ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 31, 2011

18

ಹಳ್ಳಿಗರೇ ಕರೆಂಟ್ ಉಳಿಸಿ, ಎಂಜಿ ರೋಡಿಗೆ ಲೈಟ್ ಹಾಕಬೇಕು

‍ನಿಲುಮೆ ಮೂಲಕ

ಸಾತ್ವಿಕ್ ಎನ್ ವಿ

ಪ್ರಪಂಚ ಹೀಗೆನೇ!
ಯಾರು ಪಾಲಿಸ್ತಾರೋ ಅವರ ಮೇಲೆಯೇ ಎಲ್ಲವನ್ನು ಹೇರಿ ಅರಾಮದಲ್ಲಿ ಇದ್ದು ಬಿಡುತ್ತೆ. ‘ಉಳಿಸಿ’ ಅಂತ ಸರ್ಕಾರ ಯಾವುದಾದ್ರು ಅಭಿಯಾನ ಮಾಡಿದ್ರೆ ಅದರ ಟಾರ್ಗೆಟ್ ಮಧ್ಯಮ ಇಲ್ಲವೇ ಕೆಳವರ್ಗವೇ ಆಗಿರುತ್ತೆ. ಅದು ನೀರುಳಿಸಿ ಎಂಬುದೋ, ಪೆಟ್ರೋಲ್ ಉಳಿಸಿ ಅಂತಲೋ, ಕಡೆಗೆ ವಿದ್ಯುತ್ ಉಳಿಸಿ ಅಂತಾನೋ ಇರಬಹುದು. ಇಲ್ಲಿ ‘ಉಳಿಸಬೇಕಾದವರು’ ಯಾವುದನ್ನು ಕಡಿಮೆ ಪಡೆಯುತ್ತಿರುತ್ತಾರೋ ಅವರೇ! ವಿಚಿತ್ರ, ಆದ್ರೂ ಸತ್ಯ.
ಉದಾಹರಣೆಗೆ ನೀರು ಉಳಿಸಿ-ಮಿತವಾಗಿ ಬಳಸಿ ಅಂತ ಹೇಳಲಾಗುತ್ತೆ. ಆದ್ರೆ ಅದನ್ನು ಪಾಲಿಸಬೇಕಾದ ಜನತೆಗೆ ವಾರಕ್ಕೆ ಒಮ್ಮೆಯೋ ಎರಡು ಬಾರಿಯೋ ನೀರು ಬಂದ್ರೆ ಅದೇ ಹೆಚ್ಚು. ಒಮ್ಮೆ ಎಲ್ಲಿಯಾದ್ರೂ ಈ ಜನರು ಈ ನಿಯಮಗಳನ್ನು ಪಾಲಿಸುವಲ್ಲಿ ಸೋತರೆ ನಾವೆಲ್ಲ ಬೊಬ್ಬೆ ಹಾಕಿ ಬಿಡ್ತೇವೆ. ಅದ್ರೆ ಆ ಬೊಬ್ಬೆಯಲ್ಲಿ ಸತ್ಯವೊಂದು ಮುಚ್ಚಿ ಹೋಗಿರುತ್ತೆ. ಒಬ್ಬ ಶ್ರೀಮಂತನ ಮನೆಯ ಟಾಯ್ಲೆಟ್ ನಲ್ಲಿ ಬಳಕೆಯಾಗುವ ನೀರಿನಷ್ಟು ಸಾಮಾನ್ಯ ಜನರ ಕುಡಿಯುವ ನೀರು ಶುದ್ಧವಾಗಿರಲ್ಲ.


ಇನ್ನು ನೀರುಳಿಸುವ ಪಾಠ ಹೇಳುವ ‘ಕಾನ್ವೆಂಟ್ ಪರಿಸರವಾದಿಗಳ’ ಮನೆಗೊಮ್ಮೆ ಹೋಗಿ ಬನ್ನಿ, ನಿಮಗೆ ಖಂಡಿತಾ ವಿದ್ಯುತ್ ಇಲ್ಲದಿದ್ರು ಶಾಕ್ ಆಗಬಹ್ದು.ನೀರನ್ನು ಶುದ್ಧ ಮಾಡೋಕೆ ಅದರ ಎರಡು ಪಟ್ಟೂ ನೀರನ್ನು ಹೊರಗೆ ಚೆಲ್ಲೋ ಫಿಲ್ಟರ್ ಗಳನ್ನು ಯೂಸ್ ಮಾಡ್ತಾ ಇರ್ತಾರೆ. ಕೇಳಿದ್ದೇ ಆದ್ರೆ ಮತ್ತೆ  ಶುದ್ಧತೆ ಪಾಠ ಶುರುವಾಗುತ್ತೆ. ನಮ್ಮ ಊರಿನ ಬಾವಿಗಳಲ್ಲಿ ನೀರು ನೋಡಿ ಎಷ್ಟೋ ವರ್ಷಗಳೇ ಕಳೆದು ಹೋದವು. ಬೇಸಿಗೆಯಲ್ಲಿ ಹಳ್ಳಿ ಹೆಣ್ಣು ಮಕ್ಕಳ ಪಾಡು ದೇವರಿಗೆ ಮುಟ್ಟಿತ್ತಿರುತ್ತದೆ. ಇಚೇ ನಗರಗಳಲ್ಲಿ ಕಾರಿಗೆ ಆದ ಕೊಳೆಯ ತೊಳೆಯಲು ಕೊಳವೆ ಬಾವಿಯನ್ನು ಇನ್ನಷ್ಟು ಆಳ ಮಾಡುತ್ತಿರುತ್ತಾರೆ.ಪಾಪ ಹಳ್ಳಿ ಜನರಿಗೆ ಕಾಮೆಂಟ್ ಹಾಕಲು ಫೇಸ್ ಬುಕ್, ಟ್ವೀಟರ್ ಗಳಿಲ್ಲದ ಕಾರಣ ತಡಬಡಾಯಿಸುತ್ತಿರುತ್ತಾರೆ!
ಹಳ್ಳಿಗಳಲ್ಲಿ ಕರೆಂಟೆಂಬೋ ಕರೆಂಟ್ ಕೈಕೊಡೋ ಪರಿ ನೋಡಿದ್ರೆ ನಮ್ಮ ರಾಜಕಾರಣಿಗಳೇ ಬೆಟರ್ ಅನ್ಬೇಕು. ಚುನಾವಣೆಯಲ್ಲಿಯಾದ್ರೂ ಒಮ್ಮೆ ಬರ್ತಾರೆ. ಅದ್ರೂ ಆಕಾಶವಾಣಿಯಲ್ಲಿ ಒಂದು ಯುನಿಟ್ ಉಳಿತಾಯ ಎರಡು ಯುನಿಟ್ ಉತ್ಪಾದನೆಗೆ ಸಮ ಅನ್ನೋ ಜಾಹೀರಾತು ಜಾಹೀರು ಮಾಡಿ ನಗೆಪಾಟಿಲಿಗೆ ಈಡಾಗುತ್ತಾರೆ. ಅವತ್ತಿಗೆ ಕರೆಂಟ್ ಹೋಗಿ ಎಷ್ಟೋ ದಿನ ಕಳೆದಿರಬಹುದು.ಜನ ಇದನ್ನು ಕೇಳಿ (ಬ್ಯಾಟರಿ ರೇಡಿಯೋ ಆಗಿದ್ರೆ) ನಗಬೇಕೋ ಅಳಬೇಕೋ ಅಂತ ತಿಳಿಯದೇ ಒದ್ದಾಡುತ್ತಿರುತ್ತಾರೆ. ಬೆಂಗಳೂರಿನ ಉದ್ಯಾನದ ಕಾರಂಜಿಗಳು, ಎಂ ಜಿ ರೋಡಿನ ಸ್ಟ್ರೀಟ್ ಲೈಟ್ ಗಳು ರಾತ್ರಿಯಾಗುತ್ತಲೇ ರಂಗು ಪಡೆಯುತ್ತವೆ.
ಅಲ್ಲೇ ಪಕ್ಕದಲ್ಲಿಯೇ ಇರುವ ಕೊಳಗೇರಿಯ ಗುಡಿಸಿಲಿನಲ್ಲಿರುವ ಮಗುವಿನ ಬಾಯಾರಿಕೆಯ ಬಿಕ್ಕಳಿಕೆಯ ಸದ್ದು ಪಬ್ಬುಗಳ ಮಬ್ಬು ಬೆಳಕಿನಲ್ಲಿ ಕೇಳುವುದೇ ಇಲ್ಲ.

(ಚಿಕ್ರಕೃಪೆ: s436.photobucket.com)

18 ಟಿಪ್ಪಣಿಗಳು Post a comment
  1. Pramod's avatar
    ಮಾರ್ಚ್ 31 2011

    ಕಹಿ ಸತ್ಯ

    ಉತ್ತರ
  2. ವಿಕಾಸ್'s avatar
    ಮಾರ್ಚ್ 31 2011

    Yes.. 😦

    ಉತ್ತರ
  3. chukkichandira's avatar
    ಮಾರ್ಚ್ 31 2011

    ಅಲ್ಲೇ ಪಕ್ಕದಲ್ಲಿಯೇ ಇರುವ ಕೊಳಗೇರಿಯ ಗುಡಿಸಿಲಿನಲ್ಲಿರುವ ಮಗುವಿನ ಬಾಯಾರಿಕೆಯ ಬಿಕ್ಕಳಿಕೆಯ ಸದ್ದು ಪಬ್ಬುಗಳ ಮಬ್ಬು ಬೆಳಕಿನಲ್ಲಿ ಕೇಳುವುದೇ ಇಲ್ಲ

    ಉತ್ತರ
  4. Pandit M's avatar
    ಮಾರ್ಚ್ 31 2011

    Dude,

    Its True that in village there is no current.
    But it is also true that they dont pay bills[ nOt All Pay. Only 30% will pay] for what they use.

    ಉತ್ತರ
    • ರಾಕೇಶ್ ಶೆಟ್ಟಿ's avatar
      ಮಾರ್ಚ್ 31 2011

      ಪಂಡಿತ್,
      ನಿಲುಮೆಯಲ್ಲಿ ಕನ್ನಡದಲ್ಲೇ ಪ್ರತಿಕ್ರಿಯಿಸಿದರೆ ಚಂದ

      ಉತ್ತರ
    • ವಿಕಾಸ್'s avatar
      ಮಾರ್ಚ್ 31 2011

      ನಿಮ್ಮದು ತಪ್ಪು ತಿಳುವಳಿಕೆ…

      ಉತ್ತರ
    • ರವಿ's avatar
      Ravi
      ಮಾರ್ಚ್ 31 2011

      ನಗರಗಳಲ್ಲಿ ಪೋಲಾಗುವ ವಿದ್ಯುತ್ ಗೊತ್ತಿಲ್ಲವೇ? ಗಲ್ಲಿ ಗಲ್ಲಿಯಲ್ಲಿ ಗಣೇಶ, ಅಣ್ಣಮ್ಮ ದೇವಿ.. ಕಂಬದಿಂದ ಎಳೆದ ಬಿಟ್ಟಿ ಕರೆಂಟು.. ಅದನ್ನು ನಿಲ್ಲಿಸಿ. ಮೋಜು ಮಸ್ತಿಗೆ ವಿದ್ಯುತ್ ಕಳ್ಳತನ ಮಾಡುವುದಿಲ್ಲ ಹಳ್ಳಿಗರು.

      ಉತ್ತರ
      • Somashekar BR's avatar
        Somashekar BR
        ಮಾರ್ಚ್ 31 2011

        ಮೋಜು ಮಸ್ತಿಗೇ ವಿದ್ಯುತ್ ಕದಿಯುತ್ತೇವೆ ಎಂದರೂ ಹಳ್ಳಿಗಳಲ್ಲಿ ಕರೆಂಟ್ ಇರಬೇಕಲ್ಲ? ಬೇಸಿಗೆ ಬಂತೆಂದರೆ ದಿನವೊಂದಕ್ಕೆ ಹಳ್ಳಿಯಲ್ಲಿ ಕೇವಲ ೫-೬ ಗಂಟೆ ಮಾತ್ರ ವಿದ್ಯುತ್ ಸರಬರಾಜಾಗುತ್ತದೆ. ಇನ್ನು ಪಂಡಿತ್ ಹೇಳಿರುವುದು ಸತ್ಯವಾದರೂ ಪಟ್ಟಣದಲ್ಲೂ ವಿದ್ಯುತ್ ಕಳ್ಳರಿದ್ದಾರೆ. ಹಳ್ಳಿಯವರಾದರೂ ಮನೆ ಬಳಕೆಗೆ ಬೇಕಾಗುವಷ್ಟು ಕರೆಂಟ್ ಅನ್ನು ಅನಧಿಕೃತವಾಗಿ ಬಳಸಬಹುದು ಅಷ್ಟೆ. ಆದರೆ ಎಷ್ಟೋ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು (ಲಾಭದಲ್ಲಿರುವ, ಪ್ರಭಾವಿ ವ್ಯಕ್ತಿಗಳಿಗೆ ಸೇರಿದ) ಕೋಟಿಗಟ್ಟಲೆ ಬಾಕಿ ಉಳಿಸಿಕೊಂಡಿದ್ದಾರೆ. ಇವರು ಉಳಿಸಿಕೊಂಡಿರುವ ಬಾಕಿಯಿಂದ ಸಾವಿರಾರು ಹಳ್ಳಿಗಳಿಗೆ ವಿದ್ಯುತ್ ನೀಡಬಹುದು.

        ಉತ್ತರ
    • mara's avatar
      mara
      ಆಕ್ಟೋ 15 2011

      DO YOU PAY BILLS WITHOUT ANY TAMPERING? IF YES YOU MIGHT NOT BE INDUSTRIALIST, IF YES YOU ARE A BUSINESSMAN!!!! ( NOT ALL AS YOU SAID)

      ಉತ್ತರ
    • mara's avatar
      mara
      ಆಕ್ಟೋ 15 2011

      DO YOU PAY BILLS WITHOUT ANY TAMPERING? IF YES YOU MIGHT NOT BE INDUSTRIALIST, IF YES YOU ARE A BUSINESSMAN!!!! ( NOT ALL AS YOU SAID)

      TO MR? PANDIT>>>>

      ಉತ್ತರ
  5. sridhara manavi's avatar
    sridhara manavi
    ಏಪ್ರಿಲ್ 1 2011

    entha durdiva yendare nammkade ero raichur thermal power plant edii rajya kke belagiusutte alle pakkada halli current iruvudilla.E cricket adalu day and night match adalu astu light haaki adisodu nayave.namm halli makkalu odikoltivi endru light iruvudilla!!

    ಉತ್ತರ
  6. Ranjana's avatar
    Ranjana
    ಏಪ್ರಿಲ್ 1 2011

    katu satya. ommomme ee tondaregala bagge yochasidre manasu kudiyuttade. namma vyavasthe, brashta raajakaaranigala viruddha sididelona annisutte. aadare navu ene madidadru duddu, adhikaara iruvavane doddappa ennuvudannu nenedu marugi summanaaguttene.

    sundara, satya baraha.

    ಉತ್ತರ
  7. sriharsha's avatar
    sriharsha
    ಏಪ್ರಿಲ್ 5 2011

    ಎಂ ಜಿ ರೋಡಿನಲ್ಲಿರುವ ಅಂಗಡಿಗಳು ಸರಕಾರಕ್ಕೆ ತೆರಿಗೆ ಕಟ್ಟುತ್ತವೆ. ರೈತರಿಗೆ ವಿನಾಯಿತಿ ನೀಡಲಾಗುತ್ತಿದೆ.
    ಹಳ್ಳಿಗಳಿಗೆ ಹೋಗಿ ನೋಡಿದ್ದೀರಾ? ಎಷ್ಟು ಜನ ದುಡಿಯುತ್ತಿದ್ದಾರೆ? ಎರಡು ರೂಪಾಯಿಗೆ ಸಿಗುವ ಬಿಪಿಎಲ್ ಅಕ್ಕಿ ತಿಂದು ಹಾಯಾಗಿದ್ದಾರೆ. ಕರೆಂಟು ಕೊಟ್ಟರೂ ಅವರು ಅದನ್ನು ಬಳಸಿಕೊಳ್ಳುವುದು ಉದಯ ಟಿವಿ ನೋಡಲಿಕ್ಕೆ ಮಾತ್ರ!

    ಬಳಕೆಯಾಗದ ವಿದ್ಯುತನ್ನು ಹಳ್ಳಿಗೆ ಕೊಡುವುದರಲ್ಲಿ ತಿರುಳಿಲ್ಲ ಎನಿಸುತ್ತದೆ.

    ಉತ್ತರ
  8. Somashekar BR's avatar
    Somashekar BR
    ಏಪ್ರಿಲ್ 9 2011

    ಶ್ರೀಹರ್ಷ ಅವರೇ,
    ನಿಮ್ಮ ಪ್ರಕಾರ ಹಳ್ಳಿಯವರು ಸೋಮಾರಿಗಳು. ಕಡಿಮೆ ದರದಲ್ಲಿ ಸಿಗೋ ಅಕ್ಕಿ ತಿನ್ಕೊಂಡ್ ಕೆಲ್ಸ ಮಾಡ್ದೆ ಬೇಜಾವಾಬ್ದಾರಿಯಿಂದ ಮಲಗಿದ್ದಾರೆ ಅಂತಿದೀರಲ್ಲ!!!! ೨ ರೂ. ಬೆಲೆಯ ಕಳಪೆ ಅಕ್ಕಿ ತಿನ್ನುತ್ತಾ ನಮಗೆ ಸೋನಾಮಸೂರಿ ಬೆಳೆದುಕೊಡುತ್ತಿರುವುದು ಇದೇ ಹಳ್ಳಿಗರೇ ಹೊರತು ಎಂ.ಜಿ. ರೋಡ್ ನವರಲ್ಲ. ಅಂದ ಮಾತ್ರಕ್ಕೆ ಎಂ.ಜಿ. ರೋಡ್ ವರ್ತಕರು ಬೇಡ ಎಂದಲ್ಲ. ಆ ಮರ್ವಾಡಿಗಳ ಜೊತೆ ಹಳ್ಳಿಯವರು ಚೆನ್ನಾಗಿ ಬದುಕಬೇಕಲ್ಲ?
    ಇಲ್ಲಿ ಎಂ.ಜಿ. ರಸ್ತೆಗೆ ಕರೆಂಟ್ ನೀಡಬೇಡಿ ಅಂತ ಯಾರೂ ಎಲ್ಲೂ ಹೇಳಿಲ್ಲ. ಅನಾವಶ್ಯಕವಾಗಿ ಹತ್ತಿರತ್ತರಕ್ಕೆ ಕಂಬಗಳನ್ನು ನೆಟ್ಟು ರಾತ್ರಿ ೧೨ ಆದರೂ ಕರೆಂಟ್ ಉರಿಸುವುದನ್ನು ಖಂಡಿಸಲಾಗಿದೆ. ಹಳ್ಳಿಯವರು ಸೋಮಾರಿಗಳು ಅಂತ ಎಲ್ಲೂ ಹೇಳ್ಬೇಡಿ. ಯಾಕಂದ್ರೆ ಇಂದು ಉನ್ನತ ಸ್ಥಾನದಲ್ಲಿರೋ ಎಲ್ಲರೂ ಹಳ್ಳಿಗಳಿಂದ ಬಂದವರೇ. ರೈತರಿಗೆ ತೆರಿಗೆ ವಿನಾಯಿತಿ ನೀಡದಿದ್ದರೆ ತಿನ್ನಲ್ಲಿಕ್ಕೆ ಅನ್ನವೇ ಇರುವುದಿಲ್ಲ ಅನ್ನೋ ಸತ್ಯ ನಿಮಗೆ ತಿಳಿದಿಲ್ಲ….

    ಉತ್ತರ
  9. ಪ್ರಮೋದ್ ಶೆಟ್ಟಿ's avatar
    ಪ್ರಮೋದ್ ಶೆಟ್ಟಿ
    ಆಕ್ಟೋ 15 2011

    ಶ್ರೀ ಹರ್ಷ ರವರೆ ನಿಮಗೆ ಹಳ್ಳಿ ಬಗ್ಗೆ ಏನೂ ಗೊತ್ತಿದೆ ,ನಿಮ್ಮ ಅಂಗಡಿಗಳು ಮಾತ್ರ ತೆರಿಗೆ ಕಟ್ಟು ವುದಾ ಹಳ್ಳಿಯವರು ಭೂಮಿಗೆ ತೆರಿಗೆ ಕಟ್ಟು ವುದಿಲ್ಲವೆ ,ಹಳ್ಳಿ ರೈತ ಅನ್ನದಾತ ,ಅವನು ಬೆಳೆ ಬೆಳೆಯದಿದ್ದರೆ ನಾವೆಲ್ಲಾ ಮಣ್ಣು ತಿನ್ನಬೇಕು ,ಯಾವೂದೇ ಪಟ್ಟಣ ದಲ್ಲಿ ಒಂದು ಹೊತ್ತು ವಿದ್ಯುತ್ ಹೋದರೆ ಸಿಕ್ಕಾ ಪಟ್ಟೆ ಪ್ರತಿಭಟನೆ ಆಗುತ್ತೆ ,ಹಳ್ಳಿಯ ಬಗ್ಗೆ ಮಾತೋಡೋರು ಯಾರು ಇಲ್ಲ …………

    ಉತ್ತರ
  10. ಕುಮಾರ್'s avatar
    ಕುಮಾರ್
    ಆಕ್ಟೋ 15 2011

    ಕರೆಂಟು ಕೊಟ್ಟರೂ ಅವರು ಅದನ್ನು ಬಳಸಿಕೊಳ್ಳುವುದು ಉದಯ ಟಿವಿ ನೋಡಲಿಕ್ಕೆ ಮಾತ್ರ!

    ಕರೆಂಟು ಕೊಟ್ಟರೂ ಅವರು ಅದನ್ನು ಬಳಸಿಕೊಳ್ಳುವುದು ಉದಯ ಟಿವಿ ನೋಡಲಿಕ್ಕೆ ಮಾತ್ರ!

    ವಿಚಿತ್ರ ವಾಗಿದೆ ನಿಮ್ಮ ಭಾವನೆ! ಶ್ರೀಹರ್ಷರವರೆ ದಯವಿಟ್ಟು ನಿಮಗೆ ಅನ್ನ ನೀಡುತ್ತಿರುವ ಹಳ್ಳಿ ಕಡೆ ಹೋಗಿ ನೋಡಿ ! ಬೆಲೆ ಬಂದರೆ ಬೆಳೆ ಇಲ್ಲ ,ಬೆಳೆ ಬಂದರೆ ಬೆಳೆ ಇಲ್ಲ , ಎರಡೂ ಬರಲು ಸರಿ ಕರೆಂಟಿಲ್ಲ ! ಏನು ಮಾಡುತ್ತಾರೆ ಅವರು? ನಿಮಗೋ ರಾತ್ರಿ ಎಸಿ ಇಲ್ಲದಿದ್ರೆ ನಿದ್ರೆ ಬರಲ್ಲ ಅಥವಾ ಕೆಲಸ ಮಾಡೋಕ್ಕಾಗಲ್ಲ ! ಕಚೇರಿಯಲ್ಲಿ ಉಷ್ಣಾಂಶ ಸ್ವಲ್ಪ ಹೆಚ್ಚಾದರೆ ,ಸಾಕು ಆ MAINTENANCE ಹುಡುಗನ ಕರೆದು ರಂಪ ಮಡಿ ಬಿಡುತ್ತೀರಾ ಅಲ್ಲವೇ? ಆದರೆ ಹಳ್ಳಿಗಳಲ್ಲಿ ನೀವು ವಿದ್ಯುತ್ ಪೋಲು ಮಾಡೋದರಿಂದ ,ವಿದ್ಯುತ್ ಸರಿಯಾಗಿ ಸಿಗದೇ ,ಬೆಳೆಗಳಿಗೆ ನೀರುಣಿಸಲಾಗದೆ ರಾತ್ರೆ ನಿದ್ದೆ ಗೆಟ್ಟು ಅಲ್ಪಸ್ವಲ್ಪ ಇದ್ದ ವಿದ್ಯುತ್ತಿನಲ್ಲೇ ಕಷ್ಟ ಪಟ್ಟು ಬೆಳೆ ಉಳಿಸಿಕೊಳ್ಳಲು ಶ್ರಮ ಪಡೋ ರೈತ ,ನಿಮ್ಮ ದ್ರುಷ್ಟಿಲಿ , ಎರಡು ರೂ ಬಿ ಪಿ ಎಲ್ ಅಕ್ಕಿ ಉಂಡು ಮಜಾ ಮಾಡೋನು ??

    ದಯವಿಟ್ಟು ಎಸಿ ಕೊಟಡಿ ಯಿಂದ ಹೊರಬನ್ನಿ, ಇಲ್ಲಾಂದ್ರೆ ಕಾಲವೇ ನಿಮ್ಮನ್ನು ಹೊರದಬ್ಬುತ್ತದೆ ಸದ್ಯದಲ್ಲೇ , ಯಾಕಂದ್ರೆ ಕೇವಲ ದುಡ್ಡಿನ ಕಟ್ಟುಗಳಿಂದ ಹೊಟ್ಟೆ ತುಂಬುವುದಿಲ್ಲ ನೆನಪಿರಲಿ !

    ಉತ್ತರ
  11. ಮಧುಶಾಲೆಯಲ್ಲಿ ರಾತ್ರಿ ಇಡೀ ಸಂಗೀತ ಬೇಕೆಂಬ ಬೇಡಿಕೆ ಇಡಲು ಘಟಾನುಗಟಿಗಳೇ ಮಗಾ ರಸ್ತೆಯಲ್ಲಿ ಜಮಾಯಿಸಿದ್ದರು.
    ಇಂಥ ವಿಷಯಗಳ ಬಗ್ಗೆ ಕೆಡಿಸಿಕೊಂಬುದಕ್ಕೆ ತಮ್ಮ ತಲೆಗಳನ್ನೇ ಉಳಿಸಿಕೊಂಡಿಲ್ಲವೆಂದನಿಸುತ್ತದೆ.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments