ಗಣಿತ, ವಿಜ್ಞಾನ ಮತ್ತು ಸ್ವತಂತ್ರ ಅಸ್ತಿತ್ವ
-ಬಾಲಚಂದ್ರ ಭಟ್
ಗಣಿತ ಎಂದರೆ ಏನು?ಅಂಕೆ, ಸಂಖ್ಯೆಗಳು ಎಲ್ಲಿಂದ ಬಂತು?ಇವು ನಿಜವೇ? ಗಣಿತದ ಉಗಮ ಮನುಷ್ಯನ ಬುದ್ಧಿ ಸಾಮರ್ಥ್ಯದ ಮುಖಾಂತರ ರೂಪುಗೊಂಡದ್ದೋ ಅಥವಾ ಮನುಷ್ಯನಿಂದ ಹೊರತಾದ ಸ್ವತಂತ್ರ ಅಸ್ತಿತ್ವವನ್ನು ಹೊಂದಿದೆಯೋ?
ಬಹುಷಃ ಈ ಪ್ರಶ್ನೆಗಳನ್ನು ಉತ್ತರಿಸುವದು ಸ್ವತಃ ಗಣಿತದಲ್ಲಿ ಅಗಾಧ ಪ್ರತಿಭೆಯನ್ನು ಹೊಂದಿದವರಿಗೂ ಕಷ್ಟ. ಆದರೂ ಹಿಂದಿನ ಕಾಲದ ಅಂದರೆ ಗ್ರೀಕರ ಕಾಲದ ಪೈಥಾಗೊರಸ್ ನಿಂದ ಹಿಡಿದು ೧೯ ನೆಯ ಶತಮಾನದ ಲಿಯೋಪೋಲ್ಡ್ ಕ್ರೋನೆಕರ್ (Leopold Kronecker) ವರೆಗಿನ ಬಹುತೇಕ ಗಣಿತದ ತಜ್ಞರು ಗಣಿತವು ಸ್ವತಂತ್ರ ಅಸ್ತಿತ್ವವನ್ನು ಹೊಂದಿದೆಯೆಂದೂ, ಅಂಕೆ, ಸಂಖ್ಯೆಗಳು ಮಾನವ ನಿರ್ಮಿತವಾಗಿರದೆ ಅವುಗಳು ಸರ್ವಸ್ವತಂತ್ರ ಸತ್ಯ, ನಿತ್ಯಸ್ಥಾಯಿ, ಹಾಗೂ ಮೌಲ್ಯವನ್ನು ಸೂಚಿಸುವ ಆದರ್ಶ ಮಾನ ಎಂದೂ ನಂಬಿದ್ದರು. ಆದರೆ ಅದಕ್ಕಿಂತಲೂ ಮುಖ್ಯವಾಗಿ ಇಂತಹ ಪ್ರಶ್ನೆಗಳು ಗಣಿತಶಾಸ್ತ್ರದ ಪ್ರಕಾರ ಬಹುಷಃ ಅಸಂಬದ್ಧ. ಆದ್ದರಿಂದಲೇ ಇದನ್ನು ಚರ್ಚಿಸುವ ಗೋಜಿಗೆ ಯಾರೂ ಹೋಗಲಿಲ್ಲ. ಆದರೆ ಮನೋವಿಜ್ಞಾನಿಗಳಿಗೆ, ಗಣಿತ ಹಾಗೂ ಅದರ ನಿಯಮಗಳಿಗಿಂತಲೂ ಈ ಮೇಲಿನ ಪ್ರಶ್ನೆಗಳು ಬಹಳ ಮುಖ್ಯ.
ಆದರೆ, ನಿಜಕ್ಕೂಗಣಿತವು ಮಾನವನ ಬುದ್ಧಿಶಕ್ತಿ ಹಾಗೂ ಗ್ರಾಹ್ಯಶಕ್ತಿ(perception) ಯಿಂದ ಹೊರತಾದ ‘ಸ್ವತಂತ್ರ’ ಅಸ್ತಿತ್ವವನ್ನು ಹೊಂದಿಲ್ಲ. ಅಂಕೆಗಳು, ಸಂಖ್ಯೆಗಳು ಹಾಗೂ ಗಣಿತದ ನಿಯಮಗಳು ಬರೇ ಮಾನವನ ಗ್ರಾಹ್ಯ ಶಕ್ತಿಯಿಂದ ನಿರ್ಮಿತವಾದವು ಮತ್ತು ಮಾನವನ ಗ್ರಾಹ್ಯಶಕ್ತಿಗೆ ಹಾಗೂ ಬುದ್ಧಿ ಶಕ್ತಿಗೆ ತಕ್ಕಂತೆ ಅವು ‘ಸತ್ಯ’ ಅಷ್ಟೆ. ಅಲ್ಬರ್ಟ್ ಐನ್ ಸ್ಟೀನ್ ತಮ್ಮ ಸೊಗಸಾದ ವೈಜ್ಞಾನಿಕ ಭಾಷೆಯಲ್ಲಿ ಹೀಗೆ ಹೇಳುತ್ತಾರೆ ”the series of integers is obviously an invention of the human mind, a self-created tool which simplifies the ordering of certain sensory experiences (ನಿಜವಾಗಿಯೂ ಕ್ರಮಾನುಗತ ಸಂಖ್ಯೆಗಳೆಲ್ಲವೂ ಮಾನವನ ಬುದ್ಧಿಯಿಂದ ರಚಿತವಾದವುಗಳು ಮತ್ತು ಅವುಗಳು ಮನುಷ್ಯನ ಇಂದ್ರಿಯಾನುಭವಗಳ ಅನುಕ್ರಮವನ್ನು ಸುಲಭಗೊಳಿಸಲು ಮಾನವನಿಂದ ಸ್ವ-ನಿರ್ಮಿತವಾದವು)”. ಮನಶ್ಯಾಸ್ತ್ರಜ್ಞರೇ ಹೇಳಿದಂತೆ ಎಷ್ಟು ಸ್ಪುಟವಾಗಿದೆ!
ಡಬ್ಬಿಂಗ್ ಅವಶ್ಯಕವೇ?

ಡಬ್ಬಿಂಗ್ ಆದರೇನು ಶಿವ, ನಮಗೆ ಬೇಕಾಗಿರುವುದು ಎಂಟರ್ಟೇನ್ಮೆಂಟ್… ಎಂಟರ್ಟೇನ್ಮೆಂಟ್…
-ಶ್ರೀಧರ್ ಜಿ ಬನವಾಸಿ
ಕನ್ನಡಿಗರಿಗೆ ಇದಕ್ಕಿಂತ ದೊಡ್ಡ ದೌಭಾರ್ಗ ಇನ್ನೊಂದಿಲ್ಲ. ಬಿಬಿಸಿ, ಡಿಸ್ಕವರಿ, ನ್ಯಾಷನಲ್ ಜಿಯೋಗ್ರಾಫಿಕ್ನಂತಹ ಜಗತ್ತೇ ಮೆಚ್ಚಿದ ಚಾನೆಲ್ಗಳನ್ನು ಕರ್ನಾಟಕದಲ್ಲಿದ್ದುಕೊಂಡು ತಮಿಳು, ತೆಲಗು, ಹಿಂದಿ ಭಾಷೆಯಲ್ಲಿ ನೋಡಬೇಕಾದ ಪರಿಸ್ಥಿತಿ ಮಾತ್ರ ಆಗಿರುವುದು ಕನ್ನಡದದವರ ದುರಂತ. ಈ ದುರಂತದ ಅಧ್ಯಾಯಕ್ಕೆ ಕಾರಣವಾಗಿರುವವರು ಕೂಡ ನಮ್ಮ ಕನ್ನಡಿಗರೇ. ಡಬ್ಬಿಂಗ್ ಸಂಸ್ಕೃತಿ ನಮ್ಮ ಕನ್ನಡಕ್ಕಲ್ಲ ಅಂತ ಹೇಳುವ ಕನ್ನಡ ಚಿತ್ರರಂಗದ ಒಂದು ಪ್ರಭಾವಿ ವರ್ಗ ಒಂದು ರೀತಿಯಲ್ಲಿ ತಮ್ಮ ತಮ್ಮ ವೈಯಕ್ತಿಕ ಸ್ವಾರ್ಥಕ್ಕನುಸಾರಕ್ಕಾಗಿ ಡಬ್ಬಿಂಗ್ ಬೇಡ ಅನ್ನುವ ಅಸ್ತ್ರವನ್ನು ಇಂದಿಗೂ ತಮ್ಮಲ್ಲಿ ಇಟ್ಟುಕೊಂಡು ಕನ್ನಡ ಚಿತ್ರೋದ್ಯಮದ ಹಾಗೂ ಮನರಂಜನಾ ಟೀವಿ ಉದ್ಯಮದ ಬೆಳವಣಿಗೆ ಕುಂಠಿತವಾಗಲು ಕಾರಣವಾಗಿದ್ದಾರೆ. ಅಷ್ಟಕ್ಕೂ ಡಬ್ಬಿಂಗ್ ಕನ್ನಡ ಸಂಸ್ಕೃತಿಯಲ್ಲ ಅಂತ ಹೇಳುವವರಿಗೆ, ಮೊದಲು ನಮ್ಮ ಕನ್ನಡ ಸಂಸ್ಕೃತಿ ಏನು ಎಂಬುವನ್ನು ದಯವಿಟ್ಟು ಬಿಡಿಸಿಹೇಳಬೇಕಾಗಿದೆ. ಕನ್ನಡ ಮಣ್ಣಿನ ಸೊಗಡು ಅಂತ ಹೇಳಿಕೊಂಡು ರಿಮೇಕ್ ಚಿತ್ರಗಳು ಹಾಗೂ ರಿಮೇಕ್ ಧಾರಾವಾಹಿಗಳ ಮೇಲೆ ನೂರಾರು ಕೋಟಿ ರೂಪಾಯಿ ಹರಿದು ಹಾಳಾಗಿ ಕನ್ನಡ ಉದ್ಯಮಶೀಲದ ಬುಡಕ್ಕೆ ದೊಡ್ಡ ಪೆಟ್ಟು ಬೀಳುತ್ತಿರುವುದು, ಇದರ ಜೊತೆಗೆ ಆಗುತ್ತಿರುವ ಅನ್ಯ ಭಾಷೆಯ ಸಂಸ್ಕೃತಿಯ ಹೇರಿಕೆ ಮಾತ್ರ ಡಬ್ಬಿಂಗ್ ವಿರೋಧಿಸುತ್ತಿರವವರಿಗೆ ಕಾಣುತ್ತಿಲ್ಲ.
ಡಬ್ಬಿಂಗ್ ಬಗ್ಗೆ ಈ ಹಿಂದೆ ಅಂದರೆ ಸುಮಾರು ನಾಲ್ಕು ದಶಕಗಳ ಹಿಂದೆ ದೊಡ್ಡ ಹೋರಾಟವಾಗಿದ್ದು ನಿಜಕ್ಕೂ ಒಪ್ಪುವಂತದ್ದು. ಆಗಿನ ಸಮಯದಲ್ಲಿ ಡಬ್ಬಿಂಗ್ ವಿರುದ್ಧ ಹೋರಾಟ ಆಗಿಲ್ಲದಿದ್ದರೆ ಈಗಿನ ನಮ್ಮ ಕನ್ನಡ ಚಿತ್ರರಂಗವನ್ನು ನಾವು ಕಲ್ಪಿಸಿಕೊಳ್ಳುವುದು ಕೂಡ ಕಷ್ಟ ಸಾಧ್ಯ. ವರನಟ ಡಾ.ರಾಜ್ಕುಮಾರ್ ಸಾರಥ್ಯದಲ್ಲಿ ಕನ್ನಡ ಚಿತ್ರರಂಗ ಹಾಗೂ ಅನಕೃ ಅವರ ನೇತೃತ್ವದಲ್ಲಿ ಸಾಹಿತ್ಯವಲಯ ಒಟ್ಟಾಗಿ ಅಂದು ದೊಡ್ಡ ಹೋರಾಟ ಮಾಡಿದ್ದವು. ಆಗಿನ ಡಬ್ಬಿಂಗ್ ಹೋರಾಟಕ್ಕೆ ನೂರಕ್ಕೆ ನೂರರಷ್ಟು ಅರ್ಥ ಇತ್ತು. ಆಗಿನ ಪರಿಸ್ಥಿತಿ ಕೂಡ ಹೋರಾಟಕ್ಕೆ ಪೂರಕವಾಗಿತ್ತು. ಇದಕ್ಕೆ ನೀಡುವ ಕಾರಣಗಳನ್ನು ಕೂಡ ಪಟ್ಟಿಮಾಡುವುದಾದರೆ, ಅಂದು ಸಿನಿಮಾ ಹಾಗೂ ಕನ್ನಡ ಸಾಹಿತ್ಯ ಒಂದೇ ನಾಣ್ಯದ ಮುಖಗಳಾಗಿದ್ದವು. ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳು ಸಿನಿಮಾ ಉದ್ಯಮದಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡಿದ್ದರು. ಹಾಗಾಗಿಯೇ ಅಂದಿನ ಕನ್ನಡ ಸಿನಿಮಾಗಳಲ್ಲಿ ದ.ರಾ.ಬೇಂದ್ರೆ, ಶಿವರಾಮಕಾರಂತ, ಕುವೆಂಪು, ತ್ರಿವೇಣಿ, ಅನಕೃ, ತರಾಸು, ಎಸ್.ಎಲ್.ಭೈರಪ್ಪ, ಯು.ಆರ್.ಅನಂತಮೂರ್ತಿ, ಎಂ.ಕೆ.ಇಂದಿರಾ, ಆಲನಳ್ಳಿ ಕೃಷ್ಣ, ಪಿ.ಲಂಕೇಶ್, ರಾಮರಾಯರು, ಗಿರಡ್ಡಿ ಗೋವಿಂದರಾಜು ಇನ್ನು ಹಲವಾರು ಸಾಹಿತಿಗಳ ಕೃತಿಗಳು ಕನ್ನಡ ಸಿನಿಮಾ ಉದ್ಯಮಕ್ಕೆ ಉಸಿರಾಗಿದ್ದವು. ಅಕಸ್ಮಾತ್ ಬೇರೆ ಭಾಷೆಯ ಸಿನಿಮಾಗಳನ್ನು ಡಬ್ಬಿಂಗ್ ಮಾಡಿ ಬಿಡುವುದರಿಂದ ಮೂಲ ಕನ್ನಡ ಕೃತಿಗಳನ್ನು ಬಳಸಿಕೊಳ್ಳಲು ಆಗುವ ತೊಡಕನ್ನು ಮನಗಂಡು ಡಬ್ಬಿಂಗ್ಗೆ ಸಾಹಿತ್ಯವಲಯದ ಕಡೆಯಿಂದ ಬೆಂಬಲ ಸಿಕ್ಕಿತ್ತು. ಕನ್ನಡ ಚಿತ್ರರಂಗ ಆಗಿನ್ನೂ ಮದ್ರಾಸ್ ಪ್ರಾಂತ್ಯದಲ್ಲಿ ನೆಲೆಯೂರಿದ್ದರಿಂದ ಕನ್ನಡ ಸಿನಿಮಾಗಳ ನಿರ್ಮಾಣವೇ ದೊಡ್ಡ ಸವಾಲಾಗಿತ್ತು. ವರ್ಷಕ್ಕೆ 40-50 ಕನ್ನಡ ಸಿನಿಮಾಗಳು ನಿರ್ಮಾಣವಾದರೆ ಹೆಚ್ಚಾಗಿತ್ತು, ನಿರ್ಮಾಣವಾದ ಈ ಅಷ್ಟೂ ಸಿನಿಮಾಗಳಲ್ಲಿ ಹೆಚ್ಚಿನವರು ಪರಭಾಷಾ ತಂತ್ರಜ್ಞರು, ನಿರ್ಮಾಪಕ, ನಿರ್ದೇಶಕರಿಗೇನೆ ಹೆಚ್ಚೆಚ್ಚು ಕೆಲಸ ಸಿಗುತ್ತಿತ್ತು. ತಂತ್ರಜ್ಞರಿಗೆ ಅಗಾಧ ಬೆಲೆ ಇದ್ದ ಸಂದರ್ಭದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ಸಿನಿಮಾ ತಂತ್ರಗಾರಿಕೆ ಹಾಗೂ ನೈಪುಣ್ಯತೆಯ ವಿಷಯ ಬಂದಾಗ ಕನ್ನಡಿಗರು ಅವಕಾಶ ವಂಚಿತರಾಗಿದ್ದರು. ಅಂದು ಕರ್ನಾಟಕದಲ್ಲಿ ಸಿನಿಮಾಭಾಷೆಯನ್ನು ಕಲಿಸುವಂತಹ ತರಬೇತಿ ಸಂಸ್ಥೆಗಳು, ಸ್ಟುಡಿಯೋಗಳು ಯಾವುವು ಇಲ್ಲಿರಲಿಲ್ಲ.
ಇಂತಹ ಸಂದರ್ಭದಲ್ಲಿ ಕನ್ನಡ ಸಿನಿಮಾ ಉದ್ಯಮವೇ ಪರಭಾಷಾದವರ ಹಿಡಿತಕ್ಕೆ ಬಂದು, ಬೇರೆ ಭಾಷೆಯ ಸೂಪರ್ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ಬಿಡುವಂತಹ ಪರಿಸ್ಥಿತಿ ಬಂದ ಸಂದರ್ಭದಲ್ಲಿ ಕನ್ನಡ ಕಲಾವಿದರು ಈ ಬಂಧನ ಹಾಗೂ ತಮ್ಮ ಅಸ್ತ್ತಿತ್ವವನ್ನು ಉಳಿಸಿಕೊಳ್ಳಲೇಬೇಕಾದ ಪರಿಸ್ಥಿತಿ ಅಂದಿತ್ತು. ಇದೆಲ್ಲಾ ಡಬ್ಬಿಂಗ್ ಹೋರಾಟಕ್ಕೆ ಅಂದು ದೊಡ್ಡ ಕಾರಣವಾಗಿತ್ತು. ಆದರೆ ಇಂದು ನಮ್ಮ ಕನ್ನಡ ಚಿತ್ರರಂಗ ಆ ತರಹದ ಪರಿಸ್ಥಿತಿಯನ್ನು ಎದುರಿಸುತ್ತಿದೆಯೇ? ಕನ್ನಡ ಚಿತ್ರರಂಗದಲ್ಲಿ ಇಂದು ವರ್ಷಕ್ಕೆ ನೂರಕ್ಕೂ ಹೆಚ್ಚು ಸಿನಿಮಾಗಳು ನಿರ್ಮಾಣವಾಗುತ್ತಿವೆ. ಇಂದು ತಾಂತ್ರ್ರಿಕವಾಗಿ ಬೇರೆ ಭಾಷೆಯವರಷ್ಟೇ ನಾವು ಮುಂದುವರೆದಿದ್ದೇವೆ. ಸ್ವಂತ ಸ್ಟುಡಿಯೋಗಳಿವೆ, ವರ್ಷಕ್ಕೆ 400 ರಿಂದ 500 ಕೋಟಿ ರೂಪಾಯಿಗಳು ಕನ್ನಡ ಚಿತ್ರರಂಗದಲ್ಲಿ ಒಳ ಹಾಗೂ ಹೊರಹರಿವು ಆಗುತ್ತಿದೆ. ಇದೆಲ್ಲಾ ಕನ್ನಡ ಚಿತ್ರರಂಗದ ಬೆಳವಣಿಗೆಯನ್ನು ಎತ್ತಿಹಿಡಿಯುತ್ತದೆ. ಬೇರೆ ಭಾಷೆಯಲ್ಲೂ ಇದೇ ಪರಿಸ್ಥಿತಿ ಇದೆ. ಅವರೆಲ್ಲ ಡಬ್ಬಿಂಗ್ ಉದ್ಯಮವನ್ನು ಒಪ್ಪಿಕೊಂಡು ಬದುಕುತ್ತಿಲ್ಲವೇ?
ಅವಿವೇಕಿ ಮಿತ್ರನಿಗಿಂತ ವಿವೇಕಿ ಶತ್ರು ಮೇಲು
ಪ್ರವೀಣ ಓದೋ ವಿಷಯದಲ್ಲಿ ಯಾವಾಗ್ಲೂ ಸೋಂಬೇರಿ,ಅಪ್ಪ ಅಮ್ಮ ಎಷ್ಟು ಬೈದರೂ ತನ್ನ ಲೋಕದಲ್ಲೇ ಮಗ್ನ, ಸ್ನೇಹಿತರ ಜೊತೆ ಯಾವಾಗ್ಲೂ ತಿರುಗಾಡೋದು, ಅಪ್ಪ ಅಮ್ಮನ ಹತ್ರ ಹಣ ತೆಗೆದುಕೊಂಡು ಸಿನಿಮಾ ನೋಡೋದು, ಭಾನುವಾರ ಬಂದ್ರೆ ಸಾಕು ಬೆಳಿಗ್ಗೆ ಇಂದ ಸಂಜೆಯವರೆಗೂ ಬೆಟ್ಟಿಂಗ್ನಲ್ಲಿ ಕ್ರಿಕೆಟ್ ಆಡೋದು ಇದೇ ಕೆಲಸ, ಅಪ್ಪ ಅಮ್ಮನಿಗೂ ಬುದ್ಧಿ ಹೇಳಿ ಹೇಳಿ ಸುಸ್ತಾಗಿತ್ತು. ಹುಡುಗ್ರ ಸಹವಾಸ ಬರೀ ಆಡುವುದಕ್ಕೆ ಸೀಮಿತವಾಗದೆ ದುಶ್ಚಟಗಳ ಕಡೆಯೂ ಸಹ ವಾಲಿತ್ತು. ಮನೆಗೆ ಬಂದಾಗ ಒಮ್ಮೆ ಧೂಮಪಾನದ ಘಮಲು ಅಮ್ಮನ ಮೂಗು ಬಡಿದಿತ್ತು. ಆಗಾಗ ಅಪ್ಪನ ಜೇಬಿನಿಂದ ನೋಟುಗಳು ಸಹ ಕಾಣೆಯಾಗುತಿದ್ದವು. ಅಪ್ಪ ಅಮ್ಮ ಇಬ್ಬರು ಚರ್ಚಿಸಿ ಏನು ಮಾಡುವುದು ಎಂದು ಯೋಚಿಸಿ ಒಂದು ನಿರ್ಧಾರಕ್ಕೆ ಬಂದರು.
ಮರುದಿನ ಭಾನುವಾರ ಪ್ರವೀಣ ಎಂದಿನಂತೆ ಹೇಳದೆ ಕೇಳದೆ ಕ್ರಿಕೆಟ್ ಆಡಲು ಹೊರಟು ಬಿಟ್ಟ, ಅಪ್ಪ ಅಮ್ಮ ಸೀದ ಅವರಪ್ಪನ ಮನೆಗೆ ಹೋಗಿ ಪ್ರವೀಣನ ತಾತನನ್ನು ಕರೆ ತಂದರು. ತಾತನಿಗೆ ವಯಸ್ಸು ಸುಮಾರು ೭೦ ಆಗಿದ್ದರು ಬಹಳ ಚುರುಕು, ಕಾಲ ಕಾಲಕ್ಕೆ ತಾನು ಸಹ ಬದಲಾಗಿದ್ದಂತಹ ಘಾಟಿ ಮುದುಕ. ಕಂಪ್ಯೂಟರ್, ಕ್ರಿಕೆಟ್, ಸಿನಿಮಾ ಎಲ್ಲಾದ್ರಲ್ಲು ಎತ್ತಿದ ಕೈ. ಕ್ರಿಕೆಟ್ ಆಡಲು ಹೋಗಿದ್ದ ಪ್ರವೀಣ ಎಂದಿನಂತೆ ಮನೆಗೆ ಬಂದ, ಬಂದೊಡನೆ ತಾತನನ್ನು ನೋಡಿ ಆಶ್ಚರ್ಯ ಚಕಿತನಾದ, ತಾತನ ಕಾಲಿಗೆ ನಮಸ್ಕಾರ ಮಾಡೋ ಅಂತ ಅಪ್ಪ ಹೇಳೋ ತನಕ ಇವ್ನಿಗೆ ತೋಚಲಿಲ್ಲ, ಮಾಡ್ತೀನಿ ಕೈ ಕಾಲು ತೊಳ್ಕೊಂದು ಬಂದೆ ಅಂತ ಸ್ನಾನದ ಮನೆಗೆ ಹೋಗಿ ಟೂತ್ ಪೇಸ್ಟ್ ನ ಒಂದಷ್ಟು ಬಾಯಿಗೆ ಹಾಕಿಕೊಂಡು ಮುಕ್ಕಳಿಸಿ ಬಂದ, ಬಂದೊಡನೆ ನಮಸ್ಕಾರ ಮಾಡಿದಾಗ ತಾತನಿಗೆ ಧೂಮಪಾನದ ಘಮಲು ತಿಳಿದು ಬಿಡ್ತು. ಅದೂ ಅಲ್ದೆ ಮೊದಲೇ ಪ್ರವೀಣನ ಅಪ್ಪ ಅಮ್ಮ ತಮ್ಮ ಮಗ ದಾರಿ ತಪ್ತಾ ಇದ್ದಾನೆ ಅನ್ನೋ ವಿಷಯ ಬೇರೆ ಮೊದಲೇ ಹೇಳಿದ್ರು. ವಿಷಯ ಗೊತ್ತಾದ್ರು ತಾತ ಮುಗುಮ್ಮನೆ ಇದ್ದರು.
ಮಾರನೆ ದಿನ ಪ್ರವೀಣ ಕಾಲೇಜಿಗೆ ಅಂತ ಹೊರಟಾಗ, ತಾತ ಸಹ ತಯಾರಾಗಿ ಮೊಮ್ಮಗನೊಂದಿಗೆ ಹೊರಡಲು ಸಿದ್ದರಾಗಿದ್ದರು, ಪ್ರವೀಣ ತಾತ ಹಾಗೆಲ್ಲ ನಿಮ್ಮನ್ನ ಕಾಲೇಜಿಗೆ ಬಿಡಲ್ಲ, ಬಹಳಾ ಶಿಸ್ತು ಅಲ್ಲಿ ಅಂತೆಲ್ಲ ಹೇಳ್ದ, ಅದಕ್ಕೆ ತಾತ ನಾ ನೋಡದೇ ಇರೋ ಕಾಲೇಜೇನೋ ಅದು, ನೀನ್ ಓದ್ತಾ ಇರೋ ಕಾಲೇಜು ನನ್ನ ಫೇಸ್ಬುಕ್ ಗೆಳೆಯ ಪ್ರಕಾಶ್ ರಾಜು ದು, ಅವರು ನಾನು ಇಲ್ಲಿಗೆ ಬಂದಿರೋ ಸ್ಟೇಟಸ್ ನೋಡಿದ್ರಂತೆ, ಫೋನ್ ಮಾಡಿದ್ರು ಅದಕ್ಕೆ ಬರ್ತಾ ಇದ್ದೀನಿ ಅಂತ ಪ್ರವೀಣಂಗೆ ಒಳ್ಳೆ ಟಾಂಗ್ ಕೊಟ್ಟ್ರು. ಪ್ರವೀಣನ ಮೊಬೈಲ್ ಗೆ ಅವನ ಗೆಳೆಯನ ಫೋನ್ ಬಂತು, ಏನ್ ಮಗಾ ಸಿನಿಮಾಗೆ ಟಿಕೆಟ್ ತೊಗೊಂಡು ಕಾಯ್ತಾ ಇದ್ದೀವಿ ಎಲ್ಲಿದ್ಯ ಇನ್ನ?? ಪ್ರವೀಣ,ತಾತನ ಜೊತೆ ಇದ್ದೀನಿ ಮಗಾ ಆಮೇಲೆ ಫೋನ್ ಮಾಡ್ತೀನಿ ಅಂದ. ಫೋನ್ ಕಟ್ ಆದ ಮೇಲೆ ತಾತ ಕೇಳಿದ್ರು ಏನು ಸಿನಿಮಾಗೆ ಹೋಗ್ಬೇಕ ಅಂತ, ಅದಕ್ಕೆ ಪ್ರವೀಣ ಹೌದು ನಿಮಗೆ ಹೇಗೆ ಗೊತ್ತಾಯ್ತು ತಾತ ಅಂದ, ಅದಕ್ಕೆ ರಾತ್ರಿ ನೀನು ನಿನ್ನ ಗೆಳೆಯನ ಜೊತೆ ಫೋನಲ್ಲಿ ಮಾತಾಡ್ತಾ ಇದ್ದಲ್ಲ ಆಗ ಕೇಳಿಸ್ತು ನಂಗೆ ಅಂದ್ರು. ಆದ್ರೆ ಕಾಲೇಜಿಗೆ ಚಕ್ಕರ್ ಹೊಡೆದು ಸಿನಿಮಾ ನೋಡೋದು ತಪ್ಪಲ್ವ ಅಂದ್ರು. ಪ್ರವೀಣನಿಗೆ ಉತ್ತರ ಕೊಡಲು ಆಗ್ಲಿಲ್ಲ, ಕಡೆಗೆ ತಾತ, ನಿನ್ ಸ್ನೇಹಿತನಿಗೆ ಫೋನ್ ಮಾಡಿ ಹೇಳು ನನಗೂ ಒಂದು ಟಿಕೆಟ್ ತೊಗೊ ಅಂತ ನಾನು ಬರ್ತೀನಿ ಅಂದ್ರು. ಪ್ರವೀಣನಿಗೆ ಒಂದು ಕಡೇ ಖುಷಿ ಆಯ್ತು ಮತ್ತೆ ಭಯ ಸಹ ಆಯ್ತು ಮನೇಲಿ ಹೇಳಿಬಿಟ್ರೆ ಅಂತ ಅಷ್ಟ್ರಲ್ಲಿ ತಾತ, ನೀನೇನು ಯೋಚಿಸ ಬೇಡ ಮನೇಲಿ ನಾ ಏನು ಈ ವಿಷಯ ತಿಳಿಸಲ್ಲ ಅಂದಾಗ ಸ್ವಲ್ಪ ಸಮಾಧಾನ ಆಯ್ತು.
ನಂದಿ ಬೆಟ್ಟ ಟ್ರಿಪ್ -೧
– ಪ್ರಶಸ್ತಿ.ಪಿ, ಸಾಗರ
ಬೆಂಗಳೂರಿಗೆ ಬಂದು ಪೀಜಿ ಹಿಡ್ದಾಗಿನಿಂದ ವಾರಾಂತ್ಯದಲ್ಲಿ ಎಲ್ಲೂ ಸುತ್ಲಿಲ್ಲ ಅಂದ್ರೆ ಏನೋ ಮಿಸ್ಸಿಂಗು, ಬೋರಿಂಗು ಅನ್ಸೋಕೆ ಶುರು ಆಗತ್ತೆ. ಮಾಡಕ್ಕೆ ಬೇರೆ ಕೆಲ್ಸ ಇಲ್ಲದೇ ಸುತ್ತೋದು ಅಂತೇನೂ ಅಲ್ಲ..ಆದ್ರೆ ಯಾಕೋ ಗೊತ್ತಿಲ್ಲ “ದೇಶ ಸುತ್ತು, ಕೋಶ ಓದು ಅಂತಾರಲ್ಲ”. ಅದರಲ್ಲಿ ೨ನೇದೇ ಸ್ವಲ್ಪ ಇಷ್ಟ ಆಗ್ತಿತ್ತು ನಂಗೆ. ಹಿಂಗಿರೋವಾಗ ಬೆಂಗಳೂರಲ್ಲೇ ಇದ್ದು ನಂದಿ ಬೆಟ್ಟಕ್ಕೆ ಹೋಗಿಲ್ಲ ಅಂದ್ರೆ ಹೆಂಗೆ ಅಂತ ಅನ್ಸಿಬಿಡ್ತು ಒಂದು ವಾರ. ಕೆಲ ತಿಂಗಳ ಹಿಂದೆ ಹರೀಶಣ್ಣ ಮತ್ತು ತಂಡದವ್ರು ಹೋಗಿದ್ದ ಫೋಟೋ ನೋಡಿ ನಾನೂ ಹೋಗ್ಬೇಕಿತ್ತು, ಛೆ , ಅಂತ ಆಸೆ ಆಗಿದ್ದೂ ಸುಳ್ಳಲ್ಲ. ಸರಿ ಅಂತ ಮುಂದಿನ ಶನಿವಾರಕ್ಕೆ ಅಲ್ಲಿಗೇ ಹೋಗದು ಅಂತ ಫಿಕ್ಸ್ ಮಾಡಿ ಸ್ವಲ್ಪ ಚೇಂಜ್ ಇರ್ಲಿ ಅಂತ FB ಲೊಂದು Event ಮಾಡಿಕರಿದ್ವಿ..೨-೩ ದಿನ ಆದ್ರೂ ಪ್ರತಿಕ್ರಿಯೆ ನೋಡಿ ಕೂಸು ಹುಟ್ಸಕ್ಕೆ ಮುಂಚೇನೆ ಕುಲಾವಿ ಹೊಲ್ಸಿದ್ವಾ ಅಂತನೇ ಅನಿಸ್ತಿತ್ತು. ಕೊನೆಗೆ ಗುರುವಾರ, ಮತ್ತೆ ತಕಾ ಅಂತ ಬೆಂದಕಾಳೂರ ಸೆಕೇಲಿ ಬೆಂದು ಶನಿವಾರ ಮಧ್ಯಾಹ್ನದವರ್ಗೆ ಪಾಚ್ಕೊಳೋಕೆ(ಮಲ್ಗೋಕೆ!!) ಸ್ಕೆಚ್ ಹಾಕಿದ್ದ ಗೆಳೆಯರಿಗೆಲ್ಲಾ ಮೆಸೇಜಾಯ ನಮಃ ಅಂದಾಯ್ತು. ಕೆಲೋರು ಬರ್ತೋನಿ ಅಂದ್ರು. ಕೆಲೋರು ಪ್ರತೀ ಸಲದಂಗೇ ಕೈಯತ್ತಿದ್ರು. ಕೆಲೋರು ಸರಿ ಮಚಾ, ಶುಕ್ರವಾರ ರಾತ್ರೆ ಹೇಳ್ತೀನಿ ಅಂದ್ರು. ಇಲ್ಲಾ ಮಗಾ ಊರಿಗೆ ಹೋಗ್ಬೇಕು, ಸೋರಿ ಕಣೋ ಅಲ್ಲಿಗೆ ಹೋಗ್ಬೇಕು, ಮುಂಚೇನೆ ಪ್ಲಾನ್ ಆಗ್ಬಿಟ್ಟಿದೆ ಅವನನ್ನ ಮೀಟ್ ಮಾಡ್ಬೇಕು ಅನ್ನೋ ತರಾವರಿ ಉತ್ರಗಳೂ ಬಂದ್ವು. ಒಂದು ವರ್ಷ ಮುಂಚೆ ಪ್ಲಾನ್ ಮಾಡಿದ್ರೂ ಇದೇ ಕತೆ ಬಿಡೋ .. ಕರ್ಮ ಅಂತ ಒಂದ್ಸಲ ಬೇಜಾರ್ ಮಾಡ್ಕಂಡ ಫ್ರೆಂಡು..ಎಲ್ಲಾದ್ರೂ ಬಿಟ್ ಹೋದ್ರೆ ನನ್ಯಾಕೆ ಕರ್ದಿಲ್ಲ ಅಂತ ಹಿಗ್ಗಾಮುಗ್ಗಾ ಜಾಡಿಸೋ ಇವ್ರುಗಳ್ನ ಎಲ್ಲಿಗಾದ್ರೂ ಬರ್ತೀರ ಕರದ್ರೆ ಇದೇ ಗೋಳು ಕಣ್ಲಾ ಅಂದ ಗೆಳೆಯ. ಕೊನೆಗೆ ಆ ಮೆಸೇಜು ಎಲ್ಲೆಲ್ಲೋ ತಿರ್ಗಿ ತಿರ್ಗಿ, ಯಾರ್ಯಾರೋ ಎಲ್ಲ ಕೇಳಂಗೆ ಆಗಿ ನಿರೀಕ್ಷೆನೇ ಮಾಡ್ದೇ ಇದ್ದ ಹಳೇ ಗೆಳೆಯರೆಲ್ಲಾ ಸಿಕ್ಕು ಒಟ್ಟು ೮ ಜನ ಬೆಟ್ಟ ಹತ್ತೋ ಭೂಪರು ರೆಡಿ ಆದ್ವಿ ಅನ್ನಿ ಕೊನೆಗೆ 🙂
ನಂದಿ ಬೆಟ್ಟ ಬೆಳಗಿಂದು , ಸ್ಕಂದ ಗಿರಿ ರಾತ್ರೀದು ಅಂದಿದ್ದ ಗೆಳೆಯ ವಿಶು. ಬೆಳ ಬೆಳಗ್ಗೆ ೪:೩೦ ಗೆ ಅಲ್ಲಿಗೆ ಹೋಗಿದ್ವಿ. ಏನು ಚಂದಾ ಇತ್ತು ಅನ್ನಿ. ಮಂಜು ಬೀಳೋದು ನೋಡೋದೇ ಸ್ವರ್ಗ ಅನ್ನೋ ತರ ಅಲ್ಲಿಗೆ ಹೋದ ಬ್ಲಾಗ್ ಗೆಳೆಯ ಒಬ್ಬ ಬರ್ಕೊಂಡಿದ್ದ. ಆದ್ರೆ ಅಷ್ಟು ಮುಂಚೆ, ಅದೂ ವಾರಾಂತ್ಯದ ಶನಿವಾರ ಗೆಳೆಯರನ್ನ ಹೊರಡ್ಸೋ ಸೀನೇ ಇರ್ಲಿಲ್ಲ. ಸರಿ ಅಂತ ೭:೩೦ ಗೆ ಹೊರಡೋದು ಅಂತ ಅಂದ್ವಿ. ಎರ್ಲನ್ನೂ ಸೇರಿಸ್ಕಂಡು ಅಲ್ಲಿಗೆ ಹೋಗಿದ್ದನ್ನ ಬರದ್ರೆ ಅದೇ ಒಂದು ಲೇಖನ ಆಗ್ಬೋದು. ಈಗಾಗ್ಲೇ ಈ ಲೇಖನ ಓದಕ್ಕೆ ಯಾಕೆ ಶುರು ಮಾಡಿದ್ನೋ ಅಂತ ಬೋರು ಹೊಡೆದು ಪೇಜು ಬಿಡೋಕೆ ಪ್ಲಾನ್ ಮಾಡ್ತಿರಬಹುದಾದ ನಿಮಗೆಲ್ಲಾ ಇನ್ನೂ ಕೊರೆಯದೇ ನಂದಿ ಬೆಟ್ಟದ ನಿಜವಾದ ಅನುಭವಕ್ಕೆ ಬರ್ತೀನಿ.
ಅಮೀರ್ ಜೀ, ನಿ೦ಙಲೊಟ್ಟುಗು ನ೦ಙಯು೦ ಉಳ್ಳ, ಒಟ್ಟುಗು ಚೊಲ್ಲುವ “ಸತ್ಯಮೇವ ಜಯತೇ”
– ಶಿಹಾ ಉಳ್ಳಾಲ್, ಮಂಗಳೂರು
ತಿ೦ಙಳ್ ಇಪ್ಪರ ಬಾರಿ ಚರ್ಜೆ ಲ್ ಉಲ್ಲೆದಾಯೊ ಬಿಶಯ ಆಯಿತಿಕ್ಕ್ ರ್ ಕನ್ನಡ ಡಬ್ಬಿ೦ಗ್ ಬೇನು ಬೇ೦ಡ ಚೆ೦ತ್, ಕನ್ನಡೇತರ ಏದ್ ಪಿಲ೦ ರೆಯುಮ್ ಕನ್ನಡ ಡಬ್ಬಿ೦ಗ್ ಆಕಗು, ಚೆನ್ನೆ೦ಗ್ ಕನ್ನಡೇತರ ಪಿಲ೦ ಗ್ ಕನ್ನಡ ಪಲಕ ಸೇರ್ಪಟಿತ್ತ್ ಪಿಲ೦ ಆಕಗು, ಇ೦ಟರ್ನೆಟ್ ಲ್ ಈ ಬಿಸಯ ಚಮ್ಮೆ ಚರ್ಚೆ ಆಯಿತ್, ಕನ್ನಡ ಪಿಲ೦ ಇ೦ಡಸ್ತ್ರಿರ೦ಙ ಡಬ್ಬಿ೦ಗ್ ಬೇ೦ಡ, ಮುನ್ನಲ್ಗ್ ನ೦ಕ್ ಸ್ವರ ಪನಿ ಇಲ್ಲಾ೦ಟಾವು೦ಟುಲ್ಲದಾಯೊ ಪೇಡಿಯು೦ ಅರಿಪಾಟಿತ್ತ್.
ಸಾಮಾನ್ಯಮಾಯಿಟ್ ನ೦ಙ ಮನಸ್ಸಿಲಾಕ್ಕಿಯ ಡಬ್ಬಿ೦ಗ್ ಆಯೆ೦ಗು೦ ಆಯಿಟಿಲ್ಲೆ೦ಗುಮ್ ಪೈಸಾ ಆಕ್ ಡೆ ಅ೦ಙ ಅಲ್ಲೆ ನ೦ಕ್ ಎ೦ದ್ ಗ್ ಈ ಬಿಸಯತ್ತ್ ಲ್ ತಕರಾರ್ ಚೆ೦ತ್. ನಾನು೦ ಅ೦ಙನೆಮೆ ಬಿಯಾರ್ಚೊ.
ಬಿಸಯ ಎನಿಯುಮ್ ಚರ್ಚೆ ಆಯೊ ಅಮೀರ್ ಖಾನ್ ರೊ ಸತ್ಯ ಮೇವ ಜಯತೇ ಚೊಲ್ಡ್ರೊ ಒರು ಪ್ರೋಗ್ರಾಮ್ ಇಡೀ ದುನಿಯಾವುಗು ಪ್ರಸಾರ ಆವು೦ಬೊ ಕನ್ನಡ ಡಬ್ಬಿ೦ಗ್ ಆಕನು ಚೊ೦ತು, ಇದ್ ರೊ ಬಿಸಯತ್ತ್ ಲ್ ಕರ್ನಾಟಕ ಗ್ ಲೆಟರುಮ್ ಕಡ್ತಿತ್ತ್. ಚರ್ಚೆ ಚಮ್ಮೆ ಗ೦ಬೀರತ್ತ್ ಗ್ ಎತ್ತಿತ್, ಚಮ್ಮೆ ಆಲ್ಮಾರ್ ಕನ್ನಡ ಡಬ್ಬಿ೦ಗ್ ಬೇನು ಚೆನ್ನಾರ್, ಕರ್ನಾಟಕತ್ತ್ ಲೇ ಒಳ ಪ್ರದೇಶ ಪೋಯೆ೦ಗ್ ಕನ್ನಡ ಮಾತ್ರ ಗೊ೦ತುಲ್ಲೆದಾಯೋ ಎತ್ರಮಾ ಕುಟು೦ಬ ಉ೦ಡು, ಸತ್ಯ ಮೇವ ಜಯತೇ ಎಲ್ಲಾರ್ಗು೦ ಬಿಸಯ ಪಿಡಿಯಾವನು,ಸಮಾಜತ್ತ್ ಲ್ ಬದಲಾವಣೆ ತರಣು ಚೆ೦ತ್. ನ೦ಙಲೊ ಮುನ್ನಲ್ ಕಾ೦ಡೆದಾಯೋ ಎಲ್ಲಾ, ಬಲಾಹತ್ತ್ ಗುಮ್, ಕೊಲೆ,ಅತ್ಯಾಚಾರ, ಕೋಮುಗಲಬೆ ಇದ್ ಗೆಲ್ಲಾ ಮುಖ್ಯಮಾಯಿತ್ ನ೦ಙ ನೋಕಗು ಪೋಯೆ೦ಗ್ ನ೦ಕ್ ಕಾಣಗು ಕಿಟ್ಟ್ ರೊ, ಪಿರ್ಸ ಚೊಲ್ಡ್ರೆದ್ ಮನುಷ್ಯರೈಲ್ ಇಲ್ಲಾತದ್, ಇ೦ಡ್ ನ೦ಙ ನೋಕುರ ಸ್ಕೂಲ್, ಕಾಲೇಜ್ ಲ್ ಎಲ್ಲಾ ಪಡಿಕ್ಕ್ ರ , ಆಯೆ೦ಗ್ ಲಾ ಎವುಡೆಯು೦ ಉಮ್ಮರೋ ಪಿರ್ಸ ಪಡಿಪಾಟ್ ರೊ ಚಾಪ್ಟರಾ ಅಲ್ಲ ಮನುಷ್ಯ ಮನುಷ್ಯರೊ ಒತ್ತೊರುಮ ಪಡಿಪಾಟ್ರೆ ಒರು ಪಾಠಯುಮ್ ಇಲ್ಲೆ. ಕಾಲಿ a2+b2+c2 ಪಡಿಪಾಟ್ ರೊ ಬ್ಯುಸಿಲ್ ಉಲ್ಲಾರ್ . ಮತ್ತಷ್ಟು ಓದು 
ಕನ್ನಡಿಗನಿಗೆ ಕನ್ನಡಿಗನೇ ಸಾರಥಿ
– ಪವನ್ ಪಾರುಪತ್ತೇದಾರ
ಮೊನ್ನೆ ಬಹಳಾ ದಿನಗಳಾದ ಮೇಲೆ ಭಟ್ಟ ಫೋನ್ ಮಾಡಿದ್ದ, ನಾನು ತುಂಬಾ ಸಾರಿ ಅವ್ನಿಗೆ ಫೋನ್ ಮಾಡಿದ್ದೆ ಆದ್ರು ರಿಸೀವ್ ಮಾಡಿರ್ಲಿಲ್ಲ, ನಾ ಫೋನ್ ಎತ್ತಿದೊಡನೆ ಲೇ ಡಿ ಕೇ ಬೋಸ್, ಎಲ್ಲಿ ಹಾಳಾಗೋಗಿದ್ಯ ಅಂದೆ. ಒಂದು ಫೋನ್ ರಿಸೀವ್ ಮಾಡ್ಲಿಕ್ಕಾಗಲ್ವ ಅಂತ ಬೈದೆ, ಏನ್ ಮಾಡೋದು ಮಗಾ ಕೆಲಸ ಸಿಕ್ಕಾಪಟ್ಟೆ ಕಷ್ಟ ಐತಿ, ನಿಲ್ಲಂಗಿಲ್ಲ ಕೂರಂಗಿಲ್ಲ, ಮಕ್ಳು ಬಿಡೋಂಗೆ ಇಲ್ಲ, ಭಾರಿ ಕಷ್ಟ್ ಕೊಡ್ತಾರೆ ಅಂದ, ನಾನು ಸರಿ ಮಗನ ಅಂತ ಕಷ್ಟದ್ ಕೆಲ್ಸ ಏನ್ಲೆ ಮಾಡ್ತಿದ್ಯ ಅಂದೆ, ಆಗ ಭಟ್ಟನ ಉತ್ತರ ಕೇಳಿ ಮನಸ್ಸಿಗೆ ಬಹಳಾ ನೋವಾಯ್ತು, ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪ್ರಥಮ ದರ್ಜೆಯಲ್ಲಿ ಮುಗಿಸಿದ್ದ ಭಟ್ಟ, ವೆಂಟಿಲೇಶನ್ ರಿಪೇರಿ ಮಾಡುವ ಕೆಲಸ ಮಾಡುತಿದ್ದ, ಅವನೇ ಹೇಳಿದ ಪ್ರಕಾರ, ವೆಂಟಿಲೇಶನ್ ಕೆಲಸ ಇಲ್ದೆ ಇದ್ರೆ ಅವರ ಕಂಪನಿಯ ಆಫೀಸ್ ಬಾಯ್ ಕೂಡ ಅವನೆ, ಆ ಬ್ಯಾಂಕಿಗೆ ಹೋಗಿ ಚೆಕ್ ಹಾಕಿ ಬಾ, ಅಲ್ಲೆಲ್ಲೋ ಹೋಗಿ ಆರ್ಡರ್ ಕಾಪಿ ತೆಗೆದುಕೊಂಡು ಬಾ, ಹೀಗೆ ಎಲ್ಲ ರೀತಿಯಲ್ಲು ಅವ್ನನ್ನ ಬಳಸಿಕೊಳ್ಳುತಿದ್ದರು.
ಭಟ್ಟ ಓದಿದ್ದೆಲ್ಲ ಹುಬ್ಬಳ್ಳಿಯಲ್ಲಿ, ಕೆ.ಎಲ್.ಇ. ಶಾಲೆಯ ಬೋರ್ಡುಗಳಲ್ಲಿ ಕನ್ನಡ ಮೀಡಿಯಂ ಓದಿ ಬೆಳೆದ ಹುಡುಗ, ಅಂತಹ ದಡ್ಡ ಹುಡುಗನೇನಲ್ಲ, ಡಿಪ್ಲೋಮದಲ್ಲಿ ಮತ್ತು ಇಂಜಿನಿಯರಿಂಗ್ನಲ್ಲಿ ಮೊದಲನೆ ದರ್ಜೆಯಲ್ಲಿ ಪಾಸಾಗಿದ್ದಾನೆ. ಮನೆಯ ಕಷ್ಟಗಳನ್ನೆಲ್ಲ ಮೂಲೆಯಲ್ಲಿ ಬಿಸಾಕಿ ಅವರಪ್ಪ ಸಾಲ ಸೋಲ ಮಾಡಿ ಓದಿಸಿದ್ದಾರೆ, ಎಜುಕೇಶನ್ ಲೋನ್ ಕಟ್ಟಲೇ ಬೇಕಾದ ಅನಿವಾರ್ಯತೆ ಅವನ್ನ ಈ ಕೆಲಸಕ್ಕೆ ದೂಡಿದೆ. ಈ ಮಧ್ಯೆ ಆ ಕೋರ್ಸು ಈ ಕೋರ್ಸು ಅಂತ ಹೇಳಿದವರ ಮಾತು ಕೇಳಿ ಟೆಸ್ಟಿಂಗ್ ಕೋರ್ಸ್ ಸಹ ಮಾಡಿದ್ದಾನೆ.ಆದ್ರು ಕೆಲಸ ಇಲ್ಲಿವರೆಗೂ ಸರಿಯಾದ ಕೆಲಸ ಮಾತ್ರ ಸಿಕ್ಕಿಲ್ಲ. ಇದು ಬರೀ ನನ್ನೊಬ್ಬ ಗೆಳೆಯನ ಕಥೆಯಲ್ಲ, ಭಟ್ಟ ಎಂಬುದು ಇಲ್ಲಿ ಪಾತ್ರವಷ್ಟೇ, ಇಂತಹ ಸಾವಿರಾರು ಹುಡುಗರು ಚೆನ್ನಾಗಿ ಓದಿಯೂ ಉತ್ತಮ ಅಂಕಗಳು ಪಡೆದೂ ಸಹ, ಎಂತ ಎಂತಹುದೋ ಕೆಲಸಗಳನ್ನು ಮಾಡುತಿದ್ದಾರೆ, ವೆಂಟಿಲೇಶನ್ ಸೆರ್ವೀಸ್ ಮಾಡುವುದೇ ಆಗಿದ್ದರೆ ಭಟ್ಟ ಐ.ಟಿ.ಐ ಓದಿದ್ದರೆ ಸಾಕಾಗಿತ್ತು, ಇಂಜಿನಿಯರಿಂಗ್ ಅವಶ್ಯಕತೆಯೇ ಇರಲಿಲ್ಲ, ವಿ.ಟಿ.ಯು. ಅಡಿಯಲ್ಲಿ ಸುಮಾರು ೨೦೦ ಕಾಲೇಜುಗಳಿವೆ ಅಂದರೆ ಪ್ರತಿ ವರ್ಷ ಹೊರಬರುವ ಇಂಜಿನಿಯರುಗಳೆಷ್ಟು, ಮತ್ತು ಅವರಲ್ಲಿ ಕೆಲಸಗಳಿಗೆ ಸೇರುವರೆಷ್ಟು? ನಿಜಕ್ಕು ಅಂಕಿ ಅಂಶಗಳ ನೋಡಲು ಹೋದರೆ ಭಯವಾಗುತ್ತದೆ.
ಅದು ಅಮ್ಮನದೇ ಮುತ್ತು..!
ಶ್ರೀಧರ್ ಜಿ ಸಿ
ಅಮ್ಮನಿಗೆ ಪರಿಪರಿಯಾಗಿ ಕೇಳಿಕೊಂಡಿದ್ದೆ.
ಅಮ್ಮ ಮುಂದೆಂದೂ ಇಂತಹ ತಪ್ಪು ಮಾಡಲಾರೆ..!
ಕ್ಷಮಿಸಿ ಬಿಡು ಎನ್ನನು…
ಅಮ್ಮ ಮೌನವಾಗಿ ಕೇಳಿದಳು, ನಗುತ್ತಾ ಹೇಳಿದಳು.
ಮಗು, ಒಪ್ಪಬೇಕಾದವಳು,
ಮಾಡಬಾರದು ಅಂತ ಹೇಳುವ ವಯಸು ಮುಗಿದಿದೆ. .
ನೀನಿನ್ನೂ ಚಿಕ್ಕ ಮಗು ಅಲ್ಲ..!
ಬೆಳೆದ ದೇಹ ನಿನ್ನದು.
ಹಾರುತ್ತಿರುವ ಪಕ್ಷಿ, ಓಡುವ ಪ್ರಾಣಿ ನೀನು.
ಈಗಾಗಲೇ ನಿನಗರಿವಿಲ್ಲದೇ, ನಿನ್ನೊಳಗೆ ಇನ್ನೊಬ್ಬ ಅಮ್ಮನನ್ನು
ತಂದು ಇಟ್ಟಿದ್ದೇನೆ.
ಅವಳು ಇದ್ದಾಳೆ, ನಿನ್ನೊಳಗೆ, ನಿನಗರಿವಿಲ್ಲದೇ..!
ಜೊತೆಗೆ ನಿಮ್ಮಪ್ಪನೂ ಬೆನ್ನಿಗಂಟಿದ್ದಾನೆ.
ನಿನ್ನೊಳಗೆ ಇಬ್ಬರೂ ಇದ್ದಾರೆ, ಕೊರಗುವ ಪ್ರಶ್ನೆಯೇ ಇಲ್ಲ.
ಕೇಳುವುದೇನಿದ್ದರೂ ಅವರನ್ನು ಕೇಳು..!
——-2———-
ಮೆದು ಮಾಂಸದವರೆಗೆ ನೀನು ನನ್ನವನಾಗಿದ್ದೆ.
ನಾ ಹೇಳುತ್ತಿದ್ದೆ, ನೀನು ಕೇಳುತ್ತಿದ್ದೆ.
ನೀನು ಈಗ ಬಲಿತದೇಹ. ತಪ್ಪು ಮಾಡುವ ಮುಂಚೆ, ತಪ್ಪು
ಮಾಡಿದ ಮೇಲೆ, ನಿನ್ನೊಳಗಿನ ಅಮ್ಮನನ್ನೇ ಕೇಳು.
ಅವಳು ಕ್ಷಮೆ ನೀಡಿದರೆ…
ನಾನು ಕ್ಷಮೆ ನೀಡಿದಂತೆ.
ನೀನಿನ್ನೂ ಚಿಕ್ಕವನಲ್ಲ… ಎತ್ತಿ ಮುದ್ದಾಡುವ ಮಗುವಲ್ಲ..!
ಮತ್ತೋಮ್ಮೆ ಅಮ್ಮ ಈ ಮಾತನ್ನು ಹೇಳಿದಳು, ಎಚ್ಚರಿಸಿದಳು.
ಅಮ್ಮನ ಮಾತು ಕಠೋರವಾಗಿತ್ತು, ಒಡಲ ನೋವು ತುಂಬಿತ್ತು.
ಸುತ್ತಲೂ ಕತ್ತಲು ಕವಿದಿತ್ತು. ಅಮ್ಮನ ದನಿ ಬೆಳಕಾಗಿರಲು..
ಅಮ್ಮ… ಅಮ್ಮ… ಅಮ್ಮ… ಅಂತ ಜೋರಾಗಿ ಕಿರುಚಿದೆ.
ಅಮ್ಮ ಅಂತ ಕೂಗಿದ ನನ್ನ ದನಿಯ ನೋವಿಗೆ
ಒಳಗೆ ಯಾರೋ ನನ್ನ ಎದೆಗೆ
ಮುತ್ತಿಕ್ಕಿದಂತಾಯಿತು.
—–3——–
ಹೌದು, ಇದು ನನ್ನ ಅಮ್ಮನದೇ ಮುತ್ತು.
ಅಮ್ಮ ಹೇಳಿದ್ದು ನಿಜ… ಅವಳು ಪೇಳಿದಾಗೆ
ನನ್ನೊಳಗೆ ಇನ್ನೊಬ್ಬ ಅಮ್ಮ ಇದ್ದಾಳೆ. ಸೇರಿಕೊಂಡಿದ್ದಾಳೆ.
ನಾನು ತಪ್ಪು ಮಾಡಿದ್ದಕ್ಕೆ ದುಃಖಿಸುತ್ತಿದ್ದಾಳೆ. ಉಮ್ಮಳಿಸಿ ಅಳುತ್ತಿದ್ದಾಳೆ.
ಅಮ್ಮ… ಹೇಗೆ ನಿನ್ನನು ಸಮಾಧಾನ ಮಾಡಲಿ,
ಕಾಡುತಿಹೆ ನೀನು… ಕ್ಷಮೆ ಕೇಳುವೆ.
ಎದೆಯಲಿ ನೀನಿರುವೆ, ಹೇಗೆ ಹೊರಿಸಲಿ
ನನ್ನ ತಪ್ಪಿನ ಭಾರವ..!
ಬೆನ್ನಿಗಂಟಿದ ಅಪ್ಪನನ್ನು ಬಿಟ್ಟು ಬಂದು ಬಿಡು ಅಂತ ಕೂಗಿದೆ.
ಬೇಡಿಕೊಂಡರೂ, ಪಾಡಿಕೊಂಡರೂ
ಒಳಗಿನ ಅಮ್ಮ ಬರಲಿಲ್ಲ.
ಬರುವ ಇಚ್ಚೆ ಇದ್ದಂತೆ ಕಾಣಲಿಲ್ಲ.
ಅವಳು ಪಿಸುಗುಟ್ಟಿದ ಒಂದು ಮಾತು
ಅರ್ಥವಾಗಿತ್ತು. ಲೋಕಸತ್ಯವಾಗಿತ್ತು.
ನಾ ಹೊರಗೆ ಬಂದರೆ, ಜೀವನವಿಡೀ ನನ್ನ ಕುಡಿಯನು,
ಕ್ಷಮಿಸುವವರು ಈ ಜಗತ್ತಿನಲ್ಲೇ ಯಾರಿಹರು?
ಅವಳು ನೇರವಾಗಿ ಪ್ರಶ್ನಿಸಿದಳು.
ಮಾತು ಅರ್ಥವಾಯಿತು. ಕ್ಷಮೆ ಸಿಕ್ಕಿತು.
ನೀನೊಬ್ಬಳು ನನ್ನ ಜೊತೆಗಿರು.
ನೀನು ಅಲ್ಲೇ ಇರು.. ನಿನ್ನ ಬೆನ್ನಿಗಂಟಿದ ಅಪ್ಪನೂ…
******
hdwallpapersarena.com







