ವಿಜ್ಞಾನ ವಿಧಾನ, ವೈಜ್ಞಾನಿಕ ಮನೋಧರ್ಮ, ವೈಜ್ಞಾನಿಕ ಪ್ರವೃತ್ತಿ, ಮೂಢನಂಬಿಕೆಗಳು
– ಎ.ವಿ.ಜಿ ರಾವ್
ವಿಜ್ಞಾನ ವಿಧಾನದಲ್ಲಿ (ಸೈಂಟಿಫಿಕ್ ಮೆತಡ್) ತರಬೇತಿ ನೀಡುವುದು, ವೈಜ್ಞಾನಿಕ ಮನೋಧರ್ಮ (ಸೈಂಟಿಫಿಕ್ ಆಟಿಟ್ಯೂಡ್) ಬೆಳೆಸುವುದು, ವೈಜ್ಞಾನಿಕ ಪ್ರವೃತ್ತಿ (ಸೈಂಟಿಫಿಸಿಟಿ) ಬೆಳೆಸುವುದು, ಮೂಢನಂಬಿಕೆಗಳನ್ನು ತೊಡೆದು ಹಾಕುವುದು – ಇವೆಲ್ಲ ಪದಪುಂಜಗಳ ಬಳಕೆ ಇಂದು ಫ್ಯಾಷನ್ ಆಗಿದ್ದರೂ ಅವುಗಳ ಅರ್ಥ ಅನೇಕರಿಗೆ ಮನೋಗತವಾಗಿಲ್ಲ ಎಂಬುದು ನನ್ನ ಅನಿಸಿಕೆ. ವೈಜ್ಞಾನಿಕ ಮನೋಧರ್ಮವನ್ನು ಜನಸಾಮಾನ್ಯರಲ್ಲಿ ಬೆಳೆಸುವ ಕಾಯಕದಲ್ಲಿ ಪ್ರಾಮಾಣಿ ‘ವೈಜ್ನಾನಿಕ’, ‘ಅವೈಜ್ಞಾನಿಕ’ – ಈ ಪದಗಳನ್ನು ಅನುಕ್ರಮವಾಗಿ ಹೊಗಳಿಕೆಯ ಮತ್ತು ತೆಗಳಿಕೆಯ ಪದಗಳಾಗಿ ಬಳಸುತ್ತಿರುವವರಿಗಂತೂ ಖಂಡಿತ ಆಗಿಲ್ಲ. ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಧರ್ಮ ಬೆಳೆಸಲು ಶ್ರಮಿಸುತ್ತಿರುವ ಸ್ವಯಂಸೇವಾ ಸಂಘಟನೆಗಳಿಗೂ ಶಿಕ್ಷಕರಿಗೂ ಇವುಗಳ ಸ್ಪಷ್ಟ ಪರಿಕಲ್ಪನೆ ಇದ್ದರೆ ವಸ್ತುಸ್ಥಿತಿಯಲ್ಲಿ ಕೊಂಚ ಸುಧಾರಣೆ ಆದೀತು.
ಅತಿ ಸಂಕ್ಷಿಪ್ತವಾಗಿ ಇವನ್ನು ಇಂತು ವ್ಯಾಖ್ಯಾನಿಸ ಬಹುದು – ವಸ್ತುಪ್ರಪಂಚದ ಆಗುಹೋಗುಗಳ ನಿರ್ಧಾರಕ ನಿಯಮಗಳನ್ನು ಆವಿಷ್ಕರಿಸುವುದು ಪ್ರಧಾನ ಗುರಿಯಾಗಿರುವ ನಿಸರ್ಗವಿಜ್ಞಾನಗಳಲ್ಲಿ ಜ್ಞಾನ್ವೇಷಣೆಗೆ ಅನುಸರಿಸುವ ವಿಶಿಷ್ಟ ವಿಧಾನವೇ ವಿಜ್ಞಾನ ವಿಧಾನ (ಇದನ್ನು ವಿಜ್ಞಾನ ಮಾರ್ಗ, ವೈಜ್ಞಾನಿಕ ವಿಧಾನ ಎಂದು ಉಲ್ಲೇಖಿಸುವುದೂ ಉಂಟು). ಈ ವಿಧಾನವನ್ನು ಸಮರ್ಪಕವಾಗಿ ಅನುಸರಿಸಲು ತಳೆದಿರಲೇಬೇಕಾದ ಮನೋಭಾವವೇ ವೈಜ್ಞಾನಿಕ ಮನೋಧರ್ಮ. ವಿಜ್ಞಾನ ವಿಧಾನವೇ ಸಮಸ್ಯೆಗಳನ್ನು ಪರಿಹರಿಸಲು ಇರುವ ಅತ್ಯುತ್ತಮ ವಿಧಾನ ಎಂಬ ಅಚಲ ವಿಶ್ವಾಸದಿಂದ ಎಂಥ ಅಡ್ಡಿಆತಂಕಗಳು ಎದುರಾದರೂ ವೈಜ್ಞಾನಿಕ ಮನೋಧರ್ಮವನ್ನು ಕೈಬಿಡದೆಯೇ ಮುಂದುವರಿಯುವ ಪ್ರವೃತ್ತಿಯೇ ವೈಜ್ಞಾನಿಕ ಪ್ರವೃತ್ತಿ.
ದೀಪ ಭಾಗ -೩
-ವಿಜಯ ಹೂಗಾರ್
ಸೂರ್ಯ ನೆತ್ತಿಯಿಂದ ಇನ್ನೊಂದೆಡೆಗೆ ವಾಲುತ್ತಿದ್ದ.ಮನೆಯೊಳಗಿನ ಪೂಜೆ ಮುಗಿಸಿ ಎಂದಿನಂತೆ ಬೆಟ್ಟದ ಮೇಲಿರುವ ಲಕ್ಷ್ಮಿ ದೇವರ ಕಡೆಗೆ ಹೋಗಲು ನೈವಿದ್ಯದ ತಟ್ಟೆ ಸಿದ್ಧಪದಿಸುತ್ತಿದ್ದಳು.ಇಷ್ಟೊತ್ತಿಗೆ ಮೈದುನ ಸೂರಪ್ಪನ ಹೆಂಡತಿ ಗಿರಿಜಕ್ಕ ಪೂಜೆ ಮಾಡಿ ದೀಪ ಹಚ್ಚಿ ಬಂದಿರುತ್ತಾಳೆ ಅಂತ ಬೆಟ್ಟದ ಮೇಲಿರುವ ದೇವಸ್ಥಾನದ ಕಡೆ ಉರಿಬಿಸಿಲಲ್ಲಿ ಹೆಜ್ಜೆ ಹಾಕತೊಡಗಿದಳು.ನೂರಾಹನ್ನೊಂದು ಮೆಟ್ಟಿಲು ಏರಿದ ಮೇಲೆ ತುಂಡಿನಂತೆ ಬರುವ ಮಟ್ಟಸ ನೆಲದ ಮೇಲೆ ದೇವಸ್ಥಾನ ಕಟ್ಟಲಾಗಿತ್ತು.ಶಾಂತವಾಗಿ ತಂಗಾಳಿ ಸುಸುತ್ತಿರುವ ದೇವಸ್ಥಾನದಲ್ಲಿ ಊರ ಗೌಡರು ಮತ್ತು ಗಿರಿಜಕ್ಕ ಗುಸು ಗುಸು ಮಾತಾಡುವದು ಕೇಳಿ ಕಮಲಜ್ಜಿ ಬೆಚ್ಚಿದಳು.ಇವಳು ಒಳ ನಡೆದಳು.ಅವರು ಸುಮ್ಮನಾದರು.ಗರ್ಭ ಗುಡಿಯೊಳಗೆ ಸೇರಿದಳು .ಗಾಳಿಯ ಆಟಕ್ಕೆ ಆಡುವಂತೆ ನೀಲಾಂಜನ ಕುಣಿಯುತಿತ್ತು,ನಿನ್ನ ಕೈಗೆ ಸಿಗೋದಿಲ್ಲ ಅಂತ ಅಣುಕಿಸಿದಂತೆ.”ಸರದಿಯ ಪ್ರಕಾರ ನಿನಗೆ ದೀಪ ಹಚ್ಚುವ ಅವಕಾಶ ನಮಗೆ ಮಾಡಿ ಕೊಡು” ಅಂತ ದೇವರಿಗೆ ಅಧಿಕೃತವಾಗಿ ಬೇಡಿಕೊಂಡು ಹೊರಗೆ ಬಂದಳು.ಇನ್ನೇನು ಹೋಗಬೇಕು ಅನ್ನೋಷ್ಟರಲ್ಲಿ ಭೂಮಂಡಲದಂತಿರುವ ಹೊಟ್ಟೆಯ ಮೇಲೆ ಕೈ ಆಡಿಸುತ್ತ ಊರ ಗೌಡ ‘ಕಮಲಜ್ಜಿ ನಿಮ್ ಮಗ ರಾಮಪ್ಪನಿಗೆ ಊರಿಂದ ಕರೆಸು,ಅವನ ಜೊತೆ ಮಾತಾಡೋದಿದೆ’ ಅಂತ ಗೌಡರ ಉಗ್ಗಂಡ ಧ್ವನಿಯಲ್ಲೇ ಹೇಳಿದ.ಪರಕಿವಿಯಿಂದ ಆಲಿಸುವಂತೆ ಕೇಳಿ ಮನೆಕಡೆಗೆ ಧಾವಿಸಿದಳು.ಗಿರಿಜಕ್ಕ ಮಾಡುತ್ತಿರುವ ಹುನ್ನಾರ ಕಮಲಜ್ಜಿಗೆ ತುಸು ಅರ್ಥವಾಗತೊಡಗಿತು.ಸರದಿಯ ಪ್ರಕಾರ ನಾವು ಮಾಡಬೇಕಿದ್ದ ಪೂಜೆ ಹೇಗೋ ಗೌಡರನ್ನ ತನ್ನ ಬಲೆಗೆ ಸಿಲುಕಿಸಿ ಲಪಟಾಯಿಸಬೇಕೆನ್ನುವದು ಸ್ಪಷ್ಟವಾಗತೊಡಗಿತು.
ಆಡಿಟ್ ಆಸಿಸ್ಟೆಂಟ್ ಹುದ್ದೆಗೆ ಬೇಕಾಗಿದ್ದಾರೆ – ಕನ್ನಡಿಗರಿಗೆ ಆದ್ಯತೆ
-ಅರವಿಂದ್
ಆಡಿಟ್ ಆಸಿಸ್ಟೆಂಟ್ ಹುದ್ದೆಗೆ ಬೇಕಾಗಿದ್ದಾರೆ – ಕನ್ನಡಿಗರಿಗೆ ಆದ್ಯತೆ
ಆಡಿಟಿಂಗ್ ಸಂಸ್ಥೆಯೊಂದಕ್ಕೆ ಸಿ ಎ ಆರ್ಟಿಕಲ್ಸ್ ಅಭ್ಯಾಸ ಮಾಡುತ್ತಿರುವವರು ಅಥವಾ ಬಿ.ಕಾಂ ಪದವೀಧರರಾಗಿದ್ದು ಅನುಭವವಿರುವ ಅಥವಾ ಇಲ್ಲದಿರುವವರು ಬೇಕಾಗಿದ್ದಾರೆ.
ಪರಿಚಯ ಪತ್ರವನ್ನು ಈ ಕೆಳಗಿನ ಮಿಂಚೆಗೆ ಕಳುಹಿಸಿ.
ಹುದ್ದೆಗಳ ಸಂಖ್ಯೆ : ೨
aravindhDOTraoATgmailDOTcom
* * * * * *
ಹುಚ್ಚು ಬುದ್ದಿಯ ಹತ್ತು ಪ್ರತಿಜ್ಞೆಗಳು
-ಪ್ರಶಸ್ತಿ. ಪಿ ಶಿವಮೊಗ್ಗ

೧) FB ಬಿಡಬೇಕು
ನಿನ್ನೆ Times Of India ದಲ್ಲಿ ಓದ್ತಾ ಇದ್ದೆ. ಒಬ್ಬ ಭಾರತೀಯ ದಿನದಲ್ಲಿ ಅಂದಾಜು ೮ ಘಂಟೆ ಕಾಲ ಇಂಟನ್ರೆಟ್ಟಲ್ಲೇ ಕಳೀತಾನೆ ಅಂತ.ಅಂದ್ರೆ ನಾವು ಎಚ್ಚರ ಇರೋದ್ರಲ್ಲಿ ಅರ್ಧ ಭಾಗ ಇಲ್ಲೇ ಆಯ್ತು!! ಅದರಲ್ಲಿ ಕೆಲ ಭಾಗ ಕೆಲಸಕ್ಕಾದ್ರೆ ಕೆಲ ಭಾಗ ಇಲ್ಲೇ.. ಇದರಿಂದ ಏನಾದ್ರೂ ಲಾಭ ಇದ್ಯಾ ? ಸಾಮಾಜಿಕ ತಾಣಗಳು ಇರೋದೇ Time Pass ಗೆ, ಜೀವನದಲ್ಲಿ ಎಲ್ಲದನ್ನೂ ಲಾಭ , ನಷ್ಟ ಅನ್ನೋ ವ್ಯಾಪಾರಿ ಬುದ್ದಿಯಿಂದ ತೂಗಕ್ಕಾಗಲ್ಲಾ ಅಂದ್ರಾ? ಹೂಂ ಅಂದೆ ಕಣ್ರಿ… ಆದ್ರೂ..
೨)ಸಂದೇಶ ಕಳ್ಸೋದನ್ನ(ಮೆಸೇಜ್ ಮಾಡೋದನ್ನ) ಬಿಡ್ಬೇಕು
ಈಗೊಂದು ಆರು ದಿನದ ಹಿಂದೆ ಸಂದೇಶ ಕೌಂಟರನ್ನ ಮರುಸ್ಥಾಪಿಸಿಟ್ಟಿದ್ದೆ. ಖಾಲಿ ಕೂತಾಗ ಅತ್ವಾ ಬೇಜಾರಾದ ದಿನಗಳಲ್ಲಿ ಅಂದಾಜು ಎಷ್ಟು ಸಂದೇಶ ಕಳಿಸ್ತೀನಿ ನೋಡ್ಬೇಕು ಅಂತ.. ಆರು ದಿನ ಬಿಟ್ಟು ನೋಡಿದ್ರೆ ಐನೂರು ಚಿಲ್ರೆ ಆಗಿತ್ತು. ಅದೇನು ಮಹಾ ಅಂದ್ರಾ? ಒಂದು ಮೆಸೇಜಿಗೆ ಒಂದು ೩೦ ಸೆಕೆಂಡು ಅಂತಿಟ್ಕೊಳ್ರಿ.( ದೊಡ್ಡ ಮೆಸೇಜು ಬರ್ಯೋದು ಅಂದ್ರೆ ಒಂದೋ , ಎರ್ಡೋ ನಿಮಿಷನೂ ಆಗ್ಬೋದು. ಅದ್ನ ಸದ್ಯಕ್ಕೆ ಬಿಡೋಣ). ಅದನ್ನ ಕಳಿಸಿದ ಮೇಲೆ ಮತ್ತೊಂದು ೩೦ ಸೆಕೆಂಡಾದ್ರೂ ಅದೇ ಮೂಡಲ್ಲಿರ್ತೀವಾ ?..ಅಲ್ಲಿಗೆ ೧ ನಿಮಿಷ ಆಯ್ತು. ದಿನಕ್ಕೆ ನೂರು ಮೆಸೇಜು ಅಂದ್ರೆ ನೂರು ನಿಮಿಷ ಅಂದ್ರೆ ಸುಮಾರು ಒಂದೂವರೆ ,೨ ಘಂಟೆ !!.. “ಹರ್ ಏಕ್ ಪ್ರೆಂಡ್ ಜರೂರಿ ಹೋತಾ ಹೈ..” ಯಾರ್ನೂ ಬಿಡಕ್ಕೆ ಬರಲ್ಲ.. ಆದ್ರೂ..
ಮತ್ತಷ್ಟು ಓದು 
ನಮ್ಮ ಇತಿಹಾಸ ನಾವೇ ಬರೆದು ಓದೋದು ಬೇಡವೆ?
– ಚಕ್ರವರ್ತಿ ಸೂಲಿಬೆಲೆ
ಬ್ರಿಟಿಷ್ ಅಧಿಕಾರಿ ಮ್ಯಾಲೆಸನ್ ಈ ದೇಶದ ಜನರನ್ನು ಹುಚ್ಚರು ಅಂತ ಕರೀತಾನೆ. ಏಕೆ ಗೊತ್ತೇನು? ನೇಣು ಶಿಕ್ಷೆಗೆ ಕಳಿಸಿದರೆ ಈ ದೇಶದ ಜನ ಹೆದರೋದಿರಲಿ, ತಾವೇ ನೇಣುಗಂಬದ ಬಳಿ ಧಾವಿಸಿ ನೇಣು ಕುಣಿಕೆಯನ್ನು ಕೊರಳಿಗೆ ಹಾಕಿಕೊಂಡುಬಿಡ್ತಾ ಇದ್ದರಂತೆ. ಆದಷ್ಟು ಬೇಗ ನನ್ನ ನೇಣಿಗೇರಿಸಿ ಅಂತ ಗೋಗರಿಯುತ್ತಾ ಇದ್ದರಂತೆ. ಹೀಗೇಕೆಂದು ಪ್ರಶ್ನಿಸಿದಾಗ, ಪುನರ್ಜನ್ಮ ನಂಬೋರು ನಾವು, ಬೇಗ ಹೊರಟರೆ, ಬೇಗ ಮರಳಿ ಬರುತ್ತೇವಲ್ಲ! ಅನ್ನುವ ವಾದ ಮಂಡಿಸುತ್ತಿದ್ದರಂತೆ. ಹೆದರಿಸಬೇಕೆಂದು ನೇಣಿಗೇರಿಸಿದರೆ, ಅದೇ ಪ್ರೇರಣೆಯಾಗುವ ರೀತಿ ಅತೀ ವಿಶಿಷ್ಟವಲ್ಲವೆ? ಅದಕ್ಕೇ ಬ್ರಿಟಿಷರಿಗೆ ಅಷ್ಟೊಂದು ಕೋಪ.
ಮೇ ೧೦ಕ್ಕೆ ೧೮೫೭ರಲ್ಲಿ ಸಂಗ್ರಾಮವೊಂದಕ್ಕೆ ಮುನ್ನುಡಿ ಬರೆಯಲಾಗಿತ್ತು. ಬ್ಯಾರಕ್‌ಪುರದ ಮಂಗಲ್‌ಪಾಂಡೆ ಆಂಗ್ಲ ಪೊಲೀಸ್ ಅಧಿಕಾರಿಯತ್ತ ಗುಂಡು ಸಿಡಿಸಿ, ತಿಂಗಳ ಕೊನೆಯಲ್ಲಿ ಆರಂಭವಾಗಬೇಕಾಗಿದ್ದ ಕ್ರಾಂತಿಗೆ ಆಗಲೇ ಕಿಡಿ ಹಚ್ಚಿಬಿಟ್ಟಿದ್ದ. ಅಲ್ಲಿಂದಾಚೆಗೆ ಮೀರತ್, ದೆಹಲಿಗಳು ಕ್ರಾಂತಿಯ ಕಿಡಿಗೆ ಉರಿದು ಬಿದ್ದವು. ಕಾನ್‌ಪುರ, ಝಾನ್ಸಿಗಳು ಜಯಘೋಷ ಮೊಳಗಿಸಿದವು. ಬಿಹಾರ ಕುದಿಯಿತು. ದಕ್ಷಿಣದಲ್ಲೂ ಬ್ರಿಟಿಷರ ಬುಡಕ್ಕೆ ಬಲವಾದ ಪೆಟ್ಟು ಬಿತ್ತು. ಅಂದುಕೊಂಡಂತೆಯೇ ಎಲ್ಲವೂ ಆಗಿದ್ದರೆ, ಇತಿಹಾಸದ ಹಾದಿ ಬೇರೆಯೇ ಇರುತ್ತಿತ್ತು. ಆ ವೇಳೆಗೆ ಆಂಗ್ಲರೊಟ್ಟಿಗೆ ಕಾದಾಡಿ ಹೈರಾಣಾಗಿದ್ದ ಸಿಕ್ಖರು ಭಾರತೀಯ ಸೈನಿಕರ ಬೆಂಬಲಕ್ಕೆ ಬರಲಿಲ್ಲ. ಅಯ್ಯೋ ಪಾಪ! ಅನ್ನುವ ಕೆಲವಷ್ಟು ಜನ ಆಂಗ್ಲ ಅಧಿಕಾರಿಗಳಿಗೆ ಉಳಿದುಕೊಳ್ಳುವ ಮಾರ್ಗ ತೋರಿದರು. ಅಂತೂ ಮಹಾಯುದ್ಧವೊಂದರಲ್ಲಿ ನಾವು ಸೋತಿದ್ದೆವು.
ಉದ್ಯೋಗಾವಕಾಶ : ೨ ರಿಂದ ೫ ವರ್ಷ ಅನುಭವವಿರುವವರಿಗೆ ಕನ್ನಡಿಗರಿಗೆ
ಗೆಳೆಯರೆ, ಸೀಮೆನ್ಸ್ ಟೆಕ್ನಾಲಾಜಿಕಲ್ ಸೆರ್ವೀಸೆಸ್ ನಲ್ಲಿ ಡಿ.ಬಿ.ಎ/ಎಸ್. ಕ್ಯೂ. ಎಲ್ ಅಥವಾ ಡಾಟಾ ವೇರ್ ಹೌಸಿಂಗ್ ನಲ್ಲಿ ಎರಡರಿಂದ ಐದು ವರ್ಷ ಅನುಭವ ಇರುವ ಇಂಜಿನಿಯರ್ ಗಳಿಗೆ ಅವಕಾಶವಿದೆ. ಕನ್ನಡಿಗರಿಗೆ ಮಾತ್ರ ಈ ಅವಕಾಶ ಸೀಮಿತವಾಗಲಿ. ನಿಮ್ಮ ಪರಿಚಯಪತ್ರವನ್ನು ದಿನಾಂಕ ೨೧-೦೫-೨೦೧೨ ರ ಒಳಗೆ pavanDotan86ATgmaildotcom ಗೆ ಕಳುಹಿಸಿ. ದಯವಿಟ್ಟು ಕನ್ನಡಿಗರಲ್ಲದವರ ಪರಿಚಯ ಪತ್ರ ಬೇಡ.
ಉದ್ಯೋಗದ ಸ್ಥಳ : ಬೆಂಗಳೂರು
ಸಕಲ ಬೈಗುಳಕ್ಕೂ ಅರ್ಹರಿವರು, ಸರ್ವರಿಂದಲೂ ಧೂಷಿತರು
– ಭಾಸ್ಕರ್ ಎಸ್.ಎನ್
ನೀವು ಎಂದಾದರೂ, ಯಾರ ಮೇಲಾದರೂ ನಿಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದೀರಾ? ಅದೂ ಸಹಾ ವಾಚಾಮಗೋಚರ..!
Interesting question..!
ಒಬ್ಬ ವ್ಯಕ್ತಿಯನ್ನು ಮನಸೋ ಇಚ್ಚೆ ಬೈಯಲು ಬೇಕಾದ ಅರ್ಹತೆಗಳೇನು? ಬೈಯಲಿರುವ ವ್ಯಕ್ತಿ ಬೈಸಿಕೊಳ್ಳುವ ವ್ಯಕ್ತಿಗಿಂದ ಅಧಿಕಾರದಲ್ಲಾಗಲೀ, ಅರ್ಹತೆಯಲ್ಲಾಗಲೀ, ಹುದ್ದೆಯಲ್ಲಾಗಲಿ..ಮೇಲ್ಮಟ್ಟದಲ್ಲಿದ್ದಾನೆಂಬ ಏಕ ಮಾತ್ರ ಕಾರಣಕ್ಕೆ ಆತ ಈ ಅರ್ಹತೆ ಗಳಿಸಿರುತ್ತಾನೆ ಎಂಬುದು ಎಷ್ಟರ ಮಟ್ಟಿಗೆ ಒಪ್ಪಿಗೆಗೆ ಅರ್ಹ. ಉನ್ನತ ಮಟ್ಟದಲ್ಲಿದ್ದ ಮಾತ್ರಕ್ಕೇ ಯಾರನ್ನಾದರೂ ಹೇಗಾದರೂ ಧೂಷಿಸುವ ಅರ್ಹತೆಯನ್ನು ಒಬ್ಬ ವ್ಯಕ್ತಿ ಗಳಿಸಿಕೊಳ್ಳುತ್ತಾನೆಯೇ? ಅಥವಾ ಹೀಗೆ ವರ್ತಿಸಿದರೆ ಮಾತ್ರ ಆ ಹುದ್ದೆಗೆ, ಅಧಿಕಾರಕ್ಕೆ ಆತ ಅರ್ಹನೇ?
ಖಂಡಿತ ಇಲ್ಲ. ಕಾನೂನಿನ ಚೌಕಟ್ಟಿಗೆ ಬಂದು ಹೇಳುವುದಾದರೆ, ಯಾವುದೇ ಹುದ್ದೆ, ಅಥವಾ ಯಾವುದೇ ಅಧಿಕಾರ ಹೊಂದಿರುವ ಒಬ್ಬ ವ್ಯಕ್ತಿ ತನ್ನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುವುದಕ್ಕೆ ಮಾತ್ರ ಅರ್ಹ. ಆತ ಯಾವುದೇ ಹುದ್ದೆಯಲ್ಲಿರಲಿ ಅಥವಾ ಎಷ್ಟೇ ಅಧಿಕಾರವನ್ನು ಹೊಂದಿರಲಿ ಮತ್ತೊಬ್ಬ ವ್ಯಕ್ತಿಯನ್ನು ಮಾತಿನ ಮೂಲಕ ಧೂಷಿಸಿವ, ನಿಂದಿಸುವ ಅಥವಾ ಅವಾಛ್ಯ ಶಬ್ದಗಳಿಂದ ತೆಗಳುವುದು ಅಪರಾಧ. ಇದು ಕಾನೂನಿನ ವಿಷಯವಾಯಿತು. ಎಲ್ಲಾ ಕಾಲದಲ್ಲೂ ಎಲ್ಲಾ ಸಂಧರ್ಭಗಳಲ್ಲೂ ಕಾನೂನಿನ ಅನಿವಾರ್ಯತೆ ಅಥವಾ ಅವಶ್ಯಕತೆ ಬರುವುದಿಲ್ಲ ಅಲ್ಲವೇ?
ಹದಿವಯಸೆಂದು ತುಳಿದದ್ದೇ ಹಾದಿಯಾಗಬೇಕೆ?
ಸತ್ಯಮೇವ ಜಯತೇ
– ಚೇತನ್ ಹೊನ್ನವಿಲೆ
ಸತ್ತೇ ಹೋಗದ , ಎ೦ದೂ ಮುಗಿಯದ ಮೇ… ಘಾ ಧಾರಾವಾಹಿಗಳು …, ಬ್ರಾಡ್-ಕಾಸ್ಟ್ ಮಾಡೋದಕ್ಕೆ ಯೋಗ್ಯತೆನೇ ಇಲ್ಲದೇ ಇರೋ.. ಕಿತ್ತೋಗಿರೋ ಕೆಲ ರಿಯಾಲಿಟಿ ಶೋಗಳು, ಅಪ್ಪನ ದುಡ್ಡು ಖರ್ಚು ಮಾಡಲೇಬೇಕ೦ತ ಹುಟ್ಟಿರುವ ಎಡಬಿಡಂಗಿ ಮಕ್ಕಳ ಅಧೋಗತಿ ಸಿನಿಮಾಗಳು. ಸಾಕಪ್ಪಾ ನಿಮ್ಮ ಸಹವಾಸ.
ಸತ್ಯ ಮೇವ ಜಯತೆ ಕಾರ್ಯಕ್ರಮದ ಮೊದಲ ಕ೦ತಿನ ಕಾರ್ಯಕ್ರಮ ನೋಡ್ತಾ ಇದ್ದೆವು(ಕನ್ನಡದಲ್ಲಿ , ಇ೦ಟರ್ನೆಟ್ ನಲ್ಲಿ). ಹೆಣ್ಣು ಮಗುವನ್ನು ಭ್ರೂಣದಲ್ಲಿಯೇ ಕರಗಿಸುವ ಕಟುಕ ಸಮಾಜದ ಕರಾಳತೆಯನ್ನು ೩೬೦ ಡಿಗ್ರಿ ಯಲ್ಲಿ ಹಿಡಿದು ತೋರಿಸುತ್ತಿದ್ದರು. ಕಾರ್ಯಕ್ರಮ ನೋಡ್ತಾ ಇದ್ದವರು ಯಾರೂ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುವ ಧೈರ್ಯ ಮಾಡಲಿಲ್ಲ. ಯಾಕ೦ದ್ರೆ ಎಲ್ಲರ ಕಣ್ಣಲ್ಲೂ ನೀರಿತ್ತು. ಇ೦ತಹ ಸಮಾಜಮುಖಿ ಕಾರ್ಯಕ್ರಮಗಳು ನಮ್ಮವರಿಗೆ ತಲುಪಬೇಕು. ಎಲ್ಲರೂ ಎಚ್ಚೆತ್ತುಕೊಳ್ಳದಿದ್ದರೂ ಪರವಾಗಿಲ್ಲ, ಬದಲಾವಣೆಯ ಗಾಳಿ ನಮ್ಮೂರಿನ ಕಡೆಗೆ ಬೀಸಲಿ.
ನನಗೆ ಅವೆಲ್ಲಾ ಗೊತ್ತಿಲ್ಲಪ್ಪ..?
ಇಷ್ಟು ಅದ್ಭುತವಾಗಿರುವ ಕಾರ್ಯಕ್ರಮವನ್ನು ನಾನು ನಮ್ಮ ಅಪ್ಪ , ಅಮ್ಮ, ಅಜ್ಜಿ, ದೊಡ್ಡಪ್ಪ ಅವರಿಗೆಲ್ಲಾ ತೋರಿಸಬೇಕು. ಡಬ್ಬಿ೦ಗ್ ನ ಸಾಧಕ-ಬಾಧಕ ಗಳು ಏನೇ ಇರಲಿ… ಪ್ಲೀಸ್ ಸತ್ಯ ಮೇವ ಜಯತೆಯ ಕನ್ನಡ ಅವತರಣಿಕೆಯನ್ನು ಟಿವಿ ಯಲ್ಲಿ ಪ್ರಸಾರ ಮಾಡೋದಕ್ಕೆ …. ಅವಕಾಶ ಕೊಟ್ಟು ಬಿಡ್ರಿ. ಪ್ಲೀಸ್
ಇನ್ನು ಇದನ್ನ ಡಬ್ಬಿ೦ಗ್ ಮಾಡಿ ಟಿವಿ ನಲ್ಲಿ ಹಾಕುವುದಕ್ಕೆ ಅಡ್ಡಿ ಬರ್ತಾ ಇರೋ ಕನ್ನಡ ಸಿನಿಮಾ ರ೦ಗದ ಬಗ್ಗೆ ಎರಡು ಮಾತುಗಳನ್ನ ಕಟುವಾಗಿ ಹೇಳಿಬಿಡ್ತೇನೆ.
ಇವರು ತೆಗೆಯುವ ಸಿನಿಮಾಗಳಲ್ಲಿ ಕನ್ನಡತನ, ಸ೦ಸ್ಕೃತಿ ಎಲ್ಲಿರುತ್ತೆ ಪಿ೦ಡ. ಅಷ್ಟಕ್ಕೂ ಕನ್ನಡಿಗರ ಬೇಕು-ಬೇಡಗಳನ್ನು ನಿರ್ಧರಿಸಲು ಇವರು ಯಾರು?ಇವರೆಲ್ಲಾ ಭಾಷೆಯನ್ನ ಗುತ್ತಿಗೆಗೆ ತಗೊ೦ಡಿದಾರಾ ..? ಎಲ್ಲರ೦ತೆ ಇವರೂ ಕೂಡ ತಮ್ಮ ಜೋಳಿಗೆ ತು೦ಬಿಸಿಕೊಳ್ಳುವುದಕ್ಕೇ ಸಿನಿಮಾ ಮಾಡೋದು. ನೇಮು-ಫೇಮು ಕಾಸಿಗ೦ತ ಇವರು ಸಿನಿಮಾ ಮಾಡ್ತಾರೆ. ಮನರ೦ಜನೆಗೆ ಅ೦ತ ನಾವು ದುಡ್ಡು ಕೊಟ್ಟು ಸಿನಿಮಾ ನೋಡ್ತೀವಿ. ಇಲ್ಲಿ ಒಬ್ಬರಿಗೊಬ್ಬರು ಸವೆದುಕೊಳ್ಳುತ್ತಿರುವುದೇನು.. ಸ೦ಸ್ಕೃತಿ, ಭಾಷೆಯನ್ನ ಯಾಕಿವರು ಮಧ್ಯ ಹಿಡ್ಕ್೦ಡ್ ಬರ್ತಾರೆ ಗೊತ್ತಾಗ್ತಿಲ್ಲ. ಮತ್ತಷ್ಟು ಓದು 
ಕಾನೂನಿನಂಗಳ ೩ : ವ್ಯವಹಾರಧರ್ಮ ಮತ್ತು ರಾಜಧರ್ಮ
– ಉಷಾ ಐನಕೈ ಶಿರಸಿ
ಭಾರತೀಯ ಸಂಸ್ಕೃತಿಯಲ್ಲಿ ಬೇರೆ ಬೇರೆ ಸ್ವರೂಪದಲ್ಲಿ ಕಾನೂನುಗಳು ಅಸ್ತಿತ್ವದಲ್ಲಿತ್ತು ಎಂಬ ಬಗ್ಗೆ ಹಲವಾರು ಆಧಾರಗಳು ಸಿಗುತ್ತವೆ. ಶ್ರುತಿ, ಸ್ಮೃತಿ, ಧರ್ಮ, ಸಂಪ್ರದಾಯ ಪದ್ಧತಿ ಎಲ್ಲವೂ ಕಾನೂನಿನಂತೆ ಕೆಲಸ ಮಾಡಿ ಸಮಾಜವು ಸುಸ್ಥಿತಿ ಯಲ್ಲಿ ನಡೆಯಲು ಸಹಾಯಕವಾಗಿದ್ದವು. ಇವು ಗಳಲ್ಲಿ ಕೆಲವು ಲಿಖಿತವಾಗಿ ಇನ್ನೂ ಕೆಲವು ಅಲಿಖಿತ ವಾಗಿ ನಮಗೆ ಗೋಚರವಾಗುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಆಧುನಿಕ ಕಾನೂನುಗಳ ಎಲ್ಲ ಅಂಶಗಳೂ ಪರೋಕ್ಷವಾಗಿ ಭಾರತೀಯದ್ದಾಗಿ ನಮ್ಮ ಸಂಸ್ಕೃತಿಯಲ್ಲಿ ನೆಲೆಗೊಂಡಿತ್ತು.
ಮುಖ್ಯವಾಗಿ ‘ಧರ್ಮ’ ಭಾರತೀಯ ಮನುಷ್ಯರನ್ನು ನಿಯಂತ್ರಿಸುತ್ತಿತ್ತು. ಧರ್ಮ ಅಂದರೆ ಗುಣ, ನಿಜವಾದ ಯಾವುದರಲ್ಲಿ ಯಾವುದು ಇರಬೇಕೋ ಅದೇ ಧರ್ಮ. ಇದು ಸಾಮರಸ್ಯಗೊಳ್ಳುವುದು ಹೇಗೆ? ಅದೇ ಧರ್ಮದ ಶಕ್ತಿ. ಕಾಮ, ಕ್ರೋಧ, ಮೋಹ, ಮದ ಲೋಭ, ಮಾತ್ಸರ್ಯ ಈ ಅರಿಷಡ್ವರ್ಗಗಳನ್ನು ಗೆಲ್ಲದೇ ಮೋಕ್ಷ ಸಾಧ್ಯವಿಲ್ಲ ಎಂಬುದು ನಮ್ಮ ಪ್ರಾಚೀನ ಪರಂಪರೆಯ ನಂಬಿಕೆಯಾಗಿತ್ತು. ಮೋಕ್ಷ ಎಂದರೆ ಒಂದು ಆದರ್ಶ. ಒಂದು ಅಪವಾದವಿಲ್ಲದ ಸ್ಥಿತಿ. ಆ ಕಾರಣಕ್ಕಾಗೇ ಧರ್ಮ ಮನುಷ್ಯನನ್ನು ಮೋಕ್ಷದೆಡೆಗೆ ಮುಖ ಮಾಡಿ ಸುತ್ತಿತ್ತು. ಈ ಮೋಕ್ಷವನ್ನು ಸಾಧಿಸುವ ಮಾರ್ಗದಲ್ಲೇ ಮನುಷ್ಯ ತನಗೆ ತಾನೇ ಹಲವಾರು ಕಟ್ಟು ಪಾಡುಗಳಿಗೆ ಬದ್ಧನಾಗುತ್ತಿದ್ದ. ಸನ್ನಡ ತೆಗೆ ಪ್ರಾಮುಖ್ಯತೆ ಕೊಡುತ್ತಿದ್ದ. ಹೀಗೇ ತಮಗೆ ತಾವೇ ಸ್ವಯಂ ಆರೋಪಿಸಿಕೊಳ್ಳುವ ಕಾನೂನು ಎಂದರೆ ಧರ್ಮ.






