ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 16, 2011

17

ಇಂಗ್ಲೀಷ್ ಮತ್ತು ಮೊಬೈಲ್ ಫೋನ್ !

‍ನಿಲುಮೆ ಮೂಲಕ

– ಸಂದೀಪ್ ಕಾಮತ್

ಒಂದು ಜಾಹೀರಾತು ಬರುತ್ತೆ. ಅದು ಚಹಾದ ಬಗ್ಗೆ. ತಂದೆ ಮಗನಿಗೆ ಚಹಾ ಕುಡಿಯಬೇಡ ಅನ್ನೋವಾಗ ತಾಯಿ ’ಯಾರು ಹೇಳಿದ್ದು ಚಹಾ ಒಳ್ಳೆಯದಲ್ಲ ಅಂತ ? ’ ಈ ಪ್ರಶ್ನೆಗೆ ತಂದೆ ನನಗೆ ಸರಿಯಾಗಿ ನೆನಪಿಲ್ಲ ಬಹುಶಃ ನನ್ನ ತಾಯಿ ಹೇಳಿರ್ಬೇಕು ಅಂತ ತಾಯಿ ಮೇಲೆ ಗೂಬೆ ಕೂರಿಸ್ತಾನೆ. ಅವನ ತಾಯಿ ಆಗ ’ ನನಗೂ ಸರಿಯಾಗಿ ನೆನಪಿಲ್ಲ ನಿನ್ನ ತಂದೆ ಹೇಳಿರ್ಬೇಕು ’ ಅಂತ ಅವಳ ಗಂಡನ ಮೇಲೆ ಗೂಬೆ ಕೂರಿಸ್ತಾಳೆ. ಕಡೆಗೂ ಚಹಾ ಕೆಟ್ಟದು ಅಂತ ಯಾರು ಹೇಳಿದ್ದು ಗೊತ್ತಾಗೋದೆ ಇಲ್ಲ!

ಈ ಜಾಹೀರಾತಿನ ಪ್ರಸ್ತಾವ ಯಾಕೆ ಬಂತು ಅಂದರೆ ನನಗೂ ಅಂಥದ್ದೇ ಒಂದು ಪ್ರಶ್ನೆ ಮನದಲ್ಲಿ ಮೂಡಿದೆ.

“ಯಾರು ಹೇಳಿದ್ದು ಕನ್ನಡ ನಶಿಸುತ್ತಿದೆ ಅಂತ ? ”

ನಿಮ್ಮಲ್ಲಿ ಕೆಲವರು ಥಟ್ ಅಂತ ನನಗೆ ಅವರು ಹೇಳಿದ್ದು ನನ್ಗೆ ಆ ವೆಬ್ ಸೈಟ್ ನಲ್ಲಿ ವಿಷಯ ಸಿಕ್ಕಿತ್ತು , ಅಂತ ಥೇಟ್ ಆ ಜಾಹೀರಾತಿನ ಹಾಗೆಯೇ ಹೇಳಬಹುದು. ಆದ್ರೆ ಅದು ಸರಿನಾ?

ಕನ್ನಡಕ್ಕೆ ಸಾವಿರಾರು ಭಾಷೆಯ ಇತಿಹಾಸ ಇದೆ ಅಂತಾರೆ. ಹಾಗಾದ್ರೆ ಸಾವಿರಾರು ವರ್ಷಗಳಿಂದ ತನ್ನತನವನ್ನು ಉಳಿಸಿಕೊಂಡಿರುವ ಭಾಷೆ ಅದು ಹೇಗೆ ಸಾಯುತ್ತೆ ?

ಇಂಗ್ಲೀಷ್ ಕೊಲೆಗಡುಕ ಭಾಷೆ ಅಂತಾರೆ. ಹಾಗಾದ್ರೆ ಇಂಗ್ಲೀಷ್ ನಮ್ಮ ಕನ್ನಡವನ್ನೂ ಕೊಂದು ಬಿಡುತ್ತಾ? ಲೇಸ್ ಜಾಹೀರಾತಿನಲ್ಲಿ ಕಾರ್ ನಲ್ಲಿ ಹೋಗುತ್ತಿರುವ ಒಬ್ಬಾತ, ಹಳ್ಳಿಯಲ್ಲಿ ಕೂತ ಒಬ್ಬನ ಹತ್ರ ದೊಡ್ಡಬಳ್ಳಾಪುರಕ್ಕೆ ಹೇಗೆ ಹೋಗೋಗುದು ಅಂತ ಕೇಳಿದಾಗ ಹಳ್ಳಿಯವ ಇಂಗ್ಲೀಷ್ ನಲ್ಲೆ ಉತ್ತರಿಸುತ್ತಾನೆ. ಹಾಗೆ ನಿಜಕ್ಕೂ ಆಗುವ ಸಾಧ್ಯತೆಗಳಿದೆಯಾ?

ಪುರೋಹಿತರು ದೇವಸ್ಥಾನದಲ್ಲಿ ಇಂಗ್ಲೀಷ್ನಲ್ಲೇ ಮಂತ್ರ ಹೇಳ್ತಾರಾ ? ದೇವಸ್ಥಾನದ ಮೈಕ್ ನಲ್ಲಿ ಸುಪ್ರಭಾತವೂ ಇಂಗ್ಲೀಷ್ ನಲ್ಲೇ ಬರುತ್ತಾ? ನಮ್ಮ ವಿದ್ಯಾಭೂಷಣರು ಇಂಗ್ಲೀಷ್ ನಲ್ಲೇ ‘This era is not for the truth tellers, this is the best time for wicked people ‘ ಅಂತ ಇಂಗ್ಲೀಷ್ ನಲ್ಲೇ ಭಜನೆ ಹಾಡ್ತಾರಾ?

ನಾನು ಚಿಕ್ಕವನಿದ್ದಾಗ ಎರಡು ದಿನ ಪತ್ರಿಕೆ ಬರುತ್ತಿತ್ತು. ಒಂದು ಮುಂಗಾರು ಇನ್ನೊಂದು ಉದಯವಾಣಿ(ಪ್ರಜಾವಾಣಿ ಮತ್ತಿತರ ಪತ್ರಿಕೆಗಳ ಬಗ್ಗೆ ನನಗೆ ಗೊತ್ತಿರಲಿಲ್ಲ). ಆದ್ರೆ ಇವತ್ತು ಎಷ್ಟು ದಿನ ಪತ್ರಿಕೆಗಳಿವೆ? ಬರೀ ಕನ್ನಡ ಚಿತ್ರರಂಗದ ಬಗ್ಗೆಯೇ ಅರಗಿಣಿ,ಚಿತ್ತಾರ,ರೂಪತಾರ ಹೀಗೆ ಹಲವು ಪತ್ರಿಕೆಗಳಿವೆ. ಸುಧಾ,ತರಂಗ ಹೀಗೆ ವೈವಿಧ್ಯಮಯ ಪತ್ರಿಕೆಗಳಿವೆ. ಈ ಪತ್ರಿಕೆಗಳೆಲ್ಲವೂ ಮಾಯ ಆಗುತ್ತಾ ?

ಆಗ ಇದ್ದಿದ್ದು ಒಂದು ದೂರದರ್ಶನ. ಅದೂ ಭಾನುವಾರ ಸಾಯಂಕಾಲ ನೋಡೋದಕ್ಕೆ ಸಿಕ್ತಾ ಇದ್ದಿದ್ದು ಒಂದೇ ಒಂದು ಕನ್ನಡ ಪಿಕ್ಚರ್ರು! ಈಗ ಕನ್ನಡ ಸಿನಿಮಾಗಳಿಗೆ ಅಂತಾನೇ ಚ್ಯಾನೆಲ್ ಇದೆ. ಉದಯ,ಈ ಟಿವಿ,ಸುವರ್ಣ, ಹೀಗೆ ಹತ್ತು ಹಲವು ಚ್ಯಾನೆಲ್ ಗಳಿವೆ.ಅಗತ್ಯವಿಲ್ಲದಿದ್ದರೂ ಬರೀ ನ್ಯೂಸ್ ಗೆ ಅಂತಲೇ ಐದು ಚ್ಯಾನೆಲ್ ಗಳಿವೆ ಇನ್ನೊಂದು ಬರಲು ಸಿದ್ಧವಾಗಿ ನಿಂತಿದೆ! ಇವೆಲ್ಲವೂ ನಿಂತು ಹೋಗುತ್ತಾ ?

ಕೆಲವು ವರ್ಷದ ಹಿಂದೆ ಇಂಟರ್ನೆಟ್ ನಲ್ಲಿ ಕನ್ನಡವನ್ನು ದುರ್ಬೀನು ಹಿಡಿದು ಹುಡುಕಬೇಕಾಗಿತ್ತು.ಆದರೆ ಈಗ ಕನ್ನಡದಲ್ಲಿ ಸಾವಿರಕ್ಕೂ ಹೆಚ್ಚು ಬರೀ ಬ್ಲಾಗ್ ಗಳಿವೆ. ಅವಧಿ,ಕೆಂಡಸಂಪಿಗೆ,thatskannada.com ನಂಥ ವೆಬ್ ಸೈಟ್ ಗಳಿವೆ. ಬಹುತೇಕ ಎಲ್ಲಾ ಪತ್ರಿಕೆಳೂ ತಮ್ಮ ಸ್ವಂತ ವೆಬ್ ಸೈಟ್ ಹೊಂದಿವೆ.

ಆದರೂ ಯಾಕೆ ನಮಗೆ ಇಂಥಾ ಆತಂಕ? ಇಂಗ್ಲೀಷ್ ನಿಜಕ್ಕೂ ಕನ್ನಡವನ್ನು ಕೊಂದು ಬಿಡುತ್ತಾ ? ಕನ್ನಡದ ಕಥೆ ಹೀಗಾದ್ರೆ ನನ್ನ ಮಾತೃಭಾಷೆಯಾದ ಕೊಂಕಣಿಯ ಗತಿ ಏನು, ನನ್ನ ಊರಿನ ಭಾಷೆಯಾದ ತುಳುವಿನ ಗತಿ ಏನು? ಕನ್ನಡಕ್ಕೆ ಕೊನೆ ಪಕ್ಷ ತನ್ನದೇ ಲಿಪಿ ಇದೆ ,ಪತ್ರಿಕೆಗಳಿವೆ,ಚ್ಯಾನೆಲ್ ಗಳಿವೆ ಆದರೆ ತುಳು ಕೊಂಕಣಿಗಳಿಗೆ ಅವೂ ಇಲ್ಲ! ಹೀಗಾದರೆ ಗತಿ ಏನು ?

ಆದರೆ ಈ ಪ್ರಶ್ನೆ ಅಷ್ಟು ಜಟಿಲ ಅಂತಲೂ ಅನಿಸುವುದಿಲ್ಲ ಕೆಲವೊಮ್ಮೆ.

ನನ್ನ ಪ್ರಕಾರ ಇಂಗ್ಲೀಷ್ ಅಂದರೆ ಮೊಬೈಲ್ ಫೋನ ಇದ್ದ ಹಾಗೆ. ಹಿಂದೆ ಮೊದಲ ಬಾರಿಗೆ ಮೊಬೈಲ್ ಫೋನ್ ಭಾರತಕ್ಕೆ ಬಂದಾಗ ಅದೊಂದು ಲಕ್ಷುರಿ ವಸ್ತು ಆಗಿತ್ತು. ಇನ್ ಕಮಿಂಗ್ ಗೆ ಇಪ್ಪತ್ತು ರೂ ಇದ್ದ ಕಾಲದಲ್ಲೆಲ್ಲಾ ಬರೀ ಶ್ರೀಮಂತರಷ್ಟೇ ಮೊಬೈಲ್ ಕೊಳ್ಳೋಕೆ ಸಾಧ್ಯ ಆಗ್ತಿತ್ತು. ’ಹೇ ಅವನ(ರ?) ಬಳಿ ಮೊಬೈಲ್ ಇದೆ ’ ಅನ್ನೋದು ತುಂಬಾ ಪ್ರತಿಷ್ಟೆಯ ವಿಷಯವಾಗಿತ್ತು.

ಆದರೆ ಈಗ ? ಮೊಬೈಲ್ ಅನ್ನೋದು ಒಂದು ಬೇಸಿಕ್ ನೀಡ್ ಆಗಿದೆ. ಯಾವುದೇ ಕೆಲಸ ಅಥವಾ ವಿಷಯ ಇರಲಿ, ಅದು ನಮಗೆ ಮಾಡಲು ಸಾಧ್ಯವಾಗದ ವಿಷಯ ಆಗಿದ್ದು ಅದನ್ನು ಬೇರೆಯವರು ಮಾಡಿದಾಗ ನಮಗೆ ಅದರ ಬಗೆಗೊಂದು ವಿಚಿತ್ರ ಬೆರಗು ಮೂಡುತ್ತೆ. ಸರ್ಕಸ್ ನಲ್ಲಿ ಒಬ್ಬಾತ ಹತ್ತು ಚೆಂಡನ್ನು ಒಮ್ಮೇಲೆ ಚಿಮ್ಮಿಸಿ ಆಟ ಆಡುವುದನ್ನು ನೋಡಿ ಬೆರಗುಗೊಂಡಂತೆ!

ಹಿಂದೆ ಇಂಗ್ಲೀಷ್ ವಿಷಯದ ಬಗೆಗೂ ಅಂಥದ್ದೇ ಒಂದು ಬೆರಗು ನಮಗಿತ್ತು! ಕನ್ನಡ ಮೀಡಿಯಂ ನಲ್ಲಿ ಕಲಿತ ಡಿಗ್ರಿ ಮುಗಿಸಿದಾತ ಕೂಡ ಇಂಗ್ಲೀಷ್ ಮೀಡಿಯಂನಲ್ಲಿ ಕಲಿತ ಐದನೆ ಕ್ಲಾಸ್ ಹುಡುಗನ ಇಂಗ್ಲೀಷ್ ನೋಡಿ ತನ್ನೊಳಗೇ ಕೀಳರಿಮೆಗೆ ಒಳಗಾಗುತ್ತಿದ್ದ ಕಾಲ ಅದು. ಯಾರಾದರೂ ಠಸ್ ಪುಸ್ ಅಂತ ಇಂಗ್ಲೀಷ್ ಮಾತಾಡ್ತಿದ್ರೆ ಅದನ್ನು ದೊಡ್ಡದೊಂದು ಬೆರಗಿನಿಂದ ನೋಡುತ್ತಿದ್ದ ಕಾಲ ಒಂದಿತ್ತು. ’ಅಳಿಯಂದ್ರು ಎಷ್ಟು ಚೆನ್ನಾಗಿ ಇಂಗ್ಲೀಷ್ ಮಾತಾಡ್ತಾರೆ ಗೊತ್ತಾ ? ’ ಅಂತ ಮಾವ ಹೇಳಿಕೊಂಡು ತಿರುಗಾಡ್ತಾ ಇದ್ದ ಕಾಲ ಅದು.

ಆದರೆ ಈಗ ಇಂಗ್ಲೀಷ್ ಬಗೆಗೆ ಯಾರಿಗೂ ಅಂಥ ಬೆರಗಿಲ್ಲ! ಬಹುತೇಕ ಎಲ್ಲರಿಗೂ ಈಗ ಇಂಗ್ಲೀಷ್ ಬರುತ್ತೆ. ಮಕ್ಕಳೂ ಈಗ ಇಂಗ್ಲೀಷ್ ಕಲಿತಿದ್ದಾರೆ. ಆದರೆ ಅವರಿಗೆ ಬರದೇ ಇರೋದು ಕನ್ನಡ ಮಾತ್ರ. ಈ ಮಕ್ಕಳು ಒಂದು ದಿನ ಕನ್ನಡವನ್ನು ಬೆರಗಿನಿಂದ ನೋಡೋ ಕಾಲ ಬಂದೇ ಬರುತ್ತೆ. ’hey see how fluent his/her Kannada is ‘ ಅಂತ ಹೇಳೋ ಕಾಲ ಬರುತ್ತೆ. ಆಗ ಎಲ್ಲರೂ ಕನ್ನಡವನ್ನು ಮತ್ತೆ ಪ್ರೀತಿಸಲು ಶುರು ಮಾಡ್ತಾರೆ. ಅಲ್ಲಿಯವರೆಗೆ ಕಾಯಬೇಕಷ್ಟೆ.

ನಿನ್ನದೊಂದು ಹುಚ್ಚು ಕನಸು ಅಂತೀರಾ ? ಇರಲಿ ಬಿಡಿ ಹುಚ್ಚು ಕನಸು ಕಾಣೋದ್ರಲ್ಲೂ ಒಂದು ಖುಷಿ ಇದೆ !

(ಚಿತ್ರ ಕೃಪೆ :puttiprapancha.blogspot.com)

Read more from ಲೇಖನಗಳು
17 ಟಿಪ್ಪಣಿಗಳು Post a comment
  1. Narendra's avatar
    Narendra
    ಮಾರ್ಚ್ 16 2011

    ಸಂಸ್ಕೃತಕ್ಕೆ ಆಗಿದ್ದು ಕನ್ನಡಕ್ಕೆ ಆಗುವುದಿಲ್ಲ ಎಂದು ಹೇಗೆ ಹೇಳುವುದು?
    ಇಂದು ಸಂಸ್ಕೃತ ಮಾತೃಭಾಷೆಯಿರುವ ಎಷ್ಟು ಜನರಿದ್ದಾರೆ? ಏಕೆ ಹೀಗಾಯಿತು?
    ಬೆಂಗಳೂರಿನಲ್ಲಿ ಬೆಳೆಯುತ್ತಿರುವ ಇಂದಿನ ಮಕ್ಕಳನ್ನು ನೋಡಿ. ಅವರೆಲ್ಲಾ ಇಂಗ್ಲಿಷ್ ಶಾಲೆಗೆ ಹೋಗುತ್ತಾರೆ; ಸ್ನೇಹಿತರ ಜೊತೆ ಇಂಗ್ಲಿಷಿನಲ್ಲೇ ಮಾತನಾಡುತ್ತಾರೆ.
    “ಮಗುವಿಗೆ ಇಂಗ್ಲಿಷ್ ಸರಿಯಾಗಿ ಬರುವುದಿಲ್ಲ; ಮನೆಯಲ್ಲೂ ಇಂಗ್ಲಿಷಿನಲ್ಲೇ ಮಾತನಾಡಿ” ಎಂದು ಶಾಲೆಯಿಂದ ಆಗಾಗ ಹೇಳಿಕಳುಹಿಸುತ್ತಾರೆ.
    ಸರಿ ಮತ್ತೆ, ಮನೆಯಲ್ಲೂ ಇಂಗ್ಲಿಷಿನದೇ ಮಾತು.
    ಇದೆಲ್ಲಕ್ಕೂ ಹೂರಣವಿಟ್ಟಂತೆ, ಮಗುವಿಗೆ ಕನ್ನಡದ ಕುರಿತಾಗಿ ಅಸಡ್ಡೆಯೂ ಸೇರಿಕೊಳ್ಳುತ್ತದೆ.
    ಈ ರೀತಿಯ ಮಕ್ಕಳು ದೊಡ್ಡವರಾದ ಮೇಲೆ ಕನ್ನಡವನ್ನು ಹೇಗೆ ತಾನೆ ಪ್ರೀತಿಯಿಂದ ನೋಡುತ್ತಾರೆ, ಕನ್ನಡವನ್ನು ಬಳಸುತ್ತಾರೆ?

    ಉತ್ತರ
  2. ksraghavendranavada's avatar
    ಮಾರ್ಚ್ 16 2011

    ಶೆಟ್ಟರೆ, ನಿಮ್ಮ ಕನಸು ಸೊಗಸಾಗಿದೆ. ಆದರೆ ಮು೦ದಿನ ಪೀಳೆಗೆಯವರಿಗೆ “ಬೆರಗು“ “ಅಸಡ್ಡೆ“ ಯಾಗಿ ಬದಲಾವಣೆಯಾದರೆ ಏನು ಗತಿ?
    ನಮ್ಮಲ್ಲಿಯೂ ಆ೦ಗ್ಲ ದಾ೦ಗುಡಿಯಿಡುತ್ತಿದೆ! ನನ್ನ ಮನೆಯಲ್ಲಿಯೂ ಕೂಡಾ.. ಸದ್ಯಕ್ಕೆ ಕನ್ನಡ ಮಾಧ್ಯಮಕ್ಕೇ ಶೇಷುವನ್ನು ಹಾಕಬೇಕೆ೦ಬ ವಾದ ಗೆದ್ದಿದೆ..
    ಖುಷಿ ಕೊಟ್ಟ ಲೇಖನವನ್ನು ಆಪ್ತವಾಗಿ ಓದಿಸಿಕೊ೦ಡು ಹೋಗುವ ಶೈಲಿ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ಉತ್ತರ
  3. Pramod's avatar
    ಮಾರ್ಚ್ 16 2011

    ಕನ್ನಡದ ಕ೦ದ ಕನ್ನಡವ ಕೊ೦ದ.. ವಿಪರ್ಯಾಸ.. 😦

    ಉತ್ತರ
  4. ಆಸು ಹೆಗ್ಡೆ's avatar
    ಮಾರ್ಚ್ 16 2011

    ಈ ಲೇಖನ ಬರೆದವರು ಯಾರು?

    ರಾಕೇಶ್ ಶೆಟ್ಟಿಯವರೇ ಅಥವಾ ಸಂದೀಪ ಕಾಮತರೇ?

    ಆ ಇಬ್ಬರ ಹೆಸರೂ ಇದೆ ಅಲ್ಲಿ.

    ಕನ್ನಡಿಗರು ಕನ್ನಡಿಗರಾಗಿ ಇರುವ ತನಕ ಕನ್ನಡ ನಶಿಸದು.

    ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿಯೇ ಸೂಕ್ತಿಯಾಗಲಿ.

    ಕನ್ನಡವನ್ನು ಬಳಸೋಣ, ಕನ್ನಡವನ್ನು ಬೆಳೆಸೋಣ, ಕನ್ನಡವನ್ನು ಉಳಿಸೋಣ ಹಾಗೂ ಸಾಧ್ಯವಾದರೆ ಅನ್ಯರಿಗೂ ಕನ್ನಡವನ್ನು ಕಲಿಸೋಣ.

    ಉತ್ತರ
  5. ಒಂಟಿಪ್ರೇಮಿ's avatar
    ಮಾರ್ಚ್ 16 2011

    ಕನ್ನಡ ನಶಿಸದೇ ಹಾಗೇಯೇ ಮುಂದುವರೆಯಬಹುದು. ಆದರೆ ಕನ್ನಡದಲ್ಲಿ ಹಲವಾರು ಕಂಗ್ಲೀಷ್ ಪದಗಳು ಸೇರಬಹುದು. ನಮ್ಮ ನೈಜತನ ಹಾಳಾಗಿ ಹೋಗಬಹುದು.
    ಕನ್ನಡ ವನ್ನು Kannada ಎಂದು ಬರೆಯುವ ಕಾಲವಿದು.
    ಇಂದು ನಾವು ಯಾವುದೇ ಕೆಲಸಗಳಿಗೆ ಅಪ್ಲಿಕೇಶನ್ ತುಂಬಲು ಕನ್ನಡ ಬಳಸಿದರೆ ಅದು ತಿರಸೃತವಾದಂತೆಯೇ.
    (ಉದಾಹರಣೆಗೆ ನಿಮ್ಮ ಬ್ಯಾಂಕ್ ಚಲನ್/ ಅರ್ಜಿ ಯನ್ನು ಅಪ್ಪಟ ಕನ್ನಡದಲ್ಲಿ ತುಂಬಿಕೊಡಿ ನೋಡುವ!!)

    ಅದೇನೇ ಇರಲಿ ; ಮುಂದೊಂದು ದಿನ ಆಂಗ್ಲರು ಕನ್ನಡ Tutorial ಗಾಗಿ ಗೂಗಲ್ ಹುಡುಕಲಿ

    ಉತ್ತರ
  6. Bharath Kumar's avatar
    ಮಾರ್ಚ್ 16 2011

    ಯಾವ ಬಾಶೆಯೂ ಕೊಲೆಗಡುಕ ಬಾಶೆಯಲ್ಲ್ಲ
    http://ybhava.blogspot.com/2011/03/blog-post_8100.html

    ಉತ್ತರ
  7. ರವಿ ಕುಮಾರ್ ಜಿ ಬಿ's avatar
    ರವಿ ಕುಮಾರ್ ಜಿ ಬಿ
    ಮಾರ್ಚ್ 16 2011

    ಯಾವುದೂ ಕೊಲೆಗಡುಕ ಭಾಷೆ ಖಂಡಿತಾ ಅಲ್ಲ …..ಆದರೆ ನಾವೇ ಅನ್ಯ ಭಾಷೆಯ ಬಗ್ಗೆ ಅನಗತ್ಯ ಒಲವು ತೋರಿಸಿ ಅಥವಾ ಮೂಡರಾಗಿ ಅದರ ತೆಕ್ಕೆಗೆ ಬೀಳೋದರಿಂದ ಮೂಲಭಾಷೆಯ ಅಂತ್ಯ ವಾದರೂ ಆಶ್ಚರ್ಯವಿಲ್ಲ ….
    ಸಾರ್ವಕಾಲಿಕ ಸತ್ಯ ತಿಳಿದಿರ ಬೇಕಾದದ್ದು ಅನಿವಾರ್ಯ ” ಎಲ್ಲೇ ಆದರೂ ಏನೇ ಆದರೂ ಉಪಯೋಗಿಸದೆ ಹಾಗೆ ಬಿಟ್ಟರೆ ವ್ಯರ್ಥ ಮತ್ತು ಖಂಡಿತ ನಶಿಸಿ ಹೋಗುತ್ತದೆ , ಅದು ಕನ್ನಡ ವೇ ಇರಬಹುದು ಅಥವಾ ನಮ್ಮ ದೇಹದ ಅಂಗವೇ ಇರಬಹುದು ..ಇದು ಪ್ರಕೃತಿ ನಿಯಮ ….ಹಾಗಾಗಿ ನಿಮಗೇ ಏನೇ ಉಳಿಯಬೇಕೆಂದು ಅನ್ನಿಸಿದರೆ ಅದನ್ನು ಉಪಯೋಗಿಸಲು ಕಲಿಯಿರಿ ಅಸ್ಟೇ …..ಸಿಂಪಲ್ …….????!!!!!!!

    ಉತ್ತರ
  8. bhadravathi's avatar
    bhadravathi
    ಮಾರ್ಚ್ 16 2011

    ಇಂಥ ಅಸಂಭವನೀಯತೆ ಬಗ್ಗೆ ತಲೆ ಕೆಡಿಸಿಕೊಂಡು ಜನರನ್ನು ಗಲಿಬಿಲಿಗೊಳಿಸೋದು ಒಂದು ರೀತಿಯ ಹೈಪ್. ಅಭದ್ರ, ಅತಂತ್ರ ಮನಸ್ಥಿತಿಯ ಲಕ್ಷಣ. hype monger ಗಳಿಗೆ ಕೆಲಸ ಕಡಿಮೆ, ಚೇಷ್ಟೆ ಹೆಚ್ಚು. ಜನಸಂಖ್ಯೆ ಹೀಗೇ ಮುಂದುವರಿದರೆ ಒಪ್ಪೊತ್ತಿಗೂ ತಡಕಾಡ ಬೇಕಾಗುತ್ತದೆ ಎನ್ನುವ ಹೈಪ್ ೭೦ ರ ದಶಕದಲ್ಲಿ ಇತ್ತು. ಮುಸ್ಲಿಮರ ಜನಸಂಖ್ಯೆ ಇದೇ ರೀತಿ ಮುಂದುವರೆದರೆ ಇಪ್ಪತ್ತೈದು ವರ್ಷಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ ಎಂದು ೧೯೮೦ ರಲ್ಲಿ ಒಬ್ಬ ವ್ಯಕ್ತಿ ನುಡಿದಿದ್ದ. ಕಾಲ ಸಂದ ಹಾಗೆ ಹೈಪ್ ಗಳು ಮುಗ್ಗರಿಸಿ ಬೀಳುತ್ತವೆ, ಜನರಿಗೆ ತಿನ್ನಲು ಸರ್ಪ್ಲಸ್ ಆಹಾರ ಸಿಗುತ್ತದೆ, ಮುಸ್ಲಿಮರು ಅಲ್ಪಸಂಖ್ಯಾರಾಗಿಯೇ ಉಳಿಯುತ್ತಾರೆ, ಸಾವಿರಾರು ವರ್ಷಗಳಿಂದ ರಾರಾಜಿಸುತ್ತಿರುವ ಕನ್ನಡ ಇನ್ನಷ್ಟು ರಾರಾಜಿಸುತ್ತದೆ.

    ಉತ್ತರ
    • Narendra Kumar.S.S's avatar
      Narendra Kumar.S.S
      ಮಾರ್ಚ್ 16 2011

      ಅಬ್ದುಲ್ ಅವರೇ, ” ಮುಸ್ಲಿಮರ ಜನಸಂಖ್ಯೆ ಇದೇ ರೀತಿ ಮುಂದುವರೆದರೆ ಇಪ್ಪತ್ತೈದು ವರ್ಷಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ ಎಂದು ೧೯೮೦ ರಲ್ಲಿ ಒಬ್ಬ ವ್ಯಕ್ತಿ ನುಡಿದಿದ್ದ” ಎಂದು ತಿಳಿಸಿರುವಿರಿ.
      ದಯವಿಟ್ಟು ಆ ವ್ಯಕ್ತಿ ಯಾರು? ಎಲ್ಲಿ ಆ ರೀತಿ ನುಡಿದಿದ್ದರು? ತಿಳಿಸಬಹುದೇ?
      ಮತ್ತು ಈ ವಿಷಯದ ಕುರಿತಾಗಿ ಯಾವ ಪತ್ರಿಕೆಯಲ್ಲಿ ಅಥವಾ ಬರಹದಲ್ಲಿ ಬಂದಿತ್ತು, ಎನ್ನುವುದನ್ನೂ ತಿಳಿಸುವಿರಾ?

      ಇಲ್ಲಿ ನಾವು ಚರ್ಚಿಸುತ್ತಿರುವುದು ಕನ್ನಡದ ಸ್ಥಿತಿಯ ಕುರಿತಾಗಿ.
      ಕನ್ನಡಕ್ಕೆ ಬರುತ್ತಿರುವ ಸ್ಥಿತಿ ಇಂದಿನ ವಾಸ್ತವ. ನಮ್ಮ ಕಣ್ಮುಂದೆಯೇ ಕಾಣಿಸುತ್ತಿರುವ ಸತ್ಯ.
      ಅದನ್ನು ಕೇವಲ “ಒಂದು ರೀತಿಯ ಹೈಪ್, ಅಭದ್ರ, ಅತಂತ್ರ ಮನಃಸ್ಥಿತಿಯ ಲಕ್ಷಣ” ಎಂದು ಕರೆದು ವಾಸ್ತವವನ್ನೇ ಸುಳ್ಳೆಂದು ವಾದಿಸುವುದರಿಂದ ಸತ್ಯ ಸುಳ್ಳಾಗುವುದಿಲ್ಲ.
      ಪ್ರಾಯಶಃ ಈ ಸತ್ಯ ತಮಗಿನ್ನೂ ಅನುಭವಕ್ಕೆ ಬಂದಿಲ್ಲವೆಂದು ಹೇಳಿದರೆ, ಅದು ಒಪ್ಪಬಹುದಾದ ಮಾತು.
      ಅದು ಬಿಟ್ಟು, “ದುಬೈನಿಂದ ಜಪಾನ್ ಕಾಣುತ್ತಿಲ್ಲ; ಹಾಗಾಗಿ ಅಲ್ಲಿ ಭೂಕಂಪ ನಡೆದಿಲ್ಲ” ಎಂದು ಹೇಳಿದಂತಾಗುತ್ತದೆ ತಮ್ಮ ಮಾತು.

      > ಮುಸ್ಲಿಮರು ಅಲ್ಪಸಂಖ್ಯಾರಾಗಿಯೇ ಉಳಿಯುತ್ತಾರೆ
      ಇಡೀ ದೇಶದಲ್ಲಿ ಮುಸಲ್ಮಾನರು ಬಹುಸಂಖ್ಯಾತರಾಗುವ ದಿನ ದೂರವಿರಬಹುದು.
      ಆದರೆ, ಕಾಶ್ಮೀರವನ್ನು ನೋಡಿ. ಅದು ಹಿಂದುಗಳೇ ಇದ್ದ ನಾಡಾಗಿತ್ತು; ಇಂದು ಅಲ್ಲಿ ಹಿಂದುಗಳನ್ನು ಹುಡುಕಬೇಕು.
      ಕೇರಳ, ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳಗಳ ಅನೇಕ ಜಿಲ್ಲೆಗಳು ಮುಸಲ್ಮಾನ ಬಹುಸಂಖ್ಯಾತವಾಗಿರುವುದು ತಮಗೂ ತಿಳಿದೇ ಇರಬೇಕಲ್ಲವೇ?
      ಆ ಪ್ರದೇಶಗಳಲ್ಲಿ ೧೯೪೭ರಿಂದ ಇಲ್ಲಿಯವರೆಗೆ ನಡೆದಿರುವ ಜನಗಣತಿಯ ಅಂಕಿಅಂಶಗಳನ್ನು ತೆಗೆದು ನೋಡಿ. ವಾಸ್ತವ ಅರಿವಾಗುವುದು.
      ಯಾವ ರೀತಿಯಲ್ಲಿ ಮುಸಲ್ಮಾನರ ಜನಸಂಖ್ಯೆ ಹೆಚ್ಚಿದೆ, ಹಿಂದುಗಳ ಜನಸಂಖ್ಯೆ ಕಡಿಮೆಯಾಗಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಆಧಾರ ಬೇಕಿಲ್ಲ.
      ಹಿಂದುಗಳೇ ಬಹುಸಂಖ್ಯಾತರಾಗಿದ್ದ ಬಲೂಚಿಸ್ಥಾನ, ಗಾಂಧಾರ, ತಕ್ಷಶಿಲೆ, ಪಂಜಾಬ್, ಪೂರ್ವ ಬಂಗಾಳ, ಕರಾಚಿ, ಲಾಹೋರ್, ಪೇಶಾವರಗಳು ಮುಸಲ್ಮಾನ ಬಹುಸಂಖ್ಯಾತವಾಗಿರುವ ಪಾಕಿಸ್ತಾನ-ಬಾಂಗ್ಲಾದೇಶ-ಆಫ಼್ಘಾನಿಸ್ಥಾನಗಳಾಗಿದ್ದು ಹಿಂದುಗಳ ಜನಸಂಖ್ಯೆ ಕಡಿಮೆಯಾಗಿ, ಮುಸಲ್ಮಾನರ ಜನಸಂಖ್ಯೆ ಹೆಚ್ಚಾಗಿ ಅಲ್ಲವೇ?
      ಸಹಜವಾಗಿ ಮುಸಲ್ಮಾನರ ಜನಸಂಖ್ಯೆ ಹೆಚ್ಚುವುದರ ಬಗ್ಗೆ ಯಾರದೂ ವಿರೋಧವಿರುವುದಿಲ್ಲ.
      ಆದರೆ, ಅದರ ಪರಿಣಾಮವಾಗಿ ಭಾರತವು ಮತ್ತೊಮ್ಮೆ ವಿಭಜನೆಗೊಂಡು ಮತ್ತೊಂದು ಪಾಕಿಸ್ತಾನವೋ, ಆಫ಼್ಘಾನಿಸ್ಥಾನವೋ, ಬಾಂಗ್ಲಾದೇಶವೋ ಹುಟ್ಟುತ್ತದೆಂದರೆ ಅದನ್ನು ಎಲ್ಲರೂ (ನಿಮ್ಮನ್ನೂ ಸೇರಿಸಿ) ವಿರೋಧಿಸಬೇಕಾಗುತ್ತದೆ.
      ಇಂದು ಕಾಶ್ಮೀರವೂ ಭಾರತದಿಂದ ಬೇರೆಯಾಗಬೇಕೆಂದು ಬಯಸುತ್ತಿರುವುದು ಮುಸಲ್ಮಾನ ಜನಸಂಖ್ಯೆ ಹೆಚ್ಚಿದೆ ಎಂಬ ಕಾರಣಕ್ಕೇ ಅಲ್ಲವೇ?
      ಅದೇ ಸ್ಥಿತಿ, ಮುಂದಿನ ದಿನಗಳಲ್ಲಿ ಅಸ್ಸಾಂನಲ್ಲೂ ಬಂದೊದಗಿದರೆ ಏನು ಗತಿ?

      ಉತ್ತರ
  9. bhadravathi's avatar
    bhadravathi
    ಮಾರ್ಚ್ 16 2011

    ನರೇಂದ್ರ, ೧೯೮೦ ರಲ್ಲಿ ಒಂದು ಸಾರ್ವಜನಿಕ ಸಭೆಯಲ್ಲಿ ಈ ಮಾತನ್ನು ಓರ್ವ ಮುಖಂಡ ಹೇಳಿದ್ದ. ಇದನ್ನು ೧೯೮೦ ರಲ್ಲಿ ಮಾತ್ರವಲ್ಲ, ಪದೇ ಪದೇ ಕೇಳುತ್ತಿದ್ದೇವೆ, ಅದನ್ನು ನಂಬಿ ಜನ ಗೋಣು ಹಾಕುತ್ತಿದ್ದಾರೆ ಸಹ. ಇಂಟರ್ನೆಟ್ ಆವಿಷ್ಕಾರದ ನಂತರ ಈ ಮಾತನ್ನು ಹೇಳುತ್ತಿದ್ದರೆ ಗೂಗ್ಲಿಸಬಹುದಿತ್ತು.
    ಕಾಶ್ಮೀರದ ಬಗ್ಗೆ Nitasha Kaulಸುಂದರವಾಗಿ ಬರೆದಿದ್ದಾರೆ, ಲೇಖನಕ್ಕಾಗಿ ಗೂಗ್ಲಿಸಿ ನೋಡಿ. ಈಗ ಇದನ್ನು ಬರೆದ ಲೇಖಕಿ, ಲೆಫ್ಟಿಸ್ಟ್, centrist, ಅಪೋಲೋಜಿಸ್ಟ್ ಎಂದು ಗುಡಿಸಿ ಮುಗ್ಧತೆಯ ಚಾಪೆ ಅಡಿಗೆ ತಳ್ಳಬೇಡಿ.ಕಾಶ್ನ್ಮೀರದವೇ ಆದ Dr. K. Jamanadas ಸಹ ಕಾಶ್ಮೀರದ ಬಗ್ಗೆ ಬರೆದಿದ್ದಾರೆ, ನರೇಂದ್ರ. ಮುಸ್ಲಿಮರು ಹೆಚ್ಚಿದ್ದ ಮಾತ್ರಕ್ಕೆ ಅವರು ಪ್ರತ್ಯೇಕತೆ ಬಯಸುತ್ತಾರೆ ಎನ್ನುವುದು ಎಲ್ಲಾ ಸಂದರ್ಭದಲ್ಲೂ ನಿಜವಲ್ಲ. ಹಾಗೆ ನೋಡಿದರೆ ಶ್ರೀಲಂಕೆಯಲ್ಲಿ ಹಿಂದೂಗಳು ಈಗಲೂ ಹೊರಾಡುತ್ತಿಲ್ಲವೇ ತಮ್ಮದೇ ಆದ ಈಳಂ ಗಾಗಿ?
    ಇಸ್ಲಾಂ ಯಾವ ರೀತಿ ಶಾಂತಿಯುತವಾಗಿ ವಿಶ್ವದೆಲ್ಲೆಡೆ ಹರಡಿತು ಎಂದು 1896 ರಲ್ಲಿ “The Spread of Islam in the World: A History of Peaceful Preaching” ಎನ್ನುವ Professor Thomas Arnold ಬರೆದ ಪುಸ್ತಕ ಓದಿದರೆ ಇನ್ನಷ್ಟು ವಿಷಯಗಳನ್ನು ಅರಿತು ಕೊಳ್ಳ ಬಹುದು.

    ಉತ್ತರ
    • ರಾಕೇಶ್ ಶೆಟ್ಟಿ's avatar
      ಮಾರ್ಚ್ 16 2011

      ಅಬ್ದುಲ್,
      ನಿಮ್ಮ ಅನಿಸಿಕೆಯನ್ನ ಬೇರೊಂದು ಲೇಖನವನ್ನಾಗಿ ನಿಲುಮೆಗೆ ಬರೆಯಿರಿ 🙂
      ಸದ್ಯ, ಈ ಲೇಖನದ ಚರ್ಚೆ ಹಳಿ ತಪ್ಪದಿರಲಿ ಅಂತಷ್ಟೇ! 🙂

      ಉತ್ತರ
  10. Narendra's avatar
    Narendra
    ಮಾರ್ಚ್ 17 2011

    ರಾಕೇಶ್ ಶೆಟ್ಟಿಯವರಂದಂತೆ ವಿಷಯಾಂತರ ಮಾಡುವುದು ಬೇಡ.
    ಆದರೂ, ನೀವೆತ್ತಿದ ವಿಷಯಕ್ಕೆ ಒಂದೆರಡು ವಾಕ್ಯದಲ್ಲಿ ಉತ್ತರಿಸುತ್ತೇನೆ.

    ಕಾಶ್ಮೀರಕ್ಕೆ ಸಂಬಂಧಿಸಿದಂತೆ, ಕಾಶ್ಮೀರದ ರಾಜ್ಯಪಾಲರಾಗಿದ್ದ ಜಗಮೋಹನ್ ಅವರು ಬರೆದಿರುವ, ಮತ್ತು ಕನ್ನಡಕ್ಕೂ ಅನುವಾದಗೊಂಡಿರುವ “ಕಾಶ್ಮೀರದ ಆಕ್ರಂದನ” ಪುಸ್ತಕವನ್ನು ಸಾಧ್ಯವಾದರೆ ಓದಿ ನೋಡಿ.

    > ಹಾಗೆ ನೋಡಿದರೆ ಶ್ರೀಲಂಕೆಯಲ್ಲಿ ಹಿಂದೂಗಳು ಈಗಲೂ ಹೊರಾಡುತ್ತಿಲ್ಲವೇ ತಮ್ಮದೇ ಆದ ಈಳಂ ಗಾಗಿ?
    ಶ್ರೀಲಂಕಾದ ಎಲ್.ಟಿ.ಟಿ.ಇ ಹೋರಾಟಕ್ಕೆ ಸಂಬಂಧಿಸಿದಂತೆ:
    ಮೊದಲನೆಯದಾಗಿ ಅದು ಶ್ರೀಲಂಕಾದ ತಮಿಳರ ಹೋರಾಟ. ಅದು ಹಿಂದುಗಳು ನಡೆಸುತ್ತಿರುವ ಪ್ರತ್ಯೇಕತಾ ಚಳುವಳಿಯಲ್ಲ.
    ಎರಡನೆಯದಾಗಿ, ಆ ಹೋರಾಟದ ಹಿಂದಿರುವ ಶಕ್ತಿ ಕ್ರೈಸ್ತ ಚರ್ಚ್.
    ಅಕಸ್ಮಾತ್ ಹಿಂದುಗಳೇ ಈ ರೀತಿ ಜಗತ್ತಿನ ಯಾವುದೇ ಭಾಗದಲ್ಲೂ, ಯಾವುದೇ ಸಮಯದಲ್ಲೂ “ಪ್ರತ್ಯೇಕತಾ ಚಳುವಳಿ” ನಡೆಸಿದರೆ, ಅದನ್ನು ಯಾವ ಹಿಂದುವೂ ಸಮರ್ಥಿಸುವುದಿಲ್ಲ.

    > ಇಸ್ಲಾಂ ಯಾವ ರೀತಿ ಶಾಂತಿಯುತವಾಗಿ ವಿಶ್ವದೆಲ್ಲೆಡೆ ಹರಡಿತು ಎಂದು
    ಯಾವ ಪುಸ್ತಕವೂ ಬೇಡ. ಇತಿಹಾಸದ ಈ ಘಟನೆಗಳಿಗೆ ಉತ್ತರ ಕೊಟ್ಟುಬಿಡಿ, ಸಾಕು:
    ೧. ಗುರು ತೇಗಬಹದ್ದೂರರನ್ನು ದೆಹಲಿಯ ಚಾಂದನಿ ಚೌಕದಲ್ಲಿ ಗಲ್ಲಿಗೇರಿಸಿದ್ದು ಯಾವ ರಾಜನ ಆಜ್ಞೆಯ ಮೇರೆಗೆ ಮತ್ತು ಏತಕ್ಕಾಗಿ?
    ೨. ಎಳೆವಯಸ್ಸಿನ ಝೋರಾವರ್ ಸಿಂಗ್ ಮತ್ತು ಪತೇ ಸಿಂಗ್ ಅವರನ್ನು ಸಜೀವ ಸಮಾಧಿ ಮಾಡಿದ್ದು ಯಾರು ಮತ್ತು ಯಾವ ಪುರುಷಾರ್ಥಕ್ಕಾಗಿ?
    ಈ ರೀತಿಯ ಸಹಸ್ರಾರು ಉದಾಹರಣೆಗಳು ಇತಿಹಾಸದುದ್ದಕ್ಕೂ ಸಿಗುತ್ತಲೇ ಹೋಗುತ್ತದೆ.

    > ಮುಸ್ಲಿಮರು ಹೆಚ್ಚಿದ್ದ ಮಾತ್ರಕ್ಕೆ ಅವರು ಪ್ರತ್ಯೇಕತೆ ಬಯಸುತ್ತಾರೆ ಎನ್ನುವುದು ಎಲ್ಲಾ ಸಂದರ್ಭದಲ್ಲೂ ನಿಜವಲ್ಲ.
    ಇದು ನಿಜವಾಗಿರಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
    ಆದರೆ, ನಾವು ಕಾಣುತ್ತಿರುವ ಪ್ರದೇಶಗಳಲ್ಲೆಲ್ಲಾ ಪ್ರತ್ಯೇಕತೆಯನ್ನೇ ಕಾಣುತ್ತಿರುವುದರಿಂದ, ಈ ರೀತಿಯ ಪ್ರಶ್ನೆ ಏಳುವುದು ಸಹಜ.
    ಉದಾಹರಣೆಗೆ, ಕರ್ನಾಟಕದ ಭಟ್ಕಳದಲ್ಲಿ “ಪಾಕಿಸ್ತಾನಕ್ಕೆ ಸ್ವಾಗತ” ಧ್ವಜ ಹಾರಾಡಿತ್ತು. ಇದನ್ನು ಯಾವ ಮುಸಲ್ಮಾನ ನಾಯಕರೂ ಖಂಡಿಸದಿರುವುದು ಪ್ರತ್ಯೇಕತೆಯನ್ನು ಮುಸಲ್ಮಾನ ಸಮಾಜ ಬೆಂಬಲಿಸುತ್ತದೆ ಎನ್ನುವ ಭಾವನೆ ಬೆಳೆಯುತ್ತದೆ!
    ಈ ಚರ್ಚೆಯಲ್ಲೂ ಸಹ, ನೀವೆಲ್ಲೂ ಸಹ, ಮುಸಲ್ಮಾನ ಬಾಹುಳ್ಯದ ಪ್ರದೇಶಗಳಲ್ಲಿ ಪ್ರತ್ಯೇಕತೆಗೆ ಉತ್ತೇಜನ ನಡೆದಿದೆ ಎಂದು ಒಪ್ಪುತ್ತಿಲ್ಲ ಮತ್ತು ಆ ರೀತಿ ನಡೆದಿದ್ದರೆ ಅದು ತಪ್ಪು ಎಂದೂ ಹೇಳುತ್ತಿಲ್ಲ.
    ಬದಲಿಗೆ, ” ಶ್ರೀಲಂಕೆಯಲ್ಲಿ ಹಿಂದೂಗಳು ಈಗಲೂ ಹೊರಾಡುತ್ತಿಲ್ಲವೇ ತಮ್ಮದೇ ಆದ ಈಳಂ ಗಾಗಿ” ಎಂದು ಹೇಳಿ, ಪರೋಕ್ಷವಾಗಿ ಮುಸಲ್ಮಾನರ ಹಿಂಸಾಚಾರವನ್ನು ಸಮರ್ಥಿಸುತ್ತಿದ್ದೀರಿ.

    ಉತ್ತರ
  11. ksraghavendranavada's avatar
    ಮಾರ್ಚ್ 17 2011

    ಕನ್ನಡ ಭಾಷೆಯ ಇ೦ದಿನ ಹೀನಾಯ ಸ್ಥಿತಿಯ ಬಗ್ಗೆಗಿನ ಚರ್ಚೆಯೊ೦ದು ಹಿ೦ದೂ-ಮುಸಲ್ಮಾನರ ಚರ್ಚೆಯಾಗಿ ಬದಲಾಗುತ್ತಿರುವುದು ಅತ್ಯ೦ತ ಬೇಸರ ತ೦ದಿದೆ! ಹತ್ತು ಹಲವಾರು ವಿಷಯಗಳನ್ನು ಒ೦ದೇ ಚರ್ಚೆಯ ಅಡಿಗೆ ತರುವುದು ಸ೦ಸತ್ತನ್ನು ನೆನಪಿಸುತ್ತದೆ! ಚರ್ಚೆ ಹಾದಿ ತಪ್ಪದ೦ತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಚರ್ಚಾಪಟುವಿನ ಕರ್ತವ್ಯ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ಉತ್ತರ
    • Narendra Kumar.S.S's avatar
      Narendra Kumar.S.S
      ಮಾರ್ಚ್ 17 2011

      ನಾವಡರೆ,

      ಒಪ್ಪುವಂತ ಮಾತನ್ನು ಹೇಳಿದ್ದೀರಿ.
      ನನ್ನಿಂದ ಅಚಾತುರ್ಯವಾಗಿದ್ದರೆ ದಯವಿಟ್ಟು ಕ್ಷಮಿಸಿ.

      ಉತ್ತರ
  12. vageesh's avatar
    vageesh
    ಜನ 26 2012

    sariyagiye barediddiri nimma abhiprayavannu naanu opputtene.

    ಉತ್ತರ

Leave a reply to ksraghavendranavada ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments