ಪ್ರೊ.ಬಾಲು ಅವರಿಗೆ ಚೆಕ್ ಗಣರಾಜ್ಯದ ಪಾರ್ದುಬಿತ್ಸೆ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್
ಕರ್ನಾಟಕದಲ್ಲಿ ಈಗ ಗೌರವ ಡಾಕ್ಟರೇಟ್ ಪದವಿ ಎನ್ನುವುದು ಮಾರುಕಟ್ಟೆಯಲ್ಲಿ ದೊರೆಯುವ ವಸ್ತುವಾಗಿರುವುದು ನಮಗೆಲ್ಲ ಗೊತ್ತಿರುವ ವಿಚಾರವೇ. ಆದರೆ ಯುರೋಪಿನ ವಿಶ್ವವಿದ್ಯಾಲಯಗಳಲ್ಲಿ ಇದು ಇನ್ನೂ ತನ್ನ ಘನತೆ ಹಾಗೆ ಉಳಿಸಿ ಕೊಂಡಿದೆ. ಉದಾಹರಣೆಗೆ, ಪ್ರೊಫೆಸರ್ ಎಸ್. ಎನ್. ಬಾಲಗಂಗಾಧರ ರಾವ್ ಅವರಿಗೆ ೩೦/೯/೨೦೧೩ರಂದು ಗೌರವ ಡಾಕ್ಟರೇಟ್ ಪದವಿ ಮತ್ತು ಬಂಗಾರದ ಪದಕದೊಂದಿಗೆ ಸನ್ಮಾನ ಮಾಡಿದ ಚೆಕ್ ಗಣರಾಜ್ಯದ ಪಾರ್ದುಬಿತ್ಸೆ ವಿಶ್ವವಿದ್ಯಾಲಯ ತನ್ನ ೧೫ ವರ್ಷಗಳ ಇತಿಹಾಸದಲ್ಲಿ ಕೊಟ್ಟಿದ್ದು ಕೇವಲ ಬೆರಳೆಣಿಕೆಯಷ್ಟು ಗೌರವ ಡಾಕ್ಟರೇಟ್ ಪದವಿಗಳನ್ನು ಮಾತ್ರ.
ಈ ಸಂದರ್ಭದಲ್ಲಿ ಎಸ್. ಎನ್. ಬಾಲಗಂಗಾಧರ ರಾವ್ ಅವರ ಸಾಧನೆಗಳ ಕುರಿತು ಅಲ್ಲಿನ ಸಮಾಜ ವಿಜ್ಞಾನಗಳ ಡೀನ್ ಮಾಡಿದ ಭಾಷಣದ ಕನ್ನಡ ಅವತರಣಿಕೆಯನ್ನು ನಾವಿಲ್ಲಿ ಕೊಡುತ್ತಿದ್ದೇವೆ.
– ನಿಲುಮೆ