ಆ ಕಾಲವೊಂದಿತ್ತು…ದೇಶಕ್ಕೆ ದೇಶವೇ ಸ್ವರ್ಗವಾಗಿತ್ತು…
– ವಿಜಯ್ ಪೈ
ಆ ಕಾಲವೊಂದಿತ್ತು..ದಿವ್ಯ ತಾನಾಗಿತ್ತು. ದೇಶಕ್ಕೆ ದೇಶವೇ ಸ್ವರ್ಗವಾಗಿತ್ತು. ಹೌದು ಎಲ್ಲವೂ ಸರಿಯಾಗಿತ್ತು ನನ್ನ ಪ್ರೀತಿಯ ಈ ಇಂಡಿಯಾದಲ್ಲಿ , ಈಗ ನಾನು ಹೇಳುತ್ತಿರುವುದು ಇತಿಹಾಸದ ಮಾತಲ್ಲ, ಇದು ಕೇವಲ ಹದಿನೆಂಟು ತಿಂಗಳ ಹಿಂದಿನ ಮಾತು.
ದೇಶದ ತುಂಬ ಕೋಮು ಸೌಹಾರ್ದ, ಅನಿರ್ಬಂಧಿತ ಅಭಿವ್ಯಕ್ತಿ ಸ್ವಾತಂತ್ರ್ಯವಿತ್ತು, ಮನಸ್ಸಿಗೆ ಬಂದದ್ದನ್ನು ಮನಸ್ಸಿಗೆ ಬಂದಲ್ಲಿ ಮಾತನಾಡಬಹುದಿತ್ತು. ಒಂದೇ ಒಂದು ಪುಸ್ತಕ, ನಾಟಕ ಅಥವಾ ಸಿನೇಮಾ ನಿಷೇಧಿಸಿದ ದಾಖಲೆಯಿರಲಿಲ್ಲ.
‘ಜಾತಿ”ಯೆಂಬ ಶಬ್ದದ ಪ್ರಸ್ತಾಪವೇ ಇರಲಿಲ್ಲ ಎಲ್ಲೂ..,”ಧರ್ಮ”ದ ಪ್ರಸ್ತಾಪವೋ ಕೇಳಲೇ ಬೇಡಿ. ಹಸಿವಿರಲ್ಲಿಲ್ಲ..ಬಡತನವಿರಲಿಲ್ಲ. ಎಲ್ಲ ರೈತರೂ ಲಕ್ಷಾಧಿ/ಕೋಟ್ಯಾಧಿಪತಿಗಳಾಗಿದ್ದರಿಂದ ಯಾವ ರೈತನೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಸರಕಾರಿ/ಸರಕಾರೇತರ ಯಾವುದೇ ಕೆಲಸಗಳಿಗೆ ರೈತರ ಒಂದಿಂಚೂ ಜಮೀನನ್ನು ಕೂಡ ಕಬಳಿಸುತ್ತಿರಲಿಲ್ಲ. ರೈತರು ಸ್ಚ ಇಚ್ಛೆಯಿಂದ ತಾವಾಗಿಯೇ ದಾನ ಕೊಡುತ್ತಿದ್ದರು ಮತ್ತು ಸರಕಾರಕ್ಕೆ ಬೇಸರವಾಗಬಾರದೆಂದು ಕೊಟ್ಟ ಜಮೀನಿಗೆ ಒಂದಷ್ಟು ಗೌರವಧನ ತೆಗೆದುಕೊಳ್ಳುತ್ತಿದ್ದರು. ಬಂಡವಾಳಶಾಹಿ ಕಾರ್ಪೊರೇಟ್ ಗಳು ನನ್ನ ಇಂಡಿಯಾದ ರೈತನ ಮುಂದೆ ಹೆದರಿ ಡೊಗ್ಗಾಲು ಊರಿ ಕೂರುತ್ತಿದ್ದವು.
ಎಂತಹ ಅಧ್ಭುತ ದೇಶವಾಗಿತ್ತು ನನ್ನದು..ಇಲ್ಲಿ ಯಾರು ಎಷ್ಟು ಬೇಕಾದಷ್ಟೂ , ಎಲ್ಲೆಂದರಲ್ಲಿ ಗೋ ಮಾಂಸ ಭಕ್ಷಿಸಬಹುದಿತ್ತು. ಗೋ ಹತ್ಯಾ ನಿಷೇಧ ಯಾವ ರಾಜ್ಯದಲ್ಲಿಯೂ ಇರಲಿಲ್ಲ. ಭ್ರಷ್ಟಾಚಾರ, ಅತ್ಯಾಚಾರ, ಕೊಲೆ ಈ ಶಬ್ದಗಳನ್ನು ಕೇಳುವುದೇ ಅಪರೂಪದಲ್ಲಿ ಅಪರೂಪವಾಗಿತ್ತು.
ಮತ್ತಷ್ಟು ಓದು