ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 2, 2011

3

ಹಾರೋಬೂದಿಯ ವಿರುದ್ಧ ಅಖಾಡಕ್ಕಿಳಿದ ಪೇಜಾವರ ಶ್ರೀ ಮತ್ತು ಸಂಘಟನೆಗಳು

‍Jagannath Shirlal ಮೂಲಕ

ಪವನ್ ಎಂ ಟಿ

ಎಂಥ ದೊಡ್ಡ ದೊಡ್ಡರೆಲ್ಲ ಬಂದ್ರು, ವೀಡಿಯೋ ಮಾಡಿದ್ರು, ಪತ್ರಿಕೆಯವ್ರು ಬಂದ್ರು ಏನೆಲ್ಲ ಬರೆದ್ರೂ, ಬೂದಿ ಪರೀಕ್ಷೆ ಮಾಡ್ತೀವಿ ಅಂತ ಬಂದ್ರು, ಬೇಕಾದ್ದು ರಿಪೋರ್ಟ್ ಕೊಟ್ರು ಆದ್ರು ಯಾರಿಂದಲೂ ಏನೂ ಮಾಡೋಕೆ ಆಗ್ಲಿಲ್ಲ. ಇನ್ನು ನೀವ್ ವಿಡೀಯೋ ಮಾಡಿ ಏನ್ ಬರೆದ್ರೂ ನಮಗೇನಿಲ್ಲ. ಇದು ಸರ್ಕಾರದ್ದೇ ಪ್ರೋಜೆಕ್ಟ್, ಸರಕಾರದ್ದೇ ಕಂಪೆನಿ. ಏ ಇವರ ಇವರ ಕಾರಿಗೆ ಅಡ್ಡ ನಿಲ್ಲಿಸ್ರೋ. ಕ್ಯಾಮೆರಾ ಕಿತ್ತುಕೊಳ್ಳೋ….”

ಎಂದು ಇತ್ತಿಚೆಗೆ ಉಡುಪಿಯ ಪ್ರತಿಷ್ಠಿತ ಕಂಪೆನಿಯ ಗುತ್ತಿಗೆದಾರನೊಬ್ಬ ಹಾರೋಬೂದಿ ಇರುವ ಸ್ಥಳಕ್ಕೆ ಹೋದ್ರೆ ಈ ರೀತಿ ಧಮ್ಕಿ ಹಾಕುತ್ತಾನೆ. ಇಷ್ಟೆಲ್ಲ ಧೈರ್ಯದಿಂದ ಈ ಗುತ್ತಿಗೆದಾರ ಮಾತಾಡ್ತಾ ಇರಬೇಕಾದ್ರೆ ಅವನ ಹಿಂದೆ ಪ್ರಬಲವಾದ ಕಾಣದ ಕೈ ಇರಬಹುದು ನೀವೆ ಯೋಚಿಸಿ. ಇಂಥ ಎಷ್ಟೋ ಜನರ ಉಪಟಳವನ್ನು ನಮ್ಮ ಜನ ಎಷ್ಟು ದಿನ ಅಂತ ಸಹಿತಾರೇ? ಅದಕ್ಕೆ ನೋಡಿ ಈ ಪ್ರತಿಷ್ಠಿತ ಕಂಪೆನಿ ಮತ್ತು ಅಹಂಕಾರಿಗಳ ವಿರುದ್ಧ ನೊಂದ ಜನತೆ ಚಳುವಳಿಗೆ ಇಳಿದಿದ್ದಾರೆ.

ಯುಸಿಪಿಎಲ್ ವಿರುದ್ಧ ಜನಾಂದೋಲನ”

“ಪೇಜಾವರ ಶ್ರೀ ಹಾರೋಬೂದಿಯಿಂದ ತೊಂದರೆಗೊಳಗಾದವರ ನಿವಾಸಗಳಿಗೆ ಭೇಟಿ, ನಾಗಾರ್ಜುನ ಆಧುನಿಕ ಭಸ್ಮಾಸುರ ಈ ಯೋಜನೆಯ ವಿರುದ್ಧ ಯಾರೇ ಹೋರಾಟ ಮಾಡಿದರೂ ನನ್ನ ಸಂಪೂರ್ಣ ಬೆಂಬಲ ಇದೆ”

ಹಾರೂಬೂದಿ ಅತ್ಯಂತ ವಿಷಕಾರಕ ಅಂಶ ಹೊಂದಿದ್ದು ಪರಿಸರ ಜಾನುವಾರು ಹಾಗೂ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿದೆ- ಪರಿಸರವಾದಿ ಡಾ.ಎನ್.ಎ. ಮಧ್ಯಸ್ಥ ಆತಂಕ”

“ ಕಂಪೆನಿಯನ್ನು ಸ್ಥಗಿತಗೊಳಿಸಲು ಮಾರ್ಚ್ ೫ ರಂದು ದಕ್ಷಿಣಕನ್ನಡ ಉಡುಪಿ ಬಂದ್ ನಡೆಸಲು ನಿರ್ಧಾra

ಇವೆಲ್ಲ ಇತ್ತೀಚೆಗೆ ಪ್ರಜಾವಾಣಿಯಲ್ಲಿ ಮೂಡಿಬಂದ ಸುದ್ದಿಗಳು

ನಿಲುಮೆಯ ಪ್ರಿಯ ಓದುಗರೇ, ಕಳೆದ ಕೆಲವು ದಿನಗಳ ಹಿಂದೆ ನಂದಿಕೂರಿನ ಪ್ರತಿಷ್ಠಿತ ಕಂಪೆನಿಯ ಕುರಿತಂತೆ ಹಾರೋಬೂದಿಯ ನೋಡಿದಿರಾ ಎಂಬ ಲೇಖನ ಪ್ರಕಟವಾಗಿತ್ತು. ಅದರಲ್ಲಿ ಬೂದಿಯಿಂದ್ ಆಗುತ್ತಿರುವ ತೊಂದರೆಯ ಬಗ್ಗೆ ಮತ್ತು ಜನರ ಬಗ್ಗೆ ಹೇಳಲಾಗಿತ್ತು. ಈ ಸಮಸ್ಯೆಯನ್ನು ಬಗೆಹರಿಸಲು ಸಂಘಟನೆ ಮತ್ತು ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಅದರ ಮುಂದುವರಿಕೆಯೆಂಬಂತೆ ಈ ಸಮಸ್ಯೆಯ ವಿರುದ್ಧ ಜನಾಂದೋಲನ ಆರಂಭವಾಗಿದೆ.

ಪೇಜಾವರಶ್ರೀಗಳು ಸೇರಿದಂತೆ ಅನೇಕ ಪ್ರಮುಖರು ಈ ಅಂದೋಲನದಲ್ಲಿ ಪಾಲ್ಗೊಂಡಿದ್ದಾರೆ. ಈ ಆಂದೋಲನ ಪ್ರಾರಂಭವಾಗಿ ನಂದಿಕೂರಿನ ಸುತ್ತಮುತ್ತಲ ಪ್ರದೇಶಗಳಾದ ಎರ್ಮಾಳು, ಕಟ್ಪಾಡಿ, ಉದ್ಯಾವರ ಸೇರಿದಂತೆ ಸುಮಾರು ೫೦ ಕಡ್‌ಗಳಲ್ಲಿ ಪಾದಯಾತ್ರೆ ನಡೆಸಿ ಜನಜಾಗೃತಿ ಮೂಡಿಸಲಾಗಿದೆ. ಅಲ್ಲದೇ ಇದೇ ಮಾರ್ಚ್ ೫ ರಂದು ದಕ್ಷಿಣಕನ್ನಡ ಉಡುಪಿ ಜಿಲ್ಲಾ ಬಂದ್ ಗೆ ಕರೆ ನೀಡಲಾಗಿದೆ. ಈ ಜನಾಂದೋಲನದಲ್ಲಿ ಪಾದಯಾತ್ರೆಯ ಮೂಲಕ ಕಂಪೆನಿಯ ಯೋಜನೆಯ ಅಪಾಯವೆನ್ನು ಬಿಂಬಿಸುವ ಟ್ಯಾಬ್ಲೋ ಹಾಗೂ ಧ್ವನಿಮುದ್ರಿತ ಯಕ್ಷಗಾನ ಪ್ರಸಂಗ, ಕಂಪೆನಿ ವಿರೋಧಿ ಘೋಷಣೆಗಳು, ಭಿತ್ತಿಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸಲಾಗಿದೆ. ದಕ್ಷೀಣಕನ್ನಡ ಜಿಲ್ಲಾ ಬಂದ್‌ಗೆ ಜಿಲ್ಲೆಗಳ ಪ್ರಮುಖ ಸಂಘಟನೆಗಳಾದ ಮೀನುಗಾರರ ಸಂಘ, ಉಡುಪಿ ತಾಲೂಕು ಗ್ರಾಮ ಪಂಚಾಯಿತಿ ಒಕ್ಕೂಟ, ವಿಜಯಕುಮಾರ ಹೆಗ್ಡೆ ನೇತೃತ್ವದ ರೈತಸಂಘ, ಉದ್ಯಾವರ ಗ್ರಾಮ ಸಂರಕ್ಷಣಾ ಸಮಿತಿ ಮೊದಲಾದ ಸಂಘಟನೆಗಳು ಬೆಂಬಲ್ ಸೂಚಿಸಿವೆ.

ಇದೆಲ್ಲ ಬೆಳವಣಿಗೆಗಳನ್ನು ನೋಡಿದಾಗ ನೊಂದ ಜನರಿಗೆ ನ್ಯಾಯ ದೊರೆಯಬಹುದೆಂಬ ಆಶಾಕಿರಣ ಮೂಡುತ್ತಿದೆ. ಈಗ ಹೋರಾಟ ಮುಂದಾಗಿರುವ ಸಂಘಟನೆಗಳು ಯಾವುದೇ ಒತ್ತಡಕ್ಕೆ ಮಣಿಯದೇ ಜನಪರವಾದ ಹೋರಾಟ ಮಾಡಿ ಮುಂದೆ ಬರಬಹುದಾದ ದೊಡ್ಡ ಗಂಡಾಂತರವನ್ನು ತಪ್ಪಿಸಬೇಕಾಗಿದೆ. ಇದಲ್ಲದೇ ಈ ಹೋರಾಟಕ್ಕೆ ಸ್ಥಳೀಯ ಜನರ ಬೆಂಬಲವೂ ಅತ್ಯಗತ್ಯ.

ಚಿತ್ರ ಕೃಪೆ: deccanherald.com, thecanaratimes.com

3 ಟಿಪ್ಪಣಿಗಳು Post a comment
  1. Narendra Kumar.S.S's avatar
    Narendra Kumar.S.S
    ಮಾರ್ಚ್ 2 2011

    ಪೇಜಾವರ ಶ್ರೀಗಳ ಇಂತಹ ಸಮಾಜಮುಖೀ ಕಾರ್ಯಗಳು ನಿಜಕ್ಕೂ ಸ್ತುತ್ಯರ್ಹ.
    ನಮ್ಮ ಎಲ್ಲ ಮಠಾಧೀಶರೂ ಪೇಜವರ ಶ್ರೀಗಳನ್ನು ಅನುಸರಿಸುವಂತಾಗಲಿ.

    ಉತ್ತರ
  2. ಮಹೇಶ ಪ್ರಸಾದ ನೀರ್ಕಜೆ's avatar
    ಮಹೇಶ ಪ್ರಸಾದ ನೀರ್ಕಜೆ
    ಮಾರ್ಚ್ 2 2011

    ಸಂಘವರಿವಾರದ ಹಿನ್ನೆಲೆಯಿಂದ ಬಂದೆವೆಂದು ಕೊಚ್ಚಿಕೊಳ್ಳುವ ಬಿಜೆಪಿ ಇಂಥಾ ಕೆಲಸಗಳನ್ನು ಮಾಡುವುದು ಇಬ್ಬಂದಿತನವಲ್ಲದೆ ಮತ್ತೇನಲ್ಲ. ಇದನ್ನು ಎಲ್ಲಾ ಪ್ರಜ್ನಾವಂತ ನಾಗರಿಕರು ವಿರೋಧಿಸೋಣ.

    ಉತ್ತರ
    • Narendra Kumar.S.S's avatar
      Narendra Kumar.S.S
      ಮಾರ್ಚ್ 2 2011

      > ಸಂಘವರಿವಾರದ ಹಿನ್ನೆಲೆಯಿಂದ ಬಂದೆವೆಂದು ಕೊಚ್ಚಿಕೊಳ್ಳುವ ಬಿಜೆಪಿ
      ಸಂಘಪರಿವಾರದ ಹಿನ್ನೆಲೆ ಇದ್ದರೂ, ಇಂದು ಬಿಜೆಪಿ ಸಂಘಕ್ಕಿಂತ ದೊಡ್ಡದಾಗಿ ಬೆಳೆದಿದೆ (ಅಥವಾ ಬೆಳೆದಿದ್ದೇವೆ ಎಂದುಕೊಂಡಿದೆ).
      ಪರಿಣಾಮ ಅದು ಸಂಘದ ಸಲಹೆಗಳು, ಸಿದ್ಧಾಂತಗಳನ್ನೆಲ್ಲಾ ಗಾಳಿಗೆ ತೂರುತ್ತಿದೆ.
      ಇಲ್ಲದಿದ್ದರೆ ಯೆಡ್ಯುರಪ್ಪನವರು ಸ್ವಜನಪಕ್ಷಪಾತ ಮಾಡಿದ್ದರೂ ತಮ್ಮ ಸ್ಥಾನ ಉಳಿಸಿಕೊಳ್ಳುವುದು ಸಾಧ್ಯವಾಗುತ್ತಿತ್ತೆ?
      ಸಂಘಪರಿವಾರದವರಿಂದ ಈ ರೀತಿಯ ವರ್ತನೆಯನ್ನು ನಿರೀಕ್ಷಿಸಬಹುದೇ?
      ಹೀಗಾಗಿ, ಇಂದು ಬಿಜೆಪಿ ಕುರಿತಾಗಿ ಮಾತನಾಡುವಾಗ “ಸಂಘಪರಿವಾರದವರು” ಎಂಬ ಹಣೆಪಟ್ಟಿಯನ್ನು ತೆಗೆದೇ ನೋಡಬೇಕು, ಮಾತನಾಡಬೇಕು.

      > ಇದನ್ನು ಎಲ್ಲಾ ಪ್ರಜ್ನಾವಂತ ನಾಗರಿಕರು ವಿರೋಧಿಸೋಣ
      ಖಂಡಿತ. ಪ್ರಜ್ಞಾವಂತರು ವಿರೋಧಿಸುವುದಿಲ್ಲ, ಸಜ್ಜನರು ನಿಷ್ಕ್ರಿಯರಾಗಿದ್ದಾರೆಂಬ ಕಾರಣಕ್ಕಾಗಿಯೇ, ಈ ರೀತಿಯ ದುಷ್ಕೃತ್ಯಗಳು ಘಟಿಸುತ್ತಿರುತ್ತವೆ.

      ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments