ವಿಷಯದ ವಿವರಗಳಿಗೆ ದಾಟಿರಿ

Archive for

17
ಆಕ್ಟೋ

ಭಾರತೀಯ ಜೀವ ನಿಗಮಕ್ಕೆ ವಿಮಾ ಪ್ರತಿನಿಧಿಗಳು ಬೇಕಾಗಿದ್ದಾರೆ

ಭಾರತದ ಅತಿ ದೊಡ್ಡ ವಿಮಾ ಕ೦ಪನಿಯಾದ ಭಾರತೀಯ ಜೀವ ನಿಗಮಕ್ಕೆ ವಿಮಾ ಪ್ರತಿನಿಧಿಗಳು ಬೇಕಾಗಿದ್ದಾರೆ.ಇದು ಕಮಿಶನ್ ಆಧಾರದ ಮೇಲೆ ಮಾಡುವ ಕೆಲಸವಾಗಿದ್ದು,ಬೇರೆ ಕೆಲಸದಲ್ಲಿರುವವರು ,ಅರೆ ಕಾಲಿಕ ಉದ್ಯೋಗವನ್ನಾಗಿ ಕೂಡಾ ಮಾಡಬಹುದು. ಗೃಹಿಣಿಯರು,ವಿದ್ಯಾರ್ಥಿಗಳು,ನಿವೃತ್ತ ಸರಕಾರಿ ಉದ್ಯೊಗಿಗಳು,ಪಾರ್ಟ್ ಟೈಮ್ ಕೆಲಸ ಹುಡುಕುವವರು, ಖಾಸಗಿ ಕ೦ಪನಿಗಳಲ್ಲಿ ಕೆಲಸ ಮಾಡುತ್ತಿರುವವರೂ ಸಹ ಅರ್ಜಿ ಸಲ್ಲಿಸಬಹುದು.ಅಭ್ಯರ್ಥಿಗಳು ಸರಕಾರಿ ಕೆಲಸದಲ್ಲಿ ಸೇವೆ ಸಲ್ಲಿಸುತ್ತಿರಬಾರದು

ಅರ್ಹತೆ: ಕನಿಷ್ಟ ಪಿಯುಸಿ ಮುಗಿಸಿರಬೇಕು ಕನಿಷ್ಟ ೧೮ ವರ್ಷ ವಯಸ್ಸಾಗಿರಬೇಕು ಭಾರತೀಯ ವಿಮಾ ನಿಯ೦ತ್ರಣ ಮ೦ಡಳಿ ನಡೆಸುವ ಪರಿಕ್ಷೆಯಲ್ಲಿ ಉತ್ತೀರ್ಣರಾಗಬೇಕು (ಪರೀಕ್ಷಾ ಸ೦ಬ೦ಧಿ ತರಬೇತಿ ನೀಡಲಾಗುವುದು)

ಹೆಚ್ಚಿನ ಮಾಹಿತಿಗೆ ಸ೦ಪರ್ಕಿಸಿ :

ಗುರುರಾಜ ಕೊಡ್ಕಣಿ,ಅಭಿವೃದ್ಧಿ ಅಧಿಕಾರಿ.

ಭಾರತೀಯ ಜೀವಾ ವಿಮಾ ನಿಗಮ. ಜಯನಗರ ಶಾಖೆ

ಬೆ೦ಗಳೂರು. ದೂ : 9480299167

(ವಿ.ಸೂ: ಇದು ಕಮಿಶನ್ ಅಧಾರದ ಅರೆ ಕಾಲಿಕ ಅಥವಾ ಪೂರ್ಣ ಕಾಲಿಕ ಉದ್ಯೋಗವಾಗಿದೆ)

17
ಆಕ್ಟೋ

ಎತ್ತಿನಹೊಳೆ ಯೋಜನೆ: ಬೇಕಿತ್ತಾ ಇದು?

– ಅರಕಲಗೂಡು ಜಯಕುಮಾರ್ Ethinahole
ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರದ ಚೊಚ್ಚಲ ಬಜೆಟ್ ಮಂಡಿಸಿದರು, ಸಹಜವಾಗಿ ತಮ್ಮ ಬೆಂಬಲಿಗರ ಜಿಲ್ಲೆಗಳಿಗೆ ಮತ್ತು ಸ್ವಕ್ಷೇತ್ರಕ್ಕೆ ಹೆಚ್ಚಿನ ಅನುದಾನದ ಯೋಜನೆಗಳನ್ನು ಘೋಷಿಸಿ ಕೊಂಡರು ಬಜೆಟ್ “ರಾಜಕಾರಣ”ಕ್ಕೆ ತಾವೇನೂ ಹೊರತಲ್ಲ ಎಂಬುದನ್ನು ಸಾಬೀತು ಪಡಿಸಿದರು. ಇರಲಿ ಹಾಸನ ಜಿಲ್ಲೆಗೆ ಬಜೆಟ್ ನಲ್ಲಿ ಸಿಕ್ಕಿದ್ದು 3 ಯೋಜನೆಗಳು ಮಾತ್ರ, ಒಂದು ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಹಾಸನ ಕೇಂದ್ರದಲ್ಲಿ ಟ್ರಕ್ ಟರ್ಮಿನಲ್, ಎರಡನೆಯದ್ದು ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಅರಸೀಕೆರೆ-ತಿಪಟೂರು ಟೋಲ್ ರಸ್ತೆ, ಮೂರನೆಯದ್ದು ಎತ್ತಿನಹೊಳೆಯ ಯೋಜನೆಗೆ ಒಟ್ಟು ಯೋಜನಾ ವೆಚ್ಚದ ಶೇ.9ರ ಅನುದಾನ. ಈ ಹೊತ್ತಿನಲ್ಲಿ ಪ್ರಜ್ಞಾಪೂರ್ವಕವಾಗಿ fb update ಮೂಲಕ ಯೋಜನೆಯ ಕುರಿತು ಅಸಹನೆ ವ್ಯಕ್ತ ಪಡಿಸುವ ಮೂಲಕ ಗಮನ ಸೆಳೆದದ್ದು “ಜನ ನಾವೂ ಇದ್ದೇವೆ” ಸಂಘಟನೆಯ ಗೆಳೆಯ ಮಂಜುಬನವಾಸೆ. ಆದರೆ ಯೋಜನೆ ಕುರಿತು ಅಸಹನೆ ವ್ಯಕ್ತಪಡಿಸಬೇಕಿದ್ದ ಕೆಲವರು ಇದೇ ಸಂಧರ್ಭದಲ್ಲಿ ವ್ಯತಿರಿಕ್ತವಾಗಿ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದು ಜಿಲ್ಲೆಯ ಮಟ್ಟಿಗೆ ಮುಜುಗುರದ ಸಂಗತಿ. ಇದೇನಿದು ಎತ್ತಿನ ಹೊಳೆ ಯೋಜನೆ? ಯಾಕೆ ಇದನ್ನು ಬೆಂಬಲಿಸಬೇಕು ? ಯಾವ ಕಾರಣಕ್ಕೆ ವಿರೋಧಿಸ ಬೇಕು? ಮತ್ತು ಅಲ್ಲಿನ ವಾಸ್ತವಗಳೇನು ಎಂಬುದನ್ನು ? ಕೆದಕುವ ಪ್ರಯತ್ನ ಮಾಡಿದಾಗ  ಮಾಹಿತಿಗೆ ನೆರವಾಗಿದ್ದು ಜಾಗೃತ ಪ್ರಜ್ಞೆಯ ಕವಯಿತ್ರಿ ರೂಪಹಾಸನ.ಎತ್ತಿನ ಹೊಳೆ ಯೋಜನೆಯ ಕುರಿತು ನನ್ನ ಗ್ರಹಿಕೆಗೆ ದಕ್ಕಿದ ಸಂಗತಿಗಳನ್ನು ನಿಮ್ಮೆದುರು ಹರಹುತ್ತಿದ್ದೇನೆ. ಇದು ನಮ್ಮ ಜಿಲ್ಲೆಗೆ ಎಷ್ಟು ಪೂರಕ ಮತ್ತು ಮಾರಕ ಹಾಗೂ ಒಟ್ಟು ಯೋಜನೆಯ ಪರಿಣಾಮಗಳೇನು? ಎಂಬುದನ್ನಷ್ಟೇ ಇಲ್ಲಿ ಚರ್ಚೆಗೆ ತರುತ್ತಿದ್ದೇನೆ, ಮುಂದಿನ ನಿಲುವುಗಳು ನಿಮಗೆ ಸೇರಿದ್ದು.
        ಹಾಸನ ಜಿಲ್ಲೆಯ ಸಕಲೇಶಪುರದ ದೋಣಿಗಾಲ್ ಬಳಿಯ ಪಶ್ಚಿಮಘಟ್ಟದ ಸರಹದ್ದಿನಲ್ಲಿ ಹಾದು ಹೋಗಿರುವ ರೈಲ್ವೇ ಟ್ರಾಕ್ ಪಕ್ಕದಲ್ಲೇ  ಎತ್ತಿನಹೊಳೆ ಎಂಬ ನದಿಯ ನೀರು 80ಅಡಿ ಎತ್ತರದಿಂದ ಧುಮ್ಮಿಕ್ಕುವ ನಯನ ಮನೋಹರ ದೃಶ್ಯವನ್ನು ನೋಡಬಹುದು.ಹೀಗೆ ಪಶ್ಚಿಮಘಟ್ಟದಲ್ಲಿ ಹರಿಯುವ ನೀರು ಮಳೆಗಾಲದಲ್ಲಿ ಹರಿದು ಹೋಗಿ ಅರೇಬಿಯನ್ ಸಮುದ್ರವನ್ನು ಸೇರುತ್ತದೆ. ಸಮುದ್ರ ಸೇರಿ ಪೋಲಾಗುತ್ತಿದೆ ಎಂದು ಭಾವಿಸಲಾಗುತ್ತಿರುವ ಈ ನೀರನ್ನು ನದಿ ತಿರುವು ಯೋಜನೆಯ ಮೂಲಕ ಕುಡಿಯುವ ನೀರು ಯೋಜನೆಗೆ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಯೋಜನೆಯನ್ನು ರೂಪಿಸಿದೆ. ಸುಮಾರು 9000ಕೋಟಿ ರೂಪಾಯಿಗಳ ಈ ಯೋಜನೆಯ ಮೂಲಕ ಬರದ ಜಿಲ್ಲೆಗಳಾದ ಕೋಲಾರ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಲು ನಿರ್ಧರಿಸಲಾಗಿದೆ. ಪಕ್ಷ ಭೇಧ ಮರೆತು ರಾಜಕೀಯ ಹಿತಾಸಕ್ತಿಗಳು ಈ ಯೋಜನೆಯ ಜಾರಿಗೆ ಪಣ ತೊಟ್ಟಿವೆ. ಇದು ಕುಡಿಯುವ ನೀರಿನ ಯೋಜನೆಯಾಗಿರುವುದರಿಂದ ಪರಿಸರ ಕಾಯ್ದೆ 2006ರ ಅನ್ವಯ ಸಾರ್ವಜನಿಕ ಅಹವಾಲು ಹಾಗೂ ಪರಿಸರ ಪರಿಣಾಮದ ಅಧ್ಯಯನವನ್ನು ರಾಜ್ಯ ಸರ್ಕಾರ ಮಾಡಬೇಕಿಲ್ಲ! ಆದ್ದರಿಂದ ಕೇಂದ್ರ ಸರ್ಕಾರದ ಪರಿಸರ ಮಂತ್ರಾಲಯ ಇದಕ್ಕೆ ಅನುಮತಿ ನೀಡಿದೆ.