ವಿಷಯದ ವಿವರಗಳಿಗೆ ದಾಟಿರಿ

Archive for

25
ಆಕ್ಟೋ

ಮೋದಿ ಅಭಿಮಾನ ಮತ್ತು ಅಭಿಮಾನಿಗಳ ಸುತ್ತ

– ಮಹೇಶ್ ಪ್ರಸಾದ್ ನೀರ್ಕಜೆ

NaModiಎಲ್ಲೆಡೆ ಮೋದಿ ಜಪ (ಪರ ವಿರೋಧ) ಆಗುತ್ತಿರುವಾಗ ಮೋದಿ ಬೆಂಬಲಿಗನಾಗಿದ್ದುಕೊಂಡೆ ನನ್ನದೊಂದು ಕ್ರಿಟಿಕ್ ಬರಹ ಇರಲಿ ಅನಿಸಿ ಬರೆಯುತ್ತಿದ್ದೇನೆ.

ಮೊದಲನೆಯದಾಗಿ ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲಿಸಿದ ಗಾದೆ ನಮಗೆ ಗೊತ್ತೇ ಇದೆ. ಮೇಲ್ನೋಟಕ್ಕೆ ಇದು ತೀರಾ ಸರಳ ವಿಚಾರ ಎನಿಸಿದರೂ ಆಚರಣೆಗೆ ಕಷ್ಟ ಅಂತ ಮೋದಿ ಮತ್ತು ಅವರ ಬೆಂಬಲಿಗರು ತುಳಿಯುತ್ತಿರುವ ಹಾದಿ ನೋಡಿದಾಗ ಅನಿಸುತ್ತಿದೆ. ಮೊನ್ನೆ ಮೊನ್ನೆ ಮೋದಿ ಪ್ರಧಾನ ಮಂತ್ರಿ ಅಭ್ಯರ್ಥಿ ಅಂತ ಆಯ್ಕೆ ಆದಾಗ ರಾಜನಾಥ್ ಸಿಂಗ್ ಜೊತೆ ಮೋದಿ ಪರಸ್ಪರ ಸಿಹಿ ಹಂಚಿಕೊಂಡಿದ್ದನ್ನು ನೋಡಿದಾಗ ಮೊದಲ ಬಾರಿಗೆ ನನಗೆ ಎಲ್ಲೋ ಎಡವಟ್ಟಾಗುತ್ತಿದೆ ಅನಿಸಿತು. ಟಿವಿ ಯಲ್ಲಿ ಇದನ್ನು ನೋಡುತ್ತಿದ್ದ ನನ್ನಂಥವರಿಗೆ ಆಗ ಈ ಗಾದೆ ನೆನಪಾದದ್ದು ಸುಳ್ಳಲ್ಲ. ಈಗ ಮೋದಿ ಬೆಂಬಲಿಗರ ವಿಚಾರದಲ್ಲೂ ನನಗೆ ಈ ಗಾದೆ ನೆನಪಾಗುತ್ತಿದೆ.

ಮತ್ತೊಮ್ಮೆ ಹೇಳುವುದಾದರೆ ನಾನು ಮೋದಿ ಪ್ರಧಾನ ಮಂತ್ರಿ ಆಗಬೇಕೆಂದು ಬಯಸುವವನು ಆದರೆ ಅದರ ಜೊತೆ ಜೊತೆಗೇ ನಾಳೆ ಭ್ರಮನಿರಸ ಗೊಳ್ಳಲು ಸಿಧ್ಧವಿಲ್ಲದಿರುವವನು. ಯಡ್ಯೂರಪ್ಪ ವಿಚಾರದಲ್ಲಿ ಈಗಾಗಲೇ ಒಮ್ಮೆ ಭ್ರಮನಿರಸ ಆಗಿದ್ದೇವೆ. ಹಾಗೆ ನೋಡಿದರೆ ಯಡ್ಯೂರಪ್ಪ ಕೂಡ ಪರಿಸ್ಥಿತಿ ಒತ್ತಡದಿಂದ ಭ್ರಷ್ಟರಾದರು ಹೊರತಾಗಿ ಸ್ವತಹ ಅವರೇ ಭ್ರಷ್ಟರಲ್ಲ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅವರಿಗೆ ಸ್ಪಷ್ಟ ಬಹುಮತ ಸಿಕ್ಕಿದ್ದಿದ್ದರೆ ಅವರು ರೆಡ್ಡಿಗಳ ಕಾಲು ಹಿಡಿಯಬೇಕಾಗಿರಲಿಲ್ಲ ಮತ್ತು ಕೊನೆಗೆ ಸಿಬಿಐ ಬಲೆಗೆ ಬಿದ್ದು ಜೈಲಿಗೂ ಹೋಗುತ್ತಿರಲಿಲ್ಲ. ಮೋದಿ ಕೂಡ ಹಾಗೆ ಮಾಡ್ತಾರೆ ಅಂತ ಹೇಳ್ತಿಲ್ಲ, ಆದರೆ ಮೋದಿ ಪ್ರಚಾರ ಅನ್ನುವುದು ಒಂದು ಮುಟ್ಟಬೇಕಾದ ಗುರಿ ಹೊರತು ಸಂಭ್ರಮಿಸಬೇಕಾದ ಮತ್ತು ಸಂಭ್ರಮದಲ್ಲಿ ಮೈಮರೆಯುವ ವಿಚಾರ ಅಲ್ಲ ಅನ್ನುವುದನ್ನು ಅವರ ಅಭಿಮಾನಿಗಳು ಅರ್ಥಮಾಡಿಕೊಂಡರೆ ಸಾಕು.

ಮತ್ತಷ್ಟು ಓದು »