ಫ್ಯೂಡಲ್, ಲಿಬರಲ್, ಸ್ಲೇವರಿ: ಪರಿಕಲ್ಪನೆಗಳ ಭೌದ್ದಿಕ ದಾರಿದ್ರ್ಯ
ಹೀಗೋಮ್ಮೆ ಮಾಸ್ತಿ ಹಾಗು ಕುರ್ತಕೋಟಿಯವರ ಲೇಖನಗಳನ್ನು ಓದುವಾಗ ಅವರು ಹೇಳುತ್ತಿದ್ದ ವಿಚಾರಗಳು ಎಷ್ಟು ಆಪ್ತವಾಗಿದ್ದವು ಎಂದರೆ ಅವು ಇಂದಿಗೂ ಪ್ರಸ್ತುತ ಎನಿಸುತ್ತದೆ. ಕೆ.ವಿ.ನಾರಾಯಣ ಸ್ವಾಮಿಯವರು ಮಾಸ್ತಿಯವರನ್ನು ಒಮ್ಮೆ ಸಂದರ್ಶನ ಮಾಡುವ ಸಂದರ್ಭದಲ್ಲಿ ಕೆ.ವಿ.ಎನ್ ರವರು ಪ್ರಶ್ನೆ ಕೇಳುವ ರಭಸದಲ್ಲಿ ಲಿಬರಲ್/ಉದಾರವಾದಿ ಶಬ್ದವನ್ನು ಪ್ರಯೋಗಿಸದರಂತೆ, ಅದಕ್ಕೆ ಮಾಸ್ತಿಯವರು ಹಾಗೆಂದರೇನು? ಎಂದು ಮರುಪ್ರಶ್ನೆ ಮಾಡಿದರಂತೆ, ಕೊನೆಗೂ ಲಿಬರಲ್ ಅಥವಾ ಉದಾರವಾದಿ ಎಂದರೇನು ಎಂಬುದನ್ನು ವಿವರಿಸುವಲ್ಲಿ ಕೆ.ವಿ.ಎನ್ ವಿಫಲರಾಗಿ ತಬ್ಬಿಬ್ಬಾಗಿದ್ದನ್ನು ಅವರೇ ಒಪ್ಪಿಕೊಳ್ಳುತ್ತಾರೆ. ಒಟ್ಟಿನಲ್ಲಿ ನಮ್ಮದಲ್ಲದ ಜೊತೆಗೆ ನಮಗೆ ಅರ್ಥವಾಗದ ಪದಗಳನ್ನು ಬಳಸುವುದರಿಂದ ನಿರುಪಯುಕ್ತವಾದ ಸಂಭಾಷಣೆಯಾಗುತ್ತದೆ ಎಂಬುದು ಅದರ ತಾತ್ಪರ್ಯವಾಗಿತ್ತು. ಅದೇ ರೀತಿ ‘ನಿರೂಪಣಾ ಶಕ್ತಿ’ ಎಂಬ ಕುರ್ತಕೋಟಿಯವ ಲೇಖನವಿದೆ. ಆ ಲೇಖನದಲ್ಲಿ ಕುಂ.ವೀರಭದ್ರಪ್ಪನವರು ‘ಫ್ಯೂಡಲ್’ ಪದವನ್ನು ಬಳಸುವ ಮೂಲಕ ಅವರ ತಂದೆಯವರ ಚಿತ್ರಣವನ್ನು ಎಷ್ಟು ಹದಗೆಡಿಸಿದರೆಂದರೆ, ಕುಂ.ವಿ.ಯವರು ಅವರ ತಂದೆಯ ಚಿತ್ರಣವನ್ನೂ ಪ್ರೇಕ್ಷಕರಿಗೆ ಸರಿಯಾಗಿ ಕಟ್ಟಿಕೊಡಲಾಗಲಿಲ್ಲ, ಜೊತೆಗೆ ಫ್ಯೂಡಲ್ ಎಂಬುದನ್ನೂ ಸರಿಯಾಗಿ ಅರ್ಥಮಾಡಿಸಲು ಆಗಲಿಲ್ಲ.
ಇಂತಹ ಅನುಭವ ಭೌದ್ದಿಕವಲಯದ ಪರಿಚಯವಿದ್ದವರಿಗೆ ಸರ್ವೇಸಾಮಾನ್ಯವಾದುದು. ಅದರಲ್ಲಿಯೂ ಪ್ರಗತಿಪರರ ಭಾಷಣಗಳನ್ನು ಕೇಳಿದರೆ ಅವುಗಳಲ್ಲಿ ಅರ್ಥವಾದ್ದಕ್ಕಿಂತ ಅರ್ಥವಾಗದೆ ಇರುವ ಪದಗಳೇ ಹೆಚ್ಚಾಗಿರುತ್ತವೆ. ಇದು ಕೇವಲ ಪ್ರಗತಿಪರರಗೆ ಮಾತ್ರ ಸೀಮಿತವಾಗಿರದಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ಅಲ್ಲಿ ಕಾಣಸಿಗುತ್ತದೆ. ಲಿಬರಲ್, ಫ್ಯೂಡಲ್, ನಂತಹ ಶಬ್ದಗಳು ನಮ್ಮ ಸಂಸ್ಕೃತಿಯ ಮೂಲದವುಗಳಲ್ಲ. ಬದಲಿಗೆ ಪಾಶ್ಚಾತ್ಯರ ಸಂಸ್ಕೃತಿಯನ್ನು ವಿವರಿಸಲು ಬೆಳೆದುಬಂದಿರುವ ಪದಗಳಾಗಿವೆ. ಭಾರತದಲ್ಲಿ ಜಮೀನುದಾರರನ್ನು ಹಾಗೂ ಅವರ ದರ್ಪವನ್ನು ವಿವರಿಸಲು ಫ್ಯೂಡಲ್ ಪದವನ್ನು ಸಾಮಾನ್ಯವಾಗಿ ಬುದ್ದಿಜೀವಿಗಳು ಬಳಸುತ್ತಾರೆ. ಆದರೆ ಅದು ನಿಜವಾಗಿಯೂ ಫ್ಯೂಡಲಿಸಂನ್ನು ಪ್ರತಿನಿಧಿಸುತ್ತದೆಯೆ? ಎಂದು ಕೇಳಿಕೊಂಡರೆ, ಖಂಡಿತವಾಗಿಯೂ ಇಲ್ಲ ಎಂದೇ ಹೇಳಬಹುದು. ಏಕೆಂದರೆ ಫ್ಯೂಡಲ್ ನ ಅರ್ಥವನ್ನು ನೋಡುತ್ತಾ ಹೋದರೆ, ಸಾಮಾನ್ಯವಾಗಿ ಕೆಲವೊಂದು ಕಾನೂನು ಹಾಗೂ ಮಿಲಿಟರಿ ಶಕ್ತಿ ಅಥವಾ ಅದಕ್ಕೆ ಪರ್ಯಾಯವಾದ ಶಕ್ತಿಯನ್ನು ಒಗ್ಗೂಡಿಸಿಕೊಂಡು ಸಮಾಜವನ್ನು ಅದಕ್ಕೆ ತಕ್ಕಂತೆ ರೂಪಿಸುವುದು, ಹಾಗೂ ಅದನ್ನು ಸಂಪೂರ್ಣವಾಗಿ ನಿಯಂತ್ರಿಸುವುದು ಎಂದರ್ಥವಾಗುತ್ತದೆ. ಅದರ ಒಟ್ಟಿಗೆ ಸರ್ಫ್ ಡಮ್ ಎಂಬುದಾಗಿಯೂ ಅದನ್ನು ಕರೆಯುತ್ತಾರೆ, ಅಂದರೆ ಲ್ಯಾಂಡ್ ಲಾರ್ಟ್ ಮತ್ತು ಸರ್ಫ್ ಗಳ ಸಂಬಂಧವು ಪ್ರಧಾನ ಭೂಮಿಕೆಯಲ್ಲಿರುತ್ತದೆ. ಹಾಗೂ ಸ್ಲೇವರಿ ಎಂದು ಬಳಸುವ ಪರಿಕಲ್ಪನೆಯ ಹಿಂದೆ ಮಾಸ್ಟರ್ ಮತ್ತು ಸ್ಲೇವ್ ಎಂಬ ಸಾಮಾಜಿಕ ಮತ್ತು ಅಂತಸ್ತಿನ ವಿಭಾಗವಿರುತ್ತದೆ. ಇಲ್ಲಿ ಸ್ಲೇವ್ ಆದವನಿಗೆ ಯಾವುದೇ ರೀತಿಯ ಸ್ವಂತಿಕೆ (ಸೆಲ್ಫ್) ಇರುವುದಿಲ್ಲ. ಆತ ಕೇವಲ ವ್ಯಾಪಾರ ಒಂದು ವಸ್ತುವಾಗಿ ಅಸ್ತಿತ್ವದಲ್ಲಿ ಇರುತ್ತಾನೆ. ಆದರೆ ಭಾರತದಲ್ಲಿ ಇಂತಹ ರಚನೆಯನ್ನು ಎಲ್ಲಿ ಕಾಣಬಹುದು? ಅಬ್ಬಬ್ಬಾ ಎಂದರೆ ಜಮೀನುದಾರರನ್ನು ಕಾಣಬಹುದು, ಅಥವಾ ಅವರ ಒಕ್ಕಲುಗಳನ್ನು ಕಾಣಬಹುದು, ಜಮೀನುದಾರರಲ್ಲೇ ಒಳ್ಳೆಯವರನ್ನೂ ಹಾಗೂ ಕೆಟ್ಟವರನ್ನೂ ಕಾಣಬಹುದು, ಆದರೆ ಫ್ಯೂಡಲ್ ಲಾರ್ಡಗಳನ್ನು ಕಾಣುವುದು ಎಲ್ಲಿ? ಯಾವ ಸಮುದಾಯಗಳು ಮಿಲಿಟರಿ ಶಕ್ತಿಯನ್ನು ಹೊಂದಿ ಕಾನೂನು ಗಳ ಮೂಲಕ ಇಡೀ ಸಮಾಜವನ್ನು ಅವರಿಗೆ ಬೇಕಾದ ರೀತಿಯಲ್ಲಿ ಮಾರ್ಪಡಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ?
ಇತಿಹಾಸಕಾರರಿ೦ದ ಮರೆಯಾದ ಸಸ್ಯಶಾಸ್ತ್ರದ ಪಿತಾಮಹ, ನಮ್ಮೀ ಭೋಧಿಧರ್ಮ……
– ಶಂಕರ್ ನಾರಾಯಣ್
ಸ್ವಾಮೀ ವಿವೇಕಾನ೦ದರು, ಚಿಕಾಗೋದಲ್ಲಿದ್ದ ಸಮಯ. ಅವರನ್ನು ಹಣಿಯಲು ಇನ್ನಿಲ್ಲದ ಪ್ರಯತ್ನ ನಡೆಯುತ್ತಿತ್ತು. ಮೇಲಿ೦ದ ಮೇಲೆ, ಪ್ರಶ್ನೆಗಳು ತೂರಿಬರುತ್ತಿದ್ದವು. ಅದೊ೦ದು ದಿನ ಒಬ್ಬ ಅಮೇರಿಕಾದ ಪ್ರಜೆಯೊಬ್ಬ, “ಬುದ್ಧನೇಕೆ ಧರ್ಮ ಪ್ರಸರಣೆಗಾಗಿ ಯುರೋಪು, ಅಮೇರಿಕಾಗಳಿಗೆ ಬರಲಿಲ್ಲ..!?” ಎ೦ದು ಕೇಳುತ್ತಾನೆ. ಅದಕ್ಕೆ, ವಿವೇಕಾನ೦ದರು, “ಬುದ್ಧನ ಕಾಲದಲ್ಲಿ ಯುರೋಪ್ ಎಲ್ಲಿತ್ತು..? ನಿನ್ನ ಅಮೇರಿಕಾ ಎಲ್ಲಿತ್ತು..? ಎನ್ನುತ್ತಾರೆ. ಹೌದು. ಚೀನಾವೂ ಸೇರಿ, ಪಾಶ್ಚಿಮಾತ್ಯ ದೇಶಗಳು ಕಣ್ಣುಬಿಡುವ ಮೊದಲೇ ಭಾರತ ಸುಸ೦ಸ್ಕೃತ ದೇಶವಾಗಿತ್ತು. ಭಾರತೀಯರಿಗೆ, ಚಿನ್ನ-ಬೆಳ್ಳಿಗಳ ಪರಿಚಯವಿತ್ತು. ಚಿನ್ನದ ಆಭರಣಗಳನ್ನು ಇಲ್ಲಿನ ಮಹಿಳೆಯರು ತೊಡುತ್ತಿದ್ದರು. ಇದಕ್ಕೆ ಉದಾಹರಣೆ ಎ೦ದರೆ, ಹರಪ್ಪ ಮತ್ತು ಮೊಹೆ೦ಜದಾರೋ ನಗರಗಳು. ನಾಗರೀಕತೆಗಳು. ಪಾಶ್ಚಿಮಾತ್ಯ ದೇಶೀಯರು, ಮರದಲ್ಲಿ ವಾಸಿಸುವ ಸ೦ಧರ್ಭದಲ್ಲಿ, ಒ೦ದು ವ್ಯವಸ್ಥಿತ ನಗರ ಭಾರತದಲ್ಲಿತ್ತು. ಖಗೋಳ ವಿಜ್ನಾನದಲ್ಲಿ ಆರ್ಯಭಟನೂ, ಆಯುರ್ವೇದದಲ್ಲಿ ಚರಕನೂ, ಶಸ್ತ್ರಚಿಕಿತ್ಸೆಯಲ್ಲಿ ಸುಶ್ರುತನೂ, ಅರ್ಥಶಾಸ್ತ್ರದಲ್ಲಿ ಚಾಣಕ್ಯನೂ ಹೀಗೆ ಒ೦ದೊ೦ದು ವಿಭಾಗದಲ್ಲಿ ಒಬ್ಬೊಬ್ಬರು ಪ್ರಖ೦ಡ ಜ್ನಾನಿಗಳಾಗಿದ್ದರು. ಭಾರತ ಬಿಟ್ಟರೆ, ಚೀನಾದಲ್ಲೂ ನಾಗರೀಕತೆಗಳು ಹುಟ್ಟಿಕೊ೦ಡಿದ್ದವು. ಆದರೆ, ಅವುಗಳನ್ನು ಹರಪ್ಪ, ಮೊಹೆ೦ಜದಾರೋಗಳೊ೦ದೆಗೆ ಹೋಲಿಸಲಾಗದು..
ಆದರೆ,