ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 19, 2011

5

ಈ ಸಾವು ನ್ಯಾಯವೇ?

‍ನಿಲುಮೆ ಮೂಲಕ

– ರೂಪ ರಾವ್

ಮೊನ್ನೆಯ ಬೆಂಗಳೂರು ಮಿರರ್ ಪತ್ರಿಕೆಯಲ್ಲಿ ಓದಿದ ಸುದ್ದಿಯೊಂದು ಮನಸನ್ನ್ನು ಗಾಢವಾಗಿ ಕಾಡಿತು. ಸಯೋನಿ ಚಟರ್ಜಿ ಎಂಬ ಹನ್ನೊಂದರ ಮುದ್ದು ಬಾಲೆಯ ಫೋಟೊ ನೋಡುತ್ತಿದ್ದಂತೆ ಮನಸು ಕಲಕಿತು.

ಈ ಘ್ಹಟನೆ ನಡೆದದ್ದು ಮುಂಬೈನ ಉಲ್ಹಾಸ್ ನಗರದ ಶಾಲೆಯೊಂದರಲ್ಲಿ.
ಹನ್ನೊಂದು ವರ್ಷದ ಸಯೋನಿ ತನ್ನ ಸಹಪಾಠಿಯೊಬ್ಬನ ಜೊತೆ ಹೊಂದಿದ್ದ ಸಂಬಂಧದ ಬಗ್ಗೆ ತನ್ನ ಡೈರಿಯಲ್ಲಿ ಬರೆಯುತ್ತಿದ್ದಳು.ಎಲ್ಲರಿಗೂ ಗೊತ್ತು ಇದೊಂದು ಹದಿವಯಸಿನ ಆಕರ್ಷಣೆ. ನಮಗೆಲ್ಲಾ ಹದಿನಾರರಲ್ಲಿ ಶುರುವಾಗಿದ್ದು ಈ ಬಾಲೆಗೆ ಹನ್ನೊಂದಕ್ಕೆ ಶುರುವಾಗಿತ್ತು.ಇದು ಅಂದು ಅವಳ ತಾಯಿಯಕಣ್ಣಿಗೆ ಬಿತ್ತು . ಆ ತಾಯಿ ಮಗಳನ್ನುಈ ಸಂಬಂಧ ತರಾಟೆ ತೆಗೆದುಕೊಂಡು ಬೈದಿದ್ದಾರೆ.
ಆಷ್ಟಕ್ಕೆ ಸುಮ್ಮನಾಗಬಹುದಿತ್ತು.ಆದರೆ ಈ ವಿಷಯವನ್ನು ಕ್ಲಾಸ್ ಟೀಚರ್ ಹಾಗು ಹೆಡ್ ಮಿಸ್‌ ಜೊತೆ ಮಾತಾಡುತ್ತೇನೆ ಎಂದು  ಸಯೋನಿ ಶಾಲೆಗೆ ಹೊರಟರು ಅವಳ ತಾಯಿ
ಮೊದಲೇ ಎಳೆ ಮನಸು.ಶಾಲೆಯಲ್ಲಾಗುವ ಅವಮಾನವನ್ನು ತಾಳಲಾರದಾಯ್ತೇನೊ. ತನ್ನ ಸಹಪಾಠಿಗೆ ಈ ವಿಷಯವನ್ನು ಪತ್ರದ ಮೂಲಕ ತಿಳಿಸಿದ್ದಾಳೆ.
ಆ ಪತ್ರವನ್ನು ಓದುತ್ತಿದ್ದರೆ ಎಳೆ ಮನಸಿನಲ್ಲಾಗುತ್ತಿದ್ದ ತಳಮಳವನ್ನು ಊಹಿಸಬಹುದು.ಇತ್ತ ತಾಯಿಯನ್ನೂ ಬೇಡವೆಂದು ಕೇಳಿಕೊಂಡರೂ ತಾಯಿ ಕೇಳುತ್ತಿಲ್ಲ , ಪ್ರಿನ್ಸಿಪಾಲ್ ‌ಅನ್ನು ಭೇಟಿ ಮಾಡಲೇಬೇಕೆಂದು ಆ ತಾಯಿ ಕಾಯುತ್ತಿದ್ದರು.ಇತ್ತ ಮಗು ಮನೆಗೆ ಬಂದು ನೇಣು ಹಾಕಿಕೊಂಡಿತ್ತು.
ಅಷ್ಟಕ್ಕೂಮಗುವಿನ ತಪ್ಪಾದರೂ ಏನಿತ್ತು. ಟಿವಿ, ಸಿನಿಮಾ, ಸುಲಭವಾಗಿ ಸಿಗುವ ಬೇಕಾದ ಬೇಡದಮಾಹಿತಿಗಳು ಆ ವಯಸಿನಲ್ಲಿಯೇ ಮಗುವಿನ  ತಿಳಿ ಮನಸನ್ನು ಕದಡಿದ್ದು ನಿಜವಿರಬಹುದು.
ಆ ತಾಯಿ ಕೊಂಚ ಮಗುವನ್ನು ಕೌನ್ಸೆಲ್ ಮಾಡಿ ಸಮಸ್ಯೆಯನ್ನು ತಿಳಿಗೊಳಿಸಬಹುದಿತ್ತು. ಆದರೆ ಆಕೆ ಮಾಡಿದ್ದು ಗಾಯದ ಮೇಲೆ ಬರೆ ಎಳೆಯುವ ಕೆಲಸ. ಅರಿಯದೆ ತನ್ನ ಮಗುವಿನ ಸಾವಿಗೆ ತಾನೆ ಕಾರಣರಾದರು.
ಏನೇ ಆಗಲಿ ಇಂದಿನ  ಬಾಲಕಿಯರು ಹದಿನಾಲ್ಕಕ್ಕಲ್ಲ ಬದಲಾಗಿ  ಒಂಬತ್ತು  ಹತ್ತು ಹನ್ನೊಂದು ವರ್ಷಗಳಿಗೆ  ಅರೆ ಯುವತಿಯರಾಗುತ್ತಿದ್ದಾರೆ.ಆ ಮುಗ್ಧತೆ ಮಾಯವಾಗುತ್ತಿದೆ.ಜೊತೆಗೆ ಕುತೂಹಲವೂ ಹೆಚ್ಚುತ್ತಿದೆ. ಈ ಸಂಧಿಗ್ದ ಪರಿಸ್ಥಿತಿಯಲ್ಲಿ ನಾವುಗಳು ಅಂದರೆ ಪೋಷಕರು ಅವರುಗಳಿಗೆ ಆಕರ್ಷಣೆ ಮುಂತಾದುವುಗಳನ್ನು ಬಹು ಬೇಗನೇ ಹೇಳಿಕೊಡಬೇಕಾದ ಅವಶ್ಯಕತೆಯೂ ಹೆಚ್ಚುತ್ತಿದೆ.
ತೀರ ಶಿಸ್ತು, ತೀರಾ ಮುಕ್ತತೆ ಎರೆಡೂ ಒಳ್ಳೆಯದಲ್ಲ.ಜೊತೆಗೆ ಮಕ್ಕಳನ್ನು ಸ್ನೇಹಿತರಂತೆ ಕಾಣಲೇಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದಲ್ಲಿ ನಮ್ಮ ಮಕ್ಕಳು ನಮ್ಮ ಕೈತಪ್ಪಿ ಹೋಗುತ್ತಾರೆ. ಅದೂ ತಪ್ಪಿ ಹೋಗ ಬಾರದ ವಯಸಿನಲ್ಲಿ ಅಥವ ಸಯೋನಿಯಂತೆ ಸಾವಿಗೆ ಶರಣಾಗುತ್ತಾರೆ.
ಏನೇ ಆದರೂ ಇನ್ನೂ ಮನಸಲ್ಲಿ ಆ ಮಗುವಿನ ಚಿತ್ರ ಕಣ್ಣಿಗೆ ಕಟ್ಟುತ್ತಿದೆ
ಜೊತೆಗೇ ಅನ್ನಿಸುತ್ತಿರುವುದು
ಈ ಸಾವು ನ್ಯಾಯವೇ?
(ಚಿತ್ರ ಕೃಪೆ :dramaya.deviantart.com)
5 ಟಿಪ್ಪಣಿಗಳು Post a comment
  1. Bindu's avatar
    Bindu
    ಮಾರ್ಚ್ 19 2011

    ಓಹ್!! ಆ ತಾಯಿಗೆ ತನ್ನ ತಪ್ಪಿನ ಅರಿವಾಯಿತೋ ಅಥವಾ ಇಲ್ಲವೋ!! ತಾಯಂದಿರು ಮಕ್ಕಳಿಗೆ ಕೇಳಿದ್ದೆಲ್ಲಾ ಕೊಡಿಸುತ್ತಾರೆ, ಆದರೆ ಅವರೊಂದಿಗೆ ತಾವೂ ಬೆಳೆಯುವುದಿಲ್ಲ. ಅವರು ನೋಡುವ ಚಿತ್ರಗಳನ್ನು ನಾವು ನೋಡಬೇಕು, ಮಕ್ಕಳು ಓದುವ ಪುಸ್ತಕಗಳು, ಅಂತರ್ಜಾಲದಲ್ಲಿ ವ್ಯವಹರಿಸುವ ರೀತಿ, ಗೆಳೆಯರೊಂದಿಗೆ ಅವರ ಮಾತುಕತೆ ಎಲ್ಲದರಲ್ಲೂ ನಾವು ಸ್ನೇಹಿತರೆಂತೆ ಬೆರೆತರೆ ಮಾತ್ರ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಲು ಸಾಧ್ಯ. ನನ್ನ ಮೂರು ವರ್ಷದ ಮಗಳು ಹೃದಯದ ಚಿತ್ರ ನೋಡಿದರೆ ನೋಡಮ್ಮ I LOVE U ಅಂತ ಇದೆ ಅನ್ನುತಾಳೆ.
    ನಂಗೆ ನೀನು ಅಂದ್ರೆ ಇಷ್ಟ ನಿಮ್ಮ ಅಪ್ಪ ಇಷ್ಟ ಇಲ್ಲ ಅಂತ ಒಂದು ದಿನ ಹೇಳಿದೆ. ಅದಕ್ಕೆ ಅವಳು ನಂಗೆ ನಿಂಗೆ ಮದುವೆ, ಅಪ್ಪಂಗೆ ಮದುವೆ ಇಲ್ಲ ಅಲ್ವಾ ಎಂದಳು!!
    ನಾವು ಮೂರು ವರ್ಶವಿದ್ದಾಗ ಹಾಗೆ logical ಆಗಿ ಯೋಚಿಸುತಿದ್ದೆವಾ?
    Parenting is not something which everybody can do with ease..but everybody becomes a parent.. thats the problem!!

    ಉತ್ತರ
  2. pavan's avatar
    ಮಾರ್ಚ್ 19 2011

    lekana odi maruka untaitu che ella tande taiyandiru gambiravagi yaochane madalebekada visaya

    ಉತ್ತರ
  3. sandhya's avatar
    ಮಾರ್ಚ್ 20 2011

    oh,,, tumba bejaaru aaytu.

    ಉತ್ತರ
  4. umesh desau's avatar
    ಮಾರ್ಚ್ 21 2011

    sir, the event is unfortunate. these days with families who do not have eldeer people in home is very difficult to manage. it is easy now say the mother could have acted differntly.but parenting is not a easy cup of tea. i do have a 10 year old girl and after reading this i have to be extra caredul..

    ಉತ್ತರ
  5. ಆಸು ಹೆಗ್ಡೆ's avatar
    ಮಾರ್ಚ್ 21 2011

    ಸಾವು ನ್ಯಾಯವೇ?
    ಇಲ್ಲಿ. ಎದೇ ಎಂದೇನು, ಯಾವ ಸಾವೂ ನ್ಯಾಯವಲ್ಲ.
    ಇಲ್ಲಿ ಸಮಸ್ಯೆ ಏನೆಂದರೆ ಹದಿಹರಯದ ಮಕ್ಕಳ ಮನಸ್ಸನ್ನು ಅರಿಯದ ಮಾತಾಪಿತರು,ತಮ್ಮ ಮೂಗಿನ ನೇರಕ್ಕೇ ಯೋಚಿಸುತ್ತಾ, ಎಲ್ಲಾ ತಾವೆಣಿಸಿದಂತೆಯೇ ನಡೆಯಬೇಕೆಂದು ಬಯಸುವುದೇ ಆಗಿದೆ.
    ಇದರಲ್ಲಿ, ತಾಯಂದಿರ ಪಾತ್ರ ಹಿರಿದು.
    ಪತ್ತೇದಾರಿ ಕೆಲಸ ಮಾಡುವ ತಮ್ಮ ಕೆಲಸವನ್ನು ತಮ್ಮ ಜಾಣ್ಮೆ ಎಂದೇ ತಿಳಿದುಕೊಂಡು, ಹಾಗೆ ತಿಳಿದ ವಿಷಯಗಳನ್ನು ಗಾಳಿಗೆ ಹಾರಬಿಡುವ ಅಪ್ರೌಢ ಮನಸ್ಥಿತಿಯಿಂದ ತಾಯಂದಿರು ಹೊರಗೆ ಬರಬೇಕು.
    ಓರ್ವ ಹೆಣ್ಣುಮಗಳನ್ನು ತಾಯಿಯ ಚೆನ್ನಾಗಿ ಅರಿಯುತ್ತಾಳೆ ಎನ್ನುವ ನಿರೀಕ್ಷೆ ಅಷ್ಟೇನೂ ಸರಿಯಲ್ಲ.
    ಮಗಳ ವಯಸ್ಸಿನ ಸಮಸ್ಯೆಗಳನ್ನು ಅರಿತು, ಮಗಳಿಗೆ ಮನವರಿಕೆಮಾಡಸಿ, ಸರಿದಾರಿಗೆ ತರುವಲ್ಲಿ, ತಂದೆಯ ಪಾತ್ರ ಚೆನ್ನಾಗಿ ಕೆಲಸ ಮಾಡುತ್ತದೆ.
    ಆದರೆ ಆ ಸ್ವಾತಂತ್ರ್ಯವನ್ನು ತಂದೆಗೆ ತಾಯಂದಿರು ನೀಡಬೇಕು ಅಷ್ಟೇ.
    ಅಲ್ಲೂ ತಮ್ಮದೇ ನಿರ್ಧಾರಗಳನ್ನು ಜಾರಿಮಾಡಲು ಹೋದರೆ, ಹೀಗೆಯೇ ಆಗುವುದು…!
    -ಆಸು

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments