ವಿಷಯದ ವಿವರಗಳಿಗೆ ದಾಟಿರಿ

ಜೂನ್ 15, 2011

6

ಪಕ್ಯ…!

‍ನಿಲುಮೆ ಮೂಲಕ

– ಹರೀಶ್ ಶೆಟ್ಟಿ, ಶಿರ್ವ

ಪಕ್ಯ…ಪಕ್ಯ ನನ್ನ ಬಿಲ್ಡಿಂಗ್ನಲ್ಲಿ ಗ್ರೌಂಡ್ ಫ್ಲೂರ್ ನಲ್ಲಿ ಇರುತಿದ್ದ. ಅವನ ತಂದೆ ದೊಡ್ಡ ಕುಡುಕ ಹಾಗು ಪ್ರಯೋಜನ ಇಲ್ಲದವ, ಪಕ್ಯನ ತಾಯಿ ಅಲ್ಲಿ ಇಲ್ಲಿ ದುಡಿದು ಹೇಗಾದರೂ ಜೀವನ ಸಾಗಿಸುತಿದ್ದರು. ಪಕ್ಯ ನನ್ನಿಂದ ಎರಡು ಮೂರೂ ವರುಷ ದೊಡ್ಡವ. ಪಕ್ಯ ಚಿಕ್ಕಂದಿನಿಂದಲೂ ಮಂದ ಬುದ್ದಿ (Special Abnormal child), ಜೀವ ದೊಡ್ಡದಾದರೂ ಅವನ ಬುದ್ದಿ ಬೆಳವಣಿಗೆ ಆಗಲಿಲ್ಲ, ಪಕ್ಯನಿಗೆ ಇಬ್ಬರು ತಂಗಿಯರಿದ್ದರು . ೧೨ ವರುಷ ದಲ್ಲಿಯೇ ಪಕ್ಯನ ಜೀವ ೬ ಫೀಟ್ ಉದ್ದ ಆಗಿತ್ತು, ಆದರೆ ಅವನ ಬುದ್ದಿ ಚಿಕ್ಕ ಮಕ್ಕಳ ಹಾಗೆ. ಪಕ್ಯ ಇಡಿ ದಿನ ಅಲ್ಲಿಂದ ಇಲ್ಲಿ ಇಲ್ಲಿಂದ ಅಲ್ಲಿ ತಿರುಗುತ ಇರುತ್ತಿದ, ಅವನ ತಾಯಿ ಹೊಟ್ಟೆ ಪಾಡಿಗಾಗಿ ದುಡಿಯಲ್ಲಿಕೆ ಹೋಗುತತ್ತಿದ್ದಳು, ಅವನ ತಂದೆಗೆ ಕುಡಿಯುದರಲ್ಲಿ ಪುರ್ಸ್ಹೊತ್ತು ಇರುತ್ತಿರಲಿಲ್ಲ .
ಎಲ್ಲ ಮಕ್ಕಳು ಪಕ್ಯನಿಗೆ ತುಂಬಾ ತೊಂದರೆ ಕೊಡುತ್ತಿದ್ದರು ಹಾಗು “ಹೇವೇಡ(ಮೆಂಟಲ್) ಹೇಯ್ ವೇಡ” ಚಡಾಯಿಸುತತ್ತಿದ್ದರು.. ಪಕ್ಯ ಆ ಮಕ್ಕಳಿಗೆ ಏನು ಮಾಡ್ತಿರಲಿಲ್ಲ, ಯಾಕೆಂದರೆ ಅವರು ಏನು ಹೇಳುತಾರೆ ಅವನಿಗೆ ತಿಲಿಯುತತ್ತಿರಲಿಲ್ಲ. ಕೆಲವು ಮಕ್ಕಳು ಅವನಿಗೆ ಕಲ್ಲಿನಿಂದ ಹೊಡೆಯುದು ಸಹ ಇದ್ದರು, ಇದರಿಂದ ಪಕ್ಯ ಕೋಪ ಗೊಳಗಾಗಿ ಅವರ ಇಂದೇ ಕಲ್ಲು ಇಡಿದು ಹೋಗುತಿದ್ದ. ನನಗೆ ಯಾವಾಗಲು ಪಕ್ಯನ ಮೇಲೆ ತುಂಬಾ ದಯಾ ಬರುತಿತ್ತು , ನಾನು ನನ್ನ ಅಮ್ಮನಿಗೆ ಕೆಳುತಿದ್ದೆ “ಅಮ್ಮ ಆಯಗ್ ಯಿನಾ ಆತ್oಡ್” ..ಅಮ್ಮ ನನಗೆ ಸಮಾಧಾನಿಸುತಿದ್ದರು ” ಆಯೇ ದೆವೆರೆನ ಸ್ಪೆಷಲ್ ಮಗೆ, ಅಇಕ್ ಆಯೇ ಅಂಚ” , ನಾ ಕೇಳುತ್ತಿದ್ದೆ “ಅಂಚಂಡ ಜೋಕುಲು ಆಯಾಗ್ ಪೆಟ್ಟು ದ್ಯಾಗ್ ಪಾಡನು” , ಅಮ್ಮ ನನಗೆ ಹೇಳುತಿದ್ದರು ” ಅವ್ವು ಬುದ್ದಿದಾಂತಿನ ಜೋಕುಲು , ಈ ಮಿನಿ ಅಂಚ ಮಲ್ಪೋಡಚಿ ಆವಾ”(ಅವರು ಬುದ್ದಿ ಇಲ್ಲದ ಮಕ್ಕಳು ನೀನು ಹಾಗೆ ಮಾಡ ಬೇಡ ).ಪಂಕಜ್ ಪಕ್ಯನಿಗೆ ಸತ್ಹಾಯಿಸುತಿದ್ದ ಹುಡುಗರ ಮುಕ್ಯಸ್ತ , ಅವನಿಗೆ ಪಕ್ಯ ನಿಗೆ ಏನಾದರೂ ತಂಟೆ ಮಾಡುವ ಹವ್ಯಾಸ ಆಗಿತ್ತು. ಒಂದು ದಿವಸ ನಾನು ಶಾಲೆಯಿಂದ ಬರುವಾಗ , ನನ್ನ ಬಿಲ್ಡಿಂಗ್ನಾ ಕೆಳಗೆ ತುಂಬಾ ಜನ ಸೇರಿದ್ದರು, ಪಂಕಜ್ ನಾ ತಲೆಯಿಂದ ರಕ್ತ ಸುರಿಯುತಿತ್ಹು. ನಾನು ಕುತೂಹಲ ದಿಂದ ಒಬ್ಬನನ್ನು ಕೇಳಿದೆ “ಕಾಯ್ ಝಾಲ (ಏನಾಯಿತು ) ” ಅವನು ಹೇಳಿದ ” ಕಾಯ್ ನಾಹಿರೇ, ಥೋ ವೇಡ ಆಯನ ಪಕ್ಯ , ತ್ಯಾನಿ ಯಾಲ ದಗಡ ಫೆಕುನ್ ಮಾರಲ” (ಯೆನ್ನಿಲ್ಲ ಮಾರಾಯ , ಅವ ಮೆಂಟಲ್ ಪಕ್ಯ ಇದ್ದನಲ್ಲ ಅವನು ಇವನಿಗೆ ಕಲ್ಲಿನಿಂದ ಹೊಡೆದ) .
 ನನಗೆ ಗೊತ್ತಿಲ್ಲ , ಯಾಕೆ ನನಗೆ ಪಂಕಜ್ ನಾ ಮೇಲೆ ಸ್ವಲ್ಪವು ಕರುಣೆ ಬರಲಿಲ್ಲ ,ಯಾಕೆಂದರೆ ನನಗೆ ಗೊತ್ತಿತ್ತು ಪಂಕಜ್ ಯಾವಾಗಲು ಪಕ್ಯ ನಿಗೆ ತೊಂದರೆ ಕೊಡುತಿದ್ದ್ದ.
ಪಕ್ಯ ನಾ ತಾಯಿಗೆ ಕರೆಯಿಸಲಾಯಿತು , ಪಕ್ಯನ ತಾಯಿ ಬಂದ ಕೂಡಲೇ ಎಲ್ಲರೂ ಪಕ್ಯನ ತಾಯಿಗೆ ಅದು ಇದು ಹೇಳಲು ಸುರು ಮಾಡಿದ್ರು “ಅವನಿಗೆ ಮೆಂಟಲ್ ಆಸ್ಪತ್ರೆಗೆ ಕಳಿಸಿ , ಯಾಕೆ ಮೇಯಲ್ಲಿ ಇಟ್ಟಿದ್ರಿ “. ಪಕ್ಯನಾ ತಾಯಿ….ಪಾಪ ….ದುಃಖದಿಂದ ಪಕ್ಯನಿಗೆ ಸರಿ ಹೊಡೆದರು, ಹೊಡೆದ ನಂತರ ಕೂಗಲಿಕ್ಕೆ ಸುರು ಮಾಡಿದ್ರು ….ಪಾಪ….ತಾಯಿ ಹೃದಯಕ್ಕೆ ಗೊತ್ಹಿತು ಅವನ ಏನೂ ತಪ್ಪಿಲ್ಲ ಅಂತ. ಪಕ್ಯ ಪೆಟ್ಟು ತಿಂದ ನಂತರ ತಾಯಿಯ ಬಳಿಗೆ ಬಂದು ಅವಳ ಕಣ್ಣಿರು ಒರಸಿ ” ಆಯೇ …..ಮಲ ಕಾಯಿ ಕಾಯಲಾ ದೇ ನಾ ” (ಅಮ್ಮ….ನನಗೆ ಏನೂ ತಿನ್ಲಿಕ್ಕೆ ಕೊಡಲ್ಲ) . ಪಾಪ …ತಾಯಿ ಅವ್ವನನ್ನೇ ನೋಡುತಾ ಪುನಃ ಕೂಗುಲಿಕ್ಕೆ ಸುರು ಮಾಡಿದ್ರು, ಬಡ ತಾಯಿಯಲ್ಲಿ ಅವನಿಗೆ ಡಾಕ್ಟರ ನಲ್ಲಿ ತೋರಿಸಲಿಕ್ಕೆ ಹಣವು ಇರಲಿಲ್ಲ ಹಾಗು ಮೆಂಟಲ್ ಆಸ್ಪತ್ರೆ ಸೇರಿಸಲಿಕ್ಕೆ ಅವಳ ತಾಯಿ ಮನಸ್ಸು ಒಪ್ಪುತಿರಲಿಲ್ಲ. ಅವರನ್ನು ನೋಡಿ ನನ್ನ ಮನ್ನಸ್ಸು “ಆಯ್ಯೋ ” ಅಂತ ಹೇಳಿತು, ಆದರೆ ನನ್ನ ಚಿಕ್ಕ ವಯಸ್ಸು ಅವರ ಸಹಾಯ ಮಾಡುವಂತಿರಲಿಲ್ಲ.

ಹಾಗೆಯೆ ದಿನ ಉರುಳಿದಂತೆ ಪಕ್ಯನ ತಾಯಿ ಹೇಗೆಯೋ ಅವನಿಗೆ ಡಾಕ್ಟರ ನಿಗೆ ತೋರಿಸಿದರು ,ಆದರೆ ಕೆಲವು ಕರ್ಚಾದರೂ ಏನೂ ಉಪಯೋಗ ಆಗಲಿಲ್ಲ. ಇದ್ದನ್ನು ನೋಡಿ ಪಕ್ಯನಾ ತಾಯಿ ಅವನ ಟ್ರೀಟ್ ಮೆಂಟ್ ನಿಲ್ಲಿಸಿ ಅವನಿಗೆ ತನ್ನ ಒಟ್ಟಿಗೆ ತನ್ನ ಡಬ್ಬ ಡೆಲಿವರಿ ಕೆಲಸಕ್ಕೆ ಸೇರಿಸಿದಳು. ನನಗೆ ಗೊತ್ತಿಲ್ಲ ಹೇಗೆ….ಪಕ್ಯನ ತಾಯಿಯ ಈ trick ವರ್ಕ್ ಆಯಿತು, ಪಕ್ಯ ಡಬ್ಬ ದೆಲಿವೆರ್ ಮಾಡ್ಲಿಕ್ಕೆ ಸುರು ಮಾಡಿದ. ಅವನು ತುಂಬಾ ಕಾಳಜಿಯಿಂದ ಆಫೀಸೆಗೆಲ್ಲ ಡಬ್ಬ perfectly ದೆಲಿವೆರ್ ಮಾಡುತಿದ್ದ. ಇದ್ದನ್ನು ನೋಡಿ ನನಗೆ ತುಂಬಾ ಅನಂದವಾಗುತಿತ್ತು, ಈಗ ಪಕ್ಯ ನಮ್ಮೊತಿಗೆ ಸ್ವಲ್ಪ ಸ್ವಲ್ಪ ಮಾತಾಡಲು ಸುರು ಮಾಡಿದ. ಅವನ ಬುದ್ದಿ ಮಕ್ಕಳ ಹಾಗೆ ಇದ್ದರು, ಮೊದಲಿನಿಂದ ತುಂಬಾ ಸುಧಾರಣೆ ಇತ್ತು.

ಸ್ವಲ್ಪ ವರುಷ ನಂತರ ನಾವು ಅಲ್ಲಿಂದ ಬೇರೆ ಸಿಟಿ ಗೆ ಶಿಫ್ಟ್ ಆದೆವು, ಆದರೆ ಪಕ್ಯ ನನ್ನ ನೆನಪಿನಲ್ಲಿ ಸದೈವ ಬಾಳುತಿದ್ದ .

*************
ಚಿತ್ರಕೃಪೆ:  stockphotos.it

6 ಟಿಪ್ಪಣಿಗಳು Post a comment
  1. ಜೂನ್ 15 2011

    nice story………….

    ಉತ್ತರ
  2. Harish Shetty , Shirva
    ಜೂನ್ 15 2011
  3. praj
    ಜೂನ್ 15 2011

    good one

    ಉತ್ತರ
  4. Narendra Shetty
    ಜೂನ್ 16 2011

    Shettre, very nice story, also translate your other stories to Kannada and publish.

    ಉತ್ತರ
  5. Harish Shetty , Shirva
    ಜೂನ್ 16 2011

    Thanks a lot Naren…

    ಉತ್ತರ
  6. Harish Shetty , Shirva
    ಜೂನ್ 16 2011

    Thanks Praj

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments