ಈ ಮಾಯಿ ಬರೆದಷ್ಟೂ ಮುಗಿಯದ ಕಥೆ
ಚಿತ್ರಾ ಸಂತೋಷ್
ಇಂದು ಮಿರ್ವಾಲಾ ಎಂಬ ಪುಟ್ಟ ಹಳ್ಳಿಯಲ್ಲಿ ಶಾಲೆ ಇದೆ. ನೂರಾರು ಮಕ್ಕಳು ಅಲ್ಲಿ ಓದುತ್ತಿದ್ದಾರೆ. ಮೇಲ್ವರ್ಗ-ಕೆಳ ವರ್ಗದ ತಾರತಮ್ಯ ನಿಧಾನವಾಗಿ ಇತಿಹಾಸವಾಗುತ್ತಿದೆ. ಚೌಕಟ್ಟಿನೊಳಗೆ ಬಂಧನವಾಗುತ್ತಿದ್ದ ಹೆಣ್ಣು ಮಕ್ಕಳು ಹೊರಜಗತ್ತನ್ನು ಕಾಣುವ ಪ್ರಯತ್ನ ಮಾಡುತ್ತಿದ್ದಾರೆ. ನೊಂದ ಹೆಣ್ಣು ಮಕ್ಕಳು ಮಾಯಿಯ ಮಡಿಲಲ್ಲಿ ಭರವಸೆ ಕಾಣುತ್ತಿದ್ದಾರೆ. ಮೀರ್ವಾಲದಲ್ಲಿ ಇಂಥದ್ದೊಂದು ಕ್ರಾಂತಿ ಆಗುತ್ತಿದ್ದರೆ ಅದಕ್ಕೆ ಕಾರಣ ಮುಕ್ತಾರ್ ಮಾಯಿ, ಅವಳ ಆಶಾವಾದ ಅಷ್ಟೇ.
ಇವಳ ಬಗ್ಗೆ ಬರೆಯೋಕೇನಿದೆ?
ಪತ್ರಿಕೆಗಳಲ್ಲಿ, ಬ್ಲಾಗ್‌ಗಳಲ್ಲಿ ಪೇಜುಗಟ್ಟಲೆ ಅವಳ ಬಗ್ಗೆ ಬರೆದವರಿದ್ದಾರೆ. ಇನ್ನೇನಿದೆ ನಾನು ಬರೆಯೋದು ಹೊಸತು? ನನಗೂ ತುಂಬಾ ಸಲ ಹಾಗೆನಿಸಿದೆ. ಆದರೂ, ಇನ್ನೊಂದೆಡೆ ಆ ಹೆಣ್ಣು ಮಗಳು ಬತ್ತದ ತೊರೆ, ಅವಳೆಂದೂ ಮುಗಿಯದ ಕತೆ ಎಂದನಿಸುತ್ತದೆ. ಏಕೆಂದರೆ, ಶೋಷಣೆಗೆ ಎದೆಗೊಟ್ಟು ‘ಸ್ವಾತಂತ್ರ್ಯ’ ವನ್ನು ಕಂಡುಕೊಂಡ ಹೆಣ್ಣುಮಗಳು ಆಕೆ, ತನ್ನ ಬದುಕಿನ ಸೌಧವನ್ನು ತಾನೇ ನಿರ್ಮಿಸಿಕೊಂಡು ಜಗತ್ತಿನ ಕೋಟ್ಯಂತರ ಹೆಣ್ಣು ಮಕ್ಕಳಿಗೆ ಧೈರ್ಯದ ಪಾಠ ಕಲಿಸಿದವಳು ಅವಳು. ಕಣ್ಣೀರ ಕೋಡಿಯಲ್ಲೇ ಭರವಸೆಯ ಹೂವಂತೆ ಅರಳಿದವಳು ಅವಳು.
ಅವಳೇ ಮುಕ್ತಾರ್ ಮಾಯಿ.
ಈ ಹೆಸರು ಕೇಳದವರು ವಿರಳ. ಹುಟ್ಟೂರು ಪಾಕಿಸ್ತಾನದ ಮೀರ್ವಾಲ. ಪಾಕಿಸ್ತಾನ ಅಂದ್ರೆ ಅಲ್ಲಿ ಹೆಣ್ಣು ಮಕ್ಕಳ ಬದುಕೇನು? ಎನ್ನುವುದು ಜಗತ್ತಿಗೇ ಗೊತ್ತಿದೆ. ಇಲ್ಲಿ ಹೆಣ್ಣು ಮಕ್ಕಳಿಗೆ ಸಂಪ್ರದಾಯ, ಚೌಕಟ್ಟುಗಳೇ ಬಂಧನ. ಹೆಣ್ಣು ಮಕ್ಕಳು ನಾಲ್ಕು ಗೋಡೆಯಾಚೆಯಿಂದ ಹೊರಬಂದು, ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳೋದೇ ಅಪರೂಪ. ಒಂದು ವೇಳೆ ಮನೆಯಿಂದ ಹೊರಬಂದರೆ ಮಗಳ ಭವಿಷ್ಯ ಉಳಿಯುತ್ತೆ ಅನ್ನೋ ಗ್ಯಾರಂಟಿ ಹೆತ್ತವರಿಗೂ ಇಲ್ಲ. ನಿತ್ಯ ಅರಾಜಕತೆಯ ಬೀಡಾಗಿದ್ದ ಪಾಕಿಸ್ತಾನದಂಥ ರಾಷ್ಟ್ರದಲ್ಲಿ ಒಬ್ಬಳು ಹೆಣ್ಣು ಮಗಳು ತನಗಾದ ಅನ್ಯಾಯದ ವಿರುದ್ಧ ಬದುಕನ್ನೇ ಪಣವಾಗಿಟ್ಟು ಹೋರಾಟ ಮಾಡಿ, ಗೆಲುವು ಪಡೆದಳೆಂದರೆ ಅದು ಮುಕ್ತಾರ್ ಮಾಯಿ ಮಾತ್ರ! ಈಗ ಪಾಕಿಸ್ತಾನದ ಹೆಣ್ಣು ಮಕ್ಕಳಿಗೆ ಮುಕ್ತಾರ್ ಮಾಯಿ ಕೇವಲ ಸಾಮಾನ್ಯ ಹೆಣ್ಣು ಮಗಳಲ್ಲ, ಅವಳೊಬ್ಬಳು ತಾಯಿ, ಹೋರಾಟಗಾರ್ತಿ, ಇಲ್ಲಿನ ಹೆಣ್ಣು ಮಕ್ಕಳ ದನಿ. ಮತ್ತಷ್ಟು ಓದು 
ಬದುಕ ‘ಜಾತ್ರೆ’ ಯಲ್ಲಿ ಸಾಹಿತ್ಯದ ಪಾತ್ರ!
ಅರೆಹೊಳೆ ಸದಾಶಿವ ರಾವ್

ಒಂದು ರೀತಿಯ ನವೀಕರಣಗೊಂಡ ಮೂಡ್‌ನೊಂದಿಗೆ ಬರೆಯಕುಳಿತರೆ, ಅದೇಕೋ ‘ಜಾತ್ರೆ’ಬಹಳವಾಗಿ ಕಾಡುತ್ತಿದೆ. ಇದು ಎಲ್ಲೆಡೆಯಲ್ಲಿಯೂ ಜಾತ್ರೆನಡೆಯುವ ಸಂದರ್ಭ. ಅದರಲ್ಲೂ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಒಂದು ರೀತಿಯ ದೇವ-ದೈವದ ಕೇಂದ್ರವಾಗಿರುವ ಕಾರಣ, ಇದು ಒಂದು ರೀತಿಯ ಜಾತ್ರೆಯ ಸೀಸನ್. ಅದು ಕೋಲ, ಮಾರಿ, ನೇಮ, ರಥೋತ್ಸವ, ಗೆಂಡ ಸೇವೆ,…..ಇತ್ಯಾದಿ ಹೆಸರಿನಿಂದ ನಡೆಯುವ ವರ್ಷಂಪ್ರತಿ ಧಾರ್ಮಿಕ ಕಾರ್ಯಕ್ರಮಗಳಾದರೆ, ಅಷ್ಟಬಂಧ, ಬ್ರಹ್ಮಕಲಶೋತ್ಸವ, ಪುನ:ಪ್ರತಿಷ್ಠೆ, ನಾಗಮಂಡಲ…..ಇತ್ಯಾದಿಗಳಿಂದ ಕರೆಯಿಸಿಕೊಳ್ಳುವ ವಿಶೇಷ ಉತ್ಸವಗಳು. ಈಗ ನೀವು ಒಮ್ಮೆ ರಸ್ತೆ ಬದಿ ಹಾದಿರಿ ಎಂದಾದರೆ, ಇಂತಹ ಬ್ಯಾನರ್‌ಗಳು, ಕಟೌಟ್‌ಗಳು, ತೋರಣಗಳು ಎಲ್ಲೆಂದರಲ್ಲಿ ಕಾಣಸಿಕ್ಕಿದರೆ, ಎಲ್ಲಾ ಧಾರ್ಮಿಕ ಕೇಂದ್ರಗಳು ಹೊಸ ಬಣ್ಣ ಬಳಿದುಕೊಂಡು ಸಿಂಗಾರಗೊಂಡು ನಿಂತಿರುತ್ತವೆ. ಇಂತಹ ಉತ್ಸವಗಳು ಇಡಿಯ ಊರಿಗೆ ಊರೇ ಸಂಭ್ರಮಿಸಲು ಕಾರಣವಾಗುತ್ತವೆ. ಈ ಮೂಲಕ ನಾಟಕ, ಯಕ್ಷಗಾನ ಹಾಗೂ ಇನ್ನಿತರ ಕಲಾ ಪ್ರಕಾರಗಳ ಪ್ರದರ್ಶನ, ಊರಿನ ಸಂಭ್ರಮಕ್ಕೆ ಮೆರುಗು ನೀಡಿದರೆ, ಒಂದು ರೀತಿಯ ಜಡ ಹಿಡಿದ ಮನಸ್ಸುಗಳಿಗೆ ನವೀಕರಣವಾಗುವಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ.
ಇತ್ತೀಚೆಗೆ ನನ್ನೂರಿನ ಜಾತ್ರೆಯಲ್ಲಿ ಎರಡು ದಿನ ಕಳೆದು ಬಂದಾಗ ನನಗನಿಸಿದ್ದು, ಇದೂ ಜೀವನದ ಒಂದು ಅವಿಭಾಜ್ಯ ಅಂಗವೇ ಅಲ್ಲವೇ ಎಂಬುದು. ಅಲ್ಲಿ ಏನುಂಟು ಏನಿಲ್ಲ ಹೇಳಿ? ಬಾಲ್ಯದ ಗೆಳೆಯರ ಪುನರ್ಮಿಲನ, ಕುಡಿಮೀಸೆಯ ದಿನಗಳ ಕನಸಿನ ಮರು ನೆನಪು, ಚಾಪೆ ಹಿಡಿದೇ ಆಟಕ್ಕೆಂದು ಹೋಗಿ ೫ರೂಪಾಯಿಯ ಟಿಕೆಟ್ ಪಡೆದು ಗದ್ದೆಯಲ್ಲಿ ಮಲಗಿ ಬೆಳಗ್ಗೆದ್ದು ಮನೆಗೆ ಮರಳಿದ ದಿನದ ಮೆಲುಕು, ಆಟಿಕೆಯ ಅಂಗಡಿಯ ಮುಂದೆ ನಿಂತು ಇದು ಬೇಕೇ ಬೇಕೆಂದು ರೊಚ್ಚೆ ಹಿಡಿದು ಸಿಗದಾಗ ಮನೆಗೆ ಬಂದು ಅಳುಮೋರೆ ಹಾಕಿ ಹಬ್ಬ ಬಹಿಷ್ಕಾರ ಮಾಡಿದ ದಿನಗಳ ಗಮ್ಮತ್ತು……ಒಂದೇ ಎರಡೇ!. ಇದೆಲ್ಲಾ ಬಾಲ್ಯದ ದಿನಗಳು ಮರಳಿ ಬರಬೇಕೆಂದರೆ ಮತ್ತು ಬದುಕಿನ ಇಂದಿನ ಜಂಜಡಗಳಿಗೆ ತುಸು ನೆಮ್ಮದಿ ಸಿಗಬೇಕೆಂದಿದ್ದರೆ, ವರ್ಷಕ್ಕೊಮ್ಮೆ ನಡೆಯುವ ಹಬ್ಬಕ್ಕೆ ಹೋಗಿಯೇ ಸವಿಯಬೇಕು ಎಂಬುದನ್ನು ಈ ಸಲ ನನ್ನೂರ ಹಬ್ಬ ನನಗೆ ಖಚಿತವಾಗಿಸಿತು.
ಮತ್ತಷ್ಟು ಓದು 
ಹಾರೋಬೂದಿಯ ವಿರುದ್ಧ ಅಖಾಡಕ್ಕಿಳಿದ ಪೇಜಾವರ ಶ್ರೀ ಮತ್ತು ಸಂಘಟನೆಗಳು
“ಎಂಥ ದೊಡ್ಡ ದೊಡ್ಡರೆಲ್ಲ ಬಂದ್ರು, ವೀಡಿಯೋ ಮಾಡಿದ್ರು, ಪತ್ರಿಕೆಯವ್ರು ಬಂದ್ರು ಏನೆಲ್ಲ ಬರೆದ್ರೂ, ಬೂದಿ ಪರೀಕ್ಷೆ ಮಾಡ್ತೀವಿ ಅಂತ ಬಂದ್ರು, ಬೇಕಾದ್ದು ರಿಪೋರ್ಟ್ ಕೊಟ್ರು ಆದ್ರು ಯಾರಿಂದಲೂ ಏನೂ ಮಾಡೋಕೆ ಆಗ್ಲಿಲ್ಲ. ಇನ್ನು ನೀವ್ ವಿಡೀಯೋ ಮಾಡಿ ಏನ್ ಬರೆದ್ರೂ ನಮಗೇನಿಲ್ಲ. ಇದು ಸರ್ಕಾರದ್ದೇ ಪ್ರೋಜೆಕ್ಟ್, ಸರಕಾರದ್ದೇ ಕಂಪೆನಿ. ಏ ಇವರ ಇವರ ಕಾರಿಗೆ ಅಡ್ಡ ನಿಲ್ಲಿಸ್ರೋ. ಕ್ಯಾಮೆರಾ ಕಿತ್ತುಕೊಳ್ಳೋ….”
ಎಂದು ಇತ್ತಿಚೆಗೆ ಉಡುಪಿಯ ಪ್ರತಿಷ್ಠಿತ ಕಂಪೆನಿಯ ಗುತ್ತಿಗೆದಾರನೊಬ್ಬ ಹಾರೋಬೂದಿ ಇರುವ ಸ್ಥಳಕ್ಕೆ ಹೋದ್ರೆ ಈ ರೀತಿ ಧಮ್ಕಿ ಹಾಕುತ್ತಾನೆ. ಇಷ್ಟೆಲ್ಲ ಧೈರ್ಯದಿಂದ ಈ ಗುತ್ತಿಗೆದಾರ ಮಾತಾಡ್ತಾ ಇರಬೇಕಾದ್ರೆ ಅವನ ಹಿಂದೆ ಪ್ರಬಲವಾದ ಕಾಣದ ಕೈ ಇರಬಹುದು ನೀವೆ ಯೋಚಿಸಿ. ಇಂಥ ಎಷ್ಟೋ ಜನರ ಉಪಟಳವನ್ನು ನಮ್ಮ ಜನ ಎಷ್ಟು ದಿನ ಅಂತ ಸಹಿತಾರೇ? ಅದಕ್ಕೆ ನೋಡಿ ಈ ಪ್ರತಿಷ್ಠಿತ ಕಂಪೆನಿ ಮತ್ತು ಅಹಂಕಾರಿಗಳ ವಿರುದ್ಧ ನೊಂದ ಜನತೆ ಚಳುವಳಿಗೆ ಇಳಿದಿದ್ದಾರೆ.
ಯುಸಿಪಿಎಲ್ ವಿರುದ್ಧ ಜನಾಂದೋಲನ”
“ಪೇಜಾವರ ಶ್ರೀ ಹಾರೋಬೂದಿಯಿಂದ ತೊಂದರೆಗೊಳಗಾದವರ ನಿವಾಸಗಳಿಗೆ ಭೇಟಿ, ನಾಗಾರ್ಜುನ ಆಧುನಿಕ ಭಸ್ಮಾಸುರ ಈ ಯೋಜನೆಯ ವಿರುದ್ಧ ಯಾರೇ ಹೋರಾಟ ಮಾಡಿದರೂ ನನ್ನ ಸಂಪೂರ್ಣ ಬೆಂಬಲ ಇದೆ”
ಹಾರೂಬೂದಿ ಅತ್ಯಂತ ವಿಷಕಾರಕ ಅಂಶ ಹೊಂದಿದ್ದು ಪರಿಸರ ಜಾನುವಾರು ಹಾಗೂ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿದೆ- ಪರಿಸರವಾದಿ ಡಾ.ಎನ್.ಎ. ಮಧ್ಯಸ್ಥ ಆತಂಕ”
“ ಕಂಪೆನಿಯನ್ನು ಸ್ಥಗಿತಗೊಳಿಸಲು ಮಾರ್ಚ್ ೫ ರಂದು ದಕ್ಷಿಣಕನ್ನಡ ಉಡುಪಿ ಬಂದ್ ನಡೆಸಲು ನಿರ್ಧಾra
ಇವೆಲ್ಲ ಇತ್ತೀಚೆಗೆ ಪ್ರಜಾವಾಣಿಯಲ್ಲಿ ಮೂಡಿಬಂದ ಸುದ್ದಿಗಳು
ನಿಲುಮೆಯ ಪ್ರಿಯ ಓದುಗರೇ, ಕಳೆದ ಕೆಲವು ದಿನಗಳ ಹಿಂದೆ ನಂದಿಕೂರಿನ ಪ್ರತಿಷ್ಠಿತ ಕಂಪೆನಿಯ ಕುರಿತಂತೆ ಹಾರೋಬೂದಿಯ ನೋಡಿದಿರಾ ಎಂಬ ಲೇಖನ ಪ್ರಕಟವಾಗಿತ್ತು. ಅದರಲ್ಲಿ ಬೂದಿಯಿಂದ್ ಆಗುತ್ತಿರುವ ತೊಂದರೆಯ ಬಗ್ಗೆ ಮತ್ತು ಜನರ ಬಗ್ಗೆ ಹೇಳಲಾಗಿತ್ತು. ಈ ಸಮಸ್ಯೆಯನ್ನು ಬಗೆಹರಿಸಲು ಸಂಘಟನೆ ಮತ್ತು ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಅದರ ಮುಂದುವರಿಕೆಯೆಂಬಂತೆ ಈ ಸಮಸ್ಯೆಯ ವಿರುದ್ಧ ಜನಾಂದೋಲನ ಆರಂಭವಾಗಿದೆ.
ಪೇಜಾವರಶ್ರೀಗಳು ಸೇರಿದಂತೆ ಅನೇಕ ಪ್ರಮುಖರು ಈ ಅಂದೋಲನದಲ್ಲಿ ಪಾಲ್ಗೊಂಡಿದ್ದಾರೆ. ಈ ಆಂದೋಲನ ಪ್ರಾರಂಭವಾಗಿ ನಂದಿಕೂರಿನ ಸುತ್ತಮುತ್ತಲ ಪ್ರದೇಶಗಳಾದ ಎರ್ಮಾಳು, ಕಟ್ಪಾಡಿ, ಉದ್ಯಾವರ ಸೇರಿದಂತೆ ಸುಮಾರು ೫೦ ಕಡ್‌ಗಳಲ್ಲಿ ಪಾದಯಾತ್ರೆ ನಡೆಸಿ ಜನಜಾಗೃತಿ ಮೂಡಿಸಲಾಗಿದೆ. ಅಲ್ಲದೇ ಇದೇ ಮಾರ್ಚ್ ೫ ರಂದು ದಕ್ಷಿಣಕನ್ನಡ ಉಡುಪಿ ಜಿಲ್ಲಾ ಬಂದ್ ಗೆ ಕರೆ ನೀಡಲಾಗಿದೆ. ಈ ಜನಾಂದೋಲನದಲ್ಲಿ ಪಾದಯಾತ್ರೆಯ ಮೂಲಕ ಕಂಪೆನಿಯ ಯೋಜನೆಯ ಅಪಾಯವೆನ್ನು ಬಿಂಬಿಸುವ ಟ್ಯಾಬ್ಲೋ ಹಾಗೂ ಧ್ವನಿಮುದ್ರಿತ ಯಕ್ಷಗಾನ ಪ್ರಸಂಗ, ಕಂಪೆನಿ ವಿರೋಧಿ ಘೋಷಣೆಗಳು, ಭಿತ್ತಿಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸಲಾಗಿದೆ. ದಕ್ಷೀಣಕನ್ನಡ ಜಿಲ್ಲಾ ಬಂದ್‌ಗೆ ಜಿಲ್ಲೆಗಳ ಪ್ರಮುಖ ಸಂಘಟನೆಗಳಾದ ಮೀನುಗಾರರ ಸಂಘ, ಉಡುಪಿ ತಾಲೂಕು ಗ್ರಾಮ ಪಂಚಾಯಿತಿ ಒಕ್ಕೂಟ, ವಿಜಯಕುಮಾರ ಹೆಗ್ಡೆ ನೇತೃತ್ವದ ರೈತಸಂಘ, ಉದ್ಯಾವರ ಗ್ರಾಮ ಸಂರಕ್ಷಣಾ ಸಮಿತಿ ಮೊದಲಾದ ಸಂಘಟನೆಗಳು ಬೆಂಬಲ್ ಸೂಚಿಸಿವೆ.
ಇದೆಲ್ಲ ಬೆಳವಣಿಗೆಗಳನ್ನು ನೋಡಿದಾಗ ನೊಂದ ಜನರಿಗೆ ನ್ಯಾಯ ದೊರೆಯಬಹುದೆಂಬ ಆಶಾಕಿರಣ ಮೂಡುತ್ತಿದೆ. ಈಗ ಹೋರಾಟ ಮುಂದಾಗಿರುವ ಸಂಘಟನೆಗಳು ಯಾವುದೇ ಒತ್ತಡಕ್ಕೆ ಮಣಿಯದೇ ಜನಪರವಾದ ಹೋರಾಟ ಮಾಡಿ ಮುಂದೆ ಬರಬಹುದಾದ ದೊಡ್ಡ ಗಂಡಾಂತರವನ್ನು ತಪ್ಪಿಸಬೇಕಾಗಿದೆ. ಇದಲ್ಲದೇ ಈ ಹೋರಾಟಕ್ಕೆ ಸ್ಥಳೀಯ ಜನರ ಬೆಂಬಲವೂ ಅತ್ಯಗತ್ಯ.
ಚಿತ್ರ ಕೃಪೆ: deccanherald.com, thecanaratimes.com
“ದೇವರು” ಇದ್ದಾನಾ….? ಮೂರ್ತಿರಾಯರು ಏನಂತಾರೆ ಕೇಳಿ
ಶತಶತಮಾನಗಳ ಹಿಂದೆ, ಮಾನವನಲ್ಲಿ ಆತ್ಮಪ್ರಜ್ಣೆ ಅರಳಿ ಅವನು ತನ್ನ ಸುತ್ತಲ ಪ್ರಪಂಚವನ್ನು ಕೂತೂಹಲದಿಂದ ನೋಡಲಾರಂಭಿಸಿದಾಗ ಅವನಿಗೆ ಕಂಡದ್ದೇನು ?
ಅಗ್ನಿಪರ್ವತಗಳಿಂದ ಭುಗಿಲೆದ್ದು ಗಗನಕ್ಕೆ ಏರುತ್ತಿರುವ ಜ್ವಾಲೆ; ಕಾದು ಕರಗಿ ಉಕ್ಕಿ ತನ್ನ ದಾರಿಯಲ್ಲಿ ಸಿಕ್ಕಿದ್ದನ್ನೆಲ್ಲ ಸುಟ್ಟು ಹರಿಯುತ್ತಿರುವ ಲಾವಾರಸ; ಮೋಡದ ದಟ್ಟಣೆಯನ್ನು ಇರಿದಿರಿದು ಕಣ್ಣು ಕೋರ್ಯೆಸುವ ಮಿಂಚು; ಕಾಳ್ಗಿಚ್ಚಿನಿಂದ ಭಸ್ಮವಾಗುತ್ತಿರುವ ಕಾಡು; ಕ್ಷುಬ್ದವಾದ ಸಮುದ್ರ, ಅದರ ತೀರದ ಮೇಲೆ ಅಪ್ಪಳಿಸುವ ಅಲೆಗಳು; ಇವುಗಳ ಜೊತೆಗಿನ ಗುಡುಗಿನ ಆರ್ಭಟ, ಸಿಡಿಲಿನ ಹೊಡೆತ, ಈ ಭಯಂಕರ ಪ್ರಪಂಚದಲ್ಲಿ ನಾನು ಹೇಗೆ ತಾನೆ ಬದುಕಿಯೇನು ?’ ಎಂದು ಅವನು ತಲ್ಲಣಿಸಿರಬೇಕು.
ಹೀಗೆ ಪ್ರಕೃತಿಯ ರೋಷವನ್ನೂ ಅದರ ಮಾರಕ ಪರಿಣಾಮವನ್ನೂ ನೋಡಿದ ಮಾನವನೇ ಅದರ ಮತ್ತೊಂದು ಮುಖವನ್ನೂ ನೋಡಿದ; ಸೂರ್ಯೋದಯ ಸೂರ್ಯಾಸ್ತಗಳ ಬಣ್ಣದ ಸಿರಿ; ಕಾಮನಬಿಲ್ಲಿನ ಸೊಬಗು; ಮಳೆಯಿಂದ (ಆ ಮಳೆ ಗುಡುಗು ಸಿಡಿಲುಗಳ ಜೊತೆಗೆ ಬಂದದ್ದು!) ತೊಯ್ದು ಕಾಡಿನಲ್ಲೂ ಬಯಲಿನಲ್ಲೂ ಹಸುರಿನ ಹಬ್ಬ; ಗಾಳಿಯಲ್ಲಿ ನಲಿದಾಡುತ ಹೂವುಗಳ ಕೋಮಲತೆ, ಸುಗಂಧ; ರಾತ್ರಿಯ ಆಕಾಶದಲ್ಲಿ ಮಿನುಗುವ ನಕ್ಷತ್ರಗಳು, ಅವುಗಳ ನಡುವಿನ ರಹಸ್ಯಪೂರ್ಣ
ನೀಲಿಯಾಳ; ಜಗತ್ತಿಗೆಲ್ಲ ಸೌಮ್ಯ ಸೌಂದರ್ಯವನ್ನು ಕೊಟ್ಟು, ತಂಪೆರೆಯುವ ಬೆಳದಿಂಗಳು; ಸಮುದ್ರದ ಪಾರವಿಲ್ಲದ ಹರವು, ಗಾಂಭೀರ್ಯ……….
ರಾಗಿಮುದ್ದೆ
ಶಿವು.ಕೆ
” ಇದು ಕಷ್ಟ ಕಣ್ರೀ, ನನ್ನ ಕೈಯಲ್ಲಿ ಆಗೋಲ್ಲ”
“ಅರೆರೆ ಅದ್ಯಾಕೆ ಭಯ ಪಡುತ್ತೀರಿ, ಇದು ನೀರು ಕುಡಿದಷ್ಟೇ ಸುಲಭ”
“ನೀರು ಬೇಕಾದ್ರೆ ಹಾಗೆ ಕುಡಿಯಬಹುದು, ಬೇಕಾದ್ರೆ ನುಂಗಿಬಿಡಬಹುದು, ಆದ್ರೆ ಇದು ಮಾತ್ರ ನನ್ನ ಕೈಯಲ್ಲಿ ನುಂಗಲು ಸಾಧ್ಯವೇ ಇಲ್ಲ” ಖಡಾಖಂಡಿತವಾಗಿ ಹೇಳಿಬಿಟ್ಟರು.
ಆದ್ರೆ ಇಷ್ಟಕ್ಕೆ ನಾನು ಬಿಡುತ್ತೇನೆಯೇ? ನನ್ನ ಪ್ರಯತ್ನವನ್ನು ಮುಂದುವರಿಸಿದೆ.
“ನೋಡ್ರಿ ಉದಯ್ ನಾವು ಇದನ್ನು ಜಾಮೂನ್ ಗಾತ್ರ ಮಾಡಿಕೊಂಡು ಸುಲಭವಾಗಿ ನುಂಗುತ್ತೇವೆ. ನೀವು ಕೊನೇ ಪಕ್ಷ ಗೋಲಿ ಗಾತ್ರ ಮಾಡಿಕೊಂಡು ಆದ್ರೂ ನುಂಗಲೇಬೇಕು”
“ನೋಡಿ ಇದೊಂದು ಬಿಟ್ಟು ಬೇರೆ ಏನು ಬೇಕಾದ್ರು ಹೇಳಿ ಮಾಡುತ್ತೇನೆ. ಬೇಕಾದ್ರೆ ನಿಮಗೆ ಎಂಥ ಸಾಪ್ಟ್ ವೇರ್ ಬೇಕು ಹೇಳಿ ಸಿದ್ಧಮಾಡಿಕೊಟ್ಟುಬಿಡುತ್ತೇನೆ. ಇದನ್ನು ನುಂಗಲು ಮಾತ್ರ ಒತ್ತಾಯಮಾಡಬೇಡಿ” ಹೀಗೆ ಹೇಳುತ್ತಾ ಬಂದ ಉದಯ ಹೆಗ್ಡೆ ಕೊನೆಗೂ ನನ್ನ ಮಾತನ್ನು ಒಪ್ಪಲೇ ಇಲ್ಲ.






