki
      ಸೆಪ್ಟೆಂ 3 2015

      ಬ್ರಿಟಿಷರು ಭಾರತೀಯರಿಗೆ ನಿಮ್ಮ ಆಚರಣೆಗಳಿಗೆ ನಿಮ್ಮ ಹಿಂದೂ ರಿಲಿಜನ್ನಿನ ಆಧಾರವಿದೆ ಮತ್ತು ಅವುಗಳು ಪುರಾತನಕಾಲದಿಂದ ಆಚರಣೆಯಲ್ಲಿವೆ ಎಂದು ತೋರಿಸಿ ಇಲ್ಲ ನಾವು ಅದನ್ನು ನಿರ್ಬಂಧಿಸುತ್ತೇವೆ ಎಂದು ಹೇಳಿದ್ದರು ನಿಜ. ಈ ಕಳೆದ ಸುಮಾರು ೪೦, ೫೦ ವರುಷಗಳಲ್ಲಿ, ‘ಪ್ರಗತಿಪರ’ ಚಿಂತನೆ ಹೆಚ್ಚಿದಾಗಿನಿಂದ, ಆಚರಣೆಗಳನ್ನು ಉಳಿಸಿಕೊಳ್ಳಲು ಅವುಗಳಿಗೆ ‘ವೈಜ್ಞಾನಿಕ’ ತಳಹದಿ ಇದೆ ಎಂದು ತೋರಿಸುವ ಹೊಸದೊಂದು ಅಗತ್ಯತೆ ಸೇರಿಕೊಂಡಿದೆ. ಸಲ್ಲೇಖನ ವ್ರತದ ಕುರಿತ ರಾಜಸ್ಥಾನ ಉಚ್ಚ ನ್ಯಾಯಾಲಯದ ತೀರ್ಪಿನಲ್ಲಿ ನಮಗೆ ಒಂದು ಹೊಸ ಬೆಳವಣಿಗೆಯ ಸ್ಪಷ್ಟ ಚಿತ್ರಣ ಕಾಣ ಸಿಗುತ್ತದೆ. ಆಚರಣೆಗಳ ವೈಜ್ಞಾನಿಕತೆಯನ್ನು ತೋರಿಸುವ ಹೆಸರಿನಲ್ಲಿ ಇಲ್ಲ ಸಲ್ಲದ ವೈಜ್ಞಾನಿಕ ವಾದಗಳನ್ನು ನ್ಯಾಯಾಲಯ ಒಪ್ಪಿಕೊಳ್ಳಲು ನಿರಾಕರಿಸುತ್ತಿರುವುದೇ ಈ ಹೊಸ ಬೆಳವಣಿಗೆ. ಇದು ಒಳ್ಳೆಯ ಬೆಳವಣಿಗೆಯೋ ಅಲ್ಲವೋ ಎಂಬುದರ ಕುರಿತು ನನಗಿನ್ನೂ ಸ್ಪಷ್ಟತೆ ಇಲ್ಲ. ಇದರ ಒಂದು ಒಳ್ಳೆಯ ಪರಿಣಾಮವೆಂದರೆ ಇನ್ನು ಮೇಲೆ ವೈಜ್ಞಾನಿಕ ಚಿಂತನೆಯ ಹೆಸರಿನಲ್ಲಿ ಹುಟ್ಟಿಕೊಳ್ಳುವ ಸುಡೋ-ಸೈಂಟಿಫಿಕ್ ವಿಚಾರಗಳಿಗೆ ಕಡಿವಾಣ ಬೀಳಬಹುದು. ಆದರೆ ಈ ಬೆಳವಣಿಗೆಯ ಒಂದು ಕೆಟ್ಟ ಪರಿಣಾಮ ಬಹಳಷ್ಟು ಸಮಸ್ಯೆಯನ್ನೂ ತಂದೊಡ್ಡಬಹುದು. ಭಾರತೀಯ ಆಚರಣೆಗಳ ಕುರಿತ ಪ್ರತಿಯೊಂದು ಸಂಶೋಧನೆಯನ್ನೂ ನ್ಯಾಯಾಲಯ ಇನ್ನುಮುಂದೆ ಕಡೆಗಣಿಸುವ ಸಾಧ್ಯತೆ ಇದೆ. ಅಂದರೆ, ಸಲ್ಲೇಖನದಂಥ ನಮ್ಮ ಆಚರಣೆಗಳನ್ನು ಉಳಿಸಿಕೊಳ್ಳಲು ನಮ್ಮಗೆ ಯಾವುದೇ ದಾರಿಗಳಿಲ್ಲದೆ ಹೋಗಬಹುದು. ಸಧ್ಯಕ್ಕೆ ಇದನ್ನು ಜಗತ್ತಿನ ಕುರಿತ ನನ್ನ ನಕಾರಾತ್ಮಕ ಧೋರಣೆ ಎಂದುಕೊಂಡು ನಮ್ಮ ನಮ್ಮ ಸಂಶೋಧನೆಗಳಲ್ಲಿ ತೊಡಗುವುದಷ್ಟೇ ನನಗೆ ತೋಚುತ್ತಿರುವ ದಾರಿ.

      ಉತ್ತರ
  3. ಸೆಪ್ಟೆಂ 2 2015

    “ಭಾರತೀಯ ಸಂಸ್ಕೃತಿಯನ್ನು ಬಲಪಡಿಸುವುದು ನಾವು ಶೀಘ್ರವಾಗಿ ಕೈಗೊಳ್ಳಬೇಕಾದ ಕಾರ್ಯ”

    ಸಿಎಸ್ ಎಲ್ ಸಿ ಕೇವಲ ಸಂಸ್ಕೃತಿಯ ಅಧ್ಯಯನ ಮಾತ್ರ ಮಾಡುತ್ತದೆ ಎಂದುಕೊಂಡಿದ್ದೆ. ಸಂಸ್ಕೃತಿಯ ರಕ್ಷಣೆಯ ಜವಾಬ್ದಾರಿಯನ್ನೂ ಹೊತ್ತಿದೆ ಎಂದು ಈಗಲೆ ತಿಳಿಯಿತು. ಗೋ ಹತ್ಯೆಯ ನಿಷೇದದ ಬಗ್ಗೆ ಸಿಎಸ್ ಎಲ್ಸಿ ಯ ನಿಲುವು ಬಲಪಂಥೀಯರಿಗೆ ಇರುಸುಮುರಿಸನ್ನುಂಟುಮಾಡಿದರೆ, ಮಡೆಸ್ನಾನದ ಬಗೆಗಿನ ನಿಲುವು ಎಡಪಂಥೀಯರ ಕಣ್ಣನ್ನು ಕೆಂಪಾಗಿಸುತ್ತಿದೆ. ಈ ಗೊಂದಲದಲ್ಲಿ ಸಂಕೃತಿಯ ರಕ್ಷಣೆಯ ಕಾರ್ಯ ಯಾವ ದಿಕ್ಕನ್ನು ಪಡೆಯುತ್ತದೆಯೋ ದೇವರೇ ಬಲ್ಲ. 🙂

    ಉತ್ತರ
    • Harisha
      ಸೆಪ್ಟೆಂ 2 2015

      “ಭಾರತೀಯ ಸಂಸ್ಕೃತಿಯನ್ನು ಬಲಪಡಿಸುವುದು ನಾವು ಶೀಘ್ರವಾಗಿ ಕೈಗೊಳ್ಳಬೇಕಾದ ಕಾರ್ಯ” ಇದರ ಮುಂದಿನ ಸಾಲುಗಳನ್ನು ತಾವು ಗಮನಿಸಲಿಲ್ಲವೆಂದು ತೋರುತ್ತದೆ!!

      ಅದರ ಮುಂದಿನ ಸಾಲು ಹೀಗಿದೆ; ” ಇದಕ್ಕಿರುವ ದಾರಿ ಒಂದೇ ಒಂದು. ಈ ಸಂಸ್ಕೃತಿಗಳು ಇಂದಿನ ದಿನದ ನಮ್ಮ ಅವಶ್ಯಕತೆಗಳಿಗೆ ಹೇಗೆ ಸಹಾಯಮಾಡಬಹುದು ಎಂಬುದನ್ನು ನಾವು ಚಿಂತನೆಯ, ಸಂಶೋಧನೆಯ ಮೂಲಕ ಗ್ರಹಿಸಬೇಕು. ಅವು ಮಾನವ ಜೀವನದ ಕುರಿತು ಕೊಡುವ ಒಳನೋಟಗಳನ್ನು ಇಂದಿನ ಅವಶ್ಯಕತೆಗಳಿಗೆ ಬೇಕಾಗುವಂತೆ ಉಪಯೋಗಿಸುವುದನ್ನು ಕಂಡುಕೊಳ್ಳಬೇಕು. ಈ ಕುರಿತು ಆಳವಾದ ಸಂಶೋಧನೆಗಳು ನಡೆಯಬೇಕು”.

      ಈಗ ಇಲ್ಲಿ ಬಲಪಡಿಸುವುದು ಎಂದರೆ ಯಾವುದಕ್ಕೆ ಹೇಳುತ್ತಿದ್ದಾರೆ ಎಂಬುದು ಯಾರಿಗಾದರೂ ಸ್ಪಷ್ಟವಾಗಿಯೇ ಇದೆ.

      ಇನ್ನು ಯಾವುದೋ ಪಂಥದವರಿಗೆ ಪಥ್ಯವಾಗುತ್ತದೆ ಎಂಬುದನ್ನಾಧರಿಸಿ ಸಂಶೋಧನೆ ನಡೆಯುವುದಿಲ್ಲ. ಸತ್ಯ ಕೆಲವೊಮ್ಮೆ ಕಹಿಯಾಗುವ ಸಾಧ್ಯತೆ ಇರಬಹುದು. ಅಷ್ಟಕ್ಕೂ ಕೆಲವು ಗೊಂದಲ, ಇರುಸುಮುರುಸು, ಕಣ್ಣು ಕೆಂಪಾಗುವುದು ನೀವು ಹೇಳುವ ಪಂಥದವರಿಗಿರಬಹುದೇ ವಿನಃ ಸಂಶೊಧಕರಿಗಲ್ಲ!! ಹಾಗಾಗಿ ಅವು ಸಂಶೋಧನೆಗೆ ಅಲ್ಪ ತಡೆಯೊಡ್ಡಬಹುದಷ್ಟೇ ವಿನಃ ಅದರ ದಿಕ್ಕನ್ನು ನಿರ್ಧರಿಸಲಾರದು. ಈ ಸಣ್ಣ ವ್ಯತ್ಯಾಸ ತಮಗೆ ತಿಳಿದಿದೆ ಎಂದು ಭಾವಿಸುತ್ತೇನೆ !!

      ಉತ್ತರ
      • ಸೆಪ್ಟೆಂ 10 2015

        Some Interesting notes:

        *ಬಾಲಗಂಗಾಧರ್ ಅವರ ಸಂಶೋಧನೆ ವೈಜ್ಞಾನಿಕ ಮಾದರಿಯನ್ನು ಅನುಸರಿಸುತ್ತದೆ. (ಅವರ ಸಂಶೋಧನೆಯನ್ನು, ಮಾರ್ಗವನ್ನು ಅನುಸರಿಸುತ್ತಿರುವವರ ಅಂಬೋಣ)
        *ವಿಜ್ಞಾನ ಕ್ರೈಸ್ತ ಥಿಯಾಲಜಿಯ ಮಾದರಿಯಿಂದ ಬಂದಿದೆ.(ಹೀಗೆಂದು ಬಾಲಗಂಗಾಧರ್ ಅವರು ಹೇಳಿದಂತೆ ನೆನಪು. ತಪ್ಪಿದ್ದರೆ ತಿದ್ದಿ)
        *Conclusion: ಹಾಗಾಗಿ ಬಾಲಗಂಗಾಧರ್ ಅವರ ಸಂಶೋಧನೆ ಕ್ರೈಸ್ತ ಥಿಯಾಲಜಿಯ ಮಾದರಿಯದ್ದು.
        ಈ ಸಂಶೋಧನೆಯ ಹಾದಿಯನ್ನೇ (ಹಾಗಾಗಿ ಆ ಮಾದರಿಯನ್ನೇ) ತಮ್ಮ ಜ್ಞಾನಮಾರ್ಗವೆಂದು ಎದೆ ತಟ್ಟಿ ಹೇಳಿಕೊಂಡಿದ್ದರು ಕೆಲವರು.
        ಪ್ರಶ್ನೆ :ಕ್ರೈಸ್ತ ಥಿಯಾಲಜಿಯ ಮಾದರಿಯನ್ನು ಜ್ಞಾನಮಾರ್ಗ ಮಾಡಿಕೊಂಡವರು ವಿಸ್ಮೃತಿಯಿಂದ ಹೊರಬರಬಹುದೇ?
        ಗುಡ್!!

        ಉತ್ತರ
        • Murari
          ಸೆಪ್ಟೆಂ 11 2015

          Madam
          You need to understand difference between Science, scientific, vijnAna and vaijnanika. You are hellbent on making the same mistake that was told to you earlier – basing your arguements on words and concepts which is a suspecty according to Balu’s group. I do not know whebn you are going to realise this fallacy. Again if you are pretending to sleep, it is impossible to wake you up.

          ಉತ್ತರ
          • ಸೆಪ್ಟೆಂ 11 2015

            “You need to understand difference between Science, scientific, vijnAna and vaijnanika.”

            ನೀವೆ ಅದರ ವ್ಯತ್ಯಾಸವನ್ನು ವಿವರಿಸಿ ಸರ್. ಈ ಫೋರಮ್ ಇರುವದೆ ಇದಕ್ಕಲ್ಲವೇ? ‘ತಪ್ಪಿದ್ದರೆ ತಿದ್ದಿ’ ಎಂದು ನಾನೇ ಹೇಳಿದ್ದೆನಲ್ಲ. ಅರ್ಗ್ಯುಮೆಂಟ್ ಜೊತೆ ಬನ್ನಿ.

            “I do not know whebn you are going to realise this fallacy.”

            ಈ ಹೇಳಿಕೆಯು ರಿಲಿಜಿಯನ್ ಅನ್ನು ಅಮಲೆರಿಸಿಕೊಂಡಿರುವವರ ಪಕ್ಕಾ ಹೇಳಿಕೆಯಂತಿದೆ. ನಡೆದ ಚರ್ಚೆಯಲ್ಲಿನ ವಾದದಲ್ಲಿನ ‘fallacy ಯಾವುದೆಂದು ನಾನೇ ಬಿಡಿಸಿ ಹೇಳಿದ್ದೇನೆ. ನನ್ನ ವಾದದಲ್ಲಿ fallacy ಇದ್ದರೆ ಅದನ್ನು ನಿರೂಪಿಸಿ ಇಂತಹ ಹೇಳಿಕೆ ಕೊಡಬೇಕೆ ವಿನಃ, ಸುಮ್ಮನೆ ಕಲ್ಲೆಸೆಯುವದಲ್ಲ. ಅಷ್ಟಕ್ಕೂ ಸಾಧ್ಯವಿದ್ದರೆ ನಾನು ಅಲ್ಲಿಯೇ ಕೇಳಿದ ಪ್ರಶ್ನೆಗೆ ಉತ್ತರಿಸಿ ನಂತರ ಮುಂದುವರೆಸಿ.

            ಉತ್ತರ
            • Anonymous
              ಸೆಪ್ಟೆಂ 11 2015

              Unless you repent for your ‘crime’ no one will engage in intellectual debate with an unrepentant ‘criminal’. So please tender apologies to the person whose picture you stole, the readers of Nilume and the moderators of Nilume publicly before asking any new questions.

              ಉತ್ತರ
            • Murari
              ಸೆಪ್ಟೆಂ 13 2015

              Scientificism is a methodology of enquiry. Science is a product derived using this methodology and some presumptions ( known as hypothesis.) Western science is one such product derived from western presumptions about world and scientific enquiry as a method. While Balu’s arguments are scientific in the sense that it uses the methodology for enquiry. However, it questions the hypothesis, or the presumptions underlying the western worldview. Similarly vijnana ias aterm used in our tradition to explain the physical world as we see with a presumption that behind this is a unitary reality called “parabrahmavastu.”. Western science does not believe so. that is the difference between science and vijnana.
              Further, if yiou do not understand please accept your ignorance and ask question with due humility. Humility is a pre-requisite for learning in indian traditions.
              summane kidigedi ketalegaLinda yarigu yAvude prayOjanavilla.

              ಉತ್ತರ
              • ಸೆಪ್ಟೆಂ 24 2015

                ಧನ್ಯವಾದಗಳು ಮುರಾರಿಯವರೇ. ಅಂದರೆ ನಿಮ್ಮ ಪ್ರಕಾರ, ‘Scientificism ‘ ಬೇರೆ ಹಾಗೂ ‘ವೆಸ್ಟರ್ನ್ Scientificism ‘ಬೇರೆ ಎಂದಾಯಿತು. ಆದರೆ ಬಾಲಗಂಗಾಧರ್ ಅವರ ಪ್ರಕಾರ ‘natural science ಎನ್ನುವದು ಥಿಯಾಲಜಿಯನ್ನು ಮಾದರಿಯನ್ನಾಗಿಸಿಕೊಂಡಿದೆ ಎಂದು. ಹಾಗಿದ್ದರೆ ನಿಮ್ಮ ಪ್ರಕಾರ Scientificism ಎನ್ನುವದು ಥಿಯಾಲಜಿಯನ್ನು ಮಾದರಿಯನ್ನಾಗಿಸಿಕೊಂಡಿಲ್ಲವೇ?

                ಉತ್ತರ
        • Anonymous
          ಸೆಪ್ಟೆಂ 11 2015

          Mr. Kiran Batni or whoever is using the id of Prajna Anand, it’s a crime to impersonate a real person by using her photograph. I warned you recently and you’ve promptly removed the photograph. By doing so you’ve admitted that you were indeed misusing someone else’s photograph in this forum.Unless you repent for your ‘crime’ no one will engage in intellectual debate with a ‘criminal’. So please tender apologies to the person whose picture you stole, the readers of Nilume and the moderators of Nilume publicly before asking any new questions.

          ಉತ್ತರ
          • ಸೆಪ್ಟೆಂ 11 2015

            ನನ್ನ ಪ್ರೊಫೈಲ್ ಚಿತ್ರ ಹೇಗೆ ಕಾಣಿಸಿಕೊಂಡಿಲ್ಲವೊ ಗೊತ್ತಿಲ್ಲ. ಆದರೆ ನಾನಂತೂ ತೆಗೆದಿಲ್ಲ. ಈಗ ಅದು ನನಗೆ ಮುಖ್ಯವೂ ಅಲ್ಲ. ನನ್ನನ್ನೂ ಎನಾನಿಮಸ್ ಎಂದೆ ತಿಳಿದುಕೊಳ್ಳಿ, ನೋ ಪ್ರಾಬ್ಲೆಮ್. ನಿಮಗೆ ವಾದ ಮಾಡದಿರಲು ಈ ವಿಷಯ ಕಾರಣವೆನ್ನುವಿರಾದರೆ ಅದರ ಹಿಂದಿನ ನಿಜವಾದ ಕಾರಣ ಸುಸ್ಪಷ್ಟ. ಅದು ಈಗಾಗಲೆ ಸಾಭೀತಾಗಿದೆ ಕೂಡ. ವಸಾಹತು ಪ್ರಜ್ಞೆಯಿಂದ ಹೊರಬರಬೇಕು ಎಂದು ಒಂದು ಕಡೆ ಎನ್ನುತ್ತಾ, ಇನ್ನೊಂದು ಕಡೆ ಕ್ರೈಸ್ತ ಥಿಯಾಲಜಿಯ ಮಾದರಿಯನ್ನೇ ಜ್ಞಾನಮಾರ್ಗ ಎನ್ನುವವರಿಗೂ, ತಾವು ಎನಾನಿಮಸ್ ಪ್ರೊಫೈಲ್ ಏರಿಸಿಕೊಂಡು ಇನ್ನೊಬ್ಬರ ಪ್ರೊಫೈಲ್ ಅನ್ನು ಫೇಕ್ ಎಂದು ಕ್ರೈಮ್ ಎನ್ನುವವರಿಗೂ ಸಾಮ್ಯತೆ ಇರಬೇಕಾದ್ದೇ. 🙂

            ಉತ್ತರ
            • Anonymous
              ಸೆಪ್ಟೆಂ 11 2015

              Mr. Kiran Batni or whoever is using Prajna Anand’s id, I’ve clearly said in my earlier comment that using anonymous or even fake ids is not a crime. However, stealing someone else’s picture and using it with a fake id is crime. This has nothing to do with theology or science. It is plain simple Indian penal code. If you are in doubts please consult a criminal lawyer and seek his opinion and find out under which section of Indian penal code your offense can be investigated. As per my knowledge your offense can mean 3 years of imprisonment. So don’t be foolish now and repent in jail later.

              ಉತ್ತರ
              • ಸೆಪ್ಟೆಂ 11 2015

                You are absolutely true Mr. Anonymous.But you have no evidence to prove that my profile pic is someone’s. Even if I confess it’s not mine, there are people to take care of it, and it’s none of your business.
                I understand it’s my questions that are haunting you than pic itself. My apologies for making you people speechless.

                ಉತ್ತರ
                • Anonymous
                  ಸೆಪ್ಟೆಂ 12 2015

                  Mr. Kiran Batni or whoever is using the id of Prajna Anand, you’ve indeed made us speechless by your naked demonstration of indecency, stupidity, ignorance, and juvenile behavior. Add the ‘crime’ of stealing some woman’s picture from the net and using it as your profile image to that! Who in the right frame of mind would want to have a conversation with a ‘criminal’ like you?!! Mental hospital and/or jail is the right place for you. If you continue to use stolen image as your profile picture I’ll ensure that you’re sent there.

                  ಉತ್ತರ
        • Naani
          ಸೆಪ್ಟೆಂ 11 2015

          [*ವಿಜ್ಞಾನ ಕ್ರೈಸ್ತ ಥಿಯಾಲಜಿಯ ಮಾದರಿಯಿಂದ ಬಂದಿದೆ.(ಹೀಗೆಂದು ಬಾಲಗಂಗಾಧರ್ ಅವರು ಹೇಳಿದಂತೆ ನೆನಪು. ತಪ್ಪಿದ್ದರೆ ತಿದ್ದಿ)
          *Conclusion: ಹಾಗಾಗಿ ಬಾಲಗಂಗಾಧರ್ ಅವರ ಸಂಶೋಧನೆ ಕ್ರೈಸ್ತ ಥಿಯಾಲಜಿಯ ಮಾದರಿಯದ್ದು.
          ಈ ಸಂಶೋಧನೆಯ ಹಾದಿಯನ್ನೇ (ಹಾಗಾಗಿ ಆ ಮಾದರಿಯನ್ನೇ) ತಮ್ಮ ಜ್ಞಾನಮಾರ್ಗವೆಂದು ಎದೆ ತಟ್ಟಿ ಹೇಳಿಕೊಂಡಿದ್ದರು ಕೆಲವರು.
          ಪ್ರಶ್ನೆ :ಕ್ರೈಸ್ತ ಥಿಯಾಲಜಿಯ ಮಾದರಿಯನ್ನು ಜ್ಞಾನಮಾರ್ಗ ಮಾಡಿಕೊಂಡವರು ವಿಸ್ಮೃತಿಯಿಂದ ಹೊರಬರಬಹುದೇ?]

          🙂 🙂 😀 😀 🙂 🙂 😀 😀 🙂 🙂 😀 😀 🙂 🙂 😀 😀

          ಬಾಲಗಂಗಾಧರರ ಸಂಶೋಧನೆಯ ಬಗ್ಗೆ ಮನಸ್ಸಿಗೆ ಬಂದಿದ್ದನ್ನು ಪ್ರತಿಪಾದಿಸಿಕೊಂಡು ಹಾಸ್ಯಾಸ್ಪದ ಪ್ರಶ್ನೆಗಳನ್ನು ಉದುರಿಸುತ್ತಾ ಮನಸ್ಸಲ್ಲಿ ಮಂಡಿಗೆ ತಿನ್ನುವ ಖಯಾಲಿ ಇರೋರ ಜೊತೆಗೆ ಯಾರೂ ಚರ್ಚಿಸಲು ಸಾಧ್ಯವಿಲ್ಲ! ಹಾಗಾಗಿ ಮೊದಲು ಬಾಲಗಂಗಾಧರರು ಬರೆದಿದ್ದನ್ನು ಓದಿದರೆ ಚರ್ಚಿಸಬಹುದಾದ ಪ್ರಶ್ನೆಗಳು ಹುಟ್ಟಬಹುದು. ಚರ್ಚೆಯೂ ಸಾಧ್ಯವಾಗಬಹುದು! ಇಲ್ಲವೇ ಉದಾಸೀನವೇ ಮದ್ದು! ಕೊನೆ ಪಕ್ಷ ಸೈನ್ಸ್ ಬಗ್ಗೆ ಬಾಲಗಂಗಾಧರರು ಏನು ಹೇಳಿದ್ದಾರೆ ಅನ್ನೋದನ್ನಾದ್ರೂ ಓದ್ಕೊಂಡ್ರೆ ತನ್ನ ಹುಚ್ಚುತನಕ್ಕೆ ತಾನೇ ಮರುಗಬಹುದೇನೋ??!! 🙂

          http://www.hipkapi.com/2011/03/17/religion-and-origin-of-natural-sciences/

          ಉತ್ತರ
          • ಸೆಪ್ಟೆಂ 11 2015

            ನನಗೆ ಇಂಗ್ಲಿಶ್ ಅರ್ಥವಾಗುವದಿಲ್ಲ. ಈ ತರ ಲಿಂಕನ್ನು ನೀಡುವ ಬದಲು ನನ್ನ ಪ್ರಶ್ನೆಗಳಿಗೆ ಉತ್ತರಿಸಿ.
            ೧. ವಿಜ್ಞಾನ ಕ್ರೈಸ್ತ ಥಿಯಾಲಜಿಯ ಮಾದರಿಯಿಂದ ಹುಟ್ಟಿಕೊಂಡಿದ್ದಲ್ಲವೆ?
            ೨. ಬಾಲು ಅವರ ಸಂಶೋಧನೆ ವೈಜ್ಞಾನಿಕ ಮಾದರಿಯನ್ನು ಅನುಸರಿಸುತ್ತಿರುವದೆ?

            ಉತ್ತರ
            • Naani
              ಸೆಪ್ಟೆಂ 11 2015

              🙂 🙂

              ಉತ್ತರ
            • Naani
              ಸೆಪ್ಟೆಂ 11 2015

              🙂 🙂 ಇಂಗ್ಲೀಷ್ ಮೇಷ್ಟ್ರನ್ನು ನೇಮಿಸಿಕೊಂಡು ಓದಿಸಿಕೊಳ್ಳಿರಿ ನಮಗೆ ಕ್ಯಾಮೆ ಇದೆ. ಮೊದಲು ಬಾಲಗಂಗಾಧರರ ವಾದಗಳನ್ನು ಓದಿ. ನಂತರ ಅವರ ತಂಡದವರನ್ನು Speechless ಆಗುವಂತಹ ಪ್ರಶ್ನೆಗಳನ್ನು ಕೇಳುವಿರಂತೆ…

              ಉತ್ತರ
            • Anonymous
              ಸೆಪ್ಟೆಂ 11 2015

              ಈ ಹುಡುಗಿಯ ಪೋಟೋವನ್ನು ಈ ಯಪ್ಪ ಎಲ್ಲಿಂದ ಎತ್ಹಾಕ್ಕೊಂಡಿದೆ ಅಂತ ಸ್ವಲ್ಪ ಗೂಗಲ್ ಇಮೇಜ್ ಸರ್ಚ್ ಮಾಡ್ರಪ್ಪ! ಅವುಗಳಲ್ಲಿ ಒಂದು ಇದು : http://www.akbarkhan.net/2014/12/unseen-cute-indian-girls-image.html

              ಉಳಿದವುಗಳ ಲಿಂಕನ್ನಿಲ್ಲಿ ಕೊಡೋ ತರವೇ ಇಲ್ಲ!! ಅದ್ಯಾವ ಸೂರ್ಯ’ಕಿರಣ’ವೋ ಅದ್ಯಾವ ಸಸ್ಯಶಾಸ್ತ್ರ/’ಬಾಟ್ನಿ’ಯೋ???
              ಇದೆಲ್ಲಾ ಬೇಕಿತ್ತಾ???

              ಉತ್ತರ
  4. anonymous
    ಸೆಪ್ಟೆಂ 12 2015

    When his computer gets seized during police investigation many more truths will come out. Perversity has many facets.

    ಉತ್ತರ
    • Anonymous
      ಸೆಪ್ಟೆಂ 13 2015

      Mr. Murari, this person (Kiran Batni as hinted by some readers or some other person) impersonating as Prajna Anand even lied that ‘she’ is an IT industry person based in Hyderabad. Not only ‘she’ is a fake personality but also a proven liar. Do you think ‘her’ questions are intellectually sincere? We don’t need to answer any of ‘her’ questions till ‘she’ apologizes to everyone here for ‘her’ disgraceful conduct. The more we feed liars like ‘her’, the more garbage they throw at everyone.

      ಉತ್ತರ
  5. ಸೆಪ್ಟೆಂ 14 2015

    ಕಿರಣ್ ಬಾಟ್ನಿಯವರನ್ನು ಅನವಶ್ಯಕವಾಗಿ ಎಳೆತರುತ್ತಿರುವದು ಅನುಚಿತ. ಹಿಂದೊಮ್ಮೆ ‘ಅಪಶೂದ್ರಾಧಿಕರಣ ಏನನ್ನು ಹೇಳುತ್ತದೆ?’ ಎಂಬ ಲೇಖನಕ್ಕೆ ಕಿರಣ್ ಬಾಟ್ನಿಯವರು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಇದೆ ರೀತಿ ತಡಬಡಾಯಿಸಿ ಕೈತೊಳೆದುಕೊಂಡಾಗಿತ್ತು. ಕಿರಣ್ ಬಾಟ್ನಿಯವರಿಗೆ ಈ ಹುರುಳಿಲ್ಲದ ಸಂಶೋಧನೆಗಳ ಲಾಜಿಕಲ್ ಫಾಲಸಿ ಅರ್ಥವಾಗಿ, ಅಧ್ಯಯನವನ್ನೇ ಆಶಯವನ್ನಾಗಿರಿಸಿಕೊಂಡು ಮುಂದೆ ನಡೆದು ಎಷ್ಟೊ ವರ್ಷಗಳಾಗಿವೆ. ಅವರನ್ನು ವಾದದಲ್ಲಿ ಹಿಮ್ಮೆಟ್ಟಿಸಲು ಸಾಧ್ಯವಾಗದಿದ್ದರೂ ಅವರನ್ನು ವಿಲನ್ ಮಾಡುವ ಸಂಶೋಧಕರ ಪ್ರವೃತ್ತಿಗೆ ಏನೆನ್ನಬೇಕು?
    ತಾರ್ಕಿಕವಾಗಿ ಎದುರಿಸಲು ಸಾಧ್ಯವಾಗದಿದ್ದಾಗ ವೈಯಕ್ತಿಕ ಟೀಕೆಗೆ ಇಳಿಯುವದು ತೀರ ಸಹಜವೇ. ಬುದ್ಧಿಕೀವಿಗಳನ್ನು ವಿರೋಧಿಸುವ ಬಣದವರೇನೂ ಇದಕ್ಕೆ ಕಡಿಮೆಯಿಲ್ಲ ಎಂಬುದನ್ನು ಇಲ್ಲಿ ನಡೆದ ಚರ್ಚೆಯೆ ಸಾಭೀತುಪಡಿಸುತ್ತದೆ. ಈ ಲಿಂಕುಗಳನ್ನು ಹಾಕುವದರಿಂದ ಪ್ರಶ್ನೆಗೆ ಉತ್ತರಿಸಿದಂತಾಗುವದಿಲ್ಲ. ಆ ಲಿಂಕುಗಳಲ್ಲಿರುವದು ಇಷ್ಟು ದಿನದ ವರೆಗೆ ಹೇಳಿದ ಅದೇ ಹೇಳಿಕೆಗಳು(Argumentum ad nauseam ವಾದವಷ್ಟೆ).
    ನನ್ನ ಐಡೆಂಟಿಟಿಯ ವಿನಾ ವಿಷಯಕ್ಕೆ ಸಂಬಂಧಪಟ್ಟಂತೆ ಚರ್ಚೆ ಸಾಧ್ಯವಾಗುವದಿದ್ದರೆ ಬನ್ನಿ, ಇಲ್ಲದ ತಲೆ ಹರಟೆಗಳು, ಸಂಬಂಧಪದದಿರುವವರ ತಲೆ ಮೇಲೆ ಗೂಬೆ ಕೂರಿಸುವದು ಅನವಶ್ಯಕ.

    ಉತ್ತರ
  6. anonymous
    ಸೆಪ್ಟೆಂ 14 2015

    “ಕಿರಣ್ ಬಾಟ್ನಿಯವರನ್ನು ಅನವಶ್ಯಕವಾಗಿ ಎಳೆತರುತ್ತಿರುವದು ಅನುಚಿತ.”

    Oh… But it’s ok if he uses the fake id of a woman, poses as an IT industry person from Hyderabad, steals the picture of a woman from shady websites and uses it with his id, and behaves like a juvenile?

    “ಕಿರಣ್ ಬಾಟ್ನಿಯವರಿಗೆ ಈ ಹುರುಳಿಲ್ಲದ ಸಂಶೋಧನೆಗಳ ಲಾಜಿಕಲ್ ಫಾಲಸಿ ಅರ್ಥವಾಗಿ, ಅಧ್ಯಯನವನ್ನೇ ಆಶಯವನ್ನಾಗಿರಿಸಿಕೊಂಡು ಮುಂದೆ ನಡೆದು ಎಷ್ಟೊ ವರ್ಷಗಳಾಗಿವೆ”

    And yet he sabotages discussions using fake ids!!

    “ನನ್ನ ಐಡೆಂಟಿಟಿಯ ವಿನಾ ವಿಷಯಕ್ಕೆ ಸಂಬಂಧಪಟ್ಟಂತೆ ಚರ್ಚೆ ಸಾಧ್ಯವಾಗುವದಿದ್ದರೆ ಬನ್ನಿ”

    You’ve been rightfully identified as a imposter, lier, and pervert. No question of debating with you anymore.

    ಉತ್ತರ
    • Anonymous
      ಸೆಪ್ಟೆಂ 14 2015

      ಸಾರ್, ಈ ಪ್ರಜ್ಞಾ ಆನಂದ್ ಮತ್ತ್ಯಾರೂ ಅಲ್ಲ ಇಲ್ಲಿ ಕೆಲವರು ಅನುಮಾನ ಪಟ್ಟ ಹಾಗೆ ಈತ ಕಿರಣ್ ಬಾಟ್ನಿಯೇ ಅಂತ ಈತನ ಅತಿಬುದ್ಧಿವಂತಿಕೆಯಿಂದ ಸ್ಪಷ್ಟವಾಗಿ ತಿಳಿದುಬರುತ್ತದೆ. ನೋಡಿ ಈತ “ಕಿರಣ್ ಬಾಟ್ನಿಯವರಿಗೆ ಈ ಹುರುಳಿಲ್ಲದ ಸಂಶೋಧನೆಗಳ ಲಾಜಿಕಲ್ ಫಾಲಸಿ ಅರ್ಥವಾಗಿ, ಅಧ್ಯಯನವನ್ನೇ ಆಶಯವನ್ನಾಗಿರಿಸಿಕೊಂಡು ಮುಂದೆ ನಡೆದು ಎಷ್ಟೊ ವರ್ಷಗಳಾಗಿವೆ” ಅಂತ ಒಂದೆಡೆ ತಾನು ಬಾಟ್ನಿ ಅಲ್ಲ ಎಂದು ನಂಬಿಸಲು ಹರಸಾಹಸ ಮಾಡುತ್ತಿದ್ದಾನೆ, ಇನ್ನೊಂದೆಡೆ “ವಿಷಯಕ್ಕೆ ಸಂಬಂಧಪಟ್ಟಂತೆ ಚರ್ಚೆ ಸಾಧ್ಯವಾಗುವದಿದ್ದರೆ ಬನ್ನಿ” ಅಂತ ಪಂಥಾಹ್ವಾನವನ್ನು ನೀಡುತ್ತಿದ್ದಾನೆ! ಒಂದು ವೇಳೆ ಈತ ಕಿರಣ್ ಬಾಟ್ನಿ ಅಲ್ಲದಿದ್ದರೆ ಕಿರಣ್ ಬಾಟ್ನಿಗೆ ಎಷ್ಟೋ ವರ್ಷಗಳ ಹಿಂದೆಯೇ ‘ಹುರುಳಿಲ್ಲದ ಸಂಶೋಧನೆ’ ಬಗ್ಗೆ ಆದ ಜ್ಞಾನೋದಯ ಈತನಿಗೇಕೆ ಇನ್ನೂ ಆಗಿಲ್ಲ? ಅಥವಾ ಜ್ನಾನೋದಯವಾಗಿದ್ದೂ ಪಂಥಾಹ್ವಾನ ನೀಡಲು ಹೊರಟಿದ್ದು ಯಾವ ಉದ್ದೇಶದಿಂದ? ಅತಿಬುದ್ಧಿವಂತನ ಹೆಡ್ಡತನ ಸಾಬೀತಾಗಿರುವುದರಿಂದ ಈತನ ಐಡೆಂಟಿಟಿ ಬಗ್ಗೆ ಯಾವ ಅನುಮಾನವೂ ಬೇಡ.

      ಉತ್ತರ
    • ಸೆಪ್ಟೆಂ 15 2015

      “You’ve been rightfully identified as a imposter, lier, and pervert”

      ಛೆ ಛೆ. ಎಂತಾ ಮಾತು. ಒಮ್ಮೆ ಬಾಲಗಂಗಾಧರ್ ಅವರನ್ನು ನೆನೆಸಿಕೊಳ್ಳಿ(ದೋಸೆ ಹಿಟ್ಟನ್ನಲ್ಲ). imposter, lier, and pervert ಇವೆಲ್ಲವೂ ಕ್ರಿಶ್ಚಿಯನ್ ಥಿಯಾಲಜಿಯಿಂದ ಬಂದಿದ್ದಲ್ಲವೇ? ಇದು ತಪ್ಪು ಎಂದು ಥಿಯಾಲಜಿಯ ಚೌಕಟ್ಟು ಮಾತ್ರ ವಿವರಿಸುತ್ತದೆ ಅಲ್ಲವೇ?. ನಮ್ಮ ಭಾರತೀಯ ಸಂಸ್ಕೃತಿಯ ಪ್ರಕಾರ imposter, lier, and pervert ಎನ್ನುವದು ಅನೈತಿಕ ಅಲ್ಲವೇ ಅಲ್ಲ ಎಂದು ತಿಳಿದಿಲ್ಲವೆ? ಮತ್ಯಾಕೆ ಬಡಬಡಿಸುತ್ತೀರಿ? ಅಥವಾ ಸಿಎಸ್ ಎಲ್ ಸಿ. ಯಲ್ಲಿ ತಾವು ‘ಹೀದನ್..’ ಅನ್ನು ಸರಿಯಾಗಿ ಓದದೆ ಕಾಪಿ ಹೊಡೆದು ಪಾಸು ಮಾಡಿದ್ದೀರೆನೊ. ನಾಗಶೆಟ್ಟಿ ಶೆಟ್ಕರ್ ಹೆಸರಿನಲ್ಲಿ ಬರೆದು ಅದನ್ನು ಬೇರ್ಯಾರದೋ ತಲೆಗೆ ಕಟ್ಟುವ ಡಬಲ್ ಗೇಮ್ ನ್ನು ನಿಲ್ಲಿಸಿ.

      ಉತ್ತರ
  7. Anonymous
    ಸೆಪ್ಟೆಂ 15 2015

    Nagashetty Shetkar = Prajna Anand = Kira* Bat*i = His **Master**’s Voice 😀

    I don’t need to tell who the **Master** is. ;-P

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments