ವಿಷಯದ ವಿವರಗಳಿಗೆ ದಾಟಿರಿ

Archive for

30
ಆಕ್ಟೋ

ಲೈಂಗಿಕ ವಸ್ತುಗಳ ನಿಷೇಧ ಸರಿಯೇ?

– ಶ್ರೀಪತಿ ಗೋಗಡಿಗೆ

ಲೈಂಗಿಕ ಸಲಕರಣೆಗಳುಮೊದಲಿಗೆ ಈ ಲೈಂಗಿಕ ವಸ್ತುಗಳು ಎಂದರೆ ಏನು ಅಂತ ಸ್ವಲ್ಪ ಹೇಳಿ ಬಿಡ್ತೀನಿ. ಏಕೆಂದರೆ ನಮ್ಮ ದೇಶದಲ್ಲಿ ಲೈಂಗಿಕತೆಯ ಬಗ್ಗೆ ಮಾತಾಡಲಿಕ್ಕೇ ಹಿಂಜರಿಯುವ ಮಾನಸಿಕತೆಯಿರುವಾಗ ಎಷ್ಟೋ ಜನರಿಗೆ ಇದೆಂತಾ ವಸ್ತುಗಳು? ಎಂಬ ಅನುಮಾನವೂ ಮೂಡಬಹುದು.

ಲೈಂಗಿಕ ವಸ್ತುಗಳು ಅಥವಾ ಸಾಮಗ್ರಿಗಳು

ಇವುಗಳನ್ನು ಇಂಗ್ಲೀಷಿನಲ್ಲಿ ಸೆಕ್ಸ್ ಟಾಯ್ಸ್ ಎಂದು ಕರೆಯುತ್ತಾರೆ. ಲೈಂಗಿಕತೆಗೆ ಸಂಬಂಧ ಪಟ್ಟಂತೆ ಉಪಯೋಗಿಸುವ ವಸ್ತುಗಳೆಲ್ಲಾ ಈ ಸಾಲಿಗೆ ಬರುತ್ತವೆ. ಬಹಳಷ್ಟು ಜನರು ಲೈಂಗಿಕ ವಿಷಯವೆಂದರೆ ಒಂದು ಕೋಣೆ, ಹಾಸಿಗೆ ಮತ್ತು ಸಂಗಾತಿ ಅಷ್ಟೇ ಎಂದುಕೊಂಡಿರಬಹುದು. ಆದರೆ ಅದನ್ನೂ ಮೀರಿದ ವಿಷಯಗಳು ನೂರಾರಿವೆ. ಅವುಗಳನ್ನು ಚರ್ಚಿಸುವುದೇ ಈ ಲೇಖನದ ಉದ್ದೇಶ.

ಲೈಂಗಿಕ ಪರಿಕರಗಳ ಬಗ್ಗೆ ಸರಳವಾಗಿ ಹೇಳಬೇಕೆಂದರೆ ಬಹಳಷ್ಟು ಬಳಕೆಯಲ್ಲಿರುವ ಕಾಂಡೋಮ್ ಸಹ ಒಂದು ಲೈಂಗಿಕ ಪರಿಕರವೇ ಆಗಿದೆ. ಕಾಂಡೋಮ್ ಮೊದಲಿಗೆ ಗರ್ಭನಿರೋಧಕವಾಗಿ ಉಪಯೋಗಕ್ಕೆ ಬಂದಿತು. ನಂತರದ ದಿನಗಳಲ್ಲಿ ರೋಗ ನಿರೋಧಕವಾಗಿ ಹೆಚ್ಚು ಪ್ರಚಾರ ಹಾಗೂ ಉಪಯೋಗಕ್ಕೆ ಬಂತು. ಅದರ ತಯಾರಕರು ಕೂಡಾ ಸುಮ್ಮನಿರದೇ ಅದರ ಮೇಲೆ ಗೆರೆ, ಗುಳ್ಳೆ ಮುಂತಾದವುಗಳನ್ನು ಸೇರಿಸಿ ಲೈಂಗಿಕ ಸಂತೃಪ್ತಿಯನ್ನೂ ನೀಡುವ ವಸ್ತುವನ್ನಾಗಿ ರೂಪಿಸತೊಡಗಿದರು.

ಕಾಂಡೋಮ್ ಎಲ್ಲರಿಗೂ ಪರಿಚಯವಿರುವ ಒಂದು ಲೈಂಗಿಕ ಪರಿಕರ. ಅದಲ್ಲದೇ ಇನ್ನೂ ನೂರಾರು ಲೈಂಗಿಕ ಪರಿಕರಗಳು ಚಾಲ್ತಿಯಲ್ಲಿ ಇವೆ. ಇವುಗಳಲ್ಲಿ ಬಹಳಷ್ಟು ವಸ್ತುಗಳನ್ನು ಅಭಿವೃದ್ದಿ ಪಡಿಸಿರುವುದೇ ಏಕಾಂಗಿಗಳ ಕಾಮವನ್ನು ತಣಿಸಲಿಕ್ಕಾಗಿ. ಅಂದರೆ ಕಾಮೋತ್ತೇಜನಗೊಂಡಾಗ ಸಂಗಾತಿ ಸಿಗದೇ ಹೋದರೆ ಈ ಪರಿಕರಗಳ ಮೂಲಕ ಕಾಮವನ್ನು ತಣಿಸಿಕೊಳ್ಳುವ ಅವಕಾಶವಿದೆ. [ ಅವುಗಳನ್ನು ವಿವರವಾಗಿ ಇಲ್ಲಿ ಚರ್ಚಿಸಲು ಸಾಧ್ಯವಿಲ್ಲವಾದರೂ ಉದಾ : ಸ್ತ್ರೀಯರಿಗಾಗಿ ಕೃತಕ ಶಿಶ್ನ, ಪುರುಷರಿಗಾಗಿ ಸುಂದರವಾದ ಹುಡುಗಿಯ ಗೊಂಬೆ ಮುಂತಾದವು ] ಇವುಗಳನ್ನು ಸೆಕ್ಸ್ ಟಾಯ್ಸ್ ಮತ್ತು ಸೆಕ್ಸ್ ಡಾಲ್ಸ್ ಎಂದು ಕರೆಯುತ್ತಾರೆ.

ಮತ್ತಷ್ಟು ಓದು »