ವಿಷಯದ ವಿವರಗಳಿಗೆ ದಾಟಿರಿ

Archive for

19
ಆಕ್ಟೋ

ಸರ್ಕಾರದ ವಶವಾಗುವುದೆಂದರೆ ಜನರಿಗೆ ಪರಕೀಯವಾಗುವುದೇ?

downloadವಿನುತಾ ಎಸ್ ಪಾಟೀಲ್, ಕುವೆಂಪು ವಿಶ್ವವಿದ್ಯಾನಿಲುಯ.

ಪ್ರಸ್ತುತ ಚರ್ಚೆಗೆ ಗ್ರಾಸವಾಗಿರುವ ವಿಷಯವೆಂದರೆ ಧರ್ಮಸ್ಥಳ ದೇವಾಲಯವನ್ನು ಮುಜರಾಯಿ ಇಲಾಖೆಗೆ ಒಪ್ಪಿಸಬೇಕೆಂಬುದು. ಈ ಹಿಂದೆಯು ಉಡುಪಿ ಕೃಷ್ಣ ದೇವಾಲಯಕ್ಕೆ ಸಂಬಂಧಿಸಿದಂತೆ ಈ ರೀತಿಯ ಚರ್ಚೆ ನಡೆದಿತ್ತು. ಆದರೆ ದೇವಾಲಯವನ್ನು ಮುಜರಾಯಿ ಇಲಾಖೆಗೆ ಒಪ್ಪಿಸುವ ಕುರಿತು ವಿರೋಧ ವ್ಯಕ್ತವಾಗುತ್ತಿದೆ. ಹೀಗೆ ವಿರೋಧಿಸುವವರು ನೀಡುವ ಕೆಲವು ಸಮರ್ಥನೆಗಳೆಂದರೆ, ಮುಜರಾಯಿ ಇಲಾಖೆ ಈಗಾಗಲೆ ವಶಪಡಿಸಿಕೊಂಡ ದೇವಸ್ಥಾನಗಳ ನಿರ್ವಹಣೆಯನ್ನು ಸರಿಯಾಗಿ ಮಾಡುತ್ತಿಲ್ಲ. ಕೇವಲ ಆ ದೇವಸ್ಥಾನದಿಂದ ಬರುವ ಹಣದ ಮೇಲೆ ಮಾತ್ರ ಇಲಾಖೆಗೆ ಆಸಕ್ತಿ ಎಂಬ ವಾದವನ್ನು ಮಾಡುತ್ತಾರೆ. ಹಾಗೆಯೇ ಸರ್ಕಾರದ ಸುರ್ಪದಿಗೆ ಒಪ್ಪಿಸಿದರೆ, ದೇವಾಯಗಳಲ್ಲಿ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬಂದಂತಹ ಆಚರಣೆಗಳು ಮಾಯವಾಗುವ ಬೀತಿಯು ಇದೆಯೆಂಬುದಾಗಿ ಹೇಳುತ್ತಾರೆ. ಉದಾ: ಶ್ರೀ ಕೃಷ್ಣ ದೇವಾಲಯವನ್ನು ಮುಜರಾಯಿ ಇಲಾಖೆಗೆ ಒಪ್ಪಿಸಬೇಕೆಂಬ ಚರ್ಚೆ ಸಂದರ್ಭದಲ್ಲಿ ಅಲ್ಲಿನ ಪುರೋಹಿತರು ಹೇಳಿದ ಮಾತೆಂದರೆ, ‘ಮುಜರಾಯಿ ಇಲಾಖೆಗೆ ಒಪ್ಪಿಸಿದರೆ ಇಲ್ಲಿ ನಡೆಯುವ ದಾಸೋಹ ನಿಂತು ಹೊಗುತ್ತದೆಯೆಂಬುದು’. ಇದೇ ರೀತಿ ಧರ್ಮಸ್ಥಳ ದೇವಾಲಯದಲ್ಲಿ ವೀರೆಂದ್ರ ಹೆಗಡೆ ಅವರ ಮೇಲುಸ್ತುವಾರಿಗೆ ಒಳಪಟ್ಟಂತಹ ಉತ್ತಮ ನಿರ್ವಹಣೆ ಇದೆ ಎಂಬ ಅಭಿಪ್ರಾಯಗಳೂ ಇವೆ.

ಚರ್ಚೆ ಸಂದರ್ಭದಲ್ಲಿ, ದೇವಾಲಯಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಲು ಹಾಗೂ ಜೀರ್ಣೋದ್ಧಾರ ಮಾಡಲು ಮುಜರಾಯಿ ಇಲಾಖೆಗೆ ಒಪ್ಪಿಸುವ ಅಗತ್ಯತೆ ಇದೆಯೆಂಬ ಅಭಿಪ್ರಾಯಗಳು ಕಂಡುಬರುತ್ತವೆ. ಹಾಗಾದರೆ ಈ ಮೊದಲು ಸರ್ಕಾರದ ಮಧ್ಯಪ್ರವೇಶ ಇಲ್ಲದಿದ್ದಾಗ ದೇವಾಲಯಗಳ ಸ್ಥಿತಿ ಹೇಗಿತ್ತು? ಮುಜರಾಯಿ ಇಲಾಖೆಗೆ ಒಪ್ಪಿಸಿದರೆ ಮಾತ್ರ ಉತ್ತಮ ನಿರ್ವಹಣೆ ಸಾಧ್ಯವೇ? ಈ ಹಿಂದೆ ಅವುಗಳ ಸ್ಥಿತಿ ಉತ್ತಮವಾಗಿರಲಿಲ್ಲವೇ? ಎಂಬಂತಹ ಕುತೂಹಲಗಳು ಮೂಡುತ್ತವೆ. ಈ ಕುತೂಹಲಕ್ಕೆ ನಮ್ಮ ಗ್ರಾಮೀಣ ಜೀವನ ಕ್ರಮ ಉತ್ತರವನ್ನು ನೀಡುತ್ತದೆ. ಹೇಗೆಂದರೆ, ಭಾರತೀಯರ ಜೀವನಕ್ರಮ ಸಹಕಾರಿತತ್ವಕ್ಕೆ ಮಾದರಿಯಾದಂತದ್ದು. ಇಲ್ಲಿನ ಜನರ ಬದುಕು ನಡೆಯುತ್ತಿದ್ದದ್ದೇ ಪರಸ್ಪರ ಸಹಕಾರ, ಹೊಂದಾಣಿಕೆಗಳ ಮೂಲಕ. ಉದಾಹರಣೆಗೆ: ಒಂದು ಗ್ರಾಮಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಗಳನ್ನು ಮಾಡಬೇಕಾದರೆ, ಅಂದರೆ ಊರಿನ ದೇವಾಲಯಗಳ ನಿರ್ವಹಣೆ, ಕೆರೆಗಳ ನಿರ್ವಹಣೆ, ರಸ್ತೆಗಳ ನಿರ್ವಹಣೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಆಯಾ ಗ್ರಾಮದ ಜನರೇ ಒಟ್ಟಾಗಿ ಸೇರಿ ಕೆಲಸ ಮಾಡುವ ಪದ್ಧತಿ ಇತ್ತು. ಇಂದು ಕೂಡ ಕೆಲವೆಡೆ ಈ ರೀತಿಯಾದ ಭಾಗವಹಿಸುವಿಕೆಯನ್ನು ನೋಡಬಹುದು. ಈ ವಿಷಯಕ್ಕೆ ಸಂಬಂಧಿಸಿದಂತೆ ಲಖನೌದಲ್ಲಿ ಬ್ರಿಟಿಷ್ ರೆಸಿಡೆಂಟ್ ಆಗಿದ್ದ ಸರ್ ವಿಲಿಯಂ ಸ್ಲೀಮನ್ ಅವರು ಹೇಳುವುದೆನೆಂದರೆ, ‘ಇಲ್ಲಿನ ಜನ ಸ್ವಯಂ ಪ್ರೇರಣೆ ಮತ್ತು ಸಹಕಾರದಿಂದ ಗ್ರಾಮಗಳಲ್ಲಿನ ಅವಶ್ಯಕತೆಗಳನ್ನು ಪುರೈಸಿಕೊಳ್ಳುತ್ತಿದ್ದಾರೆಂಬುದನ್ನು ಕೆರೆ ನಿರ್ವಹಣೆ ವಿಷಯವನ್ನಿಟ್ಟುಕೊಂಡು ವಿವರಿಸುತ್ತಾರೆ.’ ಅಂದರೆ ಸಾಮುದಾಯಿಕವಾಗಿ ಪಾಲ್ಗೊಂಡು ಕಾರ್ಯನಿರ್ವಹಣೆ ಮಾಡಿಕೊಳ್ಳುವಂತಹ ಪದ್ಧತಿ ಇತ್ತು ಎಂಬುದು ತಿಳಿಯುತ್ತದೆ. ಮತ್ತಷ್ಟು ಓದು »

19
ಆಕ್ಟೋ

ನಕ್ಷತ್ರಗಳ ಭವಿಷ್ಯಕಾರನ ಆಸಕ್ತಿ-ಅನಾಸಕ್ತಿಗಳು

– ರೋಹಿತ್ ಚಕ್ರತೀರ್ಥ

ಡಾ.ಸುಬ್ರಹ್ಮಣ್ಯನ್ ಚಂದ್ರಶೇಖರಡಾ. ಸುಬ್ರಹ್ಮಣ್ಯನ್ ಚಂದ್ರಶೇಖರ, ಭಾರತ ಕಂಡ ಅಪರೂಪದ ವಿಜ್ಞಾನಿ. ಸರ್ ಸಿ.ವಿ. ರಾಮನ್ ಅವರ ಅತ್ಯಂತ ನಿಕಟ ಸಂಬಂಧಿಯಾಗಿಯೂ ಚಂದ್ರ ಅಂತಹ ಸಂಬಂಧಗಳನ್ನು ತನ್ನ ಉತ್ಥಾನಕ್ಕೆ ಎಂದೂ ಬಳಸಿಕೊಳ್ಳಲಿಲ್ಲ. ಆದರ್ಶ ವಿಜ್ಞಾನಿ ಎನ್ನುವುದಕ್ಕೆ ಎಲ್ಲ ವಿಧದಲ್ಲೂ ಅರ್ಹನಾಗಿದ್ದ ಮೆಲುನುಡಿಯ ಕಠಿಣ ದುಡಿಮೆಯ ಅಪಾರ ಬುದ್ಧಿಮತ್ತೆಯ ಈ ನೊಬೆಲ್ ಪುರಸ್ಕೃತ ಪಂಡಿತ ಖಾಸಗಿಯಾಗಿ ಹೇಗಿದ್ದರು? ಅವರ ಬದುಕಿನ ಒಂದಷ್ಟು ಸೀಳುನೋಟಗಳು ಇಲ್ಲಿವೆ. ಅಕ್ಟೋಬರ್ 19, ಚಂದ್ರರ ಬರ್ತ್‍ಡೇ.

ಹೆಚ್ಚಾಗಿ ವಿಜ್ಞಾನಿಗಳು ಎಂದರೆ ಒಂದೇ ಲೆಕ್ಕವನ್ನು ವರ್ಷಾನುಗಟ್ಟಲೆ ಯೋಚಿಸುವ, ಒಂದು ಪ್ರಯೋಗದ ಬೆನ್ನು ಬಿದ್ದು ಹಲವಾರು ದಶಕಗಳ ಬದುಕನ್ನು ತೇಯುವ ತಪಸ್ವಿಗಳು ಎನ್ನುವ ಕಲ್ಪನೆ ಇರುತ್ತದೆ. ನಮ್ಮ ಸುತ್ತಲಿನ ಅನೇಕ ವಿಜ್ಞಾನಿಗಳು ಅದಕ್ಕೆ ಪುಷ್ಟಿ ನೀಡುತ್ತಾರೆ ಎಂದೂ ಹೇಳಬಹುದು. ವಿಜ್ಞಾನಿಗಳಿಗೆ ಅದರ ಹೊರಗೂ ಒಂದು ಬದುಕು ಇರುತ್ತದೆ, ಅವರಿಗೆ ಬೇರೆ ವಿಷಯಗಳಲ್ಲೂ ಆಸಕ್ತಿ ಇದ್ದಿರಬಹುದು ಎನ್ನುವ ಯೋಚನೆ ಬರುವಂತೆ ಅವರ ಬದುಕು ಇರುವುದಿಲ್ಲ. ಇದ್ದರೂ ಅದು ಸಾರ್ವಜನಿಕರಿಗೆ ಅಷ್ಟೊಂದು ತೆರೆದಿರುವುದಿಲ್ಲ. ಹೀಗಾಗಿ, ವಿಜ್ಞಾನಿಗಳ ಬಗ್ಗೆ ನಾವು ಸಾಮಾನ್ಯರು ಅನೇಕ ಪೂರ್ವಗ್ರಹಗಳನ್ನು ಬೆಳೆಸಿಕೊಳ್ಳುತ್ತೇವೆ. ಭಾರತದಲ್ಲಿ ಹುಟ್ಟಿಬೆಳೆದ ವಿಶ್ವಪ್ರಸಿದ್ಧ ವಿಜ್ಞಾನಿ, ನೊಬೆಲ್ ಪ್ರಶಸ್ತಿ ಪುರಸ್ಕೃತ ವಿದ್ವಾಂಸ ಸುಬ್ರಹ್ಮಣ್ಯನ್ ಚಂದ್ರಶೇಖರ ಅವರ ಬಗ್ಗೆಯೂ ಇಂತಹದೊಂದು ಕಲ್ಪನೆ ಬೆಳೆಯಲು ಎಲ್ಲ ಸಾಧ್ಯತೆಗಳೂ ಇವೆ! ಯಾಕೆಂದರೆ ಚಂದ್ರ (ಅವರನ್ನು ಉಳಿದೆಲ್ಲರೂ ಕರೆಯುತ್ತಿದ್ದದ್ದು ಹಾಗೆಯೇ. ಅವರಿಗೂ ಆ ಸಂಕ್ಷಿಪ್ತನಾಮ ಇಷ್ಟ) ತನ್ನ ವೈಯಕ್ತಿಕ ಜೀವನದ ಬಗ್ಗೆ ಹೊರಗೆ ಹೇಳಿಕೊಂಡದ್ದು ಕಡಿಮೆ. ಖಾಸಗಿ ಬದುಕಿನ ಬಗ್ಗೆ ಎಲ್ಲೂ ಹೇಳೇ ಇಲ್ಲ ಎನ್ನಬೇಕು! ಆದರೂ ಅವರ ಕೆಲ ಬರಹಗಳನ್ನು, ಕೆಲವೇ ನಿಮಿಷಗಳಿಗೆ ಮೊಟಕಾದ ಒಂದೆರಡು ಸಂದರ್ಶನಗಳನ್ನು ನೋಡಿದಾಗ, ಈ ಮನುಷ್ಯನಿಗೆ ವಿಜ್ಞಾನದ ಹೊರಗೆಯೂ ಕೆಲವೊಂದು ಆಸಕ್ತಿಗಳು ಇದ್ದವು ಎನ್ನುವುದು ತಿಳಿಯುತ್ತದೆ.

ಮತ್ತಷ್ಟು ಓದು »