ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 4, 2011

19

ವಿಜಯ್ ಮಲ್ಯ ವಿಶ್ವಕನ್ನಡ ಸಮ್ಮೇಳನವನ್ನು ಉದ್ಘಾಟನೆ ಮಾಡಬೇಕು!

‍ನಿಲುಮೆ ಮೂಲಕ
-ಶ್ರೀಹರ್ಷ ಸಾಲಿಮಠ
ನಾರಾಯಣಮೂರ್ತಿಗಳಿಗಿಂತ  ವಿಜಯ್ ಮಲ್ಯ ಉತ್ತಮ ಕನ್ನಡಿಗರು.
ಪ್ರತಾಪ ಸಿಂಹರು ನಾರಾಯಣ ಮೂರ್ತಿಯವರನ್ನು ಶತಾಯಗತಾಯ ಸಮರ್ಥಿಸಿ ಕೊಂಡಿರುವ ರೀತಿ ಎಷ್ಟು ಹಾಸ್ಯಾಸ್ಪದವಾಗಿದೆಯೆಂದರೆ ಇದೆ ರೀತಿ ವಿಜಯ್ ಮಲ್ಯರ ಬಗ್ಗೆಯೂ ಸಮರ್ಥಿಸಿಕೊಳ್ಳಬಹುದು.ವಿಜಯ್ ಮಲ್ಯರ ಕರ್ಮಭೂಮಿ ಬೆಂಗಳೂರು. ಅವರ ಹೆಡ್ದಾಪೀಸು ಬೆಂಗಳೂರ್ನಲ್ಲಿದೆ. ಐ ಪಿ ಎಲ್ ನಲ್ಲಿ   ಬೇರೆ ಎಲ್ಲ ಪ್ರಾಂಚೈಸಿ ಗಳನ್ನೂ ಕಡಿಮೆ ಬೆಲೆಯಲ್ಲಿ ಕೊಳ್ಳುವ ಅವಕಾಶಗಳಿದ್ದರೂ ಹೆಚ್ಚಿನ ಬೆಲೆ ತೆತ್ತು ಬೆಂಗಳೂರನ್ನೇ ಕೊಂಡರು.
ರಾಜಕೀಯವಾಗಿ ಅವರು ಬೆಳೆಯಲು ಪ್ರಯತ್ನಿಸಿದ್ದು ಕರ್ನಾಟಕದಲ್ಲಿ. ಅವರ ಮಗನೂ ಸಹ ಅಪ್ಪಟ ಕನ್ನಡಿಗ ಏಕೆಂದರೆ ಕನ್ನಡತಿಯಾದ ದೀಪಿಕಾ ಪಡುಕೋಣೆಯೊಡನೆ  ಮಾತ್ರ ಡೇಟಿಂಗ್ ಮಾಡುತ್ತಾನೆ.ಶಿಲ್ಪಾ ಶೆಟ್ಟಿಯನ್ನು ತಮ್ಮ ರಾಜಕೀಯ ಪಕ್ಷದ ರಾಯಭಾರಿಯಾಗಿ ಕನ್ನಡಕ್ಕೆ ಕರೆತಂದರು. ಅವರು ಮನಸು ಮಾಡಿದ್ದರೆ ಬೆರಯವರನ್ನು ಕರೆತರಬಹುದಿತ್ತು. ಆದರೆ ಕನ್ನಡತಿಯನ್ನೇ ತಂದರು.
ಅವರ ಯುನೈಟೆಡ್ ಬೆವರೆಜಸ್ ನಲ್ಲಿ ಇನ್ಪೋಸಿಸ್ ಗಿಂತ ಹೆಚ್ಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಕೆಲಸ ಮಾಡುತ್ತಾರೆ. ಅವರಿಗೆಲ್ಲ ಉಚಿತವಾಗಿ ಮದ್ಯಾರಾಧನೆಯೂ ಆಗುತ್ತದೆ. ಅವರೂ ಸಹ ಅನೇಕ ಸಾಮಾಜಿಕ ಕೆಲಸಗಳನ್ನು ಕನ್ನಡದ ನೆಲದಲ್ಲಿ ಮಾಡಿದ್ದಾರೆ. ಅವರೂ ಸಹ ಕೋಟ್ಯಂತರ ರುಪಾಯಿಗಳನ್ನು ಮುಂಡಾಯಿಸಿದ್ದಾರೆ ಸರಕಾರಕ್ಕೆ. ಅವರೂ ಸಹ ಕೋರ್ಟ್ ತೀರ್ಪಿಗೆ ತಲೆಬಾಗುತ್ತಾರೆ.
ಹೀಗಾಗಿ ವಿಜಯ್ ಮಲ್ಯ ಸಹ ಕನ್ನಡ ಸಮ್ಮೇಳನವನ್ನು ಉದ್ಘಾಟನೆ ಮಾಡಬೇಕು!
ನೇರವಾಗಿ ನೋಡಿದರೆ ಪ್ರತಾಪಸಿಂಹ, ನಾರಾಯಣಮೂರ್ತಿ ಇಬ್ಬರನ್ನು ಸೇರಿಸಿದರೂ ಬರಗೂರು ಮಾಡಿದ ಕನ್ನಡದ ಕೆಲಸಕ್ಕೆ ಸಮನಾಗುವುದಿಲ್ಲ.ಬರಗೂರು ಅನೇಕ ಬುಡಕಟ್ಟು ಮತ್ತು ಅಲೆಮಾರಿ ಸಂಸ್ಕೃತಿಗಳ ಬಗ್ಗೆ ಅಧ್ಯಯನ ಮಾಡಿ ದಾಖಲಿಸಿದ್ದಾರೆ.ವಯಕ್ತಿಕವಾಗಿ ಅವರನ್ನು ನಾನು ಭೇಟಿಯಾಗಿದ್ದೇನೆ. ತನಗಿಂತ ಚಿಕ್ಕವರೇ ಆಗಲಿ ದೊಡ್ದವರೇ ಆಗಲಿ ಎರಡೂ ಕೈಗಳನ್ನು ಮುಗಿದು ನಮಸ್ಕರಿಸುತ್ತಾರೆ. ಅದೊಂದು ಸಂಸ್ಕಾರ ಅವರಲ್ಲಿದೆ. ತಾತ್ವಿಕವಾಗಿ ಅವರ ಎಷ್ಟೋ ವಿಚಾರಗಳು ಒಪ್ಪಿಗೆ ಎನಿಸದಿದ್ದರೂ ಈ ವಿಷಯದಲ್ಲ್ಲಿ ಬರಗೂರು ರಾಮಚಂದ್ರಪ್ಪನವರ ನಿಲುವು ಸರಿ ಎನಿಸುತ್ತದೆ.
ನಾರಾಯಣಮುರ್ತಿಯವರನ್ನು ಸಮರ್ಥಿಸಿರುವ ಲೇಖನವು ಬುದ್ದಿಜೀವಿಗಳ ಕಡೆಗೆ ಪ್ರತಾಪಸಿಂಹರ ತಿರಸ್ಕಾರದ ವಿಸ್ತೃತ ಭಾಗವಾಗಿಯೇ ಕಾಣುತ್ತದೆ. ನಾರಾಯಣಮುರ್ತಿಯವರು ಕಂಪನಿಯನ್ನು ಸ್ಥಾಪಿಸಿದ್ದು ಪುಣೆಯಲ್ಲಿ. ಬೆಂಗಳೂರನ್ನು ಮೆಚ್ಚಿ ಕಂಪನಿಗಳು ಬರತೊಡಗಿದಾಗ ನಾರಾಯಣಮುರ್ತಿಗಳೂ ಬಂದರು.ನಮಗೆ ಅದು ಕೊಡಿ ಇದು ಕೊಡಿ ಇಲ್ಲವಾದೆರ್ ಚೀನಾಕ್ಕೆ ಹೋಗುತ್ತೇವೆ ಎಂದು ಬ್ಲಾಕ್ಫ್ ಮೇಲ್ ಮಾಡಿದ ಗುಂಪಿನ ಮುಂದಾಳುಗಳಲ್ಲಿ ಮುರ್ತಿಗಳೂ ಒಬ್ಬರು. ಚೀನಾದಲ್ಲಿ ಒಳ್ಳೆಯ ತೆರಿಗೆ ವಿನಾಯಿತಿ ಹಾಗೂ ಮಾನವ  ಸಂಪನ್ಮೂಲ ಸಿಕ್ಕರೆ ಬೆಂಗಳೂರಿನ ಆಪೀಸನ್ನು ಮುಚ್ಚಿಕೊಂಡು ಅಲ್ಲಿಗೆ ಹೋಗಲಾರರೆ “ಕನ್ನಡ ಕುವರ” ನಾರಾಯಣ ಮೂರ್ತಿ ?
ಆಯಿತು. ಕನ್ನಡಿಗರಿಗೆ ಉತ್ತಮ ಸೌಲಭ್ಯ ಕೊಡುವುದು ಮೂರ್ತಿಗಳ ಉದ್ದೇಶವಾದರೆ ರಾಯಚೂರು ಗುಲಬರ್ಗಾ ಜಿಲ್ಲೆಗಳಲ್ಲಿ ಕಂಪನಿ ಹಾಕಿ ಅಲ್ಲಿನ ಸ್ಥಳೀಯರಿಗೆ ಏಕೆ ಕೆಲಸ ಕೊಡಬಾರದು? (ನಮ್ಮ ಮಲ್ಯ ರವರು ಅಲ್ಲಿನವರಿಗೆ ಕೆಲಸ ಕೊಟ್ಟಿದ್ದಾರೆ.)ನಾರಾಯಣ ಮೂರ್ತಿಯವರು ಕನ್ನಡದಲ್ಲಿ ಮಾತನಾಡಿದ್ದು ನಾನು ಕೇಳಿಲ್ಲ. ನಾನು ಕನ್ನಡ ಮಾಧ್ಯಮ, ನನ್ನ ಬಹುತೆಕ ಸ್ನೇಹಿತರು ಕನ್ನಡ ಮಾಧ್ಯಮದವರು. ಜಪಾನ್ ಅಮೇರಿಕೆಯಂತಹ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಐ ಟಿ ಕೆಲಸ ಸಿಗಲು ಇಂಗ್ಲೀಷಿನಲ್ಲಿಯೇ ಓದಬೇಕೆಂದು ಪ್ರತಾಪಸಿಂಹರು ಅಪ್ಪಣೆ ಕೊಡಿಸಿದ್ದಾರೆ. ಇದು ಸಿ ಆರ್ ಸಿಂಹ ತಮ್ಮ ಬಾಡೂಟ ಮತ್ತು ಕುಡಿತದ ಬಗ್ಗೆ ಹೆಮ್ಮೆಯಿಂದ ಬರೆದುಕೊಂಡಷ್ಟೇ ಅನೈತಿಕ ಮತ್ತು ಅಪಾಯಕಾರಿ! ಸಾಪ್ಟ್ ವೇರ್ ಬಗ್ಗೆ ತಮಗೇನು ಗೊತ್ತಿಲ್ಲ ಹಾಗೂ ಅದರ ಸಂಸ್ಕೃತಿಯ ಬಗ್ಗೆ ತಮಗೇನು ಗೊತ್ತಿಲ್ಲ ಎಂದು ಹಿಂದೆ “ಕುರುಡು ಕಾಂಚಾಣ” ಕೇಸಿನಲ್ಲಿ ಪ್ರಾಯೋಗಿಕವಾಗಿ ಪ್ರತಾಪಸಿಂಹ ಸಾಬೀತು ಪಡಿಸಿಕೊಂಡಿದಾರೆ. ಕಂಪನಿಗಳಲ್ಲಿ ಕನ್ನಡ ಬೆಳೆಯುತ್ತಿರುವುದಕ್ಕೆ ಅಲ್ಲಿನ ಕನ್ನಡ ಹುಡುಗರ ಕಾಳಜಿಯೇ ಕಾರಣ ಹೊರತು ಮೂರ್ತಿಗಳ ಕೈವಾಡವಲ್ಲ.
ಕಾಕಿನಾಡ ಕಾರೈಕಲ್ ನಂತಹ ತೀರ ಕೆಳ ವರ್ಗದ ಕಾಲೇಜುಗಳಿಂದ ವಿದ್ಯಾರ್ಥಿಗಳನ್ನು ಕ್ಯಾಂಪಸ್ ಸಂದರ್ಶನದಲ್ಲಿ ಕರೆತಂದು ಬೆಂಗಳೂರಲ್ಲಿ ತುಂಬಿಸುವ ಮೂರ್ತಿಯವರು ಕನ್ನಡಪ್ರೆಮಿಯೇ? ಇವರ ಕಂಪನಿಯಲ್ಲಿ ಕನ್ನಡಿಗರಿಗೆ ಇಷ್ಟು “ಕೋಟಾ” ಎಂದು ಪಿಕ್ಸ್ ಮಾಡಿದ್ದಾರೆಯೇ? ಅಂತ ದೊಡ್ಡ ಕಂಪನಿಯು ಕನ್ನಡಕ್ಕಾಗಿ ಒಂದು ಪಾಂಟ್, ತಂತ್ರಾಂಶ ಬೆಳೆಸಿದೆಯೇ?  ಸಾವಿರಾರು ಕೋಟಿ ಆದಾಯ ವಿರುವ ಇನ್ಪೋಸಿಸ್ ಎಂಟು ಕೋಟಿ ದಾನ ಮಾಡಿದ್ದು ಕನ್ನಡ ಸೇವೆಯೇ?  ಇದಕ್ಕಿಂತ ಹೆಚ್ಚಿನದನ್ನು ಅನೇಕ ಕಂಪನಿಗಳು ಮಾಡಿವೆ. ಮೂರ್ತಿಗಳು ಮಾಡಿದ ಪ್ರತಿಯೊಂದು ಪತ್ರಿಕೆಯಲ್ಲಿ ಬರುತ್ತದೆ ಅಷ್ಟೇ! ಹಾಳಾಗಿ ಹೋಗಲಿ ಅಷ್ಟೊಂದು ಕೋಟಿ ಹಣ ಇರುವ ಸಂಸ್ಥೆ ಯಾವ ವೈಜ್ಞಾನಿಕ ಸಂಶೋಧನೆಯನ್ನು ಕೈಗೊಂಡಿದೆ. ಅದಕ್ಕೊಂದು ರಿಸರ್ಚ್ ವಿಂಗ್ ಇದೆಯೇ? ತೀರ ಇತ್ತೀಚಿಗೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬೆನ್ನು ತಿರುಗಿಸಿದಾಗಲೇ ಗೊತ್ತಾಗಲಿಲ್ಲವೇ ಕನ್ನಡ ಪ್ರೇಮದ ಬಣ್ಣ?
ನಾರಾಯಣ ಮೂರ್ತಿ ಅಷ್ಟು ಎತ್ತರಕ್ಕೆ ಬೆಳೆದಿದ್ದಕ್ಕಾಗಿ ಕನ್ನಡಿಗರಾಗಿ ನಾವು ಹೆಮ್ಮೆ ಪಡೋಣ. ಸನ್ಮಾನವನ್ನೂ ಮಾಡೋಣ. ಆದರೆ ಅವರಿಂದ ಕನ್ನಡ ಉದ್ದಾರ ಆಗಿದೆ ಎಂಬ ಹೋಗಲು ಭಟ್ಟಂಗಿತನವನ್ನು  ಒಪ್ಪಲಾಗದು. ಮೂರ್ತಿಗಳಿಗಿಂತ ಹೆಚ್ಚು ಬೆಳೆದವರು ವಿಜಯ್ ಮಲ್ಯ. ಮೂರ್ತಿಯಾದರೋ ಬರೀ ಸಾಪ್ಟೆರು. ಮಲ್ಯರದು? ಹೆಂಡ, ಕ್ಯಾಲೆಂಡರು, ಕುದುರೆ, ವಿಮಾನ, ರಿಯಲ್ ಎಸ್ಟೇಟು, ಕ್ರಿಕೆಟ್ಟು ಇತ್ಯಾದಿ.
ಪ್ರಚಾರಕ್ಕಾಗಿ ಹಪಹಪಿಸುತ್ತಾರೆ ಅಥವಾ ವಿಚಾರಗಳಲ್ಲಿ ವೈರುಧ್ಯವಿದೆ ಎಂದ ಮಾತ್ರಕ್ಕೆ ಸಾರಾಸಗಟಾಗಿ ಅವರು ಹೇಳುವ ಎಲ್ಲವನ್ನೂ ತಿರಸ್ಕರಿಸುವುದು ಎಷ್ಟು ಸರಿ?
(ಚಿತ್ರ ಕೃಪೆ : http://www.ibtimes.com)
19 ಟಿಪ್ಪಣಿಗಳು Post a comment
  1. hegde's avatar
    hegde
    ಮಾರ್ಚ್ 4 2011

    kotti prataapa pradarshanakke pratikriyeyondu kedu! asaddeye adakke raama baana annisutte…

    ಉತ್ತರ
  2. Pramod's avatar
    ಮಾರ್ಚ್ 4 2011

    ನೀವು ಹೇಳಿದ್ದು 100% ಸತ್ಯ. ಇ೦ಫಿ ಹೆಡ್ ಆಫೀಸ್ ಅನ್ನು ಮತ್ತೆ ಪುಣೆಗೆ ಶಿಫ್ಟ್ ಮಾಡೋ ಪ್ಲಾನ್ ಅಲ್ಲಿ ಇದ್ದಾರೆ ಮೂರ್ತಿ ಅವ್ರು. ಇವರ ಐಟಿ ಕ೦ಪನಿಗಳಲ್ಲಿ ಬರೀ ಕೊ೦ಗರು, ಗುಲ್ಟಿಗಳು, ಮಲ್ಲುಗಳು. ಅಳಿದುಳಿದವರು ಕನ್ನಡಿಗರು.

    ಕನ್ನಡ ಇ೦ಫಿಯಿ೦ದ ಗಳಿಸಿದ್ದು ಶೂನ್ಯ ಸ೦ಪಾದನೆ. ಡಿಕ್ಷ್ಯನರಿಯೋ, ಫಾ೦ಟ್, ಅಥವಾ ಇನ್ನೇನಾದರೂ ಸಾಫ್ಟ್ ವೇರ್ ಮಾಡಬಹುದಿತ್ತಲ್ಲವೇ?

    ಉತ್ತರ
  3. Satish's avatar
    Satish
    ಮಾರ್ಚ್ 4 2011

    Avar tiluvalike takante.. avaru bariuthare.. istavadavarana.. hogolodu.. istavilladavaan tegoldake.. lekani,, paper idyalava…?
    Pramod@.. Infy pora.. pune ge shift agil.. infy onde all ella IT company galu shift aglli.. avagladu.. bengalur nali para bhashikara sanke kadime agute.. bengalur.. swalp shantha vagute…

    ಉತ್ತರ
  4. ರವಿ's avatar
    Ravi
    ಮಾರ್ಚ್ 4 2011

    ಹರ್ಷ, ಅದೇನು ಹೇಳಲು ಹೋಗಿ ಅದೇನು ಹೇಳುತ್ತೀರೋ ನನಗೆ ತಿಳಿಯದು. ಇದು ವಿಶ್ವ ಕನ್ನಡ ಸಮ್ಮೇಳನ. ಎಲ್ಲ ಕನ್ನಡಿಗರ ಸಮ್ಮೇಳನ. ಮೂರ್ತಿ ಅತ್ಯಂತ ಅರ್ಹ ಕನ್ನಡಿಗ ಈ ಸಮ್ಮೇಳನ ಉದ್ಘಾಟಿಸಲು ಎಂದು ಯಾರೂ ಹೇಳಿಲ್ಲ. ಅವರಿಗಿಂತಲೂ ಅರ್ಹರೂ ಇದ್ದಾರೆ. ಮೂರ್ತಿಯವರನ್ನು ತೆಗಳುವ ಭರದಲ್ಲಿ ಮಲ್ಯರ ಬಗ್ಗೆ ಯಾಕೆ ಕುಹಕ? ಮಲ್ಯರ ಬಗ್ಗೆ ಕೆಟ್ಟದಾಗಿ ಏಕೆ ಬರೆಯುತ್ತೀರಿ? ಅವರೇನು ಟಿಪ್ಪುವಿನ ಖಡ್ಗವನ್ನು ವಾಪಾಸ್ ಭಾರತಕ್ಕೆ ತರಲಿಲ್ಲವೆ? ತಂದು ಸರಕಾರಕ್ಕೆ ಕೊಡಲಿಲ್ಲವೇ? ಸರಕಾರ ಏನಾದರೂ ಮಾಡಿತೆ ಅದನ್ನು ತರಲು? ಮಲ್ಯರ ಬಗ್ಗೆ ಕುಹಕ ಸರಿಯಲ್ಲ. ಇನ್ನು ಮೂರ್ತಿಯವರ ಬಗ್ಗೆ: ಬೆಳ್ಳಿ ಚಮಚ ಬಾಯಲ್ಲಿಟ್ಟು ಹುಟ್ಟದೇ ಈ ಎತ್ತರಕ್ಕೆ ತಲುಪಿರುವುದು ಮೂರ್ತಿ ಸಾಧನೆ. ಹೇಳಿ ಕೇಳಿ ಮೂರ್ತಿ ವ್ಯವಹಾರದಲ್ಲಿರುವವರು. ಹಣ ದಾನ ಮಾಡಲು ಕುಳಿತಿರುವವರಲ್ಲ. ಇಲ್ಲ ಕನ್ನಡವರಿಗೆ ಮಾತ್ರ ಕೆಲಸ ಎನ್ನುವುದೂ ಸಾಧ್ಯವಿಲ್ಲ ಜಾಗತಿಕ ವ್ಯವಹಾರದಲ್ಲಿ. ಐ ಟಿ ಕೆಲಸ ಇಂಗ್ಲಿಷೇ ಬೇಕಲ್ಲದೆ ಕನ್ನಡದಲ್ಲಿ ಏನು ಮಾಡುತ್ತೀರಿ? ಇದು ಕನ್ನಡದ ಸಮಸ್ಯೆ ಮಾತ್ರವಲ್ಲ ಇಂಗ್ಲಿಷ್ ಒಂದು ಬಿಟ್ಟು ಪ್ರಪಂಚದ ಬೇರೆ ಯಾವುದೇ ಭಾಷೆಗೂ ಇದೆ ಸ್ಥಿತಿ. ಹಾಗಿರುವಾಗ ಅದನ್ನೇಕೆ ಅನೈತಿಕ ಎನ್ನುತ್ತೀರಿ? ಇನ್ಫಿ ಒಂದು ಐ ಟಿ ಸೇವೆಯಲ್ಲಿರುವ ಕಂಪನಿ. ರಿಸರ್ಚ್ ವಿಂಗ್ ಇದ್ದರೇನೆ ಅದು ಸಾರ್ಥಕ ಕಂಪನಿಯೇ? ರಿಸರ್ಚ್ ವಿಂಗ್ ಸ್ಥಾಪಿಸಲು ಎಷ್ಟು ಹಣ ಬೇಕು ಗೊತ್ತೇ? ಅದರ ಸಾವಿರಾರು ಕೋಟಿ ಆದಾಯದ ಮೇಲೆ ಕಣ್ಣು ಹಾಕುವ ನೀವು ಒಂದು ಕಂಪನಿಯಿಂದ ಏನೆಲ್ಲಾ ಬಯಸುತ್ತೀರಪ್ಪ? ಅತ್ತ ಕಡೆ ರಿಸರ್ಚ್ ವಿಂಗ್ ಇತ್ತ ಕಡೆ ಕನ್ನಡಕ್ಕೆ ದಾನ? ಹೋಗಲಿ ಬಿಡಿ ಮೂರ್ತಿಯವರನ್ನು ಮಾತ್ರವೇಕೆ ಕೇಳಬೇಕು? ನಾವೆಲ್ಲರೂ ಪ್ರತೀಯೊಬ್ಬ ಕನ್ನಡಿಗನೂ ಸಹಕರಿಸೋಣ. ಇನ್ನೊಬ್ಬನ ಆದಾಯ ಕಣ್ಣು ನಮಗೆ ಕುಕ್ಕಬಾರದು. ಬೆಂಗಳೂರಿಗೆ ಹೆಸರು ಬರಲು ಕಾರಣರಾದವರಲ್ಲಿ ಮೂರ್ತಿ ಒಬ್ಬರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕನ್ನಡಿಗ ಉದ್ಯಮಿ. ಅವರಿಗೆ ಕನ್ನಡ ಸಮ್ಮೇಳನ ಉದ್ಘಾಟಿಸುವ ಅರ್ಹತೆ ಇದೆ. ಅವರೊಬ್ಬರೇ ಅರ್ಹ ಅಲ್ಲದಿರಬಹುದು.

    ಉತ್ತರ
  5. umesh desau's avatar
    ಮಾರ್ಚ್ 4 2011

    why so much fuss on who will inagurate.. i just dont understand the logic behind such arguments.

    ಉತ್ತರ
    • shanti's avatar
      shanti
      ಮಾರ್ಚ್ 4 2011

      because we kannadigaas only do such waste things…..who will inugurate what? and why he only has to inaugurate/ and so on……

      We will never give importance to iimportant things. for proof you can go back to the previous article and comments published in same blog itself, as there will be no much healtthy arguements on required things,,if its unwanted thinks there will be many many comments(rather to say unhealthy arguements).
      NOTE: They may claim me as ” kannada virodi” also..just wait and see….

      ಉತ್ತರ
  6. Giri's avatar
    Giri
    ಮಾರ್ಚ್ 4 2011

    ಇಲ್ಲಿ ಏನು ಹೇಳಲು ಹೊರಟಿದ್ದಾರೆ ಅನ್ನೋದು ಗೊತ್ತಾಗ್ತಾ ಇಲ್ಲ. ಈ ಲೇಖನ ಮೂರ್ತಿಯವರನ್ನು ತೆಗಳಲಿಕ್ಕೋ.. ಮಲ್ಯರನ್ನು ತೆಗಳಲಿಕ್ಕೋ.. ಪ್ರತಾಪ ಸಿಂಹರನ್ನು ತೆಗಳಲಿಕ್ಕೋ.. ಬರಗೂರು ಅವರನ್ನು ಹೋಗಳಲಿಕ್ಕೋ..??
    ಇನ್ಫಿ ಪುಣೆಯಲ್ಲಿ ಶುರುವಾಗಿದ್ದು ನಿಜ.. ಆದರೆ ಈಗ ಮತ್ತು ಹೆಚ್ಚಿನ ಜನರು ಕೆಲಸ ಮಾಡುತ್ತಿರುವುದು ಬೆಂಗಳುರಿನಲ್ಲಿ.
    ಕುವೆಂಪು ಕೂಡ ಬರವಣಿಗೆ ಪ್ರಾರಂಭಿಸಿದ್ದು ಇಂಗ್ಲಿಷಿನಲ್ಲಿ ಅನ್ನುವುದು ಗೊತ್ತಿರಬಹುದಲ್ಲ..
    ಇನ್ನು ಮಲ್ಯರ ವಿಚಾರಕ್ಕೆ ಬಂದರೆ.. ಅವರನ್ನೇಕೆ ತೆಗಳುತ್ತೀರಿ. ಅವರು ಮಾಡುವುದು ಅವರ ವ್ಯವಹಾರ. ಅದು ಸರಿ ತಪ್ಪು ಹೇಳುವುದು ಎಷ್ಟು ಸರಿ. ಅವರು ಹೆಂಡ ಮಾಡಿದ್ದರಿಂದ ಎಲ್ಲರು ಕುಡಿದು ಹಾಳಾದರು ಎಂಬುವುದು ನಿಮ್ಮ ಅನಿಸಿಕೆಯಾದರೆ ಯೋಚಿಸಿ ನೋಡಿ… ತಂಬಾಕು ಬೆಳೆಯುವ ಅದೆಸ್ಟೋ ಕುಟುಂಬಗಳಿವೆ ನಮ್ಮ ರಾಜ್ಯದಲ್ಲಿ.. ಅದು ಅವರ ಜೀವನ.. ತಂಬಾಕು ಬೆಳೆಯುವರು ಹೆಂಡ ಮಾಡುವವರೆಲ್ಲಾ ಕೆಟ್ಟವರಲ್ಲ.. ಹಾಗೆಯೇ ಅದನ್ನು ಮಾಡದವರೆಲ್ಲಾ ಒಳ್ಳೆಯವರಲ್ಲ.

    ಉತ್ತರ
  7. jojoboy's avatar
    jojoboy
    ಮಾರ್ಚ್ 4 2011

    I seriously dont understand Pratap Simha and his “varaatha”…. He once wrote “software maaNigalu, just doing some clerical job and wasting their life in software industry. This industry employs, highly qualified IITans etc to make a billing softwares, for hotels retail shops… etc etc…. and it was way back in 2004 or so..”

    now he praises, NRN for same software industry etc… I respect, NRN as a businessman and a fellow Kannadiga… but just to put baraguru or some other one down, this pratap guy can go to any length..

    NRN, fights for “union territory status, for bangalore” he has made common public’s living difficult.. look at the rents in Blore, or auto fares to vegetable market.. everybody thinks, “all guys r software techies, with high pay packets”….
    Latest is NRN’s infy wants to move its base, and further expansion in Pune, cos he sees more profit there. All businessmen in blore are there cos, its easier to make profits/establish themselves… Not for the love of Kannada or anything… Pratap should understand this.

    Yep, if Sudha Murthy was, approached probably I would have had a different opinion. But praising NRN now, for your own mileage is sick!
    Thx
    jojo

    ಉತ್ತರ
  8. ksraghavendranavada's avatar
    ಮಾರ್ಚ್ 4 2011

    ನಿಮ್ಮ ಮಾತು ಅಕ್ಷರಶ: ಸತ್ಯ. ಆದರೆ ರವಿಯವರ ಪ್ರತಿಕ್ರಿಯೆಯಲ್ಲಿಯೂ ಸತ್ಯವಿದೆ!
    ಕನ್ನಡಕ್ಕಾಗಿ ದುಡಿದಿರುವವರು ಸಾಕಷ್ಟು ಜನರಿರುವ ಈ ನಾಡಿನಲ್ಲಿ ನಾರಾಯಣ ಮೂರ್ತಿಯವರೇ ಏಕೆ ಎನ್ನುವ ಪ್ರಶ್ನೆ ನನ್ನದೂ ಕೂಡಾ!ಗಡಿನಾಡಿನ ಶತಾಯುಷಿ ಕಯ್ಯಾರರೊ೦ದಿಗೆ ನಾರಾಯಣ ಮೂರ್ತಿಯವರನ್ನು ಹೋಲಿಸಲಾಗುವುದೆ? ಎಲ್ಲರೂ ಕೇವಲ ಕನ್ನಡ ಭಾಷೆಗಾಗಿ ಹೋರಾಡಿದ್ದರೆ, ಕಯ್ಯಾರರದೂ ಕನ್ನಡ ಭಾಷೆ ಮತ್ತು ಏಕೀಕರಣದ ಸಮಯದಲ್ಲಿ ಕೇರಳವನ್ನು ಸೇರಿದ ಕನ್ನಡ ಜನಾ೦ಗಕ್ಕಾಗಿಯೂ ಹೋರಾಡುತ್ತಿದ್ದಾರೆ ಎ೦ಬುದು ನಮ್ಮ ಪ್ರಭೃತಿಗಳಿಗೆ ಅರಿವಿಲ್ಲವೇ?ಕನ್ನಡ ಬಹುಶ; ಅವರಿ೦ದ ಸಾಕಷ್ಟು ಫ೦ಡ್ ನ ನಿರೀಕ್ಷೆಯಿರಬಹುದು!
    ನಮಸ್ಕಾರಗಳೊ೦ದಿಗೆ,ಎನಿ ಹೌ ಗುಡ್ ಆರ್ಟಿಕಲ್!
    ನಿಮ್ಮವ ನಾವಡ.

    ಉತ್ತರ
  9. Arjuna's avatar
    Arjuna
    ಮಾರ್ಚ್ 4 2011

    ನಮ್ಮ ಕ.ಪ್ರ.ಪ್ರತಾಪ್ ಸಿಂಹರವರು ಹೊಸ ಪತ್ರಿಕೆ ಸೇರಿದಮೇಲೆ ಶತಾಯ ಗತಾಯ ತಮ್ಮ ನೈಪುಣ್ಯತೆಯನ್ನು ತೋರಿಸಲು ಹೋಗಿ ಹಿಂದೆ ತಾವೇ ಬೀಸಿದ್ದ ರಾಗಿಯನ್ನು ಮರೆತಿದ್ದು ಹಾಸ್ಯಾಸ್ಪದ. ನಮ್ಮ ಉಗ್ರ ಪ್ರತಾಪಿಯವರು ಇಲ್ಲಿ ತಮ್ಮ ಅತ್ಯಲ್ಪ ಓದುಗರನ್ನು [ಓದಿರುವುದೇ ಅತ್ಯಲ್ಪ ಎಂದು ಭಾವಿಸಬೇಕಾಗಿ ವಿನಂತಿ] ಮೆಚ್ಚಿಸಲು ಹಿಂದೆ ತಾವೇ ಎಲ್ಲಿಯೋ ಕದ್ದಿದ್ದ ವಿಷಯಗಳನ್ನು ಸೇರಿಸಿ ಸಿದ್ಧಪಡಿಸಿದ ಗೊಜ್ಜನ್ನು ಯಥಾವತ್ತಾಗಿ ವಿರುಧ್ಧವಾಗಿ ಬೀಸಿದ್ದಾರೆ. ಅದಕ್ಕೆ ನಮ್ಮ ನೆಚ್ಚಿನ ಭಟ್ರು ತಮ್ಮ ಬ್ಲಾಗಿನಲ್ಲಿ ಪರಾಕನ್ನು ಹೇಳಿದ್ದಾರೆ. ಅಂಕಣಕಾರರು ಮರೆಗುಳಿಗಳು ಅಂದ್ರೆ ಓದುಗರು ಮರೆತಾರೆಯೇ. ಸರಿ ಇನ್ನೂ ಹೆಚ್ಚಿದನೆದು ನಿರೀಕ್ಷಿಸಲು ಸಾಧ್ಯವಿಲ್ಲ ಬರೆ ಇಂಥವೇ ಕೆಲಸಕ್ಕೆ ಬಾರದ ಸಂವಾದ ಮಾಡಿ ಕೊನೆಗೊಂದು ? ಚಿನ್ಹೆ ಇಟ್ಟರೆ ಮುಗಿಯಿತು.

    ಉತ್ತರ
  10. ಮೋಹನ's avatar
    ಮೋಹನ
    ಮಾರ್ಚ್ 4 2011

    ರಾಮಚಂದ್ರಪ್ಪನಗಿಂತ ಮಲ್ಯ ಮೂರ್ತಿಗಳೇ ಮೇಲು ಕೊನೆ ಪಕ್ಷ ಅವರಿಂದ ನಾಲ್ಕಾರು ಕನ್ನಡಿಗರು ಹೊಟ್ಟೆ ತುಂಬಿಸ್ಕೊಳ್ತಿದರೆ. ರಾಮಚಂದ್ರಪ್ಪನ ಸಂಶೋಧನೆಯಿಂದ ಕನ್ನಡಕ್ಕೇನು ಲಾಭ ಯಾವ್ದೋ ಅಲೆಮಾರಿ ಸಂಸ್ಕೃತಿ ಅಧ್ಯಯನ ಮಾಡಿದ್ರೆ ಕನ್ನಡಿಗರಿಗೇನ್ರಿ ಸಿಗುತ್ತೆ ಮಣ್ಣು. ಅವ್ನು ಮೂರ್ತಿನ ವಿರೋಧಿಸುವುದರ ಹಿಂದೆ ಸಾಹಿತ್ಯ ಕ್ಷೇತ್ರದ ಪುರೋಹಿತಶಾಹಿ ಕೆಲ್ಸ ಮಾಡ್ತಿದೆ. ಇವ್ರಿಗೆಲ್ಲ ಮೊಸ್ರಲ್ಲಿ ಕಲ್ಲು ಹುಡ್ಕೊದೆ ಕೆಲ್ಸ. ಬಿಜೇಪಿ ಸರ್ಕಾರ ಇದ್ಯಲ್ಲ ಅದಕ್ಕೆ ಏನಾದ್ರೂ ಕೊಂಕು ತೆಗೀಬೇಕು, ಅದೇ ಕಾಂಗ್ರೆಸ್ ಸರ್ಕಾರ ಈ ಕೆಲ್ಸ ಮಾಡಿದ್ರೆ ಇದೆ ರಾಮಚಂದ್ರಪ್ಪ ಮೂರ್ತಿ ಮನೆ ನಾಯಿ ಉದ್ಘಾಟನೆ ಮಾಡಿದ್ರೂ ಸೈ ಅಂತಿದ್ದ. ಪುಗ್ಸಟ್ಟೆ ಊಟ ಇದೊಂತರ ಪುಗ್ಸಟ್ಟೆ ಪ್ರಚಾರ ಆಯಪ್ಪನಿಗೆ. ಆತ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆಗಿದ್ದಾಗ ಕಿಸ್ದಿದ್ದು ತುಂಬ ಹತ್ತಿರದಿಮ್ದ ನೋಡಿದವ್ರನ್ನ ಕೇಳಿ ಗೊತ್ತಾಗುತ್ತೆ.

    ಉತ್ತರ
    • marwadi's avatar
      ಮಾರ್ಚ್ 5 2011

      ಚೆನ್ನಾಗಿ ಹೇಳಿದ್ರಿ mohan ಅವರೆ

      ಏನೋ ದೊಡ್ಡವರ ಬಗ್ಗೆ ನಾಲ್ಕು ಬರೆದು ವಿರೋದ ಮಾಡಿದ್ರೆ ತಾನು ಅವರ ಲೆವೆಲ್ ಹೋಗಬಹುದು ನಂಗು ವಿಶ್ವ ವ್ಯಾಪಿ ಪುಕ್ಸಟ್ಟೆ ಪ್ರಚಾರ ಸಿಗಬಹುದು ಅಂತ ತಿಳ್ಕೊಂಡು ಆ ಬರ ಗುರು kanavarstiddane aste

      ಉತ್ತರ
  11. ಮಾ ಸು ಮಂಜುನಾಥ's avatar
    ಮಾ ಸು ಮಂಜುನಾಥ
    ಮಾರ್ಚ್ 4 2011

    ಹರ್ಷ ನಿಮ್ಮ ಬರಹ ನಿಜವೆನಿಸಿತು,ಯಾವ ಬಣಕ್ಕೂ ಸೇರದೆ ಸಾಮಾನ್ಯ ಕನ್ನಡಿಗನಾಗಿ ನೋಡಿದಾಗ ನಾಣಿ ಯಾವ ರೀತಿಯಲ್ಲೂ ವಿ.ಕ.ಸಮ್ಮೇಳನಕ್ಕೆ ಅರ್ಹರಲ್ಲವೆನಿಸುತ್ತದೆ,ಬರಗೂರರ ಅಭಿಪ್ರಾಯಕ್ಕೆ ಇಷ್ಟು ನಿಕೃಷ್ಟವಾಗಿ ಪ್ರತಿಕ್ರಿಯಿಸುವ ಅಗತ್ಯವಿರಲಿಲ್ಲವೆನಿಸುತ್ತದೆ.

    ಉತ್ತರ
  12. shanuboga's avatar
    ಮಾರ್ಚ್ 5 2011

    ಅಸಭ್ಯ ಭಾಷೆ ಬಳಸಿದ ಕಾರಣ, ಈ ಪ್ರತಿಕ್ರಿಯೇಯೆನ್ನ ಅಳಿಸಿ ಹಾಕಲಾಗಿದೆ – ನಿಲುಮೆ

    ಉತ್ತರ
  13. LAVANYA's avatar
    LAVANYA
    ಮಾರ್ಚ್ 5 2011

    hahahaha…. yentha samarthane… karnataka haagu kannada jana beledaddu yaara sahaayadindalla.. haagaagi yara bagge maathanaadiyu prayojanavilla… murthy aagali athava malya aagali , kannadada bada janaranna kannetthiyu nodilla. yella avaravara swaartha jeevanakkaagi… naavu yeshte maathanaadidaru rajakaaranigala olavu work out aagutthe ashte…. lets see

    ಉತ್ತರ
  14. Krishna's avatar
    Krishna
    ಮಾರ್ಚ್ 5 2011

    “ನಾರಾಯಣಮೂರ್ತಿಗಳಿಗಿಂತ ವಿಜಯ್ ಮಲ್ಯ ಉತ್ತಮ ಕನ್ನಡಿಗರು” E vaakyakkintha bere udaharane beke namma sankuchitha yochana lahari-yannu udaharisalu…
    Kannadigaralle… Ivannu UTTAMA kannadiga… Avanu KEELU kannadiga emba niluvu yava arthadalli ekatheyannu torisuvudo…?

    Narayana Murthi Kannadakke enu madiddare…? enu Madabekitthu…? Emba prashne-galu nijakku nirartaka… Bahushaha neevu infosys-nantaha vishwa mattada samsteyannu stappisiddu Kannadigana “Sadane” endu pariganisabahudittu… Aadre, sankuchitha-vada yochanegalige, “naadu-nudi” embudannu “gadi” emba chowkattinolagirisi vishleshisuvavarige “sadane” matthu adara hindiruva shrama hege taane artha vadeethu…?

    Astakku “yara koduge-indalo kannada uddaravagabekembudilla… Kannada shrimantha bhashe… Adara sanskruthi yarindallu enannu apekshisuvudilla…”

    Dayamadi… Namma nammalli sari tappu-galannu hudukuva nepadalli rajakiya dommbaratakke naandi haadbedi… Naavu onde tayiya makkaliddanthe… Paraspara govravisuvudannu kaliyiri… 🙂

    ಉತ್ತರ
  15. Dr. Indira hegde's avatar
    ಮಾರ್ಚ್ 6 2011

    ಟಿಪ್ಪು ಖಡ್ಗವನ್ನು ಭಾರತಕ್ಕೆ ತಂದ ಕೀರ್ತಿಯೂ ಮಲ್ಯ ಅವರ ಮೇಲಿದೆ.

    ಉತ್ತರ
  16. UMASHANKARA BS's avatar
    ಮಾರ್ಚ್ 6 2011

    ಸೂಪರ್ರಾಗಿ ಹೇಳಿದ್ದೀರಾ ಸರ್. ಆದ್ರೆ ಏನ್ಮಾಡೋದು ನಮ್ಮ ಮುಖ್ಯ ಮಂತ್ರಿಗಳು ನಾಚಿಕೆ ಮರ್ಯಾದೆ ಗೊತ್ತಿಲ್ಲದವರು ಜೊತೆಗೆ ಕಿವಿ ಕೇಳದ ಕೆಪ್ಪರು, ವಿಧಿಯಿಲ್ಲದೆ ಸಹಿಸಿಕೊಳ್ಳಬೇಕಾದೆ ಅಲ್ಲವೇ? ಸರ್

    ಉತ್ತರ
  17. prashant's avatar
    prashant
    ಮಾರ್ಚ್ 8 2011

    ಶ್ರೀಹರ್ಷ ravare,
    narayana moorthy ya yogyate bagge matanaduva modalu, neevu nimma jeevanadalli yestu sadhane maadiddiri yendu modalu aalochisi.
    neevu infosys tara alladiddaru, 1000 jana iruva ondu company start maadi nodi..aaga gottaguttade narayana moorthy yestu kashata pattirabahudu antha…
    narayana moorthy ya 1% kooda sadhane madada neenu, ninage avara bagge matanaduva humbatana ondu huchche sari.
    baragooru thumba baredira bahud. adre, yestu janara jaavanakke aasareyagiddaare..??
    koti koti invest maadi, daddarinda project maadisi loss adre neenu mattu ninna baragooru nashta tumbisuttira…?? haage maadodikke infosys government company alla…
    ondu vele, neene ondu company ya owner adre, ninna project nalli danda pinda gallannu serisikoltiya??
    karnatakada yava moolege infosys navru hogalla helu..?? maklu select agadiddare yenu madodikke agutte..??
    yavude company yalli dodda post ge hogoke, olleya communication skills irbeku. adu bekandre english bhasheyalli olleya hiditavirabeku…infosys bare karnatakadalli buisiness madutiddare kannadakke praadhaanyate kodabahudagittu..adre adu jagattinellede project maaduttide, addake chennagi english skills beku.
    english medium nalli kalita takshana obba huduganalli kannada prema kadime aagodilla…school nalli english nalli odali. adre, avnu hohage, maneyalli, frnds jothe kannadadali matanadidare salade…??

    baragooru na buisiness bare karnataka dalladare, infosys na buisiness edee world nallide…
    infosys na 1 lakh janara kotigattale tax na hana govt. ge beku, adre infosys navru bedva…??

    intaha sankuchita bhavane indale, hechchina companiyalli top post nalli hechchagi tamilians irodu…avaru client jothe mataduvudannu nodidare namage ashchariya aaguttade yakandre ashtu chennagi iruttade…

    innadaru baaviyolagina kappe tarahada buddi yaanu badige ittu, vishaala vaagi yochisi…
    humba tanada yochaneyannu bittubidi ಶ್ರೀಹರ್ಷ ravare…karnatakadavarannu bare karnatakkakke layakku maduva idea kodbedi…

    prashant
    An IT engineer from karnataka

    ಉತ್ತರ

Leave a reply to umesh desau ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments