ವಿಷಯದ ವಿವರಗಳಿಗೆ ದಾಟಿರಿ

Archive for

2
ಆಕ್ಟೋ

ನನ್ನ ಗಾಂಧೀಜಿ

-ಬಿಂಧು ಮಾಧವಿ,ಹೈದರಾಬಾದ್

ಗಾಂಧೀಜಿ ನಮ್ಮೆಲ್ಲರಿಗೂ ಸೇರಿದವರು, ಹಾಗಿದ್ದರೂ ಏಕೆ ಈ ಶಿರೋನಾಮೆ ಎಂದು ಕೇಳುವಿರಾ? ಏಕೆಂದರೆ ಗಾಂಧೀಜಿ ಎನ್ನುತ್ತಿದ್ದಂತೆ ಒಬ್ಬೊಬ್ಬೊರಗೂ ಅವರದೇ ಆದ ಒಂದು ರೂಪು ಮನಸ್ಸಿನಲ್ಲಿ ಮೂಡುವುದು. ಗಾಂಧೀಜಿ ಎಂದರೆ ನನ್ನ ಮನಸ್ಸಿನಲ್ಲಿ ಬರುವ ಚಿತ್ರಗಳ ಬಗ್ಗೆ ಈ ಲೇಖನ, ಹಾಗಾಗಿ ಇದು, ನನ್ನ ಗಾಂಧೀಜಿ.

ಮಹಾತ್ಮಾ ಗಾಂಧಿ ಎನ್ನುತ್ತಿದ್ದಂತೆ ಒಂದೇ ಎರಡೇ ಹಲವಾರು ಚಿತ್ರಗಳು, ವಿಷಯಗಳು, ಕವಿತೆಗಳು ಮತ್ತು ಪುಸ್ತಕಗಳು ನನ್ನ ಮುಂದೆ ಬಂದು ನಿಲ್ಲುತ್ತವೆ. ಎಲ್ಲಿಂದ ಪ್ರಾರಂಭಿಸಲಿ? ಬಹುಶಃ ಕಣ್ಣಮುಂದೆ ಬಂದು ನಿಲ್ಲುವ ಮೊಟ್ಟಮೊದಲ ಚಿತ್ರ ರಿಚರ್ಡ್ ಅಟೆನ್ ಬರೋ ತೆಗೆದೆ ಆಂಗ್ಲ ಚಲನ ಚಿತ್ರ  ’ಗಾಂಧಿ’ . ಅದರಲ್ಲಿನ ಗಾಂಧಿ ಪಾತ್ರಧಾರಿ ಬೆನ್ ಕಿಂಗ್ಸ್ಲೇ. ಅವರು ಯಾವತ್ತಿದ್ದರೂ ನಮ್ಮ ಪಾಲಿಗೆ ಗಾಂಧಿಯೇ ಹೊರತು ಬೆನ್ ಕಿಂಗ್ಸ್ ಲೇ ಅಲ್ಲ. ಅದರಲ್ಲಿನ ಚಾರ್ಲ್ಸ್ ನ ಪಾತ್ರ, ಕಸ್ತೂರಿ ಬಾ ಪಾತ್ರ, ಜಿನ್ನಾ ಎಲ್ಲರೂ ಪಾತ್ರಗಳಾಗಿ ಕಾಣುವರೇ ಹೊರತು, ಪಾತ್ರಧಾರಿಗಳು ಎಂದು ಎನಿಸುವುದಿಲ್ಲ. ಚಿಕ್ಕಂದಿನಿಂದಲೇ ನಮಗೆ ಈ ರೀತಿಯ ಚಿತ್ರಗಳನ್ನು ತೋರಿಸಿ ನಮಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ, ದೇಶಭಕ್ತಿಯ ಬಗ್ಗೆ, ಸಮಾನತೆಯ ಬಗ್ಗೆ ಅರಿವು ಮೂಡಿಸಿದ ನನ್ನ ತಂದೆ ತಾಯಿಗೆ ನಾನು ಎಂದೂ ಚಿರ ಋಣಿ. ಗಾಂಧೀಜಿ ಬ್ರಿಟಿಷರ ವಿರುದ್ಧ ಹೋರಾಡಿದರು, ಆ ಬ್ರ‍ಿಟಿಷರೇ ಏಕೆ ಇಡೀ ವಿಶ್ವವೇ ಗಾಂಧೀಜಿಯ ಮುಂದೆ ತಲೆಬಾಗಿತು. ನೋಡು ಒಬ್ಬ ಆಂಗ್ಲ ನಿರ್ದೇಶಕನು ಗಾಂಧಿ ಚಿತ್ರವನ್ನು ಎಷ್ಟರಮಟ್ಟಿಗೆ ತೆಗೆದಿದ್ದಾನೆ, ಅದನ್ನು ಆಂಗ್ಲ ಕಲಾವಿದ ಬೆನ್ ಕಿಂಗ್ಸ್ ಲೇ ಎಷ್ಟು ಸಮಂಜಸವಾಗಿ ಮಾಡಿದ್ದಾನೆ ಎಂದು ನನ್ನ ಅಮ್ಮ ಹೇಳಿದ ನುಡಿಗಳು ಇಂದಿಗೂ ನೆನಪಿದೆ. ಹಾಗಾಗಿ ನಾನೂ ಕೂಡ ನನ್ನ ಐದು ವರ್ಷದ ಮಗಳಿಗೆ ಇಂದು ಬೆಳಿಗ್ಗೆ youtube ನಲ್ಲಿ ಗಾಂಧಿ ಚಿತ್ರವನ್ನು ಹಾಗಿ ತೋರಿಸುತ್ತಿದ್ದೆ. ಅವಳೂ ಆಸಕ್ತಿಯಿಂದ ನೋಡುತ್ತಿದ್ದಳು, ಗೆಳೆಯರು ಬಂದು ಆಡಲು ಕರೆಯುವವರೆಗೆ!! ಒಂದು ವೇಳೆ ಅವಳು ಚಿತ್ರವನ್ನು ಕಡೆಯವರೆಗೆ ನೋಡಿದರೆ, ಅವಳು ಗಾಂಧೀಜಿಯನ್ನು ಏಕೆ ಕೊಂದರು ಎಂದು ಕೇಳುತ್ತಾಳೆ. ಐದು ವರ್ಷದ ಅವಳಿಗೆ ಸತ್ಯಕ್ಕಾಗಿ ಹೋರಾಡಿದವರಿಗೆ, ನ್ಯಾಯಕ್ಕಾಗಿ ಹೋರಾಡಿದ ಗಾಂಧಿತಾತನಿಗೆ ಈ ರೀತಿಯ ಅಂತ್ಯ ಎಂದು ತಿಳಿದರೆ, ಅವಳಿಗೆ ಸತ್ಯಕ್ಕೇ ಜಯ, ಎಂಬ ಮಾತಿನ ಮೇಲೆ ನಂಬಿಕೆಯೇ ಬರುವುದಿಲ್ಲ. ಹಾಗಾಗಿ ಚಿತ್ರವನ್ನು ಕೊನೆಯ ತನಕ ತೋರಿಸಬೇಕೇ ಬೇಡವೇ ಎಂಬ ಪ್ರಶ್ನೆ ನನ್ನ ಮುಂದೆ!

Read more »

2
ಆಕ್ಟೋ

ಶಾಸ್ತ್ರಿಗಳಿಗೊಂದು ಸಲಾಂ ಹೇಳೋಣ ಬನ್ನಿ!

– ರಾಕೇಶ್ ಶೆಟ್ಟಿ

ಶಾಲೆ ಮುಗಿಸಿ ಮನೆಗೆ ಹೊರಟ ಕೆಲ ಮಕ್ಕಳು ದಾರಿಯಲ್ಲಿ ಸಿಕ್ಕ ಮಾವಿನ ತೋಟಕ್ಕೆ ಲಗ್ಗೆಯಿಟ್ಟರು.ಕೆಲ ಹುಡುಗರು ಮರ ಹತ್ತಿ ಮಾವಿನ ಹಣ್ಣು ಕೀಳುತಿದ್ದರೆ, ಒಬ್ಬ ಬಾಲಕ ಮಾತ್ರ ಕೆಳಗೆ ನಿಂತು ನೋಡುತಿದ್ದ.ಮಾಲಿ ಅಲ್ಲಿಗೆ ಬಂದ ಕೂಡಲೇ ಮರ ಹತ್ತಿದ್ದ ಹುಡುಗರು ಕಾಲ್ಕಿತ್ತರೆ, ಆ ಬಾಲಕ ಸಿಕ್ಕಿಬಿದ್ದ.ಮಾಲಿ ಹುಡುಗನಿಗೆ ಬೈದು,ಥಳಿಸಲಾರಂಭಿಸಿದ ಆ ಬಾಲಕ ‘ನನ್ನನ್ನು ಬಿಟ್ಟು ಬಿಡಿ,ನಾನು ಅಪ್ಪ ಇಲ್ಲದ ಹುಡುಗ’ ಎಂದು ಅಂಗಲಾಚಿದ.ಕರಗಿದ ಮಾಲಿ,’ಅಪ್ಪ ಇಲ್ಲದವನು ಇನ್ನು ಮೇಲೆ  ಜವಾಬ್ದಾರಿಯುತವಾಗಿ ಇರುವುದನ್ನು ಕಲಿ’ ಎಂದು ಹೇಳಿ ಬಿಟ್ಟುಬಿಟ್ಟ.ಅಲ್ಲಿಂದ ಇನ್ನೆಂದು ಇಂತ ಕೆಲಸ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿ ಹೊರಟ ಆ ಹುಡುಗನಿಗೆ ಆಗ ೬-೭ ವರ್ಷವಿದ್ದಿರಬೇಕು.ಬಹುಷಃ ಅಂದೇ ಆತ ತನ್ನ ನಡೆ-ನುಡಿ ಆದರ್ಶಪ್ರಾಯವಾಗಿರಬೇಕು ಅಂತ ನಿರ್ಧರಿಸಿಬಿಟ್ಟಿರಬೇಕು.ಅಂದುಕೊಂಡಂತೆ ಮಾಡಿಬಿಟ್ಟನಲ್ಲ ಪುಣ್ಯಾತ್ಮ…!

ಮುಂದೆ ದೇಶದ ಎರಡನೇ ಪ್ರಧಾನಿಯಾಗಿ ತನ್ನ ಸರಳತೆ,ಸಜ್ಜನಿಕೆ,ಪಾರದರ್ಶಕತೆ,ನೈತಿಕತೆಯಿಂದಾಗಿ ಗಮನ ಸೆಳೆದ. ಆಯುಬ್ ಖಾನನ ಪಾಕಿಸ್ತಾನದ ಜುಟ್ಟು ಹಿಡಿದು ಬಗ್ಗಿಸಿದ, ಆ ವಾಮನ ಮೂರ್ತಿಯ ಹೆಸರು ‘ಲಾಲ್ ಬಹಾದ್ದೂರ್ ಶಾಸ್ತ್ರೀಜಿ’.

Read more »

2
ಆಕ್ಟೋ

ಗಾಂಧೀಜಿ ಕೇವಲ ಭಾರತಕ್ಕಷ್ಟೇ ಅಲ್ಲ ಇಡೀ ವಿಶ್ವಕ್ಕೂ ಸಲ್ಲುವ ಶ್ರೇಷ್ಠ ವ್ಯಕ್ತಿ

ಅಶ್ವಿನ್ ಅಮೀನ್ ಅವರ “ಜಾತ್ಯಾತೀತ ‘ಜಿನ್ನಾ’ ಖಳ ನಾಯಕನಾದರೆ ‘ಗಾಂಧೀ’ ಯಾರು?..” ಲೇಖನ ಪ್ರತಿಕ್ರಿಯೆಯಾಗಿ, “ನರೇಶಕುಮಾರ ಹೆಗಡೆ ದೊಡ್ಮರಿ” ಅವರು ಬರೆದ ಈ ಸುಧೀರ್ಘ ಪ್ರತಿಕ್ರಿಯೆ,ಉಳಿದ ಪ್ರತಿಕ್ರಿಯೆಗಳ ನಡುವೆ ಕಳೆದು ಹೋಗದೆ,ಗಾಂಧೀಜಿಯವರ ಬಗ್ಗೆ ಒಂದಿಷ್ಟು ವಿಷಯ ತಿಳಿದುಕೊಳ್ಳಬಯಸುವವರ ಕಣ್ಣಿಗೂ ಕಾಣಲಿ – ನಿಲುಮೆ

– ನರೇಶಕುಮಾರ ಹೆಗಡೆ ದೊಡ್ಮರಿ

ನಮ್ಮ ಅಭಿಪ್ರಾಯಗಳು ರೂಪುಗೊಳ್ಳುವುದು ಹೇಗೆ?…
1- ಇತರರು ಹೇಳಿದ್ದನ್ನು/ವಿವರಿಸಿದ್ದನ್ನು ಕೇಳುವುದರಿಂದ/ಓದುವುದರಿಂದ.
2- ಘಟನೆಯೊಂದನ್ನು ಕಣ್ಣಾರೆ ನೋಡುವುದರಿಂದ
ಈ ಮೇಲಿನ ಎರಡರಲ್ಲಿ ನಿಮ್ಮ ಅಭಿಪ್ರಾಯ ರೂಪುಗೊಂಡ ಬಗೆ 1ನೇ ಬಗೆಯಿಂದ ಎಂದು ತಿಳಿಯುತ್ತೇನೆ. ಹಾಗೂ ಈ ಎರಡನೇ ಬಗೆಯಿಂದ ಅಭಿಪ್ರಾಯ ರೂಪಿಸಿಕೊಳ್ಳುವಲ್ಲಿ ಮತ್ತೆರಡು ಬಗೆಗಳಿವೆ:
1- ಇತಿಹಾಸದ ಕುರಿತಾಗಿನ ಕೆಲವೇ ಲೇಖನಗಳನ್ನು ಓದುವುದರಿಂದ
2- ಸಂಪೂರ್ಣ ಇತಿಹಾಸವನ್ನು ಕೂಲಂಕುಷವಾಗಿ ಅಭ್ಯಸಿಸುವುದರಿಂದ
ಹಾಗೂ ಈ ಮೇಲಿನ ವಿಧದಲ್ಲಿ ತಾವು ಯಾವ ಬಗೆಯನ್ನು ಅನುಸರಿಸಿದ್ದೀರಿ ಈ ಲೇಖನವನ್ನು ಬರೆಯುವ ಮೊದಲು ಎಂಬುದನ್ನು ನಾನು ಕೇಳಿದರೆ ದಯವಿಟ್ಟು ಅದು ಈ ಲೇಖನದ ಕುರಿತೇ ಹೊರತು ತಮ್ಮ ಕುರಿತಲ್ಲ.

ನಾವು ಕೇವಲ ಓದಿ/ಕೇಳಿ ಪಡೆದ ಜ್ಞಾನದಿಂದ ಈಗಾಗಲೇ ಮಹಾನ್ ಎನಿಸಿರುವ ವ್ಯಕ್ತಿಯೊಬ್ಬನನ್ನು ಆತ ಮಾಡಿದ ಒಳ್ಳೆಯ ಕರ್ಮಗಳನ್ನು ತಿಳಿದು ಹೊಗಳಬಹುದೇ ಹೊರತು , ಆ ಅಲ್ಪಜ್ಞಾನವನ್ನು ಯಾರನ್ನಾದರೂ ತೆಗಳಲು ಬಳಸಿಕೊಳ್ಳಬಾರದೆಂಬುದು ನನ್ನ ಅನಿಸಿಕೆ. ಹಾಗಾಗಿ ನಾನು ಗಾಂಧೀಜಿಯವರ ಪರ ಬರೆಯುತ್ತಿದ್ದೇನೆಯೇ ಹೊರತು ಜಿನ್ನಾರವರ ವಿರುದ್ಧವಲ್ಲ.
Read more »