ನಾವಿನ್ನೂ ಬ್ರಿಟಿಷರ ಆಳ್ವಿಕೆಯಲ್ಲಿದ್ದೇವೆಯೇ?
– ಸಂಪತ್ ಕುಮಾರ್
ಸ್ವತಂತ್ರ, ಸಂವಿಧಾನಾತ್ಮಕವಾಗಿ ಕಾರ್ಯ ನಿರ್ವಹಿಸುವ ದೇಶದಲ್ಲಿ ಇಂತಹ ಘಟನೆಗಳು ನಡೆಯಲು ಸಾಧ್ಯವೇ!? ಜೂನ್ ೪ ರ ಘಟನೆ ನಾವೆಲ್ಲರೂ ತಲೆತಗ್ಗಿಸುವಂತೆ ಮಾಡಿದೆ.ಪ್ರಜೆಗಳ ಮೂಲಭೂತ ಹಕ್ಕುಗಳ ಕಗ್ಗೊಲೆಯಾಗಿದೆ. ಗಾಂಧಿಜಿ ಹೇಳಿಕೊಟ್ಟ ಸತ್ಯಾಗ್ರಹದಂತಹ ಅಸ್ತ್ರ ಬೆಲೆ ಕಳೆದುಕೊಂಡಿದೆ. ಹಿಂಸಾತ್ಮಕ ಪ್ರತಿಭಟನೆಗೆ ಪ್ರಚೋದನೆ ನೀಡಿದಂತಾಗಿದೆ.
ಪ್ರಜೆಗಳ ದನಿಯನ್ನು ಹತ್ತಿಕ್ಕಲು ಹೊಸ ವಿಧಾನವನ್ನು ಸರಕಾರ ಹೇಳಿಕೊಟ್ಟಿದೆ. ಬಾಬಾ ರಾಮದೇವ್ ಅವರ ಅಹಿಸಾತ್ಮಕ ಪ್ರತಿಭಟನೆಗೆ ಹಿಂಸಾತ್ಮಕ ಉತ್ತರ ನೀಡಿ ಸರ್ಕಾರ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ.
ಏಪ್ರಿಲ್ ೧೨ ರಂದು ನಾನು ನಿಲುಮೆಯಲ್ಲಿ ಬರೆದ ಲೇಖನ “ಇನ್ನೊಂದು ಸಮರಕ್ಕೆ ಸಿದ್ದರಾಗಿ” ಸದಾಶಯದಂತೆ ಬಾಬಾ ರಾಮದೇವ್ ಅವರು ಸತ್ಯಾಗ್ರಹಕ್ಕೆ ಕುಳಿತದ್ದು ಸಂತೋಷದ ವಿಚಾರವಾಗಿರುತ್ತದೆ. ಲೋಕಪಾಲದಂತಹ ಬಹು ಆಯಾಮದ ಸಮಸ್ಯೆಯನ್ನು ಎದುರಿಸುವ ಬದಲು, “ಕಪ್ಪು ಹಣ” ದಂತಹ ಒಂದೇ ಸಮಸ್ಯೆಯನ್ನು ಎದುರಿಸಿ ಬಾಬಾ ಯಶಸ್ಸನ್ನು ಪಡೆಯುವ ಹಂತದಲ್ಲಿರುವಾಗಲೇ ಹೀಗೆ ಸತ್ಯಾಗ್ರಹವನ್ನು ಹತ್ತಿಕ್ಕಿದ್ದು ಸಮಸ್ಯೆಯನ್ನು ಉಲ್ಬಣಗೊಳಿಸಿದೆ. ಸರಕಾರದ ಸರ್ವಾಧೀಕಾರದ ಧೋರಣೆ ಎಂದಿಗೂ ಸಲ್ಲ.
ಬುದ್ಧಿಜೀವಿಗಳೆನಿಸಿಕೊಂಡವರಿಗೆ ಈ ದೌರ್ಜನ್ಯ ಕಣ್ಣಿಗೆ ಕಾಣುವುದಿಲ್ಲವೇ? ಒಂದು ಧರ್ಮದವರಿಗೆ ಮಾತ್ರ ಮಾನವ ಹಕ್ಕುಗಳಿರುವುದೆ? ಇತರ ಧರ್ಮದವರು ಮಾನವರಲ್ಲವೇ?ಬುದ್ಧಿವಂತರ ಬ್ಲಾಗ್ “ಸಂಪಾದಕೀಯ” ಕ್ಕೆ ಬುದ್ಧಿಜೀವಿಗಳ ಧಾಳಿ ನಡೆದಿದೆಯೇ? ನಾವು ಸ್ವತಂತ್ರ ಭಾರತದಲ್ಲಿದ್ದೇವೆ ಎಂದು ನಿರೂಪಿಸಲು ಯಾರಾದರೂ, ಏನಾದರೂ ಸಾಕ್ಷ್ಯ ಒದಗಿಸಿ.
“ಸೊ ಮೆಸೇ ಅಸ್ಸಿ ಬೆ ಇಮಾನ್, ಫಿರ್ ಭಿ ಮೇರಾ ಭಾರತ್ ಮಹಾನ್”





ಬ್ರಿಟಿಶ್ ಸರ್ಕಾರದ ಮುಂದು ವರೆದ ಭಾಗವೇ ಕಾಂಗ್ರೆಸ್ಸ್ ಪಕ್ಷ ವಾಗಿದೆ..ಜಿ ಹುಜುರ್ ಎನ್ನುವ
ತಲೆ ಹಿಡುಕರನ್ನು ಕೊಡಿಸಿ ಅಂದಿನ ಸರ್ಕಾರ ರಾವ್ ಬಹಾದ್ದೂರ್ ಹುದ್ದೆ ಗಳನ್ನೂ ದಯಾ ಪಾಲಿಸಿ
ಇಂದಿನ ಇ ಸುಡೋ ಸೆಕುಲರ್ ವಾದಿ ಗಳ ಸೃಷ್ಟಿ ಗೆ ಕಾರಣಿಭೂತವಾಯಿತು ..ಇಲ್ಲಿನ್ ಸುಡೋ ಸೆಕುಲರ್
ವಾದಿ ಗಳು ಜ್ಯಾತ್ಯಾತಿತತೆ ,ಆಧಾತ್ಮಿಯತೆ ಮದ್ಯೆ ಅಂತರ ವೇನು ಗೊತ್ತಾಗದೆ ಬೆಣ್ಣೆ ಯನ್ನು ಗರಗಸ ದಿಂದ
ಕೂಯಿದೆ ಬಿಟ್ಟೆವು ಎಂದು ಹಾರಾಡುತ್ತಿವೆ ..ನಮ್ಮ ದೇಶ ದಲ್ಲಿ ಆಧಾತ್ಮಿಯತೆ ಇದ್ದ ಗೊಸ್ಕರವೇ ಇ ದೇಶ್
ಸೆಕುಳರ್ಆಗಿ ಉಳಿದಿದೆ ಎಂಬ ಸತ್ಯ ದ ಅರಿಯು ಇಲ್ಲವಾಗಿದೆ…