ವಿಷಯದ ವಿವರಗಳಿಗೆ ದಾಟಿರಿ

Archive for

5
ಆಕ್ಟೋ

ಸೆಕ್ಯುಲರಿಸಂ ವರ್ಸಸ್ ಮೂಲಭೂತವಾದ…?

– ಡಾ. ಪ್ರವೀಣ್ ಟಿ. ಎಲ್, ಶಿವಮೊಗ್ಗ

ಮೂಲಭೂತವಾದಿ ಸೆಕ್ಯುಲರಿಸಂಪ್ರಜಾವಾಣಿಯ ಚರ್ಚೆಯೊಂದಕ್ಕೆ ಬರೆದ ಪ್ರತಿಕ್ರಿಯೆ. ಪ್ರತಿದಿನ ‘ಮೂಲಭೂತವಾದ, ಕೋಮುವಾದ/ಕೋಮುವಾದಿ ರಾಜಕಾರಣ ಅಪಾಯಕಾರಿ’ ಎಂದು ಊಳಿಡುವ ಲೇಖನಗಳನ್ನು ಪ್ರಕಟಿಸುವ ಪತ್ರಿಕೆಗೆ ಈ ಪ್ರತಿಕ್ರಿಯೆಯು ಅಪಥ್ಯವಾಗಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಏಕೆಂದರೆ ಪ್ರಕಟಿಸಿದರೆ ಕೆಲವರ ‘ವಿಶ್ವಾಸಾರ್ಹ’ತೆಯನ್ನು ಕಳೆದುಕೊಳ್ಳುವ ಭಯ. ಅದೇನೆ ಇರಲಿ ಸದ್ಯಕ್ಕೆ ಪತ್ರಿಕೆಯ ‘ವಿಶ್ವಾಸಾರ್ಹ’ತೆಯನ್ನು ಪ್ರಶ್ನಿಸುವುದು ಈ ಲೇಖನದ ಕಾಳಜಿ ಅಲ್ಲ.

ಹಿನ್ನೆಲೆ:
ಪ್ರೊ. ಮುಜಾಫ್ಫರ್ ಅಸ್ಸಾಧಿಯವರ “ರಾಜಕಾರಣದ ಲೆಕ್ಕಾಚಾರ ಮತ್ತು ಕಥನ” ಎಂಬ ಲೇಖನವನ್ನು ಪ್ರಜಾವಾಣಿಯಲ್ಲಿ 19-09-2015ರಂದು ಪ್ರಕಟಿಸಲಾಗಿತ್ತು. ಲೇಖನವು ವಸಾಹತುಶಾಹಿ ಪಳೆಯುಳಿಕೆಯಾದ ಜನಗಣತಿ ಮಾದರಿಯನ್ನು ನಿರ್ವಸಾಹತೀಕರಣಗೊಳಿಸುವ ಕುರಿತು ವಿಷಯ ಪ್ರಸ್ತಾಪಿಸಿದ್ದರು. ಈ ಜನಗಣತಿ ಮಾದರಿಯು ಅಲ್ಪಸಂಖ್ಯಾತ ಬಹುಸಂಖ್ಯಾತ ಎಂಬ ವರ್ಗೀಕರಣಕ್ಕೆ ನಾಂದಿಹಾಡುತ್ತದೆ. ಇದರ ಲಾಭವನ್ನು ಕೋಮುವಾದಿ ರಾಜಕಾರಣವು ತನ್ನದನ್ನಾಗಿಸಿಕೊಳ್ಳುತ್ತದೆ. ಹಾಗಾಗಿ ವಸಾಹತುಶಾಹಿ ನಿರ್ಮಿಸಿದ ಈ ಜನಗಣತಿ ಮಾದರಿಗಳನ್ನು ನಿರ್ವಸಾಹತೀಕರಣಕ್ಕೊಳಪಡಿಸಬೇಕು ಎಂಬುದನ್ನು ವಿವರಿಸಿದ್ದರು. ಡಾ. ಅಜಕ್ಕಳ ಗಿರೀಶ್ ಅಲ್ಪಸಂಖ್ಯಾತ- ಬಹುಸಂಖ್ಯಾತ ಎಂಬ ವರ್ಗೀಕರಣಗಳೂ ವಸಾಹತುಶಾಹಿಯ ಪಳೆಯುಳಿಕೆಗಳೇ ಅಲ್ಲವೇ? ಎಂಬ ಪ್ರಶ್ನೆಯನ್ನು ಎತ್ತಿದ್ದರು. ಆದರೆ ಇಬ್ಬರ ಕಾಳಜಿಯೂ ಭಾರತದಲ್ಲಿನ ಧರ್ಮಾಧಾರಿತ ಪ್ರಕ್ಷುಬ್ಧತೆಗಳನ್ನು, ಸಂಘರ್ಷಗಳನ್ನು ತೊಲಗಿಸಿ, ಅವುಗಳ ನಡುವೆ ಸೌಹಾರ್ಧತೆಯನ್ನು ತರುವುದರ ಕುರಿತೇ ಆಗಿತ್ತು. ಈ ಕಾಳಜಿಯು ಅತ್ಯಂತ ಅಭಿನಂದನಾರ್ಹ ಕೂಡ. ಹಾಗೂ ಇಂದಿನ ತುರ್ತೂ ಕೂಡ. ಏಕೆಂದರೆ ನಮ್ಮ ಸುತ್ತಮುತ್ತಲಿನ ಪರಿಸ್ಥಿತಿಗಳನ್ನು ನೋಡಿದರೆ, ‘ಧಾರ್ಮಿಕ’ ಗುಂಪುಗಳ ನಡುವಿನ ವೈರತ್ವಕ್ಕೆ ಕಾರಣವೇನು? ಯಾಕೆ ದಿನೇ ದಿನೇ ಹೆಚ್ಚಾಗುತ್ತಿದೆ? ಎಂಬುದನ್ನು ತಿಳಿಯುವ ಅನಿವಾರ್ಯತೆ ಹಾಗೂ ಅದಕ್ಕೆ ಪರಿಹಾರವನ್ನು ಸೂಚಿಸುವ ಒತ್ತಡ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಅಸ್ಸಾಧಿಯವರು ಹೇಳುವಂತೆ ನಿರ್ವಸಾಹತೀಕರಣದ ಅಗತ್ಯತೆ ಇಂದಿನ ಜರೂರು. ಅದರೆ ಅದು ಅವರು ಸೂಚಿಸುವಂತೆ ಜನಗಣತಿಯ ಮಾದರಿಯಲ್ಲಿ ಮಾತ್ರವಲ್ಲ ಬದಲಾಗಿ ಸೆಕ್ಯುಲರ್ ತತ್ವದಲ್ಲಿಯೇ ಆಗಬೇಕಿದೆ.
ಮತ್ತಷ್ಟು ಓದು »