ಪಕ್ಷಗಳ ಆಟಕ್ಕೆ ಜನರ ಹಣವೇಕೆ ಬಲಿ?
– ರಾಕೇಶ್ ಶೆಟ್ಟಿ
ಮತ್ತೆ ೩ ಕ್ಷೇತ್ರಗಳಲ್ಲಿ ಉಪಚುನಾವಣೆ ಬಂದು ನಿಂತಿದೆ.ಮೊದಲೆಲ್ಲ ಜನಪ್ರತಿನಿಧಿಗಳ ಮರಣದಿಂದಾಗಿಯೇ ಉಪಚುನಾವಣೆಗಳು ನಡೆಯುತಿದ್ವು.ಅದರ ನಡುವೆ ನಮ್ಮ ಚುನಾವಣ ಆಯೋಗದ
ತಲೆ ಕೆಟ್ಟ ಒಂದು ಕಾನೂನು ಇದ್ಯಲ್ಲ : ’ಒಂದೇ ಕಾಲದಲ್ಲಿ ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಬಹುದು’ ಅಂತ.ಅದೂ ಕೂಡ ಕೆಲವೊಮ್ಮೆ ಉಪಚುನಾವಣೆಗೆ ಕಾರಣವಾಗಿದ್ದಿದೆ.ಉದಾಹರಣೆಗೆ ಸೋನಿಯ ಮೇಡಂ ಬಳ್ಳಾರಿಲಿ ಗೆದ್ದು ’ಕೈ’ ಎತ್ತಿ ಹೊರಟಿದ್ದು ಗೊತ್ತಿದೆ ಅಲ್ವಾ?
ನಮ್ ದೇವೆಗೌಡ್ರು ಪ್ರಧಾನಿ ಕುರ್ಚಿಯಿಂದ ಇಳಿದು ಬಂದ್ಮೇಲೆ ಎದುರಿಸಿದ ಲೋಕಸಭಾಚುನಾವಣೆಯಲ್ಲಿ ಹಾಸನದಿಂದ ಸ್ಪರ್ಧಿಸಿ ಸೋತು,ಆ ನಂತರ ಕನಕಪುರದಲ್ಲಿ ನಡೆದ ಉಪಲೋಕಸಭೆ ಚುನಾವಣೆಯಲ್ಲಿ ಗೆದ್ದು ಬಂದಿದ್ರು.ಆ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಹಾಸನ ಮತ್ತೆ ಕನಕಪುರ ಎರಡೂ ಕ್ಷೇತ್ರದಿಂದ ಸ್ಪರ್ಧಿಸಿದ್ರು.ಒಂದು ವೇಳೆ ಎರಡೂ ಕಡೆ ಗೆದ್ದಿದ್ರೆ ಹಾಸನ ಕೈ ಬಿಡ್ತಾ ಇದ್ರೂ ಅಂತ ಆಗ ಜನ ಮಾತಡಿಕೊಳ್ತಾ ಇದ್ರು.ದೇವರ ದಯೆ ಹಾಸನದಲ್ಲಿ ಮಾತ್ರ ಗೆದ್ರು! 🙂
ದೇವರ ದಯೆ ಅಂತ್ಯಾಕ್ ಹೇಳ್ದೆ ಅಂದ್ರೆ, ಹೀಗೆ ಎರಡೂ ಕಡೆ ನಿಂತೂ ಎರಡೂ ಕಡೆ ಗೆದ್ರೆ, ಅವ್ರು ಒಂದು ಕ್ಷೇತ್ರವನ್ನ ಬಿಟ್ಟುಕೊಡಲೇಬೇಕಲ್ವಾ? ಆಗ ತೆರವಾದ ಸ್ಥಾನಕ್ಕೆ ಮತ್ತೊಮ್ಮೆ ಉಪಚುನಾವಣೆ ಬಂದು ನಿಲ್ಲುತ್ತೆ. ಮತ್ತೆ ನಮ್ಮ ಜನರು ಬೆವರು ಸುರಿಸಿದ ತೆರಿಗೆ ಹಣ ಪೋಲು ಆಗೋದಿಲ್ವಾ?
ಈ ಬಾರಿಯ ಬಿಜೆಪಿ ಸರ್ಕಾರ ಬಂದು ಆಪರೇಶನ್ ಕಮಲ ಅಂತ ಹೇಳಿಕೊಂಡು ಮಾಡಿದ್ದು ಜನರ ತೆರಿಗೆ ಹಣದ ಆಪರೇಶನ್ ಅಲ್ವಾ?… ಈ ಮಧ್ಯೆ ಕುಮಾರಸ್ವಾಮಿಯವ್ರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂ.ಪಿ ಆದ್ರು,ಈಗ ಮತ್ತೆ ಚನ್ನಪಟ್ಟಣ ಉಪಚುನಾವಣೆಗೆ ನಿಲ್ತಾ ಇದ್ದರೆ.ಅಲ್ಲಿ ಗೆದ್ರೆ ಮತ್ತೆ ಲೋಕಸಭೆಯ ಸ್ಥಾನಕ್ಕೆ ಉಪಚುನಾವಣೆ ನಡಿಬೇಕಲ್ವಾ?…
ಮತ್ತೆ ಕತ್ರಿ ಬೀಳೊದು ಜನರ ಸಾಮನ್ಯರ ಜೇಬಿಗೆ! ಪಕ್ಷಗಳ ಹಾವು ಏಣಿ ಆಟಕ್ಕೆ ಜನರ ಹಣವೇಕೆ ಬಲಿಯಾಗ್ಬೇಕು? ಇಷ್ಟೆಲ್ಲ ಅಸಹ್ಯ ಮಾಡಿಕೊಂಡು ಆಮೇಲೆ ಜನ ಮತ ಹಾಕೋದಿಲ್ಲ ಅಂತ ಬೊಬ್ಬಿಡೊದ್ಯಾಕೆ?
ಇಂತ ಕಾನೂನು ಮಾಡಿರೋ ಚುನಾವಣ ಆಯೋಗಕ್ಕೆ ಇದು ಅರ್ಥವಾಗುವುದಿಲ್ವಾ? ಈ ಮೊದಲು ಅರ್ಥವಾಗದಿದ್ದರೂ ಪರ್ವಾಗಿಲ್ಲ ಇನ್ಮೇಲಾದ್ರು ಚುನಾವಣ ಆಯೋಗವೇ ಇದಕ್ಕೆ ಕಡಿವಾಣ ಹಾಕುವ ಚಿಂತನೆ ಮಾಡಬೇಕಿದೆ.ಯಾಕ್ ಅಂದ್ರೆ ರಾಜಕೀಯ ಪಕ್ಷಗಳಿಗೆ ಆ ಬಗ್ಗೆ ಯೋಚಿಸುವ ಯಾವುದೇ ನೈತಿಕ ಸಾಮರ್ಥ್ಯ ಉಳಿದಿಲ್ಲ.ಹಾಗೆ ಎಲ್ಲದಕ್ಕೂ ಚಲ್ತಾ ಹೈ ಅನ್ನೋ ತರ ಇರೋ ನಮ್ಮ್ ಜನ ಸಹ ಎಚ್ಚೆತ್ತುಕೊಳ್ಳಬೇಕಿದೆ.





ಚುನಾವಣೆಗಳೇ ನಮ್ಮ ದೇಶದಲ್ಲಿ ನಾವು ಕಾಣುತ್ತಿರುವ ಅಗಾಧ ಪ್ರಮಾಣದ ರಾಜಕೀಯ ಭ್ರಷ್ಟಾಚಾರಕ್ಕೆ ಕಾರಣ.
ಇದೀಗ ’ಭಾಜಪ’ವು “ಪಕ್ಷಾಂತರ ನಿಷೇಧ ಖಾಯ್ದೆ”ಯನ್ನೇ ಸೋಲಿಸಿಬಿಟ್ಟಿದೆ.
ಇಂದು ಅದರಿಂದ ಆ ಪಕ್ಷಕ್ಕೆ ಲಾಭವಾಗಿರಬಹುದು. ಆದರೆ, ಮುಂದೆ ಅದೇ ತನಗೆ ಮುಳುವಾದಾಗ ಪರಿತಪಿಸುವಂತಾಗುತ್ತದೆ.
ಈ ಎಲ್ಲ ಪ್ರಹಸನಗಳಲ್ಲಿ ಅದೆಷ್ಟು ಕೋಟಿಗಳು ಕಾಣದಂತೆ ಕೈ ಬದಲಾಯಿಸಿದೆಯೋ ದೇವರೇ ಬಲ್ಲ.
ಇವೆಲ್ಲವನ್ನೂ ನೋಡಿಕೊಂಡು ಚುನಾವಣಾ ಆಯೋಗ ಸುಮ್ಮನೆ ಕುಳಿತಿದೆಯೇ, ಎನ್ನುವ ಪ್ರಶ್ನೆ ಆಗಾಗ ಏಳುತ್ತಿರುತ್ತದೆ.
ಕರ್ನಾಟಕದ ಬಿ.ಜೆ.ಪಿ ನಮ್ಮ ದೇಶದ ಎಲ್ಲ ರಾಜಕೀಯ ಪಕ್ಷಗಳಿಗೆ ಸಂವಿಧಾನಾತ್ಮಕವಾಗಿಯೇ ಹೊಲಸು++ ರಾಜಕಾರಣ ಮಾಡಬಹುದೆಂದು ತೋರಿಸಿಕೊಟ್ಟಿದೆ.
ಸಂವಿಧಾನದಲ್ಲೆ ಬದಲಾವಣೆ ತರಬೇಕು..
– ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುವ ಅವಕಾಶ ಕೊಡಬಾರದು. ಆ ಮನುಷ್ಯ ಯಾವ ಕ್ಷೇತ್ರದ ಜನರ ‘ಸೇವೆ’ ಮಾಡಬೇಕೆಂದು ಖಚಿತ ಮಾಡಿಕೊಂಡ ನಂತರವೇ ಚುನಾವಣೆಗೆ ನಿಲ್ಲಬೇಕು..
– ಆರಿಸಿ ಬಂದ ಅಭ್ಯರ್ಥಿ ತನ್ನ ಸ್ಥಾನಕ್ಕೆ ರಾಜಿನಾಮೆ ಕೊಟ್ಟರೆ..ಅವನಿಗೆ ತುರ್ತಾಗಿ ಗಮನಿಸಬೇಕಾದ ವೈಯುಕ್ತಿಕ ಸಮಸ್ಯೆಗಳಿವೆ ಎಂದು ತಿಳಿದುಕೊಳ್ಳಬೇಕು ಮತ್ತು ಮುಂದಿನ ಐದು ವರುಷಗಳ ಕಾಲ ಆತನನ್ನು ಜನಸೇವೆ ಮಾಡುವ ಹೊರೆಯಿಂದ ಮುಕ್ತನನ್ನಾಗಿ ಮಾಡಬೇಕು.
– ಆರಿಸಿಬಂದ ಅಭ್ಯರ್ಥಿಯ ಮೌಲ್ಯಮಾಪನ ಎರಡು ವರ್ಷಕ್ಕೊಮ್ಮೆ ಆ ಕ್ಷೇತ್ರದ ಮತದಾರರಿಂದ ನಡೆಯಬೇಕು. ಪರ ಮತ್ತು ವಿರುದ್ಧ ಎಂಬ ರೀತಿಯ ಮತ ಹಾಕುವುದು. ಶೇಕಡಾ 50%ಕ್ಕಿಂತ ಕಡಿಮೆ ‘ಪರ’ ಮತ ತೆಗೆದುಕೊಂಡರೆ ಆತನನ್ನು ಅನರ್ಹಗೊಳಿಸುವುದು.
ಅಮೇರಿಕಾದ ದೊಡ್ಡಣ್ಣನನ್ನು ಖುಷಿಪಡಿಸುವ ಒಂದೇ ಒಂದು ಉದ್ದೇಶ ಇಟ್ಟುಕೊಂಡು ಸರಕಾರ ನಡೆಸುವವರು ಈ ನಾಡಿನಲ್ಲಿ ಇರುವಾಗ, ಇಂಥ ಕ್ಷುಲ್ಲಕ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವವರು ಯಾರು ರಾಕೇಶ್.
@ಅಸು ಹೆಗ್ಡೆ , ಸರಿಯಾಗಿ ಹೇಳಿದಿರಿ.
@ರಾಕೇಶ್ , ಲೇಖನ ಉತ್ತಮವಾಗಿ ಮೂಡಿಬಂದಿದೆ ಧನ್ಯವಾದಗಳು .
ಈ ಕುಮಾರಸ್ವಾಮಿಗೆ (ಎಲ್ಲಾ ರಾಜಕಾರಣಿಗಳಿಗೂ) ಅಧಿಕಾರ ಲಾಲಸೆ ತುಂಬಾ ಹೆಚ್ಚು .. ಕೇಂದ್ರ ಮಂತ್ರಿ ಆಗೋ ಕನಸಿನಿಂದ ಲೋಕ ಸಭೆಗೆ ಹೋದರು ..ಅಲ್ಲಿ ಬೇಳೆ ಬೇಯದಿದ್ದಾಗ ಈಗ ಪುನಃ ವಿಧಾನಸಭೆ. ದರಿದ್ರ ರಾಜಕಾರಣಿಗಳು.
ರಾಜಕಾರಣಿಗಳ ಮಾತು ಕೇಳಿದ್ರೆ ವಾಕರಿಕೆ ಬರುತ್ತದೆ , ಅವರಿಗೆ ಬೇಕಾಗಿದ್ದೂ ಅದೇ ಅನ್ನಿ.. ಅವರಿಗೆ ಗೊತ್ತು ಜನರನ್ನ ಹೇಗೆ ಮರುಳು ಮಾಡೋದು ಅಂತ! ನಾವೂ ಕೂಡ ಎರಡೂ ದಿನ ಇಂತಹ ಲೇಖನ ಬರೆದು ಅದಕ್ಕೆ ಒ೦ದಶ್ಥು ಕಾಮೆಂಟ್ ಬರೆದು,ಒ೦ದೆರಡು ದಿನ ಚರ್ಚಿಸಿ(ಬಹಿರಂಗವಾಗಿ ಅಲ್ಲ !! ನಮ್ಮ ನಮ್ಮೊಳಗೇ ಮಾತ್ರ !!!!) ಸುಮ್ಮನಾಗಿ ಬಿಡುತ್ತೇವೆ ಎಂದು !!!!! ಅವರು ಆಡಿದ್ದೆ ಆಟ !!!
ಈಗಿನ ತುರ್ತು ಅಗತ್ಯ,,, ಜನ ಎದ್ದ್ದೇಳಬೇಕು. ಇಂತಹ ಅಸ್ಪುಷ್ಯ ರಾಜಕಾರಣಿಗಳಿಗೆ ಬಹಿರಂಗ ಬಹಿಷ್ಕಾರ ಹಾಕಬೇಕು. ಉಗಿದು ಓಡಿಸಬೇಕು ಅದೊ೦ದೆ ಅಗತ್ಯವಾಗಿ ಆಗಬೇಕಾಗಿರೋದು..
ಕೊನೆಯದಾಗಿ ಪೂರ್ತಿ ರಾಜಕಾರಣಕ್ಕೆ ಆಪರೇಶನ್ ತುರ್ತಾಗಿ ಆಗಬೇಕಾಗಿದೆ ಅದೂ ಪ್ರಜ್ಞಾವಂತ ನಾಗರೀಕರಿಂದ !!!!!
ಏಳಿ ಎದ್ದೇಳಿ ಇಂಥ ರಾಜಕಾರಣಿ ಗಳನ್ನು ಒದ್ದೊಡಿಸುವ ತನಕ ನಿಲ್ಲದಿರಿ.(ಕಾಂಗ್ರೆಸ್ ,ಬಿ.ಜೆ.ಪಿ ಮತ್ತು ಜನತಾ ದಳ ದ ಎಲ್ಲಾ ಕೆಟ್ಟ ರೋಗಿಸ್ಟ ರಾಜಕಾರಣಿಗಳನ್ನ ಓದ್ದೊಡಿಸೋಣ, ಅನ್ಯ ಮಾರ್ಗ ವಿಲ್ಲ ).
ಹೆಸರು ಬದಲಾಗಿದೆ ಎರಡನೇ ಮದುವೆ ಆಗುವಾಗ, ಈಗ ಅದು: ಕೆ ಉಮ್ಮರ್ ಸಾಮಿ. 🙂
Karnatakada Mana Moora Batte Madida BJP. Central leaders /RSS has no power to control Yeddi Chaddi and Reddies
Who is Chaddi?
And why should RSS control BJP?
Looks like you are mixing up things.
We are talking about politics and you are bringing in RSS which is not a political party.
Are you ignorant of the facts or doing this on purpose?
And why do you want to disguise under the name “Indian”?
Why don’t you put your name and add a pic?
ನರೇಂದ್ರ ಹೇಳಿದ ಹಾಗೆ ತಾವ್ಯಾಕೆ ತಮ್ಮ ಹೆಸರನ್ನ ಹೇಳೋದಿಲ್ಲ? ಮರೆಯಲ್ಲಿ ನಿಂತು ಕಲ್ಲು ಹೊಡೆಯೋದ್ಯಾಕೆ? ಈ ಮೊದಲೊಮ್ಮೆ ತಮಗೆ ಸಂಯಮದ ಭಾಷೆ ಬಳಸಿ.ಟ್ಯಾಬೋಲಾಯ್ದ್ ಪತ್ರಿಕೆಗಳ ರೀತಿ ಇಲ್ಲಿ ಕಮೆಂಟಿಸಬೇಡಿ.ಇಲ್ಲ ತಾವು ಬರ್ಯೋದೇ ಹೀಗೆ ಅಂದ್ರೆ ದಯವಿಟ್ಟು ನಿಲುಮೆಯಲ್ಲಿ ಬರ್ಯೋದನ್ನೇ ನಿಲ್ಲಿಸಿ.
ಹೆಚ್ಚಿನವರಿಗೆ rss ಅನ್ನು ಅನಾವಶ್ಯಕವಾಗಿ ಎಳೆದು ತರೋದು ಒಂದು ಹವ್ಯಾಸ ……. ಬೇರೆಲ್ಲೂ ದೂರೋದಿಕ್ಕೆ rss ಸಿಗೋದಿಲ್ಲ ನೋಡಿ ಅದಕ್ಕೆ ಬಿಜೆಪಿ ಜೊತೆ ತಳಕಾಯಿಸಿ ಜರೆದು ಬಿಡೋ ಅತ್ಯುತ್ಸಾಹ…. ಅದೇ ಉತ್ಸಾಹ ಬ್ರಷ್ಟರನ್ನ ಮತ್ತು ಭಯೋತ್ಪಾದಕರನ್ನ ಜರೆಯೋದರಲ್ಲಿ ಅಥವಾ ಖಂಡಿಸೋದರಲ್ಲಿ ಇರೋದಿಲ್ಲ ಅದೇ ವಿಪರ್ಯಾಸ… rss ನ್ನು ಕಂಡರೆ ಏನೋ ಒ೦ಥರಾ ..ಪಾಪ ಅವರಾದರೂ ಏನು ಮಾಡುತ್ತಾರೆ ? rss ಬಗ್ಗೆ ಗೊತ್ತೂ ಇಲ್ಲ ತಿಳಿದು ಕೊಳ್ಳೋ ಅಸಕ್ತಿನೂ ಇಲ್ಲ…ಅ೦ಥಹವರಿಗೆ ತಿಳಿಸಿ ಹೇಳೋದರಲ್ಲಿ ಅರ್ಥಾನೂ ಇಲ್ಲ…… ಮೂರ್ಖನೊಂದಿಗೆ ವಾದ ಮಾಡಬಾರದಂತೆ!!!!!!!!!!!!!!
presently i can say all politicians are same but compare to all “kumaraswamy is much better leader…
nijavaglu namgella besattidhe.. melina photodalli kanista iruva 4 janarannu gundu ittu kolbeku kanri… desha halagodhe intha swartha rajakaranigalinda…