ವಿಷಯದ ವಿವರಗಳಿಗೆ ದಾಟಿರಿ

Archive for

7
ಆಕ್ಟೋ

ಪ್ರಗತಿಪರರ ಸಮರ್ಥನೆಯಲ್ಲಡಗಿರುವ ಮೂಢನಂಬಿಕೆಯ ಮೂಲ ಹಿಡಿದು

ಡಾ. ಸಂತೋಷ್ ಕುಮಾರ್ ಪಿ.ಕೆ

black-cat-300x121ಕನ್ನಡದ ಒಂದು ಪತ್ರಿಕೆಯಲ್ಲಿ ದಿನಾಂಕ 5 ಅಕ್ಬೋಬರ್ 2015 ರಂದು ಸಮ್ವರ್ಥ ಸಾಹಿಲ್ ರವರು ಭಗವಾನರ ಹೇಳಿಕೆಯನ್ನು ಸಮರ್ಥಿಸಿಕೊಂಡು ಇಂದಿಷ್ಟು ವಿಚಾರಗಳನ್ನು ಹೊರಗೆಡಹಿದ್ದಾರೆ. ಅವರ ವಾದವನ್ನು ಸಾರಾಂಶೀಕರಿಸುವುದಾದರೆ, ಭಗವಾನ್ ರವರು ‘ರಾಮ ಅಪ್ಪನಿಗೆ ಹುಟ್ಟಿದವನಲ್ಲ’ ಎಂಬ ಹೇಳಿಕೆಗೆ ಜನರು ಆಕ್ರೋಶ ವ್ಯಕ್ತಪಡಿಸಿರುವುದಕ್ಕೆ ಹೊಸದೊಂದು ಕಾರಣವನ್ನು ಹುಡುಕಿದ್ದಾರೆ. ಭಗವಾನ್ ರವರ ಹೇಳಿಕೆಯಿಂದ ಜನರಿಗೆ ಧಾರ್ಮಿಕ ಭಾವನೆಗೆ ಧಕ್ಕೆಯಾಗಿಲ್ಲ, ಬದಲಿಗೆ ಸಮಾಜದಲ್ಲಿ ಅಡಗಿರುವ ಪುರುಷ ಪ್ರಾಬಲ್ಯಕ್ಕೆ ಧಕ್ಕೆ ಬಂದಂತಾಗಿ ಜನರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ ಎನ್ನುವುದೇ ಅವರ ಹೊಸ ಹುಡುಕಾಟವಾಗಿದೆ. ಸಮ್ವರ್ಥರ ಸಮರ್ಥನೆಯನ್ನು ಸ್ವಲ್ಪ ಪರಿಶೀಲಿಸುವ ಅಗತ್ಯವಿದೆ ಎನ್ನುವುದು ನನ್ನ ಅಭಿಪ್ರಾಯ.

ಮೊದಲಿಗೆ ಸಾಹಿಲ್ ರ ಸಮರ್ಥನೆಯಾಗಲಿ ಅಥವಾ ಅವರು ನಗಣ್ಯ ಮಾಡುವ ಸಂಗತಿಯಾಗಲಿ ಎರಡೂ ವಾಸ್ತವವಲ್ಲ. ಅಂದರೆ ಪುರುಷ ಅಹಂಕಾರಕ್ಕೆ ಧಕ್ಕೆಯಾಗಿ ಜನರು ಆಕ್ರೋಶ ವ್ಯಕ್ತಪಡಿಸಿಲ್ಲ ಹಾಗೂ ಜನರ ಧಾರ್ಮಿಕ ಭಾವನೆ ಧಕ್ಕೆಯಾಗಿರಬಹುದು ಎಂಬುದು ಸತ್ಯವಲ್ಲ. ಇಲ್ಲಿ ನಾವು ಎರಡು ಅಂಶಗಳನ್ನು ಅರ್ಥಮಾಡಿಕೊಳ್ಳಬೇಕಾಗಿದೆ, ಅವುಗಳೆಂದರೆ ಒಂದು ಇವೆರಡೂ ಕಾರಣಗಳು ಸತ್ಯವಾಗಿರದಿದ್ದರೆ ಮತ್ತೇಕೆ ಜನರು ಆಕ್ರೋಶವನ್ನು ವ್ಯಕ್ತಪಡಿಸುವ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ, ಹಾಗೂ ಕೆಲವು ಸೋ ಕಾಲ್ಡ್ ವಿದ್ವಾಂಸರುಗಳು ಇಂತಹ ತಲೆಮಾಸಿದ ಸಮರ್ಥನೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ? ಈ ಎರಡೂ ಅಂಶಗಳನ್ನು ಅರ್ಥಮಾಡಿಕೊಂಡರೆ ಜನರ ವಿರೋಧಕ್ಕೆ ಕಾರಣಗಳು ಹಾಗೂ ಪ್ರಗತಿಪರರ ಹಿಪೋಕ್ರಸಿಯನ್ನು ಅರರ್ಥೈಸಿಕೊಳ್ಳಲು ಸಾಧ್ಯವಾಗಬಹುದು. ಮತ್ತಷ್ಟು ಓದು »

7
ಆಕ್ಟೋ

ಸಣ್ಣಕತೆಗಳ ಕೊರತೆಯ ನಡುವೆ ನೆನಪಾದವನು ಹೆಮ್ಮಿ೦ಗ್ವೆ…!!

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಅರ್ನೆಸ್ಟ್ ಹೆಮ್ಮಿಂಗ್ವೆನಾವಿನ್ನೂ ಹಾಸಿಗೆಯಲ್ಲಿರುವಾಗಲೇ ಅವನು ನಮ್ಮ ಕೋಣೆಗೆ ಬ೦ದು ಕಿಟಕಿ ಮುಚ್ಚಲು ಪ್ರಯತ್ನಿಸುತ್ತಿದ್ದ.ಅದೇಕೋ ಸುಸ್ತಾದವರ೦ತೆ ಕಾಣುತ್ತಿದ್ದ ಆತ ಕೊ೦ಚ ಬಿಳಚಿಕೊ೦ಡಿದ್ದ. ನಡೆಯುವಾಗಲೂ ತು೦ಬ ನೋವಿನಲ್ಲಿದ್ದ೦ತೆ ಗೋಚರಿಸುತ್ತಿದ್ದ ಆತನ ಮೈಯಲ್ಲಿ ಸಣ್ಣ ನಡುಕವೂ ಕ೦ಡು ಬರುತ್ತಿತ್ತು.’ಏನಾಯ್ತು ಸ್ಕಾಟ್ಸ್’ ಎ೦ಬ ಪ್ರಶ್ನೆಗೆ ’ಸಣ್ಣ ತಲೆನೋವು’ಎನ್ನುವ ಚುಟುಕು ಉತ್ತರ ಅವನದು.’ಬರೀ ತಲೆ ನೋವಲ್ಲ ಮಗನೇ,ನೀನು ಹೋಗಿ ಮಲಗಿಕೊ,ನಿನಗೆ ಹುಶಾರಿಲ್ಲದ೦ತೆ ಕಾಣುತ್ತಿದೆ’ ಎ೦ದರೆ,’ಇಲ್ಲ ಅಪ್ಪ ನನಗೇನೂ ಆಗಿಲ್ಲ’ಎನ್ನುವ ಜವಾಬು.’ಊಹು೦ ಮೊದಲು ಹೋಗಿ ಮಲಗಿಕೊ,ನಾನು ಆಫೀಸಿಗೆ ತೆರಳುವಾಗ ಬ೦ದು ನಿನ್ನನ್ನು ಕಾಣುತ್ತೇನೆ’ ಎ೦ದಾಗ ಮರುಮಾತಿಲ್ಲದೆ ಹೊರನಡೆದ ಸ್ಕಾಟ್ಸ್.ಆದರೆ ನಾನ೦ದುಕೊ೦ಡ೦ತೆ ಆತ ತೆರಳಿದ್ದು ಪುನ: ಮಲಗಿಕೊಳ್ಳಲಿಕ್ಕಲ್ಲ ಎ೦ದು ನನಗೆ ತಿಳಿದಿದ್ದು ನಾನು ತಯ್ಯಾರಾಗಿ ಪಡಸಾಲೆಗೆ ಬ೦ದಾಗಲೇ.ಪೂರ್ತಿ ಸುಸ್ತಾದವರ೦ತೆ ಕಾಣುತ್ತಿದ್ದರೂ ಆತ ಶಾಲೆಗೆ ತೆರಳಲು ಸಿದ್ಧವಾಗಿ ಕುಳಿತಿದ್ದ.ನಾನು ಆತನ ಹಣೆಯ ಮೇಲೆ ಕೈಯಿಟ್ಟು ನೋಡಿದೆ.ಆತನಿಗೆ ಜ್ವರವಿರುವುದು ನನಗೆ ತಿಳಿಯಿತು.ಭಯಬಿದ್ದಾನೆ೦ಬ ಕಾರಣಕ್ಕೆ ಜ್ವರದ ಬಗ್ಗೆ ಅವನಿಗೆ ತಿಳಿಸದೆ ’ಹೋಗಿ ಮಲಗಿಕೊ’ ಎ೦ದು ಸೌಮ್ಯವಾಗಿ ಗದರಿಸಿ ,ಸ್ಕಾಟ್ಸ್ ನನ್ನು ಅವನ ಕೋಣೆಗೆ ಕಳುಹಿಸಿ ವೈದ್ಯರನ್ನು ಬರಹೇಳಿದೆ.

ಮತ್ತಷ್ಟು ಓದು »